ಮೊಬೈಲ್‌ನಲ್ಲಿ ಲೈವ್ ಸ್ಟ್ರೀಮ್ ರಚಿಸಿ

 

ಮೊಬೈಲ್‌ನಲ್ಲಿ ಲೈವ್ ಸ್ಟ್ರೀಮ್ ಮಾಡಲು, ಈ ಕೆಳಗಿನವು ಅಗತ್ಯವಿವೆ:

ನೀವು 50 ಕ್ಕಿಂತ ಹೆಚ್ಚು ಹಾಗೂ 1,000 ಗಿಂತ ಕಡಿಮೆ ಸಬ್‌ಸ್ಕ್ರೈಬರ್‌ಗಳನ್ನು ಹೊಂದಿದ್ದರೆ

YouTube ಅನ್ನು ಎಲ್ಲರಿಗೂ ಸುರಕ್ಷಿತ ಸಮುದಾಯವಾಗಿಸಲು, ನಿಮ್ಮ ಮೊಬೈಲ್ ಲೈವ್ ಸ್ಟ್ರೀಮ್‌ನಲ್ಲಿ ವೀಕ್ಷಕರ ಸಂಖ್ಯೆಯನ್ನು ನಾವು ಸೀಮಿತಗೊಳಿಸಬಹುದು. ಹಾಗೆಯೇ, ನಿಮ್ಮ ಆರ್ಕೈವ್ ಮಾಡಿದ ಲೈವ್ ಸ್ಟ್ರೀಮ್ ಅನ್ನು ಡೀಫಾಲ್ಟ್ ಆಗಿ ಖಾಸಗಿ ಎಂಬಂತೆ ಸೆಟ್ ಮಾಡಲಾಗುತ್ತದೆ.ಪ್ರಕ್ರಿಯೆಯ ಕಾರಣದಿಂದಾಗಿ ಈ ಬದಲಾವಣೆಗಳು ಪ್ರತಿಫಲಿಸಲು ಕೆಲವು ವಾರಗಳು ಬೇಕಾಗಬಹುದು.

ನನ್ನ ಮೊಬೈಲ್ ಲೈವ್ ಸ್ಟ್ರೀಮ್‌ನ ಪ್ರೇಕ್ಷಕವರ್ಗ ಏಕೆ ಸೀಮಿತವಾಗಿದೆ?

ಸಮುದಾಯವನ್ನು ರಕ್ಷಿಸುವ ಜೊತೆಗೆ಼ ಮಹತ್ವಾಕಾಂಕ್ಷೆಯುಳ್ಳ ರಚನೆಕಾರರಿಗೆ ಸಹಾಯ ಮಾಡುವುದಕ್ಕಾಗಿ, ಸಂಭಾವ್ಯವಾಗಿ ಹಾನಿಕಾರಕವಾದ ಕಂಟೆಂಟ್‌ನ ಹರಡುವಿಕೆಯನ್ನು ಸೀಮಿತಗೊಳಿಸಲು ನಾವು ರಕ್ಷಣಾ ಕ್ರಮಗಳನ್ನು ರಚಿಸಿದ್ದೇವೆ.

ನಾನು 1,000 ಸಬ್‌ಸ್ಕ್ರೈಬರ್‌ಗಳನ್ನು ಪಡೆದ ನಂತರ ಏನಾಗುತ್ತದೆ?

1,000 ಸಬ್‌ಸ್ಕ್ರೈಬರ್‌ಗಳನ್ನು ತಲುಪಿದ ನಂತರ, ಮೊಬೈಲ್ ಲೈವ್ ಸ್ಟ್ರೀಮಿಂಗ್ ಪ್ರೇಕ್ಷಕರ ಮಿತಿಯನ್ನು ತೆಗೆದುಹಾಕಲು ಅನೇಕ ವಾರಗಳಷ್ಟು ಸಮಯಾವಕಾಶ ಬೇಕಾಗಬಹುದು. ಈ ಅವಧಿಯಲ್ಲಿ ನಿಮ್ಮ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ ಕಡಿಮೆಯಾದರೆ, ಇನ್ನೂ ಹೆಚ್ಚು ಸಮಯಾವಕಾಶ ಬೇಕಾಗಬಹುದು.

ನಿಮ್ಮ ಚಾನಲ್‌ನಲ್ಲಿ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 1,000 ಕ್ಕಿಂತ ಕಡಿಮೆಯಾದರೆ, ನಿಮ್ಮ ಚಾನಲ್‌ನಲ್ಲಿ 1,000 ಕ್ಕಿಂತ ಕಡಿಮೆ ಸಬ್‌ಸ್ಕ್ರೈಬರ್‌ಗಳಿದ್ದಾಗ ಇದ್ದ ಪ್ರೇಕ್ಷಕರ ಮಿತಿ ಈಗಲೂ ಇರುತ್ತದೆ. ನಿಮ್ಮ ಚಾನಲ್‌ನ ಸಬ್‌ಸ್ಕ್ರೈಬರ್‌ಗಳ ಸಂಖ್ಯೆ 50 ಕ್ಕಿಂತ ಕಡಿಮೆಯಾಗದ ಹೊರತು ನೀವು ಮೊಬೈಲ್ ಲೈವ್ ಸ್ಟ್ರೀಮಿಂಗ್‌ಗೆ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುವುದಿಲ್ಲ.

ಮೊಬೈಲ್ ಲೈವ್ ಸ್ಟ್ರೀಮ್ ಅನ್ನು ರಚಿಸಿ ಮತ್ತು ನಿಗದಿಪಡಿಸಿ

  1. ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ಕೆಳಗೆ, ರಚಿಸಿ ನಂತರ ಲೈವ್‌ಗೆ ಹೋಗಿ ಎಂಬುದನ್ನು ಟ್ಯಾಪ್ ಮಾಡಿ.
    • ನಿಮ್ಮ ಮೊದಲ ಮೊಬೈಲ್ ಲೈವ್ ಸ್ಟ್ರೀಮ್‌ಗಾಗಿ: ನಿಮ್ಮ ಮೊದಲ ಲೈವ್ ಸ್ಟ್ರೀಮ್ ಅನ್ನು ಆರಂಭಿಸಲು 24 ಗಂಟೆಗಳಷ್ಟು ಸಮಯಾವಕಾಶ ಬೇಕಾಗಬಹುದು. ಸಕ್ರಿಯಗೊಳಿಸಿದಾಗ, ನೀವು ತಕ್ಷಣ ಲೈವ್ ಸ್ಟ್ರೀಮ್ ಮಾಡಬಹುದು.
  3. ಲೈವ್ ಸ್ಟ್ರೀಮ್ ಅನ್ನು ರಚಿಸಲು ಹಂತಗಳನ್ನು ಅನುಸರಿಸಿ.
    • YouTube ನಲ್ಲಿ 13-17 ವರ್ಷ ವಯಸ್ಸಿನ ಬಳಕೆದಾರರಿಗಾಗಿ, ನಿಮ್ಮ ಡೀಫಾಲ್ಟ್ ಮೊಬೈಲ್ ಲೈವ್ ಸ್ಟ್ರೀಮ್ ಗೌಪ್ಯತೆ ಸೆಟ್ಟಿಂಗ್ ಅನ್ನು ಪಟ್ಟಿ ಮಾಡದಿರುವುದು ಎಂಬುದಾಗಿ ಸೆಟ್ ಮಾಡಲಾಗುತ್ತದೆ. ನಿಮಗೆ 18 ವರ್ಷ ಅಥವಾ ಅದಕ್ಕಿಂತ ಹೆಚ್ಚು ವಯಸ್ಸಾಗಿದ್ದರೆ, ನಿಮ್ಮ ಡೀಫಾಲ್ಟ್ ಮೊಬೈಲ್ ಲೈವ್ ಸ್ಟ್ರೀಮ್ ಗೌಪ್ಯತೆ ಸೆಟ್ಟಿಂಗ್ ಅನ್ನು ಸಾರ್ವಜನಿಕ ಎಂಬುದಾಗಿ ಸೆಟ್ ಮಾಡಲಾಗುತ್ತದೆ. ತಮ್ಮ ಲೈವ್ ಸ್ಟ್ರೀಮ್ ಅನ್ನು ಸಾರ್ವಜನಿಕ, ಖಾಸಗಿ, ಅಥವಾ ಪಟ್ಟಿ ಮಾಡದಿರುವುದು ಎಂದು ಸೆಟ್ ಮಾಡಲು ಎಲ್ಲಾ ಬಳಕೆದಾರರು ಸಹ ಈ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು.
    • ನಂತರಕ್ಕಾಗಿ ನಿಗದಿಪಡಿಸಲು, ಇನ್ನಷ್ಟು ಆಯ್ಕೆಗಳು ಎಂಬುದನ್ನು ಟ್ಯಾಪ್ ಮಾಡಿ.
    • ಲೈವ್ ಚಾಟ್‌ಗಾಗಿ ಆಯ್ಕೆಗಳನ್ನು ಸೆಟ್ ಮಾಡಲು, ವಯಸ್ಸಿನ ನಿರ್ಬಂಧ, ಮಾನಿಟೈಸೇಶನ್, ಮತ್ತು ಇನ್ನಷ್ಟಕ್ಕಾಗಿ ಇನ್ನಷ್ಟು ಆಯ್ಕೆಗಳು ನಂತರ ಇನ್ನಷ್ಟು ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ. ನಂತರ ಮುಂದೆ ಎಂಬುದನ್ನು ಟ್ಯಾಪ್ ಮಾಡಿ.
    • ನಿಮ್ಮ ಫೋನ್‌ನ ಸ್ಕ್ರೀನ್ ಅನ್ನು ಸ್ಟ್ರೀಮ್ ಮಾಡಲು, ಚಾನಲ್ ರಚಿಸಿನಂತರ ಸ್ಕ್ರೀನ್ ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.
  4. ಲೈವ್‌ಗೆ ಹೋಗಿ ಎಂಬುದನ್ನು ಟ್ಯಾಪ್ ಮಾಡಿ.
  5. ನಿಮ್ಮ ಸ್ಟ್ರೀಮ್ ಅನ್ನು ಕೊನೆಗೊಳಿಸಲು, ಮುಕ್ತಾಯಗೊಳಿಸಿ ಎಂಬುದನ್ನು ಟ್ಯಾಪ್ ಮಾಡಿ. ನಿಮ್ಮ ಚಾನಲ್‌ನಲ್ಲಿ ಸ್ಟ್ರೀಮ್‌ನ ಆರ್ಕೈವ್ ಅನ್ನು ರಚಿಸಲಾಗುತ್ತದೆ. ನೀವು ಯಾವಾಗ ಬೇಕಾದರೂ ಗೌಪ್ಯತೆ ಸೆಟ್ಟಿಂಗ್ ಅನ್ನು ಎಡಿಟ್ ಮಾಡಬಹುದು ಅಥವಾ ಆರ್ಕೈವ್ ಅನ್ನು ಅಳಿಸಬಹುದು.

ನಿಗದಿತ ಮೊಬೈಲ್ ಲೈವ್ ಸ್ಟ್ರೀಮ್ ಅನ್ನು ಆರಂಭಿಸಿ

  1. ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ರಚಿಸಿ  ನಂತರ ಲೈವ್‌ಗೆ ಹೋಗಿ ಎಂಬುದನ್ನು ಟ್ಯಾಪ್ ಮಾಡಿ.
  3. Calendar ನಂತರ ನಿಮ್ಮ ಲೈವ್ ಸ್ಟ್ರೀಮ್ ಅನ್ನು ಆಯ್ಕೆ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
    ಗಮನಿಸಿ: ಅಳಿಸಿ ಬಟನ್ ಅನ್ನು ಒತ್ತುವ ಮೂಲಕ ನಿಗದಿತ ಲೈವ್ ಸ್ಟ್ರೀಮ್‍ಗಳನ್ನು ನೀವು ಅಳಿಸಬಹುದು.
  4. ಲೈವ್‌ಗೆ ಹೋಗಿ ಎಂಬುದನ್ನು ಟ್ಯಾಪ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Android iPhone ಮತ್ತು iPad
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16136403436385274780
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false