ಸಬ್‌ಸ್ಕ್ರೈಬರ್ ನೋಟಿಫಿಕೇಶನ್ ಸಮಸ್ಯೆಗಳನ್ನು ಸರಿಪಡಿಸಿ

ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತೆ ಕಾಯ್ದೆ (COPPA) ಮತ್ತು ಇತರ ಕಾನೂನುಗಳನ್ನು ಅನುಸರಿಸಲು, “ಮಕ್ಕಳಿಗಾಗಿ ರಚಿಸಲಾಗಿದೆ” ಎಂದು ಸೆಟ್ ಮಾಡಿರುವ ಕಂಟೆಂಟ್‌ನಲ್ಲಿ ನೋಟಿಫಿಕೇಶನ್‌ಗಳನ್ನು ಆಫ್ ಮಾಡಲಾಗಿದೆ. ನಿಮ್ಮ ಪ್ರೇಕ್ಷಕರನ್ನು ಹೊಂದಿಸುವುದು ಮತ್ತು ಹಾಗೆ ನಿಖರವಾಗಿ ಮಾಡುವುದು ಏಕೆ ತುಂಬಾ ಮುಖ್ಯ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ನೋಟಿಫಿಕೇಶನ್‌ಗಳ ಕುರಿತಾದ ಸಮಸ್ಯೆಗಳನ್ನು ನಿವಾರಿಸಿ

  1. ವೀಕ್ಷಕರಿಗೆ ತಮ್ಮ ಸೆಟ್ಟಿಂಗ್‌ಗಳನ್ನು ಪರಿಶೀಲಿಸುವಂತೆ ತಿಳಿಸಿ. ವೀಕ್ಷಕರ ನೋಟಿಫಿಕೇಶನ್ ಸೆಟ್ಟಿಂಗ್‌ಗಳು ಬಹುತೇಕ ಎಲ್ಲಾ ನೋಟಿಫಿಕೇಶನ್ ಸಂಬಂಧಿತ ಸಮಸ್ಯೆಗಳನ್ನು ಉಂಟುಮಾಡುತ್ತವೆ. ವೀಕ್ಷಕರು ನೋಟಿಫಿಕೇಶನ್‌ಗಳನ್ನು ಪಡೆಯದಿದ್ದರೆ, ನೋಟಿಫಿಕೇಶನ್‌ಗಳ ಸಮಸ್ಯೆ ನಿವಾರಕವನ್ನು ಬಳಸಲು ಅವರಿಗೆ ತಿಳಿಸಿ.
  2. ವೀಡಿಯೊಗಳನ್ನು ಅಪ್‌ಲೋಡ್ ಮಾಡುವಾಗ ಸಬ್‌ಸ್ಕ್ರೈಬರ್‌ಗಳಿಗೆ ಸೂಚಿಸಿ. ವೀಡಿಯೊವನ್ನು ಅಪ್‌ಲೋಡ್ ಮಾಡುವಾಗ, “ಸುಧಾರಿತ ಸೆಟ್ಟಿಂಗ್‌ಗಳು” ಟ್ಯಾಬ್‌ನಲ್ಲಿರುವ “ಸಬ್‌ಸ್ಕ್ರಿಪ್ಶನ್‌ಗಳ ಫೀಡ್‌ನಲ್ಲಿ ಪ್ರಕಟಿಸಿ ಮತ್ತು ಸಬ್‌ಸ್ಕ್ರೈಬರ್‌ಗಳಿಗೆ ಸೂಚಿಸಿ” ಪಕ್ಕದಲ್ಲಿರುವ ಬಾಕ್ಸ್ ಅನ್ನು ಗುರುತು ಹಾಕಿ.
  3. ಕಳೆದ 24 ಗಂಟೆಗಳಲ್ಲಿ ಎಷ್ಟು ಬಾರಿ ಪೋಸ್ಟ್ ಮಾಡಿದ್ದೀರಿ ಎಂಬುದನ್ನು ಪರಿಶೀಲಿಸಿ. ವೀಕ್ಷಕರು 24 ಗಂಟೆಗಳ ಅವಧಿಯಲ್ಲಿ ಪ್ರತಿಯೊಂದು ಚಾನಲ್‌ನಿಂದ ಗರಿಷ್ಠ 3 ಹೊಸ ವೀಡಿಯೊ ನೋಟಿಫಿಕೇಶನ್‌ಗಳನ್ನು ಪಡೆಯಬಹುದು. ನೋಟಿಫಿಕೇಶನ್ ಮಿತಿಗಳ ಕುರಿತು ಕೆಳಗೆ ಇನ್ನಷ್ಟು ಓದಿ.
  4. ವೀಡಿಯೊಗಳನ್ನು ದೊಡ್ಡ ಪ್ರಮಾಣದಲ್ಲಿ ಪ್ರಕಟಿಸುವುದನ್ನು ತಪ್ಪಿಸಿ. ನೀವು ಅಲ್ಪಾವಧಿಯಲ್ಲಿ 3 ಕ್ಕಿಂತ ಹೆಚ್ಚು ವೀಡಿಯೊಗಳನ್ನು ಪ್ರಕಟಿಸಿದರೆ, ನೋಟಿಫಿಕೇಶನ್‌ಗಳನ್ನು ಕಳುಹಿಸುವ ಪ್ರಕ್ರಿಯೆಯನ್ನು ನಾವು 24 ಗಂಟೆಗಳವರೆಗೆ ತಾತ್ಕಾಲಿಕವಾಗಿ ನಿಲ್ಲಿಸಬಹುದು. ಅಲ್ಪಾವಧಿಯಲ್ಲಿ ಸಾಕಷ್ಟು ವೀಡಿಯೊಗಳನ್ನು ಪ್ರಕಟಿಸುವುದರಿಂದ ಸಬ್‌ಸ್ಕ್ರೈಬರ್‌ಗಳು ಮತ್ತು ನಮ್ಮ ನೋಟಿಫಿಕೇಶನ್ ಸಿಸ್ಟಂಗಳಿಗೆ ನೋಟಿಫಿಕೇಶನ್‌ಗಳ ಸುರಿಮಳೆಗೈಯಬಹುದು. ನೋಟಿಫಿಕೇಶನ್‌ಗಳನ್ನು ಕಳುಹಿಸುವ ಆಯ್ಕೆಯಿಂದ ಕನಿಷ್ಠ 1 ವೀಡಿಯೊ ಹೊರಗುಳಿದಿದ್ದರೂ ಸಹ ಈ ತಡೆಹಿಡಿಯುವಿಕೆ ಸಂಭವಿಸುತ್ತದೆ. ನೀವು ಒಂದು ಬಾರಿಗೆ ಕೆಲವು ವೀಡಿಯೊಗಳನ್ನು ಅಪ್‌ಲೋಡ್ ಮಾಡಿದರೆ, ಅವುಗಳನ್ನು ಮೊದಲು “ಖಾಸಗಿ” ಎಂಬುದಾಗಿ ಅಪ್‌ಲೋಡ್ ಮಾಡಲು ಪ್ರಯತ್ನಿಸಿ. ನಂತರ, ನೀವು ಪ್ರತಿ ವೀಡಿಯೊವನ್ನು ಬೇರೆ ಬೇರೆ ಸಮಯಗಳಲ್ಲಿ ಅಪ್‌ಲೋಡ್ ಮಾಡಬಹುದು.
  5. ವೀಡಿಯೊಗಳನ್ನು ಪ್ರಕಟಿಸಿದ ನಂತರ ಸಾರ್ವಜನಿಕಗೊಳಿಸಿ. ಎಲ್ಲಾ ನೋಟಿಫಿಕೇಶನ್‌ಗಳನ್ನು ಕಳುಹಿಸಲು ಸಾಮಾನ್ಯವಾಗಿ 10–20 ನಿಮಿಷಗಳು ಬೇಕಾಗಬಹುದು. ನಿಮ್ಮ ವೀಡಿಯೊಗಳನ್ನು ಪ್ರಕಟಿಸಿದ ನಂತರ ಅವುಗಳ ಗೌಪ್ಯತೆ ಸೆಟ್ಟಿಂಗ್ ಅನ್ನು “ಖಾಸಗಿ” ಎಂಬುದಾಗಿ ನೀವು ತ್ವರಿತವಾಗಿ ಬದಲಾಯಿಸಿದರೆ, ನಾವು ನೋಟಿಫಿಕೇಶನ್‌ಗಳನ್ನು ಕಳುಹಿಸುವುದನ್ನು ನಿಲ್ಲಿಸುತ್ತೇವೆ. 
  6. ನಿಮ್ಮ ವೀಡಿಯೊವನ್ನು ಪ್ರಕಟಿಸುವ ಮೊದಲು ನಿಮ್ಮ ಸಬ್‌ಸ್ಕ್ರೈಬರ್‌ಗಳ ಸಂಖ್ಯೆಯು ಗಣನೀಯ ಪ್ರಮಾಣದಲ್ಲಿ ಬದಲಾಗಿದೆಯೇ ಎಂದು ಪರಿಶೀಲಿಸಿ. ಈ ಸಂದರ್ಭಗಳಲ್ಲಿ, ನಾವು ಎಲ್ಲಾ ಅರ್ಹ ಸಬ್‌ಸ್ಕ್ರೈಬರ್‌ಗಳಿಗೆ ತಿಳಿಸುತ್ತೇವೆಯಾದರೂ ವರದಿ ಮಾಡುವ ವಿಳಂಬದಿಂದಾಗಿ 100% ಕ್ಕಿಂತ ಕಡಿಮೆ ಸಬ್‌ಸ್ಕ್ರೈಬರ್‌ಗಳಿಗೆ ತಿಳಿಸಲಾಗಿದೆ ಎಂದು ತೋರುತ್ತದೆ.
  7. ತಿಳಿದಿರುವ ಸಮಸ್ಯೆಗಳನ್ನು ಪರಿಶೀಲಿಸಿ. ವಿರಳ ಸಂದರ್ಭಗಳಲ್ಲಿ, ಈ ಸಮಸ್ಯೆಗಳು ನೋಟಿಫಿಕೇಶನ್ ಡೆಲಿವರಿಗೆ ಸಂಬಂಧಿಸಿರುತ್ತವೆ. ಈ ಸಮಸ್ಯೆಗಳು ಸಂಭವಿಸುತ್ತಿವೆಯೇ ಎಂದು ತಿಳಿಯಲು, ಸಹಾಯ ಕೇಂದ್ರದಲ್ಲಿನ ತಿಳಿದಿರುವ ಸಮಸ್ಯೆಗಳು ವಿಭಾಗ ಅಥವಾ TeamYouTube Twitter ಹ್ಯಾಂಡಲ್ ಅನ್ನು ಪರಿಶೀಲಿಸಿ.
  8. ಪ್ರತಿಕ್ರಿಯೆಯನ್ನು ಕಳುಹಿಸಿ. ನೀವು ಮೇಲಿನ ಎಲ್ಲವನ್ನೂ ಪರಿಶೀಲಿಸಿದ್ದರೆ ಮತ್ತು ಸಬ್‌ಸ್ಕ್ರೈಬರ್‌ಗಳು ಈಗಲೂ ನೋಟಿಫಿಕೇಶನ್‌ಗಳನ್ನು ಸ್ವೀಕರಿಸುತ್ತಿಲ್ಲದಿದ್ದರೆ, ನಮಗೆ ಪ್ರತಿಕ್ರಿಯೆಯನ್ನು ಕಳುಹಿಸಿ.

Notification - Backstage at YouTube

FAQ

ನಾನು ಸಬ್‌ಸ್ಕ್ರೈಬರ್‌ಗಳಿಗೆ ಎಷ್ಟು ಬಾರಿ ಸೂಚನೆ ನೀಡಬಹುದು?

  • ವೀಕ್ಷಕರು 24 ಗಂಟೆಗಳ ಅವಧಿಯಲ್ಲಿ ಪ್ರತಿಯೊಂದು ಚಾನಲ್‌ನಿಂದ ಗರಿಷ್ಠ 3 ನೋಟಿಫಿಕೇಶನ್‌ಗಳನ್ನು ಪಡೆಯಬಹುದು. ಈ ನೋಟಿಫಿಕೇಶನ್‌ಗಳು ವೀಡಿಯೊ ಅಪ್‌ಲೋಡ್‌ಗಳು, ಲೈವ್ ಸ್ಟ್ರೀಮ್‌ಗಳು ಮತ್ತು ಪ್ರೀಮಿಯರ್‌ಗಳ ಕುರಿತ ನೋಟಿಫಿಕೇಶನ್‌ಗಳನ್ನು ಒಳಗೊಂಡಿವೆ.
  • ನೀವು 3 ದಿನಗಳ ಅವಧಿಯಲ್ಲಿ 1 ಸಮುದಾಯದ ಪೋಸ್ಟ್ ಕುರಿತಾದ ನೋಟಿಫಿಕೇಶನ್ ಅನ್ನು ಮಾತ್ರ ಕಳುಹಿಸಬಹುದು.

ಹೊಸ ವೀಡಿಯೊಗಳಲ್ಲಿ ನೋಟಿಫಿಕೇಶನ್ ಮಿತಿಗಳನ್ನು ಏಕೆ ವಿಧಿಸಲಾಗಿದೆ?

ವೀಕ್ಷಕರಿಗೆ ತಮ್ಮ ಮೆಚ್ಚಿನ ರಚನೆಕಾರರ ಕುರಿತು ತಿಳಿದುಕೊಳ್ಳಲು ನೋಟಿಫಿಕೇಶನ್‌ಗಳು ಸಹಾಯ ಮಾಡುತ್ತವೆ. ವೀಕ್ಷಕರು ಹಲವಾರು ನೋಟಿಫಿಕೇಶನ್‌ಗಳನ್ನು ಸ್ವೀಕರಿಸಿದಾಗ, ಅವರು ಸಾಮಾನ್ಯವಾಗಿ ಸಂಪೂರ್ಣ ನೋಟಿಫಿಕೇಶನ್‌ಗಳನ್ನು ಆಫ್ ಮಾಡುತ್ತಾರೆ, ಇದು ಎಲ್ಲಾ ರಚನೆಕಾರರ ಮೇಲೂ ಪರಿಣಾಮ ಬೀರುತ್ತದೆ. ನೋಟಿಫಿಕೇಶನ್‌ಗಳನ್ನು ಪ್ರತಿ 24 ಗಂಟೆಗಳ ಅವಧಿಗೆ ಪ್ರತಿ ಚಾನಲ್‌ಗೆ 3 ಹೊಸ ವೀಡಿಯೊ ನೋಟಿಫಿಕೇಶನ್‌ಗಳು ಎಂಬಂತೆ ಮಿತಿಗೊಳಿಸುವುದರಿಂದ, ವೀಕ್ಷಕರು ದೀರ್ಘಾವಧಿಯವರೆಗೆ YouTube ನಲ್ಲಿ ಸಕ್ರಿಯವಾಗಿರಲು ಸಹಾಯ ಮಾಡುತ್ತದೆ.

ನಾನು ನನ್ನ ವೀಡಿಯೊವನ್ನು ಪ್ರಕಟಿಸಿದ ಕೆಲವು ಗಂಟೆಗಳ ನಂತರ ಕೆಲವು ಸಬ್‌ಸ್ಕ್ರೈಬರ್‌ಗಳು ಏಕೆ ನೋಟಿಫಿಕೇಶನ್‌ಗಳನ್ನು ಸ್ವೀಕರಿಸುತ್ತಿದ್ದಾರೆ?

ವೈಯಕ್ತಿಕಗೊಳಿಸಿದ ನೋಟಿಫಿಕೇಶನ್‌ಗಳನ್ನು ಪ್ರತಿಯೊಬ್ಬ ಸಬ್‌ಸ್ಕ್ರೈಬರ್‌ಗಳಿಗೆ ಸೂಕ್ತ ಸಮಯದಲ್ಲಿ ಕಳುಹಿಸಲಾಗುತ್ತದೆ. ಈ ಸೆಟ್ಟಿಂಗ್ ಎಂದರೆ ಕೆಲವು ಸಬ್‌ಸ್ಕ್ರೈಬರ್‌ಗಳು ತಮ್ಮ ನೋಟಿಫಿಕೇಶನ್‌ಗಳನ್ನು "ವೈಯಕ್ತೀಕರಿಸಿದ" ಎಂದು ಸೆಟ್ ಮಾಡಿರುವ ಸಾಧ್ಯತೆಗಳಿರುತ್ತವೆ. ಹೀಗಾಗಿ ನೀವು ನಿಮ್ಮ ವೀಡಿಯೊವನ್ನು ಪ್ರಕಟಿಸಿದ ಕೆಲವು ಗಂಟೆಗಳ ನಂತರ ಅವರು ನೋಟಿಫಿಕೇಶನ್‌ಗಳನ್ನು ಸ್ವೀಕರಿಸುತ್ತಾರೆ. ವೀಕ್ಷಕರು ನೋಟಿಫಿಕೇಶನ್ ಅನ್ನು ನೋಡಿದ ನಂತರ ನಿಮ್ಮ ವೀಡಿಯೊವನ್ನು ವೀಕ್ಷಿಸುವ ಸಾಧ್ಯತೆಯಿದೆ ಎಂದು ನಾವು ಭಾವಿಸಿದಾಗ ಡೆಲಿವರಿ ಸಮಯವನ್ನು ಸೆಟ್ ಮಾಡುತ್ತೇವೆ.
ಎಲ್ಲಾ ನೋಟಿಫಿಕೇಶನ್‌ಗಳನ್ನು ಸ್ವೀಕರಿಸಲು ಆಯ್ಕೆ ಮಾಡುವ ಸಬ್‌ಸ್ಕ್ರೈಬರ್‌ಗಳಿಗೆ ನೀವು ಹೊಸ ವೀಡಿಯೊವನ್ನು ಪ್ರಕಟಿಸಿದ ಕೆಲವೇ ನಿಮಿಷಗಳಲ್ಲಿ ತಿಳಿಸಲಾಗುತ್ತದೆ.

"ವೈಯಕ್ತೀಕರಿಸಿದ" ನೋಟಿಫಿಕೇಶನ್‌ಗಳು ಎಂದರೇನು?

“ವೈಯಕ್ತೀಕರಿಸಿದ” ಎಂಬುದರ ಅರ್ಥವು ವ್ಯಕ್ತಿಗೆ ಅನುಗುಣವಾಗಿ ಬದಲಾಗುತ್ತದೆ. ಪ್ರತಿ ವೀಕ್ಷಕರಿಗೆ ಅವರ ವೀಕ್ಷಣೆ ಇತಿಹಾಸ, ಅವರು ಚಾನಲ್‌ನಿಂದ ವೀಡಿಯೊಗಳನ್ನು ವೀಕ್ಷಿಸಿದಾಗ, ನಿರ್ದಿಷ್ಟ ವೀಡಿಯೊಗಳು ಎಷ್ಟು ಜನಪ್ರಿಯವಾಗಿವೆ ಮತ್ತು ಅವರು ಯಾವಾಗ ನೋಟಿಫಿಕೇಶನ್‌ಗಳನ್ನು ತೆರೆಯುತ್ತಾರೆ ಎಂಬುದರ ಆಧಾರದ ಮೇಲೆ ಅವುಗಳನ್ನು ಕಸ್ಟಮೈಸ್ ಮಾಡಲಾಗಿರುತ್ತದೆ.

YouTube, “ವೈಯಕ್ತೀಕರಿಸಿದ” ಸೆಟ್ಟಿಂಗ್ ಅನ್ನು ಏಕೆ ಹೊಂದಿದೆ? ಎಲ್ಲಾ ನೋಟಿಫಿಕೇಶನ್‌ಗಳು ಏಕೆ ಕಳುಹಿಸಲಾಗುವುದಿಲ್ಲ?

ಬಹುತೇಕ ವೀಕ್ಷಕರು ಎಲ್ಲಾ ನೋಟಿಫಿಕೇಶನ್‌ಗಳನ್ನು ಸ್ವೀಕರಿಸಲು ಬಯಸುವುದಿಲ್ಲ. ಸಬ್‌ಸ್ಕ್ರೈಬರ್‌ಗಳು ತಾವು ಸ್ವೀಕರಿಸುತ್ತಿರುವ ನೋಟಿಫಿಕೇಶನ್‌ಗಳ ಸಂಖ್ಯೆಯು ಮಿತಿಮೀರುತ್ತಿದೆ ಎಂದು ಭಾವಿಸಿದರೆ, ಅವರು ನೋಟಿಫಿಕೇಶನ್ ಸೆಟ್ಟಿಂಗ್‌ಗಳನ್ನು ಸಂಪೂರ್ಣವಾಗಿ ಆಫ್ ಮಾಡಬಹುದು. 
ನಿಮ್ಮ ಚಾನಲ್ ಅಥವಾ ಎಲ್ಲಾ ಚಾನಲ್‌ಗಳಿಗೆ ಸಂಬಂಧಿಸಿದ ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ ಮಾಡುವುದರಿಂದ ಬಳಕೆದಾರರನ್ನು ತಡೆಯಲು 'ವೈಯಕ್ತೀಕರಿಸಿದ ನೋಟಿಫಿಕೇಶನ್‌ಗಳು' ಸಹಾಯ ಮಾಡುತ್ತವೆ. ವೀಕ್ಷಕರು ಅಧಿಸೂಚನೆಗಳ ಜೊತೆಗೆ ದೀರ್ಘ ಸಮಯದವರೆಗೆ ಹೆಚ್ಚು ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಅವು ಸಹಾಯ ಮಾಡುತ್ತವೆ.
ನಿಮ್ಮ ಚಾನಲ್‌ಗೆ “ವೈಯಕ್ತೀಕರಿಸಿದ” ಸಬ್‌ಸ್ಕ್ರೈಬರ್‌ಗಳು ಈಗಲೂ ಮೌಲ್ಯವನ್ನು ತಂದುಕೊಡುತ್ತಾರೆ. ಈ ಸಬ್‌ಸ್ಕ್ರೈಬರ್‌ಗಳು ನೀವು ಅಪ್‌ಲೋಡ್ ಮಾಡುವ ಪ್ರತಿಯೊಂದು ವೀಡಿಯೊವನ್ನು ಅವರ ಸಬ್‌ಸ್ಕ್ರಿಪ್ಶನ್ ಫೀಡ್‌ನಲ್ಲಿ ನೋಡುತ್ತಾರೆ. ಈ ಸೆಟ್ಟಿಂಗ್ ನಿಮ್ಮ ವೀಡಿಯೊಗಳನ್ನು YouTube ನಲ್ಲಿ ಲಕ್ಷಾಂತರ ಇತರ ವೀಡಿಯೊಗಳಿಂದ ಪ್ರತ್ಯೇಕವಾಗಿ ಕಾಣುವಂತೆ ಮಾಡುತ್ತದೆ. 

ಲೈವ್ ಸ್ಟ್ರೀಮ್ ನೋಟಿಫಿಕೇಶನ್‌ಗಳು ಹೇಗೆ ಕಾರ್ಯನಿರ್ವಹಿಸುತ್ತವೆ?

ವೀಡಿಯೊ ಅಪ್‌ಲೋಡ್‌ಗಳಂತೆಯೇ, ನಿಮ್ಮ ಲೈವ್ ಸ್ಟ್ರೀಮ್‌ಗೆ ಸಂಬಂಧಿಸಿದ ನೋಟಿಫಿಕೇಶನ್‌ಗಳನ್ನು ಈ ಕೆಳಕಂಡ ಸಬ್‌ಸ್ಕ್ರೈಬರ್‌ಗಳಿಗೆ ಕಳುಹಿಸಲಾಗುತ್ತದೆ:
  1. ನಿಮ್ಮ ಚಾನಲ್‌ಗೆ ಸಂಬಂಧಿಸಿದ “ಎಲ್ಲಾ ನೋಟಿಫಿಕೇಶನ್‌ಗಳನ್ನು” ಆನ್ ಮಾಡಿರುವ ಸಬ್‌ಸ್ಕ್ರೈಬರ್‌ಗಳು ಮತ್ತು 
  2. ತಮ್ಮ ಖಾತೆ ಮತ್ತು ಸಾಧನದಲ್ಲಿ YouTube ನೋಟಿಫಿಕೇಶನ್‌ಗಳನ್ನು ಆನ್ ಮಾಡಿರುವ ಸಬ್‌ಸ್ಕ್ರೈಬರ್‌ಗಳು 

ನೀವು ಎನ್‌ಕೋಡರ್ ಅನ್ನು ಬಳಸುತ್ತಿದ್ದರೆ, ನಿಮ್ಮ ಲೈವ್ ಸ್ಟ್ರೀಮ್ ಅನ್ನು ಸಾರ್ವಜನಿಕಗೊಳಿಸಿದ ನಂತರ ಮತ್ತು ನೀವು ಲೈವ್ ಆಗಿರುವುದನ್ನು ನಾವು ಪತ್ತೆಮಾಡಿದರೆ, ಈ ಸಬ್‌ಸ್ಕ್ರೈಬರ್‌ಗಳಿಗೆ ನೋಟಿಫಿಕೇಶನ್‌ಗಳನ್ನು ಕಳುಹಿಸಲಾಗುತ್ತದೆ. ಉದಾಹರಣೆಗೆ, ನಿಮ್ಮ ಲೈವ್ ಸ್ಟ್ರೀಮ್ ಸಾರ್ವಜನಿಕವಾಗಿದ್ದು ನೀವು ಲೈವ್ ಆಗಿರುವ ಕುರಿತಾದ ಮಾಹಿತಿಯನ್ನು ನಿಮ್ಮ ಎನ್‌ಕೋಡರ್‌ನಿಂದ ನಾವು ಸ್ವೀಕರಿಸದಿದ್ದರೆ, ನಾವು ನೋಟಿಫಿಕೇಶನ್‌ಗಳನ್ನು ಕಳುಹಿಸುವುದಿಲ್ಲ.

YouTube ನಲ್ಲಿ ಲೈವ್ ಸ್ಟ್ರೀಮಿಂಗ್ ಕುರಿತು ಇನ್ನಷ್ಟು ತಿಳಿಯಿರಿ.

ಬಹು ವೀಕ್ಷಕರ ನೋಟಿಫಿಕೇಶನ್ ಸೆಟ್ಟಿಂಗ್‌ಗಳು ಏಕೆ ಇವೆ?

ವೀಕ್ಷಕರಿಗೆ ತಮ್ಮ ಮೆಚ್ಚಿನ ರಚನೆಕಾರರ ಕುರಿತು ತಿಳಿದುಕೊಳ್ಳಲು ನೋಟಿಫಿಕೇಶನ್‌ಗಳು ಸಹಾಯ ಮಾಡುತ್ತವೆ. ವೀಕ್ಷಕರಿಗೆ ಅವರ ವೈಯಕ್ತಿಕ ಚಾನಲ್ ಅಥವಾ ಸಂಪೂರ್ಣ ಖಾತೆಗೆ ಸಂಬಂಧಿಸಿದಂತೆ ನೋಟಿಫಿಕೇಶನ್‌ಗಳನ್ನು ಕಸ್ಟಮೈಸ್ ಮಾಡುವ ಆಯ್ಕೆಯನ್ನು ನಾವು ನೀಡಲು ಬಯಸುತ್ತೇವೆ.
ಕೆಲವು ನೋಟಿಫಿಕೇಶನ್‌ಗಳು YouTube ನಿಯಂತ್ರಣದಿಂದ ಹೊರಗಿರುತ್ತವೆ. ಉದಾಹರಣೆಗೆ, ಸಬ್‌ಸ್ಕ್ರೈಬರ್ ಸಾಧನದ ಸೆಟ್ಟಿಂಗ್‌ಗಳು YouTube ಅನ್ನು ಓವರ್‌ರೈಡ್ ಮಾಡಬಹುದು ಮತ್ತು ನೋಟಿಫಿಕೇಶನ್‌ಗಳನ್ನು ಸಬ್‌ಸ್ಕ್ರೈಬರ್‌ಗಳ ಬಳಿಗೆ ತಲುಪದಂತೆ ತಡೆಯಬಹುದು.
ಯಾವ ಸೆಟ್ಟಿಂಗ್‌ಗಳು ನೋಟಿಫಿಕೇಶನ್‌ಗಳ ಮೇಲೆ ಪರಿಣಾಮ ಬೀರುತ್ತವೆ?
ಈ ಕೆಳಕಂಡ ಸೆಟ್ಟಿಂಗ್‌ಗಳಲ್ಲಿ ಮಾಡುವ ಬದಲಾವಣೆಗಳು ವೈಯಕ್ತಿಕ ಚಾನಲ್ ಪುಟಗಳ ಮೇಲೆ ಪರಿಣಾಮ ಬೀರುವುದಿಲ್ಲ.

YouTube ಆ್ಯಪ್ ಅಥವಾ ವೆಬ್‌ಸೈಟ್‌ನಲ್ಲಿ:

  • ಕಂಪ್ಯೂಟರ್‌ನಲ್ಲಿ ಖಾತೆಯ ನೋಟಿಫಿಕೇಶನ್ ಸೆಟ್ಟಿಂಗ್‌ಗಳು: ಕಂಪ್ಯೂಟರ್‌ನಲ್ಲಿ ವೀಕ್ಷಕರು ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳು ಎಂಬಲ್ಲಿಗೆ ಹೋಗಿ, ಅವರು YouTube ನಿಂದ ಇಮೇಲ್ ಅಪ್‌ಡೇಟ್‌ಗಳನ್ನು ಪಡೆಯಬೇಕೇ ಮತ್ತು ಕಂಪ್ಯೂಟರ್ ನೋಟಿಫಿಕೇಶನ್‌ಗಳನ್ನು ಪಡೆಯಬೇಕೇ ಎಂಬುದನ್ನು ನಿಯಂತ್ರಿಸಬಹುದು. ವೈಯಕ್ತಿಕ ಚಾನಲ್‌ಗಳಿಂದ ಇಮೇಲ್ ಅಪ್‌ಡೇಟ್‌ಗಳು, ನೋಟಿಫಿಕೇಶನ್‌ಗಳನ್ನು ಪಡೆಯಬೇಕೇ, ಎರಡನ್ನೂ ಪಡೆಯಬೇಕೇ ಅಥವಾ ಬೇಡವೇ ಎಂಬುದನ್ನು ಸಹ ಅವರು ಆಯ್ಕೆ ಮಾಡಬಹುದು.
  • ಮೊಬೈಲ್‌ನಲ್ಲಿ ಖಾತೆ ನೋಟಿಫಿಕೇಶನ್ ಸೆಟ್ಟಿಂಗ್‌ಗಳು: ಮೊಬೈಲ್ ಸಾಧನದಲ್ಲಿ, ವೀಕ್ಷಕರು ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳು ಎಂಬಲ್ಲಿಗೆ ಹೋಗಿ, ಸಬ್‌ಸ್ಕ್ರಿಪ್ಶನ್‌ಗಳಿಂದ ನೋಟಿಫಿಕೇಶನ್‌ಗಳನ್ನು ಸ್ವೀಕರಿಸುವುದನ್ನು ಆನ್ ಅಥವಾ ಆಫ್ ಮಾಡಬಹುದು.
  • ಕಂಪ್ಯೂಟರ್‌ನಲ್ಲಿ ಸಬ್‌ಸ್ಕ್ರಿಪ್ಶನ್ ನಿರ್ವಾಹಕ: ಸಬ್‌ಸ್ಕ್ರೈಬರ್‌ಗಳು ತಮ್ಮ ಕಂಪ್ಯೂಟರ್‌ನಲ್ಲಿ ಸಬ್‌ಸ್ಕ್ರಿಪ್ಶನ್ ನಿರ್ವಾಹಕ ಎಂಬಲ್ಲಿಗೆ ಹೋಗಿ, ವೈಯಕ್ತಿಕ ಚಾನಲ್‌ಗಳಿಗೆ ಸಂಬಂಧಿಸಿದ ನೋಟಿಫಿಕೇಶನ್‌ಗಳನ್ನು ಆಫ್ ಮಾಡಬಹುದು. 
  • ಮೊಬೈಲ್‌ನಲ್ಲಿ ಚಾನಲ್ ಸೆಟ್ಟಿಂಗ್‌ಗಳು: ಮೊಬೈಲ್‌ನಲ್ಲಿ, ವೀಕ್ಷಕರು ವೈಯಕ್ತಿಕ ಚಾನಲ್‌ಗಳಿಗೆ ಸಂಬಂಧಿಸಿದ ನೋಟಿಫಿಕೇಶನ್‌ಗಳನ್ನು ಆಫ್ ಮಾಡಲು, ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳು ನಂತರ ಚಾನಲ್ ಸೆಟ್ಟಿಂಗ್‌ಗಳು ಅಡಿಯಲ್ಲಿ, ಚಾನಲ್ ಸೆಟ್ಟಿಂಗ್‌ಗಳು ಪುಟವನ್ನು ಬಳಸಬಹುದು. 

ನಿಮ್ಮ ಸಾಧನದಲ್ಲಿ:

  • ಸಾಧನದ ನೋಟಿಫಿಕೇಶನ್ ಸೆಟ್ಟಿಂಗ್‌ಗಳು: ಮೊಬೈಲ್ ಸಾಧನದಲ್ಲಿ, ವೀಕ್ಷಕರು ತಮ್ಮ ಸಾಧನದ ಸೆಟ್ಟಿಂಗ್‌ಗಳಲ್ಲಿ YouTube ನೋಟಿಫಿಕೇಶನ್‌ಗಳನ್ನು ಆಫ್ ಮಾಡಬಹುದು. ಈ ಸೆಟ್ಟಿಂಗ್‌ಗಳು, ಯಾವುದೇ YouTube ಆ್ಯಪ್ ಮತ್ತು ಖಾತೆಯ ಸೆಟ್ಟಿಂಗ್‌ಗಳನ್ನು ಓವರ್‌ರೈಡ್ ಮಾಡುತ್ತವೆ.
  • Chrome ನೋಟಿಫಿಕೇಶನ್ ಸೆಟ್ಟಿಂಗ್‌ಗಳು: ಕಂಪ್ಯೂಟರ್‌ನಲ್ಲಿ, Chrome ಬಳಕೆದಾರರು ತಮ್ಮ ಸೆಟ್ಟಿಂಗ್‌ಗಳಲ್ಲಿ Chrome ನೋಟಿಫಿಕೇಶನ್‌ಗಳನ್ನು ಆಫ್ ಮಾಡಬಹುದು. ಈ ಸೆಟ್ಟಿಂಗ್, Chrome ನೋಟಿಫಿಕೇಶನ್‌ಗಳಿಗೆ ಸಂಬಂಧಿಸಿದ YouTube ಸೆಟ್ಟಿಂಗ್ ಅನ್ನು ಓವರ್‌ರೈಡ್ ಮಾಡುತ್ತದೆ.
ಈ ಎಲ್ಲಾ ಸೆಟ್ಟಿಂಗ್‌ಗಳ ಕುರಿತು ಅವಲೋಕನಕ್ಕಾಗಿ, TeamYouTube ಈ ವೀಡಿಯೊ ಮೇಲೆ ಕಣ್ಣಾಡಿಸಿ.

“ಮಕ್ಕಳಿಗಾಗಿ ರಚಿಸಲಾಗಿದೆ” ಎಂಬ ಕಂಟೆಂಟ್‌ನಲ್ಲಿ ನೋಟಿಫಿಕೇಶನ್‌ಗಳನ್ನು ಏಕೆ ಆಫ್ ಮಾಡಲಾಗಿದೆ? 

ಮಕ್ಕಳ ಆನ್‌ಲೈನ್ ಗೌಪ್ಯತೆ ಸುರಕ್ಷತೆ ಕಾಯ್ದೆ (COPPA) ಮತ್ತು ಇತರ ಕಾನೂನುಗಳನ್ನು ಅನುಸರಿಸಲು, ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಗೊತ್ತುಪಡಿಸಿದ ಕಂಟೆಂಟ್‌ನ ಡೇಟಾ ಸಂಗ್ರಹಣೆಯನ್ನು ನಾವು ಮಿತಿಗೊಳಿಸುತ್ತೇವೆ. ನೋಟಿಫಿಕೇಶನ್‌ಗಳು ಒಳಗೊಂಡಂತೆ ಈ ಕಂಟೆಂಟ್‌ನಲ್ಲಿ ಕೆಲವು ಫೀಚರ್‌ಗಳನ್ನು ನಿರ್ಬಂಧಿಸಬಹುದು ಅಥವಾ ಆಫ್ ಮಾಡಬಹುದು ಮತ್ತು ನಿಮ್ಮ ಸಬ್‌ಸ್ಕ್ರೈಬರ್‌ಗಳು ನಿಮ್ಮ ಚಾನಲ್ ಕುರಿತು ಇನ್ನು ಮುಂದೆ ನೋಟಿಫಿಕೇಶನ್‌ಗಳನ್ನು ಪಡೆಯುವುದಿಲ್ಲ. ನಿಮ್ಮ ಚಾನಲ್ ಅಥವಾ ವೀಡಿಯೊದ ಪ್ರೇಕ್ಷಕರನ್ನು ಹೊಂದಿಸುವ ಕುರಿತು, ನೀವು ಇಲ್ಲಿ ಇನ್ನಷ್ಟು ತಿಳಿಯಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12617875663491825119
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false