YouTube ವೀಡಿಯೊಗಳನ್ನು SD ಕಾರ್ಡ್‌ನಲ್ಲಿ ಡೌನ್‌ಲೋಡ್ ಮಾಡಿ

ವೀಡಿಯೊವನ್ನು ಆಫ್‌ಲೈನ್‌ನಲ್ಲಿ ವೀಕ್ಷಿಸಲು, ಅದನ್ನು SD ಕಾರ್ಡ್‌ನಲ್ಲಿ (ಮೆಮೊರಿ ಕಾರ್ಡ್) ಅಥವಾ ನಿಮ್ಮ ಫೋನ್‌ನ ಆಂತರಿಕ ಮೆಮೊರಿಯಲ್ಲಿ ಡೌನ್‌ಲೋಡ್ ಮಾಡಿ. ನೀವು ಕೆಳಗಿನವುಗಳನ್ನು ಮಾಡಿದ್ದರೆ ನೀವು ವೀಡಿಯೊಗಳನ್ನು ಡೌನ್‌ಲೋಡ್ ಮಾಡಬಹುದು:

 ಆಫ್‌ಲೈನ್‌ನಲ್ಲಿ ವೀಕ್ಷಿಸುವುದಕ್ಕೆ ವೀಡಿಯೊಗಳನ್ನು ಸೇವ್ ಮಾಡಲು, ವೀಡಿಯೊ ವೀಕ್ಷಣೆ ಪುಟದಿಂದ ಡೌನ್‌ಲೋಡ್ ಟ್ಯಾಪ್ ಮಾಡಿ.


SD ಕಾರ್ಡ್‌ಗೆ ವೀಡಿಯೊಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ | ನಿರ್ಬಂಧಗಳು ಅನ್ವಯಿಸುತ್ತವೆ

ನಿಮ್ಮ ಫೋನ್‌ನ SD ಕಾರ್ಡ್‌ನಲ್ಲಿ ವೀಡಿಯೊಗಳನ್ನು ಡೌನ್‌ಲೋಡ್ ಮಾಡಿ

ನಿಮ್ಮ ಫೋನ್ ಈಗಾಗಲೇ SD ಕಾರ್ಡ್ ಹೊಂದಿಲ್ಲದಿದ್ದರೆ, ಒಂದನ್ನು ಇನ್‌ಸ್ಟಾಲ್ ಮಾಡಿ, ಇದರಿಂದ ನೀವು ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ಅದರಲ್ಲಿ ಸಂಗ್ರಹಿಸಲಾಗುತ್ತದೆ.

ಡೀಫಾಲ್ಟ್ ಆಗಿ SD ಕಾರ್ಡ್‌ನಲ್ಲಿ ಸೇವ್ ಮಾಡಿ

  1. ನಿಮ್ಮ ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ನಿಮ್ಮ ಪ್ರೊಫೈಲ್ ಚಿತ್ರವನ್ನು  ಟ್ಯಾಪ್ ಮಾಡಿ.
  2. ಸೆಟ್ಟಿಂಗ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  3. ಹಿನ್ನೆಲೆ ಮತ್ತು ಡೌನ್‌ಲೋಡ್‌ಗಳು ಎಂಬುದನ್ನು ಟ್ಯಾಪ್ ಮಾಡಿ.
  4. SD ಕಾರ್ಡ್ ಬಳಸಿ ಎಂಬುದನ್ನು ಆನ್ ಮಾಡಿ (ವೀಡಿಯೊಗಳನ್ನು SD ಕಾರ್ಡ್‌ನಲ್ಲಿ ಸೇವ್ ಮಾಡಿ).

SD ಕಾರ್ಡ್‌ ಬಳಸಿ ಎಂಬುದನ್ನು ನೀವು ಆನ್‌ ಮಾಡದಿದ್ದರೆ, ನಿಮ್ಮ ವೀಡಿಯೊಗಳು ನಿಮ್ಮ ಫೋನ್‌ನ ಆಂತರಿಕ ಮೆಮೊರಿಯಲ್ಲಿ ಸೇವ್ ಆಗುತ್ತವೆ.

ನಿಮ್ಮ ವೀಡಿಯೊವನ್ನು ಸೇವ್ ಮಾಡಲು SD ಕಾರ್ಡ್‌ನಲ್ಲಿ ಸಾಕಷ್ಟು ಸ್ಥಳಾವಕಾಶ ಲಭ್ಯವಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ವೀಡಿಯೊಗಳನ್ನು SD ಕಾರ್ಡ್‌ನಲ್ಲಿ ಡೌನ್‌ಲೋಡ್ ಮಾಡಿ

  1. ನಿಮ್ಮ SD ಕಾರ್ಡ್‌ನಲ್ಲಿ ನೀವು ಸೇವ್ ಮಾಡಲು ಬಯಸುವ ವೀಡಿಯೊಗೆ ಹೋಗಿ.
  2. ವೀಡಿಯೊ ಕೆಳಗಿರುವ ಡೌನ್‌ಲೋಡ್  ಎಂಬುದನ್ನು ಟ್ಯಾಪ್ ಮಾಡಿ.

ನೀವು ವೀಡಿಯೊ ಅಥವಾ ಪ್ಲೇಪಟ್ಟಿಯನ್ನು ಡೌನ್‌ಲೋಡ್ ಮಾಡುತ್ತಿರುವಾಗ ನಿಮ್ಮ ಸಾಧನವು ಅದರ ಕನೆಕ್ಷನ್ ಅನ್ನು ಕಳೆದುಕೊಂಡರೆ, ನೀವು ಇಂಟರ್ನೆಟ್‌ಗೆ ಪುನಃ ಕನೆಕ್ಟ್ ಆದಾಗ ಡೌನ್‌ಲೋಡ್ ಸ್ವಯಂಚಾಲಿತವಾಗಿ ಪುನರಾರಂಭಗೊಳ್ಳುತ್ತದೆ.

SD ಕಾರ್ಡ್ FAQ ಗಳು

ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ನನ್ನ ಫೋನ್‌ನ ಆಂತರಿಕ ಮೆಮೊರಿಯಿಂದ ನನ್ನ SD ಕಾರ್ಡ್‌ಗೆ ಹೇಗೆ ಮೂವ್ ಮಾಡಬೇಕು?

ವೀಡಿಯೊಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನೇರವಾಗಿ ಮೂವ್ ಮಾಡಲು ಸಾಧ್ಯವಿಲ್ಲ. ಡೌನ್‌ಲೋಡ್ ಮಾಡಿದ ವೀಡಿಯೊವನ್ನು ನಿಮ್ಮ ಫೋನ್‌ನ ಆಂತರಿಕ ಮೆಮೊರಿಯಿಂದ ನಿಮ್ಮ SD ಕಾರ್ಡ್‌ಗೆ ಮೂವ್ ಮಾಡಲು:

  1. ಆಂತರಿಕ ಸಂಗ್ರಹಣೆಯಲ್ಲಿನ ವೀಡಿಯೊವನ್ನು ಅಳಿಸಿ.
  2. ವೀಡಿಯೊ ಸಂಗ್ರಹಣೆ ಸ್ಥಳವನ್ನು SD ಗೆ ಬದಲಾಯಿಸಿ.
  3. ಮತ್ತೊಮ್ಮೆ ವೀಡಿಯೊವನ್ನು ಡೌನ್‌ಲೋಡ್ ಮಾಡಿ.

ಡೌನ್‌ಲೋಡ್ ಮಾಡಿದ ವೀಡಿಯೊಗಳನ್ನು ನನ್ನ SD ಕಾರ್ಡ್‌ನಿಂದ ನನ್ನ ಫೋನ್‌ನ ಆಂತರಿಕ ಮೆಮೊರಿಗೆ ಹೇಗೆ ಸರಿಸಬೇಕು?

ವೀಡಿಯೊಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ನೇರವಾಗಿ ಮೂವ್ ಮಾಡಲು ಸಾಧ್ಯವಿಲ್ಲ. ಡೌನ್‌ಲೋಡ್ ಮಾಡಿದ ವೀಡಿಯೊವನ್ನು ನಿಮ್ಮ SD ಕಾರ್ಡ್‌ನಿಂದ ನಿಮ್ಮ ಫೋನ್‌ನ ಆಂತರಿಕ ಮೆಮೊರಿಗೆ ಮೂವ್ ಮಾಡಲು:
  1. ನಿಮ್ಮ SD ಕಾರ್ಡ್‌ನಲ್ಲಿನ ವೀಡಿಯೊವನ್ನು ಅಳಿಸಿ. 
  2. ವೀಡಿಯೊ ಸಂಗ್ರಹಣೆ ಸ್ಥಳವನ್ನು ನಿಮ್ಮ ಫೋನ್‌ನ ಆಂತರಿಕ ಮೆಮೊರಿಗೆ ಬದಲಾಯಿಸಿ. 
  3. ಮತ್ತೊಮ್ಮೆ ವೀಡಿಯೊವನ್ನು ಡೌನ್‌ಲೋಡ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12743651943890724298
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false