YouTube Giving ಮೂಲಕ ಲಾಭರಹಿತ ಸಂಸ್ಥೆಗೆ ದೇಣಿಗೆ ನೀಡಿ

YouTube ನಲ್ಲಿ ಧರ್ಮಾರ್ಥ ದೇಣಿಗೆಯೊಂದಿಗೆ ರಚನೆಕಾರರು ಮತ್ತು ಅಭಿಮಾನಿಗಳು ಸಂವಹಿಸುವ ವಿಧಾನವನ್ನು ಬಲಪಡಿಸಲು ಸಹಾಯ ಮಾಡುವಂತೆ YouTube Giving ಅನ್ನು ವಿನ್ಯಾಸಗೊಳಿಸಲಾಗಿದೆ. ಕೆಲವು ವೀಡಿಯೊಗಳು ಮತ್ತು ಲೈವ್ ಸ್ಟ್ರೀಮ್‌ಗಳು, ವೀಡಿಯೊದ ರಚನೆಕಾರರು ಬೆಂಬಲಿಸುತ್ತಿರುವ ಲಾಭರಹಿತ ಸಂಸ್ಥೆಗೆ ದೇಣಿಗೆ ನೀಡಲು ನಿಮಗೆ ಅವಕಾಶ ನೀಡುತ್ತವೆ.

YouTube ವಹಿವಾಟಿನ ಶುಲ್ಕಗಳನ್ನು ಭರಿಸುತ್ತದೆ, ಆದ್ದರಿಂದ ನೀವು ದೇಣಿಗೆ ನೀಡುವ ಹಣದಲ್ಲಿ 100%, ಅರ್ಹ ಲಾಭರಹಿತ ಸಂಸ್ಥೆಗೆ ಹೋಗುತ್ತದೆ. ಲಾಭರಹಿತ ಸಂಸ್ಥೆಗಳಿಗೆ ನೀಡಲಾದ ದೇಣಿಗೆಗಳನ್ನು ಮರುಪಾವತಿ ಮಾಡಲಾಗುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ, ನಮ್ಮ YouTube Giving FAQ ಗಳು ನೋಡಿ.

ದೇಣಿಗೆ ನೀಡುವುದು ಹೇಗೆ

ದೇಣಿಗೆ ಬಟನ್

ಕೆಲವು ರಚನೆಕಾರರು ತಮ್ಮ ವೀಡಿಯೊಗಳು ಹಾಗೂ ಲೈವ್ ಸ್ಟ್ರೀಮ್‌ಗಳ ಪಕ್ಕದಲ್ಲಿ ದೇಣಿಗೆ ಬಟನ್‌ಗಳನ್ನು ಪ್ರದರ್ಶಿಸುತ್ತಾರೆ. ದೇಣಿಗೆ ನೀಡಲು, ಈ ಕೆಳಗಿನ ಹಂತಗಳನ್ನು ಅನುಸರಿಸಿ.

ದೇಣಿಗೆ ಬಟನ್ ಅನ್ನು ಹೊಂದಿರುವ ವೀಡಿಯೊಗೆ ಹೋಗಿ, ನಂತರ:

  1. ದೇಣಿಗೆ ನೀಡಿ ಆಯ್ಕೆಮಾಡಿ.
  2. ನೀವು ದೇಣಿಗೆ ನೀಡಲು ಬಯಸುವ ಹಣದ ಮೊತ್ತವನ್ನು ಆಯ್ಕೆಮಾಡಿ ನಂತರ ಮುಂದುವರಿಸಿ.
  3. ನಿಮ್ಮ ಪಾವತಿ ವಿಧಾನವನ್ನು ಆಯ್ಕೆಮಾಡಿ.
  4. ದೇಣಿಗೆ ನೀಡಿ ನಂತರ ಮುಗಿದಿದೆ ಎಂಬುದನ್ನು ಕ್ಲಿಕ್ ಮಾಡಿ.

ಲಾಭರಹಿತ ಸಂಸ್ಥೆ ಮತ್ತು YouTube ರಚನೆಕಾರರಿಗೆ ನಿಮ್ಮ ವೈಯಕ್ತಿಕ ಮಾಹಿತಿ ಕಾಣಿಸುವುದಿಲ್ಲ.

ನಿಮ್ಮ ಪಾವತಿಯನ್ನು ಪ್ರಕ್ರಿಯೆಗೊಳಿಸಿದ ನಂತರ ನಿಮ್ಮ ರಸೀದಿಯನ್ನು ಇಮೇಲ್ ಮೂಲಕ ಪಡೆಯುತ್ತೀರಿ.

ಲೈವ್ ಚಾಟ್ ಕೊಡುಗೆಗಳು

ಲೈವ್ ಚಾಟ್ ಕೊಡುಗೆಗಳಿಗಾಗಿ Super Chat for Good ಅನ್ನು ಲೈವ್ ಚಾಟ್ ಕೊಡುಗೆಗಳೊಂದಿಗೆ ಬದಲಿಸಲಾಗಿದೆ. ರಚನೆಕಾರರು ಲೈವ್ ಸ್ಟ್ರೀಮ್‌ನಲ್ಲಿ ನಿಧಿಸಂಗ್ರಹಿಸುವಾಗ ಮತ್ತು ಲೈವ್ ಚಾಟ್ ಅನ್ನು ಆನ್ ಮಾಡಿರುವಾಗ, ನೀವು ಚಾಟ್‌ನಲ್ಲಿ ದೇಣಿಗೆ ಬಟನ್ ಎಂಬುದನ್ನು ನೀವು ನೋಡುತ್ತೀರಿ.

ದೇಣಿಗೆ ನೀಡಲು:

  1. ಲೈವ್ ಚಾಟ್‌ನಲ್ಲಿ ದೇಣಿಗೆ ನೀಡಿ ಎಂಬುದನ್ನು ಆಯ್ಕೆಮಾಡಿ. ಲೈವ್ ಚಾಟ್ ಅನ್ನು ನೋಡಲು ಮೊಬೈಲ್ ಸಾಧನಗಳು ಪೋರ್ಟ್ರೇಟ್ ಮೋಡ್‌ನಲ್ಲಿ ಇರಬೇಕು.
  2. ದೇಣಿಗೆ ಮೊತ್ತವನ್ನು ಆಯ್ಕೆಮಾಡಿ ಅಥವಾ ಬೇರೆ ಮೌಲ್ಯವನ್ನು ನಮೂದಿಸಲು ಇತರೆ ಎಂಬುದನ್ನು ಆಯ್ಕೆಮಾಡಿ.
  3. ಲೈವ್ ಚಾಟ್‌ನಲ್ಲಿ ನಿಮ್ಮ ಬಳಕೆದಾರರ ಹೆಸರನ್ನು ಡಿಸ್‌ಪ್ಲೇ ಮಾಡಲು ನನ್ನ ದೇಣಿಗೆಯನ್ನು ಸಾರ್ವಜನಿಕಗೊಳಿಸಲು ಬಯಸುತ್ತೇನೆ ಎಂಬುದನ್ನು ಆಯ್ಕೆಮಾಡಿ. ಇಲ್ಲದಿದ್ದರೆ, ನಿಮ್ಮ ದೇಣಿಗೆ ಮೊತ್ತವನ್ನು “ಅನಾಮಧೇಯ” ಎಂಬುದಾಗಿ ತೋರಿಸಲಾಗುತ್ತದೆ.
  4. ದೇಣಿಗೆ ನೀಡಿ ಆಯ್ಕೆಮಾಡಿ.
  5. ನಿಮ್ಮ ದೇಣಿಗೆಯನ್ನು ಮುಕ್ತಾಯಗೊಳಿಸಲು, ಆನ್‌-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ.
ಗಮನಿಸಿ: ನಿಮ್ಮ ದೇಣಿಗೆಯ ಪಕ್ಕದಲ್ಲಿ ನಿಮ್ಮ ಬಳಕೆದಾರರ ಹೆಸರನ್ನು ತೋರಿಸಲು ನೀವು ಬಯಸುವುದಿಲ್ಲ ಎಂದಾದರೆ, ನನ್ನ ದೇಣಿಗೆಯನ್ನು ಸಾರ್ವಜನಿಕಗೊಳಿಸಲು ಬಯಸುತ್ತೇನೆ ಎಂಬುದರ ಪಕ್ಕದಲ್ಲಿರುವ ಬಾಕ್ಸ್‌ನಲ್ಲಿ ಗುರುತಿಸಿರುವುದನ್ನು ತೆಗೆಯಿರಿ.

ನಿಮ್ಮ ಪಾವತಿಯನ್ನು ಪ್ರಕ್ರಿಯೆಗೊಳಿಸಿದ ನಂತರ ನಿಮ್ಮ ರಸೀದಿಯನ್ನು ಇಮೇಲ್ ಮೂಲಕ ಪಡೆಯುತ್ತೀರಿ.

ನಿಮ್ಮ ದೇಣಿಗೆಯ ಕುರಿತ ತೆರಿಗೆ ಮಾಹಿತಿ

ಕೊಡುಗೆಗಳ ಸಹಾಯ ಕೇಂದ್ರದಲ್ಲಿ ತೆರಿಗೆ ಮಾಹಿತಿಯ ಕುರಿತು ತಿಳಿದುಕೊಳ್ಳಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
14693564218448446393
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false