ಸಮುದಾಯ ಪೋಸ್ಟ್‌ಗಳಲ್ಲಿ ವೀಕ್ಷಕರೊಂದಿಗೆ ಸಂವಹನ ನಡೆಸಿ

ನಿಮ್ಮ ಚಾನಲ್‌ನಲ್ಲಿ ಸಮುದಾಯ ಟ್ಯಾಬ್‌ಗೆ ನೀವು ಪೋಸ್ಟ್‌ಗಳನ್ನು ಸೇರಿಸಿದ ನಂತರ, ವೀಕ್ಷಕರು ಪ್ರತಿಕ್ರಿಯಿಸುವುದಕ್ಕಾಗಿ ಕಾಮೆಂಟ್ ಮಾಡಬಹುದು. ವೀಕ್ಷಕರು ನಿಮ್ಮ ಪೋಸ್ಟ್‌ಗಳಿಗೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ತಿಳಿದುಕೊಳ್ಳಿ.

ಗಮನಿಸಿ: ನಿಮ್ಮ ಚಾನಲ್ ಜವಾಬ್ದಾರಿಯನ್ನು ಆಧರಿಸಿ ಸಮುದಾಯ ಪೋಸ್ಟ್ ಆ್ಯಕ್ಸೆಸ್ ಅನ್ನು ಬದಲಾಯಿಸಬಹುದು. ಚಾನಲ್ ಅನುಮತಿಗಳ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಸಮುದಾಯ ಪೋಸ್ಟ್‌ಗಳನ್ನು ಹುಡುಕಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ಪೋಸ್ಟ್‌ಗಳು ಟ್ಯಾಬ್ ಅನ್ನು ಟ್ಯಾಪ್ ಮಾಡಿ.

ಗಮನಿಸಿ: ಅವಧಿ ಮುಗಿದ ಪೋಸ್ಟ್‌ಗಳನ್ನು ನಿಮ್ಮ ಆರ್ಕೈವ್‌ನಲ್ಲಿ ನೀವು ವೀಕ್ಷಿಸಬಹುದು. ನಿಮ್ಮ ಸಮುದಾಯ ಟ್ಯಾಬ್‌ಗೆ ನ್ಯಾವಿಗೇಟ್ ಮಾಡಿ ಮತ್ತು ನಂತರ “ಆರ್ಕೈವ್ ಮಾಡಿರುವುದು” ವಿಭಾಗವನ್ನು ಆಯ್ಕೆ ಮಾಡಿ.

ನಿಮ್ಮ ಪೋಸ್ಟ್‌ಗಳ ಮೇಲಿನ ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಿ

ನಿಮ್ಮ ಪ್ರೇಕ್ಷಕರೊಂದಿಗೆ ಒಂದು ಸಂಭಾಷಣೆಯನ್ನು ರಚಿಸುವುದಕ್ಕಾಗಿ, ನಿಮ್ಮ ಪೋಸ್ಟ್‌ಗಳ ಮೇಲಿನ ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಿ.

  1. ಪೋಸ್ಟ್ ಮೇಲೆ ಹೋವರ್ ಮಾಡಿ ಮತ್ತು ಕಾಮೆಂಟ್‌ಗಳನ್ನು ಕ್ಲಿಕ್ ಮಾಡಿ . ನೀವು, ಪೋಸ್ಟ್ ಕಾಮೆಂಟ್‌ಗಳ ಪುಟವನ್ನು ನೋಡುವಿರಿ.
  2. ಯಾವುದೇ ಕಾಮೆಂಟ್‌ನ ಕೆಳಗೆ ಪ್ರತ್ಯುತ್ತರಿಸಿ ಎಂಬುದನ್ನು ಆಯ್ಕೆ ಮಾಡಿ.

ನೀವು ಹೊರಗುಳಿಯದ ಹೊರತು, ನಿಮ್ಮ ಸಮುದಾಯ ಪೋಸ್ಟ್‌ಗಳ ಮೇಲಿನ ಕಾಮೆಂಟ್‌ಗಳ ಕುರಿತು ನೀವು ಒಮ್ಮೊಮ್ಮೆ ನೋಟಿಫಿಕೇಶನ್‌ಗಳನ್ನು ಪಡೆಯುವಿರಿ. ನಿಮ್ಮ ನೋಟಿಫಿಕೇಶನ್‌ಗಳನ್ನು ನಿರ್ವಹಿಸುವುದು ಹೇಗೆ ಎಂದು ತಿಳಿದುಕೊಳ್ಳಿ.

ಸಲಹೆ: ಇತ್ತೀಚಿನ ಕಾಮೆಂಟ್‌ಗಳಿಗೆ ಪ್ರತ್ಯುತ್ತರಿಸಲು,  ಇದರ ಪ್ರಕಾರ ವಿಂಗಡಿಸಿ ನಂತರ ಮೊದಲಿಗೆ ಹೊಚ್ಚಹೊಸದು ಎಂಬುದನ್ನು ಕ್ಲಿಕ್ ಮಾಡಿ.

ಸಮುದಾಯ ಪೋಸ್ಟ್‌ನ ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಿ

ನಿರ್ದಿಷ್ಟ ಪೋಸ್ಟ್‌ಗಾಗಿ ನೀವು ಕಾಮೆಂಟ್ ಸೆಟ್ಟಿಂಗ್‌ಗಳನ್ನು ಬದಲಾಯಿಸಲು ಬಯಸಿದರೆ:

  1. ನಿಮ್ಮ ಕಂಪ್ಯೂಟರ್‌ನಲ್ಲಿ, YouTube Studio ಗೆ ಸೈನ್ ಇನ್ ಮಾಡಿ.
  2. ಎಡಗಡೆ ಮೆನುವಿನಿಂದ ಕಂಟೆಂಟ್ ಅನ್ನು ಆಯ್ಕೆ ಮಾಡಿ.
  3. ಪೋಸ್ಟ್‌ಗಳು ಅನ್ನು ಆಯ್ಕೆಮಾಡಿ.
  4. ನೀವು ನವೀಕರಿಸಲು ಬಯಸುವ ಪೋಸ್ಟ್ ಅನ್ನು ಹುಡುಕಿ, ನಂತರ ವಿವರಗಳು  ಅನ್ನು ಆಯ್ಕೆಮಾಡಿ.
  5. ನಿಮ್ಮ ಕಾಮೆಂಟ್ ಸೆಟ್ಟಿಂಗ್ ಅನ್ನು ಆಯ್ಕೆಮಾಡಿ.
  6. ಸೇವ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.

ಕಾಮೆಂಟ್‌ಗಳನ್ನು ಆನ್ ಮಾಡಿದಾಗ ಕಾಮೆಂಟ್ ಮಾಡರೇಶನ್‌ಗಾಗಿ ನಿಮ್ಮ ಆಯ್ಕೆಗಳನ್ನು ಒಳಗೊಂಡಂತೆ, ಕಾಮೆಂಟ್ ಸೆಟ್ಟಿಂಗ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಗಮನಿಸಿ: ಪ್ರಸ್ತುತ “ವಿರಾಮ” ಆಯ್ಕೆಯು ಸಮುದಾಯ ಪೋಸ್ಟ್‌ಗಳಿಗೆ ಲಭ್ಯವಿಲ್ಲ.

ನಿಮ್ಮ ಪೋಸ್ಟ್‌ಗಳ ಮೇಲಿನ ಒಂದು ಕಾಮೆಂಟ್ ಅನ್ನು ಪಿನ್ ಮಾಡಿ

ಒಂದು ಕಾಮೆಂಟ್ ಅನ್ನು ಪಿನ್ ಮಾಡುವ ಮೂಲಕ, ಅದು ಫೀಡ್‌ನ ಟಾಪ್‌ನಲ್ಲಿ ಉಳಿಯುವಂತೆ ಮಾಡಲು ನೀವು ಕಾಮೆಂಟ್ (ನಿಮ್ಮದೇ ಅಥವಾ ವೀಕ್ಷಕರದ್ದು) ಅನ್ನು ಆಯ್ಕೆ ಮಾಡಬಹುದು. ಒಂದು ಕಾಮೆಂಟ್ ಅನ್ನು ಪಿನ್ ಮಾಡುವುದರಿಂದ ಅದು ನಿಮ್ಮ ಪ್ರೇಕ್ಷಕರಿಗೆ ಹೆಚ್ಚು ಗೋಚರಿಸುತ್ತದೆ.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ಪೋಸ್ಟ್‌ಗಳು ಟ್ಯಾಬ್ ಅನ್ನು ಆಯ್ಕೆ ಮಾಡಿ.
  4. ಪೋಸ್ಟ್ ಮೇಲೆ ಹೋವರ್ ಮಾಡಿ ಮತ್ತು ಕಾಮೆಂಟ್‌ಗಳನ್ನು ಕ್ಲಿಕ್ ಮಾಡಿ .
  5. ನೀವು ಪಿನ್ ಮಾಡಲು ಬಯಸುವ ಕಾಮೆಂಟ್‌ನ ಮೇಲೆ ಹೋವರ್ ಮಾಡಿ.
  6. ಇನ್ನಷ್ಟು ಪಿನ್ ಮಾಡಿ ಎಂಬುದನ್ನು ಕ್ಲಿಕ್ ಮಾಡಿ. ನೀವು ಈಗಾಗಲೇ ಕಾಮೆಂಟ್ ಪಿನ್ ಮಾಡಿದ್ದರೆ, ಇದು ಅದನ್ನು ಬದಲಿಸುತ್ತದೆ.
    ಗಮನಿಸಿ: ನೀವು ಯಾವಾಗ ಬೇಕಾದರೂ ಒಂದು ಕಾಮೆಂಟ್ ಅನ್ನು ಪಿನ್ ಮಾಡಬಹುದು ಮತ್ತು ಕಾಮೆಂಟ್ ತನ್ನ ಮೂಲ ಸ್ಥಾನಕ್ಕೆ ಮರಳುತ್ತದೆ.

ಸಮುದಾಯ ಪೋಸ್ಟ್‌ಗಳಲ್ಲಿ ಕಾಮೆಂಟ್‌ಗಳನ್ನು ಮಾಡರೇಟ್ ಮಾಡಿ

ನಿಮ್ಮ ಸಮುದಾಯ ಪೋಸ್ಟ್‌ಗಳಲ್ಲಿನ ಕಾಮೆಂಟ್‌ಗಳನ್ನು ನೀವು ಪರಿಶೀಲನೆಗಾಗಿ ತಡೆಹಿಡಿಯಬಹುದು. ಕಾಮೆಂಟ್‌ಗಳನ್ನು ಮಾಡರೇಟ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  3. ಸಮುದಾಯ ನಂತರ ಡೀಫಾಲ್ಟ್‌ಗಳು ಎಂಬುದನ್ನು ಆಯ್ಕೆ ಮಾಡಿ.
  4. "ನಿಮ್ಮ ಚಾನಲ್‌ನಲ್ಲಿನ ಕಾಮೆಂಟ್‌ಗಳು" ಎಂಬುದರ ಅಡಿಯಲ್ಲಿ, ನಿಮ್ಮ ಸೆಟ್ಟಿಂಗ್ ಅನ್ನು ಆಯ್ಕೆ ಮಾಡಿ.
  5. ಸೇವ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.

ಪೋಸ್ಟ್‌ಗಳ ಮೇಲಿನ ಕಾಮೆಂಟ್‌ಗಳಿಗೆ ಹೃದಯಗಳನ್ನು ಸೇರಿಸಿ

ನಿಮ್ಮ ಸಮುದಾಯ ಟ್ಯಾಬ್ ಪೋಸ್ಟ್‌ಗಳಲ್ಲಿ ವೀಕ್ಷಕರ ಕಾಮೆಂಟ್‌ಗಳಿಗೆ ಮೆಚ್ಚುಗೆಯನ್ನು ತೋರಿಸಲು ನೀವು ಹೃದಯವನ್ನು ಬಳಸಬಹುದು. ಥಂಬ್ಸ್ ಅಪ್ ಮತ್ತು ಥಂಬ್ಸ್ ಡೌನ್ ಪಕ್ಕದಲ್ಲಿ ಹೃದಯವನ್ನು ಹುಡುಕಿ.

ವೀಕ್ಷಕರಿಗೆ, ತಮ್ಮ ಕಾಮೆಂಟ್‌ನ ಕೆಳಗೆ ಎಡಬದಿಯಲ್ಲಿ ನಿಮ್ಮ ಚಿತ್ರ ಹಾಗೂ ಸಣ್ಣ ಕೆಂಪು ಹೃದಯ ಕಾಣಿಸುತ್ತದೆ. ತಮ್ಮ ಸೆಟ್ಟಿಂಗ್‌ಗಳನ್ನು ಆಧರಿಸಿ, ಚಾನಲ್ ಮಾಲೀಕರು ತಮ್ಮ ಕಾಮೆಂಟ್ ಅನ್ನು ಇಷ್ಟಪಟ್ಟಿದ್ದಾರೆ ಎಂಬ ನೋಟಿಫಿಕೇಶನ್ ಸಹ ಅವರಿಗೆ ದೊರೆಯಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15520542851698578590
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false