ಖಾತೆ ಟ್ಯಾಬ್ ಎಕ್ಸ್‌ಪ್ಲೋರ್ ಮಾಡಿ

YouTube ನಲ್ಲಿ ನೀವು ವೀಕ್ಷಿಸಿದ, ಡೌನ್‌ಲೋಡ್ ಮಾಡಿದ ಅಥವಾ ಖರೀದಿಸಿದ ಎಲ್ಲವನ್ನೂ ವೀಕ್ಷಿಸಲು ಖಾತೆ ಟ್ಯಾಬ್‌ಗೆ ಭೇಟಿ ನೀಡಿ. ಈ ಪುಟದಲ್ಲಿ ಖಾತೆಗೆ ಸಂಬಂಧಿಸಿದ ಸೆಟ್ಟಿಂಗ್‌ಗಳು ಮತ್ತು ಚಾನಲ್ ಮಾಹಿತಿಯನ್ನು ಸಹ ನೀವು ಕಾಣಬಹುದು.

Explore the You tab on your mobile device

ಖಾತೆ ಟ್ಯಾಬ್ ಹುಡುಕಲು, ನಿಮ್ಮ ಪ್ರೊಫೈಲ್ ಚಿತ್ರವನ್ನು ಟ್ಯಾಪ್ ಮಾಡಿ. ಈ ಪುಟದಲ್ಲಿ, ನೀವು ಹೀಗೆ ಮಾಡಬಹುದು:

 ಖಾತೆಗಳನ್ನು ಬದಲಿಸಿ

ನೀವು ಬಳಸುತ್ತಿರುವ ಖಾತೆಯನ್ನು ಬದಲಿಸಲು, ಖಾತೆಗಳನ್ನು ಬದಲಿಸಿ ಟ್ಯಾಪ್ ಮಾಡಿ. ನೀವು ಈ ಆಯ್ಕೆಯನ್ನು ನಿಮ್ಮ ಚಾನಲ್ ಹೆಸರಿನ ಅಡಿಯಲ್ಲಿ ಕಾಣಬಹುದು. ನೀವು ಪುಟದ ಮೇಲಿನ ಬಲಭಾಗದಲ್ಲಿರುವ ಸೆಟ್ಟಿಂಗ್‌ಗಳು ಟ್ಯಾಪ್ ಮಾಡಿದಾಗಲೂ ಈ ಆಯ್ಕೆಯನ್ನು ಕಾಣಬಹುದು.

 Google ಖಾತೆ

ನಿಮ್ಮ Google ಖಾತೆಗೆ ಹೋಗಲು, Google ಖಾತೆ ಅನ್ನು ಟ್ಯಾಪ್ ಮಾಡಿ. ನೀವು ಈ ಆಯ್ಕೆಯನ್ನು ನಿಮ್ಮ ಚಾನಲ್ ಹೆಸರಿನ ಅಡಿಯಲ್ಲಿ ಕಾಣಬಹುದು. ನೀವು ಪುಟದ ಮೇಲಿನ ಬಲಭಾಗದಲ್ಲಿರುವ ಸೆಟ್ಟಿಂಗ್‌ಗಳು ಟ್ಯಾಪ್ ಮಾಡಿದಾಗಲೂ ಈ ಆಯ್ಕೆಯನ್ನು ಕಾಣಬಹುದು.

 ಅಜ್ಞಾತ ಮೋಡ್ ಅನ್ನು ಆನ್ ಮಾಡಿ

YouTube ಅನ್ನು ಖಾಸಗಿಯಾಗಿ ಬ್ರೌಸ್ ಮಾಡಲು, ಅಜ್ಞಾತ ಮೋಡ್ ಆನ್ ಮಾಡಿ. ನೀವು ಈ ಆಯ್ಕೆಯನ್ನು ನಿಮ್ಮ ಚಾನಲ್ ಹೆಸರಿನ ಅಡಿಯಲ್ಲಿ ಕಾಣಬಹುದು.

ಇತಿಹಾಸ

ನೀವು ಇತ್ತೀಚೆಗೆ ನೋಡಿದ ವೀಡಿಯೊಗಳನ್ನು ಇತಿಹಾಸ ಎಂಬುದರ ಅಡಿಯಲ್ಲಿ ಕಾಣಬಹುದು. ನಿಮ್ಮ ವೀಕ್ಷಣೆ ಇತಿಹಾಸವನ್ನು ನಿರ್ವಹಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

  ಪ್ಲೇಪಟ್ಟಿಗಳು

'ನಂತರ ವೀಕ್ಷಿಸಿ' ಪ್ಲೇಪಟ್ಟಿ ಮತ್ತು ಸಾರ್ವಜನಿಕ, ಖಾಸಗಿ ಮತ್ತು ಪಟ್ಟಿ ಮಾಡದಿರುವ ಪ್ಲೇಪಟ್ಟಿಗಳು ಸೇರಿದಂತೆ, ನೀವು ರಚಿಸಿರುವ ಪ್ಲೇಪಟ್ಟಿಗಳನ್ನು ಪ್ಲೇಪಟ್ಟಿಗಳು ಅಡಿಯಲ್ಲಿ ಕಾಣಬಹುದಾಗಿದೆ. ಪ್ಲೇಪಟ್ಟಿಯಲ್ಲಿ ಗರಿಷ್ಠ 5,000 ವೀಡಿಯೊಗಳನ್ನು ಪ್ರದರ್ಶಿಸಬಹುದು. ನಿಮ್ಮ ಪ್ಲೇಪಟ್ಟಿ‌ಗಳನ್ನು ನಿರ್ವಹಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

 ಡೌನ್‌ಲೋಡ್‌ಗಳು

ನೀವು ನಂತರದ ಸಮಯದಲ್ಲಿ ನೋಡಿ ಆನಂದಿಸಲು ಡೌನ್‌ಲೋಡ್ ಮಾಡಿರುವ ವೀಡಿಯೊಗಳನ್ನು ಡೌನ್‌ಲೋಡ್‌ಗಳು ಅಡಿಯಲ್ಲಿ ಕಾಣಬಹುದಾಗಿದೆ.

ನಿಮ್ಮ ವೀಡಿಯೊಗಳು

ನೀವು ಈ ಹಿಂದೆ ಅಪ್‌ಲೋಡ್ ಮಾಡಿರುವ ವೀಡಿಯೊಗಳನ್ನು ನಿಮ್ಮ ವೀಡಿಯೊಗಳು ಅಡಿಯಲ್ಲಿ ಕಾಣಬಹುದು.

ನಿಮ್ಮ ಚಲನಚಿತ್ರಗಳು ಮತ್ತು ಟಿವಿ

ನೀವು ಖರೀದಿಸಿರುವ ವೀಡಿಯೊಗಳನ್ನು ನಿಮ್ಮ ಚಲನಚಿತ್ರಗಳು ಮತ್ತು ಟಿವಿ ಅಡಿಯಲ್ಲಿ ಕಾಣಬಹುದು. ಚಲನಚಿತ್ರಗಳು ಮತ್ತು ಶೋಗಳನ್ನು ಖರೀದಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

 ಬ್ಯಾಡ್ಜ್‌ಗಳು

ನೀವು ಗಳಿಸಿದ ಬ್ಯಾಡ್ಜ್‌ಗಳನ್ನು ವೀಕ್ಷಿಸಿ. ಬ್ಯಾಡ್ಜ್‌ಗಳನ್ನು ಪಡೆಯುವುದು ಮತ್ತು ನಿರ್ವಹಿಸುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

 ನಿಮ್ಮ ಕ್ಲಿಪ್‌ಗಳು

ನಂತರದ ವೀಕ್ಷಣೆಗಾಗಿ ಉಳಿಸಲು ಅಥವಾ ಇತರರೊಂದಿಗೆ ಹಂಚಿಕೊಳ್ಳಲು ನೀವು ವೀಡಿಯೊಗಳ ಭಾಗಗಳನ್ನು ಕ್ಲಿಪ್ ಮಾಡಿದಾಗ, ಅವುಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ. ಕ್ಲಿಪ್‌ಗಳನ್ನು ಹಂಚಿಕೊಳ್ಳುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

 ಕಾರ್ಟ್

ನೀವು ನಿಮ್ಮ ಕಾರ್ಟ್‌ಗೆ ಸೇರಿಸಿರುವ ಉತ್ಪನ್ನಗಳನ್ನು ನೋಡಿ.

 ಶಾಪಿಂಗ್ ಇಚ್ಛೆಪಟ್ಟಿ

ನಿಮ್ಮ ಇಚ್ಛೆಪಟ್ಟಿಯಲ್ಲಿ ಉತ್ಪನ್ನಗಳನ್ನು ನೀವು ಉಳಿಸಿದ್ದರೆ, ಅವುಗಳನ್ನು ಇಲ್ಲಿ ಕಾಣಬಹುದು.

 ನಿಮ್ಮ Premium ಪ್ರಯೋಜನಗಳು

ನೀವು Premium ಸದಸ್ಯರಾಗಿದ್ದರೆ, ನಿಮ್ಮ ಸದಸ್ಯತ್ವದ ಜೊತೆಗೆ ನಿಮಗೆ ಸಿಗಲಿರುವ ಪ್ರಯೋಜನಗಳನ್ನು ವೀಕ್ಷಿಸಬಹುದು. Premium ಸದಸ್ಯತ್ವವನ್ನು ಸೆಟಪ್ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

 ಸಹಾಯ ಮತ್ತು ಫೀಡ್‌ಬ್ಯಾಕ್

ನಮ್ಮ ಸಹಾಯ ಕೇಂದ್ರದಲ್ಲಿ ಮಾಹಿತಿ ಮೂಲಗಳನ್ನು ಹುಡುಕಲು ಸಹಾಯ ಮತ್ತು ಫೀಡ್‌ಬ್ಯಾಕ್ ಅನ್ನು ಟ್ಯಾಪ್ ಅಥವಾ ನಮಗೆ ಫೀಡ್‌ಬ್ಯಾಕ್ ಕಳುಹಿಸಿ.

 ಸೆಟ್ಟಿಂಗ್‌ಗಳು

ಆ್ಯಕ್ಸೆಸಿಬಿಲಿಟಿ, ಗೌಪ್ಯತೆ ಮತ್ತು ಹಂಚಿಕೊಳ್ಳುವಿಕೆ ಸೇರಿದಂತೆ, ಹೆಚ್ಚುವರಿ ಸೆಟ್ಟಿಂಗ್‌ಗಳ ಆಯ್ಕೆಗಳನ್ನು ವೀಕ್ಷಿಸಲು ನಿಮ್ಮ ಸ್ಕ್ರೀನ್‌ನ ಮೇಲಿನ ಬಲ ಮೂಲೆಯಲ್ಲಿರುವ ಸೆಟ್ಟಿಂಗ್‌ಗಳು  ಟ್ಯಾಪ್ ಮಾಡಿ.

ಗಮನಿಸಿ: ನಿಮಗೆ ಈ ಎಲ್ಲಾ ವಿಭಾಗಗಳು ಕಾಣಿಸದೇ ಇರಬಹುದು. ಉದಾಹರಣೆಗೆ, ನಿಮ್ಮ ಕಾರ್ಟ್‌ಗೆ ನೀವು ಯಾವುದೇ ಐಟಂಗಳನ್ನು ಸೇರಿಸಿಲ್ಲದಿದ್ದರೆ, ಕಾರ್ಟ್ ವಿಭಾಗವು ಕಾಣಿಸುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3045834044085699597
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false