YouTube Premium ಅಥವಾ YouTube Music Premium ಸದಸ್ಯತ್ವಗಳಿಗೆ ಸೈನ್ ಅಪ್ ಮಾಡಿ

Premium ಸದಸ್ಯತ್ವದೊಂದಿಗೆ YouTube ನಿಮ್ಮ ವೀಡಿಯೊ ಮತ್ತು ಸಂಗೀತ ಅನುಭವವನ್ನು ವರ್ಧಿಸಿ. ನಿಮ್ಮ ವೈಯಕ್ತಿಕ ಪಾವತಿಸಿದ ಸದಸ್ಯತ್ವವನ್ನು ಪ್ರಾರಂಭಿಸುವುದು ಹೇಗೆ ಎಂದು ಇಂದೇ ತಿಳಿದುಕೊಳ್ಳಿ.
YouTube ವಿದ್ಯಾರ್ಥಿ ಸದಸ್ಯತ್ವವನ್ನು ಹುಡುಕುತ್ತಿದ್ದೀರಾ? ಇನ್ನಷ್ಟು ವಿಷಯಗಳನ್ನು ಇಲ್ಲಿ ತಿಳಿದುಕೊಳ್ಳಿ.

YouTube Music Premium

YouTube Music Premium ಎಂಬುದು YouTube Music ಬಳಕೆದಾರರಿಗಾಗಿ ಇರುವ ಪಾವತಿಸಿದ ಸಂಗೀತ ಸದಸ್ಯತ್ವವಾಗಿದೆ. ಇದು ಅನೇಕ ದೇಶಗಳು/ಪ್ರದೇಶಗಳಲ್ಲಿ ಲಭ್ಯವಿದೆ.

YouTube Music Premium ಪ್ರಯೋಜನಗಳು

YouTube Music Premium ನಲ್ಲಿ ನೀವು ಏನನ್ನು ಪಡೆಯುತ್ತೀರಿ?

  • YouTube Music ನಲ್ಲಿ ಲಕ್ಷಾಂತರ ಹಾಡುಗಳು ಹಾಗೂ ವೀಡಿಯೊಗಳನ್ನು ಆನಂದಿಸಿ. 
  • YouTube Music ಆ್ಯಪ್‌ನಲ್ಲಿ ಆಫ್‌ಲೈನ್‌ನಲ್ಲಿ ಆಲಿಸುವುದಕ್ಕಾಗಿ ಕಂಟೆಂಟ್ ಅನ್ನು ಡೌನ್‌ಲೋಡ್ ಮಾಡಿ.
  • ಹಿನ್ನೆಲೆ ಪ್ಲೇ ಬಳಸಿಕೊಂಡು, ಇತರ ಆ್ಯಪ್‌ಗಳನ್ನು ಬಳಸುವಾಗ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಪ್ಲೇ ಮಾಡಿ.
  • Google Home ಅಥವಾ Chromecast Audio ದಲ್ಲಿ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಆಲಿಸಿ.

YouTube Music Premium ಮತ್ತು YouTube Premium ಸದಸ್ಯರು ಈಗಲೂ ಸಹ ರಚನೆಕಾರರು ಪಾಡ್‌ಕಾಸ್ಟ್‌ಗಳಲ್ಲಿ ಎಂಬೆಂಡ್ ಮಾಡಿರುವ ಬ್ರ್ಯಾಂಡಿಂಗ್ ಅಥವಾ ಪ್ರೊಮೋಷನ್‍ಗಳನ್ನು ನೋಡಬಹುದು. ರಚನೆಕಾರರು ಸೇರಿಸಿದ್ದರೆ ಅಥವಾ ಅವರು ಆನ್ ಮಾಡಿದ್ದರೆ, ನೀವು ಕಂಟೆಂಟ್‌ನಲ್ಲಿ ಮತ್ತು ಅದರ ಸುತ್ತ ಪ್ರೊಮೋಷನಲ್ ಲಿಂಕ್‌ಗಳು, ಶೆಲ್ಪ್‌ಗಳು ಮತ್ತು ಇತರ ಫೀಚರ್‌ಗಳನ್ನು ಸಹ ನೋಡಬಹುದು.

ಗಮನಿಸಿ: ಆಯ್ದ ದೇಶಗಳು/ಪ್ರದೇಶಗಳಲ್ಲಿನ ಬಳಕೆದಾರಿಗೆ ವಿಭಿನ್ನ ಉತ್ಪನ್ನ ಅನುಭವಗಳು ಉಂಟಾಗಬಹುದು.

YouTube Premium

YouTube Premium ಎಂಬುದು YouTube ಹಾಗೂ ಇತರ YouTube ಆ್ಯಪ್‌ಗಳಲ್ಲಿ ನಿಮ್ಮ ಅನುಭವವನ್ನು ವರ್ಧಿಸಲು ಸಹಾಯ ಮಾಡುವ ಪಾವತಿಸಿದ ಸದಸ್ಯತ್ವವಾಗಿದೆ. ಇದು ಅನೇಕ ದೇಶಗಳು/ಪ್ರದೇಶಗಳಲ್ಲಿ ಲಭ್ಯವಿದೆ.

YouTube Premium ಪ್ರಯೋಜನಗಳು

YouTube Premium ನೊಂದಿಗೆ ನೀವು:

  • YouTube ನಲ್ಲಿ ಆ್ಯಡ್‌ಗಳಲ್ಲಿದೆ ಲಕ್ಷಾಂತರ ವೀಡಿಯೊಗಳನ್ನು ವೀಕ್ಷಿಸಬಹುದು. 
  • ನಿಮ್ಮ ಮೊಬೈಲ್ ಸಾಧನದಲ್ಲಿ ಆಫ್‌ಲೈನ್‌ನಲ್ಲಿ ವೀಕ್ಷಿಸುವುದಕ್ಕಾಗಿ ವೀಡಿಯೊಗಳು ಮತ್ತು ಹಾಡುಗಳನ್ನು ಡೌನ್‌ಲೋಡ್‌ ಮಾಡಬಹುದು.
  • ಇತರ ಆ್ಯಪ್‌ಗಳನ್ನು ಬಳಸುವಾಗ ಅಥವಾ ನಿಮ್ಮ ಸ್ಕ್ರೀನ್ ಆಫ್ ಆಗಿರುವಾಗ ನಿಮ್ಮ ಮೊಬೈಲ್ ಸಾಧನದಲ್ಲಿ ವೀಡಿಯೊಗಳನ್ನು ಪ್ಲೇ ಮಾಡುವುದನ್ನು ಮುಂದುವರಿಸಬಹುದು.
  • ಹಣ ಖರ್ಚು ಮಾಡದೆ YouTube Music Premium ನ ಸಬ್‌ಸ್ಕ್ರಿಪ್ಶನ್ ಅನ್ನು ಪಡೆಯಿರಿ.
  • ನಿಮ್ಮ Google Home ಅಥವಾ Chromecast Audio ದಲ್ಲಿ ನಿಮ್ಮ ಸಂಗೀತ ಮತ್ತು ಪಾಡ್‌ಕಾಸ್ಟ್‌ಗಳನ್ನು ಆನಂದಿಸಿ.

ನಿಮ್ಮ YouTube Premium ಪ್ರಯೋಜನಗಳು ಇವುಗಳಾದ್ಯಂತ ಅನ್ವಯಿಸುತ್ತವೆ:

  • YouTube
  • YouTube Kids
  • YouTube Music

YouTube Music Premium ಮತ್ತು YouTube Premium ಸದಸ್ಯರು ಈಗಲೂ ಸಹ ರಚನೆಕಾರರು ಪಾಡ್‌ಕಾಸ್ಟ್‌ಗಳಲ್ಲಿ ಎಂಬೆಂಡ್ ಮಾಡಿರುವ ಬ್ರ್ಯಾಂಡಿಂಗ್ ಅಥವಾ ಪ್ರೊಮೋಷನ್‍ಗಳನ್ನು ನೋಡಬಹುದು. ರಚನೆಕಾರರು ಸೇರಿಸಿದ್ದರೆ ಅಥವಾ ಅವರು ಆನ್ ಮಾಡಿದ್ದರೆ, ನೀವು ಕಂಟೆಂಟ್‌ನಲ್ಲಿ ಮತ್ತು ಅದರ ಸುತ್ತ ಪ್ರೊಮೋಷನಲ್ ಲಿಂಕ್‌ಗಳು, ಶೆಲ್ಪ್‌ಗಳು ಮತ್ತು ಇತರ ಫೀಚರ್‌ಗಳನ್ನು ಸಹ ನೋಡಬಹುದು.

ನಿಮ್ಮ ಪಾವತಿಸಿದ ಸದಸ್ಯತ್ವವನ್ನು ಪ್ರಾರಂಭಿಸಿ

YouTube Premium

ಆ್ಯಡ್‌ಗಳಿಲ್ಲದೆ ಲಕ್ಷಾಂತರ ಹಾಡುಗಳು ಹಾಗೂ ಸಂಗೀತ ವೀಡಿಯೊಗಳನ್ನು ಆನಂದಿಸಲು YouTube Premium ಸದಸ್ಯರಾಗಿ. ಆಫ್‌ಲೈನ್‌ನಲ್ಲಿ ಆಲಿಸುವುದಕ್ಕಾಗಿ ನಿಮ್ಮ ಇಷ್ಟದ ಕಂಟೆಂಟ್ ಅನ್ನು ನೀವು ಡೌನ್‌ಲೋಡ್ ಸಹ ಮಾಡಬಹುದು.

YouTube Premium ಗಾಗಿ ಸೈನ್ ಅಪ್ ಮಾಡಲು,

  1. ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ YouTube ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಸದಸ್ಯತ್ವವನ್ನು ನೀವು ಪ್ರಾರಂಭಿಸಲು ಬಯಸುವ Google ಖಾತೆಗೆ ಸೈನ್ ಇನ್ ಮಾಡಿ.
  3. ನಿಮ್ಮ ಪ್ರೊಫೈಲ್ ಚಿತ್ರವನ್ನು ಆಯ್ಕೆ ಮಾಡಿ.
  4. ನೀವು ಅರ್ಹರಾಗಿದ್ದರೆ, ನಿಮ್ಮ ಟ್ರಯಲ್ ಅನ್ನು ಪ್ರಾರಂಭಿಸಿ. ಇಲ್ಲದಿದ್ದರೆ, YouTube Premium ಪಡೆದುಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಸದಸ್ಯತ್ವದ ವಿವರಗಳನ್ನು ವೀಕ್ಷಿಸುವುದಕ್ಕಾಗಿ ಯಾವಾಗ ಬೇಕಾದರೂ youtube.com/paid_memberships ಗೆ ಹೋಗಿ.

YouTube Music Premium

ಆ್ಯಡ್‌ಗಳಿಲ್ಲದೆ ಲಕ್ಷಾಂತರ ಹಾಡುಗಳು ಹಾಗೂ ಸಂಗೀತ ವೀಡಿಯೊಗಳನ್ನು ಆನಂದಿಸಲು YouTube Music Premium ನ ಸದಸ್ಯರಾಗಿ. ಆಫ್‌ಲೈನ್‌ನಲ್ಲಿ ಆಲಿಸುವುದಕ್ಕಾಗಿ ನೀವು ಹಾಡುಗಳು, ವೀಡಿಯೊಗಳು ಮತ್ತು ಪಾಡ್‌ಕಾಸ್ಟ್ ಎಪಿಸೋಡ್‌ಗಳನ್ನು ಡೌನ್‌ಲೋಡ್ ಸಹ ಮಾಡಿಕೊಳ್ಳಬಹುದು.

ಗಮನಿಸಿ: ನಿಮ್ಮ ಸದಸ್ಯತ್ವದ ಸ್ಥಿತಿಯನ್ನು ಲೆಕ್ಕಿಸದೆ, ನೀವು ಪಾಡ್‌ಕಾಸ್ಟ್‌ಗಳನ್ನು ಡೌನ್‌ಲೋಡ್ ಮಾಡಬಹುದು. ಆಡಿಯೋ-ಮಾತ್ರ ಡೌನ್‌ಲೋಡ್ ಮಾಡಲು ಕೆಲವು ಎಪಿಸೋಡ್‌ಗಳು/ಶೋಗಳು ಲಭ್ಯವಿಲ್ಲದಿರಬಹುದು.

YouTube Music Premium ಗಾಗಿ ಸೈನ್ ಅಪ್ ಮಾಡಲು,

  1. ನಿಮ್ಮ ಫೋನ್ ಅಥವಾ ಟ್ಯಾಬ್ಲೆಟ್‌ನಲ್ಲಿ YouTube Music ಆ್ಯಪ್ ಅನ್ನು ತೆರೆಯಿರಿ.
  2. ನಿಮ್ಮ ಸದಸ್ಯತ್ವವನ್ನು ನೀವು ಪ್ರಾರಂಭಿಸಲು ಬಯಸುವ Google ಖಾತೆಗೆ ಸೈನ್ ಇನ್ ಮಾಡಿ.
  3. ನಿಮ್ಮ ಪ್ರೊಫೈಲ್ ಚಿತ್ರವನ್ನು ಆಯ್ಕೆ ಮಾಡಿ.
  4. ನೀವು ಅರ್ಹರಾಗಿದ್ದರೆ, ನಿಮ್ಮ ಟ್ರಯಲ್ ಅನ್ನು ಪ್ರಾರಂಭಿಸಿ. ಇಲ್ಲದಿದ್ದರೆ, Music Premium ಅನ್ನು ಪಡೆದುಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಸದಸ್ಯತ್ವದ ವಿವರಗಳನ್ನು ವೀಕ್ಷಿಸುವುದಕ್ಕಾಗಿ ಯಾವಾಗ ಬೇಕಾದರೂ youtube.com/paid_memberships ಗೆ ಹೋಗಿ.

ನಿಮ್ಮ ಪ್ರಾಥಮಿಕ ಪಾವತಿ ವಿಧಾನದಲ್ಲಿ ಸಮಸ್ಯೆಯಿದ್ದರೆ ನಿಮ್ಮ ಪ್ರಯೋಜನಗಳನ್ನು ಕಳೆದುಕೊಳ್ಳದಿರುವ ಹಾಗೆ ಬ್ಯಾಕಪ್ ಪಾವತಿಯ ವಿಧಾನವನ್ನು ಸೇರಿಸುವುದನ್ನು ಪರಿಗಣಿಸಿ.

YouTube TV ಕುರಿತು ಮಾಹಿತಿಯನ್ನು ಹುಡುಕುತ್ತಿದ್ದೀರಾ? ಸದಸ್ಯತ್ವ, ಲಭ್ಯ ಸ್ಥಳಗಳು ಮತ್ತು ಇತರ ವಿಷಯಗಳ ಕುರಿತಾದ ಮಾಹಿತಿಗಾಗಿ YouTube TV ಸಹಾಯ ಕೇಂದ್ರವನ್ನು ನೋಡಿ.
Pixel Pass ಸಬ್‌ಸ್ಕ್ರಿಪ್ಶನ್‌ನ ಮೂಲಕ ನೀವು YouTube Premium ಅನ್ನು ಸ್ವೀಕರಿಸಿದ್ದರೆ, ನಿಮ್ಮ ಖಾತೆಯನ್ನು ಹೇಗೆ ನಿರ್ವಹಿಸಬೇಕು ಎಂಬ ಕುರಿತು ಇಲ್ಲಿ ಇನ್ನಷ್ಟು ತಿಳಿದುಕೊಳ್ಳಿ.
ಗಮನಿಸಿ: 2022 ರಿಂದ, Android ನಲ್ಲಿ ಸೈನ್ ಅಪ್ ಮಾಡಿದ ಹೊಸ YouTube Premium ಮತ್ತು Music Premium ಸಬ್‌ಸ್ಕ್ರೈಬರ್‌ಗಳಿಗೆ Google Play ಮೂಲಕ ಬಿಲ್ ಮಾಡಲಾಗುತ್ತದೆ. ಈ ಬದಲಾವಣೆಯು ಪ್ರಸ್ತುತ ಸಬ್‌ಸ್ಕ್ರೈಬರ್‌ಗಳ ಮೇಲೆ ಪ್ರಭಾವ ಬೀರುವುದಿಲ್ಲ. ಇತ್ತೀಚಿನ ಶುಲ್ಕಗಳನ್ನು ನೋಡಲು ಹಾಗೂ ನಿಮಗೆ ಹೇಗೆ ಬಿಲ್ ಮಾಡಲಾಗುತ್ತದೆ ಎಂಬುದನ್ನು ತಿಳಿಯಲು ನೀವು payments.google.com ಗೆ ಭೇಟಿ ನೀಡಬಹುದು. Google Play ಖರೀದಿಗಾಗಿ ಮರುಪಾವತಿಯನ್ನು ವಿನಂತಿಸಲು, ಇಲ್ಲಿ ವಿವರಿಸಲಾಗಿರುವ ಹಂತಗಳನ್ನು ಅನುಸರಿಸಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
7748918167403913642
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false