ನೀವು ಅಪ್‌ಲೋಡ್ ಮಾಡಿದ ವೀಡಿಯೊದ ಭಾಷೆಯನ್ನು ಬದಲಾಯಿಸಿ

ನೀವು ಅಪ್‌ಲೋಡ್ ಮಾಡಿರದ ವೀಡಿಯೊದ ಭಾಷೆಯನ್ನು ಬದಲಾಯಿಸಲು ಸಾಧ್ಯವಿಲ್ಲ. ವಿಭಿನ್ನ ಭಾಷೆಗಳಲ್ಲಿ ವೀಡಿಯೊಗಳನ್ನು ವೀಕ್ಷಿಸುವಾಗ ಶೀರ್ಷಿಕೆಗಳು ಲಭ್ಯವಿವೆಯೇ ಎಂದು ನೋಡುವುದು ಹೇಗೆಂದು ತಿಳಿದುಕೊಳ್ಳಿ.

ವೀಡಿಯೊ ಭಾಷೆಯ ಸೆಟ್ಟಿಂಗ್, ನಿಮ್ಮ ವೀಡಿಯೊದ ಮೂಲ ಭಾಷೆಯನ್ನು YouTube ಮತ್ತು ಕೊಡುಗೆದಾರರು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ಬಳಸಲಾಗುವ ಫೀಚರ್ ಆಗಿದೆ. YouTube ವೀಡಿಯೊಗಳಿಗೆ ಸಬ್‌ಟೈಟಲ್‌ಗಳು ಮತ್ತು ಶೀರ್ಷಿಕೆಗಳನ್ನು ಸೇರಿಸುವಾಗ ಈ ಫೀಚರ್ ಸಹಾಯ ಮಾಡುತ್ತದೆ. ತಮ್ಮ ಭಾಷೆಯಲ್ಲಿರುವ ವೀಡಿಯೊಗಳನ್ನು ಕಂಡುಕೊಳ್ಳಲು ಸಹ ಇದು ವೀಕ್ಷಕರಿಗೆ ಸಹಾಯ ಮಾಡುತ್ತದೆ.

ವೀಡಿಯೊ ಭಾಷೆಯನ್ನು ಬದಲಾಯಿಸಿ

ನೀವು ಅಪ್‌ಲೋಡ್ ಮಾಡಿದ ವೀಡಿಯೊದ ಭಾಷೆಯನ್ನು ತಪ್ಪಾಗಿ ಸೆಟ್ ಮಾಡಿದ್ದರೆ, ನೀವು ಅದನ್ನು ಬದಲಾಯಿಸಬಹುದು.

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ವೀಡಿಯೊದ ಥಂಬ್‌ನೇಲ್ ಅನ್ನು ಕ್ಲಿಕ್ ಮಾಡಿ.
  4. ಉದ್ದೇಶಿತ ಭಾಷೆಯನ್ನು ಸಬ್‌ಟೈಟಲ್‌ಗಳ ಟ್ಯಾಬ್‌ನಲ್ಲಿ ಪಟ್ಟಿ ಮಾಡಲಾಗಿದೆಯೇ ಎಂದು ಪರಿಶೀಲಿಸಿ. “ಸಬ್‌ಟೈಟಲ್‌ಗಳು” ಮತ್ತು “ಶೀರ್ಷಿಕೆ ಮತ್ತು ವಿವರಣೆಗಾಗಿ” ಸಂಬಂಧಿತ ಭಾಷೆಯನ್ನು ಸೇರಿಸಲು ಭಾಷೆಯನ್ನು ಸೇರಿಸಿ ಎಂಬುದನ್ನು ಕ್ಲಿಕ್ ಮಾಡಿ.
  5. ವಿವರಗಳು ಟ್ಯಾಬ್‌ಗೆ ಹೋಗಿ.
  6. ಪುಟದ ಕೆಳಭಾಗದಲ್ಲಿ, ಇನ್ನಷ್ಟು ತೋರಿಸಿ ಎಂಬುದನ್ನು ಕ್ಲಿಕ್ ಮಾಡಿ.
  7. ಭಾಷೆ ಮತ್ತು ಶೀರ್ಷಿಕೆಗಳ ಪ್ರಮಾಣೀಕರಣ ವಿಭಾಗದಿಂದ ಉದ್ದೇಶಿತ “ವೀಡಿಯೊ ಭಾಷೆ” ಮತ್ತು “ಶೀರ್ಷಿಕೆ ಮತ್ತು ವಿವರಣೆ ಭಾಷೆ” ಆಯ್ಕೆಮಾಡಿ ಮತ್ತು ಸೇವ್ ಮಾಡಿ.
ಗಮನಿಸಿ: ನಿಮ್ಮ ವೀಡಿಯೊದ ಮೂಲ ಭಾಷೆಗಾಗಿ ನೀವು ಸೆಟ್ಟಿಂಗ್ ಅನ್ನು ಬದಲಾಯಿಸಿದರೆ, ಭವಿಷ್ಯದ ಅನುವಾದಿತ ಸಬ್‌ಟೈಟಲ್‌ಗಳು ಅನುವಾದಗಳಿಗಾಗಿ ಹೊಸ ಭಾಷೆಯನ್ನು ಮೂಲವಾಗಿ ಬಳಸುತ್ತವೆ. ನೀವು ಪ್ರಕಟಿಸಿದ ಮತ್ತು ಡ್ರಾಫ್ಟ್ ಮಾಡಿದ ಸಬ್‌ಟೈಟಲ್‌ಗಳು ಮತ್ತು ಕ್ಲೋಸ್ಡ್ ಕ್ಯಾಪ್ಶನ್‌ಗಳ ಮೇಲೆ ಇದು ಪ್ರಭಾವ ಬೀರುವುದಿಲ್ಲ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
9233653564349658173
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false