ಬಹು-ಚಾನಲ್ ನೆಟ್‌ವರ್ಕ್ (MCN) ಕಾರ್ಯಾಚರಣೆಗಳ ಕೈಪಿಡಿ

ನಿಮ್ಮ MCN ನಿಂದ ಚಾನಲ್‌ಗಳನ್ನು ಬಿಡುಗಡೆ ಮಾಡಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ನಿಮ್ಮ ನೆಟ್‌ವರ್ಕ್‌ನಿಂದ ಚಾನಲ್ ಅನ್ನು ತೆಗೆದುಹಾಕಿ

ಬಹು-ಚಾನಲ್ ನೆಟ್‌ವರ್ಕ್‌ಗಳು (MCN ಗಳು), ಈ ಹಂತಗಳನ್ನು ಬಳಸಿಕೊಂಡು ತಮ್ಮ ನೆಟ್‌ವರ್ಕ್‌ನಿಂದ ಚಾನಲ್‌ಗಳನ್ನು ಬಿಡುಗಡೆ ಮಾಡಬಹುದು:

  1. Studio ಕಂಟೆಂಟ್ ಮ್ಯಾನೇಜರ್‌ಗೆ ಸೈನ್ ಇನ್ ಮಾಡಿ.
  2. ಎಡಬದಿಯ ಮೆನುವಿನಿಂದ, ಚಾನಲ್‌ಗಳು  ಎಂಬುದನ್ನು ಆಯ್ಕೆಮಾಡಿ.
  3. ನೀವು ಬಿಡುಗಡೆ ಮಾಡಲು ಬಯಸುವ ಚಾನಲ್ ಅನ್ನು ಹುಡುಕಿ ಮತ್ತು ಅದನ್ನು ಆಯ್ಕೆಮಾಡಿ.
  4. ಲಿಂಕ್ ರದ್ದುಮಾಡಿ ನಂತರ ಖಚಿತಪಡಿಸಿ ಎಂಬುದನ್ನು ಕ್ಲಿಕ್ ಮಾಡಿ.

MCN ನೆಟ್‌ವರ್ಕ್ ಅನ್ನು ತೊರೆಯಲು ವಿನಂತಿಸಿ

ನೀವು ಅಫಿಲಿಯೇಟ್ ಕ್ರಿಯೇಟರ್ ಆಗಿದ್ದರೆ ಮತ್ತು ನಿಮ್ಮ MCN ಜೊತೆಗಿನ ನಿಮ್ಮ ಒಪ್ಪಂದವು ಹಾಗೆ ಮಾಡಲು ನಿಮಗೆ ಅನುಮತಿಸುತ್ತದೆ ಎಂದು ನಿಮಗೆ ಅನಿಸಿದರೆ, ನಿಮ್ಮ ಚಾನಲ್‌ನಿಂದ MCN ಆ್ಯಕ್ಸೆಸ್ ಅನ್ನು ತೆಗೆದುಹಾಕಲು ನೀವು ವಿನಂತಿಸಬಹುದು.

ಕ್ಲೈಮ್‌ಗಳ ಮೇಲಾಗುವ ಪ್ರಭಾವವನ್ನು ಅರ್ಥಮಾಡಿಕೊಳ್ಳಿ

ಚಾನಲ್ MCN ನಿಂದ ಹೊರಬರುವ ಮೊದಲು ಸ್ವತ್ತು ಮಾಲೀಕತ್ವದ ಮಾಹಿತಿಯನ್ನು ಅಪ್‌ಡೇಟ್ ಮಾಡಲಾಗಿದೆಯೇ ಎಂಬುದರ ಆಧಾರದ ಮೇಲೆ, ಚಾನಲ್‌ನ ಸ್ವತ್ತುಗಳಿಂದ ರಚಿಸಲಾದ ಕ್ಲೈಮ್‌ಗಳನ್ನು ಬಿಡುಗಡೆ ಮಾಡಬಹುದು:

  • ಲಿಂಕ್ ರದ್ದುಮಾಡುವ ಮೊದಲು ಸ್ವತ್ತಿನ ಮಾಲೀಕತ್ವವನ್ನು ಹೊಸ ಕಂಟೆಂಟ್ ಮ್ಯಾನೇಜರ್‌ಗೆ ವರ್ಗಾಯಿಸಿದರೆ, ಎಲ್ಲಾ ಕ್ಲೈಮ್‌ಗಳು ಸಕ್ರಿಯವಾಗಿರುತ್ತವೆ.
  • ಲಿಂಕ್ ರದ್ದುಮಾಡುವ ಮೊದಲು ಸ್ವತ್ತಿನ ಮಾಲೀಕತ್ವವನ್ನು ತೆಗೆದುಹಾಕಿದರೆ, ಬಳಕೆದಾರರು ರಚಿಸಿದ ವೀಡಿಯೊಗಳು ಮತ್ತು ನೀವು ಲಿಂಕ್ ರದ್ದುಮಾಡುತ್ತಿರುವ ಚಾನಲ್ ಅಪ್‌ಲೋಡ್ ಮಾಡಿದ ವೀಡಿಯೊಗಳ ಮೇಲಿನ ಕ್ಲೈಮ್‌ಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. 
  • ಲಿಂಕ್ ರದ್ದುಮಾಡುವ ಮೊದಲು ಸ್ವತ್ತಿನ ಮಾಲೀಕತ್ವವನ್ನು ಎಡಿಟ್ ಮಾಡಿರದಿದ್ದರೆ, ಬಳಕೆದಾರರು ರಚಿಸಿದ ವೀಡಿಯೊಗಳ ಮೇಲಿನ ಕ್ಲೈಮ್‌ಗಳು ಸಕ್ರಿಯವಾಗಿರುತ್ತವೆ. ಆ ಸ್ವತ್ತುಗಳೊಂದಿಗೆ ಸಂಯೋಜಿತವಾಗಿರುವ ಉಲ್ಲೇಖಿತ ಫೈಲ್ ಅನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ನೀವು ಲಿಂಕ್ ರದ್ದುಮಾಡುತ್ತಿರುವ ಚಾನಲ್‌ನಿಂದ ಅಪ್‌ಲೋಡ್ ಮಾಡಲಾದ ವೀಡಿಯೊಗಳ ಮೇಲಿನ ಎಲ್ಲಾ ಕ್ಲೈಮ್‌ಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಕಂಟೆಂಟ್ ಮ್ಯಾನೇಜರ್‌ನಿಂದ ಚಾನಲ್‌ಗಳನ್ನು ಲಿಂಕ್ ರದ್ದುಮಾಡುವ ಕುರಿತು ಇನ್ನಷ್ಟು ತಿಳಿಯಿರಿ.

ಗಮನಿಸಿ: ಕೆಲವು ಸಂದರ್ಭಗಳಲ್ಲಿ, ನಿಮ್ಮ MCN ನಿಂದ ಬಿಡುಗಡೆಯಾದ ಚಾನಲ್‌ಗಳು ಮತ್ತು ಕಂಟೆಂಟ್ ಮ್ಯಾನೇಜರ್‌ಗಳ ನಡುವೆ ವರ್ಗಾಯಿಸಲಾದ ಚಾನಲ್‌ಗಳು ನಿಮ್ಮ ನೆಟ್‌ವರ್ಕ್‌ನ ಭಾಗವಾಗಿದ್ದ ಸಮಯದಿಂದ ಐತಿಹಾಸಿಕ ಆದಾಯದ ಡೇಟಾವನ್ನು ಕಳೆದುಕೊಳ್ಳುತ್ತವೆ. ಚಾನಲ್‌ಗಳನ್ನು ಬಿಡುಗಡೆ ಮಾಡುವ ಅಥವಾ ವರ್ಗಾಯಿಸುವ ಮೊದಲು ಅವುಗಳು ಆದಾಯದ ಡೇಟಾವನ್ನು ಡೌನ್‌ಲೋಡ್ ಮಾಡಲು ಅಥವಾ ರೆಕಾರ್ಡ್ ಮಾಡಲು ಬಯಸಬಹುದು. ಚಾನಲ್ ಮಾಲೀಕತ್ವವನ್ನು ವರ್ಗಾಯಿಸಿದ ನಂತರ ವರದಿ ಮಾಡುವಿಕೆಯಲ್ಲಿನ ಬದಲಾವಣೆಗಳ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
3417509340988804957
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false