YouTube ನಲ್ಲಿ ಗೇಮಿಂಗ್ ಕಂಟೆಂಟ್ ಅನ್ನು ಬ್ರೌಸ್ ಮಾಡಿ

YouTube ನಲ್ಲಿ ಹೊಸ ಗೇಮಿಂಗ್ ಕಂಟೆಂಟ್ ಅನ್ನು ಹುಡುಕಲು ಗೇಮಿಂಗ್ ಡೆಸ್ಟಿನೇಷನ್ ಪುಟವು ಉತ್ತಮ ಸ್ಥಳವಾಗಿದೆ. ನೀವು ಮೊಬೈಲ್‌ನಲ್ಲಿ ಎಕ್ಸ್‌ಪ್ಲೋರ್ ಟ್ಯಾಬ್ ಮೂಲಕ ಅಥವಾ ನಿಮ್ಮ ಕಂಪ್ಯೂಟರ್‌ನಲ್ಲಿ ಬದಿಯ ಮೆನು ಮೂಲಕ, ಗೇಮಿಂಗ್ ಡೆಸ್ಟಿನೇಷನ್ ಪುಟಕ್ಕೆ ಭೇಟಿ ನೀಡಬಹುದು. 

ಗೇಮಿಂಗ್ ಡೆಸ್ಟಿನೇಷನ್ ಪುಟದಲ್ಲಿ, ಟ್ರೆಂಡಿಂಗ್ ಗೇಮಿಂಗ್ ವೀಡಿಯೊಗಳು, ಟಾಪ್ ಲೈವ್ ಸ್ಟ್ರೀಮ್‌ಗಳು ಮತ್ತು ಟಾಪ್ ಲೈವ್ ಆಟಗಳಿಗಾಗಿ ಹಲವಾರು ವಿಭಾಗಗಳಿವೆ (ಅಲ್ಲಿ ನೀವು ಆ ಗೇಮ್ ಅನ್ನು ಒಳಗೊಂಡ ಬಹಳಷ್ಟು ಕಂಟೆಂಟ್‌ಗಳನ್ನು ಎಕ್ಸ್‌ಪ್ಲೋರ್ ಮಾಡಬಹುದು). ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳಿಂದ ಇತ್ತೀಚಿನ ಗೇಮಿಂಗ್ ವೀಡಿಯೊಗಳಿಗಾಗಿ ಒಂದು ವಿಭಾಗವೂ ಇದೆ.

ಗೇಮಿಂಗ್ ಉದಯೋನ್ಮುಖ ರಚನೆಕಾರರನ್ನು ಗೇಮಿಂಗ್ ಡೆಸ್ಟಿನೇಷನ್ ಪುಟದಲ್ಲಿ ಕಾಣಬಹುದು. ಪ್ರತಿ ವಾರ, ಉದಯೋನ್ಮುಖ ಗೇಮಿಂಗ್ ರಚನೆಕಾರರನ್ನು ಇಲ್ಲಿ ಮತ್ತು ಗೇಮಿಂಗ್ ಟ್ರೆಂಡಿಂಗ್ ಟ್ಯಾಬ್‌ನಲ್ಲಿ ಎದ್ದುಗಾಣಿಸಲಾಗುತ್ತದೆ 

ಹೆಚ್ಚಿನ ಗೇಮಿಂಗ್ ಕಂಟೆಂಟ್‌ಗಾಗಿ, YouTube ಸ್ವಯಂ ರಚಿಸುವ ಗೇಮ್ ಪುಟ್‌ಗಳನ್ನು ನೀವು ಎಕ್ಸ್‌ಪ್ಲೋರ್ ಮಾಡಬಹುದು. ನೀವು ಯಾವುದೇ ಗೇಮಿಂಗ್ ವೀಡಿಯೊವನ್ನು ವೀಕ್ಷಿಸುತ್ತಿರುವಾಗ ವೀಡಿಯೊದ ವಿವರಣೆಯ ಕೆಳಭಾಗದಲ್ಲಿ ಗೇಮ್ ಪುಟಗಳನ್ನು ಕಾಣಬಹುದು. ಗೇಮ್ ಪುಟಗಳು ವಿವಿಧ ವಿಭಾಗಗಳನ್ನು ಹೊಂದಿದ್ದು, ಅಲ್ಲಿ YouTube ನಾದ್ಯಂತ ಕಂಟೆಂಟ್ ಅನ್ನು (ಉದಾ, ಜನಪ್ರಿಯ ವೀಡಿಯೊಗಳು ಮತ್ತು ಲೈವ್ ಸ್ಟ್ರೀಮ್‌ಗಳು) ಸಂಗ್ರಹಿಸಲಾಗುತ್ತದೆ. ಗೇಮ್ ಪುಟಗಳಲ್ಲಿ, ಅದೇ ಪ್ರಕಾಶಕರು ಅಥವಾ ಡೆವಲಪರ್‌ಗಳು ಹೊರತಂದಿರುವ ಇತರ ಗೇಮ್‌ಗಳನ್ನು ಸಹ ನೀವು ಎಕ್ಸ್‌ಪ್ಲೋರ್ ಮಾಡಬಹುದು. ಗೇಮ್ ಪುಟಕ್ಕೆ ಸಬ್‌ಸ್ಕ್ರೈಬ್ ಮಾಡುವುದರಿಂದ, ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳ ಪಟ್ಟಿಯಲ್ಲಿ ಅದಕ್ಕೆ ಒಂದು ಲಿಂಕ್ ಅನ್ನು ಸೇರಿಸುತ್ತದೆ.

 

ಗೇಮ್ ಪುಟವನ್ನು ಯಾವಾಗ ಸ್ವಯಂ ರಚಿಸಬೇಕೆಂದು YouTube ಹೇಗೆ ನಿರ್ಧರಿಸುತ್ತದೆ?

ಸೈಟ್‌ನಲ್ಲಿ ಗೇಮ್ ಗಮನಾರ್ಹವಾಗಿ ಉಪಸ್ಥಿತಿಯನ್ನು ಹೊಂದಿರುವಾಗ ಸ್ವಯಂ-ರಚಿಸಿದ ಗೇಮ್ ಪುಟವನ್ನು ರಚಿಸಲಾಗುತ್ತದೆ. ಒಂದು ವೇಳೆ ಸ್ವಯಂ-ರಚಿಸಿದ ಗೇಮ್ ಪುಟವನ್ನು ಗೇಮ್ ಹೊಂದಿಲ್ಲದಿದ್ದರೆ, ಈ ಕಾರಣವಿರಬಹುದು:

  • ಗೇಮ್‌ನಲ್ಲಿ ಕೆಲವು ವೀಡಿಯೊಗಳಷ್ಟೇ ಇರಬಹುದು.
  • ಈ ಗೇಮ್‌ನಲ್ಲಿ ವೀಡಿಯೊಗಳಿಗಾಗಿ ಸಾಕಷ್ಟು ವೀಕ್ಷಣೆಗಳಿಲ್ಲದಿರಬಹುದು.
  • ಗೇಮ್‌ನಲ್ಲಿರುವ ವೀಡಿಯೊಗಳು YouTube ನ ಗುಣಮಟ್ಟದ ಥ್ರೆಶೋಲ್ಡ್ ಅನ್ನು ಪೂರೈಸದಿರಬಹುದು.
ಯಾವ ಕಂಟೆಂಟ್ ಅನ್ನು ಸ್ವಯಂ-ರಚಿಸಿದ ಗೇಮ್ ಪುಟದಲ್ಲಿ ಸೇರಿಸಬೇಕು ಎಂಬುದನ್ನು YouTube ಹೇಗೆ ನಿರ್ಧರಿಸುತ್ತದೆ?

ಅಲ್ಗಾರಿದಮ್‌ಗಳನ್ನು ಬಳಸಿಕೊಂಡು, ವೀಡಿಯೊದಲ್ಲಿನ ಪ್ರಮುಖ ವಿಷಯಗಳನ್ನು YouTube ಗುರುತಿಸುತ್ತದೆ ಮತ್ತು ಗೇಮ್‌ಗಾಗಿ ವೀಡಿಯೊ ಸಂಗ್ರಹಣೆಗಳನ್ನು ಅಭಿವೃದ್ಧಿಪಡಿಸಲು ಆ ಮಾಹಿತಿಯನ್ನು ಬಳಸುತ್ತದೆ. ಈ ಗೇಮ್ ಪುಟಗಳು YouTube ನ ಭಾಗದಲ್ಲಿ ಯಾವುದೇ ಸಂಪಾದಕೀಯ ಅಭಿಪ್ರಾಯವನ್ನು ತಿಳಿಸುವುದಿಲ್ಲ.

ಸ್ವಯಂ-ರಚಿಸಿದ ಗೇಮ್ ಪುಟದಲ್ಲಿ, ನಾನು ನನ್ನ ಚಾನಲ್‌ಗಳು ಅಥವಾ ವೀಡಿಯೊಗಳನ್ನು ಕಾಣಿಸುವಂತೆ ಮಾಡುವುದು ಹೇಗೆ?

ವೀಡಿಯೊವನ್ನು ಅನ್ವೇಷಿಸಲು ಪ್ರಮಾಣಿತವಾದ ಉತ್ತಮ ಅಭ್ಯಾಸಗಳನ್ನು ಅನುಸರಿಸುವುದನ್ನು ಹೊರತುಪಡಿಸಿ ನೀವು ಬೇರೆ ಏನನ್ನೂ ಮಾಡಬೇಕಾಗಿಲ್ಲ: ಉತ್ತಮ ಶೀರ್ಷಿಕೆ ಮತ್ತು ವಿವರಣೆಯನ್ನು ಹೊಂದಿರಿ.

ಪ್ರಮಾಣಕ್ಕಿಂತ ಹೆಚ್ಚಾಗಿ ಟ್ಯಾಗ್‌ಗಳ ಗುಣಮಟ್ಟದ ಮೇಲೆ ಗಮನಹರಿಸಲು ಮರೆಯದಿರಿ. ಮತ್ತು ವೀಕ್ಷಕರನ್ನು ಎಂದಿಗೂ ದಾರಿತಪ್ಪಿಸಲು ಪ್ರಯತ್ನಿಸಬೇಡಿ — ಹೀಗೆ ಮಾಡಿದರೆ, YouTube ನ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಂತೆ.

ನಿಮ್ಮ ಗೇಮಿಂಗ್ ವೀಡಿಯೊವು ತಪ್ಪಾದ ವಿಷಯದ ಚಾನಲ್‌ನಲ್ಲಿ ತೋರಿಸಿದರೆ, ಅದರ ಶೀರ್ಷಿಕೆ, ವಿವರಣೆ ಮತ್ತು ವರ್ಗವನ್ನು ಪರಿಶೀಲಿಸಿ. YouTube Studio ದಲ್ಲಿ, “ಗೇಮಿಂಗ್” ವರ್ಗವನ್ನು ಆಯ್ಕೆ ಮಾಡಲಾಗಿದೆ ಮತ್ತು ನೀವು ಸೂಕ್ತವಾದ ಗೇಮ್ ಅನ್ನು ಆಯ್ಕೆ ಮಾಡಿದ್ದೀರಿ ಎಂದು ಖಚಿತವಾಗಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
18143897215566470159
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false