ಲೈವ್ ಸ್ಟ್ರೀಮ್‌ಗಳಲ್ಲಿ DVR ಅನ್ನು ಆನ್ ಮಾಡಿ

YouTube ನ DVR ಫೀಚರ್ ಅನ್ನು ಆನ್ ಮಾಡುವುದರಿಂದ, ನಿಮ್ಮ ವೀಕ್ಷಕರಿಗೆ ಲೈವ್ ಸ್ಟ್ರೀಮ್ ಸಮಯದಲ್ಲಿ ವಿರಾಮಗೊಳಿಸಲು, ರಿವೈಂಡ್ ಮಾಡಲು ಮತ್ತು ಮುಂದುವರಿಸಲು ಅನುಮತಿಸುತ್ತದೆ. ಒಮ್ಮೆ ವೀಕ್ಷಕರು ಪ್ಲೇ ಮಾಡಲು ಪುನರಾರಂಭಿಸಿದರೆ, ಅವರು ವಿರಾಮವನ್ನು ಒತ್ತಿದ ಸ್ಥಳದಿಂದ ಲೈವ್ ಸ್ಟ್ರೀಮ್ ಮುಂದುವರಿಯುತ್ತದೆ. DVR ಅನ್ನು ಆನ್ ಮಾಡಲು, ಈ ಹಂತಗಳನ್ನು ಅನುಸರಿಸಿ:

 
  1. YouTube Studio ಗೆ ಹೋಗಿ.
  2. ರಚಿಸಿ ನಂತರ ಲೈವ್ ಹೋಗಿ ಎಂಬುದನ್ನು ಕ್ಲಿಕ್ ಮಾಡಿ.
  3. ಸ್ಟ್ರೀಮ್ ಟ್ಯಾಬ್‌ನಿಂದ ಇದೀಗ ಲೈವ್ ಸ್ಟ್ರೀಮ್ ಅನ್ನು ಪ್ರಾರಂಭಿಸಿ ಅಥವಾ ನಿರ್ವಹಿಸಿ ಟ್ಯಾಬ್‌ನಿಂದ ಲೈವ್ ಸ್ಟ್ರೀಮ್ ಅನ್ನು ನಿಗದಿಪಡಿಸಿ.
  4. ಸ್ಟ್ರೀಮ್ ಡ್ಯಾಶ್‌ಬೋರ್ಡ್‌ನಿಂದ, DVR ಸಕ್ರಿಯಗೊಳಿಸಿ ಎಂಬುದನ್ನು ಕ್ಲಿಕ್ ಮಾಡಿ.

ಮಿತಿಗಳು

ನಿಮ್ಮ ಲೈವ್ ಸ್ಟ್ರೀಮ್ ತುಂಬಾ ದೀರ್ಘವಾದರೆ, ನಿಮ್ಮ ವೀಕ್ಷಕರಿಗೆ ಒಂದಿಷ್ಟು ಮಿತಿಯವರೆಗೆ ಮಾತ್ರ ರಿವೈಂಡ್ ಮಾಡಲು ಸಾಧ್ಯವಾಗುತ್ತದೆ, ಏಕೆಂದರೆ 12 ಗಂಟೆಗಳಿಗಿಂತ ದೀರ್ಘವಾದ ಸ್ಟ್ರೀಮ್‌ಗಳಿಗೆ DVR ಸಾಮರ್ಥ್ಯ ಸೀಮಿತವಾಗಿರಬಹುದು ಅಥವಾ ಲಭ್ಯವಿಲ್ಲದಿರಬಹುದು. Apple TV, Apple AirPlay ಅಥವಾ ಹಳೆಯ ಆ್ಯಪ್ ಆವೃತ್ತಿಗಳಲ್ಲಿನ ವೀಕ್ಷಿಸುವಿಕೆಯು ಕಡಿಮೆ ಮಿತಿಗಳಿಗೆ ಒಳಪಟ್ಟಿರುತ್ತದೆ.

ವೀಕ್ಷಕರು ವಿರಾಮ ಮತ್ತು ಪುನರಾರಂಭವನ್ನು ಬಳಸಿದಾಗಲೂ ಈ ಮಿತಿಗಳು ಅನ್ವಯವಾಗುತ್ತವೆ. ನೀವು ಲೈವ್ ಹೋಗುವ ಮೊದಲು ವೀಕ್ಷಕರು ಎಂದಿಗೂ ಸೀಕ್ ಬ್ಯಾಕ್ ಮಾಡಲು ಸಾಧ್ಯವಿಲ್ಲ.

DVR ನಿಷ್ಕ್ರಿಯಗೊಳಿಸುವಿಕೆ 

ನೀವು DVR ಅನ್ನು ನಿಷ್ಕ್ರಿಯಗೊಳಿಸಲು ಆಯ್ಕೆಮಾಡಿದರೆ, ನೀವು ಸ್ಟ್ರೀಮ್ ಮಾಡುತ್ತಿರುವಾಗ ವೀಕ್ಷಕರಿಗೆ ಸೀಕ್ ಬ್ಯಾಕ್ ಮಾಡಲು ಸಾಧ್ಯವಾಗುವುದಿಲ್ಲ, ಆದರೆ ವೀಕ್ಷಕರು ನಿಮ್ಮ ಸಂಪೂರ್ಣ ಸ್ಟ್ರೀಮ್‌ನ ರೆಕಾರ್ಡಿಂಗ್ ಲಭ್ಯವಾದ ನಂತರ ಅದನ್ನು ಇನ್ನೂ ವೀಕ್ಷಿಸಬಹುದು. DVR ಅನ್ನು ನಿಷ್ಕ್ರಿಯಗೊಳಿಸುವುದು ವೆಬ್‌ಕ್ಯಾಮ್ ಮತ್ತು ಮೊಬೈಲ್ ಸ್ಟ್ರೀಮಿಂಗ್‌ನಲ್ಲಿ ಬೆಂಬಲಿತವಾಗಿಲ್ಲ.

ಲೈವ್‌ಗೆ ಹೋದ ನಂತರ DVR ಕುರಿತು ನೀವು ನಿಮ್ಮ ಮನಸ್ಸನ್ನು ಬದಲಾಯಿಸಿದರೆ, ಲೈವ್ ಸ್ಟ್ರೀಮ್ ಮಾಡುವಾಗಲೂ ನೀವು ಸಕ್ರಿಯಗೊಳಿಸಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ಆದರೆ, ನೀವು ಬದಲಾವಣೆಯನ್ನು ಮಾಡಿದ ನಂತರ ನಿಮ್ಮ ಸ್ಟ್ರೀಮ್ ಅನ್ನು ಪ್ಲೇ ಮಾಡಲು ಆರಂಭಿಸುವ ವೀಕ್ಷಕರಿಗೆ ಮಾತ್ರ ಬದಲಾವಣೆಗಳು ಅನ್ವಯಿಸುತ್ತವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1306802296260619119
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false