"ಹೆಚ್ಚಿನ ಜಾಹೀರಾತುದಾರರಿಗೆ ಸೂಕ್ತವಲ್ಲ" ಎಂದು ಗುರುತಿಸಲಾದ ವೀಡಿಯೊಗಳ ಮಾನವ ವಿಮರ್ಶೆಯನ್ನು ವಿನಂತಿಸಿ

ನಿಮ್ಮ ವೀಡಿಯೊ, ಹೆಚ್ಚಿನ ಜಾಹೀರಾತುದಾರರಿಗೆ ಸೂಕ್ತವಲ್ಲ ಎಂದಾದರೆ, ಅದರ ಪಕ್ಕದಲ್ಲಿ ಹಳದಿ ಡಾಲರ್ ಚಿಹ್ನೆಯ ಐಕಾನ್ ಇರುತ್ತದೆ: . ವೀಡಿಯೊಗಳನ್ನು “ಸೀಮಿತ” ಎಂದು ಹೇಗೆ ಗುರುತಿಸಲಾಗುತ್ತದೆ ಮತ್ತು ಅವುಗಳನ್ನು ಇನ್ನೊಮ್ಮೆ ಪರಿಶೀಲಿಸಲು ವಿನಂತಿಸುವುದು ಹೇಗೆ ಎಂಬುದನ್ನು ಈ ಲೇಖನವು ವಿವರಿಸುತ್ತದೆ.

ಈ ಕೆಳಗಿನ ಸಂದರ್ಭಗಳಲ್ಲಿ ವೀಡಿಯೊವನ್ನು "ಹೆಚ್ಚಿನ ಜಾಹೀರಾತುದಾರರಿಗೆ ಸೂಕ್ತವಲ್ಲ" ಎಂದು ಗುರುತಿಸಲಾಗುತ್ತದೆ:

ಮಾನಿಟೈಸೇಶನ್ ಸ್ಥಿತಿಯನ್ನು ಹೇಗೆ ಅನ್ವಯಿಸಲಾಗುತ್ತದೆ

ಅಪ್‌ಲೋಡ್ ಪ್ರಕ್ರಿಯೆಯ ಸಮಯದಲ್ಲಿ, ವೀಡಿಯೊ ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ಪೂರೈಸುತ್ತದೆಯೇ ಎಂದು ನೋಡಲು ನಾವು ಮಷಿನ್ ಲರ್ನಿಂಗ್ ಅನ್ನು ಬಳಸುತ್ತೇವೆ. ನಿಗದಿಪಡಿಸಿದ ಲೈವ್ ಸ್ಟ್ರೀಮ್‌ಗಳನ್ನು ಸಹ ನಾವು ಪರಿಶೀಲಿಸುತ್ತೇವೆ. ಸ್ಟ್ರೀಮ್ ಲೈವ್ ಆಗುವ ಮೊದಲೇ ನಮ್ಮ ಸಿಸ್ಟಂಗಳು ಶೀರ್ಷಿಕೆ, ವಿವರಣೆ, ಥಂಬ್‌ನೇಲ್ ಮತ್ತು ಟ್ಯಾಗ್‌ಗಳನ್ನು ನೋಡುತ್ತವೆ.

ನಿಮ್ಮ ವೀಡಿಯೊ ಹಳದಿ ಐಕಾನ್ ಅನ್ನು ಏಕೆ ಹೊಂದಿದೆ ಎಂದು ನಿಮಗೆ ಖಚಿತವಾಗಿ ತಿಳಿದಿಲ್ಲ ಎಂದಾದರೆ, ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳನ್ನು ನೋಡಿ. ವೀಡಿಯೊದ ಶೀರ್ಷಿಕೆ, ವಿವರಣೆ, ಥಂಬ್‌ನೇಲ್ ಮತ್ತು ಟ್ಯಾಗ್‌ಗಳನ್ನು ಪರಿಶೀಲಿಸಲು ಮರೆಯಬೇಡಿ. ಶೀರ್ಷಿಕೆ ಅಥವಾ ಮೆಟಾಡೇಟಾವನ್ನು ಹೊಂದಿರದ ವೀಡಿಯೊಗಳು, ಕಂಟೆಂಟ್ ಎಲ್ಲಾ ಜಾಹೀರಾತುದಾರರಿಗೆ ಸೂಕ್ತವಾಗಿದೆಯೇ ಎಂಬುದನ್ನು ನಮ್ಮ ಸಿಸ್ಟಂಗಳು ಅರ್ಥಮಾಡಿಕೊಳ್ಳಲು ಸಾಕಷ್ಟು ಸಂದರ್ಭವನ್ನು ಒದಗಿಸದಿರಬಹುದು.

ಪರಿಶೀಲನೆಗಾಗಿ ಯಾವಾಗ ವಿನಂತಿಸಬೇಕು

ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳಲ್ಲಿ ಪಟ್ಟಿ ಮಾಡಲಾದ ಮಾನದಂಡಗಳನ್ನು ನಿಮ್ಮ ವೀಡಿಯೊ ಪೂರೈಸುತ್ತದೆಯೇ ಎಂಬುದನ್ನು ಪರಿಶೀಲಿಸಿ. “ಈ ಕಂಟೆಂಟ್ ಆ್ಯಡ್ ಆದಾಯವನ್ನು ಗಳಿಸಬಹುದು” ಎಂಬುದಕ್ಕಾಗಿ ಇರುವ ಎಲ್ಲಾ ಮಾನದಂಡಗಳನ್ನು ನಿಮ್ಮ ವೀಡಿಯೊ ಪೂರೈಸುತ್ತಿದೆ ಎಂದಾದರೆ, ನೀವು ಪರಿಶೀಲನೆಗಾಗಿ ವಿನಂತಿಸಬೇಕು. ಮಾನಿಟೈಸೇಶನ್ ಪರಿಶೀಲನೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ಆ್ಯಡ್‌ಗಾಗಿ ಸೂಕ್ತತೆಯ ನಿರ್ಬಂಧದ ವಿರುದ್ಧ ಮೇಲ್ಮನವಿ ಸಲ್ಲಿಸಿ

ನಮ್ಮ ಸಿಸ್ಟಂಗಳು ಯಾವಾಗಲೂ ಸರಿಯಾದ ತೀರ್ಮಾನ ಕೈಗೊಳ್ಳದಿರಬಹುದು ಎಂದು ನಮಗೆ ತಿಳಿದಿದೆ. ನೀವು ಹಳದಿ ಐಕಾನ್ ಪಡೆದರೆ ಮತ್ತು ನಮ್ಮ ಸಿಸ್ಟಂಗಳಿಂದ ತಪ್ಪಾಗಿದೆ ಎಂದು ನೀವು ಭಾವಿಸಿದರೆ, ಮಾನವ ವಿಮರ್ಶಕರು ಪರಿಶೀಲನೆ ನಡೆಸಲು ನೀವು ವಿನಂತಿಸಬಹುದು. ನಿಮ್ಮ ಪರಿಶೀಲನೆಯನ್ನು ತಜ್ಞರಿಗೆ ಕಳುಹಿಸಲಾಗುತ್ತದೆ ಮತ್ತು ಅವರ ನಿರ್ಧಾರಗಳು ಕಾಲಾನಂತರದಲ್ಲಿ ನಮ್ಮ ಸಿಸ್ಟಂಗಳು ಚುರುಕಾಗಲು ಸಹಾಯ ಮಾಡುತ್ತವೆ.

ಗಮನಿಸಿ: ಒಂದು ವೀಡಿಯೊವನ್ನು ಅಳಿಸಿ, ಅದನ್ನು ಪುನಃ ಅಪ್‌ಲೋಡ್ ಮಾಡಿದರೆ ಏನೂ ಪ್ರಯೋಜನವಾಗುವುದಿಲ್ಲ

ಮೇಲ್ಮನವಿ ಸಲ್ಲಿಸಲು:

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಬದಿಯ ಮೆನುವಿನಿಂದ ಕಂಟೆಂಟ್ ಎಂಬುದನ್ನು ಕ್ಲಿಕ್ ಮಾಡಿ.
  3. ನೀವು ಮೇಲ್ಮನವಿ ಸಲ್ಲಿಸಲು ಬಯಸುವ ವೀಡಿಯೊಗೆ ಹೋಗಿ.
  4. ವೀಡಿಯೊದ ಪಕ್ಕದಲ್ಲಿ, ನಿರ್ಬಂಧಗಳು ಕಾಲಮ್‌ನಲ್ಲಿ, ಆ್ಯಡ್‌ಗಾಗಿ ಸೂಕ್ತತೆ ಎಂಬುದರ ಮೇಲೆ ಹೋವರ್ ಮಾಡಿ.
  5. ಪರಿಶೀಲನೆಗಾಗಿ ವಿನಂತಿಸಿ ಎಂಬುದನ್ನು ಕ್ಲಿಕ್ ಮಾಡಿ. ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.

ಗಮನಿಸಿ: ನಿಮ್ಮ ವೀಡಿಯೊ ಅರ್ಹವಾಗಿದ್ದರೆ ಮಾತ್ರ, ಮೇಲ್ಮನವಿ ಸಲ್ಲಿಸುವ ಆಯ್ಕೆ ನಿಮಗೆ ದೊರೆಯುತ್ತದೆ. ನೀವು ಮೇಲ್ಮನವಿಯನ್ನು ಸಲ್ಲಿಸಿದ ನಂತರ, ವೀಡಿಯೊದ ಪಕ್ಕದಲ್ಲಿನ ಪಠ್ಯವು ನಿಮ್ಮ ಮೇಲ್ಮನವಿಯ ಸ್ಥಿತಿಯೊಂದಿಗೆ ಅಪ್‌ಡೇಟ್‌ ಆಗುತ್ತದೆ.

ಹೆಚ್ಚುವರಿ ಆ್ಯಡ್‌ಗಾಗಿ ಸೂಕ್ತತೆ ನಿರ್ಬಂಧದ ಪರಿಶೀಲನೆಯನ್ನು ವಿನಂತಿಸಿ

ನಿಮ್ಮ ವೀಡಿಯೊ ಒಂದು ಹೆಚ್ಚುವರಿ ಮಾನವ ರಿವ್ಯೂಗೆ ಅರ್ಹವಾಗಿರಬಹುದು. ನಿಮ್ಮ ವೀಡಿಯೊ ಅರ್ಹವಾಗಿದೆಯೇ ಎಂದು ನೋಡಲು, ಈ ಸ್ವ-ಸಹಾಯ ಹರಿವನ್ನು ಬಳಸಿ.

ಹೆಚ್ಚುವರಿ ಪರಿಶೀಲನೆಗಾಗಿ ಅರ್ಹತೆಯನ್ನು ಪರಿಶೀಲಿಸಿ

ಮೇಲ್ಮನವಿ ಪ್ರಕ್ರಿಯೆ ಹೇಗೆ ಕೆಲಸ ಮಾಡುತ್ತದೆ

ನೀವು ಮಾನವ ವಿಮರ್ಶಕರಿಂದ ಪರಿಶೀಲನೆಯನ್ನು ವಿನಂತಿಸಿದಾಗ, ಒಬ್ಬ ತಜ್ಞರು ವೀಡಿಯೊವನ್ನು ನೋಡುತ್ತಾರೆ. ಅವರು ಆ ವೀಡಿಯೊವನ್ನು ವೀಕ್ಷಿಸಲು ಸಮಯ ವ್ಯಯಿಸುತ್ತಾರೆ ಮತ್ತು ನಮ್ಮ ಜಾಹೀರಾತು ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳ ವಿರುದ್ಧ ಅದರ ಕಂಟೆಂಟ್, ಶೀರ್ಷಿಕೆ ಮತ್ತು ಮೆಟಾಡೇಟಾವನ್ನು ಪರಿಶೀಲಿಸುತ್ತಾರೆ. ಮಾನಿಟೈಸೇಶನ್ ಪರಿಶೀಲನೆಗಳು ಹೇಗೆ ಕೆಲಸ ಮಾಡುತ್ತವೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ವೀಡಿಯೊದ ಕುರಿತು ಅಂತಿಮ ನಿರ್ಧಾರ ಮಾಡಿದಾಗ, ನೀವು ಇಮೇಲ್ ಅಪ್‌ಡೇಟ್ ಅನ್ನು ಸ್ವೀಕರಿಸುತ್ತೀರಿ.

ಗಮನಿಸಿ: ನಿಮ್ಮ ವೀಡಿಯೊವನ್ನು ನೀವು ಪರಿಶೀಲನೆಗೆ ಸಲ್ಲಿಸಿದ ಬಳಿಕ ವೀಡಿಯೊದ ಐಕಾನ್ ಸ್ಥಿತಿ ಬದಲಾಗಬಹುದು ಎಂಬುದನ್ನು ನೆನಪಿನಲ್ಲಿಡಿ. ಪರಿಶೀಲನೆ ಮುಗಿಯುವವರೆಗೆ ನಮ್ಮ ಸಿಸ್ಟಂಗಳು ತಮ್ಮ ಸ್ಕ್ಯಾನ್‌ಗಳನ್ನು ರನ್ ಮಾಡುವುದನ್ನು ಮುಂದುವರಿಸುತ್ತವೆ.

ಪರಿಶೀಲನೆಗೆ ಎಷ್ಟು ಸಮಯ ಬೇಕಾಗುತ್ತದೆ

ಈ ಪರಿಶೀಲನೆಗಳು ನಿಮಗೆ ಮತ್ತು ನಿಮ್ಮ ಆದಾಯಕ್ಕೆ ಮುಖ್ಯವೆಂದು ನಮಗೆ ತಿಳಿದಿದೆ. ಮಾನವ ವಿಮರ್ಶಕರ ಪರಿಶೀಲನೆಗೆ 7 ದಿನಗಳವರೆಗೆ ಸಮಯಾವಕಾಶ ಬೇಕಾಗಬಹುದು. ಪರಿಶೀಲನೆ ಪೂರ್ಣಗೊಂಡಾಗ, ಮಾನಿಟೈಸೇಶನ್ ನಿರ್ಧಾರವನ್ನು ಒಳಗೊಂಡಿರುವ ಇಮೇಲ್ ಅನ್ನು ನೀವು ಪಡೆಯುವಿರಿ. ನಿಮ್ಮ ಒಂದು ಹೆಚ್ಚುವರಿ ಪರಿಶೀಲನೆಯ ಬಳಿಕ, ಪರಿಶೀಲನಕಾರರ ನಿರ್ಧಾರವೇ ಅಂತಿಮವಾಗಿರುತ್ತದೆ ಮತ್ತು ವೀಡಿಯೊದ ಮಾನಿಟೈಸೇಶನ್ ಸ್ಥಿತಿಯು ಬದಲಾಗುವುದಿಲ್ಲ.

ಭವಿಷ್ಯದಲ್ಲಿ ಆ್ಯಡ್ ಸೂಕ್ತತೆಯ ನಿರ್ಬಂಧಗಳನ್ನು ತಡೆಗಟ್ಟಲು ಸಹಾಯ ಮಾಡಿ

ಭವಿಷ್ಯದಲ್ಲಿ ನಿರ್ಬಂಧಗಳು ಉಂಟಾಗುವುದನ್ನು ನೀವು ತಡೆಯಲು ಬಯಸುತ್ತೀರಿ ಎಂದಾದರೆ, ಅಪ್‌ಲೋಡ್ ಪ್ರಕ್ರಿಯೆಯ ಸಂದರ್ಭದಲ್ಲಿ ನೀವು ಸ್ವಯಂ ಪ್ರಮಾಣೀಕರಣ ಟೂಲ್ ಅನ್ನು ಬಳಸಬಹುದು. ನಮ್ಮ YouTube ಸ್ವಯಂ ಪ್ರಮಾಣೀಕರಣ ಅವಲೋಕನದಲ್ಲಿ “ಪರಿಶೀಲನೆಗಳು” ಪುಟದ ಕುರಿತು ಇನ್ನಷ್ಟು ತಿಳಿದುಕೊಳ್ಳಿ.
ಸೂಚನೆ: ಕೃತಿಸ್ವಾಮ್ಯ ಮತ್ತು ಆ್ಯಡ್‌ಗಾಗಿ ಸೂಕ್ತತೆಯ ಪರಿಶೀಲನೆಗಳ ಫಲಿತಾಂಶಗಳು ಅಂತಿಮವಲ್ಲ. ಉದಾಹರಣೆಗೆ, ಭವಿಷ್ಯದ ಹಸ್ತಚಾಲಿತ Content ID ಕ್ಲೇಮ್‌ಗಳು, ಕೃತಿಸ್ವಾಮ್ಯ ಸ್ಟ್ರೈಕ್‌ಗಳು, ಮತ್ತು ನಿಮ್ಮ ವೀಡಿಯೊ ಸೆಟ್ಟಿಂಗ್‌ಗಳಿಗೆ ಎಡಿಟ್ ಮಾಡುವುದು ನಿಮ್ಮ ವೀಡಿಯೊದ ಮೇಲೆ ಪರಿಣಾಮ ಬೀರಬಹುದು. ನಿಮ್ಮ ವೀಡಿಯೊದ ಮೆಟಾಡೇಟಾವನ್ನು ಪ್ರಕಟಿಸಿದ ನಂತರ ಬದಲಾಯಿಸಿದರೆ ಮತ್ತು ಅದು ಆ್ಯಡ್‌ಗಳಿಗೆ ಇನ್ನು ಮುಂದೆ ಸೂಕ್ತವಾಗಿಲ್ಲದಿದ್ದರೆ, ನಿಮ್ಮ ವೀಡಿಯೊ ಪಟ್ಟಿಯಲ್ಲಿ ಹೊಸ ಮಾನಿಟೈಸೇಶನ್ ನಿರ್ಬಂಧಗಳು ಗೋಚರಿಸಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7835682439025387667
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false