Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಹೊಸತೇನಿದೆ

ಇತ್ತೀಚಿನ ಅಪ್‌ಡೇಟ್‌ಗಳು

ಜನವರಿ 2024
  • ಅಸೆಟ್ ಮೆಟಾಡೇಟಾ ಪುಟದಲ್ಲಿ ಕಲಾವಿದರ ISNI ಹುಡುಕಾಟ: Studio ಕಂಟೆಂಟ್ ಮ್ಯಾನೇಜರ್ ಬಳಕೆದಾರ ಇಂಟರ್‌ಫೇಸ್‌ನಲ್ಲಿನ (UI) ಅಸೆಟ್ ಮೆಟಾಡೇಟಾ ಪುಟದಲ್ಲಿ ಕಲಾವಿದರ ಹೆಸರನ್ನು ನಮೂದಿಸುವುದರಿಂದ ISNI ಡೇಟಾಬೇಸ್‌ನಿಂದ ಅವರ ಅಂತರಾಷ್ಟ್ರೀಯ ಗುಣಮಟ್ಟದ ಹೆಸರು ಗುರುತಿಸುವಿಕೆಗಳೊಂದಿಗೆ (ISNIs) ಹೊಂದಾಣಿಕೆಯಾಗುವ ಹೆಸರುಗಳ ಪಟ್ಟಿಯನ್ನು ಪಡೆಯಲಾಗುತ್ತದೆ. ಇದು ಐಚ್ಛಿಕವಾಗಿದೆ ಎಂಬುದನ್ನು ಗಮನಿಸಿ: ಕಲಾವಿದರ ಹೆಸರನ್ನು ಟೈಪ್ ಮಾಡಿ ನಂತರ Enter ಅನ್ನು ಒತ್ತುವುದರಿಂದ ಪಾಪ್-ಅಪ್ ಬಾಕ್ಸ್ ತೆರೆಯುತ್ತದೆ, ಅಲ್ಲಿ ನೀವು ಅವರ ISNI ಇಲ್ಲದೆಯೇ ಕಲಾವಿದರ ಹೆಸರನ್ನು ಸೇವ್ ಮಾಡಬಹುದು. ಇನ್ನಷ್ಟು ತಿಳಿಯಿರಿ.

ಅಕ್ಟೋಬರ್ 2023 

  • YouTube ಜಾಹೀರಾತು ಫಾರ್ಮ್ಯಾಟ್ ಕಂಟ್ರೋಲ್‌ಗಳಿಗೆ ಬದಲಾವಣೆಗಳು: ಅಪ್‌ಲೋಡ್ ಮಾಡುವಾಗ, ಈಗ ಆ್ಯಡ್‌ಗಳನ್ನು ಆನ್ ಮಾಡುವುದು ಎಂದರೆ ಪ್ರೀ-ರೋಲ್‌, ಪೋಸ್ಟ್-ರೋಲ್, ಸ್ಕಿಪ್ ಮಾಡಬಹುದಾದ ಅಥವಾ ಸ್ಕಿಪ್ ಮಾಡಲಾಗದ ಆ್ಯಡ್‌ಗಳು ನಿಮ್ಮ ದೀರ್ಘ ರೂಪದ ವೀಡಿಯೊದ ಮೊದಲು ಅಥವಾ ನಂತರ ಕಾಣಿಸಿಕೊಳ್ಳಬಹುದು. ಇನ್ನಷ್ಟು ತಿಳಿಯಿರಿ.
ಸೆಪ್ಟೆಂಬರ್ 2023
  • ಕಂಟೆಂಟ್ ಡೆಲಿವರಿ ಟೆಂಪ್ಲೇಟ್ ಮೂಲಕ ರೆಫರೆನ್ಸ್ ಸೆಗ್ಮೆಂಟ್‌ಗಳನ್ನು ಹೊರತುಪಡಿಸಿ: Studio ಕಂಟೆಂಟ್ ಮ್ಯಾನೇಜರ್ ಕಂಟೆಂಟ್ ಡೆಲಿವರಿಯಲ್ಲಿ "ರೆಫರೆನ್ಸ್ - ನಿರ್ವಹಣೆ" CSV ಟೆಂಪ್ಲೇಟ್ ಮೂಲಕ ರೆಫರೆನ್ಸ್ ಸೆಗ್ಮೆಂಟ್‌ಗಳನ್ನು ಹೊರತುಪಡಿಸಲು ನಾವು ಹೊಸ ಫೀಚರ್ ಅನ್ನು ಸೇರಿಸುತ್ತಿದ್ದೇವೆ. ಪಾಲುದಾರರು ಈಗ ಬೃಹತ್ ಪ್ರಮಾಣದಲ್ಲಿ ಅಸ್ತಿತ್ವದಲ್ಲಿರುವ ರೆಫರೆನ್ಸ್‌ಗಳಿಗಾಗಿ ಹಸ್ತಚಾಲಿತ ರೆಫರೆನ್ಸ್ ಹೊರತುಪಡಿಸುವಿಕೆಗಳನ್ನು ಸೇರಿಸಬಹುದು, ಬದಲಿಸಬಹುದು ಅಥವಾ ತೆಗೆದುಹಾಕಬಹುದು. ಇನ್ನಷ್ಟು ತಿಳಿಯಿರಿ.

ಆಗಸ್ಟ್ 2023

  • ಕ್ಲೇಮ್‌ ಮಾಡಲಾದ ವೀಡಿಯೊಗಳ ಪಟ್ಟಿಯ ಪುಟದಲ್ಲಿ ಹೊಸ ಸಬ್‌ಸ್ಕ್ರೈಬರ್ ಸಂಖ್ಯೆಯ ಫಿಲ್ಟರ್: Studio ಕಂಟೆಂಟ್ ಮ್ಯಾನೇಜರ್ ಕ್ಲೇಮ್ ಮಾಡಲಾದ ವೀಡಿಯೊಗಳ ಪಟ್ಟಿಯ ಪುಟದಲ್ಲಿರುವ ಹೊಸ ಫಿಲ್ಟರ್, ಈಗ ಚಾನಲ್‌ಗಳ ಸಬ್‌ಸ್ಕ್ರೈಬರ್ ಸಂಖ್ಯೆಯ ಮೂಲಕ ಕ್ಲೇಮ್‌ ಮಾಡಲಾದ ವೀಡಿಯೊಗಳನ್ನು ಫಿಲ್ಟರ್ ಮಾಡುವ ಸಾಮರ್ಥ್ಯವನ್ನು ನೀಡುತ್ತದೆ.

    ಫಿಲ್ಟರ್ ಆಯ್ಕೆಗಳೆಂದರೆ, ಸಬ್‌ಸ್ಕ್ರೈಬರ್ ಸಂಖ್ಯೆ 1K ಗಿಂತ ಕಡಿಮೆ, 1k ಮತ್ತು 100k, 100k ಮತ್ತು 500k, 500k ಮತ್ತು 5M ನಡುವೆ, 5M ಗಿಂತ ಹೆಚ್ಚು. ಸಬ್‌ಸ್ಕ್ರೈಬರ್ ಸಂಖ್ಯೆಯ ಫಿಲ್ಟರ್ ಕುರಿತು ಇನ್ನಷ್ಟು ತಿಳಿಯಿರಿ.
ಜೂನ್ 2023

ಏಪ್ರಿಲ್ 2023

  • ಹೊಸ ಫಿಲ್ಟರ್: ವಿಲೀನಗೊಳಿಸಿದ ಸ್ವತ್ತು: ಸ್ವತ್ತುಗಳು  ಪುಟದಲ್ಲಿ ಹೊಸ "ವಿಲೀನಗೊಳಿಸಿದ ಸ್ವತ್ತು" ಫಿಲ್ಟರ್ ಇದ್ದು, ಅದು ವಿಲೀನಗೊಳಿಸಿದ ಅಥವಾ ವಿಲೀನಗೊಳಿಸದೇ ಇರುವ ಸ್ವತ್ತುಗಳನ್ನು ವೀಕ್ಷಿಸಲು ನಿಮಗೆ ಅನುಮತಿಸುತ್ತದೆ. ಅಸೆಟ್‌ಗಳನ್ನು ಹುಡುಕಲು ಫಿಲ್ಟರ್‌ಗಳನ್ನು ಬಳಸುವುದರ ಕುರಿತು ಇನ್ನಷ್ಟು ತಿಳಿಯಿರಿ.
  • ಸ್ವತ್ತಿನ ವರದಿಗಳು ಈಗ ದಿನವೂ ಲಭ್ಯ: ಸ್ವತ್ತಿನ ವರದಿಗಳು ಈಗ ದೈನಂದಿನ ಆಧಾರದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಲು ಲಭ್ಯ ಇವೆ. ಸ್ವತ್ತಿನ ವರದಿಗಳನ್ನು ವರದಿಗಳು  ಪುಟದ ಸ್ವತ್ತುಗಳು ಟ್ಯಾಬ್‌ನಿಂದ ಡೌನ್‌ಲೋಡ್ ಮಾಡಲಾಗುವುದು. ಡೌನ್‌ಲೋಡ್ ಮಾಡಬಹುದಾದ ವರದಿಗಳನ್ನು ಕುರಿತು ಇನ್ನಷ್ಟು ತಿಳಿಯಿರಿ.

ಫೆಬ್ರವರಿ 2023

  • ಅಸೆಟ್ ಲೇಬಲ್‌ಗಳನ್ನು ಬಳಸಲು ಹೊಸ ವಿಧಾನಗಳು: Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಅಸೆಟ್ ಲೇಬಲ್‌ಗಳನ್ನು ಇನ್ನಷ್ಟು ಸಮರ್ಥವಾಗಿ ಬಳಸುವುದಕ್ಕೆ ನಿಮಗೆ ಸಹಾಯ ಮಾಡಲು ಹೊಸ ಫೀಚರ್‌ಗಳು ಲಭ್ಯವಿವೆ. ಈಗ ನೀವು ಇದನ್ನು ಮಾಡಬಹುದು:
    • 15,000 ವರೆಗೂ ಸ್ವತ್ತಿನ ಲೇಬಲ್‌ಗಳನ್ನು ಹೊಂದಬಹುದು (ಹಿಂದಿನ ಮಿತಿ 5,000 ಆಗಿತ್ತು).
    • ಸ್ವತ್ತಿನ ಲೇಬಲ್‌ಗಳು ಪುಟದಿಂದ ನೇರವಾಗಿ ಸ್ವತ್ತುಗಳನ್ನು ಸ್ವತ್ತಿನ ಲೇಬಲ್‌ಗೆ ಸೇರಿಸಿ. ಹೇಗೆ ಎಂಬುದನ್ನು ತಿಳಿಯಿರಿ.
    • ಸ್ವತ್ತಿನ ಲೇಬಲ್‌ಗಳು ಪುಟದಲ್ಲಿ ಲೇಬಲ್‌ಗಳನ್ನು ರಚಿಸಲಾದ ದಿನಾಂಕವನ್ನು ನೋಡಿ.
    • ಸ್ವತ್ತಿನ ಲೇಬಲ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಅಳಿಸಿ. ಹೇಗೆ ಎಂಬುದನ್ನು ತಿಳಿಯಿರಿ.
    • ಹಸ್ತಚಾಲಿತವಾಗಿ ಕ್ಲೈಮ್ ಮಾಡುವ ಪರಿಕರದಲ್ಲಿ ಸ್ವತ್ತನ್ನು ರಚಿಸುವಾಗ ಸ್ವತ್ತಿನ ಲೇಬಲ್ ಅನ್ನು ಸೇರಿಸಿ ಅಥವಾ ರಚಿಸಿ. ಹೇಗೆ ಎಂಬುದನ್ನು ತಿಳಿಯಿರಿ.
    • ಸ್ವತ್ತಿನ ಲೇಬಲ್‍ಗಳನ್ನು ಮರುಹೆಸರಿಸಿ. ಹೇಗೆ ಎಂಬುದನ್ನು ತಿಳಿಯಿರಿ.
    • ಕ್ಲೇಮ್‌ ಮಾಡಲಾದ ವೀಡಿಯೊ ಎಕ್ಸ್‌ಪೋರ್ಟ್‌ಗಳಲ್ಲಿ ಅಸೆಟ್ ಲೇಬಲ್‌ಗಳನ್ನು ನೋಡಿ.
    • ಸ್ವತ್ತಿನ ಲೇಬಲ್ ಡೇಟಾವನ್ನು .CSV ಫೈಲ್ ಆಗಿ ಎಕ್ಸ್‌ಪೋರ್ಟ್ ಮಾಡಿ. ಹೇಗೆ ಎಂಬುದನ್ನು ತಿಳಿಯಿರಿ.

ಜನವರಿ 2023

  • Studio ಕಂಟೆಂಟ್ ಮ್ಯಾನೇಜರ್ ಡ್ಯಾಶ್‌ಬೋರ್ಡ್ ಕಾರ್ಡ್‌ನಲ್ಲಿ ಹೊಸತೇನಿದೆ: ನಿಮ್ಮ ಡ್ಯಾಶ್‌ಬೋರ್ಡ್  ಪುಟದಲ್ಲಿ, "Studio ಕಂಟೆಂಟ್ ಮ್ಯಾನೇಜರ್‌ನಲ್ಲಿ ಹೊಸತೇನಿದೆ" ಎಂಬ ಶೀರ್ಷಿಕೆಯಿರುವ ಹೊಸ ಕಾರ್ಡ್ ಇರುತ್ತದೆ. ಈ ಕಾರ್ಡ್ Studio ಕಂಟೆಂಟ್ ಮ್ಯಾನೇಜರ್‌ನಲ್ಲಿರುವ ಹೊಸ ಫೀಚರ್‌ಗಳು ಮತ್ತು ಫಂಕ್ಷನಾಲಿಟಿ ಕುರಿತು ತ್ವರಿತ ಅಪ್‌ಡೇಟ್‌ಗಳನ್ನು ತೋರಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ಅಪ್‌ಡೇಟ್‌ಗಳು ಈ ಸಹಾಯ ಕೇಂದ್ರದ ಲೇಖನಕ್ಕೆ ಲಿಂಕ್ ಆಗುತ್ತವೆ.

ಹಿಂದಿನ ಅಪ್‌ಡೇಟ್‌ಗಳು

2022

ಕ್ಲೇಮುದಾರರು ಮತ್ತು ಅಪ್‌ಲೋಡ್‌ ಮಾಡುವವರು ಇಬ್ಬರಿಗೂ Content ID ವಿವಾದ ಮತ್ತು ಮೇಲ್ಮನವಿ ಪ್ರಕ್ರಿಯೆಗೆ ನಾವು ಕೆಲವು ಸುಧಾರಣೆಗಳನ್ನು ಮಾಡುತ್ತಿದ್ದೇವೆ. ಪ್ರಕ್ರಿಯೆಯ ಕುರಿತು ಹಲವು ವರ್ಷಗಳಿಂದ ನಾವು ಪಡೆದುಕೊಂಡ ಪ್ರತಿಕ್ರಿಯೆಯಿಂದ ಈ ಸುಧಾರಣೆಗಳನ್ನು ಮಾಡಲಾಗುತ್ತಿದೆ. ಈ ಬದಲಾವಣೆಗಳು Studio ಕಂಟೆಂಟ್ ಮ್ಯಾನೇಜರ್‌ನಲ್ಲಿರುವ ನಿಮ್ಮ ಕೆಲವು ವರ್ಕ್‌ಫ್ಲೋಗಳ ಮೇಲೆ ಪರಿಣಾಮ ಬೀರಬಹುದು. ಏನು ಬದಲಾಗುತ್ತಿದೆ ಎಂಬುದರ ಮಾಹಿತಿ ಇಲ್ಲಿದೆ:

1. ಸದೃಢ ಅರ್ಹತಾ ಅವಶ್ಯಕತೆಗಳು: ಮೇಲ್ಮನವಿ ಪ್ರಕ್ರಿಯೆಗೆ ಸಂಬಂಧಿಸಿದ ಸಂಭಾವ್ಯ ದುರುಪಯೋಗವನ್ನು ಕಡಿಮೆ ಮಾಡಲು, ಬಳಕೆದಾರರು Content ID ಮೇಲ್ಮನವಿಗಳನ್ನು ಸಲ್ಲಿಸಲು ಅಗತ್ಯವಿರುವ ಅವಶ್ಯಕತೆಗಳನ್ನು ನಾವು ಹೆಚ್ಚಿಸುತ್ತಿದ್ದೇವೆ. ಈಗಿನಿಂದ, ಮೇಲ್ಮನವಿಯನ್ನು ಸಲ್ಲಿಸುವ ಸಾಮರ್ಥ್ಯವನ್ನು ನಮ್ಮ ಸುಧಾರಿತ ಫೀಚರ್‌ನ ಆ್ಯಕ್ಸೆಸ್‌ನಿಂದ ಒದಗಿಸಲಾಗುತ್ತದೆ, ಕಳೆದ ಕೆಲವು ವರ್ಷಗಳಿಂದ ನಾವು ಪರಿಚಯಿಸುತ್ತಿರುವ ಫೀಚರ್‌ಗೆ ಬಳಕೆದಾರರಿಗೆ ಆ್ಯಕ್ಸೆಸ್‌ ಅನ್ನು ಪಡೆಯಲು ಗುರುತಿಸುವಿಕೆಯನ್ನು ಒದಗಿಸುವ ಅಥವಾ ಕಾಲಾನಂತರದಲ್ಲಿ ತಮ್ಮ ಚಾನಲ್ ಇತಿಹಾಸವನ್ನು ನಿರ್ಮಿಸುವ ಅಗತ್ಯವಿದೆ.

ಇದು ಕಡಿಮೆ ಮತ್ತು ಹೆಚ್ಚಿನ ಗುಣಮಟ್ಟದ ಮೇಲ್ಮನವಿಗಳಿಗೆ ಕಾರಣವಾಗಬಹುದಾದ್ದರಿಂದ, Content ID ಯ ಮೇಲ್ಮನವಿಗಳನ್ನು ಪರಿಶೀಲಿಸಲು ನಾವು ಸಮಯಾವಧಿಯನ್ನು 30 ರಿಂದ 7 ದಿನಗಳವರೆಗೆ ಕಡಿಮೆ ಮಾಡುತ್ತಿದ್ದೇವೆ. 7 ದಿನಗಳ ನಂತರ ಯಾವುದೇ ಕ್ರಮವನ್ನು ತೆಗೆದುಕೊಳ್ಳದಿದ್ದರೆ, ಪ್ರಮಾಣಿತ ಮೇಲ್ಮನವಿಯ ಅವಧಿ ಮುಕ್ತಾಯವು ಅನ್ವಯಿಸುತ್ತದೆ. ಆ 7-ದಿನದ ಅವಧಿಯಲ್ಲಿ ಮೇಲ್ಮನವಿಯನ್ನು ಪರಿಶೀಲಿಸದಿದ್ದರೆ, ಆಗಲೂ ನೀವು ಯಾವಾಗ ಬೇಕಾದರೂ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸುವ ಸಾಮರ್ಥ್ಯವನ್ನು ಹೊಂದಿರುತ್ತೀರಿ. ನಿಮ್ಮ ಪರಿಶೀಲನೆಯ ಅಗತ್ಯವಿರುವ ಮೇಲ್ಮನವಿಗಳನ್ನು ನಿಮ್ಮ ಸಮಸ್ಯೆಗಳು ಪುಟದಲ್ಲಿ ನೀವು ಕಾಣಬಹುದು ಮತ್ತು ಮೇಲ್ಮನವಿ ಅವಧಿ ಮುಗಿಯುವ ದಿನಾಂಕದ ಮೂಲಕ ಅವುಗಳನ್ನು ವಿಂಗಡಿಸಬಹುದು.  

2. ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ: ಸುಧಾರಿತ ಫೀಚರ್ ಆ್ಯಕ್ಸೆಸ್ ಮೂಲಕ ಬಳಕೆದಾರರಿಗೆ ನಾವು ಪರಿಚಯಿಸುತ್ತಿರುವ ಇನ್ನೊಂದು ಬದಲಾವಣೆ ಎಂದರೆ “ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ”. ತಮ್ಮ ವೀಡಿಯೊಗಳ ನಿರ್ಬಂಧಿಸಿ ಕ್ಲೈಮ್‌ಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಯೋಚಿಸುತ್ತಿರುವ ಅರ್ಹ ಬಳಕೆದಾರರು ಪ್ರಾರಂಭಿಕ ತಕರಾರು ಹಂತವನ್ನು ಸ್ಕಿಪ್ ಮಾಡುವ ಮತ್ತು ನೇರವಾಗಿ ಮೇಲ್ಮನವಿ ಸಲ್ಲಿಸುವ ಆಯ್ಕೆಯನ್ನು ಹೊಂದಿರುತ್ತಾರೆ. ಮಾನಿಟೈಸ್ ಮತ್ತು ಟ್ರ್ಯಾಕ್ ಕ್ಲೈಮ್‌ಗಳು “ಮೇಲ್ಮನವಿ ಸಲ್ಲಿಸಲು ಎಸ್ಕಲೇಟ್ ಮಾಡಿ” ಎಂಬುದಕ್ಕೆ ಅರ್ಹವಾಗಿರುವುದಿಲ್ಲ, ನಿರ್ಬಂಧಿಸಿ ಕ್ಲೈಮ್‌ಗಳು ಮಾತ್ರ ಅರ್ಹವಾಗಿವೆ ಎಂಬುದನ್ನು ಗಮನಿಸಿ. 

ಮೇಲ್ಮನವಿಗಳಿಗೆ ಇರುವ ನಿಮ್ಮ ಆಯ್ಕೆಗಳು ಉದಾ: ಕ್ಲೈಮ್ ಅನ್ನು ಬಿಡುಗಡೆ ಮಾಡುವುದು ಅಥವಾ ತೆಗೆದುಹಾಕುವಿಕೆ ವಿನಂತಿಯನ್ನು ನೀಡುವುದು ಇಂತಹವು ಬದಲಾಗುತ್ತಿಲ್ಲ ಎಂಬುದನ್ನು ಸಹ ನೆನಪಿಡಿ. 

ನೀವು ನಿರ್ವಹಿಸುವ ಚಾನಲ್‌ಗಳು ಈ ಬದಲಾವಣೆಗಳಿಂದ ಪ್ರಯೋಜನ ಪಡೆಯುತ್ತವೆ, ಏಕೆಂದರೆ ಅವುಗಳು ಈಗ ಮೇಲ್ಮನವಿ ಸಲ್ಲಿಸಲು ಬಯಸುವ ಕ್ಲೇಮ್‌ಗಳಿಗೆ ವೇಗವಾದ ನಿರ್ಣಯದ ಆಯ್ಕೆಗಳನ್ನು ಹೊಂದಿರುತ್ತವೆ.

ಈ ಬದಲಾವಣೆಗಳು ಜುಲೈ 18, 2022 ರಂದು ಜಾರಿಗೆ ಬರಲು ಪ್ರಾರಂಭವಾಗುತ್ತವೆ. ಆ ದಿನಾಂಕದ ನಂತರ ಸಲ್ಲಿಸಲಾದ ವಿವಾದಗಳು ಮತ್ತು ಮೇಲ್ಮನವಿಗಳಿಗೆ ಮಾತ್ರ ಬದಲಾವಣೆಗಳು ಅನ್ವಯಿಸುತ್ತವೆ. ನಿಮ್ಮ ವರ್ಕ್‌ಫ್ಲೋಗಳನ್ನು ಸರಿಹೊಂದಿಸುವುದಕ್ಕೆ ನಿಮಗೆ ಸಮಯವನ್ನು ನೀಡಲು, ಬದಲಾವಣೆಗಳು ಕಾಲಕ್ರಮೇಣ ಜಾರಿಗೆ ಬರುತ್ತವೆ.

 

ಪ್ರತಿಕ್ರಿಯೆ

Studio ಕಂಟೆಂಟ್ ಮ್ಯಾನೇಜರ್ ಫೀಚರ್‌ಗಳ ಕುರಿತು ನಿಮ್ಮ ಫೀಡ್‌ಬ್ಯಾಕ್ ಅನ್ನು ನಮಗೆ ಕಳುಹಿಸಲು ಈ ಹಂತಗಳನ್ನು ಅನುಸರಿಸಿ:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಪ್ರತಿಕ್ರಿಯೆ ಕಳುಹಿಸಿ  ಎಂಬುದನ್ನು ಆಯ್ಕೆ ಮಾಡಿ.
  3. ನಿಮ್ಮ ಪ್ರತಿಕ್ರಿಯೆ ನಮೂದಿಸಿ. ನಿಮ್ಮ ಪ್ರತಿಕ್ರಿಯೆ ಎಷ್ಟು ನಿರ್ದಿಷ್ಟವಾಗಿರುತ್ತದೆಯೋ, ನಮಗೆ ಅದು ಅಷ್ಟೇ ಉಪಯುಕ್ತವಾಗಿರುತ್ತದೆ.
    • ಗಮನಿಸಿ: ನಿಮ್ಮ ಪ್ರತಿಕ್ರಿಯೆಯಲ್ಲಿ ಯಾವುದೇ ಸೂಕ್ಷ್ಮವಾದ ಮಾಹಿತಿಯನ್ನು (ಸಂರಕ್ಷಿಸಬೇಕಾದ ಯಾವುದೇ ಡೇಟಾ) ಸೇರಿಸಬೇಡಿ. ಉದಾಹರಣೆಗೆ, ಪಾಸ್‌ವರ್ಡ್‌ಗಳು, ಕ್ರೆಡಿಟ್ ಕಾರ್ಡ್ ಸಂಖ್ಯೆಗಳು ಅಥವಾ ವೈಯಕ್ತಿಕ ವಿವರಗಳನ್ನು ಸೇರಿಸಬೇಡಿ.
  4. ನೀವು ಸ್ಕ್ರೀನ್‌ಶಾಟ್ ಸೇರಿಸಲು ಬಯಸುತ್ತೀರಾ ಎಂಬುದನ್ನು ಆರಿಸಿ. ನೀವು ಸ್ಕ್ರೀನ್‌ನ ಮೇಲೆ ಯಾವುದೇ ಮಾಹಿತಿಯನ್ನು ಹೈಲೈಟ್ ಮಾಡಬಹುದು ಅಥವಾ ತೋರಿಸುತ್ತಿರುವ ಯಾವುದೇ ಸೂಕ್ಷ್ಮ ಮಾಹಿತಿಯನ್ನು ತೆಗೆದುಹಾಕಬಹುದು.
  5. ಪ್ರತಿಕ್ರಿಯೆ ನಮೂದಿಸುವುದು ಮುಗಿದ ಬಳಿಕ, ಕಳುಹಿಸಿ ಎಂಬುದನ್ನು ಕ್ಲಿಕ್ ಮಾಡಿ.

ನಾವು ಎಲ್ಲಾ ಪ್ರತಿಕ್ರಿಯೆಗಳನ್ನು ಓದುತ್ತೇವೆ ಮತ್ತು ಪರಿಗಣಿಸುತ್ತೇವೆ, ಆದರೆ ಎಲ್ಲಾ ಸಲ್ಲಿಕೆಗಳಿಗೆ ಪ್ರತ್ಯುತ್ತರಿಸಲು ನಮಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ನೆನಪಿಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7421921920239360627
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false