ಆ್ಯಡ್ ಆದಾಯ ಅನಾಲಿಟಿಕ್ಸ್ ಕುರಿತಾಗಿ ಅರ್ಥ ಮಾಡಿಕೊಳ್ಳಿ

YouTube Analytics ನಲ್ಲಿ ಮೆಟ್ರಿಕ್‌ಗಳ ಸಹಾಯದೊಂದಿಗೆ ನಿಮ್ಮ YouTube ಆದಾಯ ಮತ್ತು ಚಾನಲ್‌ನ ಪರ್ಫಾರ್ಮೆನ್ಸ್ ಅನ್ನು ಪರಿಶೀಲಿಸಬಹುದು. ಕೆಲವು ಮೆಟ್ರಿಕ್‌ಗಳಲ್ಲಿ ಹೋಲಿಕೆ ಕಾಣಬಹುದು, ಆದರೆ ನಿಮ್ಮ YouTube ಆ್ಯಡ್ ಆದಾಯವನ್ನು ಅರ್ಥಮಾಡಿಕೊಳ್ಳಲು ಅವುಗಳ ವ್ಯತ್ಯಾಸಗಳು ಮುಖ್ಯವಾಗುತ್ತವೆ.

RPM

ಪ್ರತಿ ಸಾವಿರ ವೀಕ್ಷಣೆಗಳಿಗೆ ಆದಾಯ (RPM) ಎಂಬುದು ಒಂದು ಬಗೆಯ ಮೆಟ್ರಿಕ್ ಆಗಿದ್ದು, ಇದು 1,000 ವೀಡಿಯೊ ವೀಕ್ಷಣೆಗಳಿಗೆ ನೀವು ಎಷ್ಟು ಹಣ ಗಳಿಸಿದ್ದೀರಿ ಎಂಬುದನ್ನು ತೋರಿಸುತ್ತದೆ. RPM ಹಲವಾರು ಆದಾಯ ಮೂಲಗಳನ್ನು ಆಧರಿಸಿದೆ. ಅದು ಇವುಗಳನ್ನು ಒಳಗೊಂಡಿದೆ: ಜಾಹೀರಾತುಗಳು, ಚಾನಲ್ ಸದಸ್ಯತ್ವಗಳು, YouTube Premium ಆದಾಯ, ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ಸ್.

ನನ್ನ RPM, ನನ್ನ CPM ಗಿಂತ ಏಕೆ ಕಡಿಮೆಯಾಗಿದೆ?

RPM, CPM ಗಿಂತ ಕಡಿಮೆಯಾಗಿದೆ ಏಕೆಂದರೆ RPM ಅನ್ನು:
  • YouTube ನ ಆದಾಯ ಹಂಚಿಕೊಳ್ಳುವಿಕೆಯ ನಂತರ ಲೆಕ್ಕಹಾಕಲಾಗುತ್ತದೆ.
  • ಇದು ಮಾನಿಟೈಸ್ ಆದ ವೀಕ್ಷಣೆಗಳನ್ನು ಒಳಗೊಂಡು, ಎಲ್ಲಾ ವೀಕ್ಷಣೆಗಳನ್ನು ಒಳಗೊಂಡಿರುತ್ತದೆ.
RPM ಮೆಟ್ರಿಕ್‌ನ ಸೇರ್ಪಡೆಯ ಭಾಗವಾಗಿ, ನೀವು ಗಳಿಸುವ ಆದಾಯದ ಮೊತ್ತವನ್ನು ಬದಲಾಯಿಸಲಾಗಿಲ್ಲ.

RPM ಮತ್ತು CPM ನಡುವಿನ ವ್ಯತ್ಯಾಸವೇನು?

CPM ಎಂಬುದು YouTube ಆದಾಯ ಹಂಚಿಕೊಳ್ಳುವಿಕೆಗೆ ಮೊದಲಿನ ಪ್ರತಿ 1000 ಜಾಹೀರಾತು ಇಂಪ್ರೆಷನ್‌ಗಳ ದರವಾಗಿದೆ. RPM ಎಂಬುದು ಪ್ರತಿ 1000 ವೀಕ್ಷಣೆಗಳಿಗೆ ನೀವು ಗಳಿಸಿದ ಒಟ್ಟು ಆದಾಯ (YouTube ನ ಆದಾಯ ಹಂಚಿಕೊಳ್ಳುವಿಕೆಯ ನಂತರ) ಆಗಿದೆ.

RPM

CPM

  • ರಚನೆಕಾರರನ್ನು ಫೋಕಸ್ ಮಾಡಲಾದ ಮೆಟ್ರಿಕ್
  • ಆ್ಯಡ್‌ಗಳು, YouTube Premium, ಚಾನಲ್ ಸದಸ್ಯತ್ವಗಳು, ಸೂಪರ್ ಚಾಟ್ ಮತ್ತು ಸೂಪರ್ ಸ್ಟಿಕ್ಕರ್ಸ್ ಸೇರಿದಂತೆ YouTube Analytics ನಲ್ಲಿ ವರದಿ ಮಾಡಲಾದ ಒಟ್ಟು ಆದಾಯವನ್ನು ಇದು ಒಳಗೊಂಡಿದೆ
  • ಮಾನಿಟೈಸ್ ಆಗದೆ ಇರುವುದನ್ನು ಸಹ ಒಳಗೊಂಡು, ನಿಮ್ಮ ವೀಡಿಯೊಗಳಿಗೆ ಬಂದ ಒಟ್ಟು ವೀಕ್ಷಣೆಗಳ ಸಂಖ್ಯೆಯನ್ನು ಇದು ಒಳಗೊಂಡಿದೆ
  • ಆದಾಯ ಹಂಚಿಕೊಳ್ಳುವಿಕೆಯ ನಂತರ ಗಳಿಸಿದ ನೈಜ ಆದಾಯ
  • ಜಾಹೀರಾತುದಾರರನ್ನು ಫೋಕಸ್ ಮಾಡಲಾದ ಮೆಟ್ರಿಕ್
  • ಆ್ಯಡ್‌‌ಗಳು ಮತ್ತು YouTube Premium ನಿಂದ ಮಾತ್ರ ಆದಾಯವನ್ನು ಒಳಗೊಂಡಿರುತ್ತದೆ
  • ಮಾನಿಟೈಸ್ ಮಾಡಲಾದ ವೀಡಿಯೊಗಳ ವೀಕ್ಷಣೆಗಳನ್ನು ಮಾತ್ರ ಒಳಗೊಂಡಿದೆ (ಅಂದರೆ ಜಾಹೀರಾತುಗಳನ್ನು ತೋರಿಸಲಾಗಿದೆ)
  • ಆದಾಯ ಹಂಚಿಕೊಳ್ಳುವಿಕೆಗೆ ಮೊದಲಿನ ಗಳಿಕೆಗಳು

RPM ಏಕೆ ಮುಖ್ಯ?

ಪ್ರತಿ 1,000 ವೀಕ್ಷಣೆಗಳಿಗೆ ನೀವು ಎಷ್ಟು ಹಣವನ್ನು ಗಳಿಸುತ್ತಿರುವಿರಿ ಎಂಬುದನ್ನು RPM ನಿಮಗೆ ತೋರಿಸುತ್ತದೆ. ನಿಮ್ಮ ಹಣಗಳಿಕೆಯು ಒಟ್ಟಾರೆಯಾಗಿ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಹ ಇದು ನಿಮಗೆ ಸಹಾಯ ಮಾಡುತ್ತದೆ.

ನನ್ನ RPM ಅನ್ನು ನಾನು ಹೇಗೆ ಹೆಚ್ಚಿಸಬಹುದು?

ನಿಮ್ಮ RPM ಅನ್ನು ಸುಧಾರಿಸಲು, ನಿಮ್ಮ ಒಟ್ಟು ಆದಾಯವನ್ನು ನೀವು ಸುಧಾರಿಸಬೇಕಾಗುತ್ತದೆ. RPM ಅನ್ನು ಹೆಚ್ಚಿಸಲು ಕೆಲವು ಹಂತಗಳು ಇಲ್ಲಿವೆ:
  • ಎಲ್ಲಾ ವೀಡಿಯೊಗಳಲ್ಲಿ ಮಾನಿಟೈಸೇಶನ್ ಆನ್ ಮಾಡಿ.
  • ಮಧ್ಯ-ರೋಲ್ ಜಾಹೀರಾತುಗಳನ್ನು ಆನ್ ಮಾಡಿ.
  • ನಿಮ್ಮ ಆದಾಯದ ಸ್ಟ್ರೀಮ್‌ಗಳನ್ನು ವೈವಿಧ್ಯಮಯಗೊಳಿಸಲು AltMon ಫೀಚರ್‌ಗಳನ್ನು (ಉದಾಹರಣೆಗೆ, ಸದಸ್ಯತ್ವಗಳು, ಸೂಪರ್ ಚಾಟ್) ಆನ್ ಮಾಡಿ.

ಪ್ರತಿಯೊಂದು ಫೀಚರ್ ತನ್ನದೇ ಆದ ಅವಶ್ಯಕತೆಗಳು ಮತ್ತು ಮಾರ್ಗಸೂಚಿಗಳನ್ನು ಹೊಂದಿದೆ ಎಂಬುದನ್ನು ಮರೆಯಬೇಡಿ.

ಒಂದು ವೇಳೆ ನನ್ನ RPM ಹೆಚ್ಚಾಗುತ್ತಿದೆ ಅಥವಾ ಕೆಳಗೆ ಹೋಗುತ್ತಿದೆ ಎಂಬುದರ ಅರ್ಥವೇನು?

RPM ಎಂಬುದು ನೀವು YouTube ನಲ್ಲಿ ಹಣ ಗಳಿಸುತ್ತಿರುವ ದರದ ಸ್ನ್ಯಾಪ್‌ಶಾಟ್ ಆಗಿದೆ. ಅದು ಹೆಚ್ಚಾದರೆ, ಪ್ರತಿ 1000 ವೀಕ್ಷಣೆಗಳಿಗೆ ನೀವು ಹೆಚ್ಚು ಹಣವನ್ನು ಗಳಿಸುತ್ತಿದ್ದೀರಿ ಮತ್ತು ಅದು ಕಡಿಮೆಯಾದರೆ, ನೀವು ಕಡಿಮೆ ಹಣ ಗಳಿಸುತ್ತಿರುವಿರಿ ಎಂದರ್ಥ. ನೆನಪಿಡಿ, ನಿಮ್ಮ ಆದಾಯ ಒಂದೇ ಆಗಿದ್ದರೂ ಸಹ, ಮಾನಿಟೈಸ್ ಆಗದ ವೀಕ್ಷಣೆಗಳು ಹೆಚ್ಚಾದಾಗ ನಿಮ್ಮ RPM ಕಡಿಮೆಯಾಗಬಹುದು.
RPM ಮೇಲಕ್ಕೆ ಹೋಗಲಿ ಅಥವಾ ಕೆಳಕ್ಕೆ ಹೋಗಲಿ, ಅದು ನಿಮ್ಮ ಆದಾಯದ ಕಾರ್ಯತಂತ್ರದಲ್ಲಿ ಯಾವುದು ಕಾರ್ಯನಿರ್ವಹಿಸುತ್ತಿದೆ ಅಥವಾ ಕಾರ್ಯನಿರ್ವಹಿಸುತ್ತಿಲ್ಲ ಎಂಬುದರ ಉತ್ತಮ ಸೂಚನೆಯನ್ನು ನೀಡುತ್ತದೆ. RPM ಮೇಲೆ ಯಾವುದು ಪ್ರಭಾವ ಬೀರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದರಿಂದಾಗಿ, ನಿಮ್ಮ ಮಾನಿಟೈಸೇಶನ್ ತಂತ್ರವನ್ನು ಸುಧಾರಿಸಲು ಇರುವ ಅವಕಾಶಗಳನ್ನು ಗುರುತಿಸಲು ನಿಮಗೆ ಸಹಾಯವಾಗುತ್ತದೆ.

ನನ್ನ ಆದಾಯದ ಕುರಿತಾಗಿ RPM ನನಗೆ ಏನು ಹೇಳುವುದಿಲ್ಲ?

RPM ರಚನೆಕಾರರಿಗೆ ಉಪಯುಕ್ತವಾದ ಮಾನಿಟೈಸೇಶನ್ ಮೆಟ್ರಿಕ್ ಆಗಿದೆ, ಆದರೆ ಇದು ನಿಮ್ಮ ಸಂಪೂರ್ಣ ಆದಾಯದ ಚಿತ್ರಣವನ್ನು ಹೇಳಲು ಸಾಧ್ಯವಿಲ್ಲ. ಇದು ಇವುಗಳನ್ನು ಒಳಗೊಂಡಿರುವುದಿಲ್ಲ:

  • ವ್ಯಾಪಾರದ ಸರಕುಗಳನ್ನು ಮಾರಾಟ ಮಾಡುವುದರಿಂದ ಅಥವಾ ವ್ಯಾಪಾರ ಸರಕಿನ ಶೆಲ್ಫ್ ಅನ್ನು ಬಳಸುವುದರಿಂದ ಬಂದ ಆದಾಯ.
  • ಬ್ರ್ಯಾಂಡ್ ಡೀಲ್‌ಗಳು ಮತ್ತು ಪ್ರಾಯೋಜಕತ್ವಗಳ ಮೂಲಕ ಬಂದ ಆದಾಯ (YouTube BrandConnect ಹೊರತುಪಡಿಸಿ).
  • YouTube ಮೂಲಕ ಪರೋಕ್ಷವಾಗಿ ಜನರೇಟ್ ಆದ ಯಾವುದೇ ಇತರ ಆದಾಯ (ಸೇವೆಗಳು, ಮಾತನಾಡುವುದು, ಕನ್ಸಲ್ಟಿಂಗ್ ಫೀಸ್).

ನಿಮ್ಮ ಒಟ್ಟಾರೆ ಆದಾಯದಲ್ಲಿನ ಏರಿಳಿತಗಳಿಗೆ ಯಾವ ಆದಾಯದ ಮೂಲವು ಕಾರಣವಾಗಿದೆ ಎಂಬುದನ್ನು RPM ನಿಮಗೆ ಹೇಳಲು ಸಾಧ್ಯವಿಲ್ಲ

RPM ಹಲವಾರು ಮೆಟ್ರಿಕ್‌ಗಳನ್ನು ಒಳಗೊಂಡಿರುವ ಕಾರಣ, ನಿಮ್ಮ ಆದಾಯದಲ್ಲಿನ ಏರಿಳಿತಗಳಿಗೆ ಯಾವ ಆದಾಯದ ಮೂಲವು ಕಾರಣವಾಗಿದೆ ಎಂದು ಅದು ನಿಮಗೆ ತಿಳಿಸಲು ಸಾಧ್ಯವಾಗುವುದಿಲ್ಲ.

ಉದಾಹರಣೆಗೆ, ನೀವು RPM ನಲ್ಲಿ ಇಳಿಕೆಯನ್ನು ನೋಡಬಹುದು ಏಕೆಂದರೆ ನಿಮ್ಮ ವೀಕ್ಷಣೆಗಳು ಹೆಚ್ಚಿರಬಹುದು, ಆದರೆ ಆ ಎಲ್ಲವೂ ಆ್ಯಡ್‌-ಸಕ್ರಿಯಗೊಳಿಸಿದ ವೀಕ್ಷಣೆಗಳು ಆಗಿರುವುದಿಲ್ಲ. ಅಥವಾ ವೀಕ್ಷಕರು ಚಾನೆಲ್ ಸದಸ್ಯತ್ವಗಳಿಗೆ ಸೈನ್ ಅಪ್ ಮಾಡುತ್ತಿರುವುದರಿಂದಾಗಿ ನಿಮ್ಮ RPM ವೀಕ್ಷಣೆಗಳಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳಿಲ್ಲದೆ ಹೋಗುವುದನ್ನು ನೀವು ನೋಡಬಹುದು.

ನಿಮ್ಮ RPM ನಲ್ಲಿನ ಬದಲಾವಣೆಗಳನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ನಿಮಗೆ ಸಹಾಯ ಮಾಡುವುದಕ್ಕಾಗಿ, YouTube ನೀಡುವ ಎಲ್ಲಾ ವಿಭಿನ್ನ ಅನಾಲಿಟಿಕ್ಸ್ ಅನ್ನು ಬಳಸಿ ಎಂದು ನಾವು ಶಿಫಾರಸು ಮಾಡುತ್ತೇವೆ.

CPM

1,000 ಇಂಪ್ರೆಷನ್‌ಗಳಿಗೆ ದರ (CPM) ಎನ್ನುವುದು YouTube ನಲ್ಲಿ ಆ್ಯಡ್‌‌ಗಳನ್ನು ತೋರಿಸಲು ಜಾಹೀರಾತುದಾರರು ಎಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ ಎಂಬುದನ್ನು ಪ್ರತಿನಿಧಿಸುವ ಮೆಟ್ರಿಕ್ ಆಗಿದೆ. YouTube Analytics ನಲ್ಲಿ ನೀವು ಕೆಲವು ವಿಭಿನ್ನ CPM ಮೆಟ್ರಿಕ್‌ಗಳನ್ನು ನೋಡುತ್ತೀರಿ:

  • CPM: 1,000 ಆ್ಯಡ್ ಇಂಪ್ರೆಷನ್‌ಗಳಿಗಾಗಿ ಜಾಹೀರಾತುದಾರರು ಪಾವತಿಸುವ ದರ. ಒಂದು ಆ್ಯಡ್‌ ಪ್ರದರ್ಶನಗೊಂಡಾಗ ಆ್ಯಡ್ ಇಂಪ್ರೆಷನ್ ಅನ್ನು ಲೆಕ್ಕ ಹಾಕಲಾಗುತ್ತದೆ.
  • ಪ್ಲೇಬ್ಯಾಕ್ ಆಧಾರಿತ CPM: ಆ್ಯಡ್‌ ಪ್ರದರ್ಶಿಸಲಾದ 1,000 ವೀಡಿಯೊ ಪ್ಲೇಬ್ಯಾಕ್‌ಗಳಿಗಾಗಿ ಜಾಹೀರಾತುದಾರರು ಪಾವತಿಸುವ ವೆಚ್ಚ.

CPM ಮತ್ತು ಪ್ಲೇಬ್ಯಾಕ್ ಆಧಾರಿತ CPM ನಡುವಿನ ವ್ಯತ್ಯಾಸವೇನು?

YouTube ನಲ್ಲಿನ ವೀಡಿಯೊಗಳು ಒಂದಕ್ಕಿಂತ ಹೆಚ್ಚು ಆ್ಯಡ್‌‌ಗಳನ್ನು ಹೊಂದಿರಬಹುದು. ಆ್ಯಡ್‌‌ ಇಂಪ್ರೆಷನ್‌ಗಳಿಗಾಗಿ ಜಾಹೀರಾತುದಾರರ ವೆಚ್ಚದ ಮೇಲೆ CPM ಫೋಕಸ್ ಮಾಡುತ್ತದೆ. ಪ್ಲೇಬ್ಯಾಕ್ ಆಧಾರಿತ CPM ಒಂದು ಅಥವಾ ಹೆಚ್ಚಿನ ಆ್ಯಡ್‌‌ಗಳನ್ನು ಒಳಗೊಂಡಿರುವ ವೀಡಿಯೊ ಪ್ಲೇಬ್ಯಾಕ್‌ಗಳಿಗಾಗಿ ಜಾಹೀರಾತುದಾರರ ವೆಚ್ಚವನ್ನು ಫೋಕಸ್ ಮಾಡುತ್ತದೆ. ನಿಮ್ಮ ಪ್ಲೇಬ್ಯಾಕ್ ಆಧಾರಿತ CPM, ಹಲವುಬಾರಿ ನಿಮ್ಮ CPM ಗಿಂತ ಹೆಚ್ಚಾಗಿರುತ್ತದೆ.
ಉದಾಹರಣೆಗೆ, ನಿಮ್ಮ ವೀಡಿಯೊ 5,000 ಬಾರಿ ವೀಕ್ಷಣೆಯಾಗಿದೆ ಎಂದುಕೊಳ್ಳೋಣ. ಒಂದು ಆ್ಯಡ್‌ ಇದ್ದ 1,000 ವೀಕ್ಷಣೆಗಳು ಮತ್ತು ಎರಡು ಆ್ಯಡ್‌ಗಳಿದ್ದ ಇತರ 500 ವೀಕ್ಷಣೆಗಳು ಸೇರಿಕೊಂಡು, ಆ್ಯಡ್‌ಗಳಿದ್ದ ಒಟ್ಟು ವೀಕ್ಷಣೆಗಳ ಸಂಖ್ಯೆ 1500 ಆಗಿವೆ ಎಂದು ಭಾವಿಸೋಣ. ಈ ಸಂದರ್ಭದ ಅರ್ಥವೇನೆಂದರೆ, ಇಲ್ಲಿ 2,000 ಪ್ರತ್ಯೇಕ ಆ್ಯಡ್‌ ಇಂಪ್ರೆಷನ್‌ಗಳಿದ್ದವು, ಆದರೆ ಕೇವಲ 1,500 ಮಾನಿಟೈಸ್ ಮಾಡುವ ಪ್ಲೇಬ್ಯಾಕ್‌ಗಳಿದ್ದವು.
ಜಾಹೀರಾತುದಾರರು ಒಟ್ಟು $7 ಪಾವತಿಸಿದರು ಎಂದುಕೊಳ್ಳೋಣ. ಈ ವೀಡಿಯೊದ ಪ್ರತಿ ಇಂಪ್ರೆಷನ್‌ನ ದರವು, $7 ಜಾಹೀರಾತುದಾರರ ವೆಚ್ಚವನ್ನು 2,000 ಆ್ಯಡ್‌ ಇಂಪ್ರೆಷನ್‌ಗಳಿಂದ ಭಾಗಿಸಿದಾಗ ಸಿಗುವ $0.0035 ಗೆ ಸಮವಾಗಿರುತ್ತದೆ. ಆಗ CPM, ಅಥವಾ ಪ್ರತಿ 1000 ಇಂಪ್ರೆಷನ್‌ಗಳ ದರವು, $0.0035 ಮತ್ತು 1000 ದ ಗುಣಲಬ್ಧ ಅಂದರೆ $3.50 ಗೆ ಸಮವಾಗಿರುತ್ತದೆ. ಪ್ಲೇಬ್ಯಾಕ್ ಆಧಾರಿತ CPM ಎಂಬುದು, $7 ಅನ್ನು 1,500 ಮಾನಿಟೈಸ್ ಮಾಡುವ ಪ್ಲೇಬ್ಯಾಕ್‌ಗಳಿಂದ ಭಾಗಿಸಿ, 1,000 ದಿಂದ ಗುಣಿಸಿದಾಗ ಸಿಗುವ $4.67 ಗೆ ಸಮವಾಗಿರುತ್ತದೆ.

CPM ಏಕೆ ಮುಖ್ಯ?

ನಿಮ್ಮ ವೀಡಿಯೊದಲ್ಲಿ ಆ್ಯಡ್‌ ನೀಡಿದಾಗ ಜಾಹೀರಾತುದಾರರು ಕಟ್ ಆಫ್ ಮಾಡಿ ಪಾವತಿಸುವ ಮೊತ್ತವನ್ನು ನೀವು ಪಡೆಯುವಿರಿ. ಆ ಆ್ಯಡ್‌ಗಾಗಿ ಜಾಹೀರಾತುದಾರರು ಹೆಚ್ಚು ಹಣವನ್ನು ಪಾವತಿಸಿದಾಗ, ನೀವು ಹೆಚ್ಚು ಹಣವನ್ನು ಗಳಿಸುತ್ತೀರಿ. ನಿಮ್ಮ CPM ಎಂಬುದು, ಮೌಲ್ಯಯುತ ಜಾಹೀರಾತುದಾರರು ತಮ್ಮ ಸ್ವಂತ ವ್ಯಾಪಾರ ಗುರಿಗಳನ್ನು ಸಾಧಿಸಲು, ನಿಮ್ಮ ವೀಡಿಯೊಗಳು ಮತ್ತು ಪ್ರೇಕ್ಷಕರನ್ನು ಹೇಗೆ ಹುಡುಕುತ್ತಾರೆ ಎಂಬುದರ ಉತ್ತಮ ಸೂಚಕವಾಗಿರುತ್ತದೆ.
ನಿಮ್ಮ ಆದಾಯವು ನಿಮ್ಮ CPM ಬಾರಿ ನಿಮ್ಮ ವೀಕ್ಷಣೆಗಳಿಗೆ ಸಮನಾಗಿರುವುದಿಲ್ಲ ಏಕೆಂದರೆ CPM ಜಾಹೀರಾತುದಾರರು ಏನು ಪಾವತಿಸುತ್ತಾರೆ ಎಂಬುದನ್ನು ಪ್ರತಿಬಿಂಬಿಸುತ್ತದೆಯೆ ಹೊರತು, ನೀವು ಗಳಿಸಿದ್ದನ್ನು ಅಲ್ಲ. ಅಲ್ಲದೆ, ಎಲ್ಲಾ ವೀಕ್ಷಣೆಗಳು ಆ್ಯಡ್‌ಗಳನ್ನು ಹೊಂದಿರುವುದಿಲ್ಲ. ಒಂದು ವೇಳೆ ಅವುಗಳು ಜಾಹೀರಾತುದಾರ-ಸ್ನೇಹಿಯಾಗಿಲ್ಲದಿದ್ದಲ್ಲಿ, ಕೆಲವು ವೀಡಿಯೊಗಳು ಸಂಪೂರ್ಣವಾಗಿ ಆ್ಯಡ್‌‌ಗಳಿಗೆ ಅನರ್ಹವಾಗಿರುತ್ತವೆ. ಲಭ್ಯವಿರುವ ಆ್ಯಡ್‌‌ಗಳ ಕೊರತೆಯಿಂದಾಗಿ, ಇತರ ವೀಡಿಯೊ ವೀಕ್ಷಣೆಗಳು ಆ್ಯಡ್‌‌ಗಳನ್ನು ಒಳಗೊಂಡಿರುವುದಿಲ್ಲ. ಆ್ಯಡ್‌‌ಗಳನ್ನು ಒಳಗೊಂಡಿರುವ ವೀಕ್ಷಣೆಗಳನ್ನು ಮಾನಿಟೈಸ್ ಮಾಡುವ ಪ್ಲೇಬ್ಯಾಕ್‌ಗಳು ಎಂದು ಉಲ್ಲೇಖಿಸಲಾಗುತ್ತದೆ.

ನನ್ನ CPM ಏಕೆ ಬದಲಾಗುತ್ತಿದೆ?

ಕಾಲಾನಂತರದಲ್ಲಿ ನಿಮ್ಮ CPM ನಲ್ಲಿ ಏರಿಳಿತಗಳು ಕಾಣಿಸಿಕೊಳ್ಳುವುದು ಸಹಜ ಮತ್ತು ಇವು ಹಲವು ಕಾರಣಗಳಿಗಾಗಿ ಸಂಭವಿಸುತ್ತವೆ, ಉದಾಹರಣೆಗೆ:
  • ವರ್ಷದ ಸಮಯ: ಜಾಹೀರಾತುದಾರರು ವರ್ಷದ ಆಯಾ ಸಮಯವನ್ನು ಅವಲಂಬಿಸಿ ಹೆಚ್ಚು ಅಥವಾ ಕಡಿಮೆ ಬಿಡ್ ಮಾಡುತ್ತಾರೆ. ಉದಾಹರಣೆಗೆ, ಅನೇಕ ಜಾಹೀರಾತುದಾರರು ರಜಾದಿನಗಳಿಗಿಂತ ಮೊದಲೆ ಹೆಚ್ಚಿನ ಬಿಡ್ ಮಾಡುತ್ತಾರೆ.
  • ದೇಶಗಳ ಆಧಾರ ಮೇಲೆ ವೀಕ್ಷಕರ ಬದಲಾವಣೆಗಳು: ಜಾಹೀರಾತುದಾರರು ತಮ್ಮ ಆ್ಯಡ್‌‌ಗಳೊಂದಿಗೆ ಯಾವ ದೇಶ ಹಾಗೂ ಪ್ರ್ಯಾಂತ್ಯವನ್ನು ತಲುಪಲು ಬಯಸುತ್ತಿದ್ದಾರೆ ಎಂಬುದನ್ನು ನಿಯಂತ್ರಿಸಬಹುದು. ವಿಭಿನ್ನ ಸ್ಥಳಗಳು ಜಾಹೀರಾತು ಮಾರುಕಟ್ಟೆಯಲ್ಲಿ ವಿಭಿನ್ನ ಹಂತದ ಸ್ಪರ್ಧೆಯನ್ನು ಹೊಂದಿರುತ್ತವೆ, ಆದ್ದರಿಂದ CPM ಗಳು ದೇಶಗಳ ಹಾಗೂ ಪ್ರಾಂತ್ಯಗಳ ಪ್ರಕಾರ ಬದಲಾಗುತ್ತವೆ. ನಿಮ್ಮ ಹೆಚ್ಚಿನ ವೀಕ್ಷಣೆಗಳು ಎಲ್ಲಿಂದ ಬರುತ್ತಿವೆ ಎಂಬುದರಲ್ಲಿ ಏನಾದರೂ ಬದಲಾವಣೆಯಾಗಿದ್ದರೆ, ನೀವು CPM ನಲ್ಲಿ ಆ ಬದಲಾವಣೆಯನ್ನು ಕಾಣಬಹುದು. ಉದಾಹರಣೆಗೆ, ನೀವು ಈ ಹಿಂದೆ ಒಂದು ದೇಶ ಅಥವಾ ಪ್ರಾಂತ್ಯದಲ್ಲಿ ಹೆಚ್ಚಿನ CPM ಗಳಿದ್ದ ವೀಕ್ಷಣೆಗಳನ್ನು ಹೊಂದಿದ್ದಿರಿ, ಆದರೆ ಈಗ ಕಡಿಮೆ CPM ಗಳನ್ನು ಹೊಂದಿರುವ ದೇಶ ಅಥವಾ ಪ್ರಾಂತ್ಯಗಳಿಂದ ಹೆಚ್ಚಿನ ವೀಕ್ಷಣೆಗಳನ್ನು ಪಡೆಯುತ್ತಿದ್ದರೆ, ನಿಮ್ಮ CPM ನಲ್ಲಿ ಕಡಿಮೆಯಾಗುವುದನ್ನು ನೀವು ಕಾಣಬಹುದು.
  • ಲಭ್ಯವಿರುವ ಆ್ಯಡ್ ಫಾರ್ಮ್ಯಾಟ್ ವಿತರಣೆಯಲ್ಲಿನ ಬದಲಾವಣೆಗಳು: ವಿಭಿನ್ನ ಆ್ಯಡ್‌ ಪ್ರಕಾರಗಳು ವಿಭಿನ್ನ CPM ಗಳನ್ನು ಹೊಂದಿರುತ್ತವೆ. ಉದಾಹರಣೆಗೆ, ಆ್ಯಡ್‌ ಇನ್ವೆಂಟರಿಗಳಲ್ಲಿ ಹೆಚ್ಚು ಸ್ಕಿಪ್ ಮಾಡಲಾಗದ ಆ್ಯಡ್‌ ಲಭ್ಯವಿದ್ದರೆ, CPM ಹೆಚ್ಚಿರಬಹುದು.

ಅಂದಾಜು ಆದಾಯ ವರ್ಸಸ್ ಜಾಹೀರಾತು ಆದಾಯ

  • ಅಂದಾಜು ಆದಾಯ: ಚಾನಲ್ ಸದಸ್ಯತ್ವಗಳು, YouTube Premium ಆದಾಯ ಮತ್ತು ಸೂಪರ್ ಚಾಟ್ ಸೇರಿದಂತೆ ಎಲ್ಲಾ ಆದಾಯ ಪ್ರಕಾರಗಳಿಂದ ಬಂದ ಆದಾಯ. ನೀವು ಆದಾಯ ಟ್ಯಾಬ್‌ನಲ್ಲಿ ಈ ಮೆಟ್ರಿಕ್ ಅನ್ನು ನೋಡುತ್ತೀರಿ.
  • ಅಂದಾಜು ಜಾಹೀರಾತು ಆದಾಯ: ಆದಾಯ ನಿಮ್ಮ ವೀಡಿಯೊಗಳಲ್ಲಿನ ಜಾಹೀರಾತುಗಳಿಂದ ಮಾತ್ರ. ಆದಾಯ ಮೂಲಗಳ ವರದಿಯಲ್ಲಿ ನೀವು ಈ ಮೆಟ್ರಿಕ್ ಅನ್ನು ನೋಡುತ್ತೀರಿ.

ವೀಕ್ಷಣೆಗಳು ಮತ್ತು ಇಂಪ್ರೆಷನ್‌ಗಳು ಹಾಗೂ ಅಂದಾಜು ಮಾನಿಟೈಸ್ ಮಾಡುವ ಪ್ಲೇಬ್ಯಾಕ್‌ಗಳು

  • ವೀಕ್ಷಣೆಗಳು: ನಿಮ್ಮ ವೀಡಿಯೊವನ್ನು ಎಷ್ಟು ಬಾರಿ ವೀಕ್ಷಿಸಲಾಗಿದೆ ಎಂಬ ಮಾಹಿತಿ.
  • ಆ್ಯಡ್ ಇಂಪ್ರೆಷನ್‌ಗಳು: ನಿಮ್ಮ ವೀಡಿಯೊಗಳಲ್ಲಿ ಪ್ರತ್ಯೇಕ ಆ್ಯಡ್‌ಗಳನ್ನು ಎಷ್ಟು ಬಾರಿ ವೀಕ್ಷಿಸಲಾಗಿದೆ.
  • ಅಂದಾಜು ಮಾನಿಟೈಸ್ ಮಾಡುವ ಪ್ಲೇಬ್ಯಾಕ್‌ಗಳು: ಆ್ಯಡ್‌‌ಗಳ ಜೊತೆ ನಿಮ್ಮ ವೀಡಿಯೊವನ್ನು ಎಷ್ಟು ಬಾರಿ ವೀಕ್ಷಿಸಲಾಗಿದೆ.

ಒಂದು ವೇಳೆ ನಿಮ್ಮ ವೀಡಿಯೊವನ್ನು 10 ಬಾರಿ ವೀಕ್ಷಿಸಿದರೆ ಮತ್ತು ಅದರಲ್ಲಿ 8 ವೀಕ್ಷಣೆಗಳು ಆ್ಯಡ್‌‌ಗಳನ್ನು ಹೊಂದಿದ್ದರೆ, ನೀವು 10 ವೀಕ್ಷಣೆಗಳು ಮತ್ತು 8 ಅಂದಾಜು ಮಾನಿಟೈಸ್ ಮಾಡುವ ಪ್ಲೇಬ್ಯಾಕ್‌ಗಳನ್ನು ಹೊಂದಿರುತ್ತೀರಿ. ಆ ಅಂದಾಜು ಮಾನಿಟೈಸ್ ಮಾಡುವ ಪ್ಲೇಬ್ಯಾಕ್‌ಗಳಲ್ಲಿ ಒಂದರಲ್ಲಿ ನಿಜವಾಗಿ 2 ಆ್ಯಡ್‌‌ಗಳಿದ್ದರೆ, ನೀವು 9 ಆ್ಯಡ್‌ ಇಂಪ್ರೆಷನ್‌ಗಳನ್ನು ಹೊಂದಿರುತ್ತೀರಿ.

YouTube ನಲ್ಲಿನ ಎಲ್ಲಾ ವೀಕ್ಷಣೆಗಳು ಆ್ಯಡ್‌ ಅನ್ನು ಹೊಂದಿರುವುದಿಲ್ಲ. ಈ ಕೆಳಕಂಡ ಸಂದರ್ಭಗಳಲ್ಲಿ ಒಂದು ವೀಕ್ಷಣೆಯು ಆ್ಯಡ್‌ ಅನ್ನು ಹೊಂದಿರುವುದಿಲ್ಲ:

  • ನಿಮ್ಮ ವೀಡಿಯೊ ಜಾಹೀರಾತು-ಸ್ನೇಹಿ ಆಗಿರುವುದಿಲ್ಲ.
  • ಆ ವೀಡಿಯೊಗಾಗಿ ಆ್ಯಡ್‌‌ಗಳನ್ನು ಆಫ್ ಮಾಡಲಾಗಿದೆ.
  • ನಿರ್ದಿಷ್ಟ ವೀಕ್ಷಕರಿಗೆ ತೋರಿಸಲು ಯಾವುದೇ ಆ್ಯಡ್‌ ಲಭ್ಯವಿಲ್ಲ. ಜಾಹೀರಾತುದಾರರು ನಿರ್ದಿಷ್ಟ ಸಾಧನಗಳು, ಜನರ ಅಭಿರುಚಿ ಮತ್ತು ಆಸಕ್ತಿಗಳನ್ನು ಟಾರ್ಗೆಟ್ ಅನ್ನು ಆಯ್ಕೆ ಮಾಡಬಹುದು. ನಿಮ್ಮ ವೀಕ್ಷಕರು ಈ ಟಾರ್ಗೆಟ್‌ಗೆ ಹೊಂದಾಣಿಕೆ ಆಗಬಹುದು. ವೀಡಿಯೊ ಆ್ಯಡ್‌‌ಗಳಿಗಾಗಿ ಲಭ್ಯವಿರುವ ಟಾರ್ಗೆಟ್ ವಿಧಾನಗಳ ಕುರಿತು ಇನ್ನಷ್ಟು ತಿಳಿಯಿರಿ.
  • ವೀಕ್ಷಕರ ದೇಶ ಅಥವಾ ಪ್ರಾಂತ್ಯ, ಅವರು ಇತ್ತೀಚೆಗೆ ಹೇಗೆ ಆ್ಯಡ್‌ ನೋಡಿದರು, ಅವರು Premium ಸಬ್‌ಸ್ಕ್ರಿಪ್ಶನ್ ಅನ್ನು ಹೊಂದಿದ್ದಾರೆಯೇ ಮತ್ತು ಇತರ ಅಂಶಗಳನ್ನು ಪರಿಗಣಿಸಲಾಗುವುದು.

ಈ ವಿಭಿನ್ನ ವೀಕ್ಷಣೆಗಳ ಕಾರಣದಿಂದಾಗಿ, ನೀವು ಅಂದಾಜು ಮಾನಿಟೈಸ್ ಮಾಡುವ ಪ್ಲೇಬ್ಯಾಕ್‌ಗಳಿಗಿಂತ ಹೆಚ್ಚಿನ ವೀಕ್ಷಣೆಗಳನ್ನು ಹೊಂದಿರಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15927776796201139398
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false