YouTube ನಲ್ಲಿ News

YouTube ನಲ್ಲಿ, ಇತ್ತೀಚಿನ ಸಂಗತಿಗಳ ಕುರಿತು ನೀವು ಅಪ್ ಟು ಡೇಟ್ ಆಗಿರುವುದಕ್ಕೆ ಸಹಾಯ ಮಾಡಲು ಅಧಿಕೃತ ಸುದ್ದಿ ಮೂಲಗಳಿಂದ ಪಡೆದ ಕಂಟೆಂಟ್‌ಗೆ ನಿಮ್ಮನ್ನು ಸಂಪರ್ಕಿಸಲು ನಾವು ಬದ್ಧರಾಗಿದ್ದೇವೆ. ನಿಮ್ಮನ್ನು ಅಪ್ ಟು ಡೇಟ್ ಆಗಿರಿಸುವುದಕ್ಕೆ, ನಮ್ಮ ಸ್ಫೋಟಕ ಸುದ್ದಿ ಶೆಲ್ಫ್‌ನಂತಹ ನಮ್ಮ ನ್ಯೂಸ್ ಫೀಚರ್‌ಗಳಲ್ಲಿ ನಾವು ಅಧಿಕೃತ ಸುದ್ದಿ ಮೂಲಗಳನ್ನು ಮುನ್ನೆಲೆಗೆ ತರುತ್ತೇವೆ. ಯಾವ ಸುದ್ದಿ ಮೂಲಗಳು ಅಧಿಕೃತ ಎಂಬುದನ್ನು ನಾವು ಹೇಗೆ ನಿರ್ಣಯಿಸುತ್ತೇವೆ ಮತ್ತು ನಮ್ಮ ನ್ಯೂಸ್ ಫೀಚರ್‌ಗಳ ಮೂಲಕ ಅವುಗಳ ಕಂಟೆಂಟ್ ಅನ್ನು ಹೇಗೆ ಮುನ್ನೆಲೆಗೆ ತರುತ್ತೇವೆ ಎಂಬುದರ ಕುರಿತು ಈ ಕೆಳಗೆ ನೀವು ಇನ್ನಷ್ಟು ತಿಳಿಯಬಹುದು.

ಅಧಿಕೃತ ಸುದ್ದಿ ಮೂಲಗಳನ್ನು ಮುನ್ನೆಲೆಗೆ ತರುವ ನಮ್ಮ ಇತರ ವಿಧಾನಗಳ ಕುರಿತ ಮಾಹಿತಿಗಾಗಿ ನೀವು ಹುಡುಕುತ್ತಿದ್ದರೆ, ಇಲ್ಲಿ ನೀವು ಇನ್ನಷ್ಟು ಓದಬಹುದು.

ಅಧಿಕೃತ ಸುದ್ದಿ ಮೂಲಗಳು

ನಮ್ಮ ನ್ಯೂಸ್ ಫೀಚರ್‌ಗಳಲ್ಲಿ ತೋರಿಸಲು ಉನ್ನತ ಗುಣಮಟ್ಟದ, ಅಧಿಕೃತ ಸುದ್ದಿ ಮೂಲಗಳನ್ನು ಗುರುತಿಸುವುದಕ್ಕೆ ಸಹಾಯ ಮಾಡಲು, ಚಾನಲ್ ಗುಣಮಟ್ಟ ಮತ್ತು ಇತ್ತೀಚಿನ ಮತ್ತು ಪ್ರಸ್ತುತ ನ್ಯೂಸ್ ಈವೆಂಟ್‌ಗಳ ಚಾನಲ್ ಕವರೇಜ್ ಅನ್ನು ಒಳಗೊಂಡಿರಬಹುದಾದ ಹಲವಾರು ಸಿಗ್ನಲ್‌ಗಳನ್ನು ನಮ್ಮ ಸಿಸ್ಟಂಗಳು ಬಳಸುತ್ತವೆ. ಚಾನಲ್‌ಗಳು Google Search ಫೀಚರ್‌ಗಳ ನೀತಿಗಳು ಮತ್ತು Google News ನ ಕಂಟೆಂಟ್ ನೀತಿಗಳನ್ನು ಸಹ ಅನುಸರಿಸಬೇಕು. 

ನಮ್ಮ ನ್ಯೂಸ್ ಫೀಚರ್‌ಗಳಿಗಾಗಿ ಸುದ್ದಿ ಮೂಲಗಳನ್ನು ಗುರುತಿಸಲು ಬಳಸುವ ಸಿಗ್ನಲ್‌ಗಳನ್ನು ಉತ್ಪಾದಿಸಲು ನಾವು ಮಷಿನ್ ಲರ್ನಿಂಗ್ ತಂತ್ರಗಳನ್ನು ಬಳಸುತ್ತೇವೆ. ಮೂರನೇ ವ್ಯಕ್ತಿ ಮಾನವ ಮೌಲ್ಯಮಾಪಕರಿಂದ ಪಡೆದ ಇನ್‌ಪುಟ್ ಈ ಸಿಗ್ನಲ್‌ಗಳನ್ನು ನಿರಂತರವಾಗಿ ತರಬೇತುಗೊಳಿಸುತ್ತದೆ, ಮೌಲ್ಯಮಾಪನ ಮಾಡುತ್ತದೆ ಮತ್ತು ಸುಧಾರಿಸುತ್ತದೆ.

YouTube News ಫೀಚರ್‌ಗಳು

YouTube ನಲ್ಲಿರುವ ಇತ್ತೀಚಿನ ಸುದ್ದಿಗಳೊಂದಿಗೆ ಸಂಪರ್ಕದಲ್ಲಿರಲು ನಿಮಗೆ ಸಹಾಯ ಮಾಡುವುದಕ್ಕೆ ನಾವು ಹಲವಾರು ಫೀಚರ್‌ಗಳನ್ನು ಅಭಿವೃದ್ದಿಪಡಿಸಿದ್ದೇವೆ. ದಿನದ ಸುದ್ದಿ ಕ್ಷಣಗಳು ಮತ್ತು ಟಾಪ್ ಸ್ಟೋರಿಗಳನ್ನು ಗುರುತಿಸಲು ಈ ಫೀಚರ್‌ಗಳು Google News ನಿಂದ ಪಡೆದ ಸಿಗ್ನಲ್‌ಗಳನ್ನು ಬಳಸುತ್ತವೆ.  

YouTube ನ್ಯೂಸ್ ಫೀಚರ್‌ಗಳಲ್ಲಿರುವ ಕಂಟೆಂಟ್ ಅಧಿಕೃತ ಸುದ್ದಿ ಮೂಲಗಳಿಂದ ಬರುತ್ತದೆ. ಕಾಣಿಸಿಕೊಳ್ಳುವ ನಿರ್ದಿಷ್ಟ ವೀಡಿಯೊಗಳನ್ನು ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬಹುದಾದ ಆದರೆ ಅವುಗಳಿಗೆ ಸೀಮಿತವಾಗದ, ಹಲವಾರು ಸಿಗ್ನಲ್‌ಗಳನ್ನು ಆಧರಿಸಿ ಅಲ್ಗಾರಿದಮ್ ವಿಧಾನದಲ್ಲಿ ಉತ್ಪಾದಿಸಲಾಗುತ್ತದೆ:

  • ಸ್ಥಳೀಯ ಪ್ರಸ್ತುತತೆ ಮತ್ತು ಭಾಷೆ
  • ಸುದ್ದಿಯ ವಿಷಯ ಅಥವಾ ಈವೆಂಟ್‌ಗೆ ಇರುವ ಪ್ರಸ್ತುತತೆ
  • ಕಂಟೆಂಟ್‌ನ ತಾಜಾತನ
  • ಲೈವ್ ಸ್ಟ್ರೀಮ್‌ಗಳು
  • ವರದಿಗಾರಿಕೆಯ ಉದ್ದೇಶ ಅಥವಾ ಪತ್ರಿಕೋದ್ಯಮ ಸಂದರ್ಭದ ವೀಡಿಯೊಗಳು 
  • YouTube ನ ಪ್ರಮಾಣಿತ ಶಿಫಾರಸು ಸಿಗ್ನಲ್‌ಗಳು
  • Google News ನಲ್ಲಿ ಕಾಣಿಸಿಕೊಳ್ಳುವ ಕಂಟೆಂಟ್ ಹೊಂದಿರುವ ವೆಬ್‌ಸೈಟ್‌ಗಳ ಜೊತೆಗಿನ ಸಹಯೋಗ

ಈ ಕೆಳಗಿನ ಪ್ರತ್ಯೇಕ YouTube ನ್ಯೂಸ್ ಫೀಚರ್‌ಗಳು ಎಲ್ಲಾ ದೇಶಗಳು/ಪ್ರದೇಶಗಳು ಹಾಗೂ ಭಾಷೆಗಳಲ್ಲಿ ಲಭ್ಯವಿಲ್ಲದಿರಬಹುದು. ಈ ಫೀಚರ್‌ಗಳು ಹೆಚ್ಚು ದೇಶಗಳು/ಪ್ರದೇಶಗಳು ಮತ್ತು ಭಾಷೆಗಳಲ್ಲಿ ದೊರಕುವಂತೆ ಮಾಡಲು ನಾವು ಕಾರ್ಯನಿರ್ವಹಿಸುತ್ತಿದ್ದೇವೆ.

ಹೋಮ್ ಪೇಜ್‌ನ ಸ್ಫೋಟಕ ಸುದ್ದಿ ಶೆಲ್ಫ್

ಪ್ರಮುಖವಾದ ನ್ಯೂಸ್ ಈವೆಂಟ್ ಇದ್ದಾಗ. YouTube ಹೋಮ್ ಪೇಜ್‌ನಲ್ಲಿ ಸ್ಫೋಟಕ ಸುದ್ದಿ ಶೆಲ್ಫ್ ಕಾಣಿಸಿಕೊಳ್ಳಬಹುದು. ಪ್ರಮುಖ ನ್ಯೂಸ್ ಈವೆಂಟ್‌ಗಳ ಉದಾಹರಣೆಗಳು ಬೃಹತ್-ಪ್ರಮಾಣದ ಸಾವುನೋವುಗಳನ್ನು ಅಥವಾ ಕ್ಷಿಪ್ರ ರಾಜಕೀಯ ಘಟನೆಗಳನ್ನು ಒಳಗೊಂಡಿರಬಹುದು. ಸೈನ್ ಇನ್ ಆಗಿರುವ 18 ವರ್ಷ ಮತ್ತು ಅದಕ್ಕೂ ಹೆಚ್ಚಿನ ವಯೋಮಾನದ ಬಳಕೆದಾರರಿಗೆ ಶೆಲ್ಫ್ ಕಾಣಿಸಿಕೊಳ್ಳುತ್ತದೆ. ನೀವು ಈ ಶೆಲ್ಫ್‌ನಲ್ಲಿ ಆಸಕ್ತಿ ಹೊಂದಿರದಿದ್ದರೆ, ಹೋಮ್ ಪೇಜ್‌ನಲ್ಲಿ ಸ್ಫೋಟಕ ಸುದ್ದಿ ಶೆಲ್ಫ್ ಅನ್ನು ನೀವು ವಜಾಗೊಳಿಸಬಹುದು. 

Search ನಲ್ಲಿ ಟಾಪ್ ನ್ಯೂಸ್ ಶೆಲ್ಫ್

ನೀವು YouTube ನಲ್ಲಿ ನಿರ್ದಿಷ್ಟ ನ್ಯೂಸ್ ಸ್ಟೋರಿಗಾಗಿ ಹುಡುಕಿದರೆ, ನಿಮ್ಮ ಹುಡುಕಾಟದ ಫಲಿತಾಂಶಗಳಲ್ಲಿ ನೀವು ಟಾಪ್ ನ್ಯೂಸ್ ಶೆಲ್ಫ್ ಅನ್ನು ಗಮನಿಸಬಹುದು. ಅದು ದಿನದ ಟಾಪ್ ನ್ಯೂಸ್ ಸ್ಟೋರಿಗಳಲ್ಲಿ ಒಂದಾಗಿದ್ದರೆ, ಆ ನ್ಯೂಸ್ ಸ್ಟೋರಿಗೆ ಸಂಬಂಧಿಸಿದ ಕಂಟೆಂಟ್ ಅನ್ನು ಟಾಪ್ ನ್ಯೂಸ್ ಶೆಲ್ಫ್ ತೋರಿಸುತ್ತದೆ. ವಯಸ್ಸನ್ನು ಲೆಕ್ಕಿಸದೇ ಟಾಪ್ ನ್ಯೂಸ್ ಶೆಲ್ಫ್ ಕಾಣಿಸಿಕೊಳ್ಳುತ್ತದೆ ಮತ್ತು ಅದನ್ನು ವಜಾಗೊಳಿಸಲು ಸಾಧ್ಯವಿಲ್ಲ.  

ನಿಮ್ಮ ಹೋಮ್ ಪೇಜ್‌ನ ಟಾಪ್ ನ್ಯೂಸ್ ಶೆಲ್ಫ್

ನೀವು YouTube ನಲ್ಲಿ ಆಗಾಗ ನ್ಯೂಸ್ ವೀಕ್ಷಿಸುತ್ತಿದ್ದರೆ ಅಥವಾ ಹುಡುಕುತ್ತಿದ್ದರೆ, ನಿಮ್ಮ ಹೋಮ್ ಪೇಜ್‌ನಲ್ಲಿ ಟಾಪ್ ನ್ಯೂಸ್ ಶೆಲ್ಫ್ ಕಾಣಿಸಬಹುದು. ಟಾಪ್ ನ್ಯೂಸ್ ಶೆಲ್ಫ್ ದಿನದ ಟಾಪ್ ನ್ಯೂಸ್ ಸ್ಟೋರಿಗಳಿಗೆ ಸಂಬಂಧಿಸಿದ ಕಂಟೆಂಟ್ ಅನ್ನು ಒಳಗೊಂಡಿರುತ್ತದೆ. ಈ ಶೆಲ್ಫ್ ಸೈನ್ ಇನ್ ಆಗಿರುವ ಬಳಕೆದಾರರಿಗೆ ವಯಸ್ಸನ್ನು ಪರಿಗಣಿಸದೇ ಕಾಣಿಸಿಕೊಳ್ಳುತ್ತದೆ.

YouTube.com/news

YouTube.com/news ದಿನದ ಟಾಪ್ ನ್ಯೂಸ್ ಸ್ಟೋರಿಗಳು ಮತ್ತು ವೀಡಿಯೊಗಳನ್ನು ಪ್ರಮುಖವಾಗಿ ತೋರಿಸುತ್ತದೆ. youtube.com/news ನಲ್ಲಿ, ನೀವು ಕೆಲವು ಪ್ರಯೋಗಾತ್ಮಕ ಫೀಚರ್‌ಗಳನ್ನು ಸಹ ಗಮನಿಸಬಹುದು. ಈ ಪ್ರಯೋಗಗಳು ವಿವಿಧ ಫಾರ್ಮ್ಯಾಟ್‌ಗಳಾದ್ಯಂತದ ಬೇರೆ ಬೇರೆ ಸುದ್ದಿ ಮೂಲಗಳಿಂದ ಪಡೆದ ಕಂಟೆಂಟ್‌ಗೆ ನಿಮ್ಮನ್ನು ಸಂಪರ್ಕಿಸಬಹುದು. 

Search ನಲ್ಲಿ ನಡೆಯುತ್ತಿರುವ ಸುದ್ದಿ ಮಾಹಿತಿ ಪ್ಯಾನೆಲ್

ನೀವು ಪ್ರಮುಖವಾದ ಸ್ಫೋಟಕ ಸುದ್ದಿ ಈವೆಂಟ್‌ಗಾಗಿ ಹುಡುಕಿದಾಗ, ವಿವಿಧ ಸುದ್ದಿ ಮೂಲಗಳಿಂದ ಪ್ರಸ್ತುತ ನಡೆಯುತ್ತಿರುವ ನ್ಯೂಸ್ ಸ್ಟೋರಿಗಳನ್ನು ಪ್ರಮುಖವಾಗಿ ತೋರಿಸುವ ಮಾಹಿತಿ ಪ್ಯಾನೆಲ್ ಕಾಣಿಸಿಕೊಳ್ಳಬಹುದು. ಮಾಹಿತಿ ಪ್ಯಾನೆಲ್ ನ್ಯೂಸ್ ವೆಬ್‌ಸೈಟ್‌ಗಳಿಗೆ ಸಹ ಸಂಪರ್ಕಿಸುತ್ತದೆ, ಹಾಗಾಗಿ ಈವೆಂಟ್ ಕುರಿತು ನೀವು ಪೂರ್ಣ ಲೇಖನವನ್ನು ಸುಲಭವಾಗಿ ಆ್ಯಕ್ಸೆಸ್ ಮಾಡಬಹುದು ಮತ್ತು ಓದಬಹುದು. ಈ ನ್ಯೂಸ್ ವೆಬ್‌ಸೈಟ್‌ಗಳು ಮೇಲೆ ವಿವರಿಸಲಾದ ಅರ್ಹತೆಯ ಮಾನದಂಡವನ್ನು ಪೂರೈಸುವ YouTube ಚಾನಲ್‌ನೊಂದಿಗೆ ಸಂಯೋಜನೆಗೊಂಡಿರಬೇಕು.

ಪ್ರತಿಕ್ರಿಯೆಯನ್ನು ಸಲ್ಲಿಸಲಾಗುತ್ತಿದೆ

YouTube ನಲ್ಲಿರುವ ನ್ಯೂಸ್ ಫೀಚರ್‌ಗಳಿಗಾಗಿ ನಿಮ್ಮಲ್ಲಿ ಯಾವುದೇ ಪ್ರತಿಕ್ರಿಯೆ ಅಥವಾ ಸಲಹೆಗಳಿದ್ದರೆ, ನೀವು:

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11722132005406326384
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false