ಪೋಸ್ಟ್ಗಳು ನಿಮಗೆ YouTube ನಲ್ಲಿ ಹೆಚ್ಚಿನ ತಲುಪುವಿಕೆ ಮತ್ತು ನಿಮ್ಮ ಪ್ರೇಕ್ಷಕರ ಜೊತೆಗೆ ಹೆಚ್ಚಿನ ತೊಡಗಿಸಿಕೊಳ್ಳುವಿಕೆಯನ್ನು ನೀಡಬಹುದು. ಸಮುದಾಯ ಟ್ಯಾಬ್ ಪ್ರಯೋಜನಗಳು ಮತ್ತು ಅರ್ಹತೆಯ ಕುರಿತು ಇನ್ನಷ್ಟು ತಿಳಿಯಿರಿ.
ಪೋಸ್ಟ್ ಅನ್ನು ರಚಿಸಿ
ಪೋಸ್ಟ್ ಅನ್ನು ರಚಿಸಲು:
- ರಚಿಸಿ ಪೋಸ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.
- ಪಠ್ಯ ಸೇರಿಸಿ.
- ಚಿತ್ರ , ಸಮೀಕ್ಷೆ ಅಥವಾ ಕ್ವಿಜ್ ಇವುಗಳಲ್ಲಿ ನೀವು ರಚಿಸಲು ಬಯಸುವಂತಹದನ್ನು ಆಯ್ಕೆ ಮಾಡಿ.
- ಪೋಸ್ಟ್ ಆಯ್ಕೆಮಾಡಿ.
YouTube ಸಮುದಾಯವನ್ನು ರಕ್ಷಿಸುವ ಸಲುವಾಗಿ, 24-ಗಂಟೆಗಳ ಅವಧಿಯಲ್ಲಿ ಒಂದು ಚಾನಲ್ ಎಷ್ಟು ಪೋಸ್ಟ್ಗಳನ್ನು ರಚಿಸಬಹುದು ಎಂಬುದರ ಮೇಲೆ ನಾವು ಮಿತಿಗಳನ್ನು ವಿಧಿಸುತ್ತೇವೆ. ನೀವು "ಮಿತಿ ತಲುಪಿದ್ದೀರಿ" ಎಂಬ ದೋಷ ಸಂದೇಶವನ್ನು ಸ್ವೀಕರಿಸಿದರೆ, 24 ಗಂಟೆಗಳ ನಂತರ ಮತ್ತೆ ಪ್ರಯತ್ನಿಸಿ.
ಪೋಸ್ಟ್ ಅನ್ನು ನಿಗದಿಪಡಿಸಿ
ಪೋಸ್ಟ್ ಅನ್ನು ನಿಗದಿಪಡಿಸಲು:
- ನಿಮ್ಮ ಪೋಸ್ಟ್ ಅನ್ನು ರಚಿಸುವಾಗ, ಮೇಲಿನ ಬಲ ಮೂಲೆಯಲ್ಲಿ, ಗಡಿಯಾರ ಎಂಬುದನ್ನು ಟ್ಯಾಪ್ ಮಾಡಿ.
- ಪೋಸ್ಟ್ ಅನ್ನು ಪ್ರಕಟಿಸಲು ದಿನಾಂಕ, ಸಮಯ ಮತ್ತು ಸಮಯ ವಲಯವನ್ನು ಆಯ್ಕೆಮಾಡಿ.
- ಆಯಿತುಎಂಬುದನ್ನು ಆರಿಸಿ.
- ಪೋಸ್ಟ್ ರಚಿಸುವ ಪುಟದಲ್ಲಿ, ನಿಗದಿಪಡಿಸಿ ಅನ್ನು ಕ್ಲಿಕ್ ಮಾಡಿ.
ಪೋಸ್ಟ್ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಿ
ಪೋಸ್ಟ್ನಲ್ಲಿ ವೀಡಿಯೊ ಹಂಚಿಕೊಳ್ಳಲು:
- ನೀವು ಮೇಲ್ಮನವಿ ಹಂಚಿಕೊಳ್ಳಲು ಬಯಸುವ ವೀಡಿಯೊಗೆ ಹೋಗಿ.
- ಹಂಚಿಕೊಳ್ಳಲು ಟ್ಯಾಪ್ ಮಾಡಿ ಹಂಚಿಕೊಳ್ಳಿ....
- ಪೋಸ್ಟ್ ರಚಿಸಿ ಅನ್ನು ಟ್ಯಾಪ್ ಮಾಡಿ.
- ನಿಮ್ಮ ಸಂದೇಶವನ್ನು ಟೈಪ್ ಮಾಡಿ ಮತ್ತು ಪೋಸ್ಟ್ ಅಥವಾ ಅನ್ನು ಟ್ಯಾಪ್ ಮಾಡಿ.
ಪೋಸ್ಟ್ನಲ್ಲಿ ಪ್ಲೇಪಟ್ಟಿಯನ್ನು ಹಂಚಿಕೊಳ್ಳಿ
ಪೋಸ್ಟ್ನಲ್ಲಿ ಪ್ಲೇಪಟ್ಟಿಯನ್ನು ಹಂಚಿಕೊಳ್ಳಲು:
- ನೀವು ಹಂಚಿಕೊಳ್ಳಲು ಬಯಸುವ ಪ್ಲೇಪಟ್ಟಿಯನ್ನು ತೆರೆಯಿರಿ.
- ಇನ್ನಷ್ಟು ಅನ್ನು ಆಯ್ಕೆ ಮಾಡಿ ಹಂಚಿಕೊಳ್ಳಿ.
- ಲಿಂಕ್ ಕಾಪಿ ಮಾಡಿ ಅನ್ನು ಟ್ಯಾಪ್ ಮಾಡಿ.
- ಇವುಗಳನ್ನು ಟ್ಯಾಪ್ ಮಾಡಿ, ರಚಿಸಿ ಪೋಸ್ಟ್ ಮಾಡಿ.
- ಪ್ಲೇಪಟ್ಟಿ URL ನಲ್ಲಿ ಪೇಸ್ಟ್ ಮಾಡಿ ಮತ್ತು ಪೋಸ್ಟ್ ಮಾಡಿ ಅನ್ನು ಟ್ಯಾಪ್ ಮಾಡಿ.
ಲೈವ್ ಸ್ಟ್ರೀಮ್ ಪೋಸ್ಟ್ ಅನ್ನು ರಚಿಸಿ
- ಹೋಮ್ಸ್ಕ್ರೀನ್ನಲ್ಲಿರುವ, ರೆಕಾರ್ಡ್ ಅನ್ನು ಟ್ಯಾಪ್ ಮಾಡಿ.
- ಲೈವ್ ಸಾರ್ವಜನಿಕ ಮುಂದಿನದು ಅನ್ನು ಟ್ಯಾಪ್ ಮಾಡಿ.
- ಶೀರ್ಷಿಕೆಯನ್ನು ಆಯ್ಕೆ ಮಾಡಿ, ಮುಂದಿನದು ಅನ್ನು ಟ್ಯಾಪ್ ಮಾಡಿ.
- ಪೋಸ್ಟ್ಗೆ ಥಂಬ್ನೇಲ್ ಅನ್ನು ಆಯ್ಕೆ ಮಾಡಿ.
- ನಿಮ್ಮ ಸಾಧನವನ್ನು ಲ್ಯಾಂಡ್ಸ್ಕೇಪ್ ಅಥವಾ ಪೋರ್ಟ್ರೇಟ್ ವೀಕ್ಷಣೆಗೆ ತಿರುಗಿಸುವ ಮೂಲಕ ಬ್ರಾಡ್ಕಾಸ್ಟ್ ಓರಿಯಂಟೇಶನ್ ಅನ್ನು ಆಯ್ಕೆಮಾಡಿ (ನಿಮ್ಮ ಫೋನ್ನಲ್ಲಿ ತಿರುಗಿಸುವಿಕೆಯನ್ನು ಅನುಮತಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ).
- ಹಂಚಿಕೊಳ್ಳಿ ಟ್ಯಾಪ್ ಮಾಡಿ ಪೋಸ್ಟ್ ರಚಿಸಿ.
- ಪೋಸ್ಟ್ ಪಠ್ಯವನ್ನು ಸೇರಿಸಿ, ನಂತರ ಪೋಸ್ಟ್ ಮಾಡಿ ಅನ್ನು ಆಯ್ಕೆ ಮಾಡಿ.
- ಲೈವ್ ಮಾಡಿ ಅನ್ನು ಟ್ಯಾಪ್ ಮಾಡಿ.
- ಸ್ಟ್ರೀಮ್ ಅನ್ನು ಕೊನೆಗೊಳಿಸಲು, ಕೊನೆಗೊಳಿಸಿ ಅನ್ನು ಟ್ಯಾಪ್ ಮಾಡಿ.
ಪೋಸ್ಟ್ನಲ್ಲಿ ಇತರ ಚಾನಲ್ಗಳನ್ನು ಉಲ್ಲೇಖಿಸಿ
ನೀವು @ ನಮೂದಿಸಿದ ನಂತರ ಸ್ಪೇಸ್ ಬಿಡದೆ ಇತರ YouTube ಚಾನಲ್ಗಳ ಹ್ಯಾಂಡಲ್ ಅಥವಾ ಚಾನಲ್ನ ಹೆಸರನ್ನು ನಮೂದಿಸುವ ಮೂಲಕ ನಿಮ್ಮ ಪೋಸ್ಟ್ಗಳಲ್ಲಿ ಆ ಚಾನಲ್ಗಳನ್ನು ಉಲ್ಲೇಖಿಸಬಹುದು. ನೀವು ಅವರನ್ನು ಉಲ್ಲೇಖಿಸಿದ್ದೀರಿ ಎಂದು ಆ ಚಾನಲ್ ನೋಟಿಫಿಕೇಶನ್ ಅನ್ನು ಪಡೆಯಬಹುದು. ವೀಕ್ಷಕರು ಯಾವುದೇ ಸಾಧನದಿಂದ ಉಲ್ಲೇಖವನ್ನು ಕ್ಲಿಕ್ ಮಾಡಬಹುದು ಮತ್ತು ನೇರವಾಗಿ ಆ ಚಾನಲ್ ಪುಟಕ್ಕೆ ಹೋಗಬಹುದು.
ಪೋಸ್ಟ್ಗಳ ಪ್ರಕಾರದ ಕುರಿತಾಗಿ ತಿಳಿಯಿರಿ
ಪಠ್ಯ ಪೋಸ್ಟ್ಗಳು
ಪಠ್ಯ ಪೋಸ್ಟ್ಗಳನ್ನು ರಚಿಸಲು, ನಿಮ್ಮ ಚಾನಲ್ನ ಸಮುದಾಯ ಟ್ಯಾಬ್ನಲ್ಲಿರುವ ಟೆಕ್ಸ್ಟ್ ಬಾಕ್ಸ್ನಲ್ಲಿ ನಿಮ್ಮ ಸಂದೇಶವನ್ನು ನಮೂದಿಸಿ. ನಿಮ್ಮ ಪಠ್ಯವನ್ನು ನೀವು ಹಾಗೆಯೇ ಅಥವಾ ವೀಡಿಯೊ, ಚಿತ್ರ ಅಥವಾ GIF ಮೂಲಕ ಪೋಸ್ಟ್ ಮಾಡಬಹುದು. ಪಠ್ಯ ಪೋಸ್ಟ್ಗಳನ್ನು ಕ್ವಿಜ್ಗಳ ಜೊತೆಗೆ ಪೋಸ್ಟ್ ಮಾಡಲು ಆಗುವುದಿಲ್ಲ.
ಪ್ಲೇಪಟ್ಟಿ ಪೋಸ್ಟ್ಗಳು
ನೀವು ಸಮುದಾಯ ಟ್ಯಾಬ್ ಅನ್ನು ಆನ್ ಮಾಡಿದ್ದರೆ, ನೀವು ಆನಂದಿಸುವ ಕಲಾವಿದರಿಂದ ಪ್ಲೇಪಟ್ಟಿಗಳನ್ನು ಪೋಸ್ಟ್ ಮಾಡಬಹುದು. ನಿಮ್ಮ ಪೋಸ್ಟ್ಗೆ ಪ್ಲೇಪಟ್ಟಿ URL ಅನ್ನು ಕಾಪಿ ಮಾಡಿ, ಪೇಸ್ಟ್ ಮಾಡಿ.
ಚಿತ್ರ ಮತ್ತು GIF ಪೋಸ್ಟ್ಗಳು
ನಿಮ್ಮ Android ಸಾಧನದಿಂದ ನೀವು 5 ಚಿತ್ರಗಳು ಅಥವಾ ಆ್ಯನಿಮೇಟೆಡ್ GIF ಗಳವರೆಗೆ ಅಪ್ಲೋಡ್ ಮಾಡಬಹುದು.
ಮಾರ್ಗಸೂಚಿಗಳು
- ಗಾತ್ರ: 16 MB ವರೆಗೆ
- ಫೈಲ್ ಪ್ರಕಾರಗಳು: JPG, PNG, GIF ಅಥವಾ WEBP
- ಸೂಚಿಸಲಾದ ದೃಶ್ಯಾನುಪಾತ: ನಾವು 1:1 ಅನುಪಾತವನ್ನು ಸೂಚಿಸುತ್ತೇವೆ ಏಕೆಂದರೆ ಫೀಡ್ನಲ್ಲಿ ಚಿತ್ರಗಳನ್ನು ಹೀಗೆಯೇ ತೋರಿಸಲಾಗುತ್ತದೆ. ವೀಕ್ಷಕರು ಇದನ್ನು ವಿಸ್ತೃತಗೊಳಿಸಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ ಪೂರ್ಣ ಚಿತ್ರವನ್ನು ನೋಡಬಹುದು.
ನೀವು ಬಳಸಲು ಅನುಮತಿ ಹೊಂದಿರುವ ಚಿತ್ರಗಳನ್ನು ಮಾತ್ರ ಬಳಸಿ. ನಿಮ್ಮ ಚಿತ್ರದ ಪೋಸ್ಟ್ನೊಂದಿಗೆ, ನೀವು ಪಠ್ಯವನ್ನು ಸಹ ಸೇರಿಸಬಹುದು. ನೆನಪಿಡಿ, ಚಿತ್ರಗಳು YouTube ಸಮುದಾಯ ಮಾರ್ಗಸೂಚಿಗಳನ್ನು ಪಾಲಿಸಬೇಕಾಗುತ್ತದೆ. ಚಿತ್ರಗಳು ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ನಿಮ್ಮ ಪೋಸ್ಟ್ ಅನ್ನು ತೆಗೆದುಹಾಕಬಹುದು ಮತ್ತು ಚಾನಲ್ಗೆ ಸ್ಟ್ರೈಕ್ ಅನ್ವಯವಾಗಬಹುದು.
ವೀಡಿಯೊ ಪೋಸ್ಟ್ಗಳು
ನಿಮ್ಮ ಪೋಸ್ಟ್ನಲ್ಲಿ ನೀವು ವೀಡಿಯೊವನ್ನು ಸೇರಿಸಲು ಆಯ್ಕೆಮಾಡಿದರೆ, ನೀವು ಹೀಗೆ ಮಾಡಬಹುದು:
- YouTube ವೀಡಿಯೊವನ್ನು ಹುಡುಕಬಹುದು
- YouTube ವೀಡಿಯೊ URL ಅನ್ನು ಪೇಸ್ಟ್ ಮಾಡಬಹುದು
- ನಿಮ್ಮ YouTube ಚಾನಲ್ನಲ್ಲಿನ ವೀಡಿಯೊವನ್ನು ಆಯ್ಕೆ ಮಾಡಬಹುದು
ಇನ್ನೊಬ್ಬ ರಚನೆಕಾರರ ವೀಡಿಯೊವನ್ನು ಹಂಚಿಕೊಳ್ಳುವ ಪೋಸ್ಟ್ ಅನ್ನು ನೀವು ರಚಿಸಿದಾಗ, ವೀಡಿಯೊದ ಮೂಲ ಅಪ್ಲೋಡರ್ಗೆ ನೋಟಿಫಿಕೇಶನ್ ಅನ್ನು ಕಳುಹಿಸಬಹುದು. ಇತರ ರಚನೆಕಾರರು ತಮ್ಮ ವೀಡಿಯೊಗಳನ್ನು ಹಂಚಿಕೊಳ್ಳುತ್ತಿರುವಾಗ, ಮೂಲ ರಚನೆಕಾರರು ಅದನ್ನು ಅಂಗೀಕರಿಸಲು ಈ ನೋಟಿಫಿಕೇಶನ್ ಸಹಾಯ ಮಾಡುತ್ತದೆ.
ಗಮನಿಸಿ: ಈಗಾಗಲೇ ವೀಕ್ಷಕರ ಸಬ್ಸ್ಕ್ರಿಪ್ಶನ್ ಅಥವಾ ಹೋಮ್ ಫೀಡ್ನಲ್ಲಿರುವ ವೀಡಿಯೊ ಕುರಿತಾದ ಪೋಸ್ಟ್ಗಳು ಮತ್ತೆ ತೋರಿಸದಿರಬಹುದು. ಈ ಸೆಟ್ಟಿಂಗ್ ನಿಮ್ಮ ವೀಕ್ಷಕರು ಒಂದೇ ವೀಡಿಯೊವನ್ನು ಪದೇಪದೇ ನೋಡುವುದನ್ನು ತಡೆಯುತ್ತದೆ.
ಸಮೀಕ್ಷೆಗಳು
ನಿಮ್ಮ ಪೋಸ್ಟ್ಗೆ ಸಮಿಕ್ಷೆಯನ್ನು ಸೇರಿಸಲು ಬಯಸಿದರೆ ಅನ್ನು ಆಯ್ಕೆ ಮಾಡಿ:
- ಪಠ್ಯ ಅಥವಾ ಚಿತ್ರ ಸಮೀಕ್ಷೆಯಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ.
- ಪಠ್ಯ ಸಮೀಕ್ಷೆಗಳಿಗಾಗಿ:
- ಪಠ್ಯ ಫೀಲ್ಡ್ನಲ್ಲಿ ಪ್ರಶ್ನೆಯನ್ನು ನಮೂದಿಸಿ.
- "ಆಯ್ಕೆ" ಫೀಲ್ಡ್ಗಳಲ್ಲಿ ಉತ್ತರಗಳನ್ನು ನಮೂದಿಸಿ. ಆಯ್ಕೆಗಳು ಪ್ರತಿಯೊಂದೂ 65 ಅಕ್ಷರಗಳವರೆಗೆ ಹೊಂದಿರಬಹುದು.
- ನಿಮಗೆ ಇನ್ನೂ ಹೆಚ್ಚಿನ ಉತ್ತರ ಫೀಲ್ಡ್ಗಳ ಅಗತ್ಯವಿದ್ದರೆ, ಆಯ್ಕೆಯನ್ನು ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.
- ಚಿತ್ರ ಸಮೀಕ್ಷೆಗಳಿಗಾಗಿ:
- ಪಠ್ಯ ಫೀಲ್ಡ್ನಲ್ಲಿ ಪ್ರಶ್ನೆಯನ್ನು ನಮೂದಿಸಿ.
- ಚಿತ್ರಗಳನ್ನು, ಆಯ್ಕೆಗಳಾಗಿ ಅಪ್ಲೋಡ್ ಮಾಡಿ.
- ನಿಮಗೆ ಹೆಚ್ಚಿನ ಚಿತ್ರಗಳ ಅಗತ್ಯವಿದ್ದರೆ, 4 ಚಿತ್ರಗಳವರೆಗೆ ಸೇರಿಸಲು, ಆಯ್ಕೆಗಳನ್ನು ಸೇರಿಸಿ ಅನ್ನು ಟ್ಯಾಪ್ ಮಾಡಿ.
ಗಮನಿಸಿ: ಚಿತ್ರ ಸಮೀಕ್ಷೆ ಆಯ್ಕೆಗಳು ಈಗ ಗರಿಷ್ಠ 36 ಅಕ್ಷರಗಳವರೆಗೆ ಹೆಚ್ಚಾಗಿವೆ. ಪಠ್ಯ ಸಮೀಕ್ಷೆ ಆಯ್ಕೆಗಳು ಗರಿಷ್ಠ 65 ಅಕ್ಷರಗಳವರೆಗೆ ಇರಬಹುದು.
ಕ್ವಿಜ್ಗಳು
ಒಂದು ವೇಳೆ ನೀವು ನಿಮ್ಮ ಪೋಸ್ಟ್ಗೆ ಕ್ವಿಜ್ ಅನ್ನು ಸೇರಿಸಲು ಆಯ್ಕೆ ಮಾಡಿದರೆ, ಮಾಡಿ:
- ಪಠ್ಯ ಫೀಲ್ಡ್ನಲ್ಲಿ ಪ್ರಶ್ನೆಯನ್ನು ನಮೂದಿಸಿ.
- "ಉತ್ತರ" ಫೀಲ್ಡ್ಗಳಲ್ಲಿ ಉತ್ತರಗಳನ್ನು ನಮೂದಿಸಿ. ಉತ್ತರಗಳು ಪ್ರತಿಯೊಂದೂ 80 ಅಕ್ಷರಗಳವರೆಗೆ ಇರಬಹುದು.
- ನಿಮಗೆ ಹೆಚ್ಚಿನ ಉತ್ತರ ಫೀಲ್ಡ್ಗಳ ಅಗತ್ಯವಿದ್ದರೆ, ಉತ್ತರ ಸೇರಿಸಿ ಅನ್ನು ಟ್ಯಾಪ್ ಮಾಡಿ. ನೀವು 4 ಉತ್ತರಗಳವರೆಗೆ ನೀಡಬಹುದು.
- ಸರಿಯಾದ ಉತ್ತರವನ್ನು ಆಯ್ಕೆಮಾಡಿ. ಪಠ್ಯ ಫೀಲ್ಡ್ನಲ್ಲಿ ಇದು ಸರಿಯಾದ ಉತ್ತರ ಏಕೆ ಎಂಬುದಕ್ಕೆ ನೀವು ಐಚ್ಛಿಕ ವಿವರಣೆಯನ್ನು ಸೇರಿಸಬಹುದು. ವಿವರಣೆಗಳು ಗರಿಷ್ಠ 350 ಅಕ್ಷರಗಳವರೆಗೆ ಇರಬಹುದು.