ನಿಮ್ಮ ಶಿಫಾರಸುಗಳು & ಹುಡುಕಾಟ ಫಲಿತಾಂಶಗಳನ್ನು ನಿರ್ವಹಿಸಿ

ನಿಮ್ಮ YouTube ಶಿಫಾರಸುಗಳು ಮತ್ತು ಹುಡುಕಾಟ ಫಲಿತಾಂಶಗಳ ಮೇಲೆ ಪ್ರಭಾವ ಬೀರುವ ಹಲವಾರು ಮಾರ್ಗಗಳಿವೆ. ನಿಮ್ಮ ವೀಕ್ಷಣೆ ಇತಿಹಾಸದಿಂದ ನಿರ್ದಿಷ್ಟ ವೀಡಿಯೊಗಳನ್ನು ಮತ್ತು ನಿಮ್ಮ ಹುಡುಕಾಟ ಇತಿಹಾಸದಿಂದ ಹುಡುಕಾಟಗಳನ್ನು ನೀವು ತೆಗೆದುಹಾಕಬಹುದು. ನೀವು ನಿಮ್ಮ ವೀಕ್ಷಣೆ ಮತ್ತು ಹುಡುಕಾಟ ಇತಿಹಾಸವನ್ನು ಸಹ ಆಫ್ ಮಾಡಬಹುದು ಅಥವಾ ನಿಮ್ಮ ವೀಕ್ಷಣೆ ಹಾಗೂ ಹುಡುಕಾಟ ಇತಿಹಾಸವನ್ನು ಅಳಿಸುವ ಮೂಲಕ ಹೊಸದಾಗಿ ಪ್ರಾರಂಭಿಸಬಹುದು.

ನೀವು ಹೋಮ್ ಪೇಜ್‌ನಲ್ಲಿ ವೀಡಿಯೊ ಶಿಫಾರಸುಗಳನ್ನು ನೋಡಲು ಬಯಸದಿದ್ದರೆ, ನಿಮ್ಮ ವೀಕ್ಷಣೆ ಇತಿಹಾಸವನ್ನು ನೀವು ಅಳಿಸಬಹುದು ಮತ್ತು ಆಫ್ ಮಾಡಬಹುದು.

ವೀಕ್ಷಣೆ ಇತಿಹಾಸ ಮತ್ತು ಹುಡುಕಾಟ ಇತಿಹಾಸ

  • ನಿಮ್ಮ ವೀಕ್ಷಣೆ ಇತಿಹಾಸದಿಂದ ಪ್ರತ್ಯೇಕ ವೀಡಿಯೊಗಳನ್ನು ತೆಗೆದುಹಾಕಿ: ನಿಮಗೆ ಆಸಕ್ತಿಯಿಲ್ಲದ ವಿಷಯದ ಕುರಿತಾದ ಶಿಫಾರಸುಗಳನ್ನು ನೀವು ಗಮನಿಸಿದರೆ, ಆ ವಿಷಯದ ಕುರಿತು ನೀವು ಹಿಂದೆ ವೀಕ್ಷಿಸಿದ ವೀಡಿಯೊವನ್ನು ತೆಗೆದುಹಾಕಲು ಪ್ರಯತ್ನಿಸಿ. ಇದು ಭವಿಷ್ಯದಲ್ಲಿ ಇದೇ ರೀತಿಯ ಶಿಫಾರಸುಗಳ ಅವಕಾಶವನ್ನು ಕಡಿಮೆ ಮಾಡಬಹುದು.
  • ನಿಮ್ಮ ಹುಡುಕಾಟ ಇತಿಹಾಸದಿಂದ ಪ್ರತ್ಯೇಕ ಹುಡುಕಾಟಗಳನ್ನು ತೆಗೆದುಹಾಕಿ: ನಿಮಗೆ ಆಸಕ್ತಿಯಿಲ್ಲದ ವಿಷಯದ ಕುರಿತಾದ ಶಿಫಾರಸುಗಳನ್ನು ನೀವು ಗಮನಿಸಿದರೆ, ಆ ವಿಷಯದ ಮೇಲಿನ ಹಿಂದಿನ ಹುಡುಕಾಟವನ್ನು ತೆಗೆದುಹಾಕಲು ಪ್ರಯತ್ನಿಸಿ. ಇದು ಭವಿಷ್ಯದಲ್ಲಿ ಇದೇ ರೀತಿಯ ಶಿಫಾರಸುಗಳ ಅವಕಾಶವನ್ನು ಕಡಿಮೆ ಮಾಡಬಹುದು.
  • ಇತಿಹಾಸವನ್ನು ಆಫ್ ಮಾಡಿ: ನಿಮ್ಮ ವೀಕ್ಷಣೆಗಳು ಅಥವಾ ಹುಡುಕಾಟಗಳು ಭವಿಷ್ಯದ ಶಿಫಾರಸುಗಳು ಮತ್ತು ಹುಡುಕಾಟ ಫಲಿತಾಂಶಗಳ ಮೇಲೆ ಪ್ರಭಾವ ಬೀರಬಾರದೆಂದು ನೀವು ಬಯಸಿದರೆ, ನಿಮ್ಮ ವೀಕ್ಷಣೆ ಅಥವಾ ಹುಡುಕಾಟ ಇತಿಹಾಸವನ್ನು ಆಫ್ ಮಾಡಿ. ಉದಾಹರಣೆಗೆ, ನೀವು ವೈಯಕ್ತಿಕವಾಗಿ ಆಸಕ್ತಿ ಹೊಂದಿರದ ಶಾಲಾ ಪ್ರಾಜೆಕ್ಟ್‌ಗೆ ಸಂಬಂಧಿಸಿದ ವಿಷಯವನ್ನು ಸಂಶೋಧಿಸುತ್ತಿರುವಾಗ. ನೀವು ಪೂರ್ಣಗೊಳಿಸಿದಾಗ ನಿಮ್ಮ ಇತಿಹಾಸವನ್ನು ಪುನರಾರಂಭಿಸಲು ಮರೆಯದಿರಿ.
  • ಇತಿಹಾಸವನ್ನು ಅಳಿಸಿ: ನಿಮ್ಮ ಇಡೀ ವೀಕ್ಷಣೆ ಮತ್ತು ಹುಡುಕಾಟ ಫಲಿತಾಂಶಗಳು ಇನ್ನು ಮುಂದೆ ನಿಮ್ಮ ಆಸಕ್ತಿಗಳಿಗೆ ಸಂಬಂಧಿಸಿರದಿದ್ದರೆ, ನೀವು ನಿಮ್ಮ ವೀಕ್ಷಣೆ ಮತ್ತು ಹುಡುಕಾಟದ ಇತಿಹಾಸಗಳನ್ನು ಅಳಿಸಬಹುದು. ಸಲಹೆ: ನೀವು ಕೆಲವು ವೀಡಿಯೊಗಳನ್ನು ಮರು-ವೀಕ್ಷಿಸಲು ನಿಮ್ಮ ವೀಕ್ಷಣೆ ಇತಿಹಾಸವನ್ನು ಬಳಸಲು ಬಯಸಿದರೆ, ಆ ವೀಡಿಯೊಗಳನ್ನು ಪ್ಲೇಪಟ್ಟಿಯಲ್ಲಿ ಸೇರಿಸಲು ಅಥವಾ ಅವುಗಳನ್ನು ಪುನಃ ಹುಡುಕಲು "ನಂತರ ವೀಕ್ಷಿಸಿ" ಎಂಬಲ್ಲಿಗೆ ಸೇರಿಸಲು ಪ್ರಯತ್ನಿಸಿ.

ನಿಮ್ಮ ಶಿಫಾರಸುಗಳನ್ನು ಟ್ಯೂನ್ ಮಾಡಿ

ಸ್ಮಾರ್ಟ್ ಟಿವಿಗಳು, ಸ್ಟ್ರೀಮಿಂಗ್ ಸಾಧನಗಳು ಅಥವಾ ಗೇಮ್ ಕನ್ಸೋಲ್‌ಗಳು

ಹೋಮ್ ಪೇಜ್‌ನಿಂದ ಶಿಫಾರಸು ಮಾಡಿದ ಕಂಟೆಂಟ್ ಅನ್ನು ತೆಗೆದುಹಾಕಿ

ನಿಮ್ಮ ಹೋಮ್ ಪೇಜ್‌ನಲ್ಲಿ “ಆಸಕ್ತಿಯಿಲ್ಲ” ಎಂಬುದನ್ನು ಆಯ್ಕೆಮಾಡುವ ಮೂಲಕ ಅಥವಾ ಸ್ಮಾರ್ಟ್ ಟಿವಿಗಳು, ಸ್ಟ್ರೀಮಿಂಗ್ ಸಾಧನಗಳು ಅಥವಾ ಗೇಮ್ ಕನ್ಸೋಲ್‌ಗಳಲ್ಲಿ ನಿಮ್ಮ ಹೋಮ್‌ನಿಂದ ಮತ್ತು ಮುಂದೆ ವೀಕ್ಷಿಸಿ ಪುಟಗಳಿಂದ ನೀವು ಶಿಫಾರಸು ಮಾಡಿದ ವೀಡಿಯೊಗಳನ್ನು ತೆಗೆದುಹಾಕಬಹುದು:

  1. ನೀವು ತೆಗೆದುಹಾಕಲು ಬಯಸುವ ಶಿಫಾರಸು ಮಾಡಿರುವ ವೀಡಿಯೊಗೆ ಹೋಗಿ.
  2. ನಿಮ್ಮ ರಿಮೋಟ್‌ನಲ್ಲಿ ಆಯ್ಕೆ ಬಟನ್ ಅನ್ನು ಒತ್ತಿ ಹಿಡಿದುಕೊಳ್ಳಿ.
  3. ಆಸಕ್ತಿಯಿಲ್ಲ ಎಂಬುದನ್ನು ಆಯ್ಕೆಮಾಡಿ.
  4. ನೀವು ವೀಡಿಯೊವನ್ನು ಏಕೆ ತೆಗೆದುಹಾಕಲು ಬಯಸುತ್ತೀರಿ ಎಂಬುದನ್ನು ಹಂಚಿಕೊಳ್ಳಲು, ಏಕೆ ಎಂದು ನಮಗೆ ತಿಳಿಸಿ ಎಂಬುದನ್ನು ಆಯ್ಕೆಮಾಡಿ. ನಿಮ್ಮ ಶಿಫಾರಸುಗಳನ್ನು ಕಸ್ಟಮೈಸ್ ಮಾಡಲು, ನಾನು ಈಗಾಗಲೇ ವೀಡಿಯೊವನ್ನು ವೀಕ್ಷಿಸಿದ್ದೇನೆ, ನನಗೆ ವೀಡಿಯೊ ಇಷ್ಟವಿಲ್ಲ ಅಥವಾ ಚಾನಲ್ ಅನ್ನು ಶಿಫಾರಸು ಮಾಡಬೇಡಿ ಎಂಬುದನ್ನು ನೀವು ಆಯ್ಕೆಮಾಡಬಹುದು.

“ಆಸಕ್ತಿಯಿಲ್ಲ” ಮತ್ತು “ಚಾನಲ್ ಅನ್ನು ಶಿಫಾರಸು ಮಾಡಬೇಡಿ” ಪ್ರತಿಕ್ರಿಯೆಯನ್ನು ತೆರವುಗೊಳಿಸಿ

ನಿಮ್ಮ “ಆಸಕ್ತಿಯಿಲ್ಲ” ಮತ್ತು “ಚಾನಲ್ ಅನ್ನು ಶಿಫಾರಸು ಮಾಡಬೇಡಿ” ಪ್ರತಿಕ್ರಿಯೆಯನ್ನು ನಿಮ್ಮ ಶಿಫಾರಸುಗಳನ್ನು ಟ್ಯೂನ್ ಮಾಡಲು ಬಳಸಬಹುದು. ನೀವು ಸಲ್ಲಿಸಿದ ಎಲ್ಲಾ “ಆಸಕ್ತಿಯಿಲ್ಲ” ಮತ್ತು “ಚಾನಲ್ ಅನ್ನು ಶಿಫಾರಸು ಮಾಡಬೇಡಿ” ಪ್ರತಿಕ್ರಿಯೆಯನ್ನು ತೆರವುಗೊಳಿಸಲು, ನಿಮ್ಮ ಕಂಪ್ಯೂಟರ್, Android ಅಥವಾ iPhone ಅಥವಾ iPad ಬಳಸಿಕೊಂಡು ಕೆಳಗಿನ ಸೂಚನೆಗಳನ್ನು ಅನುಸರಿಸಿ.

ನಿಮ್ಮ Google ಚಟುವಟಿಕೆಯನ್ನು ಬಳಸುವ ಶಿಫಾರಸುಗಳು

YouTube ನಿಮ್ಮ ಶಿಫಾರಸುಗಳು, ಹುಡುಕಾಟ ಫಲಿತಾಂಶಗಳು, ಇನ್-ಆ್ಯಪ್ ನೋಟಿಫಿಕೇಶನ್‌ಗಳು ಮತ್ತು ಇತರೆ ಸ್ಥಳಗಳಲ್ಲಿ ಸಲಹೆಯಾಗಿ ನೀಡಲಾದ ವೀಡಿಯೊಗಳ ಮೇಲೆ ಪ್ರಭಾವ ಬೀರಲು ನಿಮ್ಮ Google ಖಾತೆಯ ಚಟುವಟಿಕೆಯ ಡೇಟಾವನ್ನು ಸಹ ಬಳಸಬಹುದು.

ನೀವು myactivity.google.com ನಲ್ಲಿ ನಿಮ್ಮ ಚಟುವಟಿಕೆಯನ್ನು ವೀಕ್ಷಿಸಬಹುದು ಮತ್ತು ನಿಯಂತ್ರಿಸಬಹುದು. ನಿಮ್ಮ Google ಖಾತೆಗೆ ಸಂಬಂಧಿಸಿದ ಚಟುವಟಿಕೆಯನ್ನು ನಿಯಂತ್ರಿಸುವ ಕುರಿತು ಇನ್ನಷ್ಟು ತಿಳಿಯಿರಿ.

ನಿಮ್ಮ ಶಿಫಾರಸುಗಳಲ್ಲಿನ ವಿಷಯಗಳನ್ನು ಆಯ್ಕೆಮಾಡಿ

ನೀವು ಸೈನ್ ಇನ್ ಆಗಿದ್ದರೆ, ನಿಮ್ಮ ಶಿಫಾರಸುಗಳನ್ನು ಸಂಸ್ಕರಿಸುವುದಕ್ಕೆ ನಿಮಗೆ ಸಹಾಯ ಮಾಡಲು ಹೋಮ್ ಮತ್ತು ವೀಕ್ಷಣಾ ಪುಟಗಳಲ್ಲಿ ನೀವು ವಿಷಯಗಳನ್ನು ಗಮನಿಸುತ್ತೀರಿ. ಈ ವಿಷಯಗಳು ನಿಮ್ಮ ಅಸ್ತಿತ್ವದಲ್ಲಿರುವ, ವೈಯಕ್ತೀಕರಿಸಿದ ಸಲಹೆಗಳನ್ನು ಆಧರಿಸಿವೆ. ವಿಷಯಗಳು ನೀವು ಸಂವಹನ ಮಾಡುವುದಕ್ಕೆ ಸಂಬಂಧಿಸಿದ ಕಂಟೆಂಟ್ ಅನ್ನು ಸಹ ಆಧರಿಸಿವೆ. ಈ ವಿಷಯಗಳು ನೀವು ವೀಕ್ಷಿಸಲು ಬಯಸುವ ಕಂಟೆಂಟ್ ಅನ್ನು ವೇಗವಾಗಿ ಹುಡುಕುವುದಕ್ಕೆ ನಿಮಗೆ ಸಹಾಯ ಮಾಡಲು ಉದ್ದೇಶಿಸಲಾಗಿದೆ.

ಹೋಮ್‌ನಲ್ಲಿ ನೀವು ಆಯ್ಕೆಮಾಡಿದ ವಿಷಯಕ್ಕೆ ಸಂಬಂಧಿಸದ ವೀಡಿಯೊವನ್ನು ನೀವು ಕಂಡುಕೊಂಡರೆ, ಇನ್ನಷ್ಟು  ಮತ್ತು ನಂತರ <topic> ಅಲ್ಲದ ಎಂಬುದನ್ನು ಟ್ಯಾಪ್ ಮಾಡುವ ಮೂಲಕ ನಮಗೆ ತಿಳಿಸಿ.

Topic filters are found on the home page, near the top.

ಹೋಮ್ ಪೇಜ್‌ನಿಂದ ಶಿಫಾರಸು ಮಾಡಿದ ಕಂಟೆಂಟ್ ಅನ್ನು ತೆಗೆದುಹಾಕಿ

ನಿಮಗೆ ಈ ಸೂಚನೆಗಳನ್ನು ಅನುಸರಿಸಲು ಸಾಧ್ಯವಾಗದಿದ್ದರೆ, ನೀವು YouTube ನ ಹಳೆಯ ಆವೃತ್ತಿಯನ್ನು ಬಳಸುತ್ತಿರುವಿರಿ. ನೀವು ಹೊಸ ಬ್ರೌಸರ್ ಅನ್ನು ಬಳಸುತ್ತಿದ್ದರೆ, YouTube ನ ಪ್ರಸ್ತುತ ಆವೃತ್ತಿಗೆ ಅಪ್‌ಡೇಟ್ ಮಾಡಿ.

ನಿಮ್ಮ ಕಂಪ್ಯೂಟರ್‌ನಲ್ಲಿನ ಹೋಮ್ ಪೇಜ್‌ನಿಂದ ಕೆಳಗೆ ಶಿಫಾರಸು ಮಾಡಲಾದ ಕಂಟೆಂಟ್ ಅನ್ನು ತೆಗೆದುಹಾಕಬಹುದು:

  • ವೀಡಿಯೊಗಳು
  • ಚಾನಲ್‌ಗಳು
  • ವಿಭಾಗಗಳು
  • ಪ್ಲೇಪಟ್ಟಿ‌ಗಳು

ನಿಮ್ಮ ಹೋಮ್ ಪೇಜ್‌ನಿಂದ ಶಿಫಾರಸು ಮಾಡಿದ ವೀಡಿಯೊವನ್ನು ತೆಗೆದುಹಾಕಲು:

  1. ನೀವು ತೆಗೆದುಹಾಕಲು ಬಯಸುವ ವಿಭಾಗಕ್ಕೆ ಸಂಬಂಧಿಸಿದ ಶಿಫಾರಸು ಮಾಡಿದ ವೀಡಿಯೊ ಅಥವಾ X ಗೆ ಪಾಯಿಂಟ್ ಮಾಡಿ.
  2. ವೀಡಿಯೊ ಅಥವಾ ಪ್ಲೇಪಟ್ಟಿಯ ಶೀರ್ಷಿಕೆಯ ಪಕ್ಕದಲ್ಲಿರುವ ಇನ್ನಷ್ಟು ಆಯ್ಕೆಮಾಡಿ.
  3. ನಿಮ್ಮ ಫೀಡ್‌ನಿಂದ ವೀಡಿಯೊವನ್ನು ತೆಗೆದುಹಾಕಲು, ಆಸಕ್ತಿ ಇಲ್ಲ  ಎಂಬುದನ್ನು ಆಯ್ಕೆಮಾಡಿ.
  4. ನೀವು ವೀಡಿಯೊವನ್ನು ಏಕೆ ತೆಗೆದುಹಾಕಲು ಬಯಸುತ್ತೀರಿ ಎಂಬುದನ್ನು ಹಂಚಿಕೊಳ್ಳಲು, ಏಕೆ ಎಂದು ನಮಗೆ ತಿಳಿಸಿ ಎಂಬುದನ್ನು ಆಯ್ಕೆಮಾಡಿ. ನಿಮ್ಮ ಶಿಫಾರಸುಗಳನ್ನು ಕಸ್ಟಮೈಸ್ ಮಾಡಲು, ನಾನು ಈಗಾಗಲೇ ವೀಡಿಯೊವನ್ನು ವೀಕ್ಷಿಸಿದ್ದೇನೆ ಅಥವಾ ನನಗೆ ವೀಡಿಯೊ ಇಷ್ಟವಿಲ್ಲ ಎಂಬುದನ್ನು ನೀವು ಆಯ್ಕೆಮಾಡಬಹುದು.

ನಿರ್ದಿಷ್ಟ ಚಾನಲ್‌ಗಳಲ್ಲಿನ ವೀಡಿಯೊಗಳು ನಿಮ್ಮ ಶಿಫಾರಸುಗಳಲ್ಲಿ ಕಾಣಿಸುವುದಿಲ್ಲ ಎಂಬುದನ್ನು ಸಹ ನೀವು ಖಚಿತಪಡಿಸಿಕೊಳ್ಳಬಹುದು. ಮೆನು ಆಯ್ಕೆಮಾಡಿ, ಮತ್ತು ನಂತರ ಚಾನಲ್ ಅನ್ನು ಶಿಫಾರಸು ಮಾಡಬೇಡಿ ಎಂಬುದನ್ನು ಆಯ್ಕೆಮಾಡಿ. 

“ಆಸಕ್ತಿಯಿಲ್ಲ” ಮತ್ತು “ಚಾನಲ್ ಅನ್ನು ಶಿಫಾರಸು ಮಾಡಬೇಡಿ” ಪ್ರತಿಕ್ರಿಯೆಯನ್ನು ತೆರವುಗೊಳಿಸಿ

ನಿಮ್ಮ “ಆಸಕ್ತಿಯಿಲ್ಲ” ಮತ್ತು “ಚಾನಲ್ ಅನ್ನು ಶಿಫಾರಸು ಮಾಡಬೇಡಿ” ಪ್ರತಿಕ್ರಿಯೆಯನ್ನು ನಿಮ್ಮ ಶಿಫಾರಸುಗಳನ್ನು ಟ್ಯೂನ್ ಮಾಡಲು ಬಳಸಬಹುದು. ನೀವು ಸಲ್ಲಿಸಿದ ಎಲ್ಲಾ “ಆಸಕ್ತಿಯಿಲ್ಲ” ಮತ್ತು “ಚಾನಲ್ ಅನ್ನು ಶಿಫಾರಸು ಮಾಡಬೇಡಿ” ಪ್ರತಿಕ್ರಿಯೆಯನ್ನು ತೆರವುಗೊಳಿಸಲು:

  1. ನನ್ನ ಚಟುವಟಿಕೆಗೆ ಹೋಗಿ. ನಿಮ್ಮ Google ಖಾತೆಗೆ ನೀವು ಸೈನ್ ಇನ್ ಮಾಡಬೇಕಾಗಬಹುದು.
  2. ಎಡಗೈ ಮೆನುವಿನಲ್ಲಿ ಅಥವಾ ನನ್ನ ಚಟುವಟಿಕೆ ಬ್ಯಾನರ್ ಅಡಿಯಲ್ಲಿ ಇತರ Google ಚಟುವಟಿಕೆಯನ್ನು ಹುಡುಕಿ.
  3. "YouTube 'ಆಸಕ್ತಿಯಿಲ್ಲ' ಪ್ರತಿಕ್ರಿಯೆ" ಆಯ್ಕೆಮಾಡಿ, ನಂತರ ಅಳಿಸಿ ಎಂಬುದನ್ನು ಆಯ್ಕೆಮಾಡಿ.

ವೀಕ್ಷಣೆ ಇತಿಹಾಸ, ಹುಡುಕಾಟದ ಇತಿಹಾಸ ಮತ್ತು ನಿಮ್ಮ ಶಿಫಾರಸುಗಳನ್ನು ಸುಧಾರಿಸುವ ಕುರಿತು ಹೆಚ್ಚಿನ ಮಾಹಿತಿಗಾಗಿ ನಮ್ಮ ಇತರ ಲೇಖನಗಳನ್ನು ವೀಕ್ಷಿಸಿ.

ನಿಮ್ಮ Google ಚಟುವಟಿಕೆಯನ್ನು ಬಳಸುವ ಶಿಫಾರಸುಗಳು

YouTube ನಿಮ್ಮ ಶಿಫಾರಸುಗಳು, ಹುಡುಕಾಟ ಫಲಿತಾಂಶಗಳು, ಇನ್-ಆ್ಯಪ್ ನೋಟಿಫಿಕೇಶನ್‌ಗಳು ಮತ್ತು ಇತರೆ ಸ್ಥಳಗಳಲ್ಲಿ ಸಲಹೆಯಾಗಿ ನೀಡಲಾದ ವೀಡಿಯೊಗಳ ಮೇಲೆ ಪ್ರಭಾವ ಬೀರಲು ನಿಮ್ಮ Google ಖಾತೆಯ ಚಟುವಟಿಕೆಯ ಡೇಟಾವನ್ನು ಸಹ ಬಳಸಬಹುದು.

ನೀವು myactivity.google.com ನಲ್ಲಿ ನಿಮ್ಮ ಚಟುವಟಿಕೆಯನ್ನು ವೀಕ್ಷಿಸಬಹುದು ಮತ್ತು ನಿಯಂತ್ರಿಸಬಹುದು. ನಿಮ್ಮ Google ಖಾತೆಗೆ ಸಂಬಂಧಿಸಿದ ಚಟುವಟಿಕೆಯನ್ನು ನಿಯಂತ್ರಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಇಷ್ಟಪಟ್ಟ ವೀಡಿಯೊಗಳನ್ನು ನಿರ್ವಹಿಸಿ

ನಿಮ್ಮ ಶಿಫಾರಸುಗಳು ಮತ್ತು ಹುಡುಕಾಟ ಫಲಿತಾಂಶಗಳು ನೀವು ಇಷ್ಟಪಟ್ಟ ವೀಡಿಯೊಗಳನ್ನು ಆಧರಿಸಿವೆ. ನಿಮ್ಮ ಶಿಫಾರಸುಗಳು ಮತ್ತು ಹುಡುಕಾಟದ ಫಲಿತಾಂಶಗಳ ಮೇಲೆ ಪ್ರಭಾವ ಬೀರಲು, ನೀವು ವೀಡಿಯೊಗಳನ್ನು ಲೈಕ್ ಮಾಡಬಹುದು, ಡಿಸ್‌ಲೈಕ್ ಮಾಡಬಹುದು ಮತ್ತು ಇಷ್ಟಪಟ್ಟ ವೀಡಿಯೊಗಳನ್ನು ತೆಗೆದುಹಾಕಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
5494624763822322428
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false