YouTube ನಲ್ಲಿ ವೀಡಿಯೊ ಥಂಬ್‌ನೇಲ್‌ಗಳನ್ನು ಸೇರಿಸಿ

ವೀಡಿಯೊ ಥಂಬ್‌ನೇಲ್‌ಗಳು ನಿಮ್ಮ ಪ್ರೇಕ್ಷಕರಿಗೆ ನಿಮ್ಮ ವೀಡಿಯೊದ ತ್ವರಿತ ಸ್ನ್ಯಾಪ್‌ಶಾಟ್ ಅನ್ನು ವೀಕ್ಷಿಸಲು ಅವಕಾಶ ಮಾಡಿಕೊಡುತ್ತವೆ. ನಿಮ್ಮ ಖಾತೆ ದೃಢೀಕೃತವಾಗಿದ್ದರೆ, ನೀವು YouTube ಸ್ವಯಂಚಾಲಿತವಾಗಿ ಜನರೇಟ್ ಮಾಡುವ ಆಯ್ಕೆಗಳಿಂದ ಆರಿಸಿಕೊಳ್ಳಬಹುದು ಅಥವಾ ನಿಮ್ಮ ಸ್ವಂತದ್ದನ್ನು ಅಪ್‌ಲೋಡ್ ಮಾಡಬಹುದು. ನಿಮ್ಮ ಥಂಬ್‌ನೇಲ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಸ್ವಯಂಚಾಲಿತ ಅಥವಾ ಕಸ್ಟಮ್ ಥಂಬ್‌ನೇಲ್‌ಗಳನ್ನು ಸೇರಿಸಿ

Android ಗಾಗಿ YouTube Studio ಆ್ಯಪ್

  1. YouTube Studio ಆ್ಯಪ್ ತೆರೆಯಿರಿ.
  2. ಕೆಳಗಿನ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಟ್ಯಾಪ್ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಆಯ್ಕೆಮಾಡಿ.
  4. ಎಡಿಟ್ ಮಾಡಿ Edit icon ನಂತರ ಥಂಬ್‌ನೇಲ್ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  5. ಸ್ವಯಂ-ಜನರೇಟ್ ಆಗಿರುವ ಥಂಬ್‌ನೇಲ್ ಅನ್ನು ಆಯ್ಕೆಮಾಡಿ ಅಥವಾ ನಿಮ್ಮ ಸಾಧನದಲ್ಲಿನ ಚಿತ್ರವೊಂದರಿಂದ ಕಸ್ಟಮ್ ವೀಡಿಯೊ ಥಂಬ್‌ನೇಲ್ ಅನ್ನು ರಚಿಸಲು ಕಸ್ಟಮ್ ಥಂಬ್‌ನೇಲ್ ಎಂಬುದನ್ನು ಟ್ಯಾಪ್ ಮಾಡಿ.
  6. ನಿಮ್ಮ ಥಂಬ್‌ನೇಲ್ ಆಯ್ಕೆಯನ್ನು ದೃಢೀಕರಿಸಿ ಮತ್ತು ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  7. ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಗಮನಿಸಿ: ನಿಮ್ಮ ಥಂಬ್‌ನೇಲ್ ಬದಲಾವಣೆಗಳು YouTube ನಲ್ಲಿ ಕಾಣಿಸಿಕೊಳ್ಳಲು ಸಮಯ ತೆಗೆದುಕೊಳ್ಳಬಹುದು.

YouTube Android ಆ್ಯಪ್‌

  1. YouTube ಆ್ಯಪ್ ಅನ್ನು ತೆರೆಯಿರಿ .
  2. ಲೈಬ್ರರಿ  ನಂತರ ನಿಮ್ಮ ವೀಡಿಯೊಗಳು ಎಂಬುದನ್ನು ಟ್ಯಾಪ್ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊ ಪಕ್ಕದಲ್ಲಿರುವ, ಇನ್ನಷ್ಟು ''ನಂತರ ಎಡಿಟ್ ಮಾಡಿ ನಂತರ ಥಂಬ್‌ನೇಲ್ ಎಡಿಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  4. ಸ್ವಯಂ-ಜನರೇಟ್ ಆಗಿರುವ ಥಂಬ್‌ನೇಲ್ ಅನ್ನು ಆಯ್ಕೆಮಾಡಿ ಅಥವಾ ನಿಮ್ಮ ಸಾಧನದಲ್ಲಿನ ಚಿತ್ರವೊಂದರಿಂದ ಕಸ್ಟಮ್ ವೀಡಿಯೊ ಥಂಬ್‌ನೇಲ್ ಅನ್ನು ರಚಿಸಲು ಕಸ್ಟಮ್ ಥಂಬ್‌ನೇಲ್ ಎಂಬುದನ್ನು ಟ್ಯಾಪ್ ಮಾಡಿ.
  5. ನಿಮ್ಮ ಥಂಬ್‌ನೇಲ್ ಆಯ್ಕೆಯನ್ನು ದೃಢೀಕರಿಸಿ ಮತ್ತು ಆಯ್ಕೆಮಾಡಿ ಎಂಬುದನ್ನು ಟ್ಯಾಪ್ ಮಾಡಿ.
  6. ಸೇವ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
ಗಮನಿಸಿ: 16:9 ಕಸ್ಟಮ್ ಥಂಬ್‌ನೇಲ್‌ಗಳನ್ನು ಹೊಂದಿರುವ ವರ್ಟಿಕಲ್ ವೀಡಿಯೊಗಳನ್ನು ಹೋಮ್, ಎಕ್ಸ್‌ಪ್ಲೋರ್ ಮತ್ತು ಸಬ್‌ಸ್ಕ್ರಿಪ್ಶನ್ ಪುಟಗಳಲ್ಲಿ ಸ್ವಯಂ-ಜನರೇಟ್ ಆಗಿರುವ 4:5 ಥಂಬ್‌ನೇಲ್‌ಗೆ ಬದಲಾಯಿಸಲಾಗುತ್ತದೆ. ನಿಮ್ಮ ಕಸ್ಟಮ್ ಥಂಬ್‌ನೇಲ್ ಈಗಲೂ ವಾಚ್ ಫೀಡ್, ವೀಕ್ಷಣೆ ಇತಿಹಾಸ ಮತ್ತು ಮೊಬೈಲ್ ಅಲ್ಲದ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಗೋಚರಿಸುತ್ತದೆ.

ಕಸ್ಟಮ್ ಥಂಬ್‌ನೇಲ್ ಕುರಿತಾದ ಉತ್ತಮ ಅಭ್ಯಾಸಗಳು

 

ಚಿತ್ರದ ಗಾತ್ರ ಮತ್ತು ರೆಸಲ್ಯೂಶನ್

ನಿಮ್ಮ ಕಸ್ಟಮ್ ಥಂಬ್‌ನೇಲ್ ಚಿತ್ರವು ಸಾಧ್ಯವಾದಷ್ಟು ದೊಡ್ಡದಾಗಿರಬೇಕು. ಅದನ್ನು ಎಂಬೆಡೆಡ್ ಪ್ಲೇಯರ್‌ನಲ್ಲಿ ಪ್ರಿವ್ಯೂ ಚಿತ್ರವಾಗಿ ಬಳಸಲಾಗುತ್ತದೆ. ನಿಮ್ಮ ಕಸ್ಟಮ್ ಥಂಬ್‌ನೇಲ್‌ಗಳು ಹೀಗಿರಲಿ ಎಂದು ನಾವು ಶಿಫಾರಸು ಮಾಡುತ್ತೇವೆ:

  • 1280x720 ರೆಸಲ್ಯೂಶನ್ ಹೊಂದಿರಲಿ (ಕನಿಷ್ಠ 640 ಪಿಕ್ಸೆಲ್‌ಗಳ ಅಗಲವಿರಲಿ).
  • ಅವುಗಳನ್ನು JPG, GIF, ಅಥವಾ PNG ನಂತಹ ಚಿತ್ರ ಫಾರ್ಮ್ಯಾಟ್‌ಗಳಲ್ಲಿ ಅಪ್‌ಲೋಡ್ ಮಾಡಿ.
  • ಅವುಗಳ ಗಾತ್ರ ವೀಡಿಯೊಗಳಿಗಾಗಿ 2MB ಒಳಗಡೆ ಅಥವಾ ಪಾಡ್‌ಕಾಸ್ಟ್‌ಗಳಿಗಾಗಿ 10MB ಒಳಗಡೆ ಇರಲಿ.
  • 16:9 ದೃಶ್ಯಾನುಪಾತವನ್ನು ಬಳಸಲು ಪ್ರಯತ್ನಿಸಿ, ಏಕೆಂದರೆ ಇದು YouTube ಪ್ಲೇಯರ್‌ಗಳು ಮತ್ತು ಪ್ರಿವ್ಯೂಗಳಲ್ಲಿ ಅತಿ ಹೆಚ್ಚು ಬಳಕೆಯಾಗುವ ದೃಶ್ಯಾನುಪಾತ.
  • ಪಾಡ್‌ಕಾಸ್ಟ್ ಪ್ಲೇಪಟ್ಟಿಗಳಿಗಾಗಿ, 16:9 ಬದಲಿಗೆ 1:1 ದೃಶ್ಯಾನುಪಾತವಿರುವ (1280 x 1280 ಪಿಕ್ಸೆಲ್‌ಗಳು) ಥಂಬ್‌ನೇಲ್ ಅನ್ನು ಅಪ್‌ಲೋಡ್ ಮಾಡಿ.

ಥಂಭ್‌ನೇಲ್ ಕಾರ್ಯನೀತಿಗಳು

ಎಲ್ಲಾ ಕಸ್ಟಮ್ ಥಂಬ್‌ನೇಲ್ ಚಿತ್ರಗಳು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು. ನಿಮ್ಮ ಥಂಬ್‌ನೇಲ್‌ಗಳು ಈ ಕೆಳಗಿನವುಗಳನ್ನು ಒಳಗೊಂಡಿದ್ದಲ್ಲಿ, ಅವು ತಿರಸ್ಕೃತಗೊಳ್ಳಬಹುದು ಮತ್ತು ನಿಮ್ಮ ಖಾತೆಯ ಮೇಲೆ ಸ್ಟ್ರೈಕ್ ವಿಧಿಸಲಾಗಬಹುದು:
  • ಅಶ್ಲೀಲತೆ ಅಥವಾ ಲೈಂಗಿಕತೆಯನ್ನು ಪ್ರಚೋದಿಸುವ ಕಂಟೆಂಟ್
  • ದ್ವೇಷಪೂರಿತ ಮಾತು
  • ಹಿಂಸೆ
  • ಹಾನಿಕಾರಕ ಅಥವಾ ಅಪಾಯಕಾರಿ ಕಂಟೆಂಟ್
ಪುನರಾವರ್ತಿತ ಉಲ್ಲಂಘನೆಗಳು ನಿಮ್ಮ ಕಸ್ಟಮ್ ಥಂಬ್‌ನೇಲ್ ಸವಲತ್ತುಗಳನ್ನು 30 ದಿನಗಳವರೆಗೆ ತೆಗೆದುಹಾಕಲು ಕಾರಣವಾಗಬಹುದು ಅಥವಾ ನಿಮ್ಮ ಖಾತೆಯನ್ನು ಕೊನೆಗೊಳಿಸಲು ಕೂಡ ಕಾರಣವಾಗಬಹುದು. ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳ ಕುರಿತು ಇನ್ನಷ್ಟು ತಿಳಿಯಿರಿ.
ಸ್ಟ್ರೈಕ್ ವಿಧಿಸಿದರೆ, ಇಮೇಲ್ ಮೂಲಕ ನಿಮಗೆ ಸೂಚನೆ ನೀಡಲಾಗುತ್ತದೆ ಮತ್ತು ಮುಂದಿನ ಬಾರಿ ನೀವು YouTube ಗೆ ಸೈನ್ ಇನ್ ಮಾಡಿದಾಗ ನಿಮ್ಮ ಚಾನಲ್ ಸೆಟ್ಟಿಂಗ್‌ಗಳಲ್ಲಿ ಎಚ್ಚರಿಕೆಯನ್ನು ಕಾಣುವಿರಿ. ನಿಮ್ಮ ಥಂಬ್‌ನೇಲ್‌ಗಳು YouTube ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವುದಿಲ್ಲ ಎಂದು ನೀವು ಭಾವಿಸಿದರೆ, ನೀವು ಸ್ಟ್ರೈಕ್ ವಿರುದ್ಧ ಮೇಲ್ಮನವಿಸಲ್ಲಿಸಬಹುದು. ನಿಮ್ಮ ಮೇಲ್ಮನವಿ ಅನುಮೋದನೆಗೊಂಡರೆ ಮತ್ತು ನೀವು ಆ ವೇಳೆಗಾಗಲೇ ಥಂಬ್‍ನೇಲ್ ಅನ್ನು ಬದಲಾಯಿಸಿರದಿದ್ದರೆ, ನಾವು ಅದನ್ನು ಮರುಸ್ಥಾಪಿಸಬಹುದು.

ಕಸ್ಟಮ್ ಥಂಬ್‌ನೇಲ್ ಮಿತಿಗಳು

ಒಂದು ಚಾನಲ್ ಪ್ರತಿ ದಿನ ಎಷ್ಟು ಕಸ್ಟಮ್ ಥಂಬ್‌ನೇಲ್‌ಗಳನ್ನು ಅಪ್‌ಲೋಡ್ ಮಾಡಬಹುದು ಎಂಬುದಕ್ಕೆ ಮಿತಿಯಿದೆ. ನೀವು ಥಂಬ್‌ನೇಲ್ ಅನ್ನು ಅಪ್‌ಲೋಡ್ ಮಾಡಲು ಪ್ರಯತ್ನಿಸುವಾಗ "ದೈನಂದಿನ ಕಸ್ಟಮ್ ಥಂಬ್‌ನೇಲ್ ಮಿತಿಯನ್ನು ತಲುಪಲಾಗಿದೆ" ಎಂದು ಹೇಳುವ ದೋಷ ಕಾಣಿಸಿದರೆ, ಮತ್ತೆ 24 ಗಂಟೆಗಳ ನಂತರ ಪ್ರಯತ್ನಿಸಿ. 
ಮಿತಿಗಳು, ದೇಶ/ಪ್ರದೇಶ ಅಥವಾ ಚಾನಲ್ ಇತಿಹಾಸದ ಪ್ರಕಾರ ಬದಲಾಗಬಹುದು. ಕೃತಿಸ್ವಾಮ್ಯ ಸ್ಟ್ರೈಕ್‌ಗಳು ಚಾನಲ್ ಇತಿಹಾಸದ ಅರ್ಹತೆಯ ಮೇಲೆ ಪರಿಣಾಮ ಬೀರಬಹುದು. ಸಮುದಾಯ ಮಾರ್ಗಸೂಚಿಗಳ ಸ್ಟ್ರೈಕ್‌ಗಳು ನೀವು ಎಷ್ಟು ಕಸ್ಟಮ್ ಥಂಬ್‌ನೇಲ್‌ಗಳನ್ನು ಅಪ್‌ಲೋಡ್ ಮಾಡಬಹುದು ಎಂಬುದರ ಮೇಲೆ ಪರಿಣಾಮ ಬೀರುತ್ತವೆ.
ಸೂಚನೆ: ದೀರ್ಘವಾದ ವೀಡಿಯೊಗಳಿಗಾಗಿ ನೀವು ಅಪ್‌ಲೋಡ್ ಮಾಡಬಹುದಾದ ರೀತಿಯಲ್ಲಿ, Shorts ಗಾಗಿ ಕಸ್ಟಮ್ ಥಂಬ್‌ನೇಲ್‌ಗಳನ್ನು ಅಪ್‌ಲೋಡ್ ಮಾಡುವುದು ಸಾಧ್ಯವಿಲ್ಲ. ಹುಡುಕಾಟ ಫಲಿತಾಂಶಗಳು, ಹ್ಯಾಶ್‌ಟ್ಯಾಗ್ ಮತ್ತು ಆಡಿಯೊ ಪಿವೊಟ್ ಪುಟಗಳು ಮತ್ತು ನಿಮ್ಮ ಚಾನಲ್ ಪುಟದಲ್ಲಿ ಗೋಚರಿಸುವ ಥಂಬ್‌ನೇಲ್ ಆಗಿ ಬಳಸಲು, ನಿಮ್ಮ Short ನಲ್ಲಿರುವ ಫ್ರೇಮ್ ಅನ್ನು ನೀವು ಆಯ್ಕೆ ಮಾಡಬಹುದು. ಆಯ್ಕೆ ಮಾಡಿದ ನಂತರ, ವೀಡಿಯೊವನ್ನು ಅಪ್‌ಲೋಡ್ ಮಾಡಿದ ನಂತರ ನೀವು ಥಂಬ್‌ನೇಲ್ ಅನ್ನು ಬದಲಾಯಿಸಲು ಸಾಧ್ಯವಿಲ್ಲ.

ನನ್ನ ಕಸ್ಟಮ್ ಥಂಬ್‌ನೇಲ್‌ಗಳನ್ನು ಏಕೆ ಆಫ್ ಮಾಡಲಾಗಿದೆ?

YouTube ಕೆಲವು ಹುಡುಕಾಟ ಫಲಿತಾಂಶಗಳನ್ನು ವೀಕ್ಷಕರಿಗೆ ಸಮಂಜಸವಲ್ಲ ಎಂದು ಪರಿಗಣಿಸಿದಾಗ, ಅವುಗಳ ಕಸ್ಟಮ್ ಥಂಬ್‌ನೇಲ್‌ಗಳನ್ನು ಆಫ್ ಮಾಡಬಹುದು.
ಎಲ್ಲಾ ಕಸ್ಟಮ್ ಥಂಬ್‌ನೇಲ್ ಚಿತ್ರಗಳು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10734572051837101851
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false