ನೀವು ಮಾನಿಟೈಸ್ ಮಾಡುವ ವೀಡಿಯೊಗಳಲ್ಲಿ ಆ್ಯಡ್‌ಗಳನ್ನು ಹೇಗೆ ತೋರಿಸಲಾಗುತ್ತದೆ

ರಚನೆಕಾರರ ಆದಾಯವನ್ನು ಸುಧಾರಿಸಲು, ನಿಮ್ಮ ವೀಡಿಯೊದ ಮೊದಲು ಅಥವಾ ನಂತರ ಕಂಡುಬರುವ ಆ್ಯಡ್ ಫಾರ್ಮ್ಯಾಟ್‌ಗಳಿಗೆ ಸಂಬಂಧಿಸಿದ ಆಯ್ಕೆಗಳನ್ನು ನಾವು ಸರಳಗೊಳಿಸಿದ್ದೇವೆ. ಪ್ರೀ-ರೋಲ್, ಪೋಸ್ಟ್-ರೋಲ್, ಸ್ಕಿಪ್ ಮಾಡಬಹುದಾದ ಮತ್ತು ಸ್ಕಿಪ್ ಮಾಡಲಾಗದ ಆ್ಯಡ್‌ಗಳಿಗೆ ಸಂಬಂಧಿಸಿದ ಪ್ರತ್ಯೇಕ ಆ್ಯಡ್ ಆಯ್ಕೆಗಳನ್ನು ನಾವು ತೆಗೆದುಹಾಕಿದ್ದೇವೆ. ಈಗ, ಹೊಸ ದೀರ್ಘಾವಧಿ ವೀಡಿಯೊಗಳಿಗಾಗಿ ನೀವು ಆ್ಯಡ್‌ಗಳನ್ನು ಆನ್ ಮಾಡಿದಾಗ, ಸೂಕ್ತವೆನಿಸಿದಾಗ ನಾವು ನಿಮ್ಮ ವೀಕ್ಷಕರಿಗೆ ಪ್ರೀ-ರೋಲ್, ಪೋಸ್ಟ್-ರೋಲ್, ಸ್ಕಿಪ್ ಮಾಡಬಹುದಾದ ಅಥವಾ ಸ್ಕಿಪ್ ಮಾಡಲಾಗದ ಆ್ಯಡ್‌ಗಳನ್ನು ತೋರಿಸುತ್ತೇವೆ. ಈ ಬದಲಾವಣೆಯ ನಂತರ, ಎಲ್ಲಾ ಆ್ಯಡ್ ಫಾರ್ಮ್ಯಾಟ್‌ಗಳನ್ನು ತೋರಿಸುವ ಆಯ್ಕೆಯನ್ನು ಪ್ರಮಾಣಿತ ರೀತಿಯಲ್ಲಿ ಎಲ್ಲರಿಗಾಗಿ ಆನ್ ಸ್ಥಿತಿಯಲ್ಲಿಡಿ ಎಂದು ನಾವು ಶಿಫಾರಸು ಮಾಡುತ್ತೇವೆ, ಇದು ಉತ್ತಮ ಅಭ್ಯಾಸವಾಗಿದೆ. ಮಧ್ಯ-ರೋಲ್ ಆ್ಯಡ್‌ಗಳ ಕುರಿತ ನಿಮ್ಮ ಆಯ್ಕೆಗಳು ಬದಲಾಗಿಲ್ಲ. ನೀವು ಮಾನಿಟೈಸೇಶನ್ ಸೆಟ್ಟಿಂಗ್‌ಗಳನ್ನು ಬದಲಾಯಿಸದ ಹೊರತು, ಅಸ್ತಿತ್ವದಲ್ಲಿರುವ ದೀರ್ಘಾವಧಿ ವೀಡಿಯೊಗಳಿಗೆ ಸಂಬಂಧಿಸಿದ ನಿಮ್ಮ ಆ್ಯಡ್ ಆಯ್ಕೆಗಳನ್ನು ಸಹ ನಾವು ಉಳಿಸಿಕೊಂಡಿದ್ದೇವೆ.

ನಿಮ್ಮ ಚಾನಲ್‌ಗಾಗಿ ಮಾನಿಟೈಸೇಶನ್ ಅನ್ನು ನೀವು ಆನ್ ಮಾಡಿದಾಗ, ವೀಕ್ಷಣಾ ಪುಟ ಅಥವಾ Shorts ಫೀಡ್‌ನಲ್ಲಿ ನೀಡಲಾಗುವ ಆ್ಯಡ್‌ಗಳಿಂದ ಗಳಿಸಿರುವ ಆದಾಯದಲ್ಲಿ ಹಂಚಿಕೊಳ್ಳಲು ನೀವು ಆಯ್ಕೆಮಾಡಬಹುದು. AdSense ಆಕ್ಷನ್, Google Ad Manager ಮತ್ತು ಇತರ YouTube-ಮಾರಾಟ ಮಾಡುವ ಮೂಲಗಳ ಮೂಲಕ ಆ್ಯಡ್‌ಗಳನ್ನು ಸರ್ವ್ ಮಾಡಲಾಗುತ್ತದೆ. ನೀವು ಮಾನಿಟೈಸೇಶನ್ ಅನ್ನು ಆನ್ ಮಾಡಿದ ನಂತರ, ಆ್ಯಡ್‌ಗಳು ಕಾಣಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು.

ನಿಮ್ಮ ವೀಡಿಯೊ ಮೆಟಾಡೇಟಾದಂತಹ ಸಾಂದರ್ಭಿಕ ಮಾಹಿತಿ ಮತ್ತು ಕಂಟೆಂಟ್ ಜಾಹೀರಾತುದಾರರ-ಸ್ನೇಹಿಯಾಗಿದೆಯೇ ಎನ್ನುವ ಅಂಶಗಳ ಆಧಾರದ ಮೇಲೆ ನಿಮ್ಮ ವೀಡಿಯೊದಲ್ಲಿನ ಆ್ಯಡ್‌ಗಳನ್ನು ಸ್ವಯಂಚಾಲಿತವಾಗಿ ಆಯ್ಕೆ ಮಾಡಲಾಗುತ್ತದೆ.

ನಿಮ್ಮ ವೀಡಿಯೊಗಳಿಗೆ ಹೆಚ್ಚು ಸೂಕ್ತವಾದ ಆ್ಯಡ್‌ಗಳನ್ನು ತಲುಪಿಸಲು ನಾವು ನಿಯಮಿತವಾಗಿ ನಮ್ಮ ಸಿಸ್ಟಂಗಳನ್ನು ಮೇಲ್ವಿಚಾರಣೆ ಮಾಡುತ್ತೇವೆ ಮತ್ತು ಅಪ್‌ಡೇಟ್ ಮಾಡುತ್ತೇವೆ. ಆದಾಗ್ಯೂ, ನಿಮ್ಮ ವೀಡಿಯೊಗಳೊಂದಿಗೆ ತೋರಿಸುವ ಪ್ರತಿಯೊಂದು ಆ್ಯಡ್‌ ಅನ್ನು ನಾವು ಹಸ್ತಚಾಲಿತವಾಗಿ ನಿಯಂತ್ರಿಸುವುದಿಲ್ಲ, ಆ ಕಾರಣಕ್ಕಾಗಿ ನಾವು ನಿರ್ದಿಷ್ಟ ಆ್ಯಡ್‌ಗಳನ್ನು ಪ್ಲೇ ಮಾಡುತ್ತೇವೆ ಎಂದು ನಾವು ಭರವಸೆ ನೀಡುವುದಿಲ್ಲ.

ಮಾನಿಟೈಸ್ ಮಾಡಿದ ವೀಡಿಯೊಗಳಲ್ಲಿ ಎಲ್ಲಾ ಸಮಯದಲ್ಲೂ ಆ್ಯಡ್‌ಗಳನ್ನು ತೋರಿಸಲು ಆಗುವುದಿಲ್ಲ. ವೀಕ್ಷಿಸುವಾಗ ಎಲ್ಲಾ ಸಮಯದಲ್ಲೂ ಆ್ಯಡ್‌ ಲಭ್ಯವಿಲ್ಲದಿರಬಹುದು. ಆ್ಯಡ್‌ಗಳಲ್ಲಿ ಸಮಸ್ಯೆ ಇದೆ ಎಂದು ನೀವು ಭಾವಿಸಿದರೆ, ನಿಮ್ಮ ವೀಡಿಯೊಗಳಲ್ಲಿ ಆ್ಯಡ್‌ಗಳು ಏಕೆ ಕಾಣಿಸುತ್ತಿಲ್ಲ ಎಂಬುದನ್ನು ತಿಳಿಯಿರಿ.

ಆ್ಯಡ್‌ಗಳು ಹೇಗೆ ಕೆಲಸ ಮಾಡುತ್ತವೆ ಎಂಬುದರ ಕುರಿತು ಸಲಹೆಗಳನ್ನು ಪಡೆದುಕೊಳ್ಳಿ.

ಪಾಲುದಾರರು ಮಾರಾಟ ಮಾಡುವ ಆ್ಯಡ್‌ಗಳು ಎಂದರೇನು?

2010 ರಿಂದ, YouTube ನಲ್ಲಿ ಅವರು ತೋರಿಸುವ ಕಂಟೆಂಟ್‌ನಲ್ಲಿ ಆ್ಯಡ್‌ಗಳನ್ನು ಮಾರಾಟ ಮಾಡಲು ಕೆಲವು ಪಾಲುದಾರರಿಗೆ YouTube ಅನುಮತಿ ನೀಡಿದೆ. ಈ ಆ್ಯಡ್‌ಗಳನ್ನು "ಪಾಲುದಾರರು ಮಾರಾಟ ಮಾಡುವ ಆ್ಯಡ್‌ಗಳು" ಎಂದು ಕರೆಯಲಾಗುತ್ತದೆ. ಪಾಲುದಾರರು ಮಾರಾಟ ಮಾಡುವ ಆ್ಯಡ್‌ಗಳಿಗೆ ಅರ್ಹತೆ ಪಡೆಯಲು, ಸಂಸ್ಥೆಗಳು ವಿವಿಧ ಪ್ಲ್ಯಾಟ್‌ಫಾರ್ಮ್‌ಗಳಾದ್ಯಂತ ಕಂಟೆಂಟ್ ಅನ್ನು ವಿತರಿಸಬೇಕು ಮತ್ತು ತಮ್ಮ ವೀಡಿಯೊಗಳಲ್ಲಿ ಆ್ಯಡ್‌ಗಳನ್ನು ಮಾರಾಟ ಮಾಡಲು ಕಂಪನಿಯ ರೀತಿಯ ಮೂಲಸೌಕರ್ಯವನ್ನು (ಮಾರಾಟ ತಂಡಗಳನ್ನು ಒಳಗೊಂಡಂತೆ) ಹೊಂದಿರಬೇಕು.

ಪಾಲುದಾರರು ಮಾರಾಟ ಮಾಡುವ ಆ್ಯಡ್‌ಗಳಿಗಾಗಿ, ಪಾಲುದಾರರು ಅವರು ಹೊಂದಿರುವ ಕಂಟೆಂಟ್‌ನ ಮೇಲೆ ಜಾಹೀರಾತುಗಳನ್ನು ನೀಡಲು ಜಾಹೀರಾತುದಾರರೊಂದಿಗೆ ನೇರವಾಗಿ ಕೆಲಸ ಮಾಡುತ್ತಾರೆ. ನಿರ್ದಿಷ್ಟ ಕಂಟೆಂಟ್‌ನಲ್ಲಿ ಆ್ಯಡ್‌ಗಳನ್ನು ತೋರಿಸುವುದು ಸಾಧ್ಯವಾಗುವ ಹಾಗೆ ಜಾಹೀರಾತುದಾರರು ಈ ಪಾಲುದಾರರಿಂದ ಆ್ಯಡ್‌ಗಳನ್ನು ಖರೀದಿಸುತ್ತಾರೆ. ಅಂದರೆ, "ಹೆಚ್ಚಿನ ಜಾಹೀರಾತುದಾರರಿಗೆ ಸೂಕ್ತವಲ್ಲ" ಎಂದು YouTube ಭಾವಿಸುವ ವೀಡಿಯೊಗಳಲ್ಲಿ ಸಹ ಪಾಲುದಾರರು ಮಾರಾಟ ಮಾಡುವ ಆ್ಯಡ್‌ಗಳು ಕಾಣಿಸಿಕೊಳ್ಳಬಹುದು. ಈ ಪಾಲುದಾರರು ಜಾಹೀರಾತುದಾರರ ಜೊತೆಗೆ ನೇರವಾಗಿ ಕೆಲಸ ಮಾಡುವ ಮೂಲಕ ಜಾಹೀರಾತು ನಿಯೋಜನೆಯ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ. ಬ್ರ್ಯಾಂಡ್‌ಗೆ ಸೂಕ್ತವಾಗಿವೆ ಎಂದು ಜಾಹೀರಾತುದಾರರು ಪರಿಗಣಿಸದಿರುವ ವೀಡಿಯೊಗಳಲ್ಲಿ ಆ್ಯಡ್‌ಗಳನ್ನು ನಿಯೋಜಿಸುವುದಕ್ಕೆ ಸಂಬಂಧಿಸಿದ ಸಂಪೂರ್ಣ ಜವಾಬ್ದಾರಿಯನ್ನು ಈ ಪಾಲುದಾರರು ತೆಗೆದುಕೊಳ್ಳುತ್ತಾರೆ.

ದುರಂತಗಳಿಗೆ ಸಂಬಂಧಿಸಿದ ಕಂಟೆಂಟ್‌ನಲ್ಲಿ ಪಾಲುದಾರರು ಆ್ಯಡ್‌ಗಳನ್ನು ಮಾರಾಟ ಮಾಡಲು ಸಾಧ್ಯವಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9546852360445510733
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false