ಪ್ರೇಕ್ಷಕರ ರಿಟೆನ್ಶನ್‌ನ ಪ್ರಮುಖ ಕ್ಷಣಗಳನ್ನು ಮಾಪನ ಮಾಡಿ

ಪ್ರೇಕ್ಷಕರ ರಿಟೆನ್ಶನ್‌ ವರದಿಯು ನಿಮ್ಮ ವೀಡಿಯೊದಲ್ಲಿ ವೀಕ್ಷಕರ ಗಮನವನ್ನು ಚೆನ್ನಾಗಿ ಹಿಡಿದಿಟ್ಟುಕೊಂಡ ಪ್ರಮುಖ ಕ್ಷಣಗಳು ಯಾವುವು, ಯಾವ ಭಾಗವನ್ನು ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂಬುದನ್ನು ವಿವರಿಸುತ್ತದೆ. ಈ ವರದಿಯು ನಿಮ್ಮ ವೀಡಿಯೊದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಭಾಗ ಮತ್ತು ಯಾವ ಯಾವ ಭಾಗದಲ್ಲಿ ಸುಧಾರಣೆ ತರಬಹುದು, ಎಂಬ ಅವಕಾಶಗಳ ಕುರಿತು ಒಳನೋಟವನ್ನು ನೀಡುತ್ತದೆ. ಗಮನಿಸಿ, ಪ್ರೇಕ್ಷಕರ ರಿಟೆನ್ಶನ್ ಡೇಟಾವನ್ನು ಪ್ರಕ್ರಿಯೆಗೊಳಿಸಲು ಸಾಮಾನ್ಯವಾಗಿ 1-2 ದಿನಗಳನ್ನು ತೆಗೆದುಕೊಳ್ಳಲಾಗುತ್ತದೆ.

ಗಮನಿಸಿ: ಪ್ರೇಕ್ಷಕರ ರಿಟೆನ್ಶನ್ ವರದಿಯು YouTube Analytics ನ ವೀಡಿಯೊ ಮಟ್ಟದಲ್ಲಿ ಮಾತ್ರ ಲಭ್ಯವಿರುತ್ತದೆ.

ಪ್ರೇಕ್ಷಕರ ರಿಟೆನ್ಶನ್‌ಗೆ ಸಂಬಂಧಿಸಿದ ಪ್ರಮುಖ ಕ್ಷಣಗಳನ್ನು ತಿಳಿಯಿರಿ

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ವೀಡಿಯೊ ಶೀರ್ಷಿಕೆ ಅಥವಾ ಥಂಬ್‌ನೇಲ್ ಕ್ಲಿಕ್ ಮಾಡಿ.
  4. ಎಡಭಾಗದ ಮೆನುವಿನಿಂದ Analytics ಅನ್ನು ಆಯ್ಕೆಮಾಡಿ.
  5. ವೀಕ್ಷಕರ ಸಂಖ್ಯೆ ವರದಿಗಾಗಿ ಅವಲೋಕನ ಅಥವಾ ತೊಡಗಿಸಿಕೊಳ್ಳುವಿಕೆ ಟ್ಯಾಬ್ ಅನ್ನು ಆಯ್ಕೆಮಾಡಿ. YouTube ನಲ್ಲಿರುವ ಇದೇ ರೀತಿಯ ವೀಡಿಯೊಗಳ ಜೊತೆಗೆ ಹೋಲಿಸಲು ನೀವು ಇನ್ನಷ್ಟು ವೀಕ್ಷಿಸಿ ಅನ್ನು ಕ್ಲಿಕ್ ಮಾಡಬಹುದು.

ಪ್ರೇಕ್ಷಕರ ರಿಟೆನ್ಶನ್‌ಗೆ ಸಂಬಂಧಿಸಿದ ಪ್ರಮುಖ ಕ್ಷಣಗಳನ್ನು ಅರ್ಥ ಮಾಡಿಕೊಳ್ಳಿ

ಪ್ರೇಕ್ಷಕರ ರಿಟೆನ್ಶನ್ ವರದಿಗಾಗಿ ನಿಮ್ಮ ವೀಡಿಯೊದ ಪ್ರಮುಖ ಕ್ಷಣಗಳಲ್ಲಿ 4 ವಿಧದ ಕ್ಷಣಗಳನ್ನು ಹೈಲೈಟ್ ಮಾಡಬಹುದು. ಒಂದೇ ಪ್ರಮಾಣದ ಉದ್ದವಿರುವ, ನಿಮ್ಮ 10 ಇತ್ತೀಚಿನ ವೀಡಿಯೊಗಳನ್ನು ಹೋಲಿಸಲು ನೀವು ಸಾಮಾನ್ಯ ರಿಟೆನ್ಶನ್ ಅನ್ನು ಸಹ ಬಳಸಬಹುದು.

ಇಂಟ್ರೊಗಳು

ಮೊದಲ 30 ಸೆಕೆಂಡುಗಳ ನಂತರವೂ, ನಿಮ್ಮ ವೀಡಿಯೊವನ್ನು ವೀಕ್ಷಿಸಿದ ಶೇಕಡಾವಾರು ಪ್ರೇಕ್ಷಕರ ಪ್ರಮಾಣ ಎಷ್ಟು? ಎಂಬುದನ್ನುಇಂಟ್ರೊ ನಿಮಗೆ ತಿಳಿಸುತ್ತದೆ.

ಅಧಿಕ ಇಂಟ್ರೊ ಶೇಕಡಾವಾರು ಎಂದರೆ ಅರ್ಥ:

  • ಮೊದಲ 30 ಸೆಕೆಂಡ್‌ಗಳಲ್ಲಿನ ಕಂಟೆಂಟ್, ವೀಡಿಯೊ ಥಂಬ್‌ನೇಲ್ ಮತ್ತು ಶೀರ್ಷಿಕೆಯು ವೀಕ್ಷಕರ ನಿರೀಕ್ಷೆಗಳನ್ನು ಮುಟ್ಟಿದೆ ಎಂದರ್ಥ.
  • ಕಂಟೆಂಟ್ ಪ್ರೇಕ್ಷಕರಿಗೆ ಆಸಕ್ತಿಯನ್ನುಂಟುಮಾಡಿತು.

ನಿಮ್ಮ ಇಂಟ್ರೊದ ಶೇಕಡಾವಾರುವನ್ನು ಸುಧಾರಿಸಲು ಶಿಫಾರಸುಗಳು:

  • ನಿಮ್ಮ ವೀಡಿಯೊ ಕಂಟೆಂಟ್ ಅನ್ನು ಉತ್ತಮವಾಗಿ ಪ್ರತಿಬಿಂಬಿಸಲು, ನಿಮ್ಮ ವೀಡಿಯೊದ ಥಂಬ್‌ನೇಲ್ ಮತ್ತು ಶೀರ್ಷಿಕೆಯನ್ನು ಬದಲಾಯಿಸಲು ಆಲೋಚಿಸಿ.
  • ನಿಮ್ಮ ವೀಡಿಯೊದ ಮೊದಲ 30 ಸೆಕೆಂಡ್‌ಗಳನ್ನು ಮಾರ್ಪಾಡು ಮಾಡಿ ಮತ್ತು ನಿಮ್ಮ ಪ್ರೇಕ್ಷಕರನ್ನು ತೊಡಗಿಸಿಕೊಳ್ಳುವಂತೆ ಮಾಡುವಂತಹದೇನಾದರೂ ಇದೆಯೇ, ಎಂದು ಹುಡುಕಿ, ಅದನ್ನು ಎತ್ತಿ ತೋರಿಸುವಂತಹ ವಿಭಿನ್ನ ಶೈಲಿಗಳನ್ನು ಬಳಸಿ ನೋಡಿ.

ಟಾಪ್ ಕ್ಷಣಗಳು

ಟಾಪ್ ಕ್ಷಣಗಳು ನಿಮ್ಮ ವೀಡಿಯೊದಲ್ಲಿನ ಕ್ಷಣಗಳಾಗಿವೆ, ಆ ಭಾಗವನ್ನು ವೀಕ್ಷಿಸುವಾಗ ಬಹುತೇಕ ಯಾರೂ ನಿಮ್ಮ ವೀಡಿಯೊವನ್ನು ಸ್ಕಿಪ್ ಮಾಡಿಲ್ಲ.
ಟಾಪ್ ಕ್ಷಣಗಳನ್ನು ಸುಧಾರಿಸಲು ಶಿಫಾರಸುಗಳು:
  • ವೀಡಿಯೊದ ನಂತರದ ಭಾಗದಲ್ಲಿ ಟಾಪ್ ಕ್ಷಣಗಳು ಕಾಣಿಸಿಕೊಳ್ಳುತ್ತಿದ್ದರೆ, ವೀಡಿಯೊದ ಮೊದಲ ಭಾಗದಲ್ಲಿ ಕುತೂಹಲ ಕೆರಳಿಸುವಂತಹ ಕಂಟೆಂಟ್ ಅನ್ನು ಪರಿಚಯಿಸಲು ಪ್ರಯತ್ನಿಸಿ -  ವೀಡಿಯೊ ಸಾಗಿದಂತೆಲ್ಲ ಪ್ರೇಕ್ಷಕರ ಪ್ರಮಾಣಗಳು ಸಾಮಾನ್ಯವಾಗಿ ಕಡಿಮೆಯಾಗುತ್ತವೆ.
  • ಟಾಪ್ ಕ್ಷಣಗಳಿಂದ ಕಂಟೆಂಟ್ ಅನ್ನು ತೆಗೆದುಕೊಂಡು, ಅದರ ಮೇಲೆ ಹೊಸ ಕಂಟೆಂಟ್ ರಚಿಸಲು ಪ್ರಯತ್ನಿಸಿ.

ಸ್ಪೈಕ್‌ಗಳು

ಸ್ಪೈಕ್‌ಗಳು ನಿಮ್ಮ ವೀಡಿಯೊದಲ್ಲಿ ಮರುವೀಕ್ಷಿಸಲಾದ ಅಥವಾ ಹಂಚಿಕೊಳ್ಳಲಾದ ಕ್ಷಣಗಳಾಗಿವೆ.
ಸ್ಪೈಕ್‌ಗಳು ಎಂದರೆ:
  • ನಿಮ್ಮ ಪ್ರೇಕ್ಷಕರು ಹಿಂದಿನ ಸೆಗ್ಮೆಂಟ್‌ಗಿಂತ ಹೆಚ್ಚಾಗಿ ಈ ಭಾಗವನ್ನು ಹೆಚ್ಚು ವೀಕ್ಷಿಸಿದ್ದಾರೆ ಎಂದರ್ಥ.
  • ನಿಮ್ಮ ಕಂಟೆಂಟ್ ಸ್ಪಷ್ಟವಾಗಿಲ್ಲ ಮತ್ತು ಇದನ್ನು ಅರ್ಥ ಮಾಡಿಕೊಳ್ಳಲು, ನಿಮ್ಮ ಪ್ರೇಕ್ಷಕರು ಈ ವಿಭಾಗವನ್ನು ಪುನಃ ವೀಕ್ಷಿಸಬೇಕಾಗಿದೆ.

ರಿಟೆನ್ಶನ್‌‌ನಲ್ಲಿ ಹೆಚ್ಚಳಕ್ಕೆ ಕಾರಣಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ನಿಮ್ಮ ಸ್ಪೈಕ್‌ಗಳನ್ನು ನೀವು ಪರಿಶೀಲಿಸಬಹುದು.

ಡಿಪ್‌ಗಳು

ನಿಮ್ಮ ವೀಡಿಯೊದಲ್ಲಿನ ಸ್ಕಿಪ್ ಮಾಡಿದ ಕ್ಷಣಗಳನ್ನು ಅಥವಾ ವೀಕ್ಷಕರು ನಿಮ್ಮ ವೀಡಿಯೊವನ್ನು ಸಂಪೂರ್ಣವಾಗಿ ವೀಕ್ಷಿಸುವುದನ್ನು ನಿಲ್ಲಿಸಿದ ಕ್ಷಣಗಳನ್ನು ಡಿಪ್‌ಗಳು ಹೈಲೈಟ್ ಮಾಡುತ್ತದೆ.
ಡಿಪ್‌ಗಳು ಎಂದರೆ ನಿಮ್ಮ ಪ್ರೇಕ್ಷಕರು ಆ ವಿಭಾಗವನ್ನು, ಹಿಂದಿನ ವಿಭಾಗಗಳಿಗಿಂತ ಕಡಿಮೆ ವೀಕ್ಷಿಸಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ನಿರ್ದಿಷ್ಟ ವಿಭಾಗದಲ್ಲಿ ಪ್ರೇಕ್ಷಕರು ಏಕೆ ಆಸಕ್ತಿ ಕಳೆದುಕೊಂಡಿದ್ದಾರೆ ಎಂಬುದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು, ನಿಮ್ಮ ಡಿಪ್‌ಗಳನ್ನು ಪರಿಶೀಲಿಸಿ ಎಂದು ನಾವು ಸಲಹೆ ನೀಡುತ್ತೇವೆ.

ಗಮನಿಸಿ: ನಿಮ್ಮ ವೀಡಿಯೊ ಈ ಎಲ್ಲಾ ಕ್ಷಣಗಳನ್ನು ಹೊಂದಿಲ್ಲದಿರಬಹುದು; ನಿಮ್ಮ ವೀಡಿಯೊದಲ್ಲಿ ಕಂಡುಬಂದರೆ ಮಾತ್ರ ಇವುಗಳನ್ನು ಹೈಲೈಟ್ ಮಾಡಲಾಗುತ್ತದೆ. ನಿಮ್ಮ ವೀಡಿಯೊ ಕನಿಷ್ಠ 60 ಸೆಕೆಂಡ್‌ಗಳಷ್ಟು ಉದ್ದವಿರಬೇಕು ಮತ್ತು ಕನಿಷ್ಠ 100 ವೀಕ್ಷಣೆಗಳನ್ನು ಹೊಂದಿರಬೇಕು, ಆಗ ಈ ಫೀಚರ್ ಕೆಲಸ ಮಾಡುತ್ತದೆ.

ಪ್ರೇಕ್ಷಕರ ರಿಟೆನ್ಶನ್ ಗ್ರಾಫ್‌ನ ಆಕಾರವು ನಿಮ್ಮ ವೀಡಿಯೊದ ಯಾವ ಭಾಗಗಳು ವೀಕ್ಷಕರಿಗೆ ಹೆಚ್ಚು ಮತ್ತು ಕಡಿಮೆ ಆಸಕ್ತಿದಾಯಕವಾಗಿದೆ ಎಂಬುದನ್ನು ಹೇಳಬಹುದು.

ಚಾರ್ಟ್‌ನಲ್ಲಿನ ಗೆರೆಯು ನೇರವಾಗಿದ್ದರೆ , ವೀಕ್ಷಕರು ನಿಮ್ಮ ವೀಡಿಯೊದ ಆ ಭಾಗವನ್ನು ಪ್ರಾರಂಭದಿಂದ ಕೊನೆಯವರೆಗೆ ವೀಕ್ಷಿಸುತ್ತಿದ್ದಾರೆ ಎಂದರ್ಥ.
ಕ್ರಮೇಣವಾಗಿ ಇಳಿಮುಖವಾಗುವುದು ಎಂದರೆ ವೀಕ್ಷಕರು ವೀಡಿಯೋ ನೋಡುತ್ತಾ ನೋಡುತ್ತ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ ಎಂದರ್ಥ. YouTube ನಲ್ಲಿನ ವೀಡಿಯೊಗಳ ಆರಂಭದಲ್ಲಿ ಇರುವ ಪ್ರೇಕ್ಷಕರ ಆಸಕ್ತಿಯು ಪ್ಲೇಬ್ಯಾಕ್ ಅವಧಿಯಲ್ಲಿ ಸಾಮಾನ್ಯವಾಗಿ ಕಡಿಮೆಯಾಗುತ್ತವೆ.
ಸ್ಪೈಕ್‌‌ಗಳು ನಿಮ್ಮ ವೀಡಿಯೊದ ಈ ಭಾಗಗಳನ್ನು ಹೆಚ್ಚು ವೀಕ್ಷಕರು ವೀಕ್ಷಿಸುತ್ತಿರುವಾಗ, ಪುನಃ ವೀಕ್ಷಿಸುತ್ತಿರುವಾಗ ಅಥವಾ ಹಂಚಿಕೊಳ್ಳುತ್ತಿರುವಾಗ ಕಾಣಿಸಿಕೊಳ್ಳುತ್ತದೆ.
ಡಿಪ್‌ಗಳು ಎಂದರೆ ವೀಕ್ಷಕರು ನಿಮ್ಮ ವೀಡಿಯೊದ ನಿರ್ದಿಷ್ಟ ಭಾಗವನ್ನು ನೋಡುತ್ತಿಲ್ಲ ಅಥವಾ ಅದನ್ನು ಸ್ಕಿಪ್ ಮಾಡುತ್ತಿದ್ದಾರೆ ಎಂದರ್ಥ.

ಸೆಗ್ಮೆಂಟ್ ಪ್ರಕಾರದ ಅನುಸಾರ ವೀಡಿಯೊದ ಪ್ರೇಕ್ಷಕರ ರಿಟೆನ್ಶನ್

ಗಮನಿಸಿ: ಕೆಲವೊಂದು ಡೇಟಾವನ್ನು ಆ್ಯಕ್ಸೆಸ್ ಮಾಡಲು ನೀವು ಸುಧಾರಿತ ಮೋಡ್ ಅನ್ನು ಸಕ್ರಿಯಗೊಳಿಸಬೇಕಾಗಬಹುದು. ಸುಧಾರಿತ ಫೀಚರ್‌ಗಳನ್ನು ಅನ್‌ಲಾಕ್ ಮಾಡುವುದು ಹೇಗೆ ಎಂದು ತಿಳಿಯಿರಿ.

ನಿಮ್ಮ ಪ್ರೇಕ್ಷಕರ ವಿವಿಧ ವಿಭಾಗಗಳು ನಿಮ್ಮ ವೀಡಿಯೊಗಳೊಂದಿಗೆ ಎಷ್ಟು ಚೆನ್ನಾಗಿ ತೊಡಗಿಸಿಕೊಳ್ಳುತ್ತವೆ ಎನ್ನುವುದನ್ನು ನೋಡಲು ಪ್ರೇಕ್ಷಕರ ರಿಟೆನ್ಶನ್ ಸೆಗ್ಮೆಂಟ್‌ಗಳ ವರದಿಯು ನಿಮಗೆ ಅವಕಾಶ ನೀಡುತ್ತದೆ. ನೀವು ಹೊಸ ವೀಕ್ಷಕರನ್ನು ಮರಳಿ ಭೇಟಿ ನೀಡುತ್ತಿರುವ ವೀಕ್ಷಕರೊಂದಿಗೆ ಹೋಲಿಸಬಹುದು, ಸಬ್‌ಸ್ಕ್ರೈಬ್ ಮಾಡಿರುವವರೊಂದಿಗೆ ಸಬ್‌ಸ್ಕ್ರೈಬ್ ಮಾಡಿರದವರನ್ನು ಹೋಲಿಸಬಹುದು, ಮತ್ತು ನೀವು ಆ್ಯಡ್‌‌ಗಳನ್ನು ಸರ್ವ್ ಮಾಡುತ್ತಿದ್ದರೆ, ನಿಮ್ಮ ಕಂಟೆಂಟ್‌ನೊಂದಿಗೆ ಆರ್ಗ್ಯಾನಿಕ್ ಟ್ರಾಫಿಕ್‌ನಿಂದ ಮತ್ತು ಪಾವತಿಸಿದ ಟ್ರಾಫಿಕ್‌ನಿಂದ ಸಂವಹಿಸುತ್ತಿರುವ ವೀಕ್ಷಕರನ್ನು ನೀವು ವಿಂಗಡಿಸಿ ನೋಡಬಹುದು. ಸ್ಕಿಪ್ ಮಾಡಬಹುದಾದ ವೀಡಿಯೊ ಆ್ಯಡ್‌ಗಳಿಂದ ಟ್ರಾಫಿಕ್ ಅನ್ನು ಮತ್ತು ಡಿ‌ಸ್‌ಪ್ಲೇ ಆ್ಯಡ್‌ಗಳಿಂದ ಟ್ರಾಫಿಕ್ ಅನ್ನು ಸಹ ನೀವು ನೋಡಬಹುದು.

ಆರ್ಗ್ಯಾನಿಕ್ ಟ್ರಾಫಿಕ್ ಮತ್ತು ಪಾವತಿಸಿದ ಟ್ರಾಫಿಕ್

ಆರ್ಗ್ಯಾನಿಕ್ ಟ್ರಾಫಿಕ್

ಇವು ಬಳಕೆದಾರರ ಉದ್ದೇಶದ ನೇರ ಫಲಿತಾಂಶದ ರೂಪದಲ್ಲಿ ಬಂದಿರುವ ವೀಕ್ಷಣೆಗಳಾಗಿವೆ. ಉದಾಹರಣೆಗೆ, ವೀಕ್ಷಕರು ವೀಡಿಯೊವನ್ನು ಹುಡುಕುವ ಮೂಲಕ, ಸಲಹೆಯಾಗಿ ನೀಡಲಾದ ವೀಡಿಯೋಗಳನ್ನು ಕ್ಲಿಕ್ ಮಾಡಿ ಅಥವಾ ಚಾನಲ್ ಬ್ರೌಸ್ ಮಾಡುವ ಮೂಲಕ ಬಂದು, ನಿಮ್ಮ ವೀಡಿಯೊವನ್ನು ನೋಡಿದ್ದರೆ, ಆ ಟ್ರಾಫಿಕ್ ಅನ್ನು ಆರ್ಗ್ಯಾನಿಕ್ ಎಂದು ಪರಿಗಣಿಸಲಾಗುತ್ತದೆ.

ಪಾವತಿಸಿದ ವೀಕ್ಷಣೆಯ ಟ್ರಾಫಿಕ್

ಇವುಗಳು ಪಾವತಿಸಿದ ಪ್ಲೇಸ್‌ಮೆಂಟ್‌‌‌ನಿಂದ ಬರುವ ವೀಕ್ಷಣೆಗಳು ಆಗಿವೆ.

  • ಸ್ಕಿಪ್ ಮಾಡಬಹುದಾದ ವೀಡಿಯೊ ಆ್ಯಡ್: ವೀಡಿಯೊದ ಮೊದಲು ಸ್ವಯಂ-ಪ್ಲೇ ಆಗುವ ಆ್ಯಡ್‌ಗಳಿಂದ ಬರುವ ವೀಕ್ಷಣೆಗಳು ಮತ್ತು ವೀಕ್ಷಕರು ಐದು ಸೆಕೆಂಡುಗಳ ನಂತರ ಈ ಆ್ಯಡ್‌‌ಗಳನ್ನು ಸ್ಕಿಪ್ ಮಾಡಬಹುದು.
  • ಡಿಸ್‌ಪ್ಲೇ ಆ್ಯಡ್‌ಗಳು: ಹುಡುಕಾಟ ಫಲಿತಾಂಶಗಳಲ್ಲಿ ಅಥವಾ ಇತರ ವೀಡಿಯೊ ವೀಕ್ಷಣೆ ಪುಟಗಳಲ್ಲಿ ತೋರಿಸಿರುವ ಆ್ಯಡ್‌‌ಗಳು ಸೇರಿದಂತೆ, ಡಿಸ್‌ಪ್ಲೇ ಆ್ಯಡ್‌‌ಗಳನ್ನು ವೀಕ್ಷಕರು ಕ್ಲಿಕ್ ಮಾಡುವ ಮೂಲಕ ಬಂದ ವೀಕ್ಷಣೆಗಳು.

ವೀಡಿಯೊಗಾಗಿ Google Ads ನಲ್ಲಿನ ವೀಡಿಯೊ ಆ್ಯಡ್ ಫಾರ್ಮ್ಯಾಟ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.

ಹೊಸ ವೀಕ್ಷಕರು ಮತ್ತು ಮರಳಿ ಭೇಟಿ ನೀಡುತ್ತಿರುವ ವೀಕ್ಷಕರು

ಹೊಸ ವೀಕ್ಷಕರು

ಹೊಸ ವೀಕ್ಷಕರು ಎಂದರೆ, ಆಯ್ಕೆ ಮಾಡಿದ ಕಾಲಾವಧಿಯಲ್ಲಿ ಮೊದಲ ಸಲ ನಿಮ್ಮ ಚಾನಲ್‍ನಲ್ಲಿ ಏನನ್ನಾದರೂ ವೀಕ್ಷಿಸಿದ ಪ್ರೇಕ್ಷಕರು.

ಮರಳಿ ಭೇಟಿ ನೀಡುತ್ತಿರುವ ವೀಕ್ಷಕರು

ಮರಳಿ ಭೇಟಿ ನೀಡುತ್ತಿರುವ ವೀಕ್ಷಕರು ಎಂದರೆ, ನಿಮ್ಮ ಚಾನಲ್ ಅನ್ನು ಈ ಹಿಂದೆ ವೀಕ್ಷಿಸಿದವರು ಮತ್ತು ಇನ್ನಷ್ಟು ವೀಕ್ಷಿಸಲು ಮರಳಿ ಬಂದವರಾಗಿರಬಹುದು.

ಮರಳಿ ಭೇಟಿ ನೀಡುತ್ತಿರುವ ಮತ್ತು ಹೊಸ ವೀಕ್ಷಕರ ಡೇಟಾದ ಕುರಿತು ಇನ್ನಷ್ಟು ತಿಳಿಯಿರಿ.

ಸಬ್‌ಸ್ಕ್ರೈಬರ್ ಮತ್ತು ಸಬ್‌ಸ್ಕ್ರೈಬ್ ಮಾಡಿರದವರು 

ಸಬ್‌ಸ್ಕ್ರೈಬರ್

ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರುವ ವೀಕ್ಷಕರು. ನಿಮ್ಮ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯನ್ನು ನೀವು ನೈಜ ಸಮಯದಲ್ಲಿ ವೀಕ್ಷಿಸಬಹುದು ಮತ್ತು ಕಾಲಾನಂತರದಲ್ಲಿ ನಿಮ್ಮ ಅಭಿವೃದ್ಧಿಯನ್ನು ವೀಕ್ಷಿಸಬಹುದು.

ಸಬ್‌ಸ್ಕ್ರೈಬ್ ಮಾಡಿರದವರು

ನಿಮ್ಮ ವೀಡಿಯೊಗಳನ್ನು ವೀಕ್ಷಿಸುತ್ತಿರುವ, ಆದರೆ ನಿಮ್ಮ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿರದ ವೀಕ್ಷಕರು.

YouTube Analytics ನ ಪ್ರಾಥಮಿಕ ವಿಷಯಗಳ ಕುರಿತು ಇನ್ನಷ್ಟು ತಿಳಿಯಿರಿ.

ಪ್ರೇಕ್ಷಕರ ರಿಟೆನ್ಶನ್‌ಗಾಗಿ ವಿವರವಾದ ಚಟುವಟಿಕೆಯನ್ನು ನೋಡಿ

ಪ್ರೇಕ್ಷಕರ ರಿಟೆನ್ಶನ್‌ನಲ್ಲಿ ಲಭ್ಯವಿರುವ ವಿವರವಾದ ಚಟುವಟಿಕೆಯ ವರದಿಯು ನಿಮ್ಮ ವೀಡಿಯೊದ ವಿವಿಧ ಸೆಗ್ಮೆಂಟ್‌ಗಳ ವೀಕ್ಷಣೆಗಳ ಸಂಪೂರ್ಣ ಸಂಖ್ಯೆಯನ್ನು ತೋರಿಸುತ್ತದೆ. ವಿವಿಧ ಕ್ಷಣಗಳಲ್ಲಿ ಎಷ್ಟು ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸಲು ಪ್ರಾರಂಭಿಸಿದ್ದಾರೆ ಮತ್ತು ನಿಲ್ಲಿಸಿದ್ದಾರೆ ಎಂಬುದನ್ನು ನೋಡಲು ನೀವು ಈ ವರದಿಯನ್ನು ಸಹ ಬಳಸಬಹುದು.

ನಿಮ್ಮ ಕಂಟೆಂಟ್ ಅನ್ನು ಸುಧಾರಿಸಲು ಮತ್ತು ವೀಕ್ಷಕರ ಆಸಕ್ತಿಯನ್ನು ಕಾಪಾಡಿಕೊಳ್ಳಲು, ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸಲು ಪ್ರಾರಂಭಿಸಿದ್ದು ಯಾವಾಗ ಮತ್ತು ನಿಲ್ಲಿಸಿದ್ದು ಯಾವಾಗ ಎಂಬ ಡೇಟಾದ ಆಧಾರದ ಮೇಲೆ ಅವರನ್ನು ಅರ್ಥ ಮಾಡಿಕೊಳ್ಳಿ.

ಗಮನಿಸಿ: ವೀಡಿಯೊದ ಒಂದು ಸೆಗ್ಮೆಂಟ್‌ನ ವೀಕ್ಷಣೆಗಳ ಸಂಪೂರ್ಣ ಸಂಖ್ಯೆಯು, ನಿಮ್ಮ ವೀಡಿಯೊದ ಒಟ್ಟಾರೆ ವೀಕ್ಷಣೆಗಳ ಸಂಖ್ಯೆಯನ್ನು ಮೀರುವ ನಿರೀಕ್ಷೆಯಿರುತ್ತದೆ. ಏಕೆಂದರೆ ಒಂದು ಬಾರಿ ವೀಕ್ಷಿಸುವಾಗ, ಅದೇ ವೀಕ್ಷಕರು ನಿಮ್ಮ ಕಂಟೆಂಟ್‌ನ ಕೆಲವು ಭಾಗಗಳನ್ನು ಹಲವಾರು ಬಾರಿ ವೀಕ್ಷಿಸಬಹುದು.

ತಿಳಿಯಬೇಕಾದ ಮೆಟ್ರಿಕ್‌ಗಳು

ಸರಾಸರಿ ವೀಕ್ಷಣೆಯ ಅವಧಿ ಆಯ್ಕೆ ಮಾಡಿದ ವೀಡಿಯೊ ಮತ್ತು ದಿನಾಂಕದ ವ್ಯಾಪ್ತಿಯಲ್ಲಿ, ಪ್ರತಿ ವೀಕ್ಷಣೆಯ ಸಂದರ್ಭ ವೀಕ್ಷಿಸಲಾದ ಸರಾಸರಿ ಅಂದಾಜು ನಿಮಿಷಗಳನ್ನು ತೋರಿಸುತ್ತದೆ.
ವೀಕ್ಷಣೆ ಸಮಯ (ಗಂಟೆಗಳು) ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸಿರುವ ಸಮಯದ ಪ್ರಮಾಣ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17081649111702077932
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false