Copyright Match Tool ಅನ್ನು ಬಳಸಿ

Copyright Match Tool, YouTube ನಲ್ಲಿ ಇರುವ ಇತರ ವೀಡಿಯೊಗಳಿಗೆ ಹೊಂದಾಣಿಕೆಯಾಗುವ ಅಥವಾ ಸಂಭಾವ್ಯವಾಗಿ ಹೊಂದಾಣಿಕೆಯಾಗುವ ವೀಡಿಯೊಗಳನ್ನು ಸ್ವಯಂಚಾಲಿತವಾಗಿ ಗುರುತಿಸಬಲ್ಲದು. ಹೊಂದಾಣಿಕೆಯನ್ನು ಗುರುತಿಸಿದ ಬಳಿಕ, ನೀವು ಅದನ್ನು YouTube Studio ದಲ್ಲಿ ಪರಿಶೀಲಿಸಬಹುದು ಮತ್ತು ನೀವು ಯಾವ ಕ್ರಮ ಕೈಗೊಳ್ಳಲು ಬಯಸುವಿರಿ ಎಂಬುದನ್ನು ಆಯ್ಕೆ ಮಾಡಬಹುದು.

Copyright Match Tool ಬಳಸುವುದು ಹೇಗೆ

ಅದು ಹೇಗೆ ಕೆಲಸ ಮಾಡುತ್ತದೆ

ಮಾನ್ಯವಾದ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿದ ಯಾವುದೇ YouTube ಬಳಕೆದಾರರಿಗೆ Copyright Match Tool ಲಭ್ಯವಿದೆ. ನಿಮ್ಮ ತೆಗೆದುಹಾಕುವಿಕೆ ವಿನಂತಿಯನ್ನು ಅನುಮೋದಿಸಿದ ಬಳಿಕ, Copyright Match Tool, ನಿಮ್ಮ ತೆಗೆದುಹಾಕುವಿಕೆ ವಿನಂತಿಯಲ್ಲಿ ವರದಿ ಮಾಡಲಾದ ವೀಡಿಯೊಗಳ ಸಂಭಾವ್ಯ ಹೊಂದಾಣಿಕೆಗಳ ಅಪ್‌ಲೋಡ್‌ಗಳಿಗಾಗಿ YouTube ಅನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ನಂತರ, ನೀವು ಈ ಸಂಭಾವ್ಯ ಹೊಂದಾಣಿಕೆಗಳನ್ನು ಪರಿಶೀಲಿಸಬಹುದು ಮತ್ತು ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನಿರ್ಧರಿಸಬಹುದು.

YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಪಾಲುದಾರರಿಗಾಗಿ ಅಥವಾ ಈ ಫಾರ್ಮ್ ಅನ್ನು ಭರ್ತಿ ಮಾಡಿರುವ ಮತ್ತು ಸುಧಾರಿತ ಹಕ್ಕುಗಳ ನಿರ್ವಹಣೆ ಪರಿಕರದ ಅವಶ್ಯಕತೆಯನ್ನು ಪ್ರದರ್ಶಿಸಿರುವ ಯಾವುದೇ ಚಾನಲ್‌ಗಾಗಿ, Copyright Match Tool, ಇತರ YouTube ಚಾನಲ್‌ಗಳಲ್ಲಿ ನಿಮ್ಮ ವೀಡಿಯೊಗಳ ಸಂಪೂರ್ಣ ಮರು-ಅಪ್‌ಲೋಡ್‌ಗಳಿವೆಯೇ ಎಂದು ನೋಡಲು ಸ್ಕ್ಯಾನ್ ಮಾಡುತ್ತದೆ. ನಿಮ್ಮ ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರ ಅಪ್‌ಲೋಡ್ ಮಾಡಿದ ವೀಡಿಯೊಗಳನ್ನು ಈ ಪರಿಕರವು ಸ್ಕ್ಯಾನ್ ಮಾಡುತ್ತದೆ, ಆದ್ದರಿಂದ YouTube ಗೆ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡುವಲ್ಲಿ ನೀವು ಮೊದಲಿಗರಾಗಿರುವುದು ಮುಖ್ಯವಾಗಿದೆ.

Copyright Match Tool ಅನ್ನು ದುರುಪಯೋಗಪಡಿಸಿಕೊಂಡರೆ, ನೀವು ಫೀಚರ್‌ಗೆ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳಬಹುದು ಅಥವಾ ನಿಮ್ಮ YouTube ಖಾತೆ ಅಥವಾ ಪಾಲುದಾರಿಕೆಯನ್ನು ಕೊನೆಗೊಳಿಸಬಹುದು. ದುರುಪಯೋಗ ಎಂಬುದು, ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ಉದ್ದೇಶಪೂರ್ವಕ ಅಥವಾ ಪುನರಾವರ್ತಿತ ದುರುಪಯೋಗ ಅಥವಾ ಹೊಂದಾಣಿಕೆ ವ್ಯವಸ್ಥೆಯ ತನಿಖೆಯ ಪ್ರಯತ್ನ ಅಥವಾ ರಿವರ್ಸ್ ಎಂಜಿನಿಯರಿಂಗ್ ಅನ್ನು ಒಳಗೊಂಡಿದೆ.

ಹೊಂದಾಣಿಕೆಗಳನ್ನು ಪರಿಶೀಲಿಸಿ ಮತ್ತು ಅವುಗಳ ಮೇಲೆ ಕ್ರಮ ಕೈಗೊಳ್ಳಿ

ನಿಮ್ಮ ಹೊಂದಾಣಿಕೆಗಳನ್ನು ಪರಿಶೀಲಿಸುವ ಮೊದಲು, ನಾವು ಹೊಂದಾಣಿಕೆಯಾಗುವ ವೀಡಿಯೊವನ್ನು ಪತ್ತೆಹಚ್ಚಿದ್ದೇವೆ ಎಂದ ಮಾತ್ರಕ್ಕೆ ಅದು ನಿಮ್ಮ ಕೃತಿಸ್ವಾಮ್ಯವನ್ನು ಉಲ್ಲಂಘಿಸುತ್ತಿದೆ ಎಂದು ಅರ್ಥವಲ್ಲ ಎಂಬುದನ್ನು ನೆನಪಿಡಿ. ಪ್ರತಿಯೊಂದು ಹೊಂದಾಣಿಕೆಯನ್ನು ಪರಿಶೀಲಿಸುವುದು ಮತ್ತು ನ್ಯಾಯಯುತ ಬಳಕೆ, ನ್ಯಾಯೋಚಿತ ವ್ಯವಹಾರ ಅಥವಾ ತತ್ಸಮಾನ ವಿನಾಯಿತಿಯು ಅನ್ವಯಿಸುತ್ತದೆಯೇ ಎಂಬುದನ್ನು ಪರಿಗಣಿಸುವುದು ನಿಮ್ಮ ಜವಾಬ್ದಾರಿಯಾಗಿದೆ.

ನಿಮ್ಮ ವೀಡಿಯೊಗಳ ಹೊಂದಾಣಿಕೆಗಳನ್ನು ಪರಿಶೀಲಿಸಲು ಮತ್ತು ಅವುಗಳ ಮೇಲೆ ಕ್ರಮ ಕೈಗೊಳ್ಳಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕೃತಿಸ್ವಾಮ್ಯ  ಎಂಬುದನ್ನು ಆಯ್ಕೆ ಮಾಡಿ.
  3. ಹೊಂದಾಣಿಕೆಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ಹೊಂದಾಣಿಕೆಯಾಗುವ ವೀಡಿಯೊಗಳನ್ನು ಪರಿಶೀಲಿಸಿ. ವೀಡಿಯೊಗಳನ್ನು, ವೀಕ್ಷಣೆಗಳ ಸಂಖ್ಯೆ (ಒಟ್ಟು ವೀಕ್ಷಣೆಗಳು) ಅಥವಾ ಚಾನಲ್‌ಗಳನ್ನು, ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯ (ಸಬ್‌ಸ್ಕ್ರೈಬರ್‌ಗಳು) ಮೂಲಕ ಹುಡುಕಲು ನೀವು ಫಿಲ್ಟರ್  ಅನ್ನು ಆಯ್ಕೆ ಮಾಡಬಹುದು.
  5. ನೀವು ಕ್ರಮ ಕೈಗೊಳ್ಳಲು ಬಯಸುವ ವೀಡಿಯೊದ ಪಕ್ಕದಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ. ಕೈಗೊಳ್ಳಬೇಕಾದ ಕ್ರಮವನ್ನು ಆಯ್ಕೆ ಮಾಡಿ:
    • ಆರ್ಕೈವ್ ಮಾಡಿ: ಈ ಆಯ್ಕೆಯು ನಿಮ್ಮ ಹೊಂದಾಣಿಕೆಗಳ ಟ್ಯಾಬ್‌ನಿಂದ ಆ ಹೊಂದಾಣಿಕೆಯನ್ನು ತೆಗೆದುಹಾಕುತ್ತದೆ. ಹೊಂದಾಣಿಕೆಯಾಗುವ ವೀಡಿಯೊವನ್ನು ಅಳಿಸಲಾಗುವುದಿಲ್ಲ ಅಥವಾ ಅದರ ಮೇಲೆ ಯಾವ ಪರಿಣಾಮವೂ ಉಂಟಾಗುವುದಿಲ್ಲ. ಆರ್ಕೈವ್ ಮಾಡಲಾದ ಹೊಂದಾಣಿಕೆಗಳು ನಿಮ್ಮ ಆರ್ಕೈವ್ ಟ್ಯಾಬ್‍ನಲ್ಲಿ ಕಾಣಿಸುತ್ತವೆ.
    • ತೆಗೆದುಹಾಕಲು ವಿನಂತಿಸಿ: ಈ ಆಯ್ಕೆಯು ನಮ್ಮ ತೆಗೆದುಹಾಕುವಿಕೆ ವಿನಂತಿ ವೆಬ್‌ಫಾರ್ಮ್ ಅನ್ನು ತೆರೆಯುತ್ತದೆ, ಇದರಿಂದ ನೀವು, ಹೊಂದಾಣಿಕೆಯಾಗುವ ವೀಡಿಯೊಗಾಗಿ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಬಹುದು. ಸಲ್ಲಿಸಿದ ಬಳಿಕ, ನಿಮ್ಮ ತೆಗೆದುಹಾಕುವಿಕೆ ವಿನಂತಿಗಳ ಟ್ಯಾಬ್‌ನಲ್ಲಿ ನಿಮ್ಮ ತೆಗೆದುಹಾಕುವಿಕೆ ವಿನಂತಿಗಳನ್ನು ಟ್ರ್ಯಾಕ್ ಮಾಡಬಹುದು.
    • ಚಾನಲ್ ಅನ್ನು ಸಂಪರ್ಕಿಸಿ: ಹೊಂದಾಣಿಕೆಯಾಗುವ ವೀಡಿಯೊವನ್ನು ಅಪ್‌ಲೋಡ್ ಮಾಡಿದವರಿಗೆ ಪೂರ್ವ-ಲಿಖಿತ ಇಮೇಲ್ ಅನ್ನು ಕಳುಹಿಸಲು ಈ ಆಯ್ಕೆಯು ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಸಂದೇಶಗಳ ಟ್ಯಾಬ್‌ನಲ್ಲಿ ನೀವು ಈ ಹಿಂದೆ ಕಳುಹಿಸಿದ ಇಮೇಲ್‌ಗಳನ್ನು ನೋಡಬಹುದು.

ನಿಮ್ಮ ವೀಡಿಯೊಗಳ ಸಂಭಾವ್ಯ ಹೊಂದಾಣಿಕೆಗಳನ್ನು ಪರಿಶೀಲಿಸಲು ಮತ್ತು ಅವುಗಳ ಮೇಲೆ ಕ್ರಮ ಕೈಗೊಳ್ಳಲು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕೃತಿಸ್ವಾಮ್ಯ  ಎಂಬುದನ್ನು ಆಯ್ಕೆ ಮಾಡಿ.
  3. ತೆಗೆದುಹಾಕುವಿಕೆ ವಿನಂತಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ಹೊಂದಾಣಿಕೆಗಳನ್ನು ಹುಡುಕಿ ಕಾಲಮ್‌ನಲ್ಲಿ, ನಕಲಿಗಳಲ್ಲದ ಕಾರಣಕ್ಕಾಗಿ ಸ್ವಯಂಚಾಲಿತವಾಗಿ ಮರು-ಅಪ್‌ಲೋಡ್ ಅನ್ನು ತಡೆಯಲು ಅರ್ಹವಾಗಿರದ ಸಂಭಾವ್ಯ ಹೊಂದಾಣಿಕೆಗಳು ನಿಮಗೆ ಕಾಣಿಸುತ್ತವೆ.
  5. ಒಂದು ಸಾಲನ್ನು ಕ್ಲಿಕ್ ಮಾಡಿ. ವೀಡಿಯೊದ ಕುರಿತು ಇನ್ನಷ್ಟು ವಿವರಗಳನ್ನು ತೋರಿಸಲು ಸಾಲು ವಿಸ್ತೃತಗೊಳ್ಳುತ್ತದೆ.
  6. ಹೊಂದಾಣಿಕೆಗಳನ್ನು ವೀಕ್ಷಿಸಿ ಎಂಬುದನ್ನು ಕ್ಲಿಕ್ ಮಾಡಿ. ಹೊಂದಾಣಿಕೆಗಳ ಟ್ಯಾಬ್ ತೆರೆಯುತ್ತದೆ ಮತ್ತು ಸಂಭಾವ್ಯ ಹೊಂದಾಣಿಕೆಗಳನ್ನು ತೋರಿಸಲು ಫಿಲ್ಟರ್ ಮಾಡಲಾಗಿರುತ್ತದೆ.
  7. ನೀವು ಕ್ರಮ ಕೈಗೊಳ್ಳಲು ಬಯಸುವ ವೀಡಿಯೊದ ಪಕ್ಕದಲ್ಲಿರುವ ಬಾಕ್ಸ್ ಅನ್ನು ಚೆಕ್ ಮಾಡಿ. ಕೈಗೊಳ್ಳಬೇಕಾದ ಕ್ರಮವನ್ನು ಆಯ್ಕೆ ಮಾಡಿ:
    • ಆರ್ಕೈವ್ ಮಾಡಿ: ಈ ಆಯ್ಕೆಯು ನಿಮ್ಮ ಹೊಂದಾಣಿಕೆಗಳ ಟ್ಯಾಬ್‌ನಿಂದ ಆ ಹೊಂದಾಣಿಕೆಯನ್ನು ತೆಗೆದುಹಾಕುತ್ತದೆ. ಹೊಂದಾಣಿಕೆಯಾಗುವ ವೀಡಿಯೊವನ್ನು ಅಳಿಸಲಾಗುವುದಿಲ್ಲ ಅಥವಾ ಅದರ ಮೇಲೆ ಯಾವ ಪರಿಣಾಮವೂ ಉಂಟಾಗುವುದಿಲ್ಲ. ಆರ್ಕೈವ್ ಮಾಡಲಾದ ಹೊಂದಾಣಿಕೆಗಳು ನಿಮ್ಮ ಆರ್ಕೈವ್ ಟ್ಯಾಬ್‍ನಲ್ಲಿ ಕಾಣಿಸುತ್ತವೆ.
    • ತೆಗೆದುಹಾಕಲು ವಿನಂತಿಸಿ: ಈ ಆಯ್ಕೆಯು ನಮ್ಮ ತೆಗೆದುಹಾಕುವಿಕೆ ವಿನಂತಿ ವೆಬ್‌ಫಾರ್ಮ್ ಅನ್ನು ತೆರೆಯುತ್ತದೆ, ಇದರಿಂದ ನೀವು, ಹೊಂದಾಣಿಕೆಯಾಗುವ ವೀಡಿಯೊಗಾಗಿ ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಬಹುದು. ಸಲ್ಲಿಸಿದ ಬಳಿಕ, ನೀವು ತೆಗೆದುಹಾಕಲು ವಿನಂತಿಸಿದ ವೀಡಿಯೊಗಳನ್ನು ತೆಗೆದುಹಾಕುವಿಕೆ ವಿನಂತಿಗಳು ಟ್ಯಾಬ್‌ನಲ್ಲಿ ವೀಕ್ಷಿಸಬಹುದು.
    • ಚಾನಲ್ ಅನ್ನು ಸಂಪರ್ಕಿಸಿ: ಹೊಂದಾಣಿಕೆಯಾಗುವ ವೀಡಿಯೊವನ್ನು ಅಪ್‌ಲೋಡ್ ಮಾಡಿದವರಿಗೆ ಪೂರ್ವ-ಲಿಖಿತ ಇಮೇಲ್ ಅನ್ನು ಕಳುಹಿಸಲು ಈ ಆಯ್ಕೆಯು ನಿಮಗೆ ಅವಕಾಶ ನೀಡುತ್ತದೆ. ನಿಮ್ಮ ಸಂದೇಶಗಳ ಟ್ಯಾಬ್‌ನಲ್ಲಿ ನೀವು ಈ ಹಿಂದೆ ಕಳುಹಿಸಿದ ಇಮೇಲ್‌ಗಳನ್ನು ನೋಡಬಹುದು.
Copyright Match Tool ಪತ್ತೆಹಚ್ಚಿರುವ ಹೊಸ ಹೊಂದಾಣಿಕೆಗಳ ಕುರಿತು ಅಪ್‌ಡೇಟ್ ಆಗಿರಲು, ನಿಮ್ಮ ಹೊಂದಾಣಿಕೆಗಳ ಟ್ಯಾಬ್ ಅನ್ನು ಆಗಾಗ ಪರಿಶೀಲಿಸುತ್ತಿರಿ. ಹೊಂದಾಣಿಕೆಗಳು ಕಂಡುಬಂದಾಗ ನಿಮಗೆ ತಿಳಿಸುವುದಕ್ಕಾಗಿ ನಿಮ್ಮ ಚಾನಲ್ ಪುಟದಲ್ಲಿ ಬೆಲ್ ನೋಟಿಫಿಕೇಶನ್‌ಗಳನ್ನು  ಸಹ ಪಡೆಯುವಿರಿ.

FAQ ಗಳು

ಒಂದು ಹೊಂದಾಣಿಕೆಗೆ ಸಂಬಂಧಪಟ್ಟಂತೆ ನಾನು ಏನೂ ಮಾಡಲು ಬಯಸದಿದ್ದರೆ ಏನಾಗುತ್ತದೆ?
ನೀವು ಪ್ರತಿ ಹೊಂದಾಣಿಕೆಗೆ ಸಂಬಂಧಪಟ್ಟಂತೆ ಕ್ರಮ ಕೈಗೊಳ್ಳಬೇಕಾಗಿಲ್ಲ. ಒಂದು ಹೊಂದಾಣಿಕೆಯನ್ನು ನಿಮ್ಮ ಹೊಂದಾಣಿಕೆಗಳ ಟ್ಯಾಬ್‌ನಿಂದ ತೆಗೆದುಹಾಕುವುದಕ್ಕಾಗಿ ನೀವು ಅದನ್ನು ಆರ್ಕೈವ್ ಮಾಡಿಬಿಡಬಹುದು. ನಾವು ಪ್ರತಿ ಹೊಂದಾಣಿಕೆಯನ್ನು ಒಮ್ಮೆ ಮಾತ್ರ ತೋರಿಸುತ್ತೇವೆ, ಆದ್ದರಿಂದ ನೀವು ಅದನ್ನು ಆರ್ಕೈವ್ ಮಾಡಿದರೆ, ಅದು ನಿಮ್ಮ ಹೊಂದಾಣಿಕೆಗಳ ಟ್ಯಾಬ್‌ನಲ್ಲಿ ಮತ್ತೊಮ್ಮೆ ಕಾಣಿಸುವುದಿಲ್ಲ.
ನನ್ನ ಕಂಟೆಂಟ್‌ಗೆ ಹೊಂದಾಣಿಕೆಯಾಗುವ ಒಂದು ವೀಡಿಯೊ YouTube ನಲ್ಲಿ ನನಗೆ ಕಂಡುಬಂದಿತು, ಆದರೆ ಅದು ನನ್ನ ಹೊಂದಾಣಿಕೆಗಳ ಟ್ಯಾಬ್‌ನಲ್ಲಿ ಇರಲಿಲ್ಲ. ಅದನ್ನು ಏಕೆ ಪತ್ತೆಹಚ್ಚಲಾಗಲಿಲ್ಲ?
Copyright Match Tool ನಿಮ್ಮ ವೀಡಿಯೊಗಳ ಸಂಪೂರ್ಣ ಅಥವಾ ಬಹುತೇಕ ಸಂಪೂರ್ಣ ಹೊಂದಾಣಿಕೆಗಳನ್ನು ಕಂಡುಹಿಡಿಯುವುದಕ್ಕಾಗಿ ಇದೆ. ಯಾರಾದರೂ ನಿಮ್ಮ ವೀಡಿಯೊದ ಸಣ್ಣ ಕ್ಲಿಪ್ ಅನ್ನು ಬಳಸಿದರೆ, ಅದನ್ನು ನಾವು ತೋರಿಸದಿರಬಹುದು. ನೀವು ತೆಗೆದುಹಾಕಲು ಬಯಸುವ, ನಿಮ್ಮ ಒಂದು ವೀಡಿಯೊದ ಮರು-ಅಪ್‌ಲೋಡ್‌ನ ಕುರಿತು ನಿಮಗೆ ತಿಳಿದಿದ್ದರೆ, ನೀವು ಅದನ್ನು ಯಾವಾಗಲೂ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ವೆಬ್‌ಫಾರ್ಮ್‌ನ ಮೂಲಕ ವರದಿ ಮಾಡಬಹುದು.
ನನ್ನ ಎಲ್ಲಾ ವೀಡಿಯೊಗಳು ಹೊಂದಾಣಿಕೆಗಾಗಿ ಏಕೆ ಅರ್ಹವಾಗಿಲ್ಲ?
ನೀವು ಅಪ್‌ಲೋಡ್ ಮಾಡಿದ ವೀಡಿಯೊಗಾಗಿ, ಹೊಂದಾಣಿಕೆ ಪತ್ತೆಹಚ್ಚಲು ಸ್ಕ್ಯಾನ್ ಮಾಡದಿರುವುದಕ್ಕೆ ಒಂದಿಷ್ಟು ಕಾರಣಗಳಿರಬಹುದು:
  • ಆ ವೀಡಿಯೊವನ್ನು YouTube ನಲ್ಲಿ ನೀವು ಮೊದಲು ಅಪ್‌ಲೋಡ್ ಮಾಡಲಿಲ್ಲ
  • ವೀಡಿಯೊ ಈಗಾಗಲೇ Content ID ಸುರಕ್ಷತೆಯನ್ನು ಹೊಂದಿದೆ
  • ವೀಡಿಯೊದ ಮೇಲೆ Content ID ಕ್ಲೈಮ್ ಇದೆ
ನಾನೊಬ್ಬ ಸಂಗೀತಗಾರ. ನನ್ನ ಹಾಡುಗಳ ಅಪ್‌ಲೋಡ್‌ಗಳನ್ನು ಪತ್ತೆಹಚ್ಚಲು ನಾನು ಈ ಪರಿಕರವನ್ನು ಬಳಸಬಹುದೇ?

ಹೌದು, ನಿಮ್ಮ ಹಾಡು ಅಥವಾ ಆಡಿಯೋ ಕಂಟೆಂಟ್ ಅನ್ನು ಬಳಸಿದ ಬೇರೆ ಯಾರದೋ ವೀಡಿಯೊವನ್ನು ಯಶಸ್ವಿಯಾಗಿ ತೆಗೆದುಹಾಕಲು ನೀವು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ವೆಬ್‌ಫಾರ್ಮ್ಅನ್ನು ಬಳಸಿದರೆ, ನಿಮ್ಮ ಹಾಡು ಅಥವಾ ಆಡಿಯೋ ಕಂಟೆಂಟ್‌ಗೆ ಸಂಭಾವ್ಯವಾಗಿ ಹೊಂದಾಣಿಕೆಯಾಗಬಹುದಾದ ಆಡಿಯೋವನ್ನು ಹೊಂದಿರುವ ಇತರ ವೀಡಿಯೊಗಳನ್ನು Copyright Match Tool ತೋರಿಸುತ್ತದೆ. ಆಡಿಯೋವನ್ನು ರಿಪ್ಲೇಸ್ ಮಾಡಿರಬಹುದಾದ ಅಥವಾ ಡಬ್ ಮಾಡಿರಬಹುದಾದ ಮರು-ಅಪ್‌ಲೋಡ್‌ಗಳನ್ನು ಸಹ Copyright Match Tool ಪತ್ತೆಹಚ್ಚಬಹುದು.

ನಿಮ್ಮ ಹಾಡು ಅಥವಾ ಆಡಿಯೋ ಕಂಟೆಂಟ್‌ನ ಒಂದು ಭಾಗವನ್ನು ಬೇರೆ ಯಾರೋ ತಮ್ಮ ವೀಡಿಯೊದಲ್ಲಿ ಬಳಸಿದ್ದರೆ, ಅದನ್ನು Copyright Match Tool ಮೂಲಕ ತೋರಿಸಲಾಗುವುದಿಲ್ಲ ಎಂಬುದನ್ನು ನೆನಪಿಡಿ. ನಿಮ್ಮ ಆಡಿಯೋವನ್ನು ನಿಮ್ಮ ಅನುಮತಿಯಿಲ್ಲದೆ ಬಳಸುವ ವೀಡಿಯೊ ನಿಮಗೆ ಕಂಡುಬಂದರೆ, ನಮ್ಮ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯ ವೆಬ್‌ಫಾರ್ಮ್ ಅನ್ನು ಬಳಸಿಕೊಂಡು ನೀವು ಅದನ್ನು ಯಾವಾಗಲೂ ವರದಿ ಮಾಡಬಹುದು.
ನನ್ನ ವೀಡಿಯೊಗಳ ಹೊಂದಾಣಿಕೆಗಳನ್ನು ನೀವು ಏಕೆ ಸ್ವಯಂಚಾಲಿತವಾಗಿ ತೆಗೆದುಹಾಕುವುದಿಲ್ಲ?

ತಮ್ಮ ಕಂಟೆಂಟ್‌ನ ಅನಧಿಕೃತ ಬಳಕೆಗಳ ಕುರಿತು ನಮಗೆ ತಿಳಿಸಲು YouTube, ಕೃತಿಸ್ವಾಮ್ಯ ಮಾಲೀಕರನ್ನು ಅವಲಂಬಿಸುತ್ತದೆ. ವೀಡಿಯೊವನ್ನು ಮೊದಲು ಯಾರು ಅಪ್‌ಲೋಡ್ ಮಾಡಿದ್ದಾರೆ ಎಂಬುದನ್ನು ನಾವು ತಿಳಿದುಕೊಳ್ಳಬಹುದೇ ಹೊರತು, ಅದರ ಮಾಲೀಕರು ಯಾರು ಅಥವಾ ಅದನ್ನು ಅಪ್‌ಲೋಡ್ ಮಾಡಲು ಯಾರು ಅನುಮತಿ ಹೊಂದಿದ್ದಾರೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ.

ಅನೇಕ ರಚನೆಕಾರರು ತಮ್ಮ ವೀಡಿಯೊಗಳನ್ನು ಮರು-ಅಪ್‌ಲೋಡ್ ಮಾಡಲು ಇತರ ಚಾನಲ್‌ಗಳಿಗೆ ಅನುಮತಿ ನೀಡುತ್ತಾರೆ. ಕೆಲವೊಮ್ಮೆ, ಮರು-ಅಪ್‌ಲೋಡ್ ಮಾಡಿದ ಬಳಿಕ ರಚನೆಕಾರರು ಪರವಾನಗಿ ಒಪ್ಪಂದವನ್ನು ಮಾಡಿಕೊಳ್ಳುತ್ತಾರೆ ಅಥವಾ ವೀಡಿಯೊಗಳಿಗೆ ಸಂಬಂಧಿಸಿದಂತೆ ಸಹಯೋಗದಲ್ಲಿ ಕೆಲಸ ಮಾಡುತ್ತಾರೆ ಮತ್ತು ಹಲವಾರು ಚಾನಲ್‌ಗಳಲ್ಲಿ ಅದರ ಪ್ರತಿಗಳನ್ನು ಅಪ್‌ಲೋಡ್ ಮಾಡುತ್ತಾರೆ.

ಅದಲ್ಲದೆ, ನಿಮ್ಮ ಕಂಟೆಂಟ್‌ನ ಪ್ರತಿಯೊಂದು ಬಳಕೆಯು ನಿಮ್ಮ ಕೃತಿಸ್ವಾಮ್ಯವನ್ನು ಉಲ್ಲಂಘಿಸದಿರಬಹುದು. ನಿಮ್ಮ ಕಂಟೆಂಟ್‌ನ ಮರು-ಅಪ್‌ಲೋಡ್ ಮಾನ್ಯವಾಗಿರಬಹುದಾದ ಕೆಲವು ಉದಾಹರಣೆಗಳಲ್ಲಿ ನ್ಯಾಯಯುತ ಬಳಕೆ ಹಾಗೂ ಸಾರ್ವಜನಿಕ ಡೊಮೇನ್ ಒಳಗೊಂಡಿವೆ.

ಅಪ್‌ಲೋಡ್ ಮಾಡಿದವರ ಹಕ್ಕುಗಳನ್ನು, ಮೂಲ ಕೃತಿಸ್ವಾಮ್ಯದ ಮಾಲೀಕರ ಹಕ್ಕುಗಳೊಂದಿಗೆ ಸಮತೋಲನಗೊಳಿಸಲು, Copyright Match Tool ರಚನೆಕಾರರಿಗೆ ಮರು-ಅಪ್‌ಲೋಡ್‌ಗಳ ಕುರಿತು ಮಾಹಿತಿ ನೀಡಲು ಪ್ರಯತ್ನಿಸುತ್ತದೆ. ನಂತರ ಅವರು, ಹೊಂದಾಣಿಕೆಯನ್ನು ಎಚ್ಚರಿಕೆಯಿಂದ ಪರಿಶೀಲಿಸಿದ ಬಳಿಕ, ತಾವು ಏನು ಮಾಡಬೇಕೆಂದು ನಿರ್ಧರಿಸಲು Copyright Match Tool ಅವಕಾಶ ನೀಡುತ್ತದೆ.

ನಾನು ಒಂದು ಚಾನಲ್‌ನಲ್ಲಿ ಅನೇಕ ವೀಡಿಯೊಗಳನ್ನು ತೆಗೆದುಹಾಕಲು ವಿನಂತಿಸಿದ್ದೇನೆ. ಅದನ್ನು ಏಕೆ ಕೊನೆಗೊಳಿಸಿಲ್ಲ?

ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ದುರುಪಯೋಗದ ವಿರುದ್ಧ ನಾವು ಹಲವಾರು ರಕ್ಷಣಾ ಕ್ರಮಗಳನ್ನು ಹೊಂದಿದ್ದೇವೆ. ಚಾನಲ್‌ಗಳನ್ನು ಕೊನೆಗೊಳಿಸುವ ಮೊದಲು, ಕೃತಿಸ್ವಾಮ್ಯ ಸ್ಟ್ರೈಕ್‌ಗಳನ್ನು ಬಗೆಹರಿಸಲು ಅವುಗಳಿಗೆ ಅವಕಾಶ ದೊರೆಯುವುದನ್ನು ನಮ್ಮ ಸಿಸ್ಟಂ ಖಚಿತಪಡಿಸಿಕೊಳ್ಳುತ್ತದೆ.

ಈಗಲೂ ಲೈವ್ ಆಗಿರುವ ಚಾನಲ್‌ನ ವಿರುದ್ಧ ನೀವು ಹಲವಾರು ತೆಗೆದುಹಾಕುವಿಕೆ ವಿನಂತಿಗಳನ್ನು ಸಲ್ಲಿಸಿದರೆ, ಆ ಯಾಂತ್ರಿಕ ವ್ಯವಸ್ಥೆಗಳಲ್ಲೊಂದು ಜಾರಿಯಲ್ಲಿರುವ ಸಾಧ್ಯತೆಯಿದೆ. ನಮ್ಮ ಜಾರಿಗೊಳಿಸುವಿಕೆ ಕಾರ್ಯನೀತಿಗಳಲ್ಲಿ ಒಂದು ಚಾನಲ್‌ನ ವಿರುದ್ಧ ತೆಗೆದುಹಾಕುವಿಕೆ ವಿನಂತಿಗಳ ಸಂಖ್ಯೆಯನ್ನು ಪರಿಗಣಿಸಲಾಗುತ್ತದೆ. ನಿಮಗೆ ಇನ್ನೂ ಕಂಟೆಂಟ್ ಕಂಡುಬಂದರೆ, ನೀವು ತೆಗೆದುಹಾಕುವಿಕೆ ವಿನಂತಿಯನ್ನು ಸಲ್ಲಿಸಬಹುದು.

ನಾನು ಸಂಪೂರ್ಣ ಚಾನಲ್ ಅನ್ನು ವರದಿ ಮಾಡಬಹುದೇ?

ಯಾರಾದರೂ, ಬೇರೊಬ್ಬ ವ್ಯಕ್ತಿಯ ವೈಯಕ್ತಿಕ ಮಾಹಿತಿಯನ್ನು ಬಳಸಿಕೊಂಡು YouTube ನಲ್ಲಿ ತಾವು ಬೇರೆ ಯಾರೋ ಎಂಬಂತೆ ವರ್ತಿಸಿ ಜನರನ್ನು ವಂಚಿಸಿದರೆ, ನಾವು ಅದನ್ನು ಸೋಗು ಹಾಕುವಿಕೆ ಎಂದು ಪರಿಗಣಿಸುತ್ತೇವೆ.

ನಿಮ್ಮ ಹಾಗೆ ಸೋಗು ಹಾಕಲಾಗುತ್ತಿದೆ ಎಂದು ನಿಮಗೆ ಅನಿಸಿದರೆ, ನಮ್ಮ ಸೋಗು ಹಾಕುವಿಕೆ ವೆಬ್‌ಫಾರ್ಮ್ ಅನ್ನು ಬಳಸಿಕೊಂಡು ಅದನ್ನು ವರದಿ ಮಾಡಿ. ಆ ಮಾನದಂಡಗಳು ಅನ್ವಯಿಸುವುದಿಲ್ಲ ಎಂದಾದರೆ, ನಿಮ್ಮ ಕೃತಿಸ್ವಾಮ್ಯವನ್ನು ಉಲ್ಲಂಘಿಸುತ್ತಿವೆ ಎಂದು ನೀವು ಭಾವಿಸುವಂತಹ ವೀಡಿಯೊಗಳನ್ನು ವರದಿ ಮಾಡಲು, ನಮ್ಮ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿ ವೆಬ್‌ಫಾರ್ಮ್ ಅನ್ನು ನೀವು ಬಳಸಬಹುದು.

Copyright Match Tool ಗೆ ನಾನು ಹೇಗೆ ಆ್ಯಕ್ಸೆಸ್ ಪಡೆಯಬಹುದು?

Copyright Match Tool, ಮಾನ್ಯವಾದ ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿಯನ್ನು ಸಲ್ಲಿಸಿದ ಯಾವುದೇ YouTube ಬಳಕೆದಾರರಿಗೆ ಲಭ್ಯವಿದೆ. ನಿಮ್ಮ ತೆಗೆದುಹಾಕುವಿಕೆ ವಿನಂತಿಯನ್ನು ಅನುಮೋದಿಸಿದ ಬಳಿಕ, Copyright Match Tool, ನಿಮ್ಮ ತೆಗೆದುಹಾಕುವಿಕೆ ವಿನಂತಿಯಲ್ಲಿ ವರದಿ ಮಾಡಲಾದ ವೀಡಿಯೊಗಳ ಸಂಭಾವ್ಯ ಹೊಂದಾಣಿಕೆಗಳ ಅಪ್‌ಲೋಡ್‌ಗಳಿಗಾಗಿ YouTube ಅನ್ನು ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ಮುಂದೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದನ್ನು ನೀವು ನಿರ್ಧರಿಸಲು ಸಾಧ್ಯವಾಗುವ ಹಾಗೆ ಈ ಸಂಭಾವ್ಯ ಹೊಂದಾಣಿಕೆಗಳನ್ನು ನಾವು ತೋರಿಸುತ್ತೇವೆ.

Copyright Match Tool, ಈ ಫಾರ್ಮ್ ಅನ್ನು ಭರ್ತಿ ಮಾಡಿರುವ ಮತ್ತು ಸುಧಾರಿತ ಹಕ್ಕುಗಳ ನಿರ್ವಹಣೆಯ ಪರಿಕರದ ಅವಶ್ಯಕತೆಯನ್ನು ಪ್ರದರ್ಶಿಸಿರುವ ಯಾವುದೇ ಚಾನಲ್‌ಗೂ ಲಭ್ಯವಿದೆ. YouTube ಪಾಲುದಾರ ಕಾರ್ಯಕ್ರಮದಲ್ಲಿರುವ (YPP) ಚಾನಲ್‌ಗಳಿಗಾಗಿ ಈ ಪರಿಕರವು YouTube Studio ದಲ್ಲಿ ಕೃತಿಸ್ವಾಮ್ಯ ಪುಟದಲ್ಲಿ ಲಭ್ಯವಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15041229036352071885
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false