YouTube BrandConnect ನೊಂದಿಗೆ ಪ್ರಾರಂಭಿಸಿ

YouTube BrandConnect ಎಂಬುದು ಸ್ವಯಂ-ಸೇವಾ ಪ್ಲ್ಯಾಟ್‌ಫಾರ್ಮ್ ಆಗಿದ್ದು, ಇದು ಬ್ರ್ಯಾಂಡೆಡ್ ಕಂಟೆಂಟ್ ಅಭಿಯಾನಗಳ ಅವಕಾಶಗಳ ಜೊತೆಗೆ ರಚನೆಕಾರರನ್ನು ಕನೆಕ್ಟ್ ಮಾಡುತ್ತದೆ. ಬ್ರ್ಯಾಂಡ್‌ಗಳು ತಮ್ಮ ಬ್ರ್ಯಾಂಡೆಡ್ ಕಂಟೆಂಟ್ ಅಭಿಯಾನಗಳನ್ನು ಕಾರ್ಯಗತಗೊಳಿಸಲು ಮತ್ತು ಜೊತೆಗೂಡಿ ಕೆಲಸ ಮಾಡುವುದಕ್ಕಾಗಿ ರಚನೆಕಾರರನ್ನು ಗುರುತಿಸಲು ನಮ್ಮ ಒಡೆತನದ ಪ್ರಭಾವಿ ಡ್ಯಾಶ್‌ಬೋರ್ಡ್ ಅನ್ನು ಬಳಸಬಹುದು.

ರಚನೆಕಾರರಿಗೆ, YouTube BrandConnect ಪ್ಲ್ಯಾಟ್‌ಫಾರ್ಮ್ ಈ ಸೌಲಭ್ಯಗಳನ್ನು ನೀಡುತ್ತದೆ:

  • ನಿಮ್ಮ ಆದ್ಯತೆಗಳಿಗೆ ಹೊಂದಾಣಿಕೆಯಾಗುವ ಬ್ರ್ಯಾಂಡೆಡ್ ಕಂಟೆಂಟ್ ಅಭಿಯಾನಗಳಿಗೆ ಸಂಬಂಧಿಸಿದಂತೆ ಕೆಲಸ ಮಾಡುವ ಮೂಲಕ ಹಣ ಗಳಿಸುವ ಅವಕಾಶಗಳು
  • ಅಭಿಯಾನಗಳನ್ನು ನಿರ್ವಹಿಸಲು YouTube Studio ದಲ್ಲಿನ ಸ್ವಯಂ-ಸೇವಾ ಟೂಲ್‌ಗಳು
  • ನಿಮ್ಮ ಚಾನಲ್‌ಗೆ ಸೂಕ್ತವಾಗಿರುವ ಪ್ರೇಕ್ಷಕರ ಒಳನೋಟಗಳನ್ನು ಹೊಂದಿರುವ ಕಸ್ಟಮೈಸ್ ಮಾಡಬಹುದಾದ ಮೀಡಿಯಾ ಕಿಟ್, ಇದರಿಂದಾಗಿ ನೀವು ಬ್ರ್ಯಾಂಡ್‌ಗಳಿಗೆ ಮತ್ತು ಸುರಕ್ಷಿತ ಡೀಲ್‌ಗಳಿಗೆ ನಿಮ್ಮನ್ನು ಪಿಚ್ ಮಾಡಿಕೊಳ್ಳಬಹುದು. ಮೀಡಿಯಾ ಕಿಟ್ ಬಳಸುವುದು ಹೇಗೆಂದು ತಿಳಿದುಕೊಳ್ಳಿ.
  • ನಿಮಗೆ ಮಾರ್ಗದರ್ಶನ ನೀಡಲು ಸಹಾಯ ಮಾಡಲು ಅತ್ಯುತ್ತಮ ಅಭ್ಯಾಸಗಳು ಮತ್ತು ಮಾಹಿತಿಯ ಮೂಲಗಳು

YouTube BrandConnect ಮೂಲಕ, ನಿಮ್ಮ ಅಭಿಯಾನಗಳನ್ನು ನೀವು ಪರಿಣಾಮಕಾರಿಯಾಗಿ ನಿರ್ವಹಿಸಬಹುದು, ಸೃಜನಶೀಲ ನಿಯಂತ್ರಣವನ್ನು ಉಳಿಸಿಕೊಳ್ಳಬಹುದು ಮತ್ತು ಯಾರ ಜೊತೆ ಕೆಲಸ ಮಾಡಬೇಕು ಎಂಬುದನ್ನು ಆಯ್ಕೆಮಾಡಬಹುದು.

ಲಭ್ಯತೆ ಮತ್ತು ಇರಬೇಕಾದ ಅರ್ಹತೆಗಳು

YouTube BrandConnect ಬೀಟಾದಲ್ಲಿದೆ ಮತ್ತು ಈ ಸಮಯದಲ್ಲಿ ಲಭ್ಯವಿರುವ ದೇಶಗಳು/ಪ್ರದೇಶಗಳಲ್ಲಿ ಒಂದರಲ್ಲಿ ಇರುವ ಅರ್ಹ ರಚನೆಕಾರರಿಗೆ ಮಾತ್ರ ಲಭ್ಯವಿದೆ.

YouTube BrandConnect ಪ್ಲ್ಯಾಟ್‌ಫಾರ್ಮ್‌ನಲ್ಲಿ ಭಾಗವಹಿಸಲು, ನಿಮ್ಮ ಚಾನಲ್ ಈ ಕನಿಷ್ಠ ಇರಬೇಕಾದ ಅರ್ಹತೆಗಳನ್ನು ಪೂರೈಸಬೇಕು:

ನಿಮ್ಮ ಚಾನಲ್ YouTube ನ ಮಾನಿಟೈಸೇಶನ್ ನೀತಿಗಳನ್ನು ಸಹ ಅನುಸರಿಸಬೇಕು, ಇವುಗಳನ್ನು ಒಳಗೊಂಡಂತೆ:

ಲಭ್ಯತೆ

YouTube BrandConnect ಈ ಕೆಳಗಿನ ದೇಶಗಳು/ಪ್ರದೇಶಗಳಲ್ಲಿ ಇರುವ ಅರ್ಹ ರಚನೆಕಾರರಿಗೆ ಲಭ್ಯವಿದೆ:
  • ಬ್ರೆಜಿಲ್
  • ಭಾರತ
  • ಇಂಡೋನೇಷ್ಯಾ
  • ಯುನೈಟೆಡ್ ಕಿಂಗ್‌ಡಮ್
  • ಅಮೇರಿಕಾ

YouTube BrandConnect ಅನ್ನು ಆನ್ ಮಾಡಿ

ಕಂಪ್ಯೂಟರ್ ಅನ್ನು ಬಳಸಿಕೊಂಡು ನಿಮ್ಮ ಚಾನಲ್‌ಗಾಗಿ YouTube BrandConnect ಅನ್ನು ಆನ್ ಮಾಡಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಗಳಿಸಿ ಎಂಬುದನ್ನು ಕ್ಲಿಕ್ ಮಾಡಿ.
  3. BrandConnect ಟ್ಯಾಬ್ ಅನ್ನು ಕ್ಲಿಕ್ ಮಾಡಿ. ನಿಮ್ಮ ಚಾನಲ್ ಅರ್ಹವಾಗಿದ್ದರೆ ಮಾತ್ರ ಈ ಟ್ಯಾಬ್ ಕಾಣಿಸಿಕೊಳ್ಳುತ್ತದೆ.
  4. ಸ್ಕ್ರೀನ್‌ನ ಮೇಲ್ಭಾಗದಲ್ಲಿ, ಪ್ರಾರಂಭಿಸಿ ಎಂಬುದನ್ನು ಕ್ಲಿಕ್ ಮಾಡಿ ಅಥವಾ ಪರದೆಯ ಕೆಳಭಾಗದಲ್ಲಿ ಪ್ರಾರಂಭಿಸೋಣ ಎಂಬುದನ್ನು ಕ್ಲಿಕ್ ಮಾಡಿ.
  5. YouTube BrandConnect ಮಾಡ್ಯೂಲ್ ಅನ್ನು ಪರಿಶೀಲಿಸಿ ಮತ್ತು ಸಮ್ಮತಿಸಿ.

ನಿಮ್ಮ ಮೊಬೈಲ್ ಸಾಧನವನ್ನು ಬಳಸಿಕೊಂಡು ನಿಮ್ಮ ಚಾನಲ್‌ಗಾಗಿ YouTube BrandConnect ಅನ್ನು ಆನ್ ಮಾಡಲು:

  1. YouTube Studio ಮೊಬೈಲ್ ಆ್ಯಪ್  ಅನ್ನು ತೆರೆಯಿರಿ.
  2. ಕೆಳಭಾಗದ ಮೆನುವಿನಿಂದ, ಹಣ ಗಳಿಸಿ ಎಂಬುದನ್ನು ಟ್ಯಾಪ್ ಮಾಡಿ.
  3. BrandConnect ಕಾರ್ಡ್ ಅನ್ನು ಟ್ಯಾಪ್ ಮಾಡಿ. ನಿಮ್ಮ ಚಾನಲ್ ಅರ್ಹವಾಗಿದ್ದರೆ ಮಾತ್ರ ಈ ಕಾರ್ಡ್ ಕಾಣಿಸಿಕೊಳ್ಳುತ್ತದೆ.
  4. ಆನ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  5. YouTube BrandConnect ಮಾಡ್ಯೂಲ್ ಅನ್ನು ಪರಿಶೀಲಿಸಿ ಮತ್ತು ಸಮ್ಮತಿಸಿ.
ಗಮನಿಸಿ: MCN ಗಳು ಸೆಟ್ಟಿಂಗ್‌ಗಳು ನಂತರ ಒಪ್ಪಂದಗಳು ಎಂಬಲ್ಲಿ ತಮ್ಮ Studio ಕಂಟೆಂಟ್ ಮಾಲೀಕರ ಖಾತೆಯ ಮೂಲಕ YouTube BrandConnect ಮಾಡ್ಯೂಲ್‌ಗೆ ಸಮ್ಮತಿಸಬಹುದು.

YouTube BrandConnect ಅನ್ನು ನಿರ್ವಹಿಸಿ

ನಿಮ್ಮ ಆದ್ಯತೆಗಳನ್ನು ಸೆಟ್ ಮಾಡಿ

ನೀವು YouTube BrandConnect ಮಾಡ್ಯೂಲ್‌ಗೆ ಸಮ್ಮತಿಸಿದ ನಂತರ ಬ್ರ್ಯಾಂಡ್ ಆಗಿರುವ ಕಂಟೆಂಟ್ ಅವಕಾಶಗಳನ್ನು ಪಡೆಯಲು ನೀವು ಅರ್ಹರಾಗುತ್ತೀರಿ. ಬ್ರ್ಯಾಂಡ್‌ಗಳು ಈಗ ನಿಮ್ಮನ್ನು ಅನ್ವೇಷಿಸಬಹುದು, ಆದರೆ ಸೈನ್ ಅಪ್ ಮಾಡಿದ ಮಾತ್ರಕ್ಕೆ ಬ್ರ್ಯಾಂಡ್ ಆಗಿರುವ ಕಂಟೆಂಟ್ ಅವಕಾಶಗಳ ಲಭ್ಯತೆಯು ಖಾತ್ರಿಯಾಗುವುದಿಲ್ಲ.

ಬ್ರ್ಯಾಂಡ್‌ಗಳಿಂದ ಬರುವ ಅವಕಾಶಗಳು ನೇರವಾಗಿ YouTube Studio ದಲ್ಲಿ ಕಾಣಿಸಿಕೊಳ್ಳುತ್ತವೆ, ಅಲ್ಲಿ ನೀವು ವಿವರಗಳನ್ನು ಪರಿಶೀಲಿಸಬಹುದು. ಅವಕಾಶಗಳು ಸೂಕ್ತವಾಗಿವೆ ಮತ್ತು ಅವುಗಳ ಬೆಲೆ ಸ್ವೀಕಾರಾರ್ಹವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಅವುಗಳನ್ನು ನಿಮ್ಮ ಆದ್ಯತೆಗಳು ಸ್ವಯಂಚಾಲಿತವಾಗಿ ಫಿಲ್ಟರ್ ಮಾಡುತ್ತವೆ. ನಿಮ್ಮ ಅಗತ್ಯಗಳಿಗೆ ತಕ್ಕಂತೆ ನಿಮ್ಮ ಹೊಂದಾಣಿಕೆಗಳನ್ನು ಸುಧಾರಿಸಲು ನಿಮ್ಮ ಆದ್ಯತೆಗಳನ್ನು ನೀವು ಬದಲಾಯಿಸಬಹುದು:

  1. YouTube Studio ದ ಹಣ ಗಳಿಸಿ ವಿಭಾಗಕ್ಕೆ ಹೋಗಿ.
  2. BrandConnect and then ಆದ್ಯತೆಗಳನ್ನು ಸೆಟ್ ಮಾಡಿ ಎಂಬುದನ್ನು ಆಯ್ಕೆಮಾಡಿ.

ಡೀಲ್ ನಿರ್ವಹಣೆ

YouTube Studio ಅಥವಾ YouTube Studio ಮೊಬೈಲ್ ಆ್ಯಪ್‌ನಲ್ಲಿ ವಿವರಗಳನ್ನು ನೋಡಿ ಎಂಬುದನ್ನು ಆಯ್ಕೆಮಾಡುವ ಮೂಲಕ ನಿಮ್ಮ ಡ್ಯಾಶ್‌ಬೋರ್ಡ್‌ನಲ್ಲಿ ಪ್ರತಿಯೊಂದು ಅವಕಾಶದ ವಿವರಗಳನ್ನು ನೀವು ವೀಕ್ಷಿಸಬಹುದು. ಪ್ರತಿಯೊಂದು ಅವಕಾಶವು ಅಭಿಯಾನದ ಟೈಮ್‌ಲೈನ್‌ನ ಉನ್ನತ ಮಟ್ಟದ ಅವಲೋಕನವನ್ನು ಒಳಗೊಂಡಿರುತ್ತದೆ. ಅಭಿಯಾನದ ಟೈಮ್‌ಲೈನ್, ಡೀಲ್ ಅನ್ನು ಅಭಿವೃದ್ಧಿಪಡಿಸಲು ಮತ್ತು ಪ್ರಕ್ರಿಯೆಯಲ್ಲಿ ನೀವು ಯಾವ ಹಂತದಲ್ಲಿದ್ದೀರಿ ಎಂಬುದನ್ನು ವೀಕ್ಷಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಅಭಿಯಾನದ ಟೈಮ್‌ಲೈನ್ ಮೂರು ಉನ್ನತ-ಮಟ್ಟದ ಹಂತಗಳನ್ನು ಒಳಗೊಂಡಿರುತ್ತದೆ: ಆಫರ್, ಅಭಿಯಾನದ ವೀಡಿಯೊಗಳು ಮತ್ತು ಅಭಿಯಾನದ ಪರ್ಫಾರ್ಮೆನ್ಸ್.

ಆಫರ್

"ಆಫರ್" ವಿಭಾಗವು ನಿಮ್ಮ ಅಭಿಯಾನದ ವಿವರಗಳನ್ನು ತಿಳಿಸಿಕೊಡುತ್ತದೆ ಮತ್ತು ಬ್ರ್ಯಾಂಡ್ ಕುರಿತು ಹೆಚ್ಚಿನ ಮಾಹಿತಿಯನ್ನು ಒಳಗೊಂಡಿರುತ್ತದೆ:

ಬೆಲೆ

ಈ ಡೀಲ್‌ನಿಂದ ನೀವು ಗಳಿಸಬಹುದಾದ ಹಣದ ಮೊತ್ತ. ಡೀಲ್‌ನಿಂದ ನೀವು ಗಳಿಸಬಹುದಾದ ಅಂತಿಮ ಮೊತ್ತದಲ್ಲಿ, ಅಭಿಯಾನದ ಗಾತ್ರ ಮತ್ತು ರಚನೆಕಾರರ ರೀಚ್ ಅನ್ನು ಒಳಗೊಂಡ ಅಂಶಗಳನ್ನು ಆಧರಿಸಿ ವ್ಯತ್ಯಾಸವಾಗಬಹುದು, ಆದರೆ ಅಂಶಗಳು ಕೇವಲ ಇವುಗಳಿಗೆ ಸೀಮಿತವಾಗಿರುವುದಿಲ್ಲ. ಪ್ರತಿ ಅವಕಾಶಕ್ಕೂ ನೀವು ಬೆಲೆಯ ಕುರಿತು ಮಾತುಕತೆ ನಡೆಸಬಹುದು.

ಅವಲೋಕನ ಅಭಿಯಾನ ಮತ್ತು ಬ್ರ್ಯಾಂಡ್‌ನ ಉತ್ಪನ್ನ ಅಥವಾ ಸೇವೆಯ ಅವಲೋಕನ. ಈ ವಿಭಾಗವು ವೀಕ್ಷಕರೊಂದಿಗೆ ನೀವು ಹಂಚಿಕೊಳ್ಳಬೇಕೆಂದು ಬ್ರ್ಯಾಂಡ್ ಬಯಸುವ ಯಾವುದೇ ಆಲೋಚನೆಗಳು ಮತ್ತು ಉತ್ತಮ ಕಾರ್ಯಕ್ಷಮತೆ ಸಾಧಿಸಲು ವೀಕ್ಷಕರನ್ನು ಪ್ರೋತ್ಸಾಹಿಸುವುದಕ್ಕಾಗಿ ನೀವು ಕೈಗೊಳ್ಳಬೇಕೆಂದು ಬ್ರ್ಯಾಂಡ್ ಬಯಸುವ ಕ್ರಿಯೆಯನ್ನು ಒಳಗೊಂಡಿರುತ್ತದೆ.
ಡೆಲಿವರೆಬಲ್‌ಗಳ ಸಾರಾಂಶ ಅಭಿಯಾನಕ್ಕಾಗಿ ನೀವು ಬ್ರ್ಯಾಂಡ್‌ಗೆ ಏನನ್ನು ಡೆಲಿವರಿ ಮಾಡಬೇಕು.
ಉತ್ಪನ್ನದ ಮಾಹಿತಿ ನಿಮ್ಮ ಸೇವೆಗಳಿಗೆ ಪ್ರತಿಯಾಗಿ ಬ್ರ್ಯಾಂಡ್ ವತಿಯಿಂದ ನಿಮಗೆ ನೀಡಲಾದ ಉತ್ಪನ್ನ ಅಥವಾ ಸೇವೆಯ ವಿವರಣೆ.

ಕುರಿತು (ಬ್ರ್ಯಾಂಡ್)

ಬ್ರ್ಯಾಂಡ್‌ನ ಉನ್ನತ ಮಟ್ಟದ ಅವಲೋಕನ ಮತ್ತು ಬ್ರ್ಯಾಂಡ್‌ನ ವೆಬ್‌ಸೈಟ್‌ನ ಲಿಂಕ್.

ಆಫರ್‌ಗಳಿಗೆ ಪ್ರತಿಕ್ರಿಯಿಸುವುದು 

ನೀವು ಯುನೈಡೆಟ್ ಸ್ಟೇಟ್ಸ್‌ನಲ್ಲಿ ನೆಲೆಸಿದ್ದರೆ, ಆಫರ್‌ಗೆ ಸಂಬಂಧಿಸಿದಂತೆ ನೀವು ತೆಗೆದುಕೊಳ್ಳಬಹುದಾದ ಕ್ರಮಗಳು ನಿಮ್ಮ ನಿಯಮಗಳು ಮತ್ತು Google ಅಥವಾ ಬ್ರ್ಯಾಂಡ್ ಡೀಲ್ ಅನ್ನು ನೀಡುತ್ತದೆಯೇ ಎಂಬುದನ್ನು ಅವಲಂಬಿಸಿರುತ್ತದೆ. 

ನೀವು YouTube BrandConnect ಮಾಡ್ಯುಲ್ ನಿಯಮಗಳಿಗೆ ಸಹಿ ಮಾಡಿದ್ದರೆ ಮತ್ತು ನಿಮಗೆ ನೇರವಾಗಿ ಬ್ರ್ಯಾಂಡ್‌ನಿಂದಲೇ ಡೀಲ್ ದೊರೆತಿದ್ದರೆ, ಆ ಆಫರ್‌ಗೆ ಸಂಬಂಧಿಸಿದಂತೆ ನೀವು ಈ ಕೆಳಗಿನ ಕ್ರಿಯೆಗಳನ್ನು ನಿರ್ವಹಿಸಬಹುದು:

  • ಆಸಕ್ತಿಯಿದೆ: ನೀವು ಆಸಕ್ತಿಯಿದೆ ಎಂಬುದನ್ನು ಆಯ್ಕೆಮಾಡಿದರೆ, ನಾವು ನಿಮ್ಮ ಸಂಪರ್ಕ ವಿವರಗಳನ್ನು ಬ್ರ್ಯಾಂಡ್‌ನ ಜೊತೆಗೆ ಹಂಚಿಕೊಳ್ಳುತ್ತೇವೆ, ಆಗ ಅವರು ಈ ಡೀಲ್ ಕುರಿತು ಮಾತುಕತೆ ನಡೆಸಲು ನಿಮ್ಮನ್ನು ಸಂಪರ್ಕಿಸಬಹುದು. ನಿಮ್ಮ ಆಸಕ್ತಿಯನ್ನು ನೀವು ದೃಢೀಕರಿಸಿದಾಗ, ನಿಮ್ಮ ದೃಢೀಕರಣಕ್ಕೆ ನೀವು ವಿವರಗಳನ್ನು ಸಹ ಸೇರಿಸಬಹುದು, ಉದಾಹರಣೆಗೆ ಸಂಪರ್ಕ ಆದ್ಯತೆಗಳು, ಇದು ನಿಮ್ಮನ್ನು ಹೇಗೆ ಸಂಪರ್ಕಿಸಬೇಕು ಎಂಬುದನ್ನು ತಿಳಿಯಲು ಬ್ರ್ಯಾಂಡ್‌ಗೆ ನೆರವಾಗುತ್ತದೆ. ಪಾವತಿ ನಿಯಮಗಳು, ದರ ಮತ್ತು ಒಪ್ಪಂದದ ಭಾಷೆಯನ್ನು ಡೀಲ್ ಒಳಗೊಂಡಿರುತ್ತದೆ. ಡೀಲ್ ಒಂದರ ವಿಚಾರದಲ್ಲಿ ಮುಂದುವರಿಯಲು, ನೀವು ಬ್ರ್ಯಾಂಡ್‌ನೊಂದಿಗೆ ನೇರವಾಗಿ ಒಪ್ಪಂದಕ್ಕೆ ಸಹಿ ಮಾಡುತ್ತೀರಿ ಮತ್ತು ನಿಮಗೆ ಬ್ರ್ಯಾಂಡ್ ಹಣ ಪಾವತಿಸುತ್ತದೆ. ನೀವು ಬ್ರ್ಯಾಂಡ್‌ನೊಂದಿಗೆ ಸಹಿ ಮಾಡುವ ಯಾವುದೇ ಒಪ್ಪಂದದ ನಿಯಮಗಳು ನಿಮಗೆ ಅರ್ಥವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ; ನೀವು ಕಾನೂನು ವೃತ್ತಿಪರರೊಬ್ಬರನ್ನು ಸಂಪರ್ಕಿಸಬಹುದು.
  •  ನಿರಾಕರಿಸಿ: ನಿರಾಕರಿಸಿ ಎಂಬುದನ್ನು ನೀವು ಆಯ್ಕೆಮಾಡಿದರೆ, ಒಪ್ಪಂದದ ಜೊತೆಗೆ ಮುಂದುವರಿಯಲು ನೀವು ಬಯಸುತ್ತಿಲ್ಲ ಎಂದು ನಾವು ಬ್ರ್ಯಾಂಡ್‌ಗೆ ತಿಳಿಸುತ್ತೇವೆ.

ನೀವು YouTube BrandConnect ಸ್ವಯಂ-ಸೇವೆ ಪ್ಲ್ಯಾಟ್‌ಫಾರ್ಮ್ ಬೀಟಾ ನಿಯಮಗಳಿಗೆ ಸಹಿ ಮಾಡಿದ್ದರೆ, ನಿಮ್ಮ YouTube ಗಾಗಿ AdSense ಖಾತೆಗೆ Google ನಿಂದ ಪಾವತಿಸಬೇಕಾದ ದರವನ್ನು ಒಳಗೊಂಡಿರುವ Google ನ ಡೀಲ್‌ಗಳನ್ನು ನಿಮಗೆ ನೀಡಬಹುದು. ಅಂತಹ ಆಫರ್‌ಗೆ ಸಂಬಂಧಿಸಿದಂತೆ ನೀವು ಈ ಕೆಳಗಿನ ಕ್ರಿಯೆಗಳನ್ನು ನಿರ್ವಹಿಸಬಹುದು: 

  • ಸಮ್ಮತಿಸಿ: ನೀವು ಸಮ್ಮತಿಸಿದರೆ, ಬ್ರ್ಯಾಂಡ್‌ನೊಂದಿಗೆ ಒಪ್ಪಂದವೊಂದಕ್ಕೆ ಸಹಿ ಮಾಡುವಂತೆ ನಿಮಗೆ ಹೇಳಲಾಗುತ್ತದೆ. ನೀವು ಒಪ್ಪಂದದ ನಿಯಮಗಳನ್ನು ಪೂರೈಸಿದರೆ, ನಿಮ್ಮ ಭಾಗವಹಿಸುವಿಕೆಗಾಗಿ Google ನಿಮಗೆ ಹಣ ಪಾವತಿಸುತ್ತದೆ. ನೀವು ಬ್ರ್ಯಾಂಡ್‌ನೊಂದಿಗೆ ಸಹಿ ಮಾಡುವ ಯಾವುದೇ ಒಪ್ಪಂದದ ನಿಯಮಗಳು ನಿಮಗೆ ಅರ್ಥವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
  • ಕೌಂಟರ್: ನೀವು ಕೌಂಟರ್ ಎಂಬುದನ್ನು ಆಯ್ಕೆ ಮಾಡಿದರೆ, ಅವಕಾಶದಲ್ಲಿ ಭಾಗವಹಿಸುವುದಕ್ಕಾಗಿ ನೀವು ಹೊಸ ಬೆಲೆಯ ಕುರಿತು ಮಾತುಕತೆ ನಡೆಸಬಹುದು.  
  • ಚರ್ಚಿಸಿ: ಚರ್ಚಿಸಿ ಎಂಬುದನ್ನು ನೀವು ಆಯ್ಕೆ ಮಾಡಿದರೆ, ಆಫರ್‌ನ ಕುರಿತು ಇನ್ನಷ್ಟು ತಿಳಿದುಕೊಳ್ಳಲು ನೀವು ಬ್ರ್ಯಾಂಡ್ ಅನ್ನು ಸಂಪರ್ಕಿಸಬಹುದು.
  • ನಿರಾಕರಿಸಿ: ನಿರಾಕರಿಸಿ ಎಂಬುದನ್ನು ನೀವು ಆಯ್ಕೆಮಾಡಿದರೆ, ಒಪ್ಪಂದದ ಜೊತೆಗೆ ಮುಂದುವರಿಯಲು ನೀವು ಬಯಸುತ್ತಿಲ್ಲ ಎಂದು ನಾವು ಬ್ರ್ಯಾಂಡ್‌ಗೆ ತಿಳಿಸುತ್ತೇವೆ.

ಅಭಿಯಾನದ ವೀಡಿಯೊಗಳು

ನೀವು ಬ್ರ್ಯಾಂಡ್ ಪ್ರಾಯೋಜಕತ್ವಕ್ಕೆ ಸಮ್ಮತಿಸಿದ ನಂತರ, ನಿಮ್ಮ ಅಭಿಯಾನದ ಕಂಟೆಂಟ್ ವಿಚಾರವಾಗಿ ನೀವು ಕೆಲಸ ಮಾಡಬಹುದು. "ಅಭಿಯಾನದ ವೀಡಿಯೊಗಳು" ಎಂಬ ವಿಭಾಗವು, ನಿಮ್ಮ ಕಂಟೆಂಟ್ ಅನ್ನು ಪಟ್ಟಿ ಮಾಡದಿರುವುದು ಎಂಬುದಾಗಿ ಅಪ್‌ಲೋಡ್ ಮಾಡಲು ಹಾಗೂ ಒಂದು ಅಥವಾ ಅದಕ್ಕಿಂತ ಹೆಚ್ಚಿನ ವೀಡಿಯೊಗಳನ್ನು ಪರಿಶೀಲನೆ ಹಾಗೂ ಅನುಮೋದನೆಗಾಗಿ ಬ್ರ್ಯಾಂಡ್‌ಗೆ ಸಲ್ಲಿಸಲು ನೀವು ತೆಗೆದುಕೊಳ್ಳಬೇಕಾದ ಮುಂದಿನ ಕ್ರಮಗಳನ್ನು ನಿಮಗೆ ವಿವರಿಸುತ್ತದೆ. ಬ್ರ್ಯಾಂಡ್‌ನ ಬಳಿ ಯಾವುದೇ ಫೀಡ್‌ಬ್ಯಾಕ್ ಇದ್ದರೆ, ನಿಮ್ಮ ಬ್ರ್ಯಾಂಡ್ ಪಾರ್ಟ್‌ನರ್‌ನ ಕಾಮೆಂಟ್‌ಗಳಿರುವ ಇಮೇಲ್ ಅನ್ನು ನಿಮಗೆ ಕಳುಹಿಸಲಾಗುತ್ತದೆ.

ಬ್ರ್ಯಾಂಡ್ ವಿಮರ್ಶೆಗಳ ಜೊತೆಗೆ, ನಿಮ್ಮ ಕಂಟೆಂಟ್ ಅನ್ನು Google Ads ನೀತಿಗಳು ಮತ್ತು ಸಮುದಾಯ ಮಾರ್ಗಸೂಚಿಗಳಿಗೆ ಅನುಸಾರವಾಗಿಯೂ ಪರಿಶೀಲಿಸಲಾಗುತ್ತದೆ. ನಿಮ್ಮ ಕಂಟೆಂಟ್‌ಗೆ ಸಂಪೂರ್ಣ ಅನುಮೋದನೆ ದೊರೆತ ನಂತರ, ನೀವು YouTube Studio ದಲ್ಲಿ ಇಮೇಲ್ ಮತ್ತು ಸ್ಟೇಟಸ್ ಅಪ್‌ಡೇಟ್ ಅನ್ನು ಪಡೆಯುತ್ತೀರಿ. ನಿಮ್ಮ ಕಂಟೆಂಟ್ ಅನ್ನು ನೀವು ಕೂಡಲೇ ಪ್ರಕಟಿಸಬಹುದು ಅಥವಾ ಅದು ಯಾವಾಗ ಲೈವ್ ಆಗಬೇಕೆಂದು ಬಯಸುತ್ತೀರೋ ಆವಾಗ ಪ್ರಕಟಿಸಲು ನಿಗದಿಪಡಿಸಬಹುದು. ನೀವು ಬ್ರ್ಯಾಂಡ್‌ನೊಂದಿಗೆ ಸಮ್ಮತಿಸಿದ ಟೈಮ್‌ಲೈನ್‌ಗೆ ಅನುಗುಣವಾಗಿ ಪ್ರಕಟಿಸುತ್ತೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಅಭಿಯಾನದ ಕಾರ್ಯಕ್ಷಮತೆ

"ಅಭಿಯಾನದ ಕಾರ್ಯಕ್ಷಮತೆ" ವಿಭಾಗವು ನಿಮ್ಮ ಕಂಟೆಂಟ್‌ನ ಕಾರ್ಯಕ್ಷಮತೆಯ ಉನ್ನತ-ಮಟ್ಟದ ಅವಲೋಕನವನ್ನು ಒದಗಿಸುತ್ತದೆ, ಅದು ಈ ಕೆಳಗಿನವುಗಳನ್ನು ಒಳಗೊಂಡಿದೆ, ಆದರೆ ಕೇವಲ ಇವುಗಳಿಗೆ ಸೀಮಿತವಾಗಿಲ್ಲ:

  • ನಿಮ್ಮ ಅಭಿಯಾನದಲ್ಲಿ ಬಾಕಿ ಉಳಿದಿರುವ ದಿನಗಳು
  • ನಿಮ್ಮ ಕಂಟೆಂಟ್‌ನ ವೀಕ್ಷಣೆಗಳು
  • ಲೈಕ್‌ಗಳು

ನೀವು YouTube Analytics ನಲ್ಲಿ ನಿಮ್ಮ ಕಂಟೆಂಟ್‌ನ ಕಾರ್ಯಕ್ಷಮತೆಯ ಕುರಿತು ಹೆಚ್ಚಿನ ವಿವರಗಳನ್ನು ಸಹ ವೀಕ್ಷಿಸಬಹುದು.

FAQ ಗಳು

ನಾನು YouTube BrandConnect ಜೊತೆಗೆ ಹೇಗೆ ಕೆಲಸ ಮಾಡಬಹುದು?

ಇದೀಗ, YouTube BrandConnect ಬೀಟಾದಲ್ಲಿದೆ ಮತ್ತು ಲಭ್ಯವಿರುವ ದೇಶಗಳು/ಪ್ರದೇಶಗಳಲ್ಲಿ ಇರುವ ರಚನೆಕಾರರ ಸಣ್ಣ ಗುಂಪಿಗೆ ಮಾತ್ರ ಲಭ್ಯವಿದೆ. ನೀವು ಬೀಟಾಗೆ ಅರ್ಹರಾಗಿದ್ದರೆ, YouTube Studio ದಲ್ಲಿ BrandConnect ಟ್ಯಾಬ್ ಗೋಚರಿಸುತ್ತದೆ. ಈ ಫೀಚರ್ ಅನ್ನು ಶೀಘ್ರದಲ್ಲೇ ಹೆಚ್ಚಿನ ರಚನೆಕಾರರಿಗಾಗಿ ಮತ್ತು ಹೆಚ್ಚಿನ ದೇಶಗಳು/ಪ್ರದೇಶಗಳಲ್ಲಿ ಹೊರತರಲು ನಾವು ಎದುರುನೋಡುತ್ತಿದ್ದೇವೆ.

ಏಜೆಂಟ್‌ಗಳು / ನಿರ್ವಾಹಕರು ತಮ್ಮ ರಚನೆಕಾರರ ಪರವಾಗಿ YouTube BrandConnect ಅನ್ನು ಬಳಸಬಹುದೇ?

ಹೌದು. ಚಾನಲ್‌ಗೆ ಸಂಬಂಧಪಟ್ಟ ಇಮೇಲ್ ವಿಳಾಸಕ್ಕೆ ನಾವು ಹೊಸ ಅವಕಾಶಗಳ ಕುರಿತು ಇಮೇಲ್ ನೋಟಿಫಿಕೇಶನ್‌ಗಳನ್ನು ಕಳುಹಿಸುತ್ತೇವೆ. ನೀವು ಈ ಇಮೇಲ್ ನೋಟಿಫಿಕೇಶನ್‌ಗಳನ್ನು ಪಡೆಯಬೇಕೆಂದು ರಚನೆಕಾರರು ಬಯಸಿದರೆ, ಅವರು ತಮ್ಮ ಚಾನಲ್‌ಗೆ ಸಂಬಂಧಪಟ್ಟ ಇಮೇಲ್ ವಿಳಾಸವನ್ನು ಮಾರ್ಪಡಿಸಬಹುದು. ನಿಮ್ಮ ರಚನೆಕಾರರು YouTube Studio ದಲ್ಲಿ ತಮ್ಮ ಡೀಲ್‌ಗಳನ್ನು ನೀವು ನೇರವಾಗಿ ನಿರ್ವಹಿಸುವಂತೆ ಮಾಡಲು ನಿಮ್ಮನ್ನು ಒಬ್ಬ ಅಧಿಕೃತ ಬಳಕೆದಾರರಾಗಿ ಸೇರಿಸಬಹುದು.

ನಾನು YouTube BrandConnect ನಿಂದ ಗಳಿಸುವ ಆದಾಯವನ್ನು ಎಲ್ಲಿ ವೀಕ್ಷಿಸಬಹುದು?

Google ನಿಂದ ನೇರವಾಗಿ ಆಫರ್ ಮಾಡಲಾದ ಮತ್ತು YouTube BrandConnect ಸ್ವಯಂ-ಸೇವೆ ಪ್ಲ್ಯಾಟ್‌ಫಾರ್ಮ್ ಬೀಟಾ ನಿಯಮಗಳಿಗೆ ಒಳಪಟ್ಟಿರುವ ಡೀಲ್‌ಗಳಿಗೆ, YouTube Analytics ನಲ್ಲಿ ನಿಮ್ಮ ಆದಾಯವನ್ನು ನೀವು ವೀಕ್ಷಿಸಬಹುದು. ಸೂಕ್ತ ಸಮಯಾವಧಿಯನ್ನು ಆಯ್ಕೆಮಾಡಿ, ಮತ್ತು ಕಾರ್ಡ್‌ನಲ್ಲಿ "YouTube BrandConnect ಆದಾಯ" ಎಂಬ ಸಾಲು ಕಾಣಿಸಿಕೊಳ್ಳುತ್ತದೆ. ನಿಮ್ಮ ಆದಾಯ ಎಲ್ಲಿಂದ ಬರುತ್ತದೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.
ನೀವು ನೇರವಾಗಿ ಬ್ರ್ಯಾಂಡ್‌ನೊಂದಿಗೆ ಡೀಲ್‌ವೊಂದಕ್ಕೆ ಸಹಿ ಮಾಡಿದರೆ, ಡೀಲ್‌ನಿಂದ ಬರುವ ನಿಮ್ಮ ಆದಾಯವು YouTube Analytics ನಲ್ಲಿ ಗೋಚರಿಸುವುದಿಲ್ಲ.

ನಾನು ಬ್ರ್ಯಾಂಡೆಡ್ ಕಂಟೆಂಟ್ ಅಭಿಯಾನದಲ್ಲಿರುವ ವೀಡಿಯೊಗಳನ್ನು ಜಾಹೀರಾತುದಾರರಿಗೆ ಲಿಂಕ್ ಮಾಡಬೇಕೇ?

ಬ್ರ್ಯಾಂಡೆಡ್ ಕಂಟೆಂಟ್ ಅಭಿಯಾನದಲ್ಲಿ ನೀವು ಜಾಹೀರಾತುದಾರರ ಜೊತೆ ಪಾಲುದಾರರಾಗಿದ್ದರೆ, ಅಭಿಯಾನದಲ್ಲಿರುವ ಕಂಟೆಂಟ್ ಅನ್ನು ತಮ್ಮ Google Ads ಖಾತೆಗೆ ಲಿಂಕ್ ಮಾಡಲು ಜಾಹೀರಾತುದಾರರು ನಿಮಗೆ ವಿನಂತಿಯನ್ನು ಕಳುಹಿಸಬಹುದು. ಜಾಹೀರಾತುದಾರರ ವಿನಂತಿಯನ್ನು ಸಮ್ಮತಿಸಬೇಕೇ ಅಥವಾ ಬೇಡವೇ ಎಂಬುದು ಸಂಪೂರ್ಣವಾಗಿ ನಿಮಗೆ ಬಿಟ್ಟದ್ದು ಹಾಗೂ ನಿಮ್ಮ ಚಾನಲ್‌ನ ಹಿತದೃಷ್ಟಿಯನ್ನು ಗಮನದಲ್ಲಿ ಇರಿಸಿಕೊಂಡು ನೀವು ಯಾವಾಗಲೂ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕು.
ನೀವು ಲಿಂಕ್ ಮಾಡುವಿಕೆಯ ವಿನಂತಿಗೆ ಸಮ್ಮತಿಸಿದರೆ, ಜಾಹೀರಾತುದಾರರು Google Ads ನಲ್ಲಿ ಕಂಟೆಂಟ್‌ನ ಆರ್ಗ್ಯಾನಿಕ್ ಪರ್ಫಾರ್ಮೆನ್ಸ್ ಮೆಟ್ರಿಕ್‌ಗಳನ್ನು ವೀಕ್ಷಿಸಬಹುದು ಹಾಗೂ ತಮ್ಮ ಜಾಹೀರಾತಿನಲ್ಲಿ ಲಿಂಕ್ ಮಾಡಲಾದ ವೀಡಿಯೊಗಳನ್ನು ಬಳಸಬಹುದು. ನಿಮ್ಮ ಬ್ರ್ಯಾಂಡ್ ಆಗಿರುವ ಕಂಟೆಂಟ್ ಅನ್ನು ಜಾಹೀರಾತುದಾರರಿಗೆ ಲಿಂಕ್ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5697392119915184678
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false