ಅಧಿಕೃತ ಕಲಾವಿದರ ಚಾನಲ್‌ಗಳ ಪರಿಚಯ

ನೀವು YouTube ನಲ್ಲಿ ಕಲಾವಿದರಾಗಿದ್ದರೆ, ನಿಮ್ಮ ವಿವಿಧ YouTube ಚಾನಲ್‌ಗಳ ಎಲ್ಲಾ ಸಬ್‌ಸ್ಕ್ರೈಬರ್‌ಗಳು ಹಾಗೂ ಕಂಟೆಂಟ್ ಅನ್ನು ನಿಮ್ಮ ಅಧಿಕೃತ ಕಲಾವಿದರ ಚಾನಲ್ ಒಂದೇ ಸ್ಥಳದಲ್ಲಿ ಒಟ್ಟುಗೂಡಿಸುತ್ತದೆ. ಕಲಾವಿದರಿಗಾಗಿ Analytics ಸೇರಿದಂತೆ, ಕಲಾವಿದರಿಗಾಗಿ ನಿರ್ಮಿಸಲಾದ ವಿವಿಧ ಪರಿಕರಗಳಿಗೆ ಸಹ ನೀವು ಆ್ಯಕ್ಸೆಸ್ ಹೊಂದಿರುತ್ತೀರಿ.
ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.

ಅಧಿಕೃತ ಕಲಾವಿದರ ಚಾನಲ್‌ಗಳ ಕುರಿತು ತಿಳಿದುಕೊಳ್ಳಿ

ಅಧಿಕೃತ ಕಲಾವಿದರ ಚಾನಲ್‌ಗಳು ಇವುಗಳನ್ನು ಒದಗಿಸುತ್ತವೆ:

ಕಾರ್ಯಕ್ರಮದ ಮಾನದಂಡಗಳು

ಅಧಿಕೃತ ಕಲಾವಿದರ ಚಾನಲ್‌ಗೆ ಅರ್ಹರಾಗಲು, ನೀವು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಬೇಕು:

  • ಒಬ್ಬ ಕಲಾವಿದರು ಅಥವಾ ಬ್ಯಾಂಡ್ ಅನ್ನು ಪ್ರತಿನಿಧಿಸುವ YouTube ಚಾನಲ್‌ನ ಒಡೆತನ ಪಡೆಯಿರಿ ಮತ್ತು ನಿರ್ವಹಿಸಿ
  • YouTube ನಲ್ಲಿನ ಕನಿಷ್ಠ 1 ಅಧಿಕೃತ ಸಂಗೀತ ಬಿಡುಗಡೆಯನ್ನು ಸಂಗೀತ ವಿತರಕರು ಅಥವಾ ಲೇಬಲ್‌ನಿಂದ ಡೆಲಿವರ್ ಮತ್ತು ವಿತರಣೆ ಮಾಡಿಸಿ
  • YouTube ನ ಸಮುದಾಯ ಮಾರ್ಗಸೂಚಿಗಳು, ಸೇವಾ ನಿಯಮಗಳು, ಹಾಗೂ ಕೃತಿಸ್ವಾಮ್ಯದ ನೀತಿಗಳು ಸೇರಿದಂತೆ YouTube ನೀತಿಗಳನ್ನು ನಿಮ್ಮ ಚಾನಲ್ ಅನುಸರಿಸುವಂತೆ ನೋಡಿಕೊಳ್ಳಿ

ಮತ್ತು ಇವುಗಳಲ್ಲಿ ಒಂದು ಅಥವಾ ಹೆಚ್ಚಿನದನ್ನು ಮಾಡಿ:

  • YouTube ಪಾಲುದಾರ ವ್ಯವಸ್ಥಾಪಕರೊಂದಿಗೆ ಕೆಲಸ ಮಾಡಿ
  • YouTube ಪಾಲುದಾರ ಕಾರ್ಯಕ್ರಮದ ಭಾಗವಾಗಿರಿ
  • ನಿಮ್ಮ ಚಾನಲ್, ಪಾಲುದಾರ ವ್ಯವಸ್ಥಾಪಕರೊಂದಿಗೆ ಕೆಲಸ ಮಾಡುವ ಲೇಬಲ್ ನೆಟ್‌ವರ್ಕ್‌ನ ಭಾಗವಾಗಿರುವಂತೆ ನೋಡಿಕೊಳ್ಳಿ
  • ಸಂಗೀತ ಪಾಲುದಾರರಿಗಾಗಿ YouTube ಸೇವೆಗಳ ಸೂಚಿಕೆಯಲ್ಲಿ ಪಟ್ಟಿ ಮಾಡಲಾದ ಸಂಗೀತ ಪಾಲುದಾರರು ನಿಮ್ಮ ಸಂಗೀತವನ್ನು ವಿತರಿಸುವಂತೆ ನೋಡಿಕೊಳ್ಳಿ

ಗಮನಿಸಿ: ಸಂಗೀತ ಸೇವಾ ಪಾಲುದಾರರು ನಿಮ್ಮ ಸಂಗೀತ ಕಂಟೆಂಟ್ ಅನ್ನು YouTube ಗೆ ಡೆಲಿವರ್ ಮಾಡುವುದರ ಭಾಗವಾಗಿ, ನಿಮ್ಮ ಪರವಾಗಿ ಅಧಿಕೃತ ಕಲಾವಿದರ ಚಾನಲ್ ಅನ್ನು ವಿನಂತಿಸಬಹುದು.

ಅಧಿಕೃತ ಕಲಾವಿದರ ಚಾನಲ್ ಅನ್ನು ವಿನಂತಿಸುವುದಕ್ಕಾಗಿ, ಸಕ್ರಿಯವಾಗಿ ಹೊಸ ಸಂಗೀತವನ್ನು ಬಿಡುಗಡೆ ಮಾಡುವ ಅಗತ್ಯವಿಲ್ಲ.

ಅಧಿಕೃತ ಕಲಾವಿದರ ಚಾನಲ್ ಅನ್ನು ಪಡೆಯಿರಿ

ಅಧಿಕೃತ ಕಲಾವಿದರ ಚಾನಲ್ ಅನ್ನು ಪಡೆಯಲು ನಿಮ್ಮ ಲೇಬಲ್, ಡಿಜಿಟಲ್ ವಿತರಕರು ಅಥವಾ YouTube ಪಾಲುದಾರ ವ್ಯವಸ್ಥಾಪಕರನ್ನು ಸಂಪರ್ಕಿಸಿ.

ಅಧಿಕೃತ ಕಲಾವಿದರ ಚಾನಲ್‌ಗೆ ಸಂಬಂಧಿಸಿದ ನೀತಿಗಳು

ನೀವು YouTube ನಲ್ಲಿ ಅಧಿಕೃತ ಕಲಾವಿದರ ಚಾನಲ್ ಅನ್ನು ಹೊಂದಿದ್ದರೆ, ನೀವು YouTube ನ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುವುದು ಮುಖ್ಯವಾಗಿದೆ.

ನಿಮ್ಮ ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ನಿಮ್ಮ ಚಾನಲ್‌ಗೆ ಸ್ಟ್ರೈಕ್ ವಿಧಿಸಲಾಗುವುದು. ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳ ಕುರಿತು ಮತ್ತು ನಿಮ್ಮ ಚಾನಲ್ ಸ್ಟ್ರೈಕ್ ಅನ್ನು ಪಡೆದರೆ ಏನು ಮಾಡಬೇಕು ಎಂಬ ಬಗ್ಗೆಇಲ್ಲಿ ತಿಳಿದುಕೊಳ್ಳಿ.

ನಿಮ್ಮ ಅಧಿಕೃತ ಕಲಾವಿದರ ಚಾನಲ್, ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್ ಅನ್ನು ಪಡೆದರೆ ಅಥವಾ ಸೀಮಿತ ಫೀಚರ್‌ಗಳಿರುವ ಕಂಟೆಂಟ್ ಅನ್ನು ಹೊಂದಿದ್ದರೆ, ಅದನ್ನು ಅಮಾನತುಗೊಳಿಸಲಾಗುವುದು ಮತ್ತು ಅದು ಸ್ಟ್ಯಾಂಡರ್ಡ್ ಚಾನಲ್ ಆಗುತ್ತದೆ. ನಿಮ್ಮ ಚಾನಲ್, ಸಕ್ರಿಯ ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳು ಅಥವಾ ಸೀಮಿತ ಫೀಚರ್‌ಗಳಿರುವ ಕಂಟೆಂಟ್ ಅನ್ನು ಇನ್ನು ಮುಂದೆ ಹೊಂದಿರದಿದ್ದರೆ ಮತ್ತು ಹೊಂದಿರದಿದ್ದಾಗ, ಮತ್ತು ಅದು ಈ ಮೇಲೆ ಪಟ್ಟಿ ಮಾಡಲಾದ ಇತರ ಎಲ್ಲಾ ಪ್ರೋಗ್ರಾಂ ಮಾನದಂಡಗಳನ್ನು ಪೂರೈಸುತ್ತಿದ್ದರೆ, ಅದನ್ನು ಸ್ವಯಂಚಾಲಿತವಾಗಿ ಅಧಿಕೃತ ಕಲಾವಿದರ ಚಾನಲ್ ಆಗಿ ಮರುಸ್ಥಾಪಿಸಲಾಗುವುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17431239591321096975
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false