ನಿಮ್ಮ ವೀಡಿಯೊದ ಗುಣಮಟ್ಟವನ್ನು ಬದಲಾಯಿಸಿ

ನಿಮಗೆ ಉತ್ತಮ ವೀಕ್ಷಣೆಯ ಅನುಭವವನ್ನು ನೀಡಲು, ನಿಮ್ಮ ವೀಕ್ಷಣೆಯ ಸ್ಥಿತಿಯ ಆಧಾರದ ಮೇಲೆ ನಿಮ್ಮ ವೀಡಿಯೊ ಸ್ಟ್ರೀಮ್‌ನ ಗುಣಮಟ್ಟವನ್ನು YouTube ಬದಲಾಯಿಸುತ್ತದೆ. ನೀವು ವೀಡಿಯೊಗಳನ್ನು ವೀಕ್ಷಿಸಿದಾಗ ನಿಮ್ಮ ವೀಡಿಯೊದ ಗುಣಮಟ್ಟವು ಬದಲಾಗುವುದನ್ನು ನೀವು ಗಮನಿಸುವುದು ಈ ಕಾರಣಕ್ಕೆ.

ವೀಡಿಯೊ ಗುಣಮಟ್ಟವನ್ನು ನಿರ್ಧರಿಸುವ ಕೆಲವು ಅಂಶಗಳು ಇಲ್ಲಿವೆ:

  1. ನಿಮ್ಮ ಇಂಟರ್ನೆಟ್ ಸಂಪರ್ಕದ ವೇಗ.
  2. ವೀಡಿಯೊ ಪ್ಲೇಯರ್/ಸ್ಕ್ರೀನ್ ಗಾತ್ರ: ಉತ್ತಮ ಗುಣಮಟ್ಟದ ವೀಡಿಯೊಗಳು ಸಾಮಾನ್ಯವಾಗಿ ಸ್ಕ್ರೀನ್ ಗಳಲ್ಲಿ ಉತ್ತಮವಾಗಿ ಪ್ಲೇ ಆಗುತ್ತವೆ.
  3. ಮೂಲ ಅಪ್‌ಲೋಡ್ ಮಾಡಿದ ವೀಡಿಯೊದ ಗುಣಮಟ್ಟ: ವೀಡಿಯೊವನ್ನು ಪ್ರಮಾಣಿತ ವ್ಯಾಖ್ಯಾನದಲ್ಲಿ ರೆಕಾರ್ಡ್ ಮಾಡಿದ್ದರೆ, ಅದು ಹೈ ಡೆಫಿನಿಷನ್‌ನಲ್ಲಿ ಲಭ್ಯವಿರುವುದಿಲ್ಲ.
  4. ನಿಮ್ಮ ಬ್ರೌಸರ್: ಹೊಸ ವಿಡಿಯೋ ಫಾರ್ಮ್ಯಾಟಿಂಗ್ ಅಥವಾ ಗುಣಮಟ್ಟದ ಆಯ್ಕೆಗಳನ್ನು.ಕೆಲ ಬ್ರೌಸರ್ ಗಳು ಬೆಂಬಲಿಸುವುದಿಲ್ಲ.
ಗಮನಿಸಿ: YouTube Premium ನೊಂದಿಗೆ, ನೀವು Apple ಫೋನ್‌ಗಳು ಮತ್ತು ಟ್ಯಾಬ್ಲೆಟ್‌ಗಳಲ್ಲಿ 1080p ಪ್ರೀಮಿಯಂನಲ್ಲಿ ವೀಡಿಯೊಗಳನ್ನು ವೀಕ್ಷಿಸಬಹುದು. YouTube Premium ಸದಸ್ಯರಾಗಿ ಅಥವಾ YouTube Premium ಪ್ರಯೋಜನಗಳ ಕುರಿತು ಇನ್ನಷ್ಟು ತಿಳಿಯಿರಿ.

ವೀಡಿಯೊ ಗುಣಮಟ್ಟವನ್ನು ಬದಲಾಯಿಸಿ

ಕಂಪ್ಯೂಟರ್, ಟಿವಿ ಅಥವಾ ಮೊಬೈಲ್ ಸಾಧನದಲ್ಲಿ ನೀವು ವೀಕ್ಷಿಸುತ್ತಿರುವ ಯಾವುದೇ ವೀಡಿಯೊದ ವೀಡಿಯೊ ಗುಣಮಟ್ಟವನ್ನು ನೀವು ಮ್ಯಾನ್ಯುಯಲ್ ಆಗಿ ಬದಲಾಯಿಸಬಹುದು.

How to change the quality of a video you’re watching

ಟಿವಿಯಲ್ಲಿ ನಿಮ್ಮ ವೀಡಿಯೊ ಗುಣಮಟ್ಟವನ್ನು ಬದಲಾಯಿಸಿ:

  1. ವಿಡಿಯೋ ಪ್ಲೇಯರ್ ನಲ್ಲಿ ಸೆಟ್ಟಿಂಗ್ ಗಳು ಅನ್ನು ಆಯ್ಕೆ ಮಾಡಿ.
  2. ಗುಣಮಟ್ಟವನ್ನು ಆಯ್ಕೆಮಾಡಿ
  3. ನಿಮ್ಮ ಆದ್ಯತೆಯ ವೀಡಿಯೊ ಗುಣಮಟ್ಟವನ್ನು ಆಯ್ಕೆಮಾಡಿ.
ಗಮನಿಸಿ: ಕೆಲವು ಉನ್ನತ-ಗುಣಮಟ್ಟದ ಫಾರ್ಮ್ಯಾಟ್‌ಗಳು (ಉದಾಹರಣೆಗೆ, 1080p, 4K) ಎಲ್ಲಾ ಸಾಧನಗಳಿಗೆ ಲಭ್ಯವಿಲ್ಲದಿರಬಹುದು, ಏಕೆಂದರೆ ಅವುಗಳು ಇತ್ತೀಚಿನ ವೀಡಿಯೊ ಕುಗ್ಗಿಸುವಿಕೆ ತಂತ್ರಜ್ಞಾನವನ್ನು (VP9) ಬೆಂಬಲಿಸುವುದಿಲ್ಲ.

ನಿಮ್ಮ ಕಂಪ್ಯೂಟರ್‌ನಲ್ಲಿ ವೀಕ್ಷಿಸುತ್ತಿರುವಾಗ ವೀಡಿಯೊ ಗುಣಮಟ್ಟವನ್ನು ಬದಲಾಯಿಸಲು:

  1. ವೀಡಿಯೊ ಪ್ಲೇಯರ್‌ನಲ್ಲಿ, ಸೆಟ್ಟಿಂಗ್ ಗಳುಆಯ್ಕೆ ಮಾಡಿ.
  2. ಗುಣಮಟ್ಟಅನ್ನು ಕ್ಲಿಕ್ ಮಾಡಿ
  3. ನಿಮ್ಮ ಆದ್ಯತೆಯ ವೀಡಿಯೊ ಗುಣಮಟ್ಟವನ್ನು ಆಯ್ಕೆಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
2885052646288421357
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false