YouTube VR ನೊಂಧಿಗೆ ಪ್ರಾರಂಭಿಸಿ

YouTube VR ಆ್ಯಪ್, ನಿರ್ದಿಷ್ಟ ಹೆಡ್‍ಸೆಟ್‍ಗಳು ಮತ್ತು ಸಾಧನಗಳ ಮೂಲಕ 360 ವೀಡಿಯೊಗಳು ಮತ್ತು ವರ್ಚುವಲ್ ರಿಯಾಲಿಟಿ ಕಂಟೆಂಟ್ ಅನ್ನು ಸುಲಭವಾಗಿ ಹುಡುಕಲು ಮತ್ತು ವೀಕ್ಷಿಸಲು ನಿಮಗೆ ಅವಕಾಶ ನೀಡುತ್ತದೆ.

ಸೈನ್ ಇನ್ ಮಾಡಿ

YouTube VR, ಸೈನ್ ಇನ್ ಮಾಡಿದ ಅನುಭವವನ್ನು ಬೆಂಬಲಿಸುತ್ತದೆ, ಮತ್ತು ನಿಮ್ಮ ಸಬ್‌ಸ್ಕ್ರಿಪ್ಶನ್‌ಗಳನ್ನು ವೀಕ್ಷಿಸುವಂತಹ ಹಲವಾರು ಪ್ರಯೋಜನಗಳಿಗೆ ನಿಮಗೆ ಆ್ಯಕ್ಸೆಸ್ ನೀಡುತ್ತದೆ.

ಸೈನ್ ಇನ್ ಮಾಡಿ

  1. ಹೋಮ್ ಸ್ಕ್ರೀನ್‌ನಿಂದ ಖಾತೆಯನ್ನು ಆಯ್ಕೆ ಮಾಡಿ ಮತ್ತು ಸೆಟ್ಟಿಂಗ್‌ಗಳ ಐಕಾನ್ ಅನ್ನು ಆಯ್ಕೆ ಮಾಡಿ.
  2. ಸೈನ್ ಇನ್ ಕ್ಲಿಕ್ ಮಾಡಿ.
  3. ನೀವು ಸಕ್ರಿಯಗೊಳಿಸುವಿಕೆ ಕೋಡ್ ಅನ್ನು ನೋಡುವಿರಿ.
  4. ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಲ್ಲಿ, ಈ ವಿಳಾಸಕ್ಕೆ ಹೋಗಿ: https://youtube.com/activate.
  5. ಸಕ್ರಿಯಗೊಳಿಸುವಿಕೆ ಕೋಡ್ ಅನ್ನು ನಮೂದಿಸಿ.
  6. ಕೇಳಿದಾಗ, ಸೈನ್ ಇನ್ ಮಾಡಿ. ನೀವು ಹಲವಾರು Google ಖಾತೆಗಳನ್ನು ಹೊಂದಿದ್ದರೆ, YouTube ಜೊತೆ ಬಳಸುವ ಖಾತೆಯನ್ನು ಆಯ್ಕೆಮಾಡಿ. ನೀವು ಈಗಾಗಲೇ ಸೈನ್ ಇನ್ ಆಗಿದ್ದರೆ, ಮುಂದಿನ ಹಂತಕ್ಕೆ ಸ್ಕಿಪ್ ಮಾಡಿ.
  7. ಸೈನ್ ಇನ್ ಮಾಡಿದ ನಂತರ, ನಿಮ್ಮ ಸಾಧನದಲ್ಲಿ ನೀವು ಸ್ವಯಂಚಾಲಿತವಾಗಿ ಸೈನ್ ಇನ್ ಆಗುತ್ತೀರಿ.
ಗಮನಿಸಿ: ಹಂತ 3 ರಲ್ಲಿ, ಕೆಲವು ಪ್ಲ್ಯಾಟ್‌ಫಾರ್ಮ್‌ಗಳು ನಿಮಗೆ ಕೋಡ್ ಅನ್ನು ಕ್ಲಿಪ್‌ಬೋರ್ಡ್‌ಗೆ ನಕಲಿಸಲು ಅವಕಾಶ ನೀಡುತ್ತವೆ, ನಂತರ ಕೋಡ್ ಅನ್ನು ನಮೂದಿಸಲು ಪ್ಲ್ಯಾಟ್‌ಫಾರ್ಮ್ ಬ್ರೌಸರ್ ಅನ್ನು ತೆರೆಯುತ್ತವೆ. ಕೋಡ್ ಅನ್ನು ಫೀಲ್ಡ್‌ನಲ್ಲಿ ಪೇಸ್ಟ್ ಮಾಡಲು ಟ್ರಿಗರ್ ಅನ್ನು ದೀರ್ಘವಾಗಿ ಹೋಲ್ಡ್ ಮಾಡಿ.
ಗಮನಿಸಿ: ಬ್ರ್ಯಾಂಡ್ ಖಾತೆಗಳಿಗೆ ಪ್ರಸ್ತುತ ಬೆಂಬಲವಿಲ್ಲ.

ಸೈನ್ ಔಟ್ ಮಾಡಿ

  1. ಹೋಮ್ ಸ್ಕ್ರೀನ್‌ನಿಂದ ಖಾತೆಯನ್ನು ಆಯ್ಕೆ ಮಾಡಿ ಮತ್ತು ಸೆಟ್ಟಿಂಗ್‌ಗಳ ಐಕಾನ್ ಅನ್ನು ಆಯ್ಕೆ ಮಾಡಿ.
  2. ನೀವು ಸೈನ್ ಔಟ್ ಮಾಡಲು ಬಯಸುವ ಖಾತೆಯನ್ನು ಆಯ್ಕೆ ಮಾಡಿ.
  3. ಸೈನ್ ಔಟ್ ಕ್ಲಿಕ್ ಮಾಡಿ.

ವೀಡಿಯೊಗಳನ್ನು ಬ್ರೌಸ್ ಮಾಡಿ

ನೀವು ಹೋಮ್‌ಸ್ಕ್ರೀನ್‌ನಲ್ಲಿ, ಅಥವಾ ಟಚ್‌ಪ್ಯಾಡ್‌ನಲ್ಲಿ ಮೇಲೆ ಮತ್ತು ಕೆಳಗೆ ಸ್ಕ್ರಾಲ್ ಮಾಡುವ ಮೂಲಕ ಪ್ಲೇಪಟ್ಟಿಗಳಲ್ಲಿ ವೀಡಿಯೊಗಳನ್ನು ಬ್ರೌಸ್ ಮಾಡಬಹುದು. YouTube ಲೋಗೋವನ್ನು ಆಯ್ಕೆ ಮಾಡುವ ಮೂಲಕ ನೀವು ಯಾವಾಗ ಬೇಕಾದರೂ ಹೋಮ್ ಸ್ಕ್ರೀನ್‌ಗೆ ಹೋಗಬಹುದು.

ವೀಡಿಯೊಗಳನ್ನು ಹುಡುಕಿ

ನೀವು ಎರಡು ರೀತಿಯಲ್ಲಿ YouTube VR ಮೂಲಕ ವೀಡಿಯೊಗಳನ್ನು ಹುಡುಕಬಹುದು: ಧ್ವನಿ ಹುಡುಕಾಟ ಅಥವಾ ಕೀಬೋರ್ಡ್ ಹುಡುಕಾಟ. ಪ್ಲೇಯರ್ ಕಂಟ್ರೋಲ್ಸ್ ಮೆನು ಅಥವಾ ಹೋಮ್ ಸ್ಕ್ರೀನ್‍ನಲ್ಲಿ ಹುಡುಕಾಟ ಆಯ್ಕೆಯನ್ನು ಕಾಣಬಹುದು.

ಧ್ವನಿ ಹುಡುಕಾಟ

  1. Search ಹುಡುಕಾಟ ಕ್ಲಿಕ್ ಮಾಡಿ.
  2. ಮೈಕ್ರೊಫೋನ್‌ ಐಕಾನ್ ಅನ್ನು ಆಯ್ಕೆ ಮಾಡಿ.
  3. ಹುಡುಕಾಟ ಪದವನ್ನು ಗಟ್ಟಿಯಾಗಿ ಹೇಳಿ.


ಕೀಬೋರ್ಡ್ ಹುಡುಕಾಟ

  1. Search ಹುಡುಕಾಟ ಕ್ಲಿಕ್ ಮಾಡಿ.
  2. ನೀವು ಏನನ್ನು ಹುಡುಕುತ್ತಿದ್ದೀರಿ ಎಂಬುದನ್ನು ಕೀಬೋರ್ಡ್ ಬಳಸಿ ನಮೂದಿಸಿ.

ನೀವು ಈ ಕೆಳಗಿನ ಒಂದು ಅಥವಾ ಹೆಚ್ಚಿನ ಆಯ್ಕೆಗಳನ್ನು ಆರಿಸುವ ಮೂಲಕ ಹುಡುಕಾಟ ಫಲಿತಾಂಶಗಳನ್ನು ಫಿಲ್ಟರ್ ಮಾಡಬಹುದು: 360°, VR180, 4K, 3D ಮತ್ತು CC.

ಪ್ಲೇಯರ್ ನಿಯಂತ್ರಣಗಳು

ವೀಡಿಯೊವನ್ನು ಪ್ಲೇ ಮಾಡುತ್ತಿರುವಾಗ, ಸ್ಕ್ರೀನ್‌ನಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ.

ಪ್ಲೇಯರ್ ನಿಯಂತ್ರಣಗಳು, ಈ ಕೆಳಗಿನವುಗಳನ್ನು ಒಳಗೊಂಡಂತೆ ಹಲವಾರು ಕ್ರಿಯೆಗಳನ್ನು ಮಾಡಲು ನಿಮಗೆ ಅವಕಾಶ ನೀಡುತ್ತವೆ:

  • ವೀಡಿಯೊವನ್ನು ಪ್ಲೇ ಮಾಡುವುದು/ವಿರಾಮಗೊಳಿಸುವುದು.
  • ವಾಲ್ಯೂಮ್ ಬದಲಾಯಿಸುವುದು.
  • ಹಿಂದಿನ ವೀಡಿಯೊಗೆ ಹೋಗುವುದು.
  • ಮುಂದಿನ ವೀಡಿಯೊಗೆ ಹೋಗುವುದು.
  • ವೀಕ್ಷಣೆಯ ಸೆಟ್ಟಿಂಗ್‌ಗಳನ್ನು ಬದಲಾಯಿಸುವುದು.

ಕ್ಯಾಪ್ಶನ್‌ಗಳನ್ನು ಆನ್ ಅಥವಾ ಆಫ್ ಮಾಡಿ

  1. ಸೆಟ್ಟಿಂಗ್‍ಗಳು ಕ್ಲಿಕ್ ಮಾಡಿ ಸೆಟ್ಟಿಂಗ್‌ಗಳು .
  2. ಶೀರ್ಷಿಕೆಗಳು ಕ್ಲಿಕ್ ಮಾಡಿ.
  3. ನಿಮಗೆ ಬೇಕಿರುವ ಭಾಷೆಯನ್ನು ಆಯ್ಕೆಮಾಡಿ.

ವೀಡಿಯೊ ಗುಣಮಟ್ಟವನ್ನು ಆಯ್ಕೆಮಾಡಿ

  1. ಸೆಟ್ಟಿಂಗ್‍ಗಳು ಕ್ಲಿಕ್ ಮಾಡಿ ಸೆಟ್ಟಿಂಗ್‌ಗಳು .
  2. ಗುಣಮಟ್ಟ ಕ್ಲಿಕ್ ಮಾಡಿ.
  3. ನಿಮಗೆ ಬೇಕಾದ ವೀಡಿಯೊ ಗುಣಮಟ್ಟವನ್ನು ಆಯ್ಕೆಮಾಡಿ.

ಬಾಗಿದ ಪರದೆ ಆನ್ ಅಥವಾ ಆಫ್ ಮಾಡಿ (360 ಅಲ್ಲದ ವೀಡಿಯೊಗಳು ಮತ್ತು ಆ್ಯಡ್‍ಗಳಿಗೆ)

  1. ಸೆಟ್ಟಿಂಗ್‍ಗಳು ಕ್ಲಿಕ್ ಮಾಡಿ ಸೆಟ್ಟಿಂಗ್‌ಗಳು .
  2. ಬಾಗಿದ ಪರದೆ ಆಯ್ಕೆ ಮಾಡಿ ಮತ್ತು ಆನ್ ಅಥವಾ ಆಫ್ ಮಾಡಿ.

ಪ್ಲೇಯರ್ ನಿಯಂತ್ರಣಗಳನ್ನು ವಜಾಗೊಳಿಸಲು, ವೀಡಿಯೊದಲ್ಲಿ ಎಲ್ಲಿಯಾದರೂ ಕ್ಲಿಕ್ ಮಾಡಿ ಅಥವಾ ಅವುಗಳನ್ನು ಸ್ವಯಂಚಾಲಿತವಾಗಿ ವಜಾಗೊಳಿಸುವವರೆಗೆ ನಿರೀಕ್ಷಿಸಿ.

ನಿಮ್ಮ ವೀಕ್ಷಣೆಯನ್ನು ಮರು-ಕೇಂದ್ರೀಕರಿಸಿ

ಒಂದು ದಿಕ್ಕಿನಲ್ಲಿ ಕರ್ಸರ್ ಅಥವಾ ವೀಕ್ಷಣೆ ಡ್ರಿಫ್ಟ್‌ಗಳು ಆಫ್ ಆಗಿರುವುದನ್ನು ನೀವು ನೋಡಬಹುದು. ಕಂಟ್ರೋಲರ್ ಬಳಸಿಕೊಂಡು ಕರ್ಸರ್ ಮತ್ತು ವೀಕ್ಷಣೆಯನ್ನು ಕೂಡಲೇ ಮರು-ಕೇಂದ್ರಿಕರಿಸಬಹುದು.
  1. ಕಂಟ್ರೋಲರ್ ಅನ್ನು ಮುಂದಕ್ಕೆ ಗುರಿಮಾಡಿ.
  2. ನಿಮ್ಮ ಕಂಟ್ರೋಲರ್‌ನಲ್ಲಿರುವ ಹೋಮ್ ಬಟನ್ ಅನ್ನು ಹಿಡಿದಿಟ್ಟುಕೊಳ್ಳಿ.

ಅನುಚಿತವಾದ ವೀಡಿಯೊಗಳು, ಚಾನಲ್‌ಗಳು ಮತ್ತು ಇತರ ಕಂಟೆಂಟ್‌ನ ಕುರಿತು ವರದಿ ಮಾಡಿ

ನೀವು VR ಸಾಧನವನ್ನು ಬಳಸುತ್ತಿದ್ದರೆ, YouTube VR ಆ್ಯಪ್‌ನಿಂದ ನೇರವಾಗಿ ಅನುಚಿತವಾದ ಕಂಟೆಂಟ್ ಕುರಿತು ವರದಿ ಮಾಡಲು ಕೆಳಗಿನ ಸೂಚನೆಗಳನ್ನು ನೀವು ಅನುಸರಿಸಬಹುದು.

ವೀಡಿಯೊ ಕುರಿತು ವರದಿ ಮಾಡಿ

ವರದಿ ಮಾಡಿದ ವೀಡಿಯೊಗಳನ್ನು ದಿನದ 24 ಗಂಟೆಗಳು, ವಾರದ 7 ದಿನಗಳೂ YouTube ಪರಿಶೀಲಿಸುತ್ತದೆ. ವೀಡಿಯೊವನ್ನು YouTube ಗೆ ಅಪ್‌ಲೋಡ್ ಮಾಡಿದ ನಂತರ ಈ ವೀಡಿಯೊದ ಕುರಿತು ಯಾವಾಗ ಬೇಕಾದರೂ ವರದಿ ಮಾಡಬಹುದು. ಯಾವುದೇ ಉಲ್ಲಂಘನೆಗಳಾಗಿರುವುದು ನಮ್ಮ ಪರಿಶೀಲನಾ ತಂಡದ ಗಮನಕ್ಕೆ ಬಾರದಿದ್ದರೆ, ವೀಡಿಯೊ ಅಪ್‌ಲೋಡ್ ಆಗುತ್ತಲೇ ಇರುತ್ತದೆ ಮತ್ತು ಮುಂದಿನ ವರದಿಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ವೀಡಿಯೊ ಕುರಿತು ವರದಿ ಮಾಡಲು:
  1. YouTube ಆ್ಯಪ್ ಅನ್ನು ತೆರೆಯಿರಿ .
  2. ನೀವು ವರದಿಮಾಡಲು ಬಯಸುವ ವೀಡಿಯೊಗೆ ಹೋಗಿ.
  3. ಪ್ಲೇಬಾರ್ ಅನ್ನು ಎಳೆಯಲು ಟ್ರಿಗರ್ ಅನ್ನು ಒತ್ತಿರಿ (ಅಥವಾ ಕೈಗಳನ್ನು ಬಳಸುತ್ತಿದ್ದರೆ ಪಿಂಚ್ ಮಾಡಿ).
  4. ಪ್ಲೇಬಾರ್‌ನ ಬಲಭಾಗದಲ್ಲಿ, ಸೆಟ್ಟಿಂಗ್‌ಗಳು  ನಂತರ ವರದಿ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ.
  5. ವೀಡಿಯೊದಲ್ಲಿನ ಉಲ್ಲಂಘನೆಗೆ ಸೂಕ್ತವಾದ ಕಾರಣವನ್ನು ಆಯ್ಕೆಮಾಡಿ.
  6. ಸರಿ ಎಂಬುದನ್ನು ಆಯ್ಕೆಮಾಡುವ ಮೂಲಕ ಸಲ್ಲಿಕೆಯನ್ನು ದೃಢೀಕರಿಸಿ.

ಸೂಚನೆ: ನೀವು ವರದಿ ಮಾಡುವ ವೀಡಿಯೊದ ಸ್ಥಿತಿಯನ್ನು ಪರಿಶೀಲಿಸಲು, ಕಂಪ್ಯೂಟರ್‌ನಲ್ಲಿ ನಿಮ್ಮ ವರದಿ ಇತಿಹಾಸ ಎಂಬಲ್ಲಿಗೆ ಭೇಟಿ ನೀಡಿ. ನಿಮ್ಮ ವರದಿ ಇತಿಹಾಸದ ಕುರಿತು ಇನ್ನಷ್ಟು ತಿಳಿಯಿರಿ.

Short ಕುರಿತು ವರದಿ ಮಾಡಿ

ವರದಿ ಮಾಡಿದ ವೀಡಿಯೊಗಳನ್ನು ದಿನದ 24 ಗಂಟೆಗಳು, ವಾರದ 7 ದಿನಗಳೂ YouTube ಪರಿಶೀಲಿಸುತ್ತದೆ. ವೀಡಿಯೊವನ್ನು YouTube ಗೆ ಅಪ್‌ಲೋಡ್ ಮಾಡಿದ ನಂತರ ಈ ವೀಡಿಯೊದ ಕುರಿತು ಯಾವಾಗ ಬೇಕಾದರೂ ವರದಿ ಮಾಡಬಹುದು. ಯಾವುದೇ ಉಲ್ಲಂಘನೆಗಳಾಗಿರುವುದು ನಮ್ಮ ಪರಿಶೀಲನಾ ತಂಡದ ಗಮನಕ್ಕೆ ಬಾರದಿದ್ದರೆ, ವೀಡಿಯೊ ಅಪ್‌ಲೋಡ್ ಆಗುತ್ತಲೇ ಇರುತ್ತದೆ ಮತ್ತು ಮುಂದಿನ ವರದಿಗಳ ಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
ನೀವು Shorts ಪ್ಲೇಯರ್‌ನಿಂದ YouTube Shorts ಕುರಿತು ವರದಿ ಮಾಡಬಹುದು.
  1. YouTube ಗೆ ಸೈನ್ ಇನ್ ಮಾಡಿ.
  2. ನೀವು ವರದಿ ಮಾಡಲು ಬಯಸುವ Short ಗೆ ಹೋಗಿ.
  3. ಪ್ಲೇಬಾರ್ ಅನ್ನು ಎಳೆಯಲು ಟ್ರಿಗರ್ ಅನ್ನು ಒತ್ತಿರಿ (ಅಥವಾ ಕೈಗಳನ್ನು ಬಳಸುತ್ತಿದ್ದರೆ ಪಿಂಚ್ ಮಾಡಿ).
  4. ಪ್ಲೇಬಾರ್‌ನ ಬಲಭಾಗದಲ್ಲಿ, ಸೆಟ್ಟಿಂಗ್‌ಗಳು  ನಂತರ ವರದಿ ಮಾಡಿ  ಎಂಬುದನ್ನು ಟ್ಯಾಪ್ ಮಾಡಿ.
  5. ವೀಡಿಯೊದಲ್ಲಿನ ಉಲ್ಲಂಘನೆಗೆ ಸೂಕ್ತವಾದ ಕಾರಣವನ್ನು ಆಯ್ಕೆಮಾಡಿ.
  6. ಸರಿ ಎಂಬುದನ್ನು ಆಯ್ಕೆಮಾಡುವ ಮೂಲಕ ಸಲ್ಲಿಕೆಯನ್ನು ದೃಢೀಕರಿಸಿ.

ಸೂಚನೆ: ನೀವು ವರದಿ ಮಾಡುವ ವೀಡಿಯೊದ ಸ್ಥಿತಿಯನ್ನು ಪರಿಶೀಲಿಸಲು, ಕಂಪ್ಯೂಟರ್‌ನಲ್ಲಿ ನಿಮ್ಮ ರಿಪೋರ್ಟಿಂಗ್ ಇತಿಹಾಸ ಎಂಬಲ್ಲಿಗೆ ಹೋಗಿ. ನಿಮ್ಮ ರಿಪೋರ್ಟಿಂಗ್ ಇತಿಹಾಸದ ಕುರಿತು ಇನ್ನಷ್ಟು ತಿಳಿಯಿರಿ.

ಚಾನಲ್ ಕುರಿತು ವರದಿ ಮಾಡಿ

ಬಳಕೆದಾರರು, ಅನುಚಿತ ಹಿನ್ನೆಲೆ ಚಿತ್ರಗಳು ಅಥವಾ ಅನುಚಿತ ಪ್ರೊಫೈಲ್ ಅವತಾರ್‌ಗಳನ್ನು ನೀವು ವರದಿ ಮಾಡಬಹುದು. ಚಾನಲ್ ಕುರಿತು ವರದಿ ಮಾಡಲು:
  1. YouTube ಆ್ಯಪ್ ಅನ್ನು ತೆರೆಯಿರಿ .
  2. ನೀವು ವರದಿ ಮಾಡಲು ಬಯಸುವ ಚಾನಲ್ ಪುಟಕ್ಕೆ ಹೋಗಿ.
  3. ಮೇಲಿನ ಬಲಬದಿಯಲ್ಲಿ, ಇನ್ನಷ್ಟು '' ನಂತರ ಬಳಕೆದಾರರ ಕುರಿತು ವರದಿ ಮಾಡಿ  ಎಂಬುದನ್ನು ಆಯ್ಕೆಮಾಡಿ.
  4. ಚಾನಲ್‌ನ ಉಲ್ಲಂಘನೆಗೆ ಸೂಕ್ತವಾದ ಕಾರಣವನ್ನು ಆಯ್ಕೆಮಾಡಿ.
  5. ವರದಿ ಮಾಡಿ ಎಂಬುದನ್ನು ಆಯ್ಕೆಮಾಡಿ.
    • ಐಚ್ಛಿಕ: ನಂತರ ತೆರೆಯುವ ವಿಂಡೋದಲ್ಲಿ ಇನ್ನಷ್ಟು ವಿವರಗಳನ್ನು ನಮೂದಿಸುವಂತೆ ನಿಮ್ಮನ್ನು ಕೇಳಬಹುದು. ನೀವು ಹಂಚಿಕೊಳ್ಳಲು ಬಯಸುವ ಇತರ ಯಾವುದೇ ವಿವರಗಳನ್ನು ನಮೂದಿಸಿ.

ಸೂಚನೆ: ನೀವು ಚಾನಲ್ ಕುರಿತು ವರದಿ ಮಾಡಿದಾಗ, ಚಾನಲ್‌ನಲ್ಲಿರುವ ವೀಡಿಯೊಗಳನ್ನು ನಾವು ಪರಿಶೀಲಿಸುವುದಿಲ್ಲ. ಚಾನಲ್ ಕುರಿತು ಇನ್ನಷ್ಟು ಅರ್ಥಮಾಡಿಕೊಳ್ಳಲು ನಿಮ್ಮ ವರದಿಯಲ್ಲಿ ನೀವು ಲಗತ್ತಿಸಬಹುದಾದ ವೀಡಿಯೊಗಳನ್ನು ನಾವು ಬಳಸುತ್ತೇವೆ, ಆದರೆ ವೀಡಿಯೊಗಳಲ್ಲಿ ಉಲ್ಲಘನೆಯಾಗಿದೆಯೇ ಎಂದು ನಾವು ಪರಿಶೀಲಿಸುವುದಿಲ್ಲ. ನಾವು ಪರಿಶೀಲಿಸುವ ಚಾನಲ್ ಫೀಚರ್‌ಗಳು ಚಾನಲ್‌ನ ಪ್ರೊಫೈಲ್ ಚಿತ್ರ, ಹ್ಯಾಂಡಲ್ ಮತ್ತು ವಿವರಣೆಯನ್ನು ಒಳಗೊಂಡಿವೆ ಆದರೆ ಕೇವಲ ಇವುಗಳಿಗೆ ಸೀಮಿತವಾಗಿಲ್ಲ. ಚಾನಲ್‌ನ ನಿರ್ದಿಷ್ಟ ವೀಡಿಯೊಗಳು ನಮ್ಮ ನೀತಿಗಳನ್ನು ಉಲ್ಲಂಘಿಸುತ್ತವೆ ಎಂದು ನಿಮಗನಿಸಿದರೆ, ನೀವು ನಿರ್ದಿಷ್ಟ ವೀಡಿಯೊಗಳನ್ನು ವರದಿ ಮಾಡಬೇಕು.

ಪ್ಲೇಪಟ್ಟಿಯ ಕುರಿತು ವರದಿ ಮಾಡಿ

ಪ್ಲೇಪಟ್ಟಿಯ ಕಂಟೆಂಟ್, ಶೀರ್ಷಿಕೆ, ವಿವರಣೆ ಅಥವಾ ಟ್ಯಾಗ್‌ಗಳು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತವೆ ಎಂದಾದರೆ ನೀವು ಆ ಪ್ಲೇಪಟ್ಟಿಯ ಕುರಿತು ವರದಿ ಮಾಡಬಹುದು:
  1. YouTube ಆ್ಯಪ್ ಅನ್ನು ತೆರೆಯಿರಿ .
  2. ನೀವು ವರದಿ ಮಾಡಲು ಬಯಸುವ ಪ್ಲೇಪಟ್ಟಿ‌ಗೆ ಹೋಗಿ.
  3. "ಎಲ್ಲವನ್ನೂ ಪ್ಲೇ ಮಾಡಿ" ಬಟನ್‌ನ ಬಲಭಾಗದಲ್ಲಿ, ಇನ್ನಷ್ಟು ''  ನಂತರ ವರದಿ     ನಂತರ ವರದಿ ಮಾಡಿ ಎಂಬುದನ್ನು ಆಯ್ಕೆಮಾಡಿ.

ಥಂಬ್‌ನೇಲ್ ಕುರಿತು ವರದಿ ಮಾಡಿ

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಹ ವೀಡಿಯೊ ಥಂಬ್‌ನೇಲ್ ಕುರಿತು ನೀವು ವರದಿ ಮಾಡಬಹುದು:
  1. YouTube ಆ್ಯಪ್ ಅನ್ನು ತೆರೆಯಿರಿ .
  2. ನಿಮ್ಮ ಮುಖಪುಟದಲ್ಲಿ, ಸಲಹೆಯಾಗಿ ನೀಡಲಾದ ವೀಡಿಯೊಗಳಲ್ಲಿ ಅಥವಾ ಹುಡುಕಾಟ ಫಲಿತಾಂಶಗಳಲ್ಲಿ ನೀವು ವರದಿ ಮಾಡಲು ಬಯಸುವ ವೀಡಿಯೊಗೆ ಹೋಗಿ. ನೀವು ವೀಡಿಯೊದ ವೀಕ್ಷಣಾ ಪುಟದಿಂದ ಥಂಬ್‌ನೇಲ್ ಅನ್ನು ವರದಿ ಮಾಡಲು ಸಾಧ್ಯವಿಲ್ಲ.
  3. ಥಂಬ್‌ನೇಲ್‌ನ ಮೇಲಿನ ಬಲ ಮೂಲೆಯಲ್ಲಿ, ಇನ್ನಷ್ಟು  '' ನಂತರ ವರದಿ ಮಾಡಿ  ಎಂಬುದನ್ನು ಆಯ್ಕೆಮಾಡಿ.
  4. ನೀವು ಥಂಬ್‌ನೇಲ್ ಕುರಿತು ವರದಿ ಮಾಡುತ್ತಿರುವುದಕ್ಕೆ ಸೂಕ್ತವೆನಿಸುವ ಕಾರಣವನ್ನು ಆಯ್ಕೆಮಾಡಿ.
  5. ವರದಿ ಮಾಡಿ ಎಂಬುದನ್ನು ಆಯ್ಕೆಮಾಡಿ.

ಕಾಮೆಂಟ್ ಅನ್ನು ವರದಿ ಮಾಡಿ

ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವಂತಹ ಕಾಮೆಂಟ್‌ನ ಕುರಿತು ನೀವು ವರದಿ ಮಾಡಬಹುದು:
  1. YouTube ಗೆ ಸೈನ್ ಇನ್ ಮಾಡಿ.
  2. ನೀವು ವರದಿ ಮಾಡಲು ಬಯಸುವ ಕಾಮೆಂಟ್‌ಗೆ ಹೋಗಿ.
  3. ಇನ್ನಷ್ಟು  '' ನಂತರ ವರದಿ ಮಾಡಿ  ಎಂಬುದನ್ನು ಆಯ್ಕೆ ಮಾಡಿ.
  4. ಕಾಮೆಂಟ್ ಉಲ್ಲಂಘಿಸುವ ನೀತಿಯನ್ನು ಆಯ್ಕೆಮಾಡಿ.
  5. ಸರಿ ಎಂಬುದನ್ನು ಆಯ್ಕೆಮಾಡುವ ಮೂಲಕ ಸಲ್ಲಿಕೆಯನ್ನು ದೃಢೀಕರಿಸಿ.
    • ಐಚ್ಛಿಕ: ರಚನೆಕಾರರಾಗಿ, ನೀವು ಕಾಮೆಂಟ್ ಕುರಿತು ವರದಿ ಮಾಡಿದ ನಂತರ, ಆ ಬಳಕೆದಾರರ ಕಾಮೆಂಟ್‌ಗಳನ್ನು ನಿಮ್ಮ ಚಾನಲ್‌ನಲ್ಲಿ ತೋರಿಸುವುದನ್ನು ನೀವು ತಡೆಯಬಹುದು. ನನ್ನ ಚಾನಲ್‌ನಲ್ಲಿ ಬಳಕೆದಾರರನ್ನು ಮರೆಮಾಡಿ ನಂತರ ಎಂಬುದರ ಮುಂದಿರುವ ಬಾಕ್ಸ್‌ಗೆ ಗುರುತು ಹಾಕಿ, ಸರಿ ಎಂಬುದನ್ನು ಆಯ್ಕೆಮಾಡಿ.

ನನ್ನ ಕಾಮೆಂಟ್ ಅನ್ನು ಸ್ಪ್ಯಾಮ್ ಎಂದು ತಪ್ಪಾಗಿ ಗುರುತಿಸಲಾಗಿದೆ

ನಿಮ್ಮ ಕಾಮೆಂಟ್ ಅನ್ನು ಸ್ಪ್ಯಾಮ್ ಎಂದು ಗುರುತಿಸಿರುವ ನಿರ್ಧಾರವು ತಪ್ಪು ಎಂಬುದಾಗಿ ನೀವು ಭಾವಿಸಿದರೆ, ನೀವು ಅಪ್‌ಲೋಡ್‌ ಮಾಡುವವರನ್ನು ಸಂಪರ್ಕಿಸಬಹುದು ಮತ್ತು ನಿಮ್ಮ ಕಾಮೆಂಟ್ ಅನ್ನು ಮರುಸ್ಥಾಪಿಸುವಂತೆ ಕೇಳಿಕೊಳ್ಳಬಹುದು.

ಆ್ಯಡ್ ಕುರಿತು ವರದಿ ಮಾಡಿ

ಅನುಚಿತವಾದ ಅಥವಾ Google ಜಾಹೀರಾತು ನೀತಿಗಳನ್ನು ಉಲ್ಲಂಘಿಸುವ ಜಾಹೀರಾತು ನಿಮ್ಮ ಗಮನಕ್ಕೆ ಬಂದರೆ, ನೀವು ಅದರ ಕುರಿತು ವರದಿ ಮಾಡಬಹುದು. ಈ ಫಾರ್ಮ್ ಭರ್ತಿ ಮಾಡಿ ಮತ್ತು ಸಲ್ಲಿಸಿ.
ವೀಡಿಯೊದಿಂದ ಆ್ಯಡ್‌ ಅನ್ನು ವರದಿ ಮಾಡಲು:
  1. ಆ್ಯಡ್‌ ಕೆಳಭಾಗದಲ್ಲಿ, 'ಈ ಆ್ಯಡ್‌ ಏಕೆ ಕಾಣಿಸುತ್ತಿದೆ' ಅನ್ನು ಆಯ್ಕೆಮಾಡಬೇಕೆ? .
  2. ಆ್ಯಡ್‌ ಕುರಿತು ವರದಿ ಮಾಡಿ  ಆಯ್ಕೆಮಾಡಿ.
  3. ಫಾರ್ಮ್ ಭರ್ತಿ ಮಾಡಿ ಮತ್ತು ಸಲ್ಲಿಸಿ. ನಮ್ಮ ತಂಡವು ನಿಮ್ಮ ಜಾಹೀರಾತು ಸಂಬಂಧಿತ ವರದಿಯನ್ನು ಪರಿಶೀಲಿಸುತ್ತದೆ ಮತ್ತು ಅಗತ್ಯವೆನಿಸಿದರೆ, ಸೂಕ್ತ ಕ್ರಮವನ್ನು ತೆಗೆದುಕೊಳ್ಳುತ್ತದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10398694217433653867
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false