ಕಲಾವಿದರಿಗಾಗಿ ಪ್ರೊಫೈಲ್

ನಿಮ್ಮ ಸಂಗೀತ ಮತ್ತು ವೀಡಿಯೊಗಳಂತೆಯೇ, ನಿಮ್ಮ ಪ್ರೊಫೈಲ್ ನಿಮ್ಮ ಸೃಜನಶೀಲ ಅಭಿವ್ಯಕ್ತಿಯ ವಿಸ್ತರಣೆಯಾಗಿದೆ. YouTube ನಾದ್ಯಂತ ನಿಮ್ಮ ಕೆಲಸದ ಜೊತೆಗೆ ಸಂವಹನ ನಡೆಸುತ್ತಿರುವಾಗ ನೀವು ಯಾರೆಂದು ಅಭಿಮಾನಿಗಳು ಕಂಡುಕೊಳ್ಳಬೇಕೆಂದು ನಾವು ಬಯಸುತ್ತೇವೆ.

ನಿಮ್ಮ ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡಿ

YouTube ನಲ್ಲಿ, ನಿಮ್ಮ ಚಿತ್ರಗಳನ್ನು ಇವುಗಳಲ್ಲಿ ಬಳಸಬಹುದು:

  • YouTube ಹುಡುಕಾಟ
  • YouTube ಚಾರ್ಟ್‌ಗಳು
  • YouTube Music
  • ಪ್ಲೇಪಟ್ಟಿ‌ಗಳು
  • ಬ್ಯಾನರ್‌ಗಳು

ನೀವು ಯಾವಾಗ ಬೇಕಾದರೂ ನಿಮ್ಮ ಪ್ರೊಫೈಲ್ ಅನ್ನು ಅಪ್‌ಡೇಟ್ ಮಾಡಬಹುದು.

ಒಂದೇ ಚಿತ್ರವನ್ನು ಎರಡು ಬಾರಿ ಅಪ್‌ಲೋಡ್ ಮಾಡಲು ನಿಮ್ಮನ್ನು ಕೇಳಲಾಗುತ್ತದೆ. ಚಿತ್ರಗಳಲ್ಲಿ ಒಂದನ್ನು YouTube ನಲ್ಲಿ ಬಳಸಿದರೆ, ಇನ್ನೊಂದನ್ನು YouTube Music ಆ್ಯಪ್‌ನಲ್ಲಿ ಬಳಸಲಾಗುತ್ತದೆ.

  1. studio.youtube.com ಗೆ ಹೋಗಿ.
  2. ಎಡಭಾಗದಲ್ಲಿ, ಪ್ರೊಫೈಲ್ ಕ್ಲಿಕ್ ಮಾಡಿ.
  3. ನಮ್ಮ ಬಯೋ ಮಾರ್ಗಸೂಚಿಗಳನ್ನು ಬಳಸಿಕೊಂಡು ನಿಮ್ಮ ಹೆಸರು ಮತ್ತು ಬಯೋವನ್ನು ನಮೂದಿಸಿ.
  4. ನಮ್ಮ ಚಿತ್ರದ ಮಾರ್ಗಸೂಚಿಗಳನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ಫೋಟೋವನ್ನು ಆಯ್ಕೆಮಾಡಿ.
  5. ಪೆನ್ಸಿಲ್ ಐಕಾನ್ ಬಳಸಿಕೊಂಡು, ಚೌಕಾಕಾರದ ಪ್ರೊಫೈಲ್ ಫೋಟೋ ಮತ್ತು ಆಯತಾಕಾರದ ಪ್ರೊಫೈಲ್ ಫೋಟೋ ಸೇರಿಸಿ.

ಪ್ರೊಫೈಲ್ ಬಯೋ ಮಾರ್ಗಸೂಚಿಗಳು

ನಿಮ್ಮ ಬಯೋವನ್ನು ಇವುಗಳಲ್ಲಿ ಬಳಸಬಹುದು:

  • YouTube ಹುಡುಕಾಟ
  • ನಿಮ್ಮ ಚಾನಲ್
  • YouTube Music

ನಿಮ್ಮ ಬಯೋವನ್ನು ಅಪ್‌ಡೇಟ್ ಮಾಡಲು, ಬಯೋಗ್ರಫಿ ಬಾಕ್ಸ್‌ನಲ್ಲಿ ಎಲ್ಲಿಯಾದರೂ ಆಯ್ಕೆಮಾಡಿ, ನಿಮ್ಮ ಬಯೋವನ್ನು ನಮೂದಿಸಿ ಮತ್ತು ಬಯೋವನ್ನು ಸೇವ್ ಮಾಡಿ ಎಂಬುದನ್ನು ಆಯ್ಕೆಮಾಡಿ. ಈ ಮಾರ್ಗಸೂಚಿಗಳನ್ನು ಅನುಸರಿಸಲು ಮರೆಯದಿರಿ:

  • ಇದು 1500 ಅಕ್ಷರಗಳೊಳಗೆ ಇರಲಿ. ನಿಮ್ಮ ಬಯೋ 1,500 ಅಕ್ಷರಗಳನ್ನು ಹೊಂದಬಹುದು ಮತ್ತು ~150 ಅಕ್ಷರಗಳ ನಂತರ, YouTube Music ಅದನ್ನು ಕ್ಲಿಪ್ ಮಾಡುತ್ತದೆ ಮತ್ತು ಉಳಿದ ಬಯೋವನ್ನು “ಇನ್ನಷ್ಟು” ಲಿಂಕ್‌ನ ಹಿಂದೆ ಇರಿಸುತ್ತದೆ.
  • ಕಂಟೆಂಟ್ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.
  • ನಿಮ್ಮ ಬಯೋವನ್ನು ಅಪ್ ಟು ಡೇಟ್ ಆಗಿರಿಸಿ. ನಿಮ್ಮ ಬಯೋದಲ್ಲಿ ಮುಂಬರುವ ಆಲ್ಬಮ್ ಅಥವಾ ಹೊಸ ಬಿಡುಗಡೆಯನ್ನು ಪ್ರಚಾರ ಮಾಡುವುದು ಹಳೆಯದಾಗಬಹುದು.
ಚಿತ್ರದ ಮಾರ್ಗಸೂಚಿಗಳು
ಕಲಾವಿದರ ಚಿತ್ರಗಳನ್ನು YouTube, Google ಮತ್ತು ಕೆಲವು ಥರ್ಡ್ ಪಾರ್ಟಿ ಸೈಟ್‌ಗಳಾದ್ಯಂತದ ವಿವಿಧ ಸ್ಥಳಗಳಲ್ಲಿ ನೋಡಬಹುದು. ಈ ಪ್ರತಿಯೊಂದು ಸ್ಥಳಗಳಲ್ಲಿ ನಿಮ್ಮ ಚಿತ್ರವು ಉತ್ತಮವಾಗಿ ಕಾಣಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಲು, ನೀವು ಅನುಸರಿಸಬೇಕಾದ ಕೆಲವು ಮಾರ್ಗಸೂಚಿಗಳು ಇಲ್ಲಿವೆ:
  • ಆಕಾರ ಮತ್ತು ಓರಿಯಂಟೇಶನ್: ಚಿತ್ರಗಳು ಆಯತಾಕಾರ ಮತ್ತು ಲ್ಯಾಂಡ್‌ಸ್ಕೇಪ್ ಮೋಡ್‌ನಲ್ಲಿರಬೇಕು.
  • ಗಾತ್ರ: ಚಿತ್ರಗಳು ಕನಿಷ್ಠ 5120 x 2880 ಪಿಕ್ಸೆಲ್‌ಗಳನ್ನು ಹೊಂದಿರಬೇಕು.
  • ರೆಸಲ್ಯೂಷನ್: ಚಿತ್ರಗಳು ಕನಿಷ್ಠ 150 dpi ಹೊಂದಿರಬೇಕು.
  • ಫಾರ್ಮ್ಯಾಟ್: ನೀವು JPG ಅಥವಾ PNG ಫಾರ್ಮ್ಯಾಟ್ ಹೊಂದಿರುವ ಚಿತ್ರಗಳನ್ನು ಮಾತ್ರ ಅಪ್‌ಲೋಡ್ ಮಾಡಬಹುದು.
  • ವೈಟ್ ಸ್ಪೇಸ್: ನಿಮ್ಮ ಚಿತ್ರವನ್ನು ಚೌಕಾಕಾರ ಮತ್ತು ವೃತ್ತಾಕಾರಕ್ಕೆ ಕ್ರಾಪ್ ಮಾಡಲಾಗುತ್ತದೆ, ಆದ್ದರಿಂದ ನಿಮ್ಮ ಚಿತ್ರದ ಅಂಚುಗಳ ಸುತ್ತಲೂ ಸಾಕಷ್ಟು ಸ್ಥಳಾವಕಾಶವಿದೆ ಎಂದು ಖಚಿತಪಡಿಸಿಕೊಳ್ಳಿ.
  • ಚಿತ್ರದ ಕಂಟೆಂಟ್: ಪ್ರೊಫೈಲ್ ಚಿತ್ರದಲ್ಲಿ ನಿಮ್ಮ ಮುಖ ಅಥವಾ ಮುಖಗಳು ಗೋಚರಿಸಬೇಕು - ಪಠ್ಯ ಅಥವಾ ಆಲ್ಬಮ್ ಆರ್ಟ್ ಅನ್ನು ಬಳಸಬೇಡಿ.
  • ಸಮುದಾಯ ಮಾರ್ಗಸೂಚಿಗಳು: ನಿಮ್ಮ ಚಿತ್ರವು YouTube ನ ಸಮುದಾಯ ಮಾರ್ಗಸೂಚಿಗಳನ್ನು ಪೂರೈಸುತ್ತಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಕೆಳಗಿನ ಚಿತ್ರದ ಉದಾಹರಣೆಗಳ ವಿಭಾಗದಲ್ಲಿ, ಪ್ರೊಫೈಲ್ ಫೋಟೋಗಳನ್ನು ಹೇಗೆ ಕ್ರಾಪ್ ಮಾಡಬಹುದು ಎಂಬುದರ ಉದಾಹರಣೆಗಳನ್ನು ವೀಕ್ಷಿಸಿ.

ಚಿತ್ರದ ಉದಾಹರಣೆಗಳು

ಪ್ರೊಫೈಲ್‌ನಲ್ಲಿ ಚಿತ್ರಗಳನ್ನು ಅಪ್‌ಲೋಡ್ ಮಾಡುವಾಗ ಅನುಸರಿಸಬೇಕಾದ ಉತ್ತಮ ಅಭ್ಯಾಸಗಳ ಉದಾಹರಣೆಗಳು ಇಲ್ಲಿವೆ.

ಏಕವ್ಯಕ್ತಿ ಕಲಾವಿದರು ತಮ್ಮ ತಲೆ ಮತ್ತು ಭುಜಗಳನ್ನು ತೋರಿಸಬೇಕು, ಇಡೀ ದೇಹವನ್ನಲ್ಲ:

ಗುಂಪುಗಳಿಗೆ ಹೆಚ್ಚುವರಿ ಸ್ಥಳಾವಕಾಶ ಬೇಕಾಗುತ್ತದೆ, ಇದರಿಂದ ಜನರು ಸ್ವಯಂ-ಕ್ರಾಪ್ ಆಗುವುದಿಲ್ಲ:

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
12585120544882664366
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false