YouTube Studio ಗಾಗಿ ಮಾನಿಟೈಸೇಶನ್ ಐಕಾನ್ ಗೈಡ್

Shorts ಗಾಗಿ ಆ್ಯಡ್ ಆದಾಯ ಹಂಚಿಕೆಯು 1ನೇ ಫೆಬ್ರವರಿ, 2023 ರಂದು ಪ್ರಾರಂಭವಾಗಿದೆ. ಆ ದಿನಾಂಕದ ನಂತರ ನಿಮ್ಮ Shorts ನ ಪಕ್ಕದಲ್ಲಿ ನೀವು ಬೂದು ಬಣ್ಣದ ಐಕಾನ್‌ಗಳನ್ನು ಹೊಂದಿದ್ದರೆ, ನೀವು YouTube Studio ದಲ್ಲಿ ಮಾಡ್ಯೂಲ್ ಅನ್ನು ಸ್ವೀಕರಿಸಿಲ್ಲ ಎಂದರ್ಥ.

ನಿಮ್ಮ ವೀಡಿಯೊದ ಮಾನಿಟೈಸೇಶನ್ ಸ್ಥಿತಿಯನ್ನು ಪರಿಶೀಲಿಸುವುದು ಹೇಗೆ ಮತ್ತು ಪ್ರತಿ ಮಾನಿಟೈಸೇಶನ್ ಐಕಾನ್‌ನ ಅರ್ಥವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಲೇಖನವನ್ನು ಬಳಸಿ. ನಿಮ್ಮ ವೀಡಿಯೊದ ಪಕ್ಕದಲ್ಲಿರುವ ಮಾನಿಟೈಸೇಶನ್ ಐಕಾನ್ ಬದಲಾಗುವುದರ ಅರ್ಥವೇನು ಎಂಬುದನ್ನು ಸಹ ನೀವು ತಿಳಿಯಬಹುದು.

ಗಮನಿಸಿ: ನೀವು ವೀಡಿಯೊದ ಮೂಲಕ ಆದಾಯವನ್ನು ಗಳಿಸುತ್ತೀರಾ ಎಂಬುದು ಕೃತಿಸ್ವಾಮ್ಯ ಕ್ಲೇಮ್‌ಗಳು, ಆದಾಯದ ಹಂಚಿಕೆ ಮತ್ತು ಜಾಹೀರಾತು-ಸ್ನೇಹಿಯಾಗಿರುವುದು ಸೇರಿದಂತೆ ಹಲವಾರು ಅಂಶಗಳನ್ನು ಅವಲಂಬಿಸಿರುತ್ತದೆ. ಹೆಚ್ಚಿನ ಮಾಹಿತಿಗಾಗಿ, ಆ್ಯಡ್‌ಗಳ ಮೂಲಕ ಮಾನಿಟೈಸ್ ಮಾಡಲು ವೀಡಿಯೊಗಳನ್ನು ಅಪ್‌ಲೋಡ್ ಮಾಡುವುದು ಹೇಗೆ ಎಂದು ತಿಳಿಯಿರಿ.

ವೀಡಿಯೊ ಮಾನಿಟೈಸೇಶನ್ ಸ್ಥಿತಿಯನ್ನು ಪರಿಶೀಲಿಸಿ

ನಿಮ್ಮ ವೀಡಿಯೊದ ಮಾನಿಟೈಸೇಶನ್ ಸ್ಥಿತಿಯನ್ನು ಪರಿಶೀಲಿಸಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆಮಾಡಿ.
  3. ಮಾನಿಟೈಸೇಶನ್ ಕಾಲಮ್‌ನಲ್ಲಿ, ನೀವು ಮಾನಿಟೈಸೇಶನ್ ಐಕಾನ್‌ಗಳನ್ನು ಕಾಣಬಹುದು. ಪ್ರತಿ ಐಕಾನ್‌ನ ಅರ್ಥವೇನು ಎಂಬುದರ ಕುರಿತು ಮಾಹಿತಿಗಾಗಿ, ನೀವು ಅದರ ಮೇಲೆ ಹೋವರ್ ಮಾಡಬಹುದು.

ಮಾನಿಟೈಸೇಶನ್ ಸ್ಥಿತಿಯ ಪ್ರಕಾರ ನಿಮ್ಮ ವೀಡಿಯೊ ಪಟ್ಟಿಯನ್ನು ಫಿಲ್ಟರ್ ಮಾಡಲು:

  1. ಫಿಲ್ಟರ್ ಬಾರ್ ನಂತರ ಮಾನಿಟೈಸೇಶನ್ ಎಂಬುದನ್ನು ಕ್ಲಿಕ್ ಮಾಡಿ.
  2. ಹಸಿರು ಬಣ್ಣದ ಐಕಾನ್‌ಗಳಿರುವ ವೀಡಿಯೊಗಳನ್ನು ತೋರಿಸಲು, ಮಾನಿಟೈಸ್ ಮಾಡಿರುವುದು ಎಂಬುದನ್ನು ಗುರುತು ಮಾಡಿ. ಕೆಂಪು ಮತ್ತು ಬೂದು ಬಣ್ಣದ ಐಕಾನ್‌ಗಳಿರುವ ವೀಡಿಯೊಗಳನ್ನು ತೋರಿಸಲು, ಮಾನಿಟೈಸ್ ಮಾಡದಿರುವುದು ಎಂಬುದನ್ನು ಗುರುತು ಮಾಡಿ. ಹಳದಿ ಬಣ್ಣದ ಐಕಾನ್‌ಗಳಿರುವ ವೀಡಿಯೊಗಳನ್ನು ತೋರಿಸಲು, ಸೀಮಿತ ಎಂಬುದನ್ನು ಗುರುತು ಮಾಡಿ.
  3. ಅನ್ವಯಿಸಿ ಕ್ಲಿಕ್ ಮಾಡಿ.

ಮಾನಿಟೈಸೇಶನ್ ಐಕಾನ್ ಗೈಡ್

ಪ್ರತಿ ಮಾನಿಟೈಸೇಶನ್ ಐಕಾನ್‌ನ ಅರ್ಥವೇನು ಎಂದು ತಿಳಿಯಲು ಈ ಟೇಬಲ್ ಬಳಸಿ.

ಐಕಾನ್ ಮತ್ತು ವಿವರಣೆ

ಐಕಾನ್ ಯಾವಾಗ ಕಾಣಿಸುತ್ತದೆ

ನಿಮ್ಮ ವೀಡಿಯೊದ ಮಾನಿಟೈಸೇಶನ್ ಸ್ಥಿತಿಗೆ ಸಂಬಂಧಿಸಿದಂತೆ ಐಕಾನ್‌ನ ಅರ್ಥವೇನು ಈ ಮಾನಿಟೈಸೇಶನ್ ಸ್ಥಿತಿಯ ಕುರಿತು ಸಲಹೆಗಳು
ಪರಿಶೀಲಿಸಲಾಗುತ್ತಿದೆ ವೀಡಿಯೊವು ಆ್ಯಡ್‌ಗಾಗಿ ಸೂಕ್ತವಾಗಿದೆಯೇ ಎಂಬುದನ್ನು ನಮ್ಮ ಸಿಸ್ಟಂಗಳು ಪರಿಶೀಲಿಸುತ್ತಿರುವಾಗ ಈ ಐಕಾನ್ ವೀಡಿಯೊದ ಪಕ್ಕದಲ್ಲಿ ಕಾಣಿಸುತ್ತದೆ. ಆ್ಯಡ್‌ಗಾಗಿ ಸೂಕ್ತತೆಯ ಪರಿಶೀಲನೆಯು ಪ್ರಗತಿಯಲ್ಲಿರುವಾಗ, ನಿಮ್ಮ ವೀಡಿಯೊದಲ್ಲಿ ನಾವು ಆ್ಯಡ್‌ಗಳನ್ನು ತೋರಿಸುವುದಿಲ್ಲ.

ನಮ್ಮ ಸಿಸ್ಟಂಗಳು ಅಪ್‌ಲೋಡ್ ಪ್ರಕ್ರಿಯೆಯ ಸಮಯದಲ್ಲಿ ಆ್ಯಡ್‌ಗಾಗಿ ಸೂಕ್ತತೆಯನ್ನು ಪರಿಶೀಲಿಸುತ್ತವೆ. ಈ ಪರಿಶೀಲನೆಯು ಸಾಮಾನ್ಯವಾಗಿ 20 ನಿಮಿಷಗಳಿಗಿಂತ ಕಡಿಮೆ ಮತ್ತು ಹೆಚ್ಚೆಂದರೆ 1 ಗಂಟೆ ಸಮಯ ತೆಗೆದುಕೊಳ್ಳುತ್ತದೆ.

ಪರಿಶೀಲನೆಯು ಪೂರ್ಣಗೊಂಡಾಗ, ಐಕಾನ್ ಹಸಿರು, ಹಳದಿ ಅಥವಾ ಕೆಂಪು ಬಣ್ಣಕ್ಕೆ ತಿರುಗುತ್ತದೆ.

ಆದಾಯದ ಸಾಮರ್ಥ್ಯವನ್ನು ಹೆಚ್ಚಿಸಲು, ನಿಮ್ಮ ವೀಡಿಯೊವನ್ನು ಸಾರ್ವಜನಿಕಗೊಳಿಸುವ ಮೊದಲು ಪರಿಶೀಲನೆಗಳು ಪೂರ್ಣಗೊಳ್ಳುವವರೆಗೆ ಕಾಯಲು ನಾವು ಶಿಫಾರಸು ಮಾಡುತ್ತೇವೆ.

 ಆನ್ ವೀಡಿಯೊ ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸಿದಾಗ ಈ ಐಕಾನ್ ವೀಡಿಯೊದ ಪಕ್ಕದಲ್ಲಿ ಕಾಣಿಸುತ್ತದೆ. ಬಹುತೇಕ ಆ್ಯಡ್‌ಗಳಿಗೆ ವೀಡಿಯೊ ಅರ್ಹವಾಗಿರುತ್ತದೆ. ಈ ವೀಡಿಯೊಗೆ ಸಂಬಂಧಿಸಿದ ಎಲ್ಲಾ ಆ್ಯಡ್ ಆದಾಯವನ್ನು ನೀವು ಪಡೆಯದಿರಬಹುದು ಎಂಬುದನ್ನು ನೆನಪಿನಲ್ಲಿಡಿ. ಕೆಲವೊಮ್ಮೆ, ಕೃತಿಸ್ವಾಮ್ಯ ವಿವಾದ ಅಥವಾ ಅಮಾನ್ಯ ಟ್ರಾಫಿಕ್‌ನಿಂದಾಗಿ ನಿಮ್ಮ ಆದಾಯವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಬಹುದು.
 ವಿನಾಯಿತಿಗಳು ವೀಡಿಯೊದ ಪ್ರೇಕ್ಷಕರನ್ನು ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಿರುವಾಗ ಅದರ ಪಕ್ಕದಲ್ಲಿ ಈ ಐಕಾನ್ ಕಾಣಿಸುತ್ತದೆ. ಈ ವೀಡಿಯೊ ವೈಯಕ್ತಿಕಗೊಳಿಸದ ಆ್ಯಡ್‌ಗಳಿಗೆ ಮಾತ್ರ ಅರ್ಹವಾಗಿರುತ್ತದೆ. -
 ಹಂಚಿಕೆ ನೀವು ಹಾಡಿನ ಕವರ್ ವೀಡಿಯೊವನ್ನು ಅಪ್‌ಲೋಡ್ ಮಾಡಿ, ಸಂಗೀತ ಪ್ರಕಾಶಕರು ಅದನ್ನು ಕ್ಲೇಮ್‌ ಮಾಡಿದಾಗ ಈ ಐಕಾನ್ ಕಾಣಿಸುತ್ತದೆ. ಈ ಸಂಗೀತ ಪ್ರಕಾಶಕರು ಸಂಗೀತ ಕವರ್‌ಗಳನ್ನು ಮಾಡುವ YPP ಯಲ್ಲಿನ ರಚನೆಕಾರರೊಂದಿಗೆ ಆದಾಯವನ್ನು ಹಂಚಿಕೊಳ್ಳಲು ಈ ಹಿಂದೆ ಒಪ್ಪಿಕೊಂಡಿದ್ದಾರೆ. ಈ ವೀಡಿಯೊ ಸಂಗೀತದ ಹಕ್ಕುಗಳನ್ನು ಹೊಂದಿರುವವರ ಜೊತೆ ಆದಾಯವನ್ನು ವಿಭಜಿಸುತ್ತದೆ. ನೀವು ಈ ವೀಡಿಯೊದ ಆದಾಯದ ಸ್ವಲ್ಪ ಭಾಗವನ್ನು ಪಡೆಯುತ್ತೀರಿ, ಆದರೆ ಎಲ್ಲವನ್ನೂ ಅಲ್ಲ. ಆದಾಯ ಹಂಚಿಕೆ ಮತ್ತು ಅರ್ಹ ಕವರ್ ವೀಡಿಯೊಗಳನ್ನು ಮಾನಿಟೈಸ್ ಮಾಡುವ ಕುರಿತು ಇನ್ನಷ್ಟು ತಿಳಿಯಿರಿ.
ಎಸ್‌ಕ್ರೋ Content ID ವಿವಾದ ಸಲ್ಲಿಕೆ ಪ್ರಕ್ರಿಯೆಯ ಸಮಯದಲ್ಲಿ ಆದಾಯವನ್ನು ಪ್ರತ್ಯೇಕವಾಗಿ ಹಿಡಿದಿಟ್ಟುಕೊಂಡಿರುವಾಗ ಈ ಐಕಾನ್ ವೀಡಿಯೊದ ಪಕ್ಕದಲ್ಲಿ ಕಾಣಿಸುತ್ತದೆ. Content ID ವಿವಾದ ಇತ್ಯರ್ಥವಾದ ನಂತರ, ನಾವು ಸೂಕ್ತವಾದ ಪಾರ್ಟಿಗೆ ಆದಾಯವನ್ನು ಪಾವತಿಸುತ್ತೇವೆ. ಸ್ಥಿತಿ ವಿವರಣೆಯಲ್ಲಿ “ಕೃತಿಸ್ವಾಮ್ಯ ಕ್ಲೇಮ್” ಎಂದು ಇದ್ದರೆ: ವೀಡಿಯೊ ಕೃತಿಸ್ವಾಮ್ಯಕ್ಕೊಳಪಟ್ಟ ವಿಷಯವನ್ನು ಹೊಂದಿರುವುದು ಕಂಡುಬಂದಿದೆ ಮತ್ತು ಕೃತಿಸ್ವಾಮ್ಯದ ಮಾಲೀಕರು ನಿಮ್ಮ ವಿವಾದ ಅಥವಾ ಮೇಲ್ಮನವಿಯನ್ನು ಪರಿಶೀಲಿಸುತ್ತಿದ್ದಾರೆ ಎಂದರ್ಥ. Content ID ವಿವಾದಗಳ ಸಂದರ್ಭಗಳಲ್ಲಿ ಮಾನಿಟೈಸೇಶನ್ ಕುರಿತು ಇನ್ನಷ್ಟು ತಿಳಿಯಿರಿ.
ಸೀಮಿತ ವೀಡಿಯೊ ನಮ್ಮ ಎಲ್ಲಾ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸದಿರುವಾಗ ಈ ಐಕಾನ್ ಅದರ ಪಕ್ಕದಲ್ಲಿ ಕಾಣಿಸುತ್ತದೆ. ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸದ ಕಂಟೆಂಟ್‌ನಿಂದ ಹೊರಗುಳಿಯಲು ಬ್ರ್ಯಾಂಡ್‌ಗಳು ಆಯ್ಕೆಮಾಡಬಹುದು. ಆದ್ದರಿಂದ, ಜಾಹೀರಾತುದಾರರಿಗೆ ಸೂಕ್ತವಾದ ಕಂಟೆಂಟ್‌ನ ಹೋಲಿಕೆಯಲ್ಲಿ ವೀಡಿಯೊ ಕಡಿಮೆ ಆದಾಯವನ್ನು ಗಳಿಸಬಹುದು.

ಸ್ಥಿತಿ ವಿವರಣೆಯಲ್ಲಿ “ಆ್ಯಡ್‌‌ಗಾಗಿ ಸೂಕ್ತತೆ” ಎಂದು ಇದ್ದರೆ: ನಮ್ಮ ಸ್ವಯಂಚಾಲಿತ ಸಿಸ್ಟಂಗಳು ಈ ವೀಡಿಯೊವನ್ನು ಮೌಲ್ಯಮಾಪನ ಮಾಡಿವೆ ಎಂಬುದು ಈ ವಿವರಣೆಯ ಅರ್ಥವಾಗಿದೆ. ನೀವು ಪರಿಶೀಲನೆಯನ್ನು ವಿನಂತಿಸಬಹುದು, ಅಂದರೆ ನೀತಿ ತಜ್ಞರೊಬ್ಬರು ಮತ್ತೊಮ್ಮೆ ವೀಡಿಯೊವನ್ನು ಪರಿಶೀಲಿಸುತ್ತಾರೆ ಮತ್ತು ಸೂಕ್ತವಾಗಿದ್ದರೆ, ವೀಡಿಯೊದ ಮಾನಿಟೈಸೇಶನ್ ಸ್ಥಿತಿಯನ್ನು ಬದಲಾಯಿಸಬಹುದು.

ಸ್ಥಿತಿ ವಿವರಣೆಯಲ್ಲಿ “ಆ್ಯಡ್‌‌ಗಾಗಿ ಸೂಕ್ತತೆ - ಪರಿಶೀಲನೆಯಲ್ಲಿದೆ" ಎಂದು ಇದ್ದರೆ: ನಮ್ಮ ನೀತಿ ತಜ್ಞರು ಈ ವೀಡಿಯೊವನ್ನು ಪರಿಶೀಲಿಸುತ್ತಿದ್ದಾರೆ ಎಂಬುದು ಈ ವಿವರಣೆಯ ಅರ್ಥವಾಗಿದೆ. ತಜ್ಞರು ಮಾನಿಟೈಸೇಶನ್ ಸ್ಥಿತಿಯನ್ನು ಇರಿಸಿಕೊಳ್ಳಬಹುದು ಅಥವಾ ಬದಲಾಯಿಸಬಹುದು ಮತ್ತು ಅವರ ನಿರ್ಧಾರವು ಅಂತಿಮವಾಗಿರುತ್ತದೆ.

ಸ್ಥಿತಿ ವಿವರಣೆಯಲ್ಲಿ “ಆ್ಯಡ್‌‌ಗಾಗಿ ಸೂಕ್ತತೆ - ಪರಿಶೀಲನೆಯ ಮೂಲಕ ದೃಢೀಕರಿಸಲಾಗಿದೆ" ಎಂದು ಇದ್ದರೆ: ನಮ್ಮ ನೀತಿ ತಜ್ಞರು ವೀಡಿಯೊವನ್ನು ಪರಿಶೀಲಿಸಿದ್ದಾರೆ ಮತ್ತು ಅದು ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸುವುದಿಲ್ಲ ಎಂದು ನಂಬುತ್ತಾರೆ ಎಂಬುದು ಈ ವಿವರಣೆಯ ಅರ್ಥವಾಗಿದೆ. ಹಳದಿ ಬಣ್ಣದ ಐಕಾನ್ ಸ್ಥಿತಿಯನ್ನು ಬದಲಾಯಿಸಲಾಗುವುದಿಲ್ಲ.

ಗಮನಿಸಿ: ವೀಡಿಯೊವು ಅಮಾನ್ಯವಾದ ಟ್ರಾಫಿಕ್ ಅನ್ನು ಹೊಂದಿದ್ದರೆ, ಅದು ಹಳದಿ ಬಣ್ಣದ ಐಕಾನ್‌ಗೆ ಕಾರಣವಾಗುವುದಿಲ್ಲ. ವೀಡಿಯೊಗಳಿಗೆ ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಮಾತ್ರ ಆಧರಿಸಿ ಹಳದಿ ಬಣ್ಣದ ಐಕಾನ್‌ಗಳನ್ನು ಅನ್ವಯಿಸಲಾಗುತ್ತದೆ.

ಅನರ್ಹವಾಗಿದೆ ಹೆಚ್ಚಾಗಿ, ವೀಡಿಯೊದಲ್ಲಿ ಕೃತಿಸ್ವಾಮ್ಯ ಕ್ಲೇಮ್ ಇದ್ದಾಗ, ಈ ಐಕಾನ್ ವೀಡಿಯೊದ ಪಕ್ಕದಲ್ಲಿ ಕಾಣಿಸುತ್ತದೆ. ವೀಡಿಯೊವನ್ನು ಮಾನಿಟೈಸ್ ಮಾಡಲು ಸಾಧ್ಯವಾಗುವುದಿಲ್ಲ. ಸ್ಥಿತಿ ವಿವರಣೆಯಲ್ಲಿ “ಕೃತಿಸ್ವಾಮ್ಯ” ಎಂದು ಇದ್ದರೆ: ಹಕ್ಕುಗಳನ್ನು ಹೊಂದಿರುವವರು Content ID ಬಳಸಿಕೊಂಡು ನಿಮ್ಮ ವೀಡಿಯೊವನ್ನು ಕ್ಲೇಮ್‌ ಮಾಡಿದ್ದಾರೆ ಅಥವಾ ಸಂಪೂರ್ಣವಾದ ಮತ್ತು ಮಾನ್ಯವಾದ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿದ್ದಾರೆ ಎಂಬುದು ಈ ವಿವರಣೆಯ ಅರ್ಥವಾಗಿದೆ. ನಿಮ್ಮ ವೀಡಿಯೊ ಕೃತಿಸ್ವಾಮ್ಯ-ಸುರಕ್ಷಿತ ಕೃತಿಯನ್ನು ಅನುಮತಿಯಿಲ್ಲದೆ ಬಳಸಿದಾಗ ಈ ಪರಿಸ್ಥಿತಿಯು ಸಂಭವಿಸುತ್ತದೆ. ಇದರ ಪರಿಣಾಮವಾಗಿ, ನೀವು ಇನ್ನು ಮುಂದೆ ವೀಡಿಯೊವನ್ನು ಮಾನಿಟೈಸ್ ಮಾಡಲು ಸಾಧ್ಯವಾಗುವುದಿಲ್ಲ.
 ಆಫ್ ವೀಕ್ಷಣಾ ಪುಟದ ಆ್ಯಡ್‌ಗಳಿಗೆ ಸಂಬಂಧಿಸಿದಂತೆ, ನೀವು ವೀಡಿಯೊಗಾಗಿ ಮಾನಿಟೈಸೇಶನ್ ಅನ್ನು ಆನ್ ಮಾಡದಿರಲು ಆಯ್ಕೆಮಾಡಿಕೊಂಡಿದ್ದೀರಿ ಎಂಬುದು ಈ ಐಕಾನ್‌ನ ಅರ್ಥವಾಗಿದೆ. ನಿಮ್ಮ Shorts ನಲ್ಲಿ ನೀವು ಈ ಐಕಾನ್ ಅನ್ನು ನೋಡಿದರೆ, ನೀವು YouTube Studio ದಲ್ಲಿ Shorts ಮಾನಿಟೈಸೇಶನ್ ಮಾಡ್ಯುಲ್ ಅನ್ನು ಒಪ್ಪಿಕೊಂಡಿಲ್ಲ ಎಂದರ್ಥ. ವೀಡಿಯೊವನ್ನು ಮಾನಿಟೈಸ್ ಮಾಡಲಾಗುತ್ತಿಲ್ಲ. ಸ್ಥಿತಿ ವಿವರಣೆಯಲ್ಲಿ “ಕೃತಿಸ್ವಾಮ್ಯ” ಎಂದು ಇದ್ದರೆ: ನಿಮ್ಮ ವೀಡಿಯೊದಲ್ಲಿನ ಕಂಟೆಂಟ್‌ನ ಮೇಲೆ ಬೇರೆಯವರು ಕೃತಿಸ್ವಾಮ್ಯವನ್ನು ಹೊಂದಿದ್ದಾರೆ ಎಂಬುದು ಇದರ ಅರ್ಥವಾಗಿದೆ. ಆ್ಯಡ್‌ಗಳು ಚಾಲನೆಯಲ್ಲಿವೆ ಮತ್ತು ಆದಾಯವು ಕೃತಿಸ್ವಾಮ್ಯದ ಮಾಲೀಕರಿಗೆ ಹೋಗುತ್ತಿದೆ. ನಿಮಗೆ ಒಳ್ಳೆಯ ಸುದ್ದಿ ಏನೆಂದರೆ, ಕೃತಿಸ್ವಾಮ್ಯ ಮಾಲೀಕರು ನಿಮ್ಮೊಂದಿಗೆ ಆದಾಯವನ್ನು ಹಂಚಿಕೊಳ್ಳಲು ಮುಕ್ತರಾಗಿದ್ದಾರೆ. ನೀವು ಮಾನಿಟೈಸೇಶನ್ ಸ್ಥಿತಿಯನ್ನು “ಆನ್” ಎಂಬುದಕ್ಕೆ ಬದಲಾಯಿಸಿದರೆ, ಈ ವೀಡಿಯೊಗಾಗಿ ನೀವು ಭಾಗಶಃ ಆದಾಯವನ್ನು ಪಡೆಯುತ್ತೀರಿ.

ಮಾನಿಟೈಸೇಶನ್ ಐಕಾನ್ ಹಸಿರು ಬಣ್ಣದಿಂದ ಹಳದಿ ಬಣ್ಣಕ್ಕೆ ಏಕೆ ಬದಲಾಗಬಹುದು

ಕೆಲವೊಮ್ಮೆ ವೀಡಿಯೊದ ಮಾನಿಟೈಸೇಶನ್ ಐಕಾನ್ ಹಸಿರು ಬಣ್ಣದಿಂದ  ಹಳದಿ ಬಣ್ಣಕ್ಕೆ  ಬದಲಾಗುತ್ತದೆ. ವೀಡಿಯೊವು ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸುತ್ತದೆಯೇ ಎಂಬುದನ್ನು ಕಂಡುಹಿಡಿಯಲು ನಮ್ಮ ಸಿಸ್ಟಂಗಳು ನಿಮ್ಮ ವೀಡಿಯೊವನ್ನು ಸ್ಕ್ಯಾನ್ ಮಾಡುವುದನ್ನು ಮುಂದುವರಿಸುವುದರಿಂದ ಮಾನಿಟೈಸೇಶನ್ ಸ್ಥಿತಿಯಲ್ಲಿ ಈ ಬದಲಾವಣೆ ಉಂಟಾಗುತ್ತದೆ. ಈ ಪ್ರಕ್ರಿಯೆಯನ್ನು ವೇಗವಾಗಿಸಲು ಮತ್ತು ಹೆಚ್ಚು ಸ್ಥಿರವಾಗಿಸಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.

ಐಕಾನ್ ಬದಲಾವಣೆಗಳ ಕುರಿತು ನೀವು ಏನು ಮಾಡಬಹುದು

ನಿಮ್ಮ ವೀಡಿಯೊವನ್ನು ಲೈವ್ ಆಗಿ ಸೆಟ್ ಮಾಡುವ ಮೊದಲು

ಅಪ್‌ಲೋಡ್ ಪ್ರಕ್ರಿಯೆಯ ಸಮಯದಲ್ಲಿ, ಪರಿಶೀಲನೆಗಳ ಪ್ರಕ್ರಿಯೆಯು ಪೂರ್ಣವಾಗುವವರೆಗೆ ನಿಮ್ಮ ವೀಡಿಯೊವನ್ನು ಪ್ರಕಟಿಸುವುದಕ್ಕಾಗಿ ಕಾಯುವಂತೆ ನಾವು ಶಿಫಾರಸು ಮಾಡುತ್ತೇವೆ.

ನಿಮ್ಮ ವೀಡಿಯೊ ಲೈವ್ ಆದ ನಂತರ

ನಿಮ್ಮ ವೀಡಿಯೊವನ್ನು ನೀವು ಅಪ್‌ಲೋಡ್ ಮಾಡಿದ ನಂತರ, ಮುಂದಿನ 24 ರಿಂದ 48 ಗಂಟೆಗಳ ಅವಧಿಯಲ್ಲಿ ವೀಡಿಯೊದ ಮಾನಿಟೈಸೇಶನ್ ಸ್ಥಿತಿಯು ಬದಲಾಗಬಹುದು. ಇದು ಸಾಮಾನ್ಯವಾಗಿ 48 ಗಂಟೆಗಳ ನಂತರ ಸ್ಥಿರಗೊಳ್ಳುತ್ತದೆ. ನಿಮ್ಮ ವೀಡಿಯೊದೊಂದಿಗೆ ವೀಕ್ಷಕರು ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಆಧಾರದ ಮೇಲೆ ಅದು ಮತ್ತೆ ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ.

ನಿಮ್ಮ ವೀಡಿಯೊದಲ್ಲಿನ ಹಳದಿ ಬಣ್ಣದ ಐಕಾನ್ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ನೀವು ಮಾನವ ವಿಮರ್ಶೆಯನ್ನು ವಿನಂತಿಸಬಹುದು. ನೀತಿ ತಜ್ಞರೊಬ್ಬರು ವೀಡಿಯೊವನ್ನು ಪರಿಶೀಲಿಸಿ ಅಂತಿಮ ನಿರ್ಧಾರವನ್ನು ತೆಗೆದುಕೊಂಡ ನಂತರ ಮಾನಿಟೈಸೇಶನ್ ಐಕಾನ್‌ನಲ್ಲಿ ಬದಲಾವಣೆ ಸಾಧ್ಯವಾಗುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17940367321467168531
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false