YouTube ರಚನೆಕಾರರ ಪ್ರಶಸ್ತಿಗಳು

ರಚನೆಕಾರರು ತಮ್ಮ ಚಾನಲ್‌ಗಳನ್ನು ಅಭಿವೃದ್ಧಿಪಡಿಸುವುದಕ್ಕಾಗಿ ಮತ್ತು ಪ್ರಗತಿ ಹೊಂದುವ ಸಮುದಾಯಗಳನ್ನು ನಿರ್ಮಿಸುವುದಕ್ಕಾಗಿ, ಜವಾಬ್ದಾರಿಯುತವಾಗಿ ಮಾಡುವ ಅಸಾಧಾರಣ ಪ್ರಯತ್ನಗಳನ್ನು ಗುರುತಿಸಲು YouTube ರಚನೆಕಾರರ ಪ್ರಶಸ್ತಿಗಳನ್ನು ನಾವು ಒದಗಿಸುತ್ತಿದ್ದೇವೆ. ರಚನೆಕಾರರ ಪ್ರಶಸ್ತಿಗಳನ್ನು ಪಡೆಯಲು ಅರ್ಹರಾಗುವುದಕ್ಕಾಗಿ, ರಚನೆಕಾರರು ಅರ್ಹತೆಯ ಮಾನದಂಡಗಳನ್ನು ಪೂರೈಸಬೇಕು ಮತ್ತು ನಮ್ಮ ನೀತಿಗಳನ್ನು ಅನುಸರಿಸಬೇಕು.

YouTube ರಚನೆಕಾರರ ಪ್ರಶಸ್ತಿಗಳು

ನಿಮ್ಮ ಚಾನಲ್ YouTube ರಚನೆಕಾರರ ಪ್ರಶಸ್ತಿಗೆ ಅರ್ಹವಾಗಿದೆಯೇ ಎಂದು ತಿಳಿದುಕೊಳ್ಳಿ ಮತ್ತು ಹೌದು ಎಂದಾದರೆ, ನಿಮ್ಮ ಪ್ರಶಸ್ತಿ ರಿಡಿಂಪ್ಶನ್ ಕೋಡ್ ಅನ್ನು ಪಡೆದುಕೊಳ್ಳಿ:

YouTube ರಚನೆಕಾರರ ಪ್ರಶಸ್ತಿಯನ್ನು ಪಡೆಯಿರಿ

ಅರ್ಹತೆಯ ಮಾನದಂಡ

ರಚನೆಕಾರರ ಪ್ರಶಸ್ತಿಗೆ ಅರ್ಹರಾಗಲು ನೀವು ಈ ಮಾರ್ಗಸೂಚಿಗಳನ್ನು ಪೂರೈಸಬೇಕು:

  • ನಿರ್ದಿಷ್ಟ ಸಬ್‌ಸ್ಕ್ರೈಬರ್ ಮೈಲಿಗಲ್ಲನ್ನು ದಾಟಬೇಕು:
    • ಸಿಲ್ವರ್: ನೀವು 100,000 ಸಬ್‌ಸ್ಕ್ರೈಬರ್‌ಗಳನ್ನು ತಲುಪಿದಾಗ
    • ಗೋಲ್ಡ್: ನೀವು 1,000,000 ಸಬ್‌ಸ್ಕ್ರೈಬರ್‌ಗಳನ್ನು ತಲುಪಿದಾಗ
    • ಡೈಮಂಡ್: ನೀವು 10,000,000 ಸಬ್‌ಸ್ಕ್ರೈಬರ್‌ಗಳನ್ನು ತಲುಪಿದಾಗ
    • ರೆಡ್ ಡೈಮಂಡ್: ನೀವು 100,000,000 ಸಬ್‌ಸ್ಕ್ರೈಬರ್‌ಗಳನ್ನು ತಲುಪಿದಾಗ
  • ನಿಮ್ಮ ಚಾನಲ್ ಸಕ್ರಿಯವಾಗಿರಬೇಕು (ಕಳೆದ 6 ತಿಂಗಳಲ್ಲಿ ವೀಡಿಯೊಗಳನ್ನು ಅಪ್‌ಲೋಡ್ ಮಾಡಿರಬೇಕು).
  • ನೀವು ಸಕ್ರಿಯ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಹೊಂದಿರಬಾರದು ಹಾಗೂ ಕಳೆದ 365 ದಿನಗಳಲ್ಲಿ ಯಾವುದೇ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಸ್ವೀಕರಿಸಿರಬಾರದು.
  • ನೀವು YouTube ನ ಸೇವಾ ನಿಯಮಗಳನ್ನು ಅನುಸರಿಸುತ್ತಿರಬೇಕು.
  • ನಿಮ್ಮನ್ನು YouTube ಪಾಲುದಾರ ಕಾರ್ಯಕ್ರಮದಿಂದ ಅಮಾನತುಗೊಳಿಸಿರಬಾರದು.
  • ನಿಮ್ಮ ಚಾನಲ್ ಅನ್ನು ಕೊನೆಗೊಳಿಸಿರಬಾರದು ಅಥವಾ ಅದು, ಕೊನೆಗೊಳಿಸಿರುವ ಖಾತೆಗೆ ಲಿಂಕ್ ಆಗಿರಬಾರದು.
  • ನೀವು ವಂಚನೆ, ಸ್ಪ್ಯಾಮ್ ಅಥವಾ ಸ್ಕ್ಯಾಮ್ ಆಗಿರುವ ಕಂಟೆಂಟ್ ಅನ್ನು ಹೊಂದಿರಬಾರದು.
  • ನಿಮ್ಮ ಪ್ರಮುಖ ಕಂಟೆಂಟ್ ಒರಿಜಿನಲ್ ಆಗಿರಬೇಕು. ಕಂಪೈಲೇಶನ್‌ಗಳು, ಮಿಕ್ಸ್‌ಗಳು, ಕ್ಯುರೇಶನ್ ಅಥವಾ ಬೇರೆ ಯಾರದೋ ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅಥವಾ ಪಾತ್ರಗಳನ್ನು ಅನ್ನು ಹೆಚ್ಚು ಬಳಕೆ ಮಾಡುವುದರ ಮೇಲೆ ಗಮನ ಕೇಂದ್ರೀಕರಿಸಿರುವ ಚಾನಲ್‌ಗಳು ಅರ್ಹವಾಗಿಲ್ಲದೇ ಇರಬಹುದು.

ಪ್ರಶಸ್ತಿಗೆ ಅರ್ಹರಾಗಲು, ನೀವು YouTube ಪಾಲುದಾರ ಕಾರ್ಯಕ್ರಮದ (YPP) ಸದಸ್ಯರಾಗಿರಬೇಕಾಗಿಲ್ಲ. ರಚನೆಕಾರರ ಪ್ರಶಸ್ತಿಗಳನ್ನು YouTube ನ ವಿವೇಚನೆಯ ಮೇರೆಗೆ ನೀಡಲಾಗುತ್ತದೆ. ಮಾನದಂಡವನ್ನು ಪೂರೈಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಪ್ರತಿ ಚಾನಲ್ ಅನ್ನು ಎಚ್ಚರಿಕೆಯಿಂದ ಪರಿಶೀಲಿಸಲಾಗುತ್ತದೆ. 

ರಚನೆಕಾರರ ಪ್ರಶಸ್ತಿಗಳು ವೈಯಕ್ತಿಕ ಬಳಕೆಗಾಗಿ ಮಾತ್ರ ಇವೆ, ಮತ್ತು ಇವುಗಳನ್ನು ಮಾರಾಟ ಮಾಡುವಂತಿಲ್ಲ ಅಥವಾ ನಿಮ್ಮ ಚಾನಲ್‌ನ ತಂಡದ ಸದಸ್ಯರ ಹೊರಗೆ ಯಾರಿಗೂ ವಿತರಿಸುವಂತಿಲ್ಲ. ನೀವು ಈ ನೀತಿಯನ್ನು ಉಲ್ಲಂಘಿಸಿದರೆ, ನಿಮ್ಮನ್ನು ಶಿಸ್ತುಕ್ರಮಕ್ಕೆ ಒಳಪಡಿಸಬಹುದಾಗಿದೆ.

ಶಿಸ್ತುಕ್ರಮಗಳಲ್ಲಿ ಇವು ಒಳಗೊಂಡಿರಬಹುದು:

  • ಪ್ರಶಸ್ತಿಯನ್ನು ಕಳೆದುಕೊಳ್ಳುವುದು
  • ಭವಿಷ್ಯದ ಪ್ರಶಸ್ತಿಗಳಿಗಾಗಿ ಅನರ್ಹತೆ
  • ನಿಮ್ಮ YouTube ಅಥವಾ Google ಖಾತೆಯ ಸಂಭಾವ್ಯ ಕೊನೆಗೊಳಿಸುವಿಕೆ
ಹೆಚ್ಚಿನ ಮಾಹಿತಿಗಾಗಿ YouTube ರಚನೆಕಾರರ ಪ್ರಶಸ್ತಿಗಳ ಕುರಿತಾದ ನಮ್ಮ ವಿವರವಾದ FAQ ಗಳನ್ನು ನೋಡಿ .

ದೇಶ/ಪ್ರದೇಶದಲ್ಲಿ ಲಭ್ಯತೆ

YouTube ರಚನೆಕಾರರ ಪ್ರಶಸ್ತಿಗಳನ್ನು, ಪ್ರಸ್ತುತ ಈ ದೇಶಗಳು/ಪ್ರದೇಶಗಳಿಗೆ ರವಾನಿಸಲು ಸಾಧ್ಯವಿಲ್ಲ:

  • ಬೆಲಾರೂಸ್
  • ಕ್ಯೂಬಾ
  • ಇರಾನ್
  • ಮ್ಯಾನ್ಮಾರ್
  • ಉತ್ತರ ಕೊರಿಯಾ
  • ರಷ್ಯಾ
  • ಸೊಮಾಲಿಯಾ
  • ಸೂಡಾನ್
  • ಸಿರಿಯಾ
  • ತಜಕಿಸ್ತಾನ್
  • ಉಕ್ರೇನ್

YouTube ರಚನೆಕಾರರ ಪ್ರಶಸ್ತಿಯನ್ನು ರಿಡೀಮ್ ಮಾಡಿಕೊಳ್ಳಿ

ನಮ್ಮ ಪ್ರಶಸ್ತಿಯ ಮಾನದಂಡಗಳನ್ನು ನೀವು ಪೂರೈಸಿದ ನಂತರ, ನಿಮಗೆ ರಿಡಿಂಪ್ಶನ್ ಕೋಡ್ ಕಳುಹಿಸುತ್ತೇವೆ. ನಿಮ್ಮ ಪ್ರಶಸ್ತಿಯನ್ನು ರಿಡೀಮ್ ಮಾಡಿಕೊಳ್ಳಲು ಈ ಹಂತಗಳನ್ನು ಅನುಸರಿಸಿ:

  1. ನಾವು ನಿಮಗೆ ಕಳುಹಿಸಿದ ರಿಡಿಂಪ್ಶನ್ ಕೋಡ್ ಅನ್ನು ಹುಡುಕಿ ಮತ್ತು ನಕಲಿಸಿ.
    1. ಆ ರಿಡಿಂಪ್ಶನ್ ಕೋಡ್ ಅನ್ನು ನೀವು ಕಳೆದುಕೊಂಡಿದ್ದರೆ, ನಿಮ್ಮ ರಿಡಿಂಪ್ಶನ್ ಕೋಡ್ ಅನ್ನು ಪಡೆಯಲು ನಮ್ಮ ಸಂವಹನಾತ್ಮಕ ಅರ್ಹತೆ ಪರಿಶೀಲನೆಗೆ ಭೇಟಿ ನೀಡಿ.
  2. ರಚನೆಕಾರರ ಪ್ರಶಸ್ತಿಗಳ ರಿಡಿಂಪ್ಶನ್ ವೆಬ್‌ಸೈಟ್‌ಗೆ ಹೋಗಿ ಮತ್ತು ನಿಮ್ಮ ಕೋಡ್ ಅನ್ನು ನಮೂದಿಸಿ.
  3. ನಿಮ್ಮ ಶಿಪ್ಪಿಂಗ್ ಮಾಹಿತಿಯನ್ನು ನಮೂದಿಸಿ ಮತ್ತು ಪ್ರಶಸ್ತಿಯಲ್ಲಿ ನಿಮ್ಮ ಚಾನಲ್‌ನ ಹೆಸರು ಹೇಗೆ ಕಾಣಿಸಿಕೊಳ್ಳಬೇಕು ಎಂಬುದನ್ನು ನಿರ್ದಿಷ್ಟಪಡಿಸಿ.
  4. ನಿಮ್ಮ ಪ್ರಶಸ್ತಿಯನ್ನು ರಿಡೀಮ್ ಮಾಡುವುದನ್ನು ಪೂರ್ಣಗೊಳಿಸಲು “ಈಗಲೇ ಆರ್ಡರ್ ಮಾಡಿ” ಎಂಬುದನ್ನು ಆಯ್ಕೆ ಮಾಡಿ.

ನೀವು ಬ್ರೆಜಿಲ್ ಅಥವಾ ಭಾರತದಲ್ಲಿ ಇದ್ದರೆ, ನಿಮ್ಮ ರಚನೆಕಾರರ ಪ್ರಶಸ್ತಿಯನ್ನು ರಿಡೀಮ್ ಮಾಡಿಕೊಳ್ಳುವಾಗ ತೆರಿಗೆ ID ಯ ಹಾಗೆ ಹೆಚ್ಚುವರಿ ಮಾಹಿತಿಯನ್ನು ಕೇಳಲಾಗುತ್ತದೆ. ಸಂಬಂಧಿತ ಕಸ್ಟಮ್ಸ್ ಕಚೇರಿಗೆ ಈ ಮಾಹಿತಿಯ ಅಗತ್ಯವಿದೆ.

ಶಿಪ್ಪಿಂಗ್ ಮತ್ತು ಡೆಲಿವರಿ

ನಿಮ್ಮ ಶಿಪ್ಪಿಂಗ್ ಮಾಹಿತಿಯನ್ನು ಸಲ್ಲಿಸಿದ ಬಳಿಕ ಮತ್ತು ನಿಮ್ಮ ಪ್ರಶಸ್ತಿಯನ್ನು ರಿಡೀಮ್ ಮಾಡಿದ ಬಳಿಕ, ಸುಮಾರು 2-3 ವಾರಗಳ ಒಳಗೆ ನಿಮಗೆ ಅದನ್ನು ಡೆಲಿವರ್ ಮಾಡುತ್ತೇವೆ. 1 ಜೂನ್, 2023 ರ ನಂತರ ಮಾಡಿದ ಆರ್ಡರ್‌ಗಳನ್ನು ಇಲ್ಲಿ ಟ್ರ್ಯಾಕ್ ಮಾಡಬಹುದು. ನಿಮ್ಮ ಪ್ರಶಸ್ತಿಗಳನ್ನು ಸರಿಯಾದ ಸಮಯದಲ್ಲಿ ಪಡೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು, ಇವುಗಳನ್ನು ಗಮನಿಸಿ:

  • ಶಿಪ್ಪಿಂಗ್ ಮಾಹಿತಿಯನ್ನು ಸಲ್ಲಿಸುವಾಗ, ನಿಮ್ಮ ಕಾನೂನುಬದ್ಧವಾದ ಪೂರ್ಣ ಹೆಸರನ್ನು ನಮೂದಿಸಲು ಮರೆಯಬೇಡಿ. ನೀವು ಕಸ್ಟಮ್ಸ್ ಅಥವಾ ಡೆಲಿವರಿ ಕಚೇರಿಯಿಂದ ಅದನ್ನು ತೆಗೆದುಕೊಳ್ಳಬೇಕಾದ ಸಂದರ್ಭಗಳಲ್ಲಿ ಇದು ಸಹಾಯ ಮಾಡುತ್ತದೆ.
  • ನಿಮ್ಮ ಪ್ರಶಸ್ತಿಯನ್ನು ರವಾನಿಸಿದ ಬಳಿಕ, ಶಿಪ್ಪಿಂಗ್ ಕಂಪನಿಯಿಂದ ಟ್ರ್ಯಾಕಿಂಗ್ ಸಂಖ್ಯೆಯನ್ನು ಹೊಂದಿರುವ ಒಂದು ಸ್ವಯಂಚಾಲಿತ ಇಮೇಲ್ ಅನ್ನು ಪಡೆಯುವಿರಿ. ನಿಮ್ಮ ಪ್ರಶಸ್ತಿಯು ನಿಮ್ಮನ್ನು ಯಶಸ್ವಿಯಾಗಿ ತಲುಪುವುದನ್ನು ಖಚಿತಪಡಿಸಿಕೊಳ್ಳಲು, ಟ್ರ್ಯಾಕಿಂಗ್ ನೋಟಿಫಿಕೇಶನ್‌ಗಳಿಗೆ ಸೈನ್ ಅಪ್ ಮಾಡಿ.
  • ಡೆಲಿವರಿ ಕಂಪನಿಯು ನಿಮ್ಮಿಂದ ಹೆಚ್ಚಿನ ಡಾಕ್ಯುಮೆಂಟೇಶನ್ ಅಥವಾ ಮಾಹಿತಿಯನ್ನು ವಿನಂತಿಸಿ, ಸಂಪರ್ಕಿಸಿದಾಗ ಅದಕ್ಕೆ ಪ್ರತ್ಯುತ್ತರಿಸುವ ಜವಾಬ್ದಾರಿ ನಿಮ್ಮದು. ನಿಮ್ಮ ಪ್ರಶಸ್ತಿಯು ಕಸ್ಟಮ್ಸ್ ಅನ್ನು ದಾಟಲು ಅಥವಾ ಅದನ್ನು ನಿಮಗೆ ಡೆಲಿವರ್ ಮಾಡಲು ಇದು ಸಹಾಯ ಮಾಡಬಹುದು.
  • ನಿರ್ದಿಷ್ಟ ದೇಶಗಳಲ್ಲಿ/ಪ್ರದೇಶಗಳಲ್ಲಿ ಅಗತ್ಯವಿರುವ ಯಾವುದೇ ಕಸ್ಟಮ್ಸ್ ಸುಂಕಗಳನ್ನು ಮತ್ತು/ಅಥವಾ ತೆರಿಗೆಗಳನ್ನು ಪಾವತಿಸುವ ಜವಾಬ್ದಾರಿ ನಿಮ್ಮದು. ಕಾನೂನಾತ್ಮಕವಾಗಿ, YouTube ಈ ವೆಚ್ಚಗಳನ್ನು ಭರಿಸಲು ಸಾಧ್ಯವಿಲ್ಲ. ಈ ದೇಶಗಳಲ್ಲಿ ಇವು ಒಳಗೊಂಡಿವೆ, ಆದರೆ ಕೇವಲ ಇವುಗಳಿಗೆ ಸೀಮಿತವಾಗಿಲ್ಲ: ಅರ್ಮೇನಿಯಾ, ಕಾಂಬೋಡಿಯಾ, ಕಿರ್ಗಿಸ್ತಾನ ಮತ್ತು ಉಜ್ಬೇಕಿಸ್ತಾನ.
  • ನೀವು ಡೆಲಿವರಿ ಕಂಪನಿಯನ್ನು ಮರಳಿ ಸಂಪರ್ಕಿಸದಿದ್ದರೆ, ನಿಮ್ಮ ರಚನೆಕಾರರ ಪ್ರಶಸ್ತಿಯನ್ನು ಮರಳಿಸಬಹುದು ಅಥವಾ ಅದು ಕಳೆದುಹೋಗಬಹುದು. ಇಂತಹ ಸಂದರ್ಭಗಳಲ್ಲಿ, ನಿಮ್ಮ ರಚನೆಕಾರರ ಪ್ರಶಸ್ತಿಯನ್ನು ಪಡೆದುಕೊಳ್ಳಲು ಬಯಸುವಿರಾದರೆ, ನೀವು ಬದಲಿ ಪ್ರಶಸ್ತಿಯನ್ನು ಖರೀದಿಸಬೇಕಾಗಬಹುದು.
  • ಸ್ವೀಕರಿಸಿದ ನಂತರ, ಈ ಫಾರ್ಮ್ ಅನ್ನು ಸಲ್ಲಿಸುವ ಮೂಲಕ, ಯಾವುದೇ ಹಾನಿಯನ್ನು Society Awards ಗೆ ವರದಿ ಮಾಡಲು ನಿಮಗೆ ಏಳು ದಿನಗಳ ಕಾಲಾವಕಾಶವಿರುತ್ತದೆ. ನೀವು ಪ್ರಶಸ್ತಿ ಮತ್ತು ಬಾಕ್ಸ್‌ನ ಫೋಟೋಗಳನ್ನು ಕಳುಹಿಸಬೇಕಾಗುತ್ತದೆ, ಆದ್ದರಿಂದ ಎಲ್ಲಾ ಪ್ಯಾಕೇಜಿಂಗ್ ವಸ್ತುಗಳನ್ನು ಇರಿಸಿಕೊಳ್ಳಿ. ಬದಲಿ ಪ್ರಶಸ್ತಿಗಾಗಿ ಮಾರಾಟಗಾರರಿಗೆ ಪ್ರಶಸ್ತಿಯನ್ನು ಹಿಂತಿರುಗಿಸಲು ಸಹ ಇದು ನಿಮಗೆ ಅವಕಾಶ ನೀಡುತ್ತದೆ. ಮೂಲ ಪ್ರಶಸ್ತಿಯನ್ನು ಹಿಂತಿರುಗಿಸಿದ ಹಾಗೂ ಮೌಲ್ಯಮಾಪನ ಮಾಡಿದ ನಂತರ ಮಾತ್ರವೇ ಪೂರಕ ಬದಲಿಯನ್ನು ನೀಡಲಾಗುವುದು ಎಂಬುದನ್ನು ಗಮನಿಸಿ.

ಶಿಪ್ಪಿಂಗ್‌ಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಅಥವಾ ಆತಂಕಗಳಿದ್ದರೆ, ಇಲ್ಲಿ ನಮ್ಮ ಪ್ರೊಡಕ್ಷನ್ ತಂಡವನ್ನು ಸಂಪರ್ಕಿಸಿ.
ಹೆಚ್ಚಿನ ಮಾಹಿತಿಗಾಗಿ YouTube ರಚನೆಕಾರರ ಪ್ರಶಸ್ತಿಗಳ ಕುರಿತಾದ ನಮ್ಮ ವಿವರವಾದ FAQ ಗಳನ್ನು ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
6371334077733984345
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false