YouTube ವೀಡಿಯೊಗಳ ಆಫ್‌ಲೈನ್ FAQ ಗಳು

ಆಯ್ದ ಪ್ರದೇಶಗಳಲ್ಲಿ, ಆಫ್‌ಲೈನ್‌ನಲ್ಲಿ ಪ್ಲೇ ಮಾಡಲು ನೀವು YouTube ಮೊಬೈಲ್ ಆ್ಯಪ್‌ನಿಂದ ಕೆಲವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು. ಆಫ್‌ಲೈನ್‌ನಲ್ಲಿ ವೀಕ್ಷಿಸಲು ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಎಂಬುದರ ಕುರಿತು ಇನ್ನಷ್ಟು ತಿಳಿಯಿರಿ.

ಈ ಲೇಖನದಲ್ಲಿ ವಿವರಿಸಲಾದ ಫೀಚರ್‌ಗಳು, ಇಲ್ಲಿ ಪಟ್ಟಿ ಮಾಡಲಾದ ಸ್ಥಳಗಳಲ್ಲಿ ಲಭ್ಯವಿವೆ. YouTube Premium ನಿಮ್ಮ ಸ್ಥಳದಲ್ಲಿ ಲಭ್ಯವಿದ್ದರೆ, ನೀವು YouTube Premium ನ ಸದಸ್ಯರಾಗುವ ಮೂಲಕ ನಿಮ್ಮ ಕಂಪ್ಯೂಟರ್ ಅಥವಾ ನಿಮ್ಮ ಮೊಬೈಲ್ ಸಾಧನದಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು. ನೀವು ಓರ್ವ YouTube Premium ಸದಸ್ಯರಾಗಿದ್ದರೆ, ನಿಮ್ಮ ಡೌನ್‌ಲೋಡ್ ಸೆಟ್ಟಿಂಗ್‌ಗಳನ್ನು ನಿರ್ವಹಿಸುವುದು ಹೇಗೆ ಎಂಬುದನ್ನು ತಿಳಿಯಿರಿ.

ವೀಡಿಯೊ ಡೌನ್‌ಲೋಡಿಂಗ್ ಸೌಲಭ್ಯವು ಎಲ್ಲೆಲ್ಲಿ ಲಭ್ಯವಿದೆ?

ಆಯ್ದ ದೇಶಗಳು/ಪ್ರದೇಶಗಳಲ್ಲಿ ಮೊಬೈಲ್‌ನಲ್ಲಿ ಆಫ್‌ಲೈನ್‌ನಲ್ಲಿ ವೀಡಿಯೊಗಳನ್ನು ವೀಕ್ಷಿಸಿ.

ಎಲ್ಲಾ ಸ್ಥಳಗಳಲ್ಲಿ YouTube ಲಭ್ಯವಿಲ್ಲದಿರಬಹುದು ಮತ್ತು ಹಾಗಾಗಿ ಈ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸದೇ ಇರಬಹುದು. YouTube ನ ಸ್ಥಳೀಯ ಆವೃತ್ತಿಯನ್ನು ಹೆಚ್ಚಿನ ದೇಶಗಳಿಗೆ/ಪ್ರದೇಶಗಳಿಗೆ ತರಲು ಹಾಗೂ ಇನ್ನಷ್ಟು ಪ್ರದೇಶಗಳನ್ನು ಸೇರಿಸಲು ನಾವು ಕೆಲಸ ಮಾಡುತ್ತಿದ್ದೇವೆ.

ನಾನು YouTube ಆ್ಯಪ್‌ನಿಂದ ಆಡಿಯೋ, ಸಂಗೀತ ಅಥವಾ MP3 ಫೈಲ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ?

ನೀವು ವೀಡಿಯೊ ಡೌನ್‌ಲೋಡ್ ಮಾಡುವ ಹಂತಗಳನ್ನು ಅನುಸರಿಸುವ ಮೂಲಕ ಲಭ್ಯವಿರುವ ಸಂಗೀತದ ವೀಡಿಯೊ ಫೈಲ್ ಅನ್ನು ಡೌನ್‌ಲೋಡ್ ಮಾಡಬಹುದು.

YouTube ಆ್ಯಪ್‌ನಿಂದ ಆಡಿಯೋ, ಸಂಗೀತ ಅಥವಾ MP3 ಫೈಲ್‌ಗಳನ್ನು ಡೌನ್‌ಲೋಡ್ ಮಾಡಲು ಸಾಧ್ಯವಿಲ್ಲ.

ನಾನು ವೀಡಿಯೊಗಳನ್ನು YouTube ನಿಂದ ನನ್ನ ಕಂಪ್ಯೂಟರ್‌ಗೆ ಡೌನ್‌ಲೋಡ್ ಮಾಡುವುದು ಹೇಗೆ?

ನೀವು ಈಗಾಗಲೇ ಅಪ್‌ಲೋಡ್ ಮಾಡಿರುವ ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು.

ನೀವಾಗಿಯೇ ವೀಡಿಯೊವನ್ನು ಅಪ್‌ಲೋಡ್ ಮಾಡಿಲ್ಲದಿದ್ದರೆ, ಅದನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ಉಳಿಸಬಹುದು. ನೀವು Premium ಸದಸ್ಯರಾಗಿದ್ದರೆ, ವೀಡಿಯೊಗಳನ್ನು ಆಫ್‌ಲೈನ್‌ನಲ್ಲಿ ವೀಕ್ಷಿಸುವುದಕ್ಕೆ ಸಂಬಂಧಿಸಿದ ಹಂತಗಳನ್ನು ಅನುಸರಿಸುವ ಮೂಲಕ ವೀಡಿಯೊಗಳನ್ನು ನೀವು ಡೌನ್‌ಲೋಡ್ ಮಾಡಬಹುದು.

ನನ್ನ ಡೌನ್‌ಲೋಡ್ ಮಾಡಿದ YouTube ವೀಡಿಯೊಗಳು ನನ್ನ ಗ್ಯಾಲರಿಯಲ್ಲಿ ಏಕೆ ಕಾಣಿಸುತ್ತಿಲ್ಲ?

ಸಂಗ್ರಹಿಸಲಾದ ವೀಡಿಯೊಗಳನ್ನು ಸಾಧನದಲ್ಲಿ ಎನ್‌ಕ್ರಿಪ್ಟ್ ಮಾಡಲಾಗಿದೆ ಮತ್ತು ಅವುಗಳನ್ನು YouTube ಆ್ಯಪ್‌ನಲ್ಲಿ ಮಾತ್ರ ವೀಕ್ಷಿಸಬಹುದಾಗಿದೆ.

YouTube ನಲ್ಲಿ ನಾನು ವೀಡಿಯೊಗಳನ್ನು ಹೇಗೆ ಹಂಚಿಕೊಳ್ಳಲಿ?

  1. ವೀಡಿಯೊದ ಕೆಳಗೆ ಕಾಣಿಸುವ ಹಂಚಿಕೊಳ್ಳಿ ಟ್ಯಾಪ್ ಮಾಡಿ.
  2. ಸಂಬಂಧಿತ ಹಂಚಿಕೊಳ್ಳುವಿಕೆ ಆಯ್ಕೆಯನ್ನು ಮಾಡಿ.

ವೀಡಿಯೊಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುತ್ತವೆಯೇ?

ನೀವು ಸಂಪೂರ್ಣ ಪ್ಲೇಪಟ್ಟಿಯನ್ನು ಡೌನ್‌ಲೋಡ್ ಮಾಡಿದ್ದರೆ, ವೀಡಿಯೊಗಳು ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಬಹುದು. ಆದರೂ, ನೀವು ವೀಡಿಯೊಗಳನ್ನು ಪ್ರತ್ಯೇಕವಾಗಿ ಡೌನ್‌ಲೋಡ್ ಮಾಡಿದ್ದರೆ, ಸ್ವಯಂಚಾಲಿತವಾಗಿ ಡೌನ್‌ಲೋಡ್ ಮಾಡಿದ ಕಂಟೆಂಟ್ ನಿಮಗೆ ಕಾಣಿಸುವುದಿಲ್ಲ.

ನೀವು ಪ್ಲೇಪಟ್ಟಿಯ ಜೊತೆಗೆ ಕೊನೆಯ ಬಾರಿಗೆ ಯಾವಾಗ ಸಂವಹನ ನಡೆಸಿದ್ದೀರಿ ಎಂಬುದನ್ನು ಇದು ಆಧರಿಸಿರುತ್ತದೆ. ಕಳೆದ 30 ದಿನಗಳಲ್ಲಿ ನೀವು ಪ್ಲೇಪಟ್ಟಿಯಲ್ಲಿರುವ ಒಂದು ವೀಡಿಯೊವನ್ನು ವೀಕ್ಷಿಸಿದ್ದರೆ ಮತ್ತು ಆ ಪ್ಲೇಪಟ್ಟಿಗೆ ಹೊಸ ವೀಡಿಯೊವನ್ನು ಸೇರಿಸಿದರೆ, ಹೊಸ ವೀಡಿಯೊ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗುತ್ತದೆ. ಕಳೆದ 30 ದಿನಗಳಲ್ಲಿ ನೀವು ಆ ಪ್ಲೇಪಟ್ಟಿಯನ್ನು ಡೌನ್‌ಲೋಡ್ ಮಾಡಿದ್ದರೆ, ವೀಡಿಯೊ ಸಹ ಸ್ವಯಂಚಾಲಿತವಾಗಿ ಡೌನ್‌ಲೋಡ್ ಆಗಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17268072858171610646
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false