ಮಾಹಿತಿಯ ಪ್ಯಾನೆಲ್‌ನಲ್ಲಿ ವಿಷಯಾಧಾರಿತ ಸಂದರ್ಭ

ಗಮನಿಸಿ: ಕೊರೋನಾ ವೈರಸ್ ರೋಗ 2019 (COVID-19) ಗೆ ಪ್ರತಿಕ್ರಿಯೆಯಾಗಿ, COVID-19 ಅಥವಾ COVID-19 ಲಸಿಕೆ ಮಾಹಿತಿಯ ಕುರಿತು ಇನ್ನಷ್ಟು ತಿಳಿದುಕೊಳ್ಳುವ ಸಲುವಾಗಿ ಲಿಂಕ್‌ಗಳನ್ನು ಹೊಂದಿರುವ ಮಾಹಿತಿ ಪ್ಯಾನೆಲ್‌ಗಳು ನಿಮಗೆ ಕಾಣಿಸಬಹುದು. ಕೆಲವು ಸ್ಥಳಗಳಲ್ಲಿ, ಆರೋಗ್ಯ ಸಚಿವಾಲಯಗಳು ಮತ್ತು ರೋಗ ನಿಯಂತ್ರಣ ಕೇಂದ್ರಗಳಂತಹ ಸ್ಥಳೀಯ ಮೂಲಗಳಿಗೆ ಲಿಂಕ್‌ಗಳ ಜೊತೆಗೆ ಸ್ಥಳೀಯ ಭಾಷೆಗಳಲ್ಲಿ COVID-19 ಮಾಹಿತಿ ಅಥವಾ COVID-19 ಲಸಿಕೆಯ ಕುರಿತ ಮಾಹಿತಿಯು ನಿಮಗೆ ಕಾಣಿಸಲಿದೆ.

ಚಂದ್ರನ ಮೇಲೆ ಇಳಿಯುವುದರ ಹಾಗೆ, ತಪ್ಪು ಮಾಹಿತಿಗೆ ತುತ್ತಾಗಬಹುದಾದ ವಿಷಯಗಳಿಗೆ ಸಂಬಂಧಿಸಿದ ವೀಡಿಯೊಗಳನ್ನು ನೀವು ಹುಡುಕಿದಾಗ ಅಥವಾ ವೀಕ್ಷಿಸಿದಾಗ, ನಿಮ್ಮ ಹುಡುಕಾಟ ಫಲಿತಾಂಶಗಳ ಮೇಲ್ಭಾಗದಲ್ಲಿ ಅಥವಾ ನೀವು ವೀಕ್ಷಿಸುತ್ತಿರುವ ವೀಡಿಯೊದ ಅಡಿಯಲ್ಲಿ ಮಾಹಿತಿ ಪ್ಯಾನೆಲ್ ನಿಮಗೆ ಕಾಣಿಸಬಹುದು.

ಮಾಹಿತಿಯ ಪ್ಯಾನೆಲ್‌ಗಳು ಒಂದು ವಿಷಯದ ಕುರಿತು ಹೆಚ್ಚಿನ ಸಂದರ್ಭವನ್ನು ಒದಗಿಸಲು ಸ್ವತಂತ್ರ, ಥರ್ಡ್-ಪಾರ್ಟಿ ಪಾಲುದಾರರಿಂದ ಪಡೆದ ಮೂಲ ಹಿನ್ನೆಲೆ ಮಾಹಿತಿಯನ್ನು ತೋರಿಸುತ್ತವೆ. ನೀವು ಇನ್ನಷ್ಟು ತಿಳಿದುಕೊಳ್ಳಲು ಬಯಸಿದರೆ, ಈ ಪ್ಯಾನಲ್‌ಗಳು ಥರ್ಡ್-ಪಾರ್ಟಿ ಪಾಲುದಾರರ ವೆಬ್‌ಸೈಟ್‌ಗೂ ಸಹ ಲಿಂಕ್ ಮಾಡುತ್ತವೆ.

ವೀಡಿಯೊದಲ್ಲಿ ಯಾವುದೇ ಅಭಿಪ್ರಾಯಗಳು ಅಥವಾ ದೃಷ್ಟಿಕೋನಗಳನ್ನು ವ್ಯಕ್ತಪಡಿಸಿದ್ದರೂ ಅದನ್ನು ಲೆಕ್ಕಿಸದೆ ಈ ಮಾಹಿತಿ ಪ್ಯಾನೆಲ್‌ಗಳು ಕಾಣಿಸುತ್ತವೆ.

ಎಲ್ಲಾ ದೇಶಗಳು/ಪ್ರದೇಶಗಳು ಹಾಗೂ ಭಾಷೆಗಳಲ್ಲಿ ಮಾಹಿತಿ ಪ್ಯಾನೆಲ್‌ಗಳು ಲಭ್ಯವಿಲ್ಲದಿರಬಹುದು. ನಾವು ಹೆಚ್ಚಿನ ದೇಶಗಳು/ಪ್ರದೇಶಗಳಿಗೆ ಮಾಹಿತಿ ಪ್ಯಾನೆಲ್‌ಗಳನ್ನು ತರಲು ಕಾರ್ಯನಿರ್ವಹಿಸುತ್ತಿದ್ದೇವೆ.

ಹಣ ಗಳಿಕೆಯ ಕುರಿತು ಯಾವುದೇ ನಿರ್ಧಾರಗಳಲ್ಲಿ ಈ ಮಾಹಿತಿ ಪ್ಯಾನೆಲ್‌ಗಳನ್ನು ಬಳಸುವುದಿಲ್ಲ. ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳು ಕುರಿತು ಇನ್ನಷ್ಟು ತಿಳಿಯಿರಿ.

ಪ್ರತಿಕ್ರಿಯೆ

YouTube ನಲ್ಲಿರುವ ಮಾಹಿತಿ ಪ್ಯಾನೆಲ್‌ಗಳಲ್ಲಿ ತೋರಿಸಿರುವ ಯಾವುದೇ ಮಾಹಿತಿಯನ್ನು YouTube ಅನುಮೋದಿಸುವುದಿಲ್ಲ ಅಥವಾ ರಚಿಸುವುದಿಲ್ಲ. ನಿರ್ದಿಷ್ಟ ಲೇಖನದಲ್ಲಿರುವ ಮಾಹಿತಿಯನ್ನು ನೀವು ನಿರಾಕರಿಸಿದರೆ, ಆ ಲೇಖನವನ್ನು ಪ್ರಕಟಿಸಿದ ವೆಬ್‌ಸೈಟ್ ಮಾಲೀಕರನ್ನು ಸಂಪರ್ಕಿಸಿ. ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಮಾಹಿತಿ ಪ್ಯಾನೆಲ್ ಕಂಡುಬಂದರೆ, ನಮಗೆ ಫೀಡ್‌ಬ್ಯಾಕ್ ಕಳುಹಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1592528380095412108
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false