ನಿಮ್ಮ ಗುರುತು ಅಥವಾ ಪಾವತಿ ಮಾಹಿತಿಯನ್ನು ದೃಢೀಕರಿಸಿ

Google ಉತ್ಪನ್ನಗಳು ಅಥವಾ ಸೇವೆಗಳಿಗೆ ಸೈನ್-ಅಪ್‌ಗಳು, ವಹಿವಾಟುಗಳು, ಅಥವಾ ಪಾವತಿ ವಿಧಾನದ ಬದಲಾವಣೆಗಳಂತಹ ನಿರ್ದಿಷ್ಟ Google ಖಾತೆ ಚಟುವಟಿಕೆಗಳಿಗಾಗಿ, ನಿಮ್ಮ ಗುರುತು ಅಥವಾ ಬಳಸಿದ ಪಾವತಿ ವಿಧಾನದ ಮಾಲೀಕತ್ವವನ್ನು ನೀವು ದೃಢೀಕರಿಸಬೇಕಾಗಬಹುದು.
ಸಲಹೆ: Google Pay ಆ್ಯಪ್‌ನಲ್ಲಿ ನಿಮ್ಮ ಗುರುತನ್ನು ದೃಢೀಕರಿಸಲು, ಈ ಸೂಚನೆಗಳನ್ನು ಅನುಸರಿಸಿ.

ದೃಢೀಕರಣದ ಕುರಿತು

ನಾವು ದೃಢೀಕರಿಸಲು ನಿಮ್ಮನ್ನು ಏಕೆ ಕೇಳಬಹುದು
  • ನೀವು ನಿರ್ದಿಷ್ಟ ಕಂಟೆಂಟ್ ಅನ್ನು ಆ್ಯಕ್ಸೆಸ್ ಮಾಡಿದಾಗ ನಿಮ್ಮ ಮಾಹಿತಿಯು ಸರಿಯಾಗಿದೆಯೇ ಎಂಬುದನ್ನು ದೃಢೀಕರಿಸಲು.
  • ನೀವು Google ನೊಂದಿಗೆ ವಹಿವಾಟು ಪೂರ್ಣಗೊಳಿಸಿದಾಗ ನಿಮ್ಮ ಗುರುತನ್ನು ದೃಢೀಕರಿಸಲು.
  • ನಾವು ಅಸಹಜ ಚಟುವಟಿಕೆ ಅಥವಾ ವಹಿವಾಟುಗಳನ್ನು ಕಂಡಾಗ.
  • ಕಾನೂನು ಅಥವಾ ನಿಯಂತ್ರಕ ಕಾರಣಗಳಿಗಾಗಿ ನಮಗೆ ಹೆಚ್ಚಿನ ಮಾಹಿತಿಯ ಅಗತ್ಯವಿದ್ದಾಗ.

ಪ್ರಮುಖ ಮಾಹಿತಿ: ನಿಮ್ಮ ಖಾತೆಯನ್ನು ದೃಢೀಕರಿಸಲು ನಾವು ನಿಮ್ಮನ್ನು ಕೇಳಿದರೆ, ಯಾವುದೇ ಬಾಕಿಯಿರುವ ವಹಿವಾಟುಗಳನ್ನು ರದ್ದುಗೊಳಿಸಲಾಗುತ್ತದೆ. ನಿಮ್ಮ ಬ್ಯಾಂಕ್ ಸ್ಟೇಟ್‌ಮೆಂಟ್‌ನಲ್ಲಿನ ಬಾಕಿ ಇರುವ ಶುಲ್ಕಗಳು 14 ವ್ಯವಹಾರ ದಿನಗಳಲ್ಲಿ ಕಣ್ಮರೆಯಾಗುತ್ತವೆ.

ಯಾವ ಮಾಹಿತಿಯನ್ನು ಒದಗಿಸಲು ನಿಮ್ಮನ್ನು ಕೇಳಬಹುದು

ದೃಢೀಕರಣವನ್ನು ಪೂರ್ಣಗೊಳಿಸಲು, ಪ್ರತಿಯೊಂದು ಪಾವತಿ ವಿಧಾನವನ್ನು ದೃಢೀಕರಿಸಲು ನಿಮ್ಮನ್ನು ಕೇಳಬಹುದಾಗಿದೆ. ಅದನ್ನು ಮಾಡಲು, ನೀವು ದೃಢೀಕರಣ ಕೋಡ್ ಅನ್ನು ವಿನಂತಿಸಬಹುದು.

ಇವುಗಳನ್ನು ಒದಗಿಸಲು ಸಹ ನಿಮ್ಮನ್ನು ಕೇಳಬಹುದಾಗಿದೆ:

  • ಕಾನೂನುಬದ್ಧ ಹೆಸರು
  • ನಿಮ್ಮ ಪಾವತಿಗಳ ಪ್ರೊಫೈಲ್‌ನಲ್ಲಿ ಬಳಸಲಾದ ಹೆಸರು
  • ವಿಳಾಸ
  • ಜನ್ಮ ದಿನಾಂಕ
  • ನಿಮ್ಮ ಸರ್ಕಾರಿ ID ಯ ಚಿತ್ರ
  • ವಿಳಾಸದ ಪುರಾವೆ
  • ನಿಮ್ಮ ಪಾವತಿ ವಿಧಾನದ ಚಿತ್ರ
ನಿಮ್ಮ ಮಾಹಿತಿಯನ್ನು ನಾವು ಹೇಗೆ ಬಳಸುತ್ತೇವೆ

ನೀವು ಒದಗಿಸುವ ಮಾಹಿತಿಯನ್ನು Google ಇದಕ್ಕಾಗಿ ಬಳಸುತ್ತದೆ:

  • ನಿಮ್ಮ ಗುರುತು ಅಥವಾ ಪಾವತಿ ವಿಧಾನವನ್ನು ದೃಢೀಕರಿಸಲು.
  • ವಂಚನೆ ಮತ್ತು ದುರುಪಯೋಗದಿಂದ ರಕ್ಷಿಸಲು.
  • Google ಉತ್ಪನ್ನಗಳಿಗಾಗಿ ದೃಢೀಕರಣಾ ಸೇವೆಗಳನ್ನು ಸುಧಾರಿಸಲು.

ನಿಮ್ಮ ಹೆಸರು ಮತ್ತು ವಿಳಾಸದಂತಹ ನಿಮ್ಮ ದೃಢೀಕೃತ ಮಾಹಿತಿಯನ್ನು ನಿಮ್ಮ Google ಖಾತೆಯೊಂದಿಗೆ ಸಂಗ್ರಹಣೆ ಮಾಡಲಾಗುತ್ತದೆ. ನಿಮ್ಮ ದೃಢೀಕೃತ ಮಾಹಿತಿಯನ್ನು ನೀವು payments.google.com ಎಂಬಲ್ಲಿ ನಿರ್ವಹಿಸಬಹುದು.

ಅನ್ವಯವಾದಾಗ, ನೀವು ಸಲ್ಲಿಸುವ ಮಾಹಿತಿಯನ್ನು Google ಗೌಪ್ಯತೆ ನೀತಿ ಮತ್ತು Google Payments ಗೌಪ್ಯತಾ ಸೂಚನೆಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ.

ದೃಢೀಕರಣವನ್ನು ಪೂರ್ಣಗೊಳಿಸುವುದು ಹೇಗೆ

ನಿಮ್ಮ ಮಾಹಿತಿಯನ್ನು ದೃಢೀಕರಿಸುವುದಕ್ಕಾಗಿ, ನೀವು ಡಾಕ್ಯುಮೆಂಟ್‌ಗಳನ್ನು ಸಲ್ಲಿಸಬೇಕಾಗಬಹುದು ಅಥವಾ ಕೋಡ್ ಅನ್ನು ವಿನಂತಿಸಬೇಕಾಗಬಹುದು. ಉತ್ಪನ್ನ ಅಥವಾ ನೀವು ಪೂರ್ಣಗೊಳಿಸಲು ಬಯಸುವ ಚಟುವಟಿಕೆಯನ್ನು ಆಧರಿಸಿ, ಕೆಲವು ದೃಢೀಕರಣ ವಿಧಾನಗಳು ಲಭ್ಯವಿಲ್ಲದಿರಬಹುದು.

  1. payments.google.com ಎಂಬಲ್ಲಿಗೆ ಹೋಗಿ.
  2. ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
  3. ಮೇಲೆ ಬಲಬದಿಯಲ್ಲಿ, ಎಚ್ಚರಿಕೆಗಳು Alert ನಂತರ ದೃಢೀಕರಿಸಿ ಅನ್ನು ಕ್ಲಿಕ್ ಮಾಡಿ.
  4. ದೃಢೀಕರಿಸಬೇಕಾದ ಕಾರ್ಡ್‌ನ ಪಕ್ಕದಲ್ಲಿ, ದೃಢೀಕರಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ನಿಮ್ಮ ದೃಢೀಕರಣ ವಿಧಾನಕ್ಕಾಗಿ ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
  6. ದೃಢೀಕರಿಸಬೇಕಾದ ಪ್ರತಿಯೊಂದು ಪಾವತಿ ವಿಧಾನಕ್ಕಾಗಿ ಮೇಲಿನ ಹಂತಗಳನ್ನು ಪುನರಾವರ್ತಿಸಿ.

ದೃಢೀಕರಣ ವಿಧಾನಗಳು

ದೃಢೀಕರಣವನ್ನು ಪೂರ್ಣಗೊಳಿಸಲು, ಈ ಕೆಳಗಿನವುಗಳಲ್ಲಿ ಒಂದು ವಿಧಾನವನ್ನು ಬಳಸಲು ನಿಮಗೆ ಹೇಳಲಾಗುತ್ತದೆ.

ದೃಢೀಕರಣ ಕೋಡ್‌ಗಾಗಿ ವಿನಂತಿಸಿ
  1. ಕೋಡ್ ಪಡೆಯಿರಿ ಎಂಬುದನ್ನು ಕ್ಲಿಕ್ ಮಾಡಿ.
  2. ನಿಮ್ಮ ಪಾವತಿ ವಿಧಾನವನ್ನು ಒದಗಿಸುವವರ ವೆಬ್‌ಸೈಟ್‌ಗೆ ಹೋಗಿ ಮತ್ತು ನಿಮ್ಮ ಖಾತೆಗೆ ಸೈನ್ ಇನ್ ಮಾಡಿ.
  3. ನಿಮ್ಮ ವಹಿವಾಟಿನ ಇತಿಹಾಸದಲ್ಲಿ, “GOOGLE” ಎಂಬ ಹೆಸರಿನ, $1.95 USD ಗಿಂತ ಕಡಿಮೆ ಮೌಲ್ಯದ ತಾತ್ಕಾಲಿಕ ಶುಲ್ಕವನ್ನು ಹುಡುಕಿ. ಕೊನೆಯ 6 ಅಂಕಿ ದೃಢೀಕರಣ ಕೋಡ್ ಆಗಿರುತ್ತದೆ.
    • ತಾತ್ಕಾಲಿಕ ಶುಲ್ಕದ ಮೊತ್ತವು ಕರೆನ್ಸಿಯ ಪ್ರಕಾರವನ್ನು ಆಧರಿಸಿ ವ್ಯತ್ಯಾಸವಾಗುತ್ತದೆ.
    • ನಿಮಗೆ ಕೋಡ್ ತಕ್ಷಣವೇ ಸಿಗಬಹುದು, ಆದರೆ ಇದಕ್ಕೆ 7 ದಿನಗಳಷ್ಟು ಸಮಯ ಬೇಕಾಗಲೂಬಹುದು.
    • ಸಲಹೆ: ನಿಮ್ಮ ಖಾತೆಯ ಮೇಲಿನ ಶುಲ್ಕ ಅಥವಾ ಹೋಲ್ಡ್ ತಾತ್ಕಾಲಿಕವಾಗಿರುತ್ತದೆ. ಶುಲ್ಕಗಳನ್ನು 30 ದಿನಗಳ ಒಳಗೆ ಮರುಪಾವತಿಸಲಾಗುತ್ತದೆ.
  4. 6-ಅಂಕಿಗಳ ಕೋಡ್ ಅನ್ನು ನಮೂದಿಸಿ.
  5. ದೃಢೀಕರಿಸಿ ಅನ್ನು ಕ್ಲಿಕ್ ಮಾಡಿ.
ಡಾಕ್ಯುಮೆಂಟ್‌ಗಳನ್ನು ಅಪ್‌ಲೋಡ್ ಮಾಡಿ

ಪ್ರಮುಖ ಸೂಚನೆ:

  • ನೀವು ಈ ಪ್ರಕ್ರಿಯೆಗಾಗಿ ಅಪ್‌ಲೋಡ್ ಮಾಡುವ ಮಾಹಿತಿಯನ್ನು ಕೇವಲ ಗುರುತಿಸುವಿಕೆಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತದೆ ಮತ್ತು ಸ್ಥಳೀಯ ನಿಯಂತ್ರಕ ಅವಶ್ಯಕತೆಗಳ ಅನುಸಾರ ಅದನ್ನು ನಿರ್ವಹಿಸಲಾಗುತ್ತದೆ.
  • YouTube ಮತ್ತು Google Store ಖರೀದಿಯ ದೃಢೀಕರಣಕ್ಕಾಗಿ ಡಾಕ್ಯುಮೆಂಟ್ ಅಪ್‌ಲೋಡ್ ಮಾಡುವ ವಿಧಾನವು ಲಭ್ಯವಿಲ್ಲ.

ನಿಮ್ಮ ಗುರುತು ಅಥವಾ ಪಾವತಿ ವಿಧಾನವನ್ನು ದೃಢೀಕರಿಸಲು, ದೃಢೀಕರಣ ವಿನಂತಿಯನ್ನು ಹುಡುಕಿ. ಸ್ವೀಕೃತ ಡಾಕ್ಯುಮೆಂಟ್‌ಗಳು ಮತ್ತು ಸೂಚನೆಗಳ ಪಟ್ಟಿಯನ್ನು ಹುಡುಕಲು, ದೃಢೀಕರಣ ವಿನಂತಿಯಲ್ಲಿರುವ ಲಿಂಕ್ ಅನ್ನು ಬಳಸಿ.

ನಿಮ್ಮ ಡಾಕ್ಯುಮೆಂಟ್‌ಗಳಿಗೆ ಸಂಬಂಧಿಸಿದಂತೆ ಇವುಗಳನ್ನು ಖಚಿತಪಡಿಸಿಕೊಳ್ಳಿ:

  • ನೀವು ಸಲ್ಲಿಸುವ ಎಲ್ಲಾ ಡಾಕ್ಯುಮೆಂಟ್‌ಗಳಲ್ಲಿ ಒಂದೇ ಪೂರ್ಣ ಹೆಸರನ್ನು ಬಳಸಲಾಗಿರಬೇಕು.
  • ಡಾಕ್ಯುಮೆಂಟ್‌ಗಳು ಅಪ್‌ಡೇಟ್ ಆಗಿರಬೇಕು ಮತ್ತು ಅವುಗಳ ಅವಧಿ ಮುಗಿದಿರಬಾರದು.
  • ಓದಲು ಸಾಧ್ಯವಾಗುವಂತಿರಬೇಕು.

ನೀವು ಅಪ್‌ಲೋಡ್ ಮಾಡುವ ಚಿತ್ರಗಳಿಗೆ ಸಂಬಂಧಿಸಿದಂತೆ ಇವುಗಳನ್ನು ಖಚಿತಪಡಿಸಿಕೊಳ್ಳಿ:

  • ಇದು ಡಾಕ್ಯುಮೆಂಟ್‌ನ ಚಿತ್ರವಾಗಿರಬೇಕೇ ಹೊರತು ಬೇರೇನೂ ಅಲ್ಲ
  • ಓದಲು ಸಾಧ್ಯವಾಗುವಂತಿರಬೇಕು
  • ಬಣ್ಣದಲ್ಲಿರಬೇಕು, ಕಪ್ಪು ಮತ್ತು ಬಿಳುಪಲ್ಲ
  • ಬ್ಲರ್, ಪ್ರಜ್ವಲಿಸುವ ಬೆಳಕು ಅಥವಾ ಡಿಮ್ ಲೈಟ್ ಅನ್ನು ಹೊಂದಿರಬಾರದು
  • ಸಂಪೂರ್ಣ ಡಾಕ್ಯುಮೆಂಟ್‌ನ ಎಲ್ಲಾ 4 ಮೂಲೆಗಳನ್ನು ತೋರಿಸಬೇಕು

ನೀವು ಡಾಕ್ಯುಮೆಂಟ್‌ಗಳಿಂದ ಮಾಹಿತಿಯನ್ನು ರೀಡ್ಯಾಕ್ಟ್ ಮಾಡುವುದಾದರೆ:

  • ಬ್ಯಾಂಕ್ ಸ್ಟೇಟ್‌ಮೆಂಟ್‌ಗಳಲ್ಲಿ ಇವುಗಳನ್ನು ರೀಡ್ಯಾಕ್ಟ್ ಮಾಡಿ:
    • ಕೊನೆಯ 4 ಅಂಕಿಗಳು ಮಾತ್ರ ಗೋಚರಿಸುವ ಹಾಗೆ ಪೂರ್ಣ ಖಾತೆ ಸಂಖ್ಯೆಗಳನ್ನು ರೀಡ್ಯಾಕ್ಟ್ ಮಾಡಿ
    • ಯಾವುದೇ ಖಾತೆಯಲ್ಲಿರುವ ಬಾಕಿ ಹಣಗಳು ಅಥವಾ ವಹಿವಾಟುಗಳು. ಖಾತೆಯಲ್ಲಿರುವ ಬಾಕಿ ಹಣ ಮತ್ತು ವಹಿವಾಟುಗಳು, ದೃಢೀಕರಣಕ್ಕೆ ಅಗತ್ಯವಿಲ್ಲ
  • ರೀಡ್ಯಾಕ್ಟ್ ಮಾಡಲು, ಅಪ್‌ಲೋಡ್ ಮಾಡುವ ಮೊದಲು ಸೂಕ್ಷ್ಮವಾದ ಮಾಹಿತಿಯನ್ನು ಮರೆಮಾಡುವುದಕ್ಕಾಗಿ ನೀವು ಗಾಢ ಬಣ್ಣದ ಬಾಕ್ಸ್ ಅನ್ನು ಚಿತ್ರಿಸಬಹುದು.

ಸಲಹೆಗಳು:

  • payments.google.com ನಲ್ಲಿ ನಿಮ್ಮ ಹೆಸರು, ವಿಳಾಸ ಮತ್ತು ಪಾವತಿಯ ಮಾಹಿತಿಯು ಅಪ್ ಟು ಡೇಟ್ ಆಗಿರುವಂತೆ ನೋಡಿಕೊಳ್ಳಿ.
  • ನಿಮ್ಮ ಡಾಕ್ಯುಮೆಂಟ್‌ಗಳನ್ನು ನೀವು ಸಲ್ಲಿಸಿದ ನಂತರ, ದೃಢೀಕರಣಕ್ಕೆ ಕೆಲವು ದಿನಗಳಷ್ಟು ಸಮಯ ಬೇಕಾಗಬಹುದು.

ಬ್ಯಾಂಕ್ ಸ್ಟೇಟ್‌ಮೆಂಟ್ ಮೂಲಕ ದೃಢೀಕರಿಸಿ (Play ಡೆವಲಪರ್‌ಗಳು ಮಾತ್ರ)

ಕೆಲವೊಂದು ದೇಶಗಳು ಅಥವಾ ಪ್ರದೇಶಗಳಲ್ಲಿ, Google Play ಡೆವಲಪರ್‌ಗಳು ತಮ್ಮ ವಿತರಣೆ ಪಾವತಿ ವಿಧಾನವನ್ನು ಬ್ಯಾಂಕ್ ಸ್ಟೇಟ್‌ಮೆಂಟ್‌ನ ಮೂಲಕ ದೃಢೀಕರಿಸಬೇಕಾಗಬಹುದು. ನೀವು ಅಪ್‌ಲೋಡ್ ಮಾಡುವ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು 180 ದಿನಗಳಿಗಿಂತ ಹಿಂದಿನದ್ದಾಗಿರಬಾರದು.

  1. payments.google.com ಗೆ ಸೈನ್ ಇನ್ ಮಾಡಿ.
  2. ಸಬ್‌ಸ್ಕ್ರಿಪ್ಶನ್‌ಗಳು ಮತ್ತು ಸೇವೆಗಳನ್ನು ಕ್ಲಿಕ್ ಮಾಡಿ.
  3. "Google Play ಆ್ಯಪ್‌ಗಳು” ಎಂಬುದರ ಅಡಿಯಲ್ಲಿ, ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. “ನಿಮಗೆ ಹೇಗೆ ಪಾವತಿಸಲಾಗುತ್ತದೆ” ಎಂಬುದರ ಅಡಿಯಲ್ಲಿ, ಪಾವತಿ ವಿಧಾನವನ್ನು ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ವಿತರಣೆಗಾಗಿ ನಿಮ್ಮ ಪಾವತಿ ವಿಧಾನ ಎಂದು ನೀವು ಸೇರಿಸಿರುವ ಬ್ಯಾಂಕ್ ಖಾತೆಯನ್ನು ಹುಡುಕಿ.
  6. ದೃಢೀಕರಿಸಿ ಅನ್ನು ಕ್ಲಿಕ್ ಮಾಡಿ.
  7. ನಿಮ್ಮ ಬ್ಯಾಂಕ್ ಸ್ಟೇಟ್‍ಮೆಂಟ್‌ನ ಪ್ರತಿಯನ್ನು ಅಪ್‌ಲೋಡ್ ಮಾಡಿ. ನೀವು ಚಿತ್ರ ಅಥವಾ PDF ಅನ್ನು ಅಪ್‌ಲೋಡ್ ಮಾಡಬಹುದು.
    • ಬ್ಯಾಂಕ್ ಸ್ಟೇಟ್‌ಮೆಂಟ್‌ನಿಂದ ಸೂಕ್ಷ್ಮವಾದ ಮಾಹಿತಿಯನ್ನು ರೀಡ್ಯಾಕ್ಟ್ ಮಾಡಿ ಆದರೆ ಕೆಳಗೆ ಇರುವ ಮಾಹಿತಿ ಸ್ಪಷ್ಟವಾಗಿ ಗೋಚರಿಸುವುದನ್ನು ಖಚಿತಪಡಿಸಿಕೊಳ್ಳಿ:
      • ಬ್ಯಾಂಕ್ ಖಾತೆ ಸಂಖ್ಯೆಯ ಕೊನೆಯ 4 ಅಂಕಿಗಳು
      • ರೂಟಿಂಗ್ ಸಂಖ್ಯೆ, ಬ್ಯಾಂಕ್ ಕೋಡ್, IFSC ಕೋಡ್, ಸಾರ್ಟ್ ಕೋಡ್, SWIFT ಕೋಡ್ ಅಥವಾ ಅಂತಹುದೇ ID ಯ ಸಂಪೂರ್ಣ ವಿವರಗಳು.
      • ನೀವು ಪ್ರಪಂಚದ ಯಾವ ಭಾಗದಲ್ಲಿ ಇದ್ದೀರಿ ಎಂಬುದನ್ನು ಆಧರಿಸಿ, ಬ್ಯಾಂಕ್ ಗುರುತಿಸುವಿಕೆ ಕೋಡ್, ವಿಭಿನ್ನ ಹೆಸರನ್ನು ಹೊಂದಿರಬಹುದು.

ನೀವು ಬ್ಯಾಂಕ್ ಸ್ಟೇಟ್‌ಮೆಂಟ್ ಅನ್ನು ಸಲ್ಲಿಸಿದ ಬಳಿಕ, ದೃಢೀಕರಣಕ್ಕೆ ಕೆಲವು ದಿನಗಳಷ್ಟು ಸಮಯಾವಕಾಶ ಬೇಕಾಗಬಹುದು.

ದೃಢೀಕರಣದಲ್ಲಿನ ಸಮಸ್ಯೆಗಳನ್ನು ಸರಿಪಡಿಸಿ

ದೃಢೀಕರಣ ಕೋಡ್‌ಗಳು ಮತ್ತು ತಾತ್ಕಾಲಿಕ ಹೋಲ್ಡ್‌ಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಿ

ಪಾವತಿ ವಿಧಾನಗಳನ್ನು ದೃಢೀಕರಣ ಕೋಡ್‌ನೊಂದಿಗೆ ದೃಢೀಕರಿಸಲು ಪ್ರಯತ್ನಿಸಿದಾಗ ಎದುರಾಗುವ ಸಮಸ್ಯೆಗಳನ್ನು ಹೇಗೆ ಸರಿಪಡಿಸುವುದು ಎಂಬುದನ್ನು ತಿಳಿಯಿರಿ.

ಡಾಕ್ಯುಮೆಂಟ್ ದೃಢೀಕರಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಿ

ಸಮಸ್ಯೆಯನ್ನು ಪರಿಹರಿಸಲು:

  • ನೀವು ಇಮೇಲ್ ಅಥವಾ ದೋಷ ಸಂದೇಶವನ್ನು ಸ್ವೀಕರಿಸಿದರೆ: ಸಂದೇಶದಲ್ಲಿರುವ ಸೂಚನೆಗಳನ್ನು ಅನುಸರಿಸಿ.
  • ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡಲು ನಮ್ಮ ತಂಡದಿಂದ ನಿಮಗೆ ಸಹಾಯ ಬೇಕಾದರೆ: ನಿಮ್ಮ ಮಾಹಿತಿಯನ್ನು ಪರಿಶೀಲಿಸಿದ ನಂತರ ನಾವು ನಿಮ್ಮನ್ನು ಸಂಪರ್ಕಿಸುತ್ತೇವೆ.

ವಿಫಲವಾದ ದೃಢೀಕರಣ

ನೀವು ದೃಢೀಕರಣದಲ್ಲಿ ವಿಫಲಗೊಂಡರೆ, ನಿರ್ಧಾರದ ಸ್ವಲ್ಪ ಸಮಯದ ನಂತರ ನೀವು ಇಮೇಲ್ ಅನ್ನು ಸ್ವೀಕರಿಸುತ್ತೀರಿ. ನಿರ್ಧಾರದ ಕುರಿತು ಮೇಲ್ಮನವಿ ಸಲ್ಲಿಸಲು, ಇಮೇಲ್‌ನಲ್ಲಿರುವ ಸೂಚನೆಗಳನ್ನು ಅನುಸರಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12561931296795054732
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false