ಈ ವೀಡಿಯೊದಲ್ಲಿರುವ ಸಂಗೀತ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ಸಂಗೀತವನ್ನು ಒಳಗೊಂಡಿರುವ ಕಂಟೆಂಟ್ ಅನ್ನು ನೀವು ವೀಕ್ಷಿಸುತ್ತಿರುವಾಗ, ವೀಡಿಯೊದ ವಿವರಣೆಯಲ್ಲಿ “ಈ ವೀಡಿಯೊದಲ್ಲಿರುವ ಸಂಗೀತ” ಎಂಬ ವಿಭಾಗವಿರಬಹುದು. ಈ ವಿಭಾಗವು, ವೀಡಿಯೊದಲ್ಲಿ ಕೇಳಿಸುವ ಹಾಡು ಮತ್ತು ಕಲಾವಿದರ ಹೆಸರುಗಳ ಹಾಗೆ, ಸಂಗೀತದ ಕುರಿತು ಮಾಹಿತಿಯನ್ನು ತೋರಿಸುತ್ತದೆ.

ಈ ಕೆಳಗಿನ ಸಂದರ್ಭಗಳಲ್ಲಿ YouTube ಸ್ವಯಂಚಾಲಿತವಾಗಿ ಕೆಲವು ವೀಡಿಯೊಗಳಲ್ಲಿ ಈ ಮಾಹಿತಿಯನ್ನು ಸೇರಿಸುತ್ತದೆ:

“ಈ ವೀಡಿಯೊದಲ್ಲಿರುವ ಸಂಗೀತ” ಎಂಬುದು ಸಂಗೀತ ವೀಡಿಯೊಗಳು ಅಥವಾ ಇತರ ಅಧಿಕೃತ ಕಂಟೆಂಟ್‌ಗೆ ಲಿಂಕ್‌ಗಳನ್ನು ತೋರಿಸಬಹುದು, ಇದರಿಂದ ನೀವು ಈ ಹಿಂದೆ ಆಲಿಸಿರದ ಹಾಡುಗಳು ಮತ್ತು ಕಲಾವಿದರನ್ನು ಅನ್ವೇಷಿಸಬಹುದು.

ಕೆಲವು ವೀಡಿಯೊಗಳು, ವೀಡಿಯೊ ವಿವರಣೆಯಲ್ಲಿ ಹಾಡಿನ ಮಾಹಿತಿಯನ್ನು ಏಕೆ ಒಳಗೊಂಡಿವೆ

FAQ ಗಳು

“YouTube ಗೆ ಪರವಾನಗಿ ನೀಡಿರುವವರು” ಎಂಬುದರ ಅರ್ಥವೇನು?

“YouTube ಗೆ ಪರವಾನಗಿ ನೀಡಿರುವವರು” ಎಂಬುದರ ಪಕ್ಕದಲ್ಲಿರುವ ಹೆಸರುಗಳು, ಗುರುತಿಸಲಾದ ಸಂಗೀತವನ್ನು ವೀಡಿಯೊಗಳಲ್ಲಿ ಬಳಸಲು ಅನುಮತಿ ನೀಡುವುದಕ್ಕಾಗಿ YouTube ಗೆ ಸಮ್ಮತಿ ನೀಡಿರುವ ಹಕ್ಕುಸ್ವಾಮ್ಯದ ಮಾಲೀಕರದ್ದಾಗಿವೆ. ಈ ಪರವಾನಗಿ ಒಪ್ಪಂದದೊಂದಿಗೆ, ಆ ವೀಡಿಯೊಗಳು YouTube ನಲ್ಲಿ ಗಳಿಸುವ ಆದಾಯವನ್ನು ಸಹ ಅವರು ಹಂಚಿಕೊಳ್ಳುತ್ತಾರೆ.

ಉದಾಹರಣೆಗೆ, ಸಂಗೀತವನ್ನು ಹೊಂದಿರುವ ವೀಡಿಯೊದಲ್ಲಿ ಆ್ಯಡ್ ಇದ್ದರೆ, “YouTubeಗೆ ಪರವಾನಗಿ ನೀಡಿರುವವರು” ಎಂಬುದರ ಪಕ್ಕದಲ್ಲಿ ಪಟ್ಟಿ ಮಾಡಲಾಗಿರುವ ಹಕ್ಕುಸ್ವಾಮ್ಯದ ಮಾಲೀಕರು YouTube ನ ಸೇವಾ ನಿಯಮಗಳ ಅನುಸಾರ, ಆ ಆ್ಯಡ್‌ನಿಂದ ಗಳಿಸಿದ ಆದಾಯದಲ್ಲಿ ಒಂದು ಪಾಲನ್ನು ಪಡೆಯುತ್ತಾರೆ.

ಕೆಲವೊಮ್ಮೆ, ಒಂದು ಹಾಡಿಗಾಗಿ ಅನೇಕ ಹಕ್ಕುಸ್ವಾಮ್ಯ ಮಾಲೀಕರು ಆದಾಯವನ್ನು ಹಂಚಿಕೊಳ್ಳುತ್ತಿರಬಹುದು. ನೀವು ಗುರುತಿಸುವ ಸಂಗೀತ ಲೇಬಲ್‌ಗಳು ಮತ್ತು ಪ್ರಕಾಶಕರು ಅಥವಾ ಕೆಲವೊಂದು “ಸಂಗೀತ ಹಕ್ಕುಗಳ ಸೊಸೈಟಿಗಳು” ಮತ್ತು "ಕಲೆಕ್ಟಿಂಗ್ ಸೊಸೈಟಿಗಳನ್ನು" ನೀವು ಗಮನಿಸಬಹುದು. ಈ ಸಂಸ್ಥೆಗಳು, ತಮ್ಮ ಸದಸ್ಯರಾಗಿರುವ ಹಕ್ಕುಸ್ವಾಮ್ಯ ಮಾಲೀಕರ ಪರವಾಗಿ ರಾಯಲ್ಟಿಗಳನ್ನು ಸಂಗ್ರಹಿಸುತ್ತವೆ. YouTube ಈ ಸಂಸ್ಥೆಗಳೊಂದಿಗೆ ಪರವಾನಗಿ ಒಪ್ಪಂದಗಳನ್ನು ಹೊಂದಿದೆ ಮತ್ತು ಅವರು ಕ್ಲೇಮ್‌ ಮಾಡುವ ವೀಡಿಯೊಗಳಿಗಾಗಿ ಅವರೊಂದಿಗೆ ಆದಾಯವನ್ನು ಹಂಚಿಕೊಳ್ಳುತ್ತದೆ. ಇನ್ನಷ್ಟು ತಿಳಿಯಿರಿ.

ಗಮನಿಸಿ: ವೀಡಿಯೊದಲ್ಲಿರುವ ಸಂಗೀತವನ್ನು YouTube ಆಡಿಯೋ ಲೈಬ್ರರಿಯಿಂದ ತೆಗೆದುಕೊಂಡಿದ್ದರೆ, “YouTube ಗೆ ಪರವಾನಗಿ ನೀಡಿರುವವರು” ಎಂಬುದರ ಪಕ್ಕದಲ್ಲಿ YouTube ಆಡಿಯೋ ಲೈಬ್ರರಿ ಎಂದು ಪಟ್ಟಿ ಮಾಡಲಾಗುತ್ತದೆ.

“ಈ ವೀಡಿಯೊದಲ್ಲಿರುವ ಸಂಗೀತ” ಎಂಬುದರಿಂದ ಕೆಲವು ಮಾಹಿತಿ ಏಕೆ ಕಾಣೆಯಾಗಿದೆ?

ನಿಖರವಾದ, ಉನ್ನತ ಗುಣಮಟ್ಟದ ಡೇಟಾ ಲಭ್ಯವಿದ್ದಾಗ ಮಾತ್ರ “ಈ ವೀಡಿಯೊದಲ್ಲಿರುವ ಸಂಗೀತ” ವಿಭಾಗದಲ್ಲಿ ಮಾಹಿತಿಯು ಕಾಣಿಸಿಕೊಳ್ಳುತ್ತದೆ. ಹೆಚ್ಚು ಡೇಟಾವನ್ನು ಸೇರಿಸಲು ಮತ್ತು ನಮ್ಮ ಬಳಿ ಇರುವ ಮಾಹಿತಿಯ ಗುಣಮಟ್ಟ ಹಾಗೂ ನಿಖರತೆಯನ್ನು ಸುಧಾರಿಸಲು ನಮ್ಮ ಸಂಗೀತ ಉದ್ಯಮ ಪಾಲುದಾರರೊಂದಿಗೆ ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ.

ಅನೇಕ ಹಾಡುಗಳನ್ನು ಹೊಂದಿರುವ ವೀಡಿಯೊಗಳಿಗಾಗಿ, ಮೊದಲ ಹತ್ತು ಹಾಡುಗಳ ಕುರಿತಾದ ಮಾಹಿತಿಯು “ಈ ವೀಡಿಯೊದಲ್ಲಿರುವ ಸಂಗೀತ” ಎಂಬುದರ ಅಡಿಯಲ್ಲಿ ಕಾಣಿಸಿಕೊಳ್ಳುತ್ತದೆ.

ನನ್ನ ಹಾಡು ಒಂದು ವೀಡಿಯೊದಲ್ಲಿ ಕೇಳಿಸುತ್ತಿದೆ, ಆದರೆ “ಈ ವೀಡಿಯೊದಲ್ಲಿರುವ ಸಂಗೀತ” ಮಾಹಿತಿ ಕಾಣಿಸದಿದ್ದರೆ ಅದರ ಅರ್ಥವೇನು?

“ಈ ವೀಡಿಯೊದಲ್ಲಿರುವ ಸಂಗೀತ” ವಿಭಾಗವು ಕೆಲವೊಂದು ಕಾರಣಗಳಿಂದಾಗಿ ಕಾಣಿಸಿಕೊಳ್ಳದಿರಬಹುದು:

  • YouTube, ಹಕ್ಕುಸ್ವಾಮ್ಯ ಮಾಲೀಕರಿಂದ ಸಾಕಷ್ಟು ಡೇಟಾವನ್ನು ಹೊಂದಿಲ್ಲ.
  • ನಿಮ್ಮ ಸಂಗೀತವನ್ನು ಇನ್ನೂ ಗುರುತಿಸಿಲ್ಲ.
  • ವೀಡಿಯೊದ ಮೇಲೆ ಇತ್ತೀಚೆಗಷ್ಟೇ ಹಕ್ಕು ಸ್ಥಾಪನೆ ಮಾಡಲಾಗಿದೆ ಮತ್ತು ಮಾಹಿತಿಯನ್ನು ಇನ್ನೂ ಭರ್ತಿ ಮಾಡಿಲ್ಲ.
ನಿಮ್ಮ ಪರವಾಗಿ ಕೃತಿಸ್ವಾಮ್ಯವನ್ನು ನಿರ್ವಹಿಸುತ್ತಿರುವ ರೆಕಾರ್ಡ್ ಲೇಬಲ್, ಸಂಗೀತ ಪ್ರಕಾಶಕರು ಅಥವಾ ಕಲೆಕ್ಷನ್ ಸೊಸೈಟಿಯೊಂದಿಗೆ ಕೆಲಸ ಮಾಡುತ್ತಿದ್ದೀರಾ? YouTube ಗೆ ಯಾವ ಮಾಹಿತಿಯನ್ನು ಕಳುಹಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನೀವು ಅವರನ್ನು ಸಂಪರ್ಕಿಸಲು ಬಯಸಬಹುದು. ಈ ಮಾಹಿತಿಯು ISRC ಗಳು, ISWC ಗಳು, UPC ಗಳು, ಹಾಗೂ ISNI ಗಳಂತಹ ಐಡೆಂಟಿಫೈಯರ್‌ಗಳನ್ನು ಒಳಗೊಂಡಿರಬೇಕು.

ನನ್ನ ಹಾಡನ್ನು ಪಟ್ಟಿ ಮಾಡಲಾಗಿದೆ, ಆದರೆ ಡೇಟಾ ತಪ್ಪಾಗಿದ್ದರೆ ಏನು ಮಾಡಬೇಕು?

ನೀವು ರೆಕಾರ್ಡಿಂಗ್ ಕಲಾವಿದರು ಅಥವಾ ಗೀತರಚನೆಕಾರರಾಗಿದ್ದರೆ ಮತ್ತು ನಿಮ್ಮ ಹಾಡನ್ನು ತಪ್ಪಾದ ಅಥವಾ ಅಪೂರ್ಣವಾದ ಮಾಹಿತಿಯೊಂದಿಗೆ ಗುರುತಿಸಲಾಗಿದ್ದರೆ, ನೀವು:
  • ನಮ್ಮ ಡೇಟಾ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುವುದಕ್ಕಾಗಿ ನಮ್ಮಪ್ರತಿಕ್ರಿಯೆ ಫಾರ್ಮ್ ಅನ್ನು ಬಳಸಿಕೊಂಡು ಪ್ರತಿಕ್ರಿಯೆ ಕಳುಹಿಸಿ.
  • ನೀವು ಹಾಗೂ ನಿಮ್ಮ ಹಾಡು, ISNI ಪ್ರಾಧಿಕಾರದೊಂದಿಗೆ ನೋಂದಾಯಿಸಿಕೊಂಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮನ್ನು ಮತ್ತು ನಿಮ್ಮ ಸಂಗೀತವನ್ನು ಪ್ರತಿನಿಧಿಸಲು ನಮ್ಮ ಬಳಿ ಅತ್ಯುತ್ತಮ ಡೇಟಾ ಇದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು, ನೋಂದಾಯಿಸುವಿಕೆಯು ನಮಗೆ ಸಹಾಯ ಮಾಡಬಲ್ಲದು.
ನಿಮ್ಮ ಪರವಾಗಿ ಕೃತಿಸ್ವಾಮ್ಯವನ್ನು ನಿರ್ವಹಿಸುತ್ತಿರುವ ರೆಕಾರ್ಡ್ ಲೇಬಲ್, ಸಂಗೀತ ಪ್ರಕಾಶಕರು ಅಥವಾ ಕಲೆಕ್ಷನ್ ಸೊಸೈಟಿಯೊಂದಿಗೆ ಕೆಲಸ ಮಾಡುತ್ತಿದ್ದೀರಾ? YouTube ಗೆ ಯಾವ ಮಾಹಿತಿಯನ್ನು ಕಳುಹಿಸಲಾಗಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ನೀವು ಅವರನ್ನು ಸಂಪರ್ಕಿಸಲು ಬಯಸಬಹುದು. ಈ ಮಾಹಿತಿಯು ISRC ಗಳು, ISWC ಗಳು, UPC ಗಳು, ಹಾಗೂ ISNI ಗಳಂತಹ ಐಡೆಂಟಿಫೈಯರ್‌ಗಳನ್ನು ಒಳಗೊಂಡಿರಬೇಕು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9043350649151122695
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false