ಸ್ಟ್ರೈಕ್‌ಗಳ FAQ

ನಾನು ಸ್ಟ್ರೈಕ್ ಅನ್ನು ಪಡೆದರೆ ಏನಾಗುತ್ತದೆ?

ನೀವು ಕೃತಿಸ್ವಾಮ್ಯ ಸ್ಟ್ರೈಕ್ ಅಥವಾ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅನ್ನು ಪಡೆದರೆ, ನಾವು ಇಮೇಲ್ ಮೂಲಕ, ಮೊಬೈಲ್ ಮತ್ತು ಡೆಸ್ಕ್‌ಟಾಪ್‌ನಲ್ಲಿ ನೋಟಿಫಿಕೇಶನ್‌ಗಳ ಮೂಲಕ ಮತ್ತು ನಿಮ್ಮ YouTube ಚಾನಲ್‌ನಲ್ಲಿ ನಿಮಗೆ ತಿಳಿಸುತ್ತೇವೆ. ನೀವು ಸ್ಟ್ರೈಕ್ ಅನ್ನು ಏಕೆ ಪಡೆದುಕೊಂಡಿದ್ದೀರಿ ಮತ್ತು ಅದರ ಬಗ್ಗೆ ಮುಂದೆ ಏನು ಮಾಡಬೇಕೆಂದು ನಾವು ನಿಮಗೆ ತಿಳಿಸುತ್ತೇವೆ.

ನಾವು 2 ವಿಭಿನ್ನ ಸಿಸ್ಟಂಗಳನ್ನು ಏಕೆ ಹೊಂದಿದ್ದೇವೆ?

ನಾವು 2 ಸಿಸ್ಟಂಗಳನ್ನು ಹೊಂದಿದ್ದೇವೆ, ಏಕೆಂದರೆ ನಾವು ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳು ಮತ್ತು ಕೃತಿಸ್ವಾಮ್ಯ ಸ್ಟ್ರೈಕ್‌ಗಳನ್ನು ಪ್ರತ್ಯೇಕ ಸಮಸ್ಯೆಗಳಾಗಿ ನೋಡುತ್ತೇವೆ.

ಕೃತಿಸ್ವಾಮ್ಯ ಮತ್ತು ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಗಳು ವಿಭಿನ್ನ ಕಾರಣಗಳಿಗಾಗಿ ಸಂಭವಿಸುತ್ತವೆ. ನಮ್ಮ ಸಮುದಾಯ ಮಾರ್ಗಸೂಚಿಗಳು, YouTube ಸಮುದಾಯವನ್ನು ಸುರಕ್ಷಿತವಾಗಿಡಲು ರಚನೆಕಾರರು ಮತ್ತು ವೀಕ್ಷಕರು ಅನುಸರಿಸಬೇಕೆಂದು ನಾವು ಬಯಸುವ ನಿಯಮಗಳಾಗಿವೆ. ರಚನೆಕಾರರ ಹಕ್ಕುಗಳನ್ನು ರಕ್ಷಿಸಲಾಗಿದೆ ಮತ್ತು ಪ್ರತಿಯೊಬ್ಬರೂ ತಮ್ಮ ವೀಡಿಯೊಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಸ್ಟೋರಿಗಳಲ್ಲಿ ಕಂಟೆಂಟ್ ಅನ್ನು ಬಳಸುವಾಗ ಕಾನೂನನ್ನು ಅನುಸರಿಸುತ್ತಾರೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಕೃತಿಸ್ವಾಮ್ಯ ನಿಯಮಗಳು ಜಾರಿಯಲ್ಲಿವೆ.

ನೀವು ಕೃತಿಸ್ವಾಮ್ಯ ನಿರ್ಬಂಧಗಳ ಬಗ್ಗೆ ಪರಿಚಿತರಾಗಿರಬಹುದು, ಆದರೆ ನಗ್ನತೆ ಮತ್ತು ಲೈಂಗಿಕ ಕಂಟೆಂಟ್‌ನ ಕುರಿತಾದ ನಮ್ಮ ನೀತಿಯ ಬಗ್ಗೆ ತಿಳಿದಿಲ್ಲ. ಅಥವಾ ಥಂಬ್‌ನೇಲ್‌ಗಳ ಸುತ್ತ ನಮ್ಮ ನೀತಿಗಳ ಬಗ್ಗೆ ನಿಮಗೆ ತಿಳಿದಿರಬಹುದು, ಆದರೆ ನಿಮ್ಮ ವೀಡಿಯೊದಲ್ಲಿ ಬೇರೆಯವರ ಹಾಡನ್ನು ಬಳಸುವುದರಿಂದ ಕೃತಿಸ್ವಾಮ್ಯ ಸ್ಟ್ರೈಕ್‌ಗೆ ಕಾರಣವಾಗಬಹುದು ಎಂದು ತಿಳಿದಿರುವುದಿಲ್ಲ. ನಮ್ಮ ಎಲ್ಲಾ ನೀತಿಗಳ ಬಗ್ಗೆ ತಿಳಿದುಕೊಳ್ಳುವುದಕ್ಕೆ ನಿಮಗೆ ಅವಕಾಶವನ್ನು ನೀಡಲು ನಾವು ಬಯಸುತ್ತೇವೆ.

ಯಾವ ರೀತಿಯ ವಿಷಯಗಳನ್ನು ಕೃತಿಸ್ವಾಮ್ಯ ಉಲ್ಲಂಘನೆಗಳು ಎಂದು ಪರಿಗಣಿಸಲಾಗುತ್ತದೆ ಎಂಬುದರ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನೀವು ಇವುಗಳನ್ನು ಓದಬಹುದು:

ನಮ್ಮ ಸಮುದಾಯ ಮಾರ್ಗಸೂಚಿಗಳ ಕುರಿತು ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ನೀವು ಈ ವೀಡಿಯೊವನ್ನು ವೀಕ್ಷಿಸಬಹುದು ಅಥವಾ ಸಹಾಯ ಕೇಂದ್ರದಲ್ಲಿ ವೈಯಕ್ತಿಕ ನೀತಿಯನ್ನು ಪರಿಶೀಲಿಸಬಹುದು.

ಪ್ರತಿಯೊಂದು ಪ್ರಕಾರದ ಸ್ಟ್ರೈಕ್‌ನ ಫಲಿತಾಂಶಗಳು ಏಕೆ ವಿಭಿನ್ನವಾಗಿವೆ?

ನಾವು ಕೃತಿಸ್ವಾಮ್ಯ ಸ್ಟ್ರೈಕ್‌ಗಳು ಮತ್ತು ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳಿಗಾಗಿ ದಂಡವನ್ನು ವಿನ್ಯಾಸಗೊಳಿಸಿದ್ದೇವೆ, ಅದು ಬಳಕೆದಾರರಿಗೆ ತಮ್ಮ ಅನುಭವದಿಂದ ಕಲಿಯಲು ಮತ್ತು ಮರಳಿ YouTube ಅನ್ನು ಆನಂದಿಸಲು ಉತ್ತಮ ರೀತಿಯಲ್ಲಿ ಸಹಾಯ ಮಾಡುತ್ತದೆ. ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳಿಗಾಗಿ, ಬಳಕೆದಾರರು ಎಚ್ಚರಿಕೆಯನ್ನು ಪಡೆದಾಗ ಮತ್ತು ಅನುಗುಣವಾದ ನೀತಿ ಪುಟಕ್ಕೆ ಭೇಟಿ ನೀಡಿದ ನಂತರ ಅವರ ಕಂಟೆಂಟ್ ನಿಯಮಗಳನ್ನು ಏಕೆ ಉಲ್ಲಂಘಿಸಿದೆ ಎಂಬುದನ್ನು ತ್ವರಿತವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದನ್ನು ನಾವು ಕಂಡುಕೊಂಡಿದ್ದೇವೆ.

ಇದು ನಿಮ್ಮ ಮೊದಲ ಸ್ಟ್ರೈಕ್ ಎಂದಾದರೆ, ನೀವು ಕೃತಿಸ್ವಾಮ್ಯ ಶಾಲೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.

ನೀವು ಯಾವಾಗಲೂ ಎಚ್ಚರಿಕೆಯನ್ನು ಏಕೆ ಪಡೆಯುವುದಿಲ್ಲ?

ನೀವು ಎಚ್ಚರಿಕೆಯನ್ನು ಪಡೆಯುತ್ತೀರೋ ಅಥವಾ ಇಲ್ಲವೋ ಎಂಬುದು ಕೆಲವು ವಿಷಯಗಳ ಮೇಲೆ ಅವಲಂಬಿತವಾಗಿದೆ, ಉದಾಹರಣೆಗೆ ಅದು ಸಮುದಾಯ ಮಾರ್ಗಸೂಚಿಗಳ ಅಥವಾ ಕೃತಿಸ್ವಾಮ್ಯ ಉಲ್ಲಂಘನೆಯಾಗಿದ್ದರೆ ಅಥವಾ ಇದು ನಿಮ್ಮ ಮೊದಲ ಉಲ್ಲಂಘನೆಯಾಗಿದ್ದರೆ.

ತಪ್ಪುಗಳು ಸಂಭವಿಸುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ. ಅದಕ್ಕಾಗಿಯೇ ಮೊದಲ ಬಾರಿಗೆ ನಿಮ್ಮ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳಲ್ಲಿ ಒಂದನ್ನು ಅನುಸರಿಸದಿದ್ದಾಗ, ನಾವು ಎಚ್ಚರಿಕೆಯನ್ನು ನೀಡುತ್ತೇವೆ. ಈ ಸಮುದಾಯ ಮಾರ್ಗಸೂಚಿಗಳ ಎಚ್ಚರಿಕೆಯ ಅವಧಿ 90 ದಿನಗಳ ನಂತರ ಮುಕ್ತಾಯಗೊಳ್ಳಲು, ನೀವು ಪಾಲಿಸಿ ತರಬೇತಿಯನ್ನು ತೆಗೆದುಕೊಳ್ಳಬಹುದು. ನಮ್ಮ ನೀತಿಗಳ ಕುರಿತು ತಿಳಿದುಕೊಳ್ಳಲು ಮತ್ತು ಅಂತಹ ತಪ್ಪುಗಳು ಮತ್ತೆ ಸಂಭವಿಸದಂತೆ ತಡೆಯಲು, ಇದು ನಿಮಗೆ ಅವಕಾಶವನ್ನು ನೀಡುತ್ತದೆ ಎಂಬುದಾಗಿ ನಾವು ಭಾವಿಸುತ್ತೇವೆ. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ನೀವು ಬೇರೆ ನೀತಿಯನ್ನು ಉಲ್ಲಂಘಿಸಿದರೆ, ನಿಮಗೆ ಮತ್ತೊಂದು ಎಚ್ಚರಿಕೆ ಸಿಗುತ್ತದೆ. ಪುನಃ ಪುನಃ ಈ ಉಲ್ಲಂಘನೆ ಮಾಡುವವರನ್ನು, ಭವಿಷ್ಯದಲ್ಲಿ ಈ ತರಬೇತಿಯನ್ನು ತೆಗೆದುಕೊಳ್ಳದ ಹಾಗೆ ನಾವು ತಡೆಯಬಹುದು.

ಕೃತಿಸ್ವಾಮ್ಯ ಉಲ್ಲಂಘಿಸಿದ್ದಕ್ಕಾಗಿ ತೆಗೆದುಹಾಕುವ ವಿನಂತಿಯನ್ನು ನಾವು ಪಡೆದರೆ, ನಾವು ಅಪ್‌ಲೋಡ್ ಅನ್ನು ತೆಗೆದುಹಾಕುತ್ತೇವೆ ಮತ್ತು ಒಂದು ವೇಳೆ ಮೊದಲ ಬಾರಿ ಆಗಿದ್ದರೆ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ನೀಡುತ್ತೇವೆ. ಕಾನೂನಿನ ಅನುಸರಣೆಗೆ ನಾವು ಅದನ್ನು ಮಾಡುತ್ತೇವೆ. ವೀಡಿಯೊವನ್ನು ತೆಗೆದುಹಾಕಲು, ಕೃತಿಸ್ವಾಮ್ಯ ಮಾಲೀಕರು ಸಂಪೂರ್ಣ ಮತ್ತು ಮಾನ್ಯವಾದ ಕಾನೂನು ವಿನಂತಿಯನ್ನು ಸಲ್ಲಿಸಬೇಕು.

ಗಮನಿಸಿ: Content ID ಕ್ಲೈಮ್‌ಗಳು ಸ್ಟ್ರೈಕ್‌ಗೆ ಕಾರಣವಾಗುವುದಿಲ್ಲ.

ನಾನು ಯಾವ ರೀತಿಯ ಸ್ಟ್ರೈಕ್ ಅನ್ನು ಪಡೆದುಕೊಂಡಿದ್ದೇನೆ ಎಂದು ನನಗೆ ಹೇಗೆ ತಿಳಿಯುವುದು?

ಸ್ಟ್ರೈಕ್‌ನ ಕುರಿತು ನಾವು ನಿಮಗೆ ತಿಳಿಸಿದಾಗ, ನೀವು ಯಾವ ರೀತಿಯ ಸ್ಟ್ರೈಕ್ ಅನ್ನು ಸ್ವೀಕರಿಸಿದ್ದೀರಿ ಎಂಬುದನ್ನು ನಾವು ನಿಮಗೆ ತಿಳಿಸುತ್ತೇವೆ. ಇದು ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಆಗಿದ್ದರೆ, ನಿಮ್ಮ ಕಂಟೆಂಟ್ ಯಾವ ನೀತಿಯನ್ನು ಉಲ್ಲಂಘಿಸಿದೆ ಎಂಬುದನ್ನು ಸಹ ನಾವು ನಿಮಗೆ ತಿಳಿಸುತ್ತೇವೆ.

ಸಮುದಾಯ ಮಾರ್ಗಸೂಚಿಗಳು ಮತ್ತು ಕೃತಿಸ್ವಾಮ್ಯ ಸ್ಟ್ರೈಕ್‌ಗಳು ನಿಮ್ಮ Studio ಡ್ಯಾಶ್‌ಬೋರ್ಡ್‌ನಲ್ಲಿ ಅಥವಾ ನಿಮ್ಮ ಕಂಟೆಂಟ್ ಟ್ಯಾಬ್‌ನಲ್ಲಿ ಕಾಣಿಸುತ್ತವೆ.

ನಾನು ಸ್ಟ್ರೈಕ್ ಅನ್ನು ಪಡೆದರೆ ಏನು ಮಾಡಬೇಕು?

ತಪ್ಪುಗಳು ಸಂಭವಿಸುತ್ತವೆ ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಜನರು ಉದ್ದೇಶಪೂರ್ವಕವಾಗಿ ನಮ್ಮ ನೀತಿಗಳನ್ನು ಉಲ್ಲಂಘಿಸಬೇಕೆಂದು ಅಥವಾ ಬೇರೊಬ್ಬರ ಕೃತಿಸ್ವಾಮ್ಯವನ್ನು ಅತಿಕ್ರಮಿಸಬೇಕೆಂದು ಮಾಡುವುದಿಲ್ಲ. ಸ್ಟ್ರೈಕ್ ಪಡೆಯುವುದು ಭಯಾನಕ ಎಂಬುದು ನಮಗೆ ತಿಳಿದಿದೆ, ಆದರೆ ನಿಮ್ಮ ಚಾನಲ್‌ನ ಮೇಲೆ ಶಾಶ್ವತವಾದ ಋಣಾತ್ಮಕ ಪರಿಣಾಮ ಬೀರುವುದನ್ನು ತಪ್ಪಿಸಲು ನೀವು ತೆಗೆದುಕೊಳ್ಳಬಹುದಾದ ಕ್ರಮಗಳಿವೆ.

ನೀವು ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅನ್ನು ಪಡೆದರೆ, ಈ ಕೆಳಗಿನವುಗಳನ್ನು ಮಾಡುವಂತೆ ನಾವು ನಿಮಗೆ ಶಿಫಾರಸು ಮಾಡುತ್ತೇವೆ:

  1. ನಿಮ್ಮ ಕಂಟೆಂಟ್ ನಮ್ಮ ನೀತಿಗಳನ್ನು ಅನುಸರಿಸುತ್ತದೆ ಎಂದು ಖಚಿತಪಡಿಸಿಕೊಳ್ಳಲು ನಮ್ಮ ಸಮುದಾಯ ಮಾರ್ಗಸೂಚಿಗಳ ಕುರಿತು ತಿಳಿಯಿರಿ.
  2. ನಮ್ಮ ನೀತಿಗಳನ್ನು ಪರಿಶೀಲಿಸಿದ ನಂತರ, ನಾವು ತಪ್ಪು ಮಾಡಿದ್ದೇವೆ ಎಂದು ನಿಮಗೆ ಅನಿಸಿದರೆ, ನಮಗೆ ತಿಳಿಸಿ. ನೀವು ಇಲ್ಲಿ ನಿರ್ಧಾರದ ಕುರಿತು ಮೇಲ್ಮನವಿ ಸಲ್ಲಿಸಬಹುದು.

ನೀವು ಕೃತಿಸ್ವಾಮ್ಯ ಸ್ಟ್ರೈಕ್ ಪಡೆದರೆ, ನೀವು ಈ ಕೆಳಗಿನ ಆಯ್ಕೆಗಳನ್ನು ಹೊಂದಿರುತ್ತೀರಿ:

  • ಅದರ ಅವಧಿ ಮುಕ್ತಾಯವಾಗುವವರೆಗೆ ನಿರೀಕ್ಷಿಸಿ: 90 ದಿನಗಳ ಬಳಿಕ ಕೃತಿಸ್ವಾಮ್ಯ ಸ್ಟ್ರೈಕ್‌ಗಳ ಅವಧಿ ಮುಕ್ತಾಯವಾಗುತ್ತದೆ. ಇದು ನಿಮ್ಮ ಮೊದಲ ಸ್ಟ್ರೈಕ್ ಎಂದಾದರೆ, ನೀವು ಕೃತಿಸ್ವಾಮ್ಯ ಶಾಲೆಯನ್ನು ಪೂರ್ಣಗೊಳಿಸಬೇಕಾಗುತ್ತದೆ.
  • ಹಿಂಪಡೆಯಲು ವಿನಂತಿಸಿ: ನಿಮ್ಮ ವೀಡಿಯೊವನ್ನು ಕ್ಲೈಮ್ ಮಾಡಿದ ವ್ಯಕ್ತಿಯನ್ನು ನೀವು ಸಂಪರ್ಕಿಸಬಹುದು ಮತ್ತು ಕೃತಿಸ್ವಾಮ್ಯ ಉಲ್ಲಂಘನೆಯ ಕುರಿತಾದ ತಮ್ಮ ಕ್ಲೈಮ್ ಅನ್ನು ಹಿಂಪಡೆಯಬೇಕೆಂದು ಅವರ ಬಳಿ ಕೇಳಬಹುದು.
  • ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಿ: ನಿಮ್ಮ ವೀಡಿಯೊವನ್ನು ತಪ್ಪಾಗಿ ತೆಗೆದುಹಾಕಲಾಗಿದೆ, ಏಕೆಂದರೆ ಅದು ಉಲ್ಲಂಘನೆ ಮಾಡುತ್ತಿದೆ ಎಂದು ತಪ್ಪಾಗಿ ಗುರುತಿಸಲ್ಪಟ್ಟಿದ್ದರೆ ಅಥವಾ ಸಂಭಾವ್ಯ ನ್ಯಾಯೋಚಿತ ಬಳಕೆಗೆ ಅರ್ಹತೆ ಪಡೆದಿದ್ದರೆ, ನೀವು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಲು ಬಯಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17479521322260824430
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false