YouTube ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಮತ್ತು ಕಲಾತ್ಮಕ (EDSA) ಕಂಟೆಂಟ್ ಅನ್ನು ಹೇಗೆ ಮೌಲ್ಯಮಾಪನ ಮಾಡುತ್ತದೆ

YouTube ಅನ್ನು ಸುರಕ್ಷಿತ ಸಮುದಾಯವಾಗಿಸುವುದೇ ನಮ್ಮ ಸಮುದಾಯ ಮಾರ್ಗಸೂಚಿಗಳ ಗುರಿಯಾಗಿದೆ. ಕೆಲವೊಮ್ಮೆ, ಅನ್ಯಥಾ ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುವ ಕಂಟೆಂಟ್, ಶೈಕ್ಷಣಿಕ, ಡಾಕ್ಯುಮೆಂಟರಿ, ವೈಜ್ಞಾನಿಕ ಅಥವಾ ಕಲಾತ್ಮಕ (EDSA) ಸಂದರ್ಭವನ್ನು ಹೊಂದಿದ್ದರೆ, ಅದು YouTube ನಲ್ಲಿ ಉಳಿದುಕೊಳ್ಳಬಹುದು. ಈ ಪ್ರಕರಣಗಳಲ್ಲಿ, ಕಂಟೆಂಟ್‌ಗೆ EDSA ವಿನಾಯಿತಿ ದೊರೆಯುತ್ತದೆ. ನಿಮ್ಮ EDSA ಕಂಟೆಂಟ್‌ನಲ್ಲಿ ಸಾಂದರ್ಭಿಕ ಮಾಹಿತಿ, ಅಂದರೆ ವೀಕ್ಷಕರಿಗೆ ಮಾಹಿತಿ ನೀಡುವ ಅಥವಾ ಅವರಲ್ಲಿ ಅರಿವು ಮೂಡಿಸುವ ಹೆಚ್ಚಿನ ಮಾಹಿತಿಯನ್ನು ಹೇಗೆ ಸೇರಿಸಬಹುದು ಎಂಬುದರ ಕುರಿತಾಗಿ ಈ ಲೇಖನವು ಸಲಹೆಗಳನ್ನು ಹೊಂದಿದೆ.

ಗಮನಿಸಿ: ನಿಮ್ಮ EDSA ಕಂಟೆಂಟ್‌ನಲ್ಲಿ ಸಾಂದರ್ಭಿಕ ಮಾಹಿತಿಯನ್ನು ಸೇರಿಸಿದ ಮಾತ್ರಕ್ಕೆ ಅದಕ್ಕೆ EDSA ವಿನಾಯಿತಿ ದೊರೆಯುತ್ತದೆ ಎಂಬ ಭರವಸೆಯಿಲ್ಲ.

ಕಂಟೆಂಟ್‌ಗೆ EDSA ವಿನಾಯಿತಿ ಹೇಗೆ ದೊರೆಯುತ್ತದೆ

ಕಂಟೆಂಟ್‌ಗೆ EDSA ವಿನಾಯಿತಿ ದೊರೆಯಬೇಕೇ ಎಂಬುದನ್ನು ನಮ್ಮ ಕಂಟೆಂಟ್ ವಿಮರ್ಶಕರು ಪ್ರತ್ಯೇಕ ಪ್ರಕರಣದ ಆಧಾರದಲ್ಲಿ ವಿಶ್ಲೇಷಿಸುತ್ತಾರೆ. ಮೊದಲಿಗೆ, ಕಂಟೆಂಟ್ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತದೆಯೇ ಎನ್ನುವುದನ್ನು ನಾವು ಪರಿಶೀಲಿಸುತ್ತೇವೆ. ಒಂದು ವೇಳೆ ಉಲ್ಲಂಘಿಸುತ್ತಿದ್ದರೆ, EDSA ವಿನಾಯಿತಿಯನ್ನು ನೀಡಲು ಸಾಕಾಗುವಷ್ಟು ಸಾಂದರ್ಭಿಕ ಮಾಹಿತಿಯನ್ನು ಕಂಟೆಂಟ್ ಹೊಂದಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಯಾವ ಸಾಂದರ್ಭಿಕ ಮಾಹಿತಿ ಇದೆ ಮತ್ತು ಸಾಂದರ್ಭಿಕ ಮಾಹಿತಿ ಎಲ್ಲಿದೆ ಎಂಬುದನ್ನು ನಾವು ಪರಿಶೀಲಿಸುತ್ತೇವೆ.

ನಿಮ್ಮ EDSA ಕಂಟೆಂಟ್‌ನಲ್ಲಿ ಯಾವ ಸಾಂದರ್ಭಿಕ ಮಾಹಿತಿಯನ್ನು ಸೇರಿಸಬೇಕು

EDSA ವಿನಾಯಿತಿಯನ್ನು ಪಡೆಯಲು ನೀವು ಸೇರಿಸಬೇಕಾದ ಸಾಂದರ್ಭಿಕ ಮಾಹಿತಿಯ ಪ್ರಕಾರವು, ಕಂಟೆಂಟ್‌ನಲ್ಲಿ ಏನಿದೆ ಎನ್ನುವುದನ್ನು ಅವಲಂಬಿಸಿರುತ್ತದೆ.

ಕಂಟೆಂಟ್‌ನಲ್ಲಿ ಈ ಕೆಳಗಿನ ಒಂದು ಅಥವಾ ಹೆಚ್ಚಿನವುಗಳಿದ್ದಾಗ, ನಾವು ಹೆಚ್ಚಾಗಿ EDSA ವಿನಾಯಿತಿಗಳನ್ನು ನೀಡುತ್ತೇವೆ:

1. ಕಂಟೆಂಟ್‌ನಲ್ಲಿ ಏನಾಗುತ್ತಿದೆ ಎನ್ನುವುದರ ಪ್ರಾಥಮಿಕ ವಾಸ್ತವಾಂಶಗಳು: ಕಂಟೆಂಟ್‌ನಲ್ಲಿ ಯಾರಿದ್ದಾರೆ ಎನ್ನುವುದನ್ನು ಗುರುತಿಸಿ, ಕಂಟೆಂಟ್ ಏನನ್ನು ತೋರಿಸುತ್ತಿದೆ ಅಥವಾ ಅದು ಯಾವಾಗ ಮತ್ತು ಎಲ್ಲಿ ನಡೆಯುತ್ತಿದೆ ಎಂಬುದನ್ನು ವರ್ಣಿಸಿ, ಅಥವಾ ನಿರ್ದಿಷ್ಟ ಕಂಟೆಂಟ್ ಅನ್ನು ಏಕೆ ತೋರಿಸಲಾಗುತ್ತಿದೆ ಎನ್ನುವುದನ್ನು ವಿವರಿಸಿ. 

ಪ್ರಾಥಮಿಕ ವಾಸ್ತವಾಂಶಗಳ ಉದಾಹರಣೆಗಳು

ಕಂಟೆಂಟ್, ಹಿಂಸಾತ್ಮಕ ಅಥವಾ ಗ್ರಾಫಿಕ್ ಆಗಿದ್ದಾಗ ಅಥವಾ ನಗ್ನತೆ ಅಥವಾ ಲೈಂಗಿಕ ಕ್ರಿಯೆಯನ್ನು ತೋರಿಸುವಾಗ ಪ್ರಾಥಮಿಕ ವಾಸ್ತವಾಂಶಗಳು ವಿಶೇಷವಾಗಿ ಉಪಯುಕ್ತವಾಗಿರುತ್ತವೆ. ಸಾಂದರ್ಭಿಕ ಮಾಹಿತಿ ಇದ್ದಾಗ, ಈ ಕಂಟೆಂಟ್ ವೀಕ್ಷಕರಿಗೆ ಕಡಿಮೆ ಹಾನಿಕಾರಕವಾಗಿರಬಹುದು.

EDSA ವಿನಾಯಿತಿಯನ್ನು ಪಡೆಯುವ ಹೆಚ್ಚು ಸಂಭಾವ್ಯತೆ ಮತ್ತು ಕಡಿಮೆ ಸಂಭಾವ್ಯತೆಯನ್ನು ಹೊಂದಿರುವ ಕಂಟೆಂಟ್ ಅನ್ನು ಈ ಕೆಳಗಿನ ಉದಾಹರಣೆಗಳು ತೋರಿಸಿಕೊಡುತ್ತವೆ: 

EDSA ವಿನಾಯಿತಿ ಪಡೆಯುವ ಹೆಚ್ಚು ಸಂಭಾವ್ಯತೆ ಇರುವುದು

EDSA ವಿನಾಯಿತಿ ಪಡೆಯುವ ಕಡಿಮೆ ಸಂಭಾವ್ಯತೆ ಇರುವುದು

ವೀಡಿಯೊದಲ್ಲಿ ವಿವರಗಳೊಂದಿಗೆ, ಹಿಂಸಾತ್ಮಕ ದರೋಡೆಯಲ್ಲಿ ಸಂತ್ರಸ್ತರು ಗಾಯಗೊಳ್ಳುವುದನ್ನು ತೋರಿಸುವ ಭದ್ರತಾ ಫೂಟೇಜ್. ವಿವರಗಳು ಅಪರಾಧ ಎಲ್ಲಿ ಮತ್ತು ಯಾವಾಗ ಸಂಭವಿಸಿತು ಮತ್ತು ವೀಡಿಯೊವನ್ನು ಏಕೆ ಪೋಸ್ಟ್ ಮಾಡಲಾಗಿದೆ ಎನ್ನುವುದನ್ನು ಒಳಗೊಂಡಿರಬಹುದು.

ಹಿಂಸಾತ್ಮಕ ದರೋಡೆಯಲ್ಲಿ ಸಂತ್ರಸ್ತರು ಗಾಯಗೊಳ್ಳುವುದನ್ನು, ಚಿತ್ರಣದ ಮೇಲೆ 😆 ಅಥವಾ 😲 ನಂತಹ ಎಮೋಜಿಯನ್ನು ಸೂಪರ್-ಇಂಪೋಸ್ ಮಾಡಿ ತೋರಿಸುವ ಭದ್ರತಾ ಫೂಟೇಜ್.

ವೀಡಿಯೊದಲ್ಲಿ ವಿವರಗಳೊಂದಿಗೆ ತೆರೆದ ಗಾಯಗಳನ್ನು ತೋರಿಸುವ ಶಸ್ತ್ರಚಿಕಿತ್ಸೆಯ ಫೂಟೇಜ್. ಯಾವ ಪ್ರಕಾರದ ಶಸ್ತ್ರಚಿಕಿತ್ಸೆ ನಡೆಯುತ್ತಿದೆ ಮತ್ತು ಏಕೆ ಎಂಬುದನ್ನು ವಿವರಗಳು ಒಳಗೊಂಡಿರಬಹುದು.

ತೆರೆದ ಗಾಯಗಳನ್ನು ತೋರಿಸುವ ಮತ್ತು ಅದು ವೀಕ್ಷಕರಿಗೆ “ಅಸಹ್ಯ ಮೂಡಿಸುತ್ತದೆ” ಅಥವಾ “ಆಘಾತ ಉಂಟುಮಾಡುತ್ತದೆ” ಎಂದು ಹೇಳುವ ಶೀರ್ಷಿಕೆ ಅಥವಾ ವಿವರಣೆಯನ್ನು ಹೊಂದಿರುವ ಶಸ್ತ್ರಚಿಕಿತ್ಸೆಯ ಫೂಟೇಜ್.

ದೀರ್ಘ ಕಥಾ ನಿರೂಪಣೆಯ ಸಂದರ್ಭದಲ್ಲಿ ನಗ್ನತೆಯನ್ನು ತೋರಿಸಲಾಗಿರುವ, ರಂಗ-ಪ್ರದರ್ಶನದ ಭಾಗವಾಗಿರುವ ಕ್ಷಣಿಕ ನಗ್ನತೆ.

ವಿವಿಧ ಡಾಕ್ಯುಮೆಂಟರಿಗಳಿಂದ ನಗ್ನತೆಯ ಕ್ಲಿಪ್‌ಗಳನ್ನು ತೆಗೆದುಕೊಂಡಿರುವುದು ಮತ್ತು ಅಶ್ಲೀಲ ಪಠ್ಯವನ್ನು ಓವರ್‌ಲೇ ಮಾಡಿರುವುದು.

ಹಿಂಸೆಯು ನಾಟಕೀಯ ಪ್ರದರ್ಶನದ ಭಾಗವಾಗಿದೆ ಎನ್ನುವುದನ್ನು ವೀಕ್ಷಕರಿಗೆ ತಿಳಿಸುವ ಪ್ರೊಡಕ್ಷನ್ ಕ್ರೆಡಿಟ್‌ಗಳನ್ನು ಒಳಗೊಂಡಿರುವ, ಜನರು ಮಾರಣಾಂತಿಕ ಗಾಯಗಳಿಂದ ನರಳುವುದನ್ನು ತೋರಿಸುವ ಹಿಂಸೆಯ ಫೂಟೇಜ್.

ಹಿಂಸೆಯು ನೈಜವಾದದ್ದೇ ಅಥವಾ ನಾಟಕೀಯ ಪ್ರದರ್ಶನದ ಭಾಗವಾಗಿದೆಯೇ ಎನ್ನುವುದು ಸಾಮಾನ್ಯ ಪ್ರೇಕ್ಷಕರಿಗೆ ತಿಳಿಯದ ರೀತಿಯಲ್ಲಿ, ಜನರು ಮಾರಣಾಂತಿಕ ಗಾಯಗಳಿಂದ ನರಳುವುದನ್ನು ತೋರಿಸುವ ಹಿಂಸೆಯ ಫೂಟೇಜ್.

 

2. ಖಂಡನೆ, ಭಿನ್ನ ದೃಷ್ಟಿಕೋನಗಳು ಅಥವಾ ವಿಡಂಬನೆ: ನಿಮ್ಮ ಕಂಟೆಂಟ್‌ ಕೆಲವೊಂದು ಪ್ರತಿಪಾದನೆಗಳನ್ನು ಖಂಡಿಸುತ್ತದೆ, ಭಿನ್ನ ದೃಷ್ಟಿಕೋನಗಳನ್ನು ಒಳಗೊಂಡಿದೆ ಅಥವಾ ವಿಡಂಬನಾತ್ಮಕವಾಗಿದೆ ಎಂಬುದನ್ನು ತಿಳಿಸಿ.

ಖಂಡನೆ, ಭಿನ್ನ ದೃಷ್ಟಿಕೋನಗಳು ಅಥವಾ ವಿಡಂಬನೆಯ ಉದಾಹರಣೆಗಳು

ಕಂಟೆಂಟ್‌ನ ವಿಷಯವು ದ್ವೇಷಪೂರಿತ ಮಾತು ಅಥವಾ ತಪ್ಪು ಮಾಹಿತಿ ಆಗಿದ್ದಾಗ, ಖಂಡನೆ, ಭಿನ್ನ ದೃಷ್ಟಿಕೋನಗಳು ಅಥವಾ ವಿಡಂಬನೆಯ ಕುರಿತು ಒತ್ತು ನೀಡುವುದು ವಿಶೇಷವಾಗಿ ಸಹಕಾರಿಯಾಗಿರುತ್ತದೆ. ಕೆಲವೊಂದು ಕಂಟೆಂಟ್, ತಾನಾಗಿ ದಾರಿ ತಪ್ಪಿಸುವಂತಿರಬಹುದು, ಆದರೆ ಸಾಂದರ್ಭಿಕ ಮಾಹಿತಿ ಇದ್ದಾಗ, ವೀಕ್ಷಕರಿಗೆ ಕಡಿಮೆ ಹಾನಿಕಾರಕವಾಗಿರಬಹುದು. ಸಾಂದರ್ಭಿಕ ಮಾಹಿತಿಯಲ್ಲಿ, ಒಂದು ದ್ವೇಷಪೂರ್ಣ ಸಿದ್ಧಾಂತವನ್ನು ಟೀಕಿಸುವುದು, ಅಥವಾ ಆರೋಗ್ಯ ಅಥವಾ ಚುನಾವಣಾ ಪ್ರಾಧಿಕಾರಗಳಂತಹ ದೃಢೀಕೃತ ಮೂಲಗಳ ದೃಷ್ಟಿಕೋನಗಳನ್ನು ಹೈಲೈಟ್ ಮಾಡುವ ಮೂಲಕ ತಪ್ಪು ಪ್ರತಿಪಾದನೆಗಳನ್ನು ತಿರಸ್ಕರಿಸುವುದು ಒಳಗೊಂಡಿರಬಹುದು.
EDSA ವಿನಾಯಿತಿಯನ್ನು ಪಡೆಯುವ ಹೆಚ್ಚು ಸಂಭಾವ್ಯತೆ ಮತ್ತು ಕಡಿಮೆ ಸಂಭಾವ್ಯತೆಯನ್ನು ಹೊಂದಿರುವ ಕಂಟೆಂಟ್ ಅನ್ನು ಈ ಕೆಳಗಿನ ಉದಾಹರಣೆಗಳು ತೋರಿಸಿಕೊಡುತ್ತವೆ:

EDSA ವಿನಾಯಿತಿ ಪಡೆಯುವ ಹೆಚ್ಚು ಸಂಭಾವ್ಯತೆ ಇರುವುದು

EDSA ವಿನಾಯಿತಿ ಪಡೆಯುವ ಕಡಿಮೆ ಸಂಭಾವ್ಯತೆ ಇರುವುದು

ಒಂದು ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ನಿರ್ದಿಷ್ಟ ವಯಸ್ಸಿಗಿಂತ ಹಿರಿಯರಿಗೆ ಮತದಾನ ಮಾಡಲು ಅವಕಾಶವಿಲ್ಲ ಎಂಬುದಾಗಿ ಒಬ್ಬ ವ್ಯಕ್ತಿಯು ತಪ್ಪಾಗಿ ಪ್ರತಿಪಾದಿಸುವಂತಹ ಕಂಟೆಂಟ್. ಪ್ರತಿಪಾದನೆ ತಪ್ಪು ಎಂಬುದಾಗಿಯೂ ಕಂಟೆಂಟ್ ಸ್ಪಷ್ಟಪಡಿಸುತ್ತದೆ.

ಒಂದು ಪ್ರಜಾಸತ್ತಾತ್ಮಕ ಚುನಾವಣೆಯಲ್ಲಿ ನಿರ್ದಿಷ್ಟ ವಯಸ್ಸಿಗಿಂತ ಹಿರಿಯರಿಗೆ ಮತದಾನ ಮಾಡಲು ಅವಕಾಶವಿಲ್ಲ ಎಂಬುದಾಗಿ ಒಬ್ಬ ವ್ಯಕ್ತಿಯು ಹೆಚ್ಚಿನ ಸಾಂದರ್ಭಿಕ ಮಾಹಿತಿ ಇಲ್ಲದೆ, ತಪ್ಪಾಗಿ ಪ್ರತಿಪಾದಿಸುವಂತಹ ಕಂಟೆಂಟ್.

COVID-19 ವ್ಯಾಕ್ಸಿನ್‌ಗಳು ಮೈಕ್ರೋಚಿಪ್‌ಗಳನ್ನು ಒಳಗೊಂಡಿವೆ ಎಂಬುದಾಗಿ ಒಬ್ಬ ವ್ಯಕ್ತಿಯು ತಪ್ಪಾಗಿ ಪ್ರತಿಪಾದಿಸುವುದು, ಮತ್ತು ಆ ವ್ಯಕ್ತಿಯ ವಿಮರ್ಶಕರು ಆ ಪ್ರತಿಪಾದನೆ ತಪ್ಪು ಎಂಬುದಾಗಿ ಹೇಳಿಕೆ ನೀಡುವಂತಹ ಕಂಟೆಂಟ್.

ಅನುಮೋದಿತ COVID-19 ವ್ಯಾಕ್ಸಿನ್‌ಗಳು ಮೈಕ್ರೋಚಿಪ್‌ಗಳನ್ನು ಹೊಂದಿವೆ ಎಂಬುದಾಗಿ ಒಬ್ಬ ವ್ಯಕ್ತಿಯು, ಹೆಚ್ಚಿನ ಸಾಂದರ್ಭಿಕ ಮಾಹಿತಿ ಇಲ್ಲದೆ ಪ್ರತಿಪಾದಿಸುವಂತಹ ಕಂಟೆಂಟ್.

ಒಂದು ಗುಂಪಿನ ಜನಾಂಗೀಯತೆಯ ಆಧಾರದಲ್ಲಿ ಅವರ ವಿರುದ್ಧ ಒಬ್ಬ ವ್ಯಕ್ತಿಯು ಹಿಂಸೆಗೆ ಕರೆ ನೀಡುವುದನ್ನು ಉಲ್ಲೇಖಿಸುವ ಕಂಟೆಂಟ್. ಆ ವ್ಯಕ್ತಿಯ ಕ್ರಿಯೆಗಳನ್ನು ಕಂಟೆಂಟ್ ಟೀಕಿಸುತ್ತದೆ ಮತ್ತು ಖಂಡಿಸುತ್ತದೆ.

ಒಂದು ಗುಂಪಿನ ಜನಾಂಗೀಯತೆಯ ಆಧಾರದಲ್ಲಿ, ಅವರ ವಿರುದ್ಧ ಒಬ್ಬ ವ್ಯಕ್ತಿಯು, ಹೆಚ್ಚಿನ ಸಾಂದರ್ಭಿಕ ಮಾಹಿತಿ ಇಲ್ಲದೆ ಅಥವಾ ಹಿಂಸೆಯನ್ನು ಪ್ರಚಾರ ಮಾಡುವಂತಹ ಶೀರ್ಷಿಕೆ ಅಥವಾ ವಿವರಣೆಯೊಂದಿಗೆ ಹಿಂಸೆಗೆ ಕರೆ ನೀಡುವ ಕಂಟೆಂಟ್.

 

3. ಅಪಾಯಕಾರಿ ವರ್ತನೆಯನ್ನು ಪ್ರೋತ್ಸಾಹಿಸದೇ ಇರುವುದು: ವೀಡಿಯೊದಲ್ಲಿರುವುದನ್ನು ಅನುಕರಿಸದಂತೆ ವೀಕ್ಷಕರಿಗೆ ಹೇಳಿ.

ಅಪಾಯಕಾರಿ ವರ್ತನೆಯನ್ನು ಪ್ರೋತ್ಸಾಹಿಸದೇ ಇರುವುದರ ಉದಾಹರಣೆಗಳು

ಅನುಕರಣೆಯನ್ನು ಪ್ರೋತ್ಸಾಹಿಸದೇ ಇರುವುದು ವೀಕ್ಷಕರು ಮತ್ತು YouTube ಸಮುದಾಯಕ್ಕೆ ಹಾನಿ ಉಂಟಾಗುವ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕಂಟೆಂಟ್‌ನಲ್ಲಿ ಹಾನಿಕಾರಕ ಅಥವಾ ಅಪಾಯಕಾರಿ ಚಟುವಟಿಕೆಗಳನ್ನು ತೋರಿಸಿದಾಗ ಅಥವಾ ಕಂಟೆಂಟ್, ಸ್ವಯಂ-ಹಾನಿಗೆ ಸಂಬಂಧಿಸಿದ್ದಾಗ ಇದು ವಿಶೇಷವಾಗಿ ಸಹಕಾರಿಯಾಗಿರುತ್ತದೆ. ಅಪಾಯಕಾರಿ ವರ್ತನೆಯನ್ನು ಪ್ರಚಾರ ಮಾಡಲು ಅಥವಾ ಸಂಭ್ರಮಿಸಲು ಇದು ರಹದಾರಿಯಲ್ಲ ಎಂಬುದನ್ನು ನೆನಪಿಡಿ. ಒಂದು ವೇಳೆ ಕಂಟೆಂಟ್‌ನೊಂದಿಗೆ, ಸಂಭಾವ್ಯ ಹಾನಿಯ ಕುರಿತಾದ ವಿವರಣೆ ಇಲ್ಲದಿದ್ದರೆ, “ಇದನ್ನು ಮನೆಯಲ್ಲಿ ಪ್ರಯತ್ನಿಸಬೇಡಿ” ಎಂದು ಹೇಳುವುದು ವಿನಾಯಿತಿಯನ್ನು ದೊರಕಿಸದೇ ಇರಬಹುದು.
EDSA ವಿನಾಯಿತಿಯನ್ನು ಪಡೆಯುವ ಹೆಚ್ಚು ಸಂಭಾವ್ಯತೆ ಮತ್ತು ಕಡಿಮೆ ಸಂಭಾವ್ಯತೆಯನ್ನು ಹೊಂದಿರುವ ಕಂಟೆಂಟ್ ಅನ್ನು ಈ ಕೆಳಗಿನ ಉದಾಹರಣೆಗಳು ತೋರಿಸಿಕೊಡುತ್ತವೆ:

EDSA ವಿನಾಯಿತಿ ಪಡೆಯುವ ಹೆಚ್ಚು ಸಂಭಾವ್ಯತೆ ಇರುವುದು

EDSA ವಿನಾಯಿತಿ ಪಡೆಯುವ ಕಡಿಮೆ ಸಂಭಾವ್ಯತೆ ಇರುವುದು

ಮನೆಗೆ ಕನ್ನ ಹಾಕುವ ಪ್ರಾಂಕ್ ಅನ್ನು ತೋರಿಸುವ, ಮತ್ತು ಆ ಅಪಾಯಕಾರಿ ಚಟುವಟಿಕೆಯಿಂದಾಗಿ ದೈಹಿಕ ಅಥವಾ ಭಾವನಾತ್ಮಕ ಹಾನಿ ಉಂಟಾಗಬಹುದಾದ ಕಾರಣ ವೀಕ್ಷಕರು ಅದನ್ನು ಅನುಕರಿಸಬಾರದೆಂದು ಹೇಳುವ ಕಂಟೆಂಟ್.

ಮನೆಗೆ ಕನ್ನ ಹಾಕುವ ಪ್ರಾಂಕ್ ಅನ್ನು ತೋರಿಸುವ ಕಂಟೆಂಟ್ ಅಥವಾ ಮನೆಗೆ ಕನ್ನ ಹಾಕುವ ಪ್ರಾಂಕ್‌ಗೆ ಪ್ರತಿಕ್ರಿಯೆ ವೀಡಿಯೊ. ಒಂದು ಅಪಾಯಕಾರಿ ಚಟುವಟಿಕೆಯನ್ನು ನೋಡಿ ನಗುವುದು ಅಥವಾ ಅದಕ್ಕೆ ಪ್ರತಿಕ್ರಿಯಿಸುವುದು, ವೀಕ್ಷಕರು ಅದನ್ನು ಅನುಕರಿಸುವ ಸಂಭಾವ್ಯ ಹಾನಿಯನ್ನು ಕಡಿಮೆ ಮಾಡಲು ಸಾಕಾಗದಿರಬಹುದು.

ದಾರಿಹೋಕರನ್ನು ಗಾಯಗೊಳಿಸಬಹುದಾದ ಅಪಾಯಕಾರಿ ರಸ್ತೆ ಸ್ಟಂಟ್ ಅನ್ನು ತೋರಿಸುವ ಕಂಟೆಂಟ್. ಆ ಸ್ಟಂಟ್‌ನಿಂದಾಗಿ ಗಂಭೀರ ಹಾನಿ ಉಂಟಾಗಬಹುದಾದ ಕಾರಣ ವೀಕ್ಷಕರು ಅದನ್ನು ಅನುಕರಿಸಬಾರದೆಂದು ಹೇಳುವ ಅಥವಾ ವೃತ್ತಿಪರ ಮೇಲ್ವಿಚಾರಣೆಯನ್ನು ಶಿಫಾರಸು ಮಾಡುವ ಕಂಟೆಂಟ್.

ದಾರಿಹೋಕರನ್ನು ಗಾಯಗೊಳಿಸಬಹುದಾದ ಅಪಾಯಕಾರಿ ರಸ್ತೆ ಸ್ಟಂಟ್ ಅನ್ನು, ಹೆಚ್ಚಿನ ಸಾಂದರ್ಭಿಕ ಮಾಹಿತಿ ಇಲ್ಲದೆ ತೋರಿಸುವ ಕಂಟೆಂಟ್.

 

ಗಮನಿಸಿ: ಈ ಮೇಲಿನ ಉದಾಹರಣೆಗಳು, ನಿಮ್ಮ EDSA ಕಂಟೆಂಟ್‌ನಲ್ಲಿ ನೀವು ಸೇರಿಸಬಹುದಾದ ಸಾಂದರ್ಭಿಕ ಮಾಹಿತಿಯ ಸಮಗ್ರ ಪಟ್ಟಿಯಲ್ಲ. ಸಂದೇಹವಿದ್ದಾಗ, ನಿಮ್ಮ EDSA ಕಂಟೆಂಟ್‌ನಲ್ಲಿ ಅನೇಕ ಪ್ರಕಾರಗಳ ಸಾಂದರ್ಭಿಕ ಮಾಹಿತಿಯನ್ನು ಸೇರಿಸಿ. ಕಂಟೆಂಟ್ ಹಾನಿ ಉಂಟುಮಾಡುವುದನ್ನು ತಪ್ಪಿಸಲು ಸಹಾಯ ಮಾಡುವುದಕ್ಕಾಗಿ, ಮಾಹಿತಿಯನ್ನು ನಿಮ್ಮ ವೀಡಿಯೊದ ಶೀರ್ಷಿಕೆ ಅಥವಾ ವಿವರಣೆಯಲ್ಲಿ ಮಾತ್ರವಲ್ಲದೆ, ನಿಮ್ಮ ವೀಡಿಯೊದಲ್ಲೂ ಸೇರಿಸಿ.

ಸಂದೇಹವಿದ್ದಾಗ, ಮೇಲೆ ವಿವರಿಸಿರುವ ವಿವಿಧ ಪ್ರಕಾರಗಳ ಸಾಂದರ್ಭಿಕ ಮಾಹಿತಿಯನ್ನು ಸೇರಿಸಿ: ನಿಮ್ಮ ಕಂಟೆಂಟ್‌ನಲ್ಲಿ ಏನಿದೆ ಎನ್ನುವುದನ್ನು ವಿವರಿಸುವ ಮೂಲ ವಾಸ್ತವಿಕ ಮಾಹಿತಿ, ಹಲವು ದೃಷ್ಟಿಕೋನಗಳು, ಮತ್ತು ಅಪಾಯಕಾರಿ ಅಥವಾ ಹಾನಿಕಾರಕ ವರ್ತನೆಯನ್ನು ಅನುಕರಿಸದ ಹಾಗೆ ಸ್ಪಷ್ಟವಾಗಿ ಮತ್ತು ಮಾಹಿತಿಯುತವಾಗಿ ಪ್ರೋತ್ಸಾಹಿಸದೇ ಇರುವುದು. ಕಂಟೆಂಟ್, ಸಂಭಾವ್ಯವಾಗಿ ಹಾನಿ ಉಂಟುಮಾಡುವುದನ್ನು ತಪ್ಪಿಸಲು ಈ ಮಾಹಿತಿಯನ್ನು ಕಂಟೆಂಟ್‌ನಲ್ಲೇ ಅಂದರೆ ವೀಡಿಯೊ ಅಥವಾ ಆಡಿಯೋದಲ್ಲೇ ಸೇರಿಸಲು ಮರೆಯಬೇಡಿ. 

ಕಂಟೆಂಟ್ EDSA ವಿನಾಯಿತಿಯನ್ನು ಹೊಂದಿದ್ದರೂ ಸಹ, ನಾವು ಅದಕ್ಕೆ ವಯಸ್ಸಿನ ನಿರ್ಬಂಧವನ್ನು ಅಥವಾ ಎಚ್ಚರಿಕೆಯನ್ನು ಅನ್ವಯಿಸಬಹುದು, ಏಕೆಂದರೆ ಕೆಲವು ವೀಕ್ಷಕರು ಅದನ್ನು ಸೂಕ್ಷ್ಮ ಅಥವಾ ಅನುಚಿತವಾದುದು ಎಂದು ಪರಿಗಣಿಸಬಹುದು (ಉದಾಹರಣೆಗೆ, ಯುದ್ಧ ವಲಯದ ಫೂಟೇಜ್). ಕೆಲವು ಸಂದರ್ಭಗಳಲ್ಲಿ, ನಾವು ಸಾರ್ವಜನಿಕ ಹಿತಾಸಕ್ತಿಯನ್ನು ಆಧರಿಸಿ EDSA ವಿನಾಯಿತಿಗಳನ್ನು ಮಾಡಬಹುದು. ಉದಾಹರಣೆಗೆ, ಚುನಾವಣಾ ಪ್ರಚಾರದ ಅಭಿಯಾನದಲ್ಲಿರುವ ರಾಷ್ಟ್ರೀಯ ರಾಜಕೀಯ ಅಭ್ಯರ್ಥಿಗಳಿಗೆ ಸಂಬಂಧಿಸಿದ ವಿಷಯ, ಸಕ್ರಿಯ ಯುದ್ಧ ವಲಯಗಳು ಅಥವಾ ಮಾನವೀಯ ಬಿಕ್ಕಟ್ಟುಗಳಿಗೆ ಸಂಬಂಧಿಸಿದ ಗ್ರಾಫಿಕ್ ಫೂಟೇಜ್, ಸಾರ್ವಜನಿಕ ವಿಚಾರಣೆಯ ಸಮಯದಲ್ಲಿ ಆರೋಗ್ಯ ಇಲಾಖೆಯ ಮಾರ್ಗದರ್ಶನಕ್ಕೆ ವಿರುದ್ಧವಾಗಿ ಮಾಡಲಾಗುವ ಕಾಮೆಂಟ್‌ಗಳು ಅಥವಾ ಲೈಂಗಿಕ ಶಿಕ್ಷಣದ ಸಂದರ್ಭದಲ್ಲಿ ನಗ್ನತೆಯನ್ನು ತೋರಿಸುವಂತಹ ಕಂಟೆಂಟ್‌ಗಳನ್ನು ಇದು ಒಳಗೊಂಡಿರಬಹುದು.

ನಿಮ್ಮ EDSA ಕಂಟೆಂಟ್‌ನಲ್ಲಿ ಸಾಂದರ್ಭಿಕ ಮಾಹಿತಿಯನ್ನು ಎಲ್ಲಿ ಸೇರಿಸಬೇಕು

ಸಾಂದರ್ಭಿಕ ಮಾಹಿತಿಯನ್ನು ನಿಮ್ಮ:

  • ವೀಡಿಯೊದಲ್ಲಿ ಸೇರಿಸಬಹುದು
    • ಉದಾಹರಣೆಗೆ, ನೀವು ಫೂಟೇಜ್ ಅಥವಾ ಪಠ್ಯದ ಓವರ್‌ಲೇಗಳನ್ನು ಸೇರಿಸಬಹುದು.
  • ಆಡಿಯೋದಲ್ಲಿ ಸೇರಿಸಬಹುದು
    • ಉದಾಹರಣೆಗೆ, ಖಂಡನೆ ಅಥವಾ ಸಮರ್ಥವಾದ ಭಿನ್ನ ದೃಷ್ಟಿಕೋನವನ್ನು ಒಳಗೊಂಡಿರುವ ನಿರೂಪಣೆಯನ್ನು ನೀವು ಸೇರಿಸಬಹುದು.
  • ವೀಡಿಯೊ ಶೀರ್ಷಿಕೆಯಲ್ಲಿ ಸೇರಿಸಬಹುದು
  • ವೀಡಿಯೊ ವಿವರಣೆಯಲ್ಲಿ ಸೇರಿಸಬಹುದು
ಗಮನಿಸಿ: ಕಾಮೆಂಟ್‌ಗಳು, ಟ್ಯಾಗ್‌ಗಳು, ಚಾನಲ್‌ ವಿವರಣೆಗಳು, ಪಿನ್ ಮಾಡಲಾದ ಕಾಮೆಂಟ್‌ಗಳು ಅಥವಾ ಇತರ ಕಡೆಗಳಲ್ಲಿ ಇರಬಹುದಾದ ಸಾಂದರ್ಭಿಕ ಮಾಹಿತಿಗೆ ನಾವು EDSA ವಿನಾಯಿತಿಗಳನ್ನು ಒದಗಿಸುವುದಿಲ್ಲ. ಆ ಕಂಟೆಂಟ್, ವೀಕ್ಷಕರಿಗೆ ಎಲ್ಲಾ ಸಮಯದಲ್ಲೂ ಗೋಚರಿಸುವುದಿಲ್ಲ.
ಮುಖ್ಯ ಸೂಚನೆ: ಅತಿ ಹೆಚ್ಚಿನ ಹಾನಿ ಉಂಟುಮಾಡುವ ಅಪಾಯವನ್ನು ಹೊಂದಿರುವ ಕಂಟೆಂಟ್‌ಗಾಗಿ, ಸಾಂದರ್ಭಿಕ ಮಾಹಿತಿಯು ವೀಡಿಯೊ ಅಥವಾ ಆಡಿಯೋದಲ್ಲಿರಬೇಕು. ಕಂಟೆಂಟ್ ಅನ್ನು ಇತರ ವೆಬ್‌ಸೈಟ್‌ಗಳಲ್ಲಿ ಅಥವಾ ಆ್ಯಪ್‌ಗಳಲ್ಲಿ ಎಂಬೆಡ್ ಮಾಡಿರುವಾಗ ಸೇರಿದಂತೆ ವೀಕ್ಷಕರಿಗೆ ಸಂದರ್ಭವು ತಿಳಿಯುವಂತಹ ಹೆಚ್ಚಿನ ಸಾಧ್ಯತೆ ಇರುವ ಕಂಟೆಂಟ್‌ನ ಭಾಗಗಳೆಂದರೆ ವೀಡಿಯೊ ಮತ್ತು ಆಡಿಯೋ. EDSA ವಿನಾಯಿತಿಯನ್ನು ಒದಗಿಸುವುದಕ್ಕಾಗಿ ಆಡಿಯೋ ಅಥವಾ ವೀಡಿಯೊದಲ್ಲಿ ನಮಗೆ ಸಾಂದರ್ಭಿಕ ಮಾಹಿತಿಯ ಅಗತ್ಯವಿರುವ ಕಂಟೆಂಟ್, ದ್ವೇಷಪೂರಿತ ಮಾತು, ಹಿಂಸಾತ್ಮಕ ಅಪರಾಧ ಸಂಘಟನೆಗಳು, ಮಕ್ಕಳ ಸುರಕ್ಷತೆ, ಆತ್ಮಹತ್ಯೆ ಮತ್ತು ಸ್ವಯಂ-ಹಾನಿ, ಹಾಗೂ ಗ್ರಾಫಿಕ್ ಹಿಂಸೆಗೆ ಸಂಬಂಧಿಸಿದ ಕಂಟೆಂಟ್ ಅನ್ನು ಒಳಗೊಂಡಿದೆ.

ಕಾಮೆಂಟ್‌ಗಳಂತಹ ಇತರ ಪ್ರಕಾರಗಳ ಕಂಟೆಂಟ್‌ಗೆ ಯಾವ ನೀತಿಗಳು ಮತ್ತು ಮಾರ್ಗಸೂಚಿಗಳು ಅನ್ವಯಿಸುತ್ತವೆ?

ವೀಡಿಯೊಗಳಿಗೆ ಅನ್ವಯಿಸುವ ನೀತಿಗಳು ಮತ್ತು ಮಾರ್ಗಸೂಚಿಗಳೇ ಇತರ ಪ್ರಕಾರಗಳ ಕಂಟೆಂಟ್‌ಗೂ ಅನ್ವಯಿಸುತ್ತವೆ.

EDSA ವಿನಾಯಿತಿಗಳನ್ನು ಪಡೆಯದ ಕಂಟೆಂಟ್

ಸಾಂದರ್ಭಿಕ ಮಾಹಿತಿಯನ್ನು ಹೊಂದಿದ್ದರೂ ಸಹ ಕೆಲವೊಂದು ಕಂಟೆಂಟ್ ಅನ್ನು YouTube ನಲ್ಲಿ ಅನುಮತಿಸಲಾಗುವುದಿಲ್ಲ. ಇವುಗಳನ್ನು ಪೋಸ್ಟ್ ಮಾಡಬೇಡಿ:

  • ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ಮಾಧ್ಯಮ (CSAM)
  • ಹಿಂಸಾತ್ಮಕ ದೈಹಿಕ ಲೈಂಗಿಕ ಹಲ್ಲೆಗಳ ವೀಡಿಯೊ, ಸ್ಟಿಲ್ ಚಿತ್ರಣ ಅಥವಾ ಆಡಿಯೋ
  • ಶಸ್ತ್ರಾಸ್ತ್ರಗಳು, ಹಿಂಸೆ ಅಥವಾ ಗಾಯಾಳುಗಳನ್ನು ತೋರಿಸುವ, ಅಪರಾಧಿಯು ಚಿತ್ರೀಕರಿಸಿದ ಘೋರ ಅಥವಾ ಪ್ರಮುಖ ಹಿಂಸಾತ್ಮಕ ಘಟನೆಯ ಫೂಟೇಜ್
  • ಹಿಂಸಾತ್ಮಕ ಭಯೋತ್ಪಾದನೆ ಅಥವಾ ಅಪರಾಧ ಸಂಘಟನೆಗಳು ರಚಿಸಿರುವ ಅಥವಾ ಅವುಗಳನ್ನು ವೈಭವೀಕರಿಸುವಂತಹ ಮಾರ್ಪಾಡು ಮಾಡದ ಕಂಟೆಂಟ್ ಅನ್ನು ಮರುಅಪ್‌ಲೋಡ್ ಮಾಡುವುದು
  • ಸ್ವಯಂ-ಹಾನಿ ಮಾಡಿಕೊಳ್ಳುವುದು ಅಥವಾ ಆತ್ಮಹತ್ಯೆಯ ಮೂಲಕ ಸಾಯುವುದು ಹೇಗೆ ಎಂಬ ಕುರಿತಾದ ಸೂಚನೆಗಳು
  • ಇತರರಿಗೆ ಗಾಯಗೊಳಿಸುವ ಅಥವಾ ಇತರರನ್ನು ಕೊಲ್ಲುವುದಕ್ಕಾಗಿ ಬಾಂಬನ್ನು ನಿರ್ಮಿಸುವುದು ಹೇಗೆ ಎಂಬುದರ ಕುರಿತಾದ ಸೂಚನೆಗಳು
  • ಬಂದೂಕು ಅಥವಾ ನಿಷೇಧಿತ ಆ್ಯಕ್ಸೆಸರಿಗಳನ್ನು ತಯಾರಿಸುವುದು ಹೇಗೆ ಎಂಬುದರ ಕುರಿತಾದ ಸೂಚನೆಗಳು
  • ನಿಷೇಧಿತ ಮಾರಾಟದ ಆಫರ್‌ಗಳು
  • ವೈಯಕ್ತಿಕ ಡೇಟಾವನ್ನು ಅಪಾಯಕ್ಕೆ ಈಡುಮಾಡಲು ಅಥವಾ ಇತರರಿಗೆ ಗಂಭೀರ ಹಾನಿ ಉಂಟುಮಾಡಲು ಕಂಪ್ಯೂಟರ್‌ಗಳು ಅಥವಾ ಮಾಹಿತಿ ತಂತ್ರಜ್ಞಾನವನ್ನು ಬಳಸುವುದು ಹೇಗೆ ಎಂಬ ಕುರಿತಾದ ಸೂಚನೆಗಳು
  • ಒಬ್ಬ ವ್ಯಕ್ತಿಯ ಮನೆಯ ವಿಳಾಸ, ಇಮೇಲ್ ವಿಳಾಸಗಳು, ಸೈನ್-ಇನ್ ರುಜುವಾತುಗಳು, ಫೋನ್ ಸಂಖ್ಯೆಗಳು, ಪಾಸ್‌ಪೋರ್ಟ್ ಸಂಖ್ಯೆ ಅಥವಾ ಬ್ಯಾಂಕ್ ಖಾತೆಯ ಮಾಹಿತಿಯಂತಹ ಖಾಸಗಿ ಮಾಹಿತಿಯನ್ನು ಬಹಿರಂಗಪಡಿಸುವ ಕಂಟೆಂಟ್ (ಡಾಕ್ಸಿಂಗ್)
  • ಹಾರ್ಡ್‌ಕೋರ್ ಪೋರ್ನೋಗ್ರಫಿ
  • ಸ್ಪ್ಯಾಮ್‌

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9187294630135939844
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false