ಕ್ಲೇಮ್ ಮಾಡಿದ ಸಂಗೀತದ ಮೇಲೆ ನಿರ್ಬಂಧಗಳು

ತಮ್ಮ ಸಂಗೀತವನ್ನು YouTube ನಲ್ಲಿ ಹೇಗೆ ಬಳಸಬೇಕು ಎಂಬುದನ್ನು ಕೃತಿಸ್ವಾಮ್ಯ ಹೊಂದಿರುವವರು ನಿರ್ಧರಿಸುತ್ತಾರೆ. ಕೃತಿಸ್ವಾಮ್ಯ ಹೊಂದಿರುವವರ ನೀತಿಗಳು, ನಿಮ್ಮ ವೀಡಿಯೊವನ್ನು ಲಭ್ಯಗೊಳಿಸಲಾಗುತ್ತದೆಯೇ ಮತ್ತು ಹೇಗೆ ಲಭ್ಯಗೊಳಿಸಲಾಗುತ್ತದೆ ಎಂಬುದರ ಮೇಲೆ ಪ್ರಭಾವ ಬೀರುತ್ತವೆ. ನಿಮ್ಮ ವೀಡಿಯೊದಲ್ಲಿ ನೀವು ಸಂಗೀತವನ್ನು ಬಳಸಿದರೆ, ನೀವು ಕೃತಿಸ್ವಾಮ್ಯಕ್ಕೊಳಪಟ್ಟ ಕಂಟೆಂಟ್ ಅನ್ನು ಬಳಸಿದ್ದೀರಿ ಎಂದು ತಿಳಿಸುವ Content ID ಕ್ಲೇಮ್‌ ಅನ್ನು ನೀವು ಪಡೆಯಬಹುದು.

ಪ್ರತಿಯೊಂದು ನೀತಿಯ ಅರ್ಥ ಹೀಗಿದೆ:

  • ಮಾನಿಟೈಸ್ ಮಾಡಿ: ಕೃತಿಸ್ವಾಮ್ಯ ಹೊಂದಿರುವವರು ಈ ಸಂಗೀತವನ್ನು ಮಾನಿಟೈಸ್ ಮಾಡಲು ಆಯ್ಕೆ ಮಾಡಿದ್ದಾರೆ, ಆದ್ದರಿಂದ ನಿಮ್ಮ ವೀಡಿಯೊದಲ್ಲಿ ಆ್ಯಡ್‌ಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ, ಕೃತಿಸ್ವಾಮ್ಯ ಹೊಂದಿರುವವರು ನಿಮ್ಮೊಂದಿಗೆ ಆ ಆದಾಯದಲ್ಲಿ ಒಂದಿಷ್ಟು ಪಾಲನ್ನು ಹಂಚಿಕೊಳ್ಳಲು ಆಯ್ಕೆ ಮಾಡಬಹುದು. ಈ ನೀತಿಯನ್ನು ಅನ್ವಯಿಸಿದರೂ ಸಹ, ಎಲ್ಲಾ ಕಡೆಗಳಲ್ಲಿ ಅಥವಾ ಎಲ್ಲಾ ಸಾಧನಗಳಲ್ಲಿ ವೀಡಿಯೊ ಲಭ್ಯವಿಲ್ಲದಿರಬಹುದು.
  • ಪ್ರಪಂಚದಾದ್ಯಂತ ನಿರ್ಬಂಧಿಸಿ: ಕೃತಿಸ್ವಾಮ್ಯ ಹೊಂದಿರುವ ಒಬ್ಬರು ಅಥವಾ ಹೆಚ್ಚು ಜನರು, YouTube ನಲ್ಲಿ ಈ ಸಂಗೀತವನ್ನು ಬಳಸಲು ಅನುಮತಿ ನೀಡುತ್ತಿಲ್ಲ. ನೀವು ಈ ಸಂಗೀತವನ್ನು ಬಳಸಿದರೆ, ನಿಮ್ಮ ವೀಡಿಯೊವನ್ನು ಮ್ಯೂಟ್ ಮಾಡಬಹುದು ಅಥವಾ ಅದು YouTube ನಲ್ಲಿ ಸಂಪೂರ್ಣವಾಗಿ ಅಲಭ್ಯವಾಗಬಹುದು.
  • ಕೆಲವು ದೇಶಗಳಲ್ಲಿ/ಪ್ರದೇಶಗಳಲ್ಲಿ ನಿರ್ಬಂಧಿಸಿ: ಕೃತಿಸ್ವಾಮ್ಯ ಹೊಂದಿರುವ ಒಬ್ಬರು ಅಥವಾ ಹೆಚ್ಚು ಜನರು YouTube ನಲ್ಲಿ ಈ ಸಂಗೀತವು ಲಭ್ಯವಿರುವ ದೇಶಗಳನ್ನು/ಪ್ರದೇಶಗಳನ್ನು ಸೀಮಿತಗೊಳಿಸಿದ್ದಾರೆ. ನೀವು ಈ ಸಂಗೀತವನ್ನು ಬಳಸಿದರೆ, YouTube ನಲ್ಲಿ ಈ ಸಂಗೀತವನ್ನು ನಿರ್ಬಂಧಿಸಿರುವ ಪ್ರದೇಶದಲ್ಲಿ ನಿಮ್ಮ ವೀಡಿಯೊವನ್ನು ವೀಕ್ಷಿಸಲು ಸಾಧ್ಯವಾಗುವುದಿಲ್ಲ.

ಗಮನಿಸಿ: ಕೃತಿಸ್ವಾಮ್ಯ ಹೊಂದಿರುವವರು ನಿರ್ದಿಷ್ಟ ಸಂದರ್ಭಗಳಲ್ಲಿ ತಮ್ಮ ನೀತಿಗಳನ್ನು ಬದಲಾಯಿಸಬಹುದು ಮತ್ತು ಕೃತಿಸ್ವಾಮ್ಯ ತೆಗೆದುಹಾಕುವಿಕೆ ಸೂಚನೆಗಳನ್ನು ಜಾರಿಗೊಳಿಸಬಹುದು. ಭವಿಷ್ಯದಲ್ಲಿ ನಿಮ್ಮ ವೀಡಿಯೊದ ಸ್ಥಿತಿ ಬದಲಾಗಬಹುದು ಮತ್ತು ಅದನ್ನು YouTube ನಿಂದ ತೆಗೆದುಹಾಕಲೂಬಹುದು. ನಿಮ್ಮ ಪ್ರತ್ಯೇಕ ಪ್ರಕರಣದಲ್ಲಿ ಹಕ್ಕುಸ್ವಾಮ್ಯದ ಮಾಲೀಕರು ಬೇರೆ ನಿರ್ಧಾರವನ್ನು ಕೈಗೊಂಡಾಗ ತೆಗೆದುಹಾಕುವಿಕೆ ಸಂಭವಿಸಬಹುದು. ನಿಮ್ಮ ವೀಡಿಯೊದಲ್ಲಿರುವ ಸಂಗೀತಕ್ಕೆ ಅನ್ವಯಿಸುವ ನೀತಿಯಲ್ಲಿನ ಬದಲಾವಣೆಗಳು ಸಹ ತೆಗೆದುಹಾಕುವಿಕೆಯನ್ನು ಉಂಟುಮಾಡಬಹುದು. Content ID ಬಗ್ಗೆ ಇನ್ನಷ್ಟು ತಿಳಿಯಿರಿ.

ಈ ನೀತಿಗಳು YouTube ಪ್ಲ್ಯಾಟ್‌ಫಾರ್ಮ್‌ನಾಚೆಗೆ ಅನ್ವಯಿಸುವುದಿಲ್ಲ. ನೀವು ಒಂದು ಸಂಪೂರ್ಣ ಆಲ್ಬಮ್ ಅನ್ನು ಅಥವಾ ಒಂದು ಆಲ್ಬಮ್‌ನ ಬಹುತೇಕ ಭಾಗವನ್ನು ಅಪ್‌ಲೋಡ್ ಮಾಡಿದ್ದೀರಿ ಎಂದು ನಾವು ಭಾವಿಸಿದಾಗ ನೀತಿಗಳು ಬದಲಾಗಬಹುದು. ಸಂಗೀತವನ್ನು ನೀವು ಬಳಸುವುದರ ಕುರಿತು ನಿಮ್ಮಲ್ಲಿ ಪ್ರಶ್ನೆಗಳಿದ್ದರೆ, ಅರ್ಹ ವಕೀಲರೊಂದಿಗೆ ಸಮಾಲೋಚಿಸಲು ನೀವು ಬಯಸಬಹುದು.

ಬೇರೊಬ್ಬರ ಕಂಟೆಂಟ್ ಅನ್ನು ಬಳಸಲು ಅನುಮತಿ ಪಡೆಯಿರಿ

ನಿಮ್ಮ ವೀಡಿಯೊದಲ್ಲಿ ನೀವು ಕೃತಿಸ್ವಾಮ್ಯ-ಸಂರಕ್ಷಿತ ಸಾಮಗ್ರಿಯನ್ನು ಸೇರಿಸಲು ಯೋಜಿಸುತ್ತಿದ್ದರೆ, ಹಾಗೆ ಮಾಡಲು ಸಾಮಾನ್ಯವಾಗಿ ನೀವು ಮೊದಲಿಗೆ ಅನುಮತಿ ಪಡೆಯಬೇಕಾಗುತ್ತದೆ. ಈ ಹಕ್ಕುಗಳನ್ನು YouTube ನಿಮಗೆ ಒದಗಿಸಲು ಸಾಧ್ಯವಿಲ್ಲ. ಅವುಗಳನ್ನು ನಿಮಗೆ ನೀಡಬಹುದಾದ ಪಾರ್ಟಿಗಳನ್ನು ಹುಡುಕಲು ಮತ್ತು ಸಂಪರ್ಕಿಸಲು ರಚನೆಕಾರರಿಗೆ ನೆರವು ನೀಡಲು ನಮಗೆ ಸಾಧ್ಯವಾಗುವುದಿಲ್ಲ. ಕೃತಿಸ್ವಾಮ್ಯ-ಸಂರಕ್ಷಿತ ಸಾಮಗ್ರಿಯ ಬಳಕೆಯ ಕುರಿತು ನೀವು ಪ್ರಶ್ನೆಗಳನ್ನು ಹೊಂದಿದ್ದರೆ, ನೀವು ಅರ್ಹ ವಕೀಲರ ಜೊತೆ ಸಮಾಲೋಚಿಸಲು ಬಯಸಬಹುದು.

YouTube ನ ಆಡಿಯೋ ಲೈಬ್ರರಿಯು ರಾಯಲ್ಟಿ-ಫ್ರೀ ಸಂಗೀತವನ್ನು ಹೊಂದಿದೆ ಮತ್ತು ರಚನೆಕಾರರು ಇವುಗಳನ್ನು ತಮ್ಮ YouTube ವೀಡಿಯೊಗಳಲ್ಲಿ ಬಳಸಿಕೊಳ್ಳಬಹುದು.
 

Options for using music in your videos

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14093049670824317869
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false