ಕೃತಿಸ್ವಾಮ್ಯ ಕ್ಲೇಮ್ ಎಂದರೇನು?

ಕೃತಿಸ್ವಾಮ್ಯ ಕ್ಲೇಮ್ ಎನ್ನುವುದು ಕೃತಿಸ್ವಾಮ್ಯ ಹೊಂದಿರುವ ವೀಡಿಯೊ ತೆಗೆದುಹಾಕುವ ವಿನಂತಿ ಆಗಿದೆ ಅಥವಾ Content ID ಕ್ಲೇಮ್ ಅನ್ನು ಮಾಡಲಾಗಿದೆ ಎಂದರ್ಥ, ಅಂದರೆ ಇವುಗಳು YouTube ನಲ್ಲಿ ಹಕ್ಕುಸ್ವಾಮ್ಯ ಮಾಲೀಕತ್ವವನ್ನು ಪ್ರತಿಪಾದಿಸಲು ಇರುವ 2 ವಿಭಿನ್ನ ಮಾರ್ಗಗಳಾಗಿವೆ.

ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಗಳು ಮತ್ತು Content ID ಕ್ಲೈಮ್‌ಗಳು ಹೇಗೆ ಬೇರೆ ಬೇರೆ ಆಗಿವೆ?

ಯಾವುದೇ ಹಕ್ಕುಸ್ವಾಮ್ಯದ ಮಾಲೀಕರು ತಮ್ಮ ಕೃತಿಸ್ವಾಮ್ಯ -ಸಂರಕ್ಷಿತ ಕಂಟೆಂಟ್ ಅನ್ನು ಅವರ ಅನುಮತಿಯಿಲ್ಲದೆಯೇ YouTube ನಲ್ಲಿ ಬಳಸಿರುವುದನ್ನು ಪತ್ತೆ ಮಾಡಿದರೆ ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿ ಅನ್ನು ಸಲ್ಲಿಸಬಹುದು, ಇದನ್ನು "ತೆಗೆದುಹಾಕುವಿಕೆ ಸೂಚನೆ" ಅಥವಾ ಸರಳವಾಗಿ ಹೇಳುವುದಾದರೆ "ತೆಗೆದುಹಾಕುವಿಕೆ" ಎಂದೂ ಸಹ ಕರೆಯಲಾಗುತ್ತದೆ. ಇದು YouTube ನಿಂದ ಕೃತಿಸ್ವಾಮ್ಯ ಉಲ್ಲಂಘನೆ ಮಾಡುವ ಕಂಟೆಂಟ್ ಅನ್ನು ತೆಗೆದುಹಾಕಲು ಮಾಡುವ ಕಾನೂನು ವಿನಂತಿಯಾಗಿದೆ. ಕೆಳಗೆ ಇನ್ನಷ್ಟು ತಿಳಿಯಿರಿ.

ಕೆಲವು ಹಕ್ಕುಸ್ವಾಮ್ಯದ ಮಾಲೀಕರು Content ID ಅನ್ನು ಬಳಸುತ್ತಾರೆ, ಇದು ಕೃತಿಸ್ವಾಮ್ಯ-ಸಂರಕ್ಷಿತ ಕಂಟೆಂಟ್‌ಗಾಗಿ YouTube ಅನ್ನು ಸ್ವಯಂಚಾಲಿತವಾಗಿ ಸ್ಕ್ಯಾನ್ ಮಾಡುವ ಸಾಧನವಾಗಿದೆ. ಹೊಂದಾಣಿಕೆ ಆಗುತ್ತಿದೆ ಎಂಬುದನ್ನು Content ID ಯು ಪತ್ತೆ ಮಾಡಿದಾಗ, ಹೊಂದಾಣಿಕೆಯಾಗುವ ಕಂಟೆಂಟ್ Content ID ಕ್ಲೈಮ್ ಅನ್ನು ಪಡೆಯುತ್ತದೆ. ಹಕ್ಕುಸ್ವಾಮ್ಯದ ಮಾಲೀಕರು ಮಾಡಿರುವ Content ID ಸೆಟ್ಟಿಂಗ್‌ಗಳ ಆಧಾರದ ಮೇಲೆ ಹೊಂದಾಣಿಕೆಯಾಗುವ ಕಂಟೆಂಟ್‌ ಮೇಲೆ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. ಕೆಳಗೆ ಇನ್ನಷ್ಟು ತಿಳಿಯಿರಿ.

ಈ ವೀಡಿಯೊ ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಗಳು ಮತ್ತು Content ID ಕ್ಲೈಮ್ ನಡುವಿನ ವ್ಯತ್ಯಾಸದ ಕುರಿತಂತೆ ಇನ್ನಷ್ಟು ವಿವರಿಸುತ್ತದೆ:

ಕೃತಿಸ್ವಾಮ್ಯ ತೆಗೆದುಹಾಕುವಿಕೆಗಳು ಮತ್ತು Content ID - YouTube ನಲ್ಲಿ ಕೃತಿಸ್ವಾಮ್ಯ

ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಗಳು

ಕೃತಿಸ್ವಾಮ್ಯ ಕಾನೂನಿನ ಪ್ರಕಾರ, YouTube ನಂತಹ ಸೈಟ್‌ಗಳು ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಗಳನ್ನು ಪ್ರಕ್ರಿಯೆಗೊಳಿಸುವ ಅಗತ್ಯವಿದೆ. ತೆಗೆದುಹಾಕುವ ವಿನಂತಿಗಳು ಮಾನ್ಯವಾಗಿವೆ ಎಂದು ಪರಿಗಣಿಸಲು ಎಲ್ಲಾ ಕಾನೂನು ಅವಶ್ಯಕತೆಗಳನ್ನು ಪೂರೈಸಬೇಕು.

ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಯ ಕಾರಣದಿಂದ ನನ್ನ ಕಂಟೆಂಟ್ ಅನ್ನು ತೆಗೆದುಹಾಕಿದರೆ ಏನಾಗುತ್ತದೆ?

ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಯ ಕಾರಣದಿಂದ ನಿಮ್ಮ ಕಂಟೆಂಟ್ ಅನ್ನು ತೆಗೆದುಹಾಕಿದಾಗ, ನಿಮ್ಮ ಚಾನಲ್‌ಗೆ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ಅನ್ವಯಿಸಲಾಗುತ್ತದೆ.

ನೀವು ಹೇಗೆ ಕೃತಿಸ್ವಾಮ್ಯ ಸ್ಟ್ರೈಕ್ ಸಮಸ್ಯೆಯನ್ನು ಪರಿಹರಿಸಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಿರಿ. ಈ ಯಾವುದೇ ಆಯ್ಕೆಗಳು ನಿಮ್ಮ ಚಾನಲ್‌ನಿಂದ ಕೃತಿಸ್ವಾಮ್ಯ ಸ್ಟ್ರೈಕ್ ಅನ್ನು ತೆರವುಗೊಳಿಸುತ್ತವೆ.

Content ID ಕ್ಲೇಮ್‌ಗಳು

ಕೃತಿಸ್ವಾಮ್ಯ ಹೊಂದಿರುವ ವಿಡಿಯೋ ತೆಗೆದುಹಾಕುವ ವಿನಂತಿಗಳು ಕಾನೂನು ಕ್ರಮವಾಗಿದ್ದರೂ ಸಹ, Content IDಯು YouTube ನಿಂದ ರಚಿಸಲಾದ ಉಪಕರಣವಾಗಿದೆ. ಹೊಂದಾಣಿಕೆ ಆಗುತ್ತಿದೆ ಎಂಬುದನ್ನು Content ID ಯು ಪತ್ತೆ ಮಾಡಿದಾಗ, ಅದು ಹೊಂದಾಣಿಕೆಯಾಗುವ ಕಂಟೆಂಟ್‌ಗೆ Content ID ಕ್ಲೈಮ್ ಅನ್ನು ಅನ್ವಯಿಸುತ್ತದೆ.

ನನ್ನ ಕಂಟೆಂಟ್ Content ID ಕ್ಲೈಮ್ ಅನ್ನು ಪಡೆದರೆ ಏನಾಗುತ್ತದೆ?

ಹಕ್ಕುಸ್ವಾಮ್ಯದ ಮಾಲೀಕರು ಮಾಡಿರುವ Content ID ಸೆಟ್ಟಿಂಗ್‌ಗಳ ಆಧಾರದ ಮೇಲೆ, Content ID ಈ ಕ್ಲೈಮ್‌ಗಳನ್ನು ಮಾಡಬಹುದು:

  • ಕಂಟೆಂಟ್ ಅನ್ನು ವೀಕ್ಷಿಸುವುದನ್ನು ನಿರ್ಬಂಧಿಸಬಹುದು.
  • ಆ್ಯಡ್‌ಗಳನ್ನು ರನ್ ಮಾಡುವ ಮೂಲಕ ನಿಮ್ಮ ಕಂಟೆಂಟ್‌ನಿಂದ ಮಾನಿಟೈಸ್ ಮಾಡುವುದು ಮತ್ತು ಕೆಲವೊಮ್ಮೆ ಅಪ್‌ಲೋಡ್‌ ಮಾಡಿದವರ ಜೊತೆಗೆ ಆದಾಯವನ್ನು ಹಂಚಿಕೊಳ್ಳವುದು.
  • ಕಂಟೆಂಟ್ ಅನ್ನು ವೀಕ್ಷಿಸಿದ ವೀಕ್ಷಕರ ಅಂಕಿಅಂಶಗಳನ್ನು ಟ್ರ್ಯಾಕ್ ಮಾಡುವುದು.

ಆಯಾ ಭೌಗೋಳಿಕ ಸ್ಥಳಗಳಿಗೆ ಅನುಗುಣವಾಗಿ ಈ ಮೇಲಿನ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಬಹುದು. ಉದಾಹರಣೆಗೆ, ವೀಡಿಯೊವನ್ನು ಒಂದು ದೇಶ/ಪ್ರದೇಶದಲ್ಲಿ ಮಾನಿಟೈಸ್ ಮಾಡಬಹುದು ಮತ್ತು ಬೇರೆ ದೇಶ/ಪ್ರದೇಶದಲ್ಲಿ ನಿರ್ಬಂಧಿಸಬಹುದು ಅಥವಾ ಟ್ರ್ಯಾಕ್ ಮಾಡಬಹುದು.

ಕಂಟೆಂಟ್ ಅನ್ನು ಟ್ರ್ಯಾಕ್ ಮಾಡಿದಾಗ ಅಥವಾ ಮಾನಿಟೈಸ್ ಮಾಡಿದಾಗ, ಅದನ್ನು ಸಕ್ರಿಯವಾಗಿರುವ Content ID ಕ್ಲೈಮ್ ಜೊತೆಗೆ YouTube ನಲ್ಲಿ ವೀಕ್ಷಿಸಬಹುದಾಗಿದೆ ಎಂಬುದನ್ನು ಮರೆಯಬೇಡಿ. ಸಾಮಾನ್ಯವಾಗಿ, ಹಕ್ಕುಸ್ವಾಮ್ಯದ ಮಾಲೀಕರು ವೀಡಿಯೊಗಳನ್ನು ಟ್ರ್ಯಾಕ್ ಮಾಡಲು ಅಥವಾ ಮಾನಿಟೈಸ್ ಮಾಡಲು ಆಯ್ಕೆ ಮಾಡುತ್ತಾರೆ, ಆದರೆ ಅವುಗಳನ್ನು ನಿರ್ಬಂಧಿಸುವುದಿಲ್ಲ.

ನೀವು ಹೇಗೆ Content ID ಕ್ಲೈಮ್‌ಗೆ ಪ್ರತಿಕ್ರಿಯೆ ನೀಡಬಹುದು ಎಂಬುದರ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16995837753731306874
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false