ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಬಳಸಿ

ವೀಕ್ಷಕರಿಗೆ ಕಂಟೆಂಟ್ ಅನ್ನು ಆ್ಯಕ್ಸೆಸ್ ಆಗುವಂತೆ ಮಾಡಲು ಕ್ಯಾಪ್ಶನ್‌ಗಳು ಉತ್ತಮ ಮಾರ್ಗೋಪಾಯಗಳಾಗಿವೆ. ನಿಮ್ಮ ವೀಡಿಯೊಗಳಿಗಾಗಿ ಸ್ವಯಂಚಾಲಿತವಾಗಿ ಕ್ಯಾಪ್ಶನ್‌ಗಳನ್ನು ರಚಿಸಲು YouTube, ಧ್ವನಿ ಗುರುತಿಸುವಿಕೆ ತಂತ್ರಜ್ಞಾನವನ್ನು ಬಳಸಬಲ್ಲದು.
ಗಮನಿಸಿ: ಈ ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಮಷಿನ್ ಲರ್ನಿಂಗ್ ಅಲ್ಗಾರಿದಮ್‌ಗಳ ಮೂಲಕ ರಚಿಸಲಾಗುತ್ತದೆ, ಆದ್ದರಿಂದ ಕ್ಯಾಪ್ಶನ್‌ಗಳ ಗುಣಮಟ್ಟದಲ್ಲಿ ವ್ಯತ್ಯಾಸ ಉಂಟಾಗಬಹುದು. ರಚನೆಕಾರರಿಗೆ ಮೊದಲಿಗೆ ವೃತ್ತಿಪರ ಕ್ಯಾಪ್ಶನ್‌ಗಳನ್ನು ಸೇರಿಸಿ ಎಂದು ನಾವು ಪ್ರೋತ್ಸಾಹಿಸುತ್ತೇವೆ. YouTube ತನ್ನ ಧ್ವನಿ ಗುರುತಿಸುವಿಕೆ ತಂತ್ರಜ್ಞಾನವನ್ನು ನಿರಂತರವಾಗಿ ಸುಧಾರಿಸುತ್ತಿದೆ. ಆದರೂ, ತಪ್ಪು ಉಚ್ಚಾರಣೆಗಳು, ಆ್ಯಕ್ಸೆಂಟ್‌ಗಳು, ಸ್ಥಳೀಯ ಉಪಭಾಷೆಗಳು ಅಥವಾ ಹಿನ್ನೆಲೆ ಗದ್ದಲದಿಂದಾಗಿ ಸ್ವಯಂಚಾಲಿತ ಕ್ಯಾಪ್ಶನ್‌ಗಳು ಮಾತಿನ ಕಂಟೆಂಟ್ ಅನ್ನು ತಪ್ಪಾಗಿ ಪ್ರತಿನಿಧಿಸಬಹುದು. ನೀವು ಯಾವಾಗಲೂ ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಪರಿಶೀಲಿಸಬೇಕು ಮತ್ತು ಸರಿಯಾಗಿ ಟ್ರಾನ್ಸ್‌ಕ್ರೈಬ್ ಮಾಡಿರದ ಯಾವುದೇ ಭಾಗಗಳನ್ನು ಎಡಿಟ್ ಮಾಡಬೇಕು.

ಲಾಂಗ್-ಫಾರ್ಮ್ ವೀಡಿಯೊಗಳಲ್ಲಿ ಮತ್ತು Shorts ನಲ್ಲಿ ಸ್ವಯಂಚಾಲಿತ ಕ್ಯಾಪ್ಶನ್‌ಗಳು

ಸ್ವಯಂಚಾಲಿತ ಕ್ಯಾಪ್ಶನ್‌ಗಳು ಅರೇಬಿಕ್, ಡಚ್, ಇಂಗ್ಲಿಷ್, ಫ್ರೆಂಚ್, ಜರ್ಮನ್, ಹೀಬ್ರೂ, ಹಿಂದಿ, ಇಂಡೋನೇಷಿಯನ್, ಇಟಾಲಿಯನ್, ಜಾಪನೀಸ್, ಕೊರಿಯನ್, ಪೋರ್ಚುಗೀಸ್, ರಷ್ಯನ್, ಸ್ಪ್ಯಾನಿಷ್, ಟರ್ಕಿಶ್, ಉಕ್ರೇನಿಯನ್ ಮತ್ತು ವಿಯೆಟ್ನಾಮೀಸ್ ಭಾಷೆಗಳಲ್ಲಿ ಲಭ್ಯವಿದೆ. ಒಂದು ವೀಡಿಯೊದಲ್ಲಿ ಅನೇಕ ಭಾಷೆಗಳ ಆಡಿಯೋ ಟ್ರ್ಯಾಕ್‌ಗಳಿದ್ದರೆ, ಸ್ವಯಂಚಾಲಿತ ಕ್ಯಾಪ್ಶನ್‌ಗಳು ಡೀಫಾಲ್ಟ್ ಭಾಷೆಯಲ್ಲಿರುತ್ತವೆ.

ರಚನೆಕಾರರಿಗೆ ಮೊದಲಿಗೆ ವೃತ್ತಿಪರ ಕ್ಯಾಪ್ಶನ್‌ಗಳನ್ನು ಸೇರಿಸಿ ಎಂದು ನಾವು ಪ್ರೋತ್ಸಾಹಿಸುತ್ತೇವೆ. ಸ್ವಯಂಚಾಲಿತ ಕ್ಯಾಪ್ಶನ್‌ಗಳು ಲಭ್ಯವಿದ್ದರೆ, ಅವುಗಳನ್ನು ವೀಡಿಯೊದಲ್ಲಿ ಸ್ವಯಂಚಾಲಿತವಾಗಿ ಪ್ರಕಟಿಸಲಾಗುತ್ತದೆ. ನೀವು ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ ಸ್ವಯಂಚಾಲಿತ ಕ್ಯಾಪ್ಶನ್‌ಗಳು ಲಭ್ಯವಿಲ್ಲದಿರಬಹುದು. ಪ್ರಕ್ರಿಯೆಗೊಳಿಸುವಿಕೆ ಸಮಯವು ವೀಡಿಯೊದಲ್ಲಿರುವ ಆಡಿಯೋದ ಸಂಕೀರ್ಣತೆಯನ್ನು ಅವಲಂಬಿಸಿರುತ್ತದೆ.

YouTube ತನ್ನ ಧ್ವನಿ ಗುರುತಿಸುವಿಕೆ ತಂತ್ರಜ್ಞಾನವನ್ನು ನಿರಂತರವಾಗಿ ಸುಧಾರಿಸುತ್ತಿದೆ. ಆದರೆ, ತಪ್ಪು ಉಚ್ಚಾರಣೆಗಳು, ಆ್ಯಕ್ಸೆಂಟ್‌ಗಳು, ಸ್ಥಳೀಯ ಉಪಭಾಷೆಗಳು ಅಥವಾ ಹಿನ್ನೆಲೆ ಗದ್ದಲದಿಂದಾಗಿ ಸ್ವಯಂಚಾಲಿತ ಕ್ಯಾಪ್ಶನ್‌ಗಳು ಮಾತಿನ ಕಂಟೆಂಟ್ ಅನ್ನು ತಪ್ಪಾಗಿ ಪ್ರತಿನಿಧಿಸಬಹುದು. ಯಾವಾಗಲೂ ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಪರಿಶೀಲಿಸಿ ಮತ್ತು ಸರಿಯಾಗಿ ಟ್ರಾನ್ಸ್‌ಕ್ರೈಬ್ ಮಾಡಿರದ ಯಾವುದೇ ಭಾಗಗಳನ್ನು ಎಡಿಟ್ ಮಾಡಿ.

ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಪರಿಶೀಲಿಸುವುದು ಮತ್ತು ಅಗತ್ಯವಿದ್ದರೆ ಬದಲಾವಣೆಗಳನ್ನು ಮಾಡುವುದು ಹೇಗೆ ಎಂಬುದನ್ನು ಇಲ್ಲಿ ಕೊಡಲಾಗಿದೆ:

  1. YouTube Studioಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಸಬ್‌ಟೈಟಲ್‌ಗಳು ಎಂಬುದನ್ನು ಆಯ್ಕೆ ಮಾಡಿ.
  3. ನೀವು ಯಾವ ವೀಡಿಯೊದಲ್ಲಿ ಕ್ಯಾಪ್ಶನ್‌ಗಳು ಅಥವಾ ಸಬ್‌ಟೈಟಲ್‌ಗಳನ್ನು ಸೇರಿಸಲು ಬಯಸುತ್ತೀರೋ, ಆ ವೀಡಿಯೊವನ್ನು ಕ್ಲಿಕ್ ಮಾಡಿ.
  4. “ಸಬ್‌ಟೈಟಲ್‌ಗಳು” ಎಂಬುದರ ಅಡಿಯಲ್ಲಿ, ನೀವು ಎಡಿಟ್ ಮಾಡಲು ಬಯಸುವ ಸಬ್‌ಟೈಟಲ್‌ಗಳ ಪಕ್ಕದಲ್ಲಿ ಇನ್ನಷ್ಟು '' ಎಂಬುದನ್ನು ಕ್ಲಿಕ್ ಮಾಡಿ.
  5. ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಪರಿಶೀಲಿಸಿ ಮತ್ತು ಸರಿಯಾಗಿ ಟ್ರಾನ್ಸ್‌ಕ್ರೈಬ್ ಮಾಡಿರದ ಭಾಗಗಳನ್ನು ಎಡಿಟ್ ಮಾಡಿ ಅಥವಾ ತೆಗೆದುಹಾಕಿ.

ಸ್ವಯಂಚಾಲಿತ ಕ್ಯಾಪ್ಶನ್‌ಗಳಲ್ಲಿನ ಸಮಸ್ಯೆಗಳನ್ನು ನಿವಾರಿಸಿ

ನಿಮ್ಮ ವೀಡಿಯೊ, ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ರಚಿಸುತ್ತಿಲ್ಲ ಎಂದಾದರೆ, ಈ ಕೆಳಗಿನ ಒಂದು ಅಥವಾ ಅದಕ್ಕಿಂತ ಹೆಚ್ಚು ಸಂಗತಿಗಳು ಅದಕ್ಕೆ ಕಾರಣವಾಗಿರಬಹುದು:

  • ವೀಡಿಯೊದಲ್ಲಿ ಸಂಕೀರ್ಣ ಆಡಿಯೋದ ಪ್ರಕ್ರಿಯೆಗೊಳಿಸುವಿಕೆಯಿಂದಾಗಿ ಕ್ಯಾಪ್ಶನ್‌ಗಳು ಇನ್ನೂ ಲಭ್ಯವಿಲ್ಲ.
  • ಸ್ವಯಂಚಾಲಿತ ಕ್ಯಾಪ್ಶನ್‌ಗಳು ವೀಡಿಯೊದಲ್ಲಿರುವ ಭಾಷೆಯನ್ನು ಬೆಂಬಲಿಸುತ್ತಿಲ್ಲ.
  • ವೀಡಿಯೊ ತೀರಾ ದೀರ್ಘ ಸಮಯದ್ದಾಗಿದೆ.
  • ವೀಡಿಯೊ, ಕಳಪೆ ಸೌಂಡ್ ಗುಣಮಟ್ಟವನ್ನು ಹೊಂದಿದೆ ಅಥವಾ YouTube, ಮಾತನ್ನು ಗುರುತಿಸುತ್ತಿಲ್ಲ.
  • ವೀಡಿಯೊದ ಪ್ರಾರಂಭದಲ್ಲಿ, ದೀರ್ಘ ಕಾಲ ನಿಶ್ಶಬ್ದವಿದೆ.
  • ಒಂದೇ ಸಮಯದಲ್ಲಿ ಅನೇಕ ಜನರು ಮಾತನಾಡುತ್ತಿದ್ದಾರೆ ಮತ್ತು ಅವರ ಮಾತುಗಳು ಓವರ್‌ಲ್ಯಾಪ್ ಆಗುತ್ತಿವೆ ಅಥವಾ ಅನೇಕ ಭಾಷೆಗಳಿವೆ.
ಲೈವ್ ಸ್ಟ್ರೀಮ್ ವೀಡಿಯೊಗಳಲ್ಲಿ ಸ್ವಯಂಚಾಲಿತ ಕ್ಯಾಪ್ಶನ್‌ಗಳು
ಗಮನಿಸಿ: ಲೈವ್ ಸ್ಟ್ರೀಮ್‌ಗಳಿಗಾಗಿ ಸ್ವಯಂಚಾಲಿತ ಕ್ಯಾಪ್ಶನ್‌ಗಳು ಇಂಗ್ಲಿಷ್‌ನಲ್ಲಿ ಮಾತ್ರ ಲಭ್ಯವಿವೆ. ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಪ್ರತ್ಯೇಕ ಲೈವ್ ಸ್ಟ್ರೀಮ್‌ಗಳಲ್ಲಿ ಮಾತ್ರ ಆನ್ ಮಾಡಬಹುದೇ ಹೊರತು ಸಂಪೂರ್ಣ ಚಾನಲ್‌ನಲ್ಲಲ್ಲ.

ಲೈವ್ ಸ್ಟ್ರೀಮ್‌ಗಳಿಗಾಗಿ ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಪ್ರಸ್ತುತ, ಇಂಗ್ಲಿಷ್ ಚಾನಲ್‌ಗಳಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಚಾನಲ್‌ಗಳು, "ಸಾಮಾನ್ಯ ವಿಳಂಬದೊಂದಿಗೆ" ಸ್ಟ್ರೀಮ್ ಮಾಡುತ್ತವೆ ಮತ್ತು ವೃತ್ತಿಪರ ಕ್ಯಾಪ್ಶನ್‌ಗಳು ಅಲಭ್ಯವಾಗಿವೆ. ರಚನೆಕಾರರು ಮೊದಲಿಗೆ ವೃತ್ತಿಪರ ಕ್ಯಾಪ್ಶನ್‌ಗಳನ್ನು ಬಳಸಲು ನಾವು ಪ್ರೋತ್ಸಾಹಿಸುತ್ತೇವೆ. ಲೈವ್ ಕ್ಯಾಪ್ಶನ್‌ನ ಅವಶ್ಯಕತೆಗಳ ಕುರಿತು ತಿಳಿದುಕೊಳ್ಳಿ.

ಲೈವ್ ಸ್ಟ್ರೀಮ್ ಮುಕ್ತಾಯವಾದ ಬಳಿಕ, ಲೈವ್ ಸ್ವಯಂಚಾಲಿತ ಕ್ಯಾಪ್ಶನ್‌ಗಳು ವೀಡಿಯೊದಲ್ಲಿ ಉಳಿಯುವುದಿಲ್ಲ. VOD ಪ್ರಕ್ರಿಯೆಯ ಆಧಾರದಲ್ಲಿ ಹೊಸ, ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ರಚಿಸಲಾಗುತ್ತದೆ, ಮತ್ತು ಲೈವ್ ಸ್ಟ್ರೀಮ್‌ನ ಸಂದರ್ಭದಲ್ಲಿ ಕಾಣಿಸಿಕೊಳ್ಳುವವುಗಳಿಗಿಂತ ಇವು ಭಿನ್ನವಾಗಿರಬಹುದು.

ಲೈವ್ ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಸೆಟ್ ಅಪ್ ಮಾಡಿ

ನೀವು ಲೈವ್ ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ಹೇಗೆ ಆನ್ ಮಾಡಬಹುದು ಎಂಬುದು ಇಲ್ಲಿದೆ (ಇಂಗ್ಲಿಷ್ ಮಾತ್ರ):

  1. YouTube ಗೆ ಹೋಗಿ.
  2. ಮೇಲೆ ಬಲಭಾಗದಲ್ಲಿ, ರಚಿಸಿ  ನಂತರ ಲೈವ್‌ಗೆ ಹೋಗಿ ಎಂಬುದನ್ನು ಕ್ಲಿಕ್ ಮಾಡಿ.
  3. ಎಡಭಾಗದ ಮೆನುವಿನಿಂದ ಸ್ಟ್ರೀಮ್ ಮಾಡಿ  ಎಂಬುದನ್ನು ಆಯ್ಕೆ ಮಾಡಿ.
  4. ಸ್ಟ್ರೀಮ್‌ನ ಸೆಟ್ಟಿಂಗ್‌ಗಳ ಒಳಗೆ, ಕ್ಲೋಸ್ಡ್ ಕ್ಯಾಪ್ಶನ್‌ಗಳು ಎಂಬುದನ್ನು ಆನ್ ಮಾಡಿ.
  5. ಕ್ಯಾಪ್ಶನ್‌ಗಳ ಮೂಲವಾಗಿ “ಸ್ವಯಂಚಾಲಿತ ಕ್ಯಾಪ್ಶನ್‌ಗಳು” ಎಂಬುದನ್ನು ಆಯ್ಕೆ ಮಾಡಿ.
  6. ನಿಮ್ಮ ವೀಡಿಯೊ ಭಾಷೆಯನ್ನು ಆಯ್ಕೆಮಾಡಿ (ಇಂಗ್ಲಿಷ್ ಮಾತ್ರ).

ಲೈವ್ ಸ್ವಯಂಚಾಲಿತ ಕ್ಯಾಪ್ಶನ್‌ಗಳಲ್ಲಿನ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಿ

ಲೈವ್ ಸ್ಟ್ರೀಮ್, ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ತೋರಿಸುತ್ತಿಲ್ಲ ಎಂದಾದರೆ, ಈ ಕೆಳಗಿನ ಒಂದು ಅಥವಾ ಅದಕ್ಕಿಂತ ಹೆಚ್ಚು ಸಂಗತಿಗಳು ಅದಕ್ಕೆ ಕಾರಣವಾಗಿರಬಹುದು:

  • 1,000 ಕ್ಕಿಂತ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಚಾನಲ್‌ಗಳಿಗೆ ನಾವು ಈ ಫೀಚರ್ ಅನ್ನು ನಿಧಾನವಾಗಿ ಬಿಡುಗಡೆ ಮಾಡುತ್ತಿರುವ ಕಾರಣ, ಈ ಚಾನಲ್‌ಗಾಗಿ ಫೀಚರ್ ಅನ್ನು ಇನ್ನೂ ಆನ್ ಮಾಡಿಲ್ಲ.
  • ಚಾನಲ್, ತೀರಾ ಕಡಿಮೆ ವಿಳಂಬ ಅಥವಾ ಕಡಿಮೆ ವಿಳಂಬದಲ್ಲಿ ಸ್ಟ್ರೀಮ್ ಆಗುತ್ತಿದೆ (ಮೊಬೈಲ್ ಲೈವ್ ಸ್ಟ್ರೀಮ್‌ನ ಹಾಗೆ). ಲೈವ್ ಸ್ವಯಂಚಾಲಿತ ಕ್ಯಾಪ್ಶನ್‌ಗಳು ಸಾಮಾನ್ಯ ವಿಳಂಬದ ಸ್ಟ್ರೀಮಿಂಗ್‌ಗಾಗಿ ಮಾತ್ರ ಲಭ್ಯವಿವೆ.
  • ಸ್ವಯಂಚಾಲಿತ ಕ್ಯಾಪ್ಶನ್‌ಗಳು ವೀಡಿಯೊದಲ್ಲಿರುವ ಭಾಷೆಯನ್ನು ಬೆಂಬಲಿಸುತ್ತಿಲ್ಲ.
  • ವೀಡಿಯೊ, ಕಳಪೆ ಸೌಂಡ್ ಗುಣಮಟ್ಟವನ್ನು ಹೊಂದಿದೆ ಅಥವಾ YouTube, ಮಾತನ್ನು ಗುರುತಿಸುತ್ತಿಲ್ಲ.
  • ಒಂದೇ ಸಮಯದಲ್ಲಿ ಅನೇಕ ಜನರು ಮಾತನಾಡುತ್ತಿದ್ದಾರೆ ಮತ್ತು ಅವರ ಮಾತುಗಳು ಓವರ್‌ಲ್ಯಾಪ್ ಆಗುತ್ತಿವೆ ಅಥವಾ ಅನೇಕ ಭಾಷೆಗಳಿವೆ.
ಗಮನಿಸಿ: ನಿಮ್ಮ ಲೈವ್ ಸ್ಟ್ರೀಮ್‌ಗಳಲ್ಲಿ ಸ್ವಯಂಚಾಲಿತ ಕ್ಯಾಪ್ಶನ್‌ಗಳನ್ನು ತೋರಿಸುವುದನ್ನು ತಡೆಗಟ್ಟಲು, ರಚನೆಕಾರರ ಬೆಂಬಲ ತಂಡವನ್ನು ಸಂಪರ್ಕಿಸಿ.

ಸ್ವಯಂಚಾಲಿತ ಕ್ಯಾಪ್ಶನ್‌ಗಳಿಗೆ ಸಂಬಂಧಿಸಿದ ಸುಧಾರಿತ ಸೆಟ್ಟಿಂಗ್‌ಗಳು

ಸ್ವಯಂಚಾಲಿತ ಕ್ಯಾಪ್ಶನ್‌ಗಳಲ್ಲಿ ಸಂಭಾವ್ಯವಾಗಿ ಅನುಚಿತವಾದ ಪದಗಳು

YouTube Studio ದಲ್ಲಿ “ಸಂಭಾವ್ಯವಾಗಿ ಅನುಚಿತವಾದ ಪದಗಳನ್ನು ತೋರಿಸಬೇಡಿ” ಎಂಬ ಸೆಟ್ಟಿಂಗ್, ಸ್ವಯಂಚಾಲಿತ ಕ್ಯಾಪ್ಶನ್‌ಗಳಲ್ಲಿ ಸಂಭಾವ್ಯವಾಗಿ ಅನುಚಿತವಾದ ಪದಗಳನ್ನು ಡೀಫಾಲ್ಟ್ ಆಗಿ ಓಪನ್ ಬ್ರ್ಯಾಕೆಟ್, ಎರಡು ಅಂಡರ್‌ಸ್ಕೋರ್‌ಗಳು ಮತ್ತು ಕ್ಲೋಸಿಂಗ್ ಬ್ರ್ಯಾಕೆಟ್‌ನೊಂದಿಗೆ “[ __ ]” ಬದಲಿಸುತ್ತದೆ. ಈ ಸೆಟ್ಟಿಂಗ್, ಯಾವುದೇ ಆಡಿಯೋ ಟ್ರ್ಯಾಕ್‌ಗಳು ಅಥವಾ ಹಸ್ತಚಾಲಿತವಾಗಿ ಎಡಿಟ್ ಮಾಡಲಾದ ಕ್ಯಾಪ್ಶನ್‌ಗಳ ಮೇಲೆ ಪ್ರಭಾವ ಬೀರುವುದಿಲ್ಲ. ಸಂಭಾವ್ಯವಾಗಿ ಅನುಚಿತವಾದ ಪದಗಳು ಆಕಸ್ಮಿಕವಾಗಿ ಸ್ವಯಂಚಾಲಿತ ಕ್ಯಾಪ್ಶನ್‌ಗಳಲ್ಲಿ ಕಾಣಿಸಿಕೊಳ್ಳುವುದನ್ನು ತಪ್ಪಿಸಲು ಸಹಾಯ ಮಾಡುವುದು ಇದರ ಉದ್ದೇಶವಾಗಿದೆ. ಇದು ನಿಮ್ಮ ವೀಡಿಯೊದ ಮಾನಿಟೈಸೇಶನ್ ಸ್ಥಿತಿಯ ಮೇಲೆಯೂ ಪ್ರಭಾವ ಬೀರುವುದಿಲ್ಲ.

ಸ್ವಯಂಚಾಲಿತ ಕ್ಯಾಪ್ಶನ್‌ಗಳು, ಅಪ್‌ಲೋಡ್ ಮಾಡಲಾದ ವೀಡಿಯೊಗಳು ಹಾಗೂ ಲೈವ್ ಸ್ಟ್ರೀಮ್‌ಗಳಿಗೆ ಅನ್ವಯಿಸುತ್ತವೆ.

ನಮ್ಮ ಧ್ವನಿ ಗುರುತಿಸುವಿಕೆ ಸಾಫ್ಟ್‌ವೇರ್ ಅನ್ನು ನಾವು ಸುಧಾರಿಸುವುದನ್ನು ಮತ್ತು ಸ್ವಯಂಚಾಲಿತ ಕ್ಯಾಪ್ಶನ್‌ಗಳಲ್ಲಿ ದೋಷಗಳನ್ನು ಕಡಿಮೆಗೊಳಿಸುವುದನ್ನು ಮುಂದುವರಿಸುತ್ತಾ ಹೋದಂತೆ, ಸ್ವಯಂಚಾಲಿತವಾಗಿ ರಚಿಸಲಾದ ತಮ್ಮ ಎಲ್ಲಾ ಕ್ಯಾಪ್ಶನ್‌ಗಳನ್ನು ರಚನೆಕಾರರು ಪರಿಶೀಲಿಸಬೇಕೆಂದು ನಾವು ಈಗಲೂ ಪ್ರೋತ್ಸಾಹಿಸುತ್ತೇವೆ.

ಅಗತ್ಯವಿದ್ದರೆ, “ಸಂಭಾವ್ಯವಾಗಿ ಅನುಚಿತವಾದ ಪದಗಳನ್ನು ತೋರಿಸಬೇಡಿ” ಸೆಟ್ಟಿಂಗ್ ಅನ್ನು ನೀವು ಹೀಗೆ ಆಫ್ ಮಾಡಬಹುದು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  3. ಚಾನಲ್ ನಂತರ ಸುಧಾರಿತ ಸೆಟ್ಟಿಂಗ್‌ಗಳು ಎಂಬುದನ್ನು ಆಯ್ಕೆ ಮಾಡಿ.
  4. "ಸ್ವಯಂಚಾಲಿತವಾಗಿ ರಚಿಸಲಾದ ಕ್ಯಾಪ್ಶನ್‌ಗಳು" ಎಂಬುದರ ಅಡಿಯಲ್ಲಿ ಸಂಭಾವ್ಯವಾಗಿ ಅನುಚಿತವಾದ ಪದಗಳನ್ನು ತೋರಿಸಬೇಡಿ ಎಂಬುದರ ಆಯ್ಕೆಯನ್ನು ರದ್ದುಗೊಳಿಸಿ.
ಗಮನಿಸಿ: ಈ ಸೆಟ್ಟಿಂಗ್, ಸ್ವಯಂಚಾಲಿತ ಕ್ಯಾಪ್ಶನ್‌ಗಳು ಹಾಗೂ ಸ್ವಯಂಚಾಲಿತವಾಗಿ ಅನುವಾದಿಸಲಾದ ಸಬ್‌ಟೈಟಲ್‌ಗಳಿಗೆ ಲಭ್ಯವಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4989220636432198093
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false