YouTube ಪ್ರಮಾಣೀಕೃತ ಕೋರ್ಸ್‌ಗಳನ್ನು ತೆಗೆದುಕೊಳ್ಳಿ

ಅಕ್ಟೋಬರ್ 2019 ರಿಂದ, YouTube ಪ್ರಮಾಣೀಕೃತ ಕೋರ್ಸ್ ಅರ್ಹತೆಯ ಮಾನದಂಡಗಳು ಬದಲಾಗಿವೆ. YouTube ಪಾಲುದಾರ ವ್ಯವಸ್ಥಾಪಕರು ಅಥವಾ Content ID ಗೆ ಆ್ಯಕ್ಸೆಸ್ ಇರುವ ರಚನೆಕಾರರು ಮತ್ತು ಪಾಲುದಾರರಿಗೆ ಮಾತ್ರ YouTube ಪ್ರಮಾಣೀಕೃತ ಕೋರ್ಸ್‌ಗಳು ತೆರೆದಿರುತ್ತವೆ. ನೀವು ಈ ಹಿಂದೆ YouTube ಪ್ರಮಾಣೀಕೃತ ಕೋರ್ಸ್‌ನಲ್ಲಿ ಉತ್ತೀರ್ಣರಾಗಿದ್ದು ಈ ಅಗತ್ಯತೆಗಳನ್ನು ಪೂರೈಸದಿದ್ದರೆ, ನೀವು ಮರು ಪ್ರಮಾಣೀಕರಿಸಲು ಅರ್ಹರಾಗಿರುವುದಿಲ್ಲ.

YouTube ಪ್ರಮಾಣೀಕೃತ ಎಂಬುದು ಸುಧಾರಿತ YouTube ಸಿಸ್ಟಂಗಳು ಮತ್ತು ಪರಿಕರಗಳನ್ನು ಹೇಗೆ ಬಳಸುವುದು ಎಂಬುದನ್ನು ಅರ್ಹ ರಚನೆಕಾರರು ಮತ್ತು ಪಾಲುದಾರರಿಗೆ ಕಲಿಸುವ ಪ್ರೋಗ್ರಾಂ ಆಗಿದೆ.

ನೀವು ಅರ್ಹರಾಗಿದ್ದೀರಾ ಎಂದು ಪರಿಶೀಲಿಸಿ

ಪಾಲುದಾರ ವ್ಯವಸ್ಥಾಪಕರು ಅಥವಾ Content ID ಅನ್ನು ಹೊಂದಿರುವ ರಚನೆಕಾರರು ಮತ್ತು ಪಾಲುದಾರರಿಗೆ ಮಾತ್ರ YouTube ಪ್ರಮಾಣೀಕೃತ ಕೋರ್ಸ್‌ಗಳು ಲಭ್ಯವಿವೆ.

ಜೊತೆಗೆ, YouTube ಪ್ರಮಾಣೀಕೃತ ಪ್ರೋಗ್ರಾಂಗೆ ಅರ್ಹತೆ ಪಡೆಯಲು, ನೀವು:

ಕೋರ್ಸ್‌ನಲ್ಲಿ ನೋಂದಾಯಿಸಿ

ನೀವು ಅರ್ಹರಾಗಿದ್ದರೆ, ಕೋರ್ಸ್‌ನಲ್ಲಿ ನೋಂದಾಯಿಸಲು ನಿಮ್ಮ ಪಾಲುದಾರ ವ್ಯವಸ್ಥಾಪಕರ ಜೊತೆಗೆ ಸಂಪರ್ಕದಲ್ಲಿರಿ. ಯಾವ ಕೋರ್ಸ್‌ಗಳನ್ನು ತೆಗೆದುಕೊಳ್ಳುವುದು ತುಂಬಾ ಉಪಯುಕ್ತ ಎಂಬುದನ್ನು ಅರ್ಥಮಾಡಿಕೊಳ್ಳಲು ನಿಮ್ಮ ಪಾಲುದಾರ ವ್ಯವಸ್ಥಾಪಕರು ನಿಮಗೆ ಸಹಾಯ ಮಾಡಬಹುದು.

ನೀವು ಓರ್ವ ನಿರ್ವಹಿಸದ ಪಾಲುದಾರರಾಗಿದ್ದು Content ID ಅನ್ನು ಹೊಂದಿದ್ದರೆ, ಮೇಲಿನ ಬಲಭಾಗದಲ್ಲಿರುವ ಬೆಂಬಲವನ್ನು ಪಡೆಯಿರಿ ಆಯ್ಕೆ ಮಾಡಿ ಮತ್ತು ರಚನೆಕಾರರ ಬೆಂಬಲ ತಂಡವನ್ನು ಸಂಪರ್ಕಿಸಿ.

ನಿಮ್ಮ ಕೋರ್ಸ್ ಪೂರ್ಣಗೊಳಿಸಿ

ಕೋರ್ಸ್ ಪೂರ್ಣಗೊಳಿಸಲು:

  1. ಸ್ವಯಂ-ಕಲಿಕೆಯ ಕೋರ್ಸ್ ಮೆಟೀರಿಯಲ್‌ಗಳನ್ನು ಪೂರ್ಣಗೊಳಿಸಿ.
  2. ಪರೀಕ್ಷೆ ತೆಗೆದುಕೊಳ್ಳಿ. ಪರೀಕ್ಷೆಯನ್ನು ತೆಗೆದುಕೊಳ್ಳಲು ನಿಮಗೆ 2 ಗಂಟೆಗಳ ಕಾಲಾವಕಾಶವಿರುತ್ತದೆ. ನೀವು ಮೊದಲ ಬಾರಿಗೆ ಉತ್ತೀರ್ಣರಾಗಲು ಸಾಧ್ಯವಾಗದಿದ್ದರೆ, 24 ಗಂಟೆಗಳ ಬಳಿಕ ಪರೀಕ್ಷೆಯನ್ನು ಪುನಃ ತೆಗೆದುಕೊಳ್ಳಬಹುದು.

ನೀವು ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದರೆ 75% ಕ್ಕಿಂತ ಹೆಚ್ಚು ಅಂಕವನ್ನು ಗಳಿಸಬೇಕು. ನಿಮ್ಮ ಪರೀಕ್ಷೆಯು ಪೂರ್ಣಗೊಂಡಿರುವ ಕುರಿತಾಗಿ ನೀವು ಇಮೇಲ್ ದೃಢೀಕರಣ ಸಂದೇಶವನ್ನು ಪಡೆಯುತ್ತೀರಿ. ಕೋರ್ಸ್ ಪೂರ್ಣಗೊಳಿಸಿದ್ದಕ್ಕಾಗಿ ನಿಮಗೆ ನೀಡುವ ಪ್ರಮಾಣಪತ್ರವು 18 ತಿಂಗಳ ಕಾಲ ಮಾನ್ಯವಾಗಿರುತ್ತದೆ. 18 ತಿಂಗಳ ನಂತರ, ನೀವು ಮತ್ತೆ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಗುತ್ತದೆ.

Music ಪಾಲುದಾರರು: ನಿಮ್ಮ SRAV ನಲ್ಲಿ ತಿಳಿಸಲಾಗಿರುವ ಎಲ್ಲಾ ಕೋರ್ಸ್‌ಗಳನ್ನು ಪೂರ್ಣಗೊಳಿಸಬೇಕು (ಅನ್ವಯವಾದರೆ).

YouTube ಪ್ರಮಾಣೀಕೃತ FAQ

ನಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಎಷ್ಟು ಬಾರಿ ಪ್ರಯತ್ನಿಸಬಹುದು?

ನೀವು ಮೊದಲ ಪ್ರಯತ್ನದಲ್ಲಿಯೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ವಿಫಲರಾದರೆ, ಪುನಃ ಪರೀಕ್ಷೆಯನ್ನು ತೆಗೆದುಕೊಳ್ಳಲು 24 ಗಂಟೆಗಳ ಕಾಲ ಕಾಯಬೇಕಾಗುತ್ತದೆ. ನೀವು ಎಷ್ಟು ಬಾರಿ ಬೇಕಾದರೂ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು.

ನನ್ನ ಕೋರ್ಸ್‌ನ ಪ್ರಮಾಣಪತ್ರವು ಅವಧಿ ಮೀರಿದೆ. ನಾನು ಕೋರ್ಸ್ ಅನ್ನು ಮತ್ತೆ ತೆಗೆದುಕೊಳ್ಳುವುದು ಹೇಗೆ?

ನೀವು YouTube ಪ್ರಮಾಣೀಕೃತ ಕೋರ್ಸ್‌ಗಳಿಗೆ ಅರ್ಹರಾಗಿದ್ದರೆ, ಕೋರ್ಸ್ ಅನ್ನು ಪುನಃ ತೆಗೆದುಕೊಳ್ಳುವ ಕುರಿತು ಮಾಹಿತಿಗಾಗಿ ನಿಮ್ಮ ಪಾಲುದಾರ ವ್ಯವಸ್ಥಾಪಕರ ಜೊತೆಗೆ ಸಂಪರ್ಕದಲ್ಲಿರಿ.
ನೀವು ಪಾಲುದಾರ ವ್ಯವಸ್ಥಾಪಕರನ್ನು ಹೊಂದಿಲ್ಲದಿದ್ದರೂ Content ID ಗೆ ಆ್ಯಕ್ಸೆಸ್ ಹೊಂದಿದ್ದರೆ, ರಚನೆಕಾರ ಬೆಂಬಲ ತಂಡವನ್ನು ಸಂಪರ್ಕಿಸಲು ಮೇಲಿನ ಬಲಭಾಗದಲ್ಲಿರುವ ಬೆಂಬಲವನ್ನು ಪಡೆಯಿರಿ ಆಯ್ಕೆಮಾಡಿ.
ನೀವು YouTube ಪ್ರಮಾಣೀಕೃತ ಪ್ರೋಗ್ರಾಂನಲ್ಲಿ ಭಾಗವಹಿಸಲು ಇನ್ನು ಮುಂದೆ ಅರ್ಹರಾಗಿಲ್ಲದಿದ್ದರೆ, ನಿಮ್ಮ ಕೋರ್ಸ್‌ಗಳನ್ನು ನೀವು ಮತ್ತೆ ತೆಗೆದುಕೊಳ್ಳಲಾಗುವುದಿಲ್ಲ.

ನಾನು YouTube ಪ್ರಮಾಣೀಕೃತ ಕಂಪನಿ ಆಗುವುದು ಹೇಗೆ?

ನಾವು ಪ್ರೋಗ್ರಾಂನಲ್ಲಿ ಕೆಲವು ಬದಲಾವಣೆಗಳನ್ನು ಮಾಡುತ್ತಿದ್ದೇವೆ, ಹೀಗಾಗಿ ಕಂಪನಿ ಪ್ರಮಾಣಪತ್ರವನ್ನು ಸದ್ಯಕ್ಕೆ ತಡೆಹಿಡಿಯಲಾಗಿದೆ. ಸದ್ಯದಲ್ಲೇ ಪುನಃ ಪರಿಶೀಲಿಸಿ!

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15375993332871415718
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false