ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವುದನ್ನು ನಿಗದಿಪಡಿಸುವುದಕ್ಕೆ ಸಂಬಂಧಿಸಿದ ವಿನಂತಿಗಳ ಕುರಿತು ತಿಳಿಯಿರಿ

ತಮ್ಮ ಕೃತಿಸ್ವಾಮ್ಯ-ಸುರಕ್ಷಿತ ಕಂಟೆಂಟ್ ಅನ್ನು ತಮ್ಮ ಅನುಮತಿಯಿಲ್ಲದೆ YouTube ನಲ್ಲಿ ಪೋಸ್ಟ್ ಮಾಡಿರುವುದು ಕೃತಿಸ್ವಾಮ್ಯದ ಮಾಲೀಕರ ಗಮನಕ್ಕೆ ಬಂದರೆ, ಅವರು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಬಹುದು

ಈ ಪ್ರಕ್ರಿಯೆಯ ಭಾಗವಾಗಿ, ಅವರು ಕೃತಿಸ್ವಾಮ್ಯ-ಸುರಕ್ಷಿತ ಕಂಟೆಂಟ್ ತೆಗೆದುಹಾಕುವಿಕೆಯನ್ನು ನಿಗದಿಪಡಿಸುವ ಆಯ್ಕೆಯನ್ನು ಆರಿಸಬಹುದು. ಇದರರ್ಥ, ತೆಗೆದುಹಾಕುವಿಕೆ ವಿನಂತಿಯನ್ನು YouTube ಮೌಲ್ಯೀಕರಿಸಿದ ನಂತರ, ಅಪ್‌ಲೋಡ್ ಮಾಡಿದವರ ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ವಿಧಿಸುವ ಮುನ್ನ ಆ ವಿಷಯದ ಕುರಿತು ಕ್ರಮ ತೆಗೆದುಕೊಳ್ಳಲು ಅವರಿಗೆ 7 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ಈ 7 ದಿನಗಳ ಅವಧಿಯಲ್ಲಿ, ಅಪ್‌ಲೋಡ್ ಮಾಡಿದವರು ಕೆಲವು ವಿಭಿನ್ನ ಕ್ರಮಗಳನ್ನು ತೆಗೆದುಕೊಳ್ಳಬಹುದು:

  • ತಮ್ಮ ವೀಡಿಯೊವನ್ನು ಅಳಿಸುವುದು: 7 ದಿನಗಳ ಅವಧಿ ಮುಗಿಯುವ ಮುನ್ನ ಅಪ್‌ಲೋಡ್ ಮಾಡಿದವರು YouTube ನಿಂದ ತಮ್ಮ ವೀಡಿಯೊವನ್ನು ತೆಗೆದುಹಾಕಿದರೆ, ಆಗ ಅವರ ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ವಿಧಿಸಲಾಗುವುದಿಲ್ಲ.
    • 7 ದಿನಗಳ ಅವಧಿ ಮುಗಿದ ನಂತರ, ವೀಡಿಯೊವನ್ನು ತೆಗೆದುಹಾಕುವುದರಿಂದ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಬಗೆಹರಿಸಲಾಗುವುದಿಲ್ಲ. 
  • ಕ್ಲೇಮುದಾರರನ್ನು ಸಂಪರ್ಕಿಸುವುದು: ಅಪ್‌ಲೋಡ್ ಮಾಡಿದವರು, ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಿದ ವ್ಯಕ್ತಿಯನ್ನು (ಕ್ಲೇಮುದಾರರನ್ನು) ಸಂಪರ್ಕಿಸಬಹುದು ಹಾಗೂ ಅವರ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಹಿಂತೆಗೆದುಕೊಳ್ಳುವಂತೆ ಅವರನ್ನು ವಿನಂತಿಸಬಹುದು.
  • ಮೇಲ್ಮನವಿಯನ್ನು ರದ್ದುಗೊಳಿಸುವುದು: ನಿಗದಿತ ತೆಗೆದುಹಾಕುವಿಕೆ ವಿನಂತಿಯು, ಅಪ್‌ಲೋಡ್ ಮಾಡಿದವರು Content ID ಕ್ಲೇಮ್ ವಿರುದ್ಧ ಮೇಲ್ಮನವಿ ಸಲ್ಲಿಸಿದ ಪರಿಣಾಮವಾಗಿದ್ದರೆ, ಅಪ್‌ಲೋಡ್ ಮಾಡಿದವರು 7 ದಿನಗಳ ಅವಧಿಯೊಳಗೆ ತಮ್ಮ ಮೇಲ್ಮನವಿಯನ್ನು ರದ್ದುಗೊಳಿಸಬಹುದು.
  • ಏನನ್ನೂ ಮಾಡದಿರುವುದು: ಅಪ್‌ಲೋಡ್ ಮಾಡಿದವರು, 7 ದಿನಗಳ ಅವಧಿ ಮುಗಿದ ನಂತರ ತೆಗೆದುಹಾಕುವಿಕೆ ವಿನಂತಿಯು ಜಾರಿಗೆ ಬರುವವರೆಗೆ ಕಾಯಬಹುದು. ಆ ಸಮಯದಲ್ಲಿ, YouTube ನಿಂದ ಕಂಟೆಂಟ್ ಅನ್ನು ತೆಗೆದುಹಾಕಲಾಗುತ್ತದೆ ಮತ್ತು ಅಪ್‌ಲೋಡ್ ಮಾಡಿದವರ ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ವಿಧಿಸಲಾಗುತ್ತದೆ. ನಂತರ, ಅಪ್‌ಲೋಡ್ ಮಾಡಿದವರು, ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಬಗೆಹರಿಸಬೇಕೆ ಎಂಬುದನ್ನು ಹಾಗೂ ಹೇಗೆ ಬಗೆಹರಿಸಿಕೊಳ್ಳಲು ಬಯಸುತ್ತಾರೆ ಎಂಬುದನ್ನು ಆಯ್ಕೆಮಾಡಬಹುದು.
    • ಕಂಟೆಂಟ್‌ನ ಮೇಲೆ ಒಂದಕ್ಕಿಂತ ಹೆಚ್ಚಿನ Content ID ಕ್ಲೇಮ್ ಅಥವಾ ತೆಗೆದುಹಾಕುವಿಕೆ ವಿನಂತಿಯು ಪರಿಣಾಮ ಬೀರಬಹುದು, ಆದರೆ ಕಂಟೆಂಟ್ ಒಂದು ಸಮಯದಲ್ಲಿ ಕೇವಲ ಒಂದು ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಮಾತ್ರ ಪಡೆಯಬಹುದು.

ಈ ಸಮಯದಲ್ಲಿ, ತಮ್ಮ ವೀಡಿಯೊವನ್ನು ತಪ್ಪಾಗಿ ತೆಗೆದುಹಾಕಲಾಗಿದೆ ಎಂದು ಅಪ್‌ಲೋಡ್ ಮಾಡಿದವರು ಭಾವಿಸಿದರೆ, ಅವರು ಪ್ರತಿವಾದಿ ನೋಟಿಫಿಕೇಶನ್ ಅನ್ನು ಸಲ್ಲಿಸಬಹುದು. ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿ ಪ್ರಕ್ರಿಯೆಯ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1313386238235273484
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false