YouTube ನಲ್ಲಿ ಚಾನಲ್‌ನ ಸದಸ್ಯರಾಗಿ

ಮುಖ್ಯ YouTube ಸೈಟ್ ಮತ್ತು ಆ್ಯಪ್‌ನಲ್ಲಿ ಚಾನಲ್ ಸದಸ್ಯತ್ವಗಳು ನಿಮಗೆ ಸಾರ್ವಜನಿಕ ಬ್ಯಾಡ್ಜ್‌ಗಳು, ಎಮೋಜಿಗಳನ್ನು ಖರೀದಿಸಲು ಮತ್ತು ಚಾನಲ್ ಒದಗಿಸುವ ರಚನೆಕಾರರ ಪರ್ಕ್‌ಗಳಿಗೆ ಆ್ಯಕ್ಸೆಸ್ ಮಾಡಲು ಅನುಮತಿಸುತ್ತದೆ.

ನಿಮ್ಮ ದೇಶ ಮತ್ತು ನೀವು ಬಳಸುವ ಪ್ಲ್ಯಾಟ್‌ಫಾರ್ಮ್ ಅನ್ನು ಆಧರಿಸಿ ಸದಸ್ಯತ್ವದ ದರಗಳು ಬದಲಾಗಬಹುದು.

ಗಮನಿಸಿ: ಜನವರಿ 2022 ರ ಪ್ರಾರಂಭದಿಂದ, YouTube Android ಆ್ಯಪ್‌ನಲ್ಲಿ ಚಾನಲ್ ಸದಸ್ಯರಾಗಿರುವ ಕೆಲವು ಬಳಕೆದಾರರಿಗೆ Google Play ಮೂಲಕ ಬಿಲ್ ಮಾಡಲಾಗುತ್ತದೆ. ಖರೀದಿಯನ್ನು ಎಲ್ಲಿಂದ ಬಿಲ್ ಮಾಡಲಾಗಿದೆಯೋ ಅಲ್ಲಿಂದ ಮಾತ್ರ ಇರುವ, ದರ ಅಥವಾ ವೆಚ್ಚದ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಇತ್ತೀಚಿನ ಶುಲ್ಕಗಳನ್ನು ನೋಡಲು ಹಾಗೂ ನಿಮಗೆ ಹೇಗೆ ಬಿಲ್ ಮಾಡಲಾಗುತ್ತದೆ ಎಂದು ತಿಳಿಯಲು pay.google.com ಗೆ ಭೇಟಿ ನೀಡಬಹುದು.
 

ಸೇರಿ, ಹಂತಗಳನ್ನು ಬದಲಾಯಿಸಿ ಅಥವಾ ಸದಸ್ಯತ್ವವನ್ನು ರದ್ದುಮಾಡಿ

ಚಾನಲ್ ಸದಸ್ಯರಾಗಿ

ಮುಖ್ಯ YouTube ಸೈಟ್ ಮತ್ತು ಆ್ಯಪ್‌ನಲ್ಲಿ ಭಾಗವಹಿಸುವಿಕೆ ಚಾನಲ್ ಸದಸ್ಯತ್ವವನ್ನು ಪಡೆಯಿರಿ.
  1. youtube.com ಗೆ ಭೇಟಿ ನೀಡಿ ಅಥವಾ YouTube ಆ್ಯಪ್ ತೆರೆಯಿರಿ.
  2. ನೀವು ಬೆಂಬಲಿಸಲು ಬಯಸುವ ರಚನೆಕಾರರ ಚಾನಲ್ ಅಥವಾ ವೀಡಿಯೊಗೆ ಹೋಗಿ ಮತ್ತು ಅವರು ತಮ್ಮ ಚಾನಲ್‌ನಲ್ಲಿ ಸದಸ್ಯತ್ವಗಳನ್ನು ಸಕ್ರಿಯಗೊಳಿಸಿದ್ದಾರೆಯೇ ಎಂದು ನೋಡಿ.
  3. ಸೇರಿ ಕ್ಲಿಕ್ ಮಾಡಿ.
  4. ನಿಮ್ಮ ಪಾವತಿ ಮಾಹಿತಿಯನ್ನು ನಮೂದಿಸಲು ಪ್ರಾಂಪ್ಟ್‌ಗಳನ್ನು ಅನುಸರಿಸಿ.
  5. ಖರೀದಿಸಿ ಕ್ಲಿಕ್ ಮಾಡಿ.

ನಿಮ್ಮ ವಹಿವಾಟು ಪೂರ್ಣಗೊಂಡ ಬಳಿಕ ನಿಮಗೆ ಸ್ವಾಗತ ಘೋಷಣೆ ಸಂದೇಶವು ಕಾಣಿಸುತ್ತದೆ.

ನಿಮ್ಮ ಸದಸ್ಯತ್ವದ ಹಂತವನ್ನು ಬದಲಾಯಿಸಿ

ಅಪ್‌ಗ್ರೇಡ್ ಮಾಡಲು

  1. ನೀವು ಬದಲಾಯಿಸಲು ಬಯಸುವ ಸದಸ್ಯತ್ವದ ಚಾನಲ್ ಹೋಮ್ ಪೇಜ್‌ಗೆ ಹೋಗಿ ಮತ್ತು ಪರ್ಕ್‌ಗಳನ್ನು ನೋಡಿ ಕ್ಲಿಕ್ ಮಾಡಿ.
  2. ನೀವು ಸೇರಲು ಬಯಸುವ ಹಂತವನ್ನು ಆಯ್ಕೆಮಾಡಿ ನಂತರ ಹಂತವನ್ನು ಬದಲಾಯಿಸಿ.
  3. ಅಪ್‌ಗ್ರೇಡ್ ಮಾಡಿ ಆಯ್ಕೆಮಾಡಿ.
  4. ನೀವು ಅಪ್‌ಗ್ರೇಡ್ ಆದ ಹಂತವನ್ನು ಖರೀದಿಸಿದ ಕೂಡಲೇ ಆ್ಯಕ್ಸೆಸ್ ಪಡೆಯುತ್ತೀರಿ.
    1. ದರ ನಿಗದಿ ಕುರಿತು ಸೂಚನೆ: ನಿಮ್ಮ ಹಿಂದಿನ ಪ್ರಸ್ತುತ ಬಿಲ್ಲಿಂಗ್ ಸೈಕಲ್‌ನಲ್ಲಿ ಉಳಿದಿರುವ ದಿನಗಳಿಗೆ ಸರಿಹೊಂದಿಸಲಾದ ದರದಲ್ಲಿ, ಹಂತಗಳಲ್ಲಿನ ದರದಲ್ಲಾಗುವ ವ್ಯತ್ಯಾಸದ ಮೊತ್ತವನ್ನು ಮಾತ್ರ ನಿಮಗೆ ವಿಧಿಸಲಾಗುತ್ತದೆ.
    2. ಉದಾಹರಣೆಗೆ: ನೀವು $4.99 ಪಾವತಿಸುತ್ತಿದ್ದು, ನಿಮ್ಮ ಮುಂದಿನ ಪಾವತಿಗೆ ಇನ್ನೂ ಅರ್ಧ ತಿಂಗಳು ಬಾಕಿ ಇರುವಾಗಲೇ $9.99 ಹಂತಕ್ಕೆ ಅಪ್‌ಗ್ರೇಡ್ ಮಾಡಿದರೆ, ಉಳಿದ ತಿಂಗಳಿಗೆ ನಿಮಗೆ ವಿಧಿಸಲಾಗುವ ಶುಲ್ಕ ಹೀಗಿರುತ್ತದೆ: ($9.99-$4.99) X (0.5)= $2.50.
  5. ಹಂತದ ಅಪ್‌ಗ್ರೇಡ್‌ನಿಂದಾಗಿ ನಿಮ್ಮ ಮಾಸಿಕ ಬಿಲ್ಲಿಂಗ್ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.

ಡೌನ್‌ಗ್ರೇಡ್ ಮಾಡಲು

  1. ನೀವು ಬದಲಾಯಿಸಲು ಬಯಸುವ ಸದಸ್ಯತ್ವದ ಚಾನಲ್ ಹೋಮ್ ಪೇಜ್‌ಗೆ ಹೋಗಿ ಮತ್ತು ಪರ್ಕ್‌ಗಳನ್ನು ನೋಡಿ ಕ್ಲಿಕ್ ಮಾಡಿ.
  2. ನೀವು ಸೇರಲು ಬಯಸುವ ಹಂತವನ್ನು ಆಯ್ಕೆಮಾಡಿ ನಂತರಹಂತವನ್ನು ಬದಲಾಯಿಸಿ.

ಡೌನ್‌ಗ್ರೇಡ್‌ಗಳಿಗೆ ಸಂಬಂಧಿಸಿದ ಬಿಲ್ಲಿಂಗ್ ಮತ್ತು ಆ್ಯಕ್ಸೆಸ್ ವಿವರಗಳು

  • ಹಂತದ ಡೌನ್‌ಗ್ರೇಡ್‌ನಿಂದಾಗಿ ನಿಮ್ಮ ಮಾಸಿಕ ಬಿಲ್ಲಿಂಗ್ ದಿನಾಂಕದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ.
  • ನಿಮ್ಮ ಮುಂದಿನ ಬಿಲ್ಲಿಂಗ್ ದಿನಾಂಕದವರೆಗೆ ನಿಮ್ಮ ಮೂಲ ಹಂತಕ್ಕೆ ಆ್ಯಕ್ಸೆಸ್ ಪಡೆದಿರುತ್ತೀರಿ.
  • ನಿಮ್ಮ ಮುಂದಿನ ಬಿಲ್ಲಿಂಗ್ ದಿನಾಂಕದಂದು ಹೊಸ ಕೆಳಮಟ್ಟದ ಹಂತಕ್ಕೆ ಸಂಬಂಧಿಸಿದ ದರವನ್ನು ನಿಮಗೆ ವಿಧಿಸಲಾಗುವುದು.
  • ರಚನೆಕಾರರು ನೀಡಿದರೆ, ನಿಮ್ಮ ಬ್ಯಾಡ್ಜ್‌ನಲ್ಲಿ ಪ್ರತಿಫಲಿಸುವ ಯಾವುದೇ ಸಂಗ್ರಹವಾದ ಲಾಯಲ್ಟಿಯನ್ನು ನೀವು ಉಳಿಸಿಕೊಳ್ಳುತ್ತೀರಿ.

ರಚನೆಕಾರರು ನೀಡಿದರೆ, ನಿಮ್ಮ ಬ್ಯಾಡ್ಜ್‌ನಲ್ಲಿ ಪ್ರತಿಫಲಿಸುವ ಯಾವುದೇ ಸಂಗ್ರಹವಾದ ಲಾಯಲ್ಟಿಯನ್ನು ನೀವು ಉಳಿಸಿಕೊಳ್ಳುತ್ತೀರಿ.

ಚಾನಲ್ ಸದಸ್ಯತ್ವವನ್ನು ರದ್ದುಗೊಳಿಸಿ
ಚಾನಲ್ ಹೋಮ್ ಪೇಜ್‌ನಲ್ಲಿ, ಪರ್ಕ್‌ಗಳನ್ನು ನೋಡಿ ಕ್ಲಿಕ್ ಮಾಡುವ ಮೂಲಕ ಸದಸ್ಯತ್ವ ನಿರ್ವಹಣೆ ಪರದೆಯನ್ನು ತೆರೆಯಿರಿ ನಂತರ, ನಂತರ ಆಯ್ಕೆಮಾಡಿ, ಸದಸ್ಯತ್ವ ಮತ್ತು ಪರ್ಕ್‌ಗಳನ್ನು ಕೊನೆಗೊಳಿಸಿ ಕ್ಲಿಕ್ ಮಾಡಿ.
ನೀವು ಕಂಪ್ಯೂಟರ್‌ನಲ್ಲಿ ಈ ಹಂತಗಳನ್ನು ಅನುಸರಿಸುವ ಮೂಲಕ ಯಾವಾಗ ಬೇಕಾದರೂ ನಿಮ್ಮ ಸದಸ್ಯತ್ವವನ್ನು ರದ್ದುಗೊಳಿಸಬಹುದು:
  1. YouTube ಗೆ ಸೈನ್ ಇನ್ ಮಾಡಿ.
  2. youtube.com/paid_memberships ಗೆ ಭೇಟಿ ನೀಡಿ.
  3. ನೀವು ರದ್ದುಗೊಳಿಸಲು ಬಯಸುವ ಚಾನಲ್ ಸದಸ್ಯತ್ವವನ್ನು ಹುಡುಕಿ ಮತ್ತು ಸದಸ್ಯತ್ವವನ್ನು ನಿರ್ವಹಿಸಿ ಕ್ಲಿಕ್ ಮಾಡಿ.
  4. ನಿಷ್ಕ್ರಿಯಗೊಳಿಸಿ ಆಯ್ಕೆಮಾಡಿ.
  5. ಸದಸ್ಯತ್ವವನ್ನು ಕೊನೆಗೊಳಿಸಿ ಆಯ್ಕೆಮಾಡಿ.
  6. ನೀವು ರದ್ದುಪಡಿಸುವಿಕೆ ದೃಢೀಕರಣ ಪರದೆಯನ್ನು ನೋಡುತ್ತೀರಿ.

ನಿಮ್ಮ ಸದಸ್ಯತ್ವವನ್ನು ರದ್ದುಪಡಿಸಲು ನಿಮಗೆ ಸಮಸ್ಯೆಯಿದ್ದರೆ, ಇಲ್ಲಿ ಇನ್ನಷ್ಟು ತಿಳಿಯಿರಿ.

ಉಡುಗೊರೆ ಸದಸ್ಯತ್ವವನ್ನು ಖರೀದಿಸಿ
ಉಡುಗೊರೆ ಸದಸ್ಯತ್ವಗಳು ಸಹಭಾಗಿ ಚಾನಲ್‌ಗಳಲ್ಲಿ ಮಾತ್ರ ಖರೀದಿಗೆ ಮತ್ತು ರಿಡೆಂಪ್ಶನ್‌ಗೆ ಲಭ್ಯವಿರುತ್ತವೆ. ವೀಕ್ಷಕರು ಈ ಆಯ್ಕೆ ಮಾಡಬಹುದು ಮತ್ತು ವೆಬ್, Android ಅಥವಾ iOS ಸಾಧನಗಳನ್ನು ಬಳಸಿ ಉಡುಗೊರೆಗಳನ್ನು ಪಡೆದುಕೊಳ್ಳಬಹುದು.

ಉಡುಗೊರೆ ಸದಸ್ಯತ್ವಗಳು, ಇತರ ವೀಕ್ಷಕರು ಒಂದು ತಿಂಗಳವರೆಗೆ ಚಾನಲ್ ಸದಸ್ಯತ್ವದ ಪರ್ಕ್‌ಗಳನ್ನು ಆ್ಯಕ್ಸೆಸ್ ಮಾಡುವುದಕ್ಕೆ ಸಂಬಂಧಿಸಿದ ಅವಕಾಶವನ್ನು ಖರೀದಿಸಲು ವೀಕ್ಷಕರಿಗೆ ಅನುವು ಮಾಡಿಕೊಡುತ್ತವೆ. ಉಡುಗೊರೆ ಸದಸ್ಯತ್ವಗಳನ್ನು ಖರೀದಿಸಲು, ಗಿಫ್ಟಿಂಗ್ ಅನ್ನು ಆನ್ ಮಾಡಿರುವ ಚಾನಲ್‌ನಲ್ಲಿ ನೀವು ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್ ಅನ್ನು ವೀಕ್ಷಿಸುತ್ತಿರಬೇಕು.

ಉಡುಗೊರೆ ಸದಸ್ಯತ್ವಗಳು, ಅರ್ಹ ಚಾನಲ್‌ಗಳಲ್ಲಿನ ಲೈವ್ ಸ್ಟ್ರೀಮ್‌ಗಳಲ್ಲಿ ಹಾಗೂ ಪ್ರೀಮಿಯರ್‌ನಲ್ಲಿ ಲಭ್ಯವಿವೆ. ಒಂದು ನಿರ್ದಿಷ್ಟ ಚಾನಲ್‌ನಲ್ಲಿ ಉಡುಗೊರೆ ಸದಸ್ಯತ್ವಗಳು ಲಭ್ಯವಿದ್ದರೆ, ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್ ಸಮಯದಲ್ಲಿ ನೀವು ಉಡುಗೊರೆ ಸದಸ್ಯತ್ವವನ್ನು ಖರೀದಿಸಬಹುದು:

  1. YouTube ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ನೀವು ಉಡುಗೊರೆ ಸದಸ್ಯತ್ವವನ್ನು ಖರೀದಿಸಲು ಬಯಸುವ ಅರ್ಹ ಚಾನಲ್‌ಗೆ ಭೇಟಿ ನೀಡಿ.
  3. ಚಾನಲ್‌ನ ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್ ಶೋಗೆ ಸೇರಿಕೊಳ್ಳಿ.
  4. ಲೈವ್ ಚಾಟ್‌ನಲ್ಲಿ, ಕ್ಲಿಕ್ ಮಾಡಿ.
  5. ಮೆಂಬರ್‌ಶಿಪ್ ಗಿಫ್ಟಿಂಗ್ ಕ್ಲಿಕ್ ಮಾಡಿ.
  6. ನೀವು ಉಡುಗೊರೆ ಸದಸ್ಯತ್ವವನ್ನು ನೀಡಲು ಬಯಸುವ ವೀಕ್ಷಕರ ಸಂಖ್ಯೆಯನ್ನು ಆಯ್ಕೆಮಾಡಿ.
  7. ವಹಿವಾಟು ಪೂರ್ಣಗೊಳಿಸಿ.

ಉಡುಗೊರೆ ಸದಸ್ಯತ್ವಗಳನ್ನು ಗರಿಷ್ಠ $5 ವರೆಗೆ ಒಳಗೊಂಡು, ಅತ್ಯಧಿಕ ಬೆಲೆಯ ಹಂತಕ್ಕೆ ಅತೀ ಸಮೀಪವಿರುವ ದರದಲ್ಲಿ ನೀಡಲಾಗುತ್ತದೆ.

ನೀವು ಉಡುಗೊರೆ ಸದಸ್ಯತ್ವಗಳನ್ನು ಖರೀದಿಸಿದ ನಂತರ, ಕೌಂಟ್‌ಡೌನ್ ಟಿಕ್ಕರ್ ನಿಮ್ಮ ಖರೀದಿಯ ಕುರಿತು ಲೈವ್ ಚಾಟ್‌ನಲ್ಲಿ ಸೀಮಿತ ಸಮಯದವರೆಗೆ ಹೈಲೈಟ್ ಮಾಡುತ್ತದೆ. ಸಮಯದ ಅವಧಿಯು ನಿಮ್ಮ ಖರೀದಿ ಮೊತ್ತವನ್ನು ಆಧರಿಸಿರುತ್ತದೆ. ನಿಮ್ಮ ಉಡುಗೊರೆಯನ್ನು ಘೋಷಿಸುವ ಮೊದಲು ರಚನೆಕಾರರು ಲೈವ್ ಚಾಟ್ ಅಥವಾ ಲೈವ್ ಸ್ಟ್ರೀಮ್ ಅನ್ನು ಕೊನೆಗೊಳಿಸಬಹುದು, ಆದರೆ YouTube ಇನ್ನೂ ಸ್ವಲ್ಪ ಸಮಯದವರೆಗೆ ಉಡುಗೊರೆಗಳನ್ನು ವಿತರಿಸುವುದನ್ನು ಮುಂದುವರಿಸುತ್ತದೆ.

ಗಮನಿಸಿ: ಉಡುಗೊರೆ ನೀಡಲಾದ ಸದಸ್ಯತ್ವಗಳ ಸಂಖ್ಯೆ, ನಿಮ್ಮ ಚಾನಲ್‌ನ ಹೆಸರು ಮತ್ತು ನಿಮ್ಮ ಪ್ರೊಫೈಲ್ ಚಿತ್ರವು ಸಾರ್ವಜನಿಕರಿಗೆ ಗೋಚರಿಸುತ್ತವೆ. ಈ ಮಾಹಿತಿಯು ನಮ್ಮ YouTube ಡೇಟಾ API ಸೇವೆಯ ಮೂಲಕ ಚಾನಲ್‌ಗೂ ಲಭ್ಯವಿರಬಹುದು ಮತ್ತು ಈ ಮಾಹಿತಿಯನ್ನು ಥರ್ಡ್ ಪಾರ್ಟಿ ಸೇವೆಗಳ ಜೊತೆಗೆ ಚಾನಲ್ ಹಂಚಿಕೊಳ್ಳಬಹುದು. YouTube ತನ್ನ ಓರ್ವ ವೀಕ್ಷಕನಿಗೆ ಮೊದಲ ಉಡುಗೊರೆಯನ್ನು ವಿತರಿಸಿದ ನಂತರ, ನಿಮ್ಮ ಉಡುಗೊರೆ ಸದಸ್ಯತ್ವದ ಖರೀದಿಯನ್ನು ಪರಿಗಣಿಸಲಾಗುವುದು.

ಆಯ್ಕೆ ಮಾಡಿ ಮತ್ತು ಉಡುಗೊರೆ ಸದಸ್ಯತ್ವಗಳನ್ನು ಪಡೆಯಿರಿ
ಉಡುಗೊರೆ ಸದಸ್ಯತ್ವಗಳು ಸಹಭಾಗಿ ಚಾನಲ್‌ಗಳಲ್ಲಿ ಮಾತ್ರ ಖರೀದಿಗೆ ಮತ್ತು ರಿಡೆಂಪ್ಶನ್‌ಗೆ ಲಭ್ಯವಿರುತ್ತವೆ. ವೀಕ್ಷಕರು ಈ ಆಯ್ಕೆ ಮಾಡಬಹುದು ಮತ್ತು ವೆಬ್, Android ಅಥವಾ iOS ಸಾಧನಗಳನ್ನು ಬಳಸಿ ಉಡುಗೊರೆಗಳನ್ನು ಪಡೆದುಕೊಳ್ಳಬಹುದು.

ಉಡುಗೊರೆ ಸದಸ್ಯತ್ವಗಳನ್ನು ಖರೀದಿಸುವುದು ಮತ್ತು ಪಡೆಯುವುದು ಹೇಗೆ

ವೀಕ್ಷಕರು ಉಡುಗೊರೆ ಸದಸ್ಯತ್ವಗಳಿಗಾಗಿ ಅರ್ಹತೆ ಪಡೆಯಲು ಆಯ್ಕೆ ಮಾಡಿಕೊಳ್ಳಬೇಕು. ನೀವು ಆಯ್ಕೆ ಮಾಡಿಕೊಂಡ ನಂತರ, ನೀವು ಇತ್ತೀಚೆಗೆ ಸಂವಹನ ನಡೆಸಿದ (ಉದಾಹರಣೆಗೆ, ಆ ಚಾನಲ್‌ನಲ್ಲಿ ವೀಡಿಯೊವನ್ನು ವೀಕ್ಷಿಸುವ ಮೂಲಕ) ಗಿಫ್ಟಿಂಗ್ ಅನ್ನು ಸಕ್ರಿಯಗೊಳಿಸಿದ ಯಾವುದೇ ಚಾನಲ್‌ನಲ್ಲಿ ಉಡುಗೊರೆ ಸದಸ್ಯತ್ವಗಳನ್ನು ಸ್ವೀಕರಿಸಲು ನೀವು ಈಗ ಅರ್ಹರಾಗಿರುತ್ತೀರಿ. ನೀವು ಉಡುಗೊರೆಯನ್ನು ಸ್ವೀಕರಿಸಿದಾಗ, ಅದನ್ನು ಸ್ವಯಂಚಾಲಿತವಾಗಿ ನಿಮ್ಮ ಖಾತೆಗೆ ಅನ್ವಯಿಸಲಾಗುತ್ತದೆ, ಇದರಿಂದ ಬ್ಯಾಡ್ಜ್‌ಗಳು ಮತ್ತು ಕಸ್ಟಮ್ ಎಮೋಜಿಗಳಂತಹ ವಿಶೇಷ ಪರ್ಕ್‌ಗಳಿಗೆ ನಿಮಗೆ ಆ್ಯಕ್ಸೆಸ್ ದೊರೆಯುತ್ತದೆ.

ನೀವು ಈ ಹಿಂದೆ ಒಂದು ನಿರ್ದಿಷ್ಟ ಚಾನಲ್‌ಗೆ ಮಾತ್ರ ಆಯ್ಕೆ ಮಾಡಿಕೊಂಡಿದ್ದರೆ, ಆ ಚಾನಲ್‌ನಲ್ಲಿ ಉಡುಗೊರೆಗಳನ್ನು ಸ್ವೀಕರಿಸಲು ನೀವು ಈಗಲೂ ಅರ್ಹರಾಗಿರುತ್ತೀರಿ. ಇತರ ಚಾನಲ್‌ಗಳಲ್ಲಿ ಉಡುಗೊರೆಗಳನ್ನು ಸ್ವೀಕರಿಸುವುದಕ್ಕೆ ಅರ್ಹರಾಗಲು ನೀವು ಈಗಲೂ ಎಲ್ಲಾ ಚಾನಲ್‌ಗಳಲ್ಲಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಉಡುಗೊರೆ ಸದಸ್ಯತ್ವಗಳಿಗಾಗಿ ಆಯ್ಕೆ ಮಾಡಲು, ನೀವು ಒಂದು YouTube ಚಾನಲ್ ಮೂಲಕ ಸೈನ್ ಇನ್ ಮಾಡಿರಬೇಕು ಮತ್ತು ಅದು ಬ್ರ್ಯಾಂಡ್ ಖಾತೆ ಆಗಿರಬಾರದು. ನೀವು ಬ್ರ್ಯಾಂಡ್ ಖಾತೆಯನ್ನು ಬಳಸುತ್ತಿದ್ದೀರಾ ಎಂದು ಪರಿಶೀಲಿಸಿ. ಸದ್ಯಕ್ಕೆ, ಚಾನಲ್ ಸದಸ್ಯರು ಉಡುಗೊರೆ ಸದಸ್ಯತ್ವಗಳನ್ನು ಪಡೆಯಲು ಅರ್ಹರಾಗಿಲ್ಲ.

ಉಡುಗೊರೆ ಸದಸ್ಯತ್ವಗಳಿಗಾಗಿ ಆಯ್ಕೆಮಾಡಿ

ಉಡುಗೊರೆಗಳಿಗಾಗಿ ಆಯ್ಕೆ ಮಾಡಲು ಹಲವಾರು ಮಾರ್ಗಗಳಿವೆ, ಅವುಗಳೆಂದರೆ:

  • ಲೈವ್ ಚಾಟ್‌ನಲ್ಲಿ
  • ವೀಡಿಯೊ ವೀಕ್ಷಣೆ ಪುಟದಲ್ಲಿ
  • ಚಾನಲ್ ಪುಟದಲ್ಲಿ
  • ರಚನೆಕಾರರ ಅನನ್ಯ ಆಪ್ಟ್ ಇನ್ URL ಬಳಸಿಕೊಂಡು (ಚಾನಲ್ ಪುಟಕ್ಕೆ ಲಿಂಕ್, ಇದು ಕೊನೆಯಲ್ಲಿ /allow_gifts ಹೊಂದಿರುತ್ತದೆ).

ಲೈವ್ ಚಾಟ್ ಮೂಲಕ ಆಯ್ಕೆ ಮಾಡುವುದು

  1. ಅರ್ಹ ಚಾನಲ್‌ನ ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್ ಶೋಗೆ ಹೋಗಿ.
  2. ಲೈವ್ ಚಾಟ್‌ನಲ್ಲಿ:
    1. ಉಡುಗೊರೆಗಳನ್ನು ಅನುಮತಿಸಿ ಆಯ್ಕೆಮಾಡಿ ಅಥವಾ
    2. ಪಿನ್ ಮಾಡಲಾದ ಮೆಂಬರ್‌ಶಿಪ್ ಗಿಫ್ಟಿಂಗ್ ಆಯ್ಕೆಮಾಡಿ.
  3. "ಉಡುಗೊರೆಗಳನ್ನು ಅನುಮತಿಸಿ” ಎಂಬ ಸ್ವಿಚ್ ಆನ್ ಮಾಡುವ ಮೂಲಕ ನೀವು ಆಯ್ಕೆ ಮಾಡಿಕೊಳ್ಳಲು ಬಯಸುತ್ತೀರಿ ಎಂಬುದನ್ನು ದೃಢೀಕರಿಸಿ

ಚಾನಲ್ ಅಥವಾ ವೀಕ್ಷಣೆ ಪುಟದ ಮೂಲಕ ಆಯ್ಕೆಮಾಡಿ:

  1. ಅರ್ಹ ಚಾನಲ್‌ನ ಪುಟಕ್ಕೆ ಹೋಗಿ ಅಥವಾ ವೀಡಿಯೊ ವೀಕ್ಷಣೆ ಪುಟಕ್ಕೆ ಹೋಗಿ.
  2. ಸೇರಿ ನಂತರ ಇನ್ನಷ್ಟು   ನಂತರ ”ಉಡುಗೊರೆ ಸೆಟ್ಟಿಂಗ್‌ಗಳು” ಕ್ಲಿಕ್ ಮಾಡಿ.
  3. "ಉಡುಗೊರೆಗಳನ್ನು ಅನುಮತಿಸಿ” ಎಂಬ ಸ್ವಿಚ್ ಆನ್ ಮಾಡುವ ಮೂಲಕ ನೀವು ಆಯ್ಕೆ ಮಾಡಿಕೊಳ್ಳಲು ಬಯಸುತ್ತೀರಿ ಎಂಬುದನ್ನು ದೃಢೀಕರಿಸಿ.
​​ಗಮನಿಸಿ: ನೀವು ಉಡುಗೊರೆ ಸದಸ್ಯತ್ವಕ್ಕೆ ಆಯ್ಕೆಯಾಗಿದ್ದರೆ, ನಿಮ್ಮ ಚಾನಲ್‌ನ ಹೆಸರು ಸಾರ್ವಜನಿಕರಿಗೆ ಕಾಣಿಸುತ್ತದೆ. ಈ ಮಾಹಿತಿಯು ನಮ್ಮ YouTube ಡೇಟಾ API ಸೇವೆಯ ಮೂಲಕ ಚಾನಲ್‌ಗೂ ಲಭ್ಯವಿರಬಹುದು ಮತ್ತು ಈ ಮಾಹಿತಿಯನ್ನು ಥರ್ಡ್ ಪಾರ್ಟಿ ಸೇವೆಗಳ ಜೊತೆಗೆ ಚಾನಲ್ ಹಂಚಿಕೊಳ್ಳಬಹುದು.

ಉಡುಗೊರೆಗಳನ್ನು ಅನುಮತಿಸುವ ಆಯ್ಕೆಯಿಂದ ಹೊರಗುಳಿಯಲು, ಸದಸ್ಯತ್ವಗಳನ್ನು ಸಕ್ರಿಯಗೊಳಿಸಿರುವ ಯಾವುದೇ ಚಾನಲ್ ಅಥವಾ ವೀಕ್ಷಣಾ ಪುಟದಲ್ಲಿ ಸೇರಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ "ಉಡುಗೊರೆ ಸೆಟ್ಟಿಂಗ್‌ಗಳು" ಎಂಬುದನ್ನು ತೆರೆಯಿರಿ ಮತ್ತು "ಉಡುಗೊರೆಗಳನ್ನು ಅನುಮತಿಸಿ" ಟಾಗಲ್ ಅನ್ನು ಆಫ್ ಮಾಡಿ. ನೀವು ಇನ್ನು ಮುಂದೆ ಯಾವುದೇ ಚಾನಲ್‌ನಲ್ಲಿ ಉಡುಗೊರೆಗಳನ್ನು ಸ್ವೀಕರಿಸಲು ಅರ್ಹರಾಗಿರುವುದಿಲ್ಲ.

ಉಡುಗೊರೆ ಸದಸ್ಯತ್ವವನ್ನು ಪಡೆಯಿರಿ

ಚಾನಲ್ ಸದಸ್ಯರು ಅಥವಾ ರಚನೆಕಾರರು ಉಡುಗೊರೆ ಸದಸ್ಯತ್ವಗಳನ್ನು ಖರೀದಿಸಿದಾಗ, ಆ ಕುರಿತು ಲೈವ್ ಚಾಟ್‌ನಲ್ಲಿ ಘೋಷಿಸಲಾಗುತ್ತದೆ. 1 ತಿಂಗಳ ಮಟ್ಟಿಗೆ ಸದಸ್ಯತ್ವವನ್ನು ಪಡೆಯಲು ನೀವು ಆಯ್ಕೆಯಾಗಿದ್ದರೆ, ಲೈವ್ ಚಾಟ್‌ನಲ್ಲಿ ಒಂದು ನೋಟಿಫಿಕೇಶನ್ ಕಾಣಿಸುತ್ತದೆ ಮತ್ತು ನಾವು ನಿಮಗೊಂದು ಇಮೇಲ್ ನೋಟಿಫಿಕೇಶನ್ ಅನ್ನು ಸಹ ಕಳುಹಿಸುತ್ತೇವೆ.

ಉಡುಗೊರೆ ಸದಸ್ಯತ್ವಗಳು ಮರುಪಾವತಿಗೆ ಅರ್ಹವಾಗಿರುವುದಿಲ್ಲ ಮತ್ತು ನಗದು ರೂಪದಲ್ಲಿ ಅವುಗಳನ್ನು ವಿನಿಮಯ ಮಾಡಿಕೊಳ್ಳಲಾಗುವುದಿಲ್ಲ. ಎಲ್ಲಾ ಉಡುಗೊರೆ ಸದಸ್ಯತ್ವಗಳಿಗೆ ಚಾನಲ್ ಸದಸ್ಯತ್ವದ ಪರ್ಕ್‌ಗಳನ್ನು ಆ್ಯಕ್ಸೆಸ್ ಮಾಡಲು 1 ತಿಂಗಳವರೆಗೆ ಕಾಲಾವಕಾಶ ನೀಡಲಾಗುತ್ತದೆ ಮತ್ತು ಅದರ ನಂತರ ಅವಧಿ ಮುಗಿಯುತ್ತವೆ.

ನಿಮ್ಮ ಸದಸ್ಯತ್ವದ ಪ್ರಯೋಜನಗಳನ್ನು ನೋಡಲು ಮತ್ತು ಪರ್ಕ್‌ಗಳನ್ನು ಆ್ಯಕ್ಸೆಸ್ ಮಾಡಲು:

  • ನೀವು ಸದಸ್ಯರಾಗಿರುವ ಚಾನಲ್‌ನಲ್ಲಿ ‘ಸದಸ್ಯತ್ವಗಳು’ ಟ್ಯಾಬ್ ಆಯ್ಕೆಮಾಡಿ, ಅಥವಾ
  • ಆ ಚಾನಲ್‌ನ ಯಾವುದೇ ವೀಡಿಯೊ ಪುಟದಲ್ಲಿ, ಪರ್ಕ್‌ಗಳನ್ನು ನೋಡಿ ಆಯ್ಕೆಮಾಡಿ.

ಉಡುಗೊರೆ ಸದಸ್ಯತ್ವಗಳು ಪುನರಾವರ್ತನೆಯಾಗುವುದಿಲ್ಲ ಹಾಗೂ ಅದರ ಅವಧಿ ಮುಗಿದ ನಂತರ ನಿಮಗೆ ಶುಲ್ಕ ವಿಧಿಸಲಾಗುವುದಿಲ್ಲ. ನಿಮ್ಮ ಉಡುಗೊರೆ ಸದಸ್ಯತ್ವವನ್ನು ಮುಂಚಿತವಾಗಿ ಕೊನೆಗೊಳಿಸಲು ನೀವು ಬಯಸಿದರೆ, ಬೆಂಬಲ ತಂಡವನ್ನು ಸಂಪರ್ಕಿಸಿ. ಉಡುಗೊರೆ ಸದಸ್ಯತ್ವದ ಪ್ರಯೋಜನಗಳಿಗೆ ನೀವು ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುತ್ತೀರಿ.

ಪಾವತಿ ಮತ್ತು ಬಿಲ್ಲಿಂಗ್ ಮಾಹಿತಿ

ಬಿಲ್ಲಿಂಗ್ ಮಾಹಿತಿ

ಹೊಸ ಮತ್ತು ಪ್ರಸ್ತುತವಿರುವ ಸದಸ್ಯರು

ನೀವು ಒಂದು ಸಕ್ರಿಯ ಪಾವತಿಸಿದ ಸದಸ್ಯತ್ವವನ್ನು ಹೊಂದಿದ್ದರೆ, ಪ್ರತಿ ಮಾಸಿಕ ಬಿಲ್ಲಿಂಗ್ ಸೈಕಲ್‌ನ ಪ್ರಾರಂಭದಲ್ಲಿ ನಿಮಗೆ ಸ್ವಯಂಚಾಲಿತವಾಗಿ ಶುಲ್ಕ ವಿಧಿಸಲಾಗುತ್ತದೆ.

ರದ್ದುಗೊಳಿಸಲಾದ ಸದಸ್ಯತ್ವಗಳು

ನೀವು ಪಾವತಿಸಿದ ಚಾನಲ್ ಸದಸ್ಯತ್ವವನ್ನು ರದ್ದುಗೊಳಿಸಿದರೆ, ಅದನ್ನು ಮರುಸಕ್ರಿಯಗೊಳಿಸದ ಹೊರತು ನಿಮಗೆ ಮತ್ತೆ ಶುಲ್ಕಗಳನ್ನು ವಿಧಿಸುವುದಿಲ್ಲ. ನಿಮ್ಮ ಆ ಬಿಲ್ಲಿಂಗ್ ಅವಧಿಯು ಕೊನೆಗೊಳ್ಳುವವರೆಗೆ ಸದಸ್ಯತ್ವದ ಪರ್ಕ್‌ಗಳನ್ನು ಸ್ವೀಕರಿಸುತ್ತಲೇ ಇರುತ್ತೀರಿ.

ಮರುಸಕ್ರಿಯಗೊಳಿಸಿದ ಸದಸ್ಯತ್ವಗಳು

ನೀವು ಯಾವಾಗ ಬೇಕಾದರೂ ನಿಮ್ಮ ಸದಸ್ಯತ್ವವನ್ನು ಮರುಸಕ್ರಿಯಗೊಳಿಸಬಹುದು. ನೀವು ರದ್ದುಪಡಿಸಿದ ಅದೇ ಬಿಲ್ಲಿಂಗ್ ಸೈಕಲ್‌ನಲ್ಲಿ ಸದಸ್ಯತ್ವವನ್ನು ಮರುಸಕ್ರಿಯಗೊಳಿಸಿದರೆ, ಆ ಪ್ರಸ್ತುತ ಬಿಲ್ಲಿಂಗ್ ಸೈಕಲ್ ಕೊನೆಗೊಳ್ಳುವವರೆಗೂ ನಿಮಗೆ ಯಾವುದೇ ಶುಲ್ಕಗಳನ್ನು ವಿಧಿಸುವುದಿಲ್ಲ.

ನಿಮ್ಮ ಪಾವತಿ ಮಾಹಿತಿಯನ್ನು ಅಪ್‌ಡೇಟ್ ಮಾಡಿ

ನಿಮ್ಮ Google ಖಾತೆಯ ನನ್ನ ಸಬ್‌ಸ್ಕ್ರಿಪ್ಶನ್‌ಗಳು ವಿಭಾಗಕ್ಕೆ ಹೋಗಿ, ನೀವು ಪಾವತಿಸಿದ ಸದಸ್ಯತ್ವಕ್ಕಾಗಿ ಬಳಸಿದ ಕ್ರೆಡಿಟ್ ಕಾರ್ಡ್ ಅನ್ನು ಬದಲಿಸಬಹುದು. ನೀವು ಮೊದಲು, ನಿಮ್ಮ Google ಖಾತೆಗೆ ಹೊಸ ಕಾರ್ಡ್ ಅನ್ನು ಸೇರಿಸಬೇಕಾಗುತ್ತದೆ ಎಂಬುದು ನಿಮ್ಮ ಗಮನದಲ್ಲಿರಲಿ.
ನೀವು ಒಂದು ಸಕ್ರಿಯ ಪಾವತಿಸಿದ ಸದಸ್ಯತ್ವವನ್ನು ಹೊಂದಿದ್ದರೆ, ಪ್ರತಿ ಮಾಸಿಕ ಬಿಲ್ಲಿಂಗ್ ಸೈಕಲ್‌ನ ಪ್ರಾರಂಭದಲ್ಲಿ ನಿಮಗೆ ಸ್ವಯಂಚಾಲಿತವಾಗಿ ಶುಲ್ಕವನ್ನು ವಿಧಿಸಲಾಗುತ್ತದೆ. ನೀವು youtube.com/paid_memberships ಎಂಬಲ್ಲಿ, ನಿಮ್ಮ ಮುಂದಿನ ಬಿಲ್ಲಿಂಗ್ ದಿನಾಂಕವನ್ನು ನೋಡಬಹುದು ಮತ್ತು ನಿಮ್ಮ ಸದಸ್ಯತ್ವವನ್ನು ನಿರ್ವಹಿಸಬಹುದು.

ಭಾರತದಲ್ಲಿನ ಮರುಕಳಿಸುವ ಶುಲ್ಕಗಳು

ಭಾರತೀಯ ರಿಸರ್ವ್ ಬ್ಯಾಂಕ್‌ನ ಇ-ಮ್ಯಾಂಡೇಟ್ ಅಗತ್ಯತೆಗಳ ಕಾರಣದಿಂದಾಗಿ, ನಿಮ್ಮ ಮರುಕಳಿಸುವ ಸದಸ್ಯತ್ವಗಳಿಗೆ ಇರುವ ಆ್ಯಕ್ಸೆಸ್ ಅನ್ನು ಕಾಪಾಡಿಕೊಳ್ಳಲು ನಿಮ್ಮ ಪಾವತಿ ವಿವರಗಳನ್ನು ನೀವು ದೃಢೀಕರಿಸಬೇಕಾಗುತ್ತದೆ ಅಥವಾ ಮರು-ನಮೂದಿಸಬೇಕಾಗುತ್ತದೆ. ಹಾಗೆ ಮಾಡಲು, YouTube ಆ್ಯಪ್‌ನಲ್ಲಿ ಅಥವಾ youtube.com ನಲ್ಲಿ ಸೂಚನೆಗಳನ್ನು ಅನುಸರಿಸಿ. ಗಮನಿಸಿ, ಈ ಸಮಯದಲ್ಲಿ ನಿಮ್ಮ ಬ್ಯಾಂಕ್ ಮರುಕಳಿಸುವ ಪಾವತಿಯನ್ನು ಬೆಂಬಲಿಸದಿರಬಹುದು. ಮರುಕಳಿಸುವ ಪಾವತಿಗಳನ್ನು ಬೆಂಬಲಿಸುವ ಬ್ಯಾಂಕ್‌ಗಳ ಪಟ್ಟಿಯನ್ನು ಪರಿಶೀಲಿಸಿ ಅಥವಾ ಇನ್ನಷ್ಟು ತಿಳಿಯಿರಿ.

ವಿರಾಮಗೊಳಿಸಿದ ಚಾನಲ್ ಸದಸ್ಯತ್ವಗಳು ನಿಮ್ಮ ಪಾವತಿಗಳ ಮೇಲೆ ಹೇಗೆ ಪರಿಣಾಮ ಬೀರುತ್ತವೆ

“ವಿರಾಮಗೊಳಿಸಲಾದ ಮೋಡ್” ಕುರಿತು ವಿವರಿಸಲಾಗಿದೆ

ಕೆಲವೊಮ್ಮೆ, ಚಾನಲ್ ಸದಸ್ಯತ್ವಗಳನ್ನು “ವಿರಾಮಗೊಳಿಸಲಾದ ಮೋಡ್” ಸ್ಥಿತಿಯಲ್ಲಿ ಇರಿಸಲಾಗುತ್ತದೆ. ಚಾನಲ್ ತನ್ನ MCN ಗಳನ್ನು ಬದಲಾಯಿಸಿದಾಗ, ತಮ್ಮ ಚಾನಲ್ ಅನ್ನು 'ಮಕ್ಕಳಿಗಾಗಿ ರಚಿಸಲಾಗಿದೆ' ಎಂದು ಸೆಟ್ ಮಾಡಿದಾಗ ಅಥವಾ ಮಾನಿಟೈಸ್ ಮಾಡಲು ಸಾಧ್ಯವಾಗದಿದ್ದಾಗ ಹೀಗಾಗಬಹುದು. “ವಿರಾಮಗೊಳಿಸಲಾದ ಮೋಡ್” ಸ್ಥಿತಿಯು ಕಂಡುಬಂದರೆ, ಚಾನಲ್ ತನ್ನ ಸದಸ್ಯತ್ವಗಳ ಮೂಲಕ ಮಾನಿಟೈಸ್ ಮಾಡಲು ಸಾಧ್ಯವಾಗುವುದಿಲ್ಲ ಎಂದರ್ಥ -- ಇದು ಸಾಮಾನ್ಯವಾದ ತಾತ್ಕಾಲಿಕ ಸ್ಥಿತಿಯಾಗಿದೆ. ಚಾನಲ್ “ವಿರಾಮಗೊಳಿಸಲಾದ ಮೋಡ್” ಸ್ಥಿತಿಯಲ್ಲಿದ್ದರೆ, ಪರ್ಕ್‌ಗಳು ಮತ್ತು ಇತರ ಪ್ರಯೋಜನಗಳನ್ನು ನೀಡಲು ಅಂತಹ ಚಾನಲ್‌ಗಳಿಗೆ ಸಾಧ್ಯವಾಗುವುದಿಲ್ಲ ಎಂಬುದನ್ನು ಸಹ ಅರ್ಥೈಸುತ್ತದೆ.

ಪಾವತಿ ವಿವರಗಳು

ನೀವು ಚಾನಲ್‌ನ ಓರ್ವ ಸಕ್ರಿಯ ಪಾವತಿ ಸದಸ್ಯರಾಗಿದ್ದು, ಚಾನಲ್ “ವಿರಾಮಗೊಳಿಸಲಾದ ಮೋಡ್” ಸ್ಥಿತಿಯಲ್ಲಿದ್ದರೆ, ನಿಮ್ಮ ಮಾಸಿಕವಾಗಿ ಮರುಕಳಿಸುವ ಪಾವತಿ, ಬಿಲ್ಲಿಂಗ್ ಸೈಕಲ್ ಮತ್ತು ಸದಸ್ಯತ್ವಗಳಿಗಿರುವ ಆಕ್ಯೆಸ್ ಪ್ರಯೋಜನವನ್ನು ಸಹ ವಿರಾಮಗೊಳಿಸಲಾಗುವುದು.

ನೀವು iOS ಅಥವಾ Android ನಲ್ಲಿ ಚಾನಲ್ ಸದಸ್ಯತ್ವಕ್ಕಾಗಿ ಸೈನ್ ಅಪ್ ಮಾಡಿದ್ದರೆ, ನಿಮ್ಮ ಬಿಲ್ಲಿಂಗ್ ಅವಧಿಯು ಮುಕ್ತಾಯವಾದ ಬಳಿಕ ಚಾನಲ್ 'ವಿರಾಮಗೊಳಿಸಲಾದ ಮೋಡ್' ಸ್ಥಿತಿಯಲ್ಲಿದ್ದರೆ, ನಿಮ್ಮ ಮಾಸಿಕವಾಗಿ ಮರುಕಳಿಸುವ ಪಾವತಿಗಳನ್ನು ಬಹುಶಃ ರದ್ದುಗೊಳಿಸಬಹುದು. ಹೀಗಾದರೆ, ನಿಮ್ಮ ಸದಸ್ಯತ್ವವನ್ನು ರದ್ದುಗೊಳಿಸಲಾಗಿದೆ ಮತ್ತು ನೀವು ಚಾನಲ್‌ನ ಸದಸ್ಯತ್ವವನ್ನು 'ವಿರಾಮಗೊಳಿಸಿರದ' ಸ್ಥಿತಿಗೆ ಬದಲಾಯಿಸಿದರೆ ಮಾತ್ರವೇ ಮತ್ತೆ ಸೇರಲು ಸಾಧ್ಯವಾಗುತ್ತದೆ ಎಂಬುದಾಗಿ ನಿಮಗೆ ತಿಳಿಸಲಾಗುತ್ತದೆ.

ಚಾನಲ್‌ನಲ್ಲಿನ ಸದಸ್ಯತ್ವಗಳನ್ನು ಗರಿಷ್ಠ 90 ದಿನಗಳವರೆಗೆ ವಿರಾಮಗೊಳಿಸಬಹುದು; ಅದಾದ ಬಳಿಕ, ಸದಸ್ಯತ್ವಗಳು ಮತ್ತು ಸದಸ್ಯರ ಮಾಸಿಕವಾಗಿ ಮರುಕಳಿಸುವ ಪಾವತಿಗಳನ್ನು ರದ್ದುಗೊಳಿಸಲಾಗುತ್ತದೆ.

ಕೊನೆಗೊಳಿಸಿದ ಚಾನಲ್ ಸದಸ್ಯತ್ವಗಳು ನಿಮ್ಮ ಪಾವತಿಯ ಮೇಲೆ ಹೇಗೆ ಪರಿಣಾಮ ಬೀರುತ್ತವೆ

ಚಾನಲ್ ಕೊನೆಗೊಳಿಸಿದರೆ ಅಥವಾ ಸದಸ್ಯತ್ವಗಳು ಫೀಚರ್‌ಗೆ ಆ್ಯಕ್ಸೆಸ್ ಅನ್ನು ಕಳೆದುಕೊಂಡರೆ (ಉದಾ, ಅದು ಇನ್ನು ಮುಂದೆ YouTube ಪಾಲುದಾರ ಕಾರ್ಯಕ್ರಮದ ಭಾಗವಾಗಿರದಿದ್ದರೆ), ಎಲ್ಲಾ ಸದಸ್ಯತ್ವದ ಮಾಸಿಕ ಮರುಕಳಿಸುವ ಪಾವತಿಗಳು ಮತ್ತು ಎಲ್ಲಾ ಸದಸ್ಯತ್ವದ ಪರ್ಕ್‌ಗಳಿಗಿರುವ ಆ್ಯಕ್ಸೆಸ್ ಅನ್ನು ತಕ್ಷಣವೇ ಕೊನೆಗೊಳಿಸಲಾಗುತ್ತದೆ. ಚಾನಲ್ ಕೊನೆಗೊಳಿಸುವ ಸಮಯದಲ್ಲಿ ಸದಸ್ಯರಾಗಿದ್ದ ಎಲ್ಲಾ ವೀಕ್ಷಕರಿಗೆ, ಮರುಪಾವತಿಗೆ ವಿನಂತಿಸುವುದಕ್ಕೆ ಸಂಬಂಧಪಟ್ಟ ಮಾಹಿತಿಯ ಸಮೇತವಾಗಿ ಒಂದು ಕೊನೆಗೊಳಿಸುವಿಕೆ ಇಮೇಲ್ ಸೂಚನೆಯನ್ನು ಕಳುಹಿಸಲಾಗುತ್ತದೆ.

ಚಾನಲ್ ಸದಸ್ಯತ್ವದ ಮರುಪಾವತಿಗಳು

ನೀವು ಯಾವಾಗ ಬೇಕಾದರೂ ನಿಮ್ಮ ಪಾವತಿಸಿದ ಚಾನಲ್ ಸದಸ್ಯತ್ವವನ್ನು ರದ್ದುಗೊಳಿಸಬಹುದು. ಒಮ್ಮೆ ನೀವು ರದ್ದುಗೊಳಿಸಿದರೆ, ನಿಮಗೆ ಪುನಃ ಶುಲ್ಕ ವಿಧಿಸಲಾಗುವುದಿಲ್ಲ. ಬಿಲ್ಲಿಂಗ್ ಸೈಕಲ್ ಮುಗಿಯುವವರೆಗೆ ನೀವು ಬ್ಯಾಡ್ಜ್ ಬಳಸಬಹುದು ಮತ್ತು ರಚನೆಕಾರರ ಪರ್ಕ್‌ಗಳನ್ನು ಆ್ಯಕ್ಸೆಸ್ ಮಾಡಬಹುದು. ನೀವು ರದ್ದುಗೊಳಿಸಿದಾಗ ಮತ್ತು ನಿಮ್ಮ ಚಾನಲ್ ಸದಸ್ಯತ್ವವು ಅಧಿಕೃತವಾಗಿ ಕೊನೆಗೊಳ್ಳುವ ನಡುವಿನ ಅವಧಿಗೆ ನಿಮಗೆ ಮರುಪಾವತಿ ಮಾಡಲಾಗುವುದಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.
ನಿಮ್ಮ ಖಾತೆಯಲ್ಲಿ ಅನಧಿಕೃತ ಚಾನಲ್ ಸದಸ್ಯತ್ವದ ಶುಲ್ಕವನ್ನು ವಿಧಿಸಿರುವುದು ನಿಮ್ಮ ಗಮನಕ್ಕೆ ಬಂದರೆ, ಅನಧಿಕೃತ ಶುಲ್ಕದ ಕುರಿತು ವರದಿ ಮಾಡಲು ಈ ಹಂತಗಳನ್ನು ಅನುಸರಿಸಿ. ಒಂದು ವೇಳೆ ರಚನೆಕಾರರ ಪರ್ಕ್‌ಗಳು ಅಥವಾ ನಿಮ್ಮ ಪಾವತಿಸಿದ ಚಾನಲ್ ಸದಸ್ಯತ್ವದ ಇತರ ಫೀಚರ್‌ಗಳು ದೋಷಪೂರಿತವಾಗಿದ್ದರೆ, ಅಲಭ್ಯವಾಗಿದ್ದರೆ ಅಥವಾ ನಿಮಗೆ ತಿಳಿಸಿದಂತೆ ಕಾರ್ಯನಿರ್ವಹಿಸದಿದ್ದರೆ, ನೀವು ಯಾವಾಗ ಬೇಕಾದರೂ ನಮ್ಮ ಬೆಂಬಲ ತಂಡವನ್ನು ಸಂಪರ್ಕಿಸಬಹುದು ಮತ್ತು ಮರುಪಾವತಿಗೆ ವಿನಂತಿಸಬಹುದು. ಭಾಗಶಃ ಮುಗಿದ ಬಿಲ್ಲಿಂಗ್ ಅವಧಿಗಳಿಗೆ ನಾವು ಮರುಪಾವತಿಗಳನ್ನು ಅಥವಾ ಕ್ರೆಡಿಟ್‌ಗಳನ್ನು ನೀಡುವುದಿಲ್ಲ.
ನೀವು Apple ಮೂಲಕ ಸೈನ್ ಅಪ್ ಮಾಡಿರುವ ಸದಸ್ಯರಾಗಿದ್ದರೆ, ನಿಮ್ಮ ಪಾವತಿಸಿದ ಚಾನಲ್ ಸದಸ್ಯತ್ವಕ್ಕೆ ಸಂಬಂಧಪಟ್ಟ ಮರುಪಾವತಿಗಾಗಿ ವಿನಂತಿಸಲು Apple ಬೆಂಬಲವನ್ನು ಸಂಪರ್ಕಿಸಬೇಕು. Apple ನ ಮರುಪಾವತಿ ನೀತಿಯು ಅನ್ವಯಿಸುತ್ತದೆ.

ರಚನೆಕಾರರ ಜೊತೆಗೆ ಚಾನಲ್ ಸದಸ್ಯತ್ವದ ಆದಾಯ ಹಂಚಿಕೆ

ಸ್ಥಳೀಯ ಮಾರಾಟ ತೆರಿಗೆ ಮತ್ತು ಇತರ ಶುಲ್ಕಗಳನ್ನು (ದೇಶ ಮತ್ತು ಬಳಕೆದಾರರ ಪ್ಲ್ಯಾಟ್‌ಫಾರ್ಮ್ ಅನ್ನು ಅವಲಂಬಿಸಿ) ಕಡಿತಗೊಳಿಸಿದ ನಂತರ, Google ಗುರುತಿಸಿರುವ ಪ್ರಕಾರವಾಗಿ ಸದಸ್ಯತ್ವದ ಆದಾಯದಲ್ಲಿ 70% ರಷ್ಟು ಪಾಲನ್ನು ರಚನೆಕಾರರು ಪಡೆಯುತ್ತಾರೆ. ಪಾವತಿ ಪ್ರಕ್ರಿಯೆಗೊಳಿಸುವಿಕೆ ಶುಲ್ಕಗಳನ್ನು (ಕ್ರೆಡಿಟ್ ಕಾರ್ಡ್ ಶುಲ್ಕಗಳು ಸೇರಿದಂತೆ) ಸದ್ಯಕ್ಕೆ YouTube ಪಾವತಿಸುತ್ತಿದೆ

ನಿಮ್ಮ ಸದಸ್ಯತ್ವದ ಪ್ರಯೋಜನಗಳನ್ನು ಬಳಸಿ ಮತ್ತು ನಿರ್ವಹಿಸಿ

ಎಲ್ಲಾ ಸದಸ್ಯರಿಗಾಗಿ ಚಾನಲ್ ಸದಸ್ಯತ್ವದ ಪ್ರಯೋಜನಗಳು

ನೀವು ಓರ್ವ ಸದಸ್ಯರಾದರೆ, ನಿರ್ದಿಷ್ಟ ಪ್ರಯೋಜನಗಳಿಗೆ ಆ್ಯಕ್ಸೆಸ್ ಪಡೆಯುತ್ತೀರಿ. ನೀವು ಸೇರುವ ವಿವಿಧ ಹಂತಗಳ ಆಧಾರದ ಮೇಲೆ ವಿಭಿನ್ನ ಪರ್ಕ್‌ಗಳನ್ನು ಪಡೆಯುತ್ತೀರಿ.
  • ಸದಸ್ಯರಿಗೆ-ಮಾತ್ರ ಸಮುದಾಯ ಪೋಸ್ಟ್‌ಗಳು: ನೀವು ಚಾನಲ್‌ನ ಸಮುದಾಯ ಟ್ಯಾಬ್‌ನಲ್ಲಿ ಸದಸ್ಯರಿಗೆ-ಮಾತ್ರ ಪೋಸ್ಟ್‌ಗಳನ್ನು ವೀಕ್ಷಿಸಬಹುದು. ವಿಶೇಷ ಕಂಟೆಂಟ್ ಅನ್ನು “ಸದಸ್ಯರಿಗೆ-ಮಾತ್ರ” ಎಂದು ಟ್ಯಾಗ್ ಮಾಡಲಾಗಿರುತ್ತದೆ ಮತ್ತು ಪಠ್ಯದ ಪೋಸ್ಟ್‌ಗಳು, GIF ಗಳು, ಸಮೀಕ್ಷೆಗಳು, ವೀಡಿಯೊಗಳು, ಮುಂತಾದವುಗಳನ್ನು ಒಳಗೊಂಡಿರುತ್ತದೆ.
  • ಸದಸ್ಯರ ಗುರುತಿಸುವಿಕೆ ಶೆಲ್ಫ್: ರಚನೆಕಾರರು ಈ ಶೆಲ್ಫ್ ಅನ್ನು ಆನ್ ಮಾಡಿದ್ದರೆ, ನಿಮ್ಮ ಅವತಾರ್ ಅನ್ನು ಚಾನಲ್ ಪುಟದಲ್ಲಿರುವ ಇತರ ಸಕ್ರಿಯ ಸದಸ್ಯರೊಂದಿಗೆ ತೋರಿಸಬಹುದು. ಈ ಶೆಲ್ಫ್, ತಮ್ಮ ಚಾನಲ್‌ನ ಸದಸ್ಯರಾಗಿದ್ದಕ್ಕಾಗಿ ಸಾರ್ವಜನಿಕವಾಗಿ ನಿಮಗೆ ಧನ್ಯವಾದವನ್ನು ತಿಳಿಸುವ ರಚನೆಕಾರರ ಒಂದು ವಿಧಾನವಾಗಿದೆ. ನಿಮ್ಮ ಸದಸ್ಯತ್ವವನ್ನು ರದ್ದುಗೊಳಿಸಿದರೆ, ನೀವು ಇನ್ನು ಮುಂದೆ ಶೆಲ್ಫ್‌ನಲ್ಲಿ ಕಾಣಿಸುವುದಿಲ್ಲ.
  • ಸದಸ್ಯರ ಮೈಲಿಗಲ್ಲು ಚಾಟ್‌ಗಳು: ನೀವು ಸದಸ್ಯರಾಗಿ ಉಳಿಯುವ ಪ್ರತಿ ತಿಂಗಳಿಗೆ (ನಿಮ್ಮ ಸತತ 2ನೇ ತಿಂಗಳ ಪ್ರಾರಂಭದಿಂದ) ಅನುಗುಣವಾಗಿ, ನೀವು ಒಂದು ಸದಸ್ಯರ ಮೈಲಿಗಲ್ಲು ಚಾಟ್ ಅನ್ನು ಪಡೆಯುತ್ತೀರಿ. ಸದಸ್ಯರ ಮೈಲಿಗಲ್ಲು ಚಾಟ್‌ಗಳೆಂದರೆ, ಲೈವ್ ಸ್ಟ್ರೀಮ್‌ಗಳು ಅಥವಾ ಪ್ರೀಮಿಯರ್‌ಗಳಲ್ಲಿ ನಡೆಸುವ ಲೈವ್ ಚಾಟ್‌ನಲ್ಲಿ ಬಳಸಬಹುದಾದ ವಿಶೇಷವಾಗಿ ಹೈಲೈಟ್ ಮಾಡಿದ ಸಂದೇಶಗಳಾಗಿರುತ್ತವೆ. ಈ ವಿಶೇಷ ಸಂದೇಶಗಳು ನೀವು ಒಟ್ಟಾರೆ ಎಷ್ಟು ಸಮಯದಿಂದ ಈ ಚಾನಲ್‌ನ ಸದಸ್ಯರಾಗಿರುವಿರಿ ಮತ್ತು ಎಲ್ಲಾ ವೀಕ್ಷಕರಿಗೆ ಕಾಣಿಸುತ್ತಿದ್ದೀರಾ ಎಂಬುದನ್ನು ಹೈಲೈಟ್ ಮಾಡುತ್ತದೆ.
  • ಚಾನಲ್ ಬ್ಯಾಡ್ಜ್‌ಗಳು: ನಿಮ್ಮ ಚಾನಲ್‌ನಲ್ಲಿ ನೀವು ಮಾಡುವ ಎಲ್ಲಾ ಕಾಮೆಂಟ್‌ಗಳು ಮತ್ತು ಲೈವ್ ಚಾಟ್‌ಗಳಲ್ಲಿ ನಿಮ್ಮ ಚಾನಲ್ ಹೆಸರಿನ ಪಕ್ಕದಲ್ಲಿ ಕಾಣಿಸಿಕೊಳ್ಳುವ ವಿಶೇಷವಾದ ಸಾರ್ವಜನಿಕವಾಗಿ ನೋಡಬಹುದಾದ ಸದಸ್ಯತ್ವ ಬ್ಯಾಡ್ಜ್ ಇದಾಗಿದೆ.
    • ಕೆಲವು ಚಾನಲ್‌ಗಳಲ್ಲಿ, ವಿಭಿನ್ನ ಬಣ್ಣದ ಡೀಫಾಲ್ಟ್ ಬ್ಯಾಡ್ಜ್‌ಗಳು ಅಥವಾ ಕಸ್ಟಮ್ ಬ್ಯಾಡ್ಜ್‌ಗಳ ಮೂಲಕ ನೀವು ಎಷ್ಟು ಸಮಯದಿಂದ ಸದಸ್ಯರಾಗಿರುವಿರಿ ಎಂಬುದನ್ನು ಬ್ಯಾಡ್ಜ್ ಪ್ರತಿಬಿಂಬಿಸುತ್ತದೆ.
  • ಸದಸ್ಯರಿಗೆ-ಮಾತ್ರ ವೀಡಿಯೊಗಳು: ವಿಶೇಷ ವೀಡಿಯೊಗಳು ಸೂಕ್ತ ಹಂತದಲ್ಲಿ ಚಾನಲ್ ಸದಸ್ಯರಿಗೆ-ಮಾತ್ರ ವೀಕ್ಷಣೆಗೆ ಲಭ್ಯವಿರುತ್ತವೆ. ಯಾರಾದರೂ ಸದಸ್ಯರಿಗೆ-ಮಾತ್ರ ಮೀಸಲಾಗಿರುವ ವೀಡಿಯೊವನ್ನು ಕಂಡುಕೊಳ್ಳಬಹುದು, ಆದರೆ ಸೂಕ್ತ ಹಂತಗಳಲ್ಲಿರುವ ಸದಸ್ಯರು ಮಾತ್ರ ಅದನ್ನು ವೀಕ್ಷಿಸಬಹುದು. ಈ ವೀಡಿಯೊಗಳನ್ನು ಚಾನಲ್‌ನ ಸದಸ್ಯತ್ವಗಳು, ಕಂಟೆಂಟ್ ಮತ್ತು ಸಮುದಾಯ ಟ್ಯಾಬ್‌ಗಳಲ್ಲಿ ಕಾಣಬಹುದಾಗಿದೆ. ಈ ವೀಡಿಯೊಗಳು ಸದಸ್ಯರ ಮುಖಪುಟ ಮತ್ತು ಸಬ್‌ಸ್ಕ್ರಿಪ್ಶನ್‌ಗಳು ಫೀಡ್‌ನಲ್ಲಿಯೂ ಕಾಣಿಸಿಕೊಳ್ಳಬಹುದು. 
  • ಹೊಸ ಸದಸ್ಯರಿಗೆ ಸಂದೇಶ: ಒಂದು ಚಾನಲ್‌ನ ಲೈವ್ ಸ್ಟ್ರೀಮ್ ಸಮಯದಲ್ಲಿ ನೀವು ಚಾನಲ್ ಸದಸ್ಯರಾಗಿದ್ದರೆ, ಲೈವ್ ಚಾಟ್‌ನಲ್ಲಿ ಎದ್ದುಗಾಣಿಸುವ ಹಸಿರು ಬಣ್ಣದಲ್ಲಿ "ಹೊಸ ಸದಸ್ಯರು" ಸಂದೇಶವನ್ನು ಕಳುಹಿಸಲಾಗುತ್ತದೆ. ನಿಮ್ಮ ಪ್ರೊಫೈಲ್ ಚಿತ್ರವನ್ನು ಚಾಟ್‌ನ ಮೇಲ್ಬಾಗದಲ್ಲಿ 5 ನಿಮಿಷಗಳವರೆಗೆ ಪಿನ್ ಮಾಡಲಾಗುತ್ತದೆ.
  • ಸದಸ್ಯರಿಗೆ-ಮಾತ್ರ ಲೈವ್ ಚಾಟ್: ಸಾರ್ವಜನಿಕ ಲೈವ್ ಸ್ಟ್ರೀಮ್‌ಗಳ ಸಂದರ್ಭದಲ್ಲಿ, ರಚನೆಕಾರರು ಚಾಟ್ ಅನ್ನು ಸದಸ್ಯರಿಗೆ-ಮಾತ್ರ ಎಂಬುದಾಗಿ ಸೆಟ್ ಮಾಡಬಹುದು. ಪ್ರತಿಯೊಬ್ಬರೂ ಈಗಲೂ ಲೈವ್ ಸ್ಟ್ರೀಮ್ ಅನ್ನು ವೀಕ್ಷಿಸಬಹುದಾದರೂ, ಸದಸ್ಯರು ಮಾತ್ರ ಚಾಟ್‌ಗಳನ್ನು ಪೋಸ್ಟ್ ಮಾಡಬಹುದು. 
  • ಕಸ್ಟಮ್ ಎಮೋಜಿ: ರಚನೆಕಾರರು ಅಪ್‌ಲೋಡ್ ಮಾಡಿದ್ದರೆ, ಚಾನಲ್ ಸದಸ್ಯರು ಚಾನಲ್‌ನ ವೀಡಿಯೊಗಳು ಮತ್ತು ಲೈವ್ ಚಾಟ್‌ಗಳಲ್ಲಿ ಮಾಡುವ ತಮ್ಮ ಕಾಮೆಂಟ್‌ಗಳಲ್ಲಿ ವಿಶೇಷ ಎಮೋಜಿಯನ್ನು ಬಳಸಬಹುದು. ನೀವು ಲೈವ್ ಚಾಟ್‌ನಲ್ಲಿ ಎಮೋಜಿಯನ್ನು ಆಟೋಕಂಪ್ಲೀಟ್ ಮಾಡಲು ರಚನೆಕಾರರು ನಿಯೋಜಿಸಿರುವ ಕುಟುಂಬದ ಹೆಸರನ್ನು ಬಳಸುತ್ತೀರಿ. 
  • ಇತರ ರಚನೆಕಾರರ ಪರ್ಕ್‌ಗಳು: ಚಾನಲ್ ಒದಗಿಸುತ್ತದೆ ಎಂದಾದರೆ, ನೀವು ಇತರ ವಿಶೇಷ ರಚನೆಕಾರರ ಪರ್ಕ್‌ಗಳಿಗೂ ಆ್ಯಕ್ಸೆಸ್ ಪಡೆಯುತ್ತೀರಿ.

ಗಮನಿಸಿ: "ನಿಧಾನಗತಿ ಮೋಡ್" - ನೀವು ಲೈವ್ ಚಾಟ್‌ನಲ್ಲಿ ಎಷ್ಟು ಸಾಮಾನ್ಯವಾಗಿ ಕಾಮೆಂಟ್ ಮಾಡಬಹುದು ಎಂಬುದನ್ನು ಮಿತಿಗೊಳಿಸುತ್ತದೆ - ಇದು ಸಕ್ರಿಯವಾಗಿರುವ ಪಾವತಿಸಿದ ಚಾನಲ್ ಸದಸ್ಯರಿಗೆ ಅನ್ವಯಿಸುವುದಿಲ್ಲ.

ವಿವಿಧ ಹಂತಗಳಿಗಾಗಿ ರಚನೆಕಾರರ ಪರ್ಕ್‌ಗಳು

ಪ್ರತಿ ಹಂತಕ್ಕೂ ಅದರದೇ ಆದ ಪ್ರೈಸ್ ಪಾಯಿಂಟ್ ಇದೆ. ನೀವು ಪ್ರತಿ ಹಂತಕ್ಕೆ ಹೊಂದತೆಲ್ಲಾ ನಿಮ್ಮ ಪರ್ಕ್‌ಗಳು ಸಂಗ್ರಹವಾಗುತ್ತವೆ. ಅಂದರೆ ನೀವು ಅತ್ಯಂತ ದುಬಾರಿ ಹಂತದಲ್ಲಿ ಸೇರಿದರೆ, ಕೆಳಗಿನ ಎಲ್ಲಾ ಹಂತಗಳಲ್ಲಿರುವ ಪರ್ಕ್‌ಗಳಿಗೆ ಆ್ಯಕ್ಸೆಸ್ ಪಡೆಯುತ್ತೀರಿ.

ನಾನು ಪ್ರತಿ ಹಂತದಲ್ಲಿ ಏನು ಪಡೆಯುತ್ತೇನೆ ಮತ್ತು ಸೇರುವುದು ಹೇಗೆ?

ಇದು ಚಾನಲ್‌ನಿಂದ ಚಾನಲ್‌ಗೆ ಬದಲಾಗುತ್ತದೆ. ನೀವು ಸೇರಿ ಕ್ಲಿಕ್ ಮಾಡಿದಾಗ, ವಿವಿಧ ಪರ್ಕ್‌ಗಳನ್ನು ಕಾಣಬಹುದು.

ನಾನು ಈಗಾಗಲೇ ಸದಸ್ಯನಾಗಿದ್ದೇನೆ, ಹೀಗಾಗಿ ಲಭ್ಯವಿರುವ ವಿವಿಧ ಪರ್ಕ್‌ಗಳನ್ನು ನಾನು ಹೇಗೆ ನೋಡಬಹುದು?

ನೀವು ಈಗಾಗಲೇ ಸೇರಿಕೊಂಡಿರುವ ಚಾನಲ್ ಹೋಮ್ ಪೇಜ್‌ಗೆ ಹೋಗಿ ನಂತರ, ಪರ್ಕ್‌ಗಳನ್ನು ನೋಡಿ ಆಯ್ಕೆಮಾಡಿ.

ಚಾನಲ್ ಸದಸ್ಯತ್ವ ನೋಟಿಫಿಕೇಶನ್‌ಗಳನ್ನು ಆನ್ ಅಥವಾ ಆಫ್ ಮಾಡಿ

ಓರ್ವ ಚಾನಲ್ ಸದಸ್ಯರಾಗಿ, ನೀವು ಸಮುದಾಯ ಟ್ಯಾಬ್, ಸದಸ್ಯತ್ವದ ಟ್ಯಾಬ್ ಅಥವಾ ಚಾನಲ್‌ನ ಕಂಟೆಂಟ್ ಟ್ಯಾಬ್‌ನಲ್ಲಿ ಸದಸ್ಯರಿಗೆ-ಮಾತ್ರ ಕಂಟೆಂಟ್‌ಗಳನ್ನು ಕಂಡುಕೊಳ್ಳಬಹುದು. ನಿಮ್ಮ ಮುಖಪುಟ ಮತ್ತು ಸಬ್‌ಸ್ಕ್ರಿಪ್ಶನ್‌ಗಳು ಫೀಡ್‌ನಲ್ಲಿಯೂ ಸಹ ಸದಸ್ಯರಿಗೆ-ಮಾತ್ರ ವೀಡಿಯೊಗಳು ಕಾಣಿಸುವುದನ್ನು ನೀವು ಗಮನಿಸಬಹುದು. ಚಾನಲ್ ಈ ಕೆಳಗಿನ ಚಟುವಟಿಕೆಗಳನ್ನು ನಡೆಸಲು ನಾವು ನೋಟಿಫಿಕೇಶನ್‌ಗಳು ಅಥವಾ ಇಮೇಲ್ ಅನ್ನು ಸಹ ಬಳಸುತ್ತೇವೆ. ಅಂದರೆ, ಚಾನಲ್:

  • ಹೊಸ ಸದಸ್ಯರಿಗೆ-ಮಾತ್ರ ಪೋಸ್ಟ್ ಅನ್ನು ರಚಿಸಿದಾಗ
  • ಹೊಸ ಸದಸ್ಯರಿಗೆ-ಮಾತ್ರ ವೀಡಿಯೊವನ್ನು ಅಪ್‌ಲೋಡ್ ಮಾಡಿದಾಗ
  • ಸದಸ್ಯರಿಗೆ-ಮಾತ್ರ ಲೈವ್ ಸ್ಟ್ರೀಮ್ ಅನ್ನು ಪ್ರಾರಂಭಿಸಿದಾಗ
  • ಇನ್ನು 30 ನಿಮಿಷಗಳಲ್ಲಿ ಆರಂಭವಾಗುವ ಸದಸ್ಯರಿಗೆ-ಮಾತ್ರ ಲೈವ್ ಸ್ಟ್ರೀಮ್ ಅನ್ನು ನಿಗದಿಪಡಿಸಿದಾಗ

ನೀವು ಸದಸ್ಯರಿಗೆ-ಮಾತ್ರ ಕಂಟೆಂಟ್‌ಗೆ ಸಂಬಂಧಿಸಿದ ನೋಟಿಫಿಕೇಶನ್‌ಗಳು ಮತ್ತು ಇಮೇಲ್‌ಗಳನ್ನು ಸ್ವೀಕರಿಸುವ ಆಯ್ಕೆಯಿಂದಲೂ ಹೊರಗುಳಿಯಬಹುದು.

ಅಧಿಸೂಚನೆಗಳನ್ನು ಆಫ್ ಮಾಡಿ

ನೀವು ಹೊಸ ಸದಸ್ಯರಿಗೆ-ಮಾತ್ರ ಕಂಟೆಂಟ್ ಕುರಿತು ತಿಳಿದುಕೊಳ್ಳಲು ಬಯಸದಿದ್ದರೆ, ಹೀಗೆ ಮಾಡಬಹುದು:

  • ನೀವು ಸದಸ್ಯರಾಗಿರುವ ವೈಯಕ್ತಿಕ ಚಾನಲ್‌ಗಳಿಗಾಗಿ ನೋಟಿಫಿಕೇಶನ್‌ಗಳು ಮತ್ತು ಇಮೇಲ್‌ಗಳನ್ನು ಸ್ವೀಕರಿಸುವ ಆಯ್ಕೆಯಿಂದ ಹೊರಗುಳಿಯಿರಿ.
    • ಸದಸ್ಯರಿಗೆ-ಮಾತ್ರ ಕಂಟೆಂಟ್ ಕುರಿತಾದ ನೋಟಿಫಿಕೇಶನ್‌ಗಳನ್ನು ಸ್ವೀಕರಿಸುವ ಆಯ್ಕೆಯಿಂದ ಹೊರಗುಳಿಯಲು: ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳು ನಂತರ ಎಂಬಲ್ಲಿಗೆ ಹೋಗಿ, ಸದಸ್ಯರಿಗೆ ಮಾತ್ರ ಪಕ್ಕದಲ್ಲಿರುವ ಸ್ವಿಚ್ ಅನ್ನು ಆಫ್ ಮಾಡಿ.
    • ಸದಸ್ಯರಿಗೆ-ಮಾತ್ರ ಕಂಟೆಂಟ್‌ಗೆ ಸಂಬಂಧಿಸಿದ ಇಮೇಲ್‌ಗಳನ್ನು ಸ್ವೀಕರಿಸುವ ಆಯ್ಕೆಯಿಂದ ಹೊರಗುಳಿಯಲು: ನೀವು ಸ್ವೀಕರಿಸುವಂತಹ ಯಾವುದೇ ಸದಸ್ಯರಿಗೆ-ಮಾತ್ರ ಇಮೇಲ್‌ನಲ್ಲಿ ಕಾಣಿಸುವ ಅನ್‌ಸಬ್‌ಸ್ಕ್ರೈಬ್ ಲಿಂಕ್ ಅನ್ನು ಬಳಸಿ. ನೀವು ಇಮೇಲ್ ನೋಟಿಫಿಕೇಶನ್‌ಗಳಿಗೆ ಮರು ಸಬ್‌ಸ್ಕ್ರೈಬ್ ಮಾಡಲು ಬಯಸಿದರೆ, ಸೆಟ್ಟಿಂಗ್‌ಗಳು ನಂತರ ನೋಟಿಫಿಕೇಶನ್‌ಗಳುನಂತರ ಎಂಬಲ್ಲಿಗೆ ಹೋಗಿ“ಇಮೇಲ್ ನೋಟಿಫಿಕೇಶನ್‌ಗಳು” ಅಡಿಯಲ್ಲಿ, “ಅನ್‌ಸಬ್‌ಸ್ಕ್ರೈಬ್ ಮಾಡಿದ ಇಮೇಲ್‌ಗಳು” ಆಯ್ಕೆಮಾಡಿ ಮತ್ತು ನೀವು ಯಾವ ಇಮೇಲ್‌ಗಳನ್ನು ಸ್ವೀಕರಿಸಬೇಕು ಎಂಬುದನ್ನು ಆಯ್ಕೆಮಾಡಿ.
  • ವೈಯಕ್ತಿಕ ಚಾನಲ್‌ಗೆ ಸಂಬಂಧಿಸಿದ ಎಲ್ಲಾ ನೋಟಿಫಿಕೇಶನ್‌ಗಳನ್ನು ಸ್ವೀಕರಿಸುವ ಆಯ್ಕೆಯಿಂದ ಹೊರಗುಳಿಯಿರಿ:
    • ನೀವು ಸಬ್‌ಸ್ಕ್ರೈಬ್ ಆಗಿರುವ ಚಾನಲ್‌ಗೆ ಹೋಗಿ, ನಂತರ ನೋಟಿಫಿಕೇಶನ್‌ಗಳು  ನಂತರ ಯಾವುದೂ ಬೇಡ ಆಯ್ಕೆಮಾಡಿ. ಹೀಗೆ ಮಾಡುವುದರಿಂದ, ಕೇವಲ ಸದಸ್ಯರಿಗೆ-ಮಾತ್ರ ಕಂಟೆಂಟ್‌ಗೆ ಸಂಬಂಧಿಸಿದ ನೋಟಿಫಿಕೇಶನ್‌ಗಳಷ್ಟೇ ಅಲ್ಲ, ಈ ಚಾನಲ್‌ಗೆ ಸಂಬಂಧಿಸಿದ ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ ಮಾಡುತ್ತದೆ.
  • ನಿಮ್ಮ ಖಾತೆಯಲ್ಲಿ ಎಲ್ಲಾ ನೋಟಿಫಿಕೇಶನ್‌ಗಳನ್ನು ಆಫ್ ಮಾಡಿ.

ಸಮುದಾಯ ಟ್ಯಾಬ್‌ನಲ್ಲಿ ವಿಶೇಷ ಕಂಟೆಂಟ್ ಅನ್ನು ನೋಡಿ

ವಿಶೇಷ ಕಂಟೆಂಟ್ ಅನ್ನು ಸಮುದಾಯ ಟ್ಯಾಬ್‌ನಲ್ಲಿ “ಸದಸ್ಯರಿಗೆ-ಮಾತ್ರ” ಎಂದು ಟ್ಯಾಗ್ ಮಾಡಲಾಗಿರುತ್ತದೆ. ಇದು ಪಠ್ಯದ ಪೋಸ್ಟ್‌ಗಳು, GIF ಗಳು, ಸಮೀಕ್ಷೆಗಳು, ವೀಡಿಯೊಗಳು, ಮುಂತಾದವುಗಳನ್ನು ಒಳಗೊಂಡಿರುತ್ತದೆ.

ಅನುಚಿತ ಪರ್ಕ್‌ಗಳ ಕುರಿತು ವರದಿ ಮಾಡಿ

YouTube ನ ಸಮುದಾಯ ಮಾರ್ಗಸೂಚಿಗಳ ಉಲ್ಲಂಘನೆಯಾಗಿದೆ ಎಂದು ನೀವು ನಂಬುವ ಆಫರ್‌ಗಳು ನಿಮ್ಮ ಗಮನಕ್ಕೆ ಬಂದರೆ (ಲೈಂಗಿಕ, ಹಿಂಸಾತ್ಮಕ ಅಥವಾ ದ್ವೇಷಪೂರಿತ ಕಂಟೆಂಟ್, ದಾರಿತಪ್ಪಿಸುವ ಆಫರ್‌ಗಳು ಅಥವಾ ಸ್ಪ್ಯಾಮ್ ಸೇರಿದಂತೆ), ಸೇರಿ ಬಟನ್ ಕ್ಲಿಕ್ ಮಾಡಿದ ನಂತರ ಆಫರ್ ಪರದೆಯಲ್ಲಿ ಕಾಣಿಸುವ ಪರ್ಕ್‌ಗಳನ್ನು ವರದಿಮಾಡಿ ಕ್ಲಿಕ್ ಮಾಡುವ ಮೂಲಕ (ಅಥವಾ ನೀವು ಈಗಾಗಲೇ ಸದಸ್ಯರಾಗಿದ್ದರೆ, ಪರ್ಕ್‌ಗಳನ್ನು ನೋಡಿ ಕ್ಲಿಕ್ ಮಾಡುವ ಮೂಲಕ) ನೀವು ಅದನ್ನು ವರದಿ ಮಾಡಬಹುದು.

ಗೌಪ್ಯತೆ ಮಾಹಿತಿ

ಗೋಚರಿಸುವ ಸದಸ್ಯತ್ವ ಸ್ಥಿತಿ

ನೀವು ಒಮ್ಮೆ ಚಾನಲ್‌ಗೆ ಸೇರಿದರೆ, ಕೆಳಗಿನ ಮಾಹಿತಿಯು YouTube ನಲ್ಲಿ ಸಾರ್ವಜನಿಕವಾಗಿ ಕಾಣಿಸುತ್ತದೆ ಮತ್ತು ಚಾನಲ್, ಈ ಮಾಹಿತಿಯನ್ನು 3ನೇ ಪಾರ್ಟಿ ಕಂಪನಿಗಳ ಜೊತೆಗೆ ಹಂಚಿಕೊಳ್ಳಬಹುದು:
  • ನಿಮ್ಮ ಚಾನಲ್‌ನ URL
  • ನಿಮ್ಮ YouTube ಚಾನಲ್‌ನ ಹೆಸರು
  • ನಿಮ್ಮ ಪ್ರೊಫೈಲ್ ಚಿತ್ರ
  • ನೀವು ಚಾನಲ್‌ನ ಸದಸ್ಯರಾಗಿ ಸೇರಿದ್ದು ಯಾವಾಗ
  • ನೀವು ಸದಸ್ಯತ್ವ ಪಡೆದಿರುವ ಹಂತ
ಗಮನಿಸಿ: ನೀವು ಸದಸ್ಯರಾಗಿರುವ ಚಾನಲ್, ನಿಮಗೆ ಚಾನಲ್ ಪರ್ಕ್‌ಗಳನ್ನು ನೀಡುವ ಸಲುವಾಗಿ ಸಣ್ಣ ಪ್ರಮಾಣದ, ಆಯ್ದ 3ನೇ ಪಾರ್ಟಿ ಕಂಪನಿಗಳ ಜೊತೆಗೆ ಈ ಮಾಹಿತಿಯನ್ನು ಹಂಚಿಕೊಳ್ಳಬಹುದು.

ನಿಮ್ಮ ಮಾಹಿತಿಯನ್ನು ಹೇಗೆ ಬಳಸಬಹುದು

ಈ ಮೇಲಿನ ನಿಮ್ಮ ಮಾಹಿತಿಯನ್ನು ಇತರ ವೀಕ್ಷಕರು ನೋಡಬಹುದು. ಹಂಚಿಕೊಂಡ ಮಾಹಿತಿಯು ನೀವು ಸೇರಿರುವ ಚಾನಲ್ ಅನ್ನು ಅವಲಂಬಿಸಿರಬಹುದು. ಈ ಪಟ್ಟಿಯು ಸಮಗ್ರವಾಗಿಲ್ಲ:
  • ಎಲ್ಲಾ ಸದಸ್ಯರು ಗೋಚರಿಸುವ ಬ್ಯಾಡ್ಜ್ ಅನ್ನು ಹೊಂದಿದ್ದು, ಅದು ಕಾಮೆಂಟ್‌ಗಳು ಮತ್ತು ಚಾಟ್‌ನಲ್ಲಿ ನಿಮ್ಮ ಚಾನಲ್ ಹೆಸರಿನ ಪಕ್ಕದಲ್ಲಿ ಕಾಣಿಸುತ್ತದೆ.
  • ಆ ಚಾನಲ್‌ನ ಲೈವ್ ಸ್ಟ್ರೀಮ್ ಸಮಯದಲ್ಲಿ ನೀವು ಚಾನಲ್ ಸದಸ್ಯರಾಗಿದ್ದರೆ, ಲೈವ್ ಚಾಟ್‌ನಲ್ಲಿ ಎದ್ದುಗಾಣಿಸುವ ಹಸಿರು ಬಣ್ಣದಲ್ಲಿ "ಹೊಸ ಸದಸ್ಯರು" ಸಂದೇಶವನ್ನು ಕಳುಹಿಸಲಾಗುತ್ತದೆ ಮತ್ತು ನಿಮ್ಮ ಪ್ರೊಫೈಲ್ ಚಿತ್ರವನ್ನು ಲೈವ್ ಚಾಟ್‌ನ ಮೇಲ್ಭಾಗದಲ್ಲಿ 5 ನಿಮಿಷಗಳವರೆಗೆ ಪಿನ್ ಮಾಡಲಾಗಿರುತ್ತದೆ ಹಾಗೂ ಇದರ ಮೇಲೆ ಸುಳಿದಾಡಿದಾಗ ನಿಮ್ಮ ಚಾನಲ್‌ನ ಹೆಸರನ್ನು ತೋರಿಸುತ್ತದೆ.
  • ಕೆಲವು ಚಾನಲ್‌ಗಳು ಮೇಲಿನ ನಿಮ್ಮ ಮಾಹಿತಿಯನ್ನು ತಮ್ಮ ವೀಡಿಯೊಗಳಲ್ಲಿನ “ಧನ್ಯವಾದಗಳು” ಪಟ್ಟಿಗೆ ಸೇರಿಸಬಹುದು ಅಥವಾ ನಿಮ್ಮ ಮಾಹಿತಿಯನ್ನು ಚಾನಲ್‌ನ ಗುರುತಿಸುವಿಕೆ ಶೆಲ್ಫ್‌ಗೆ ಸೇರಿಸಬಹುದು.
  • ಕೆಲವು ಚಾನಲ್‌ಗಳು ಸೇವೆಯನ್ನು ನೀಡುವ ನಿಟ್ಟಿನಲ್ಲಿ ಮೇಲಿನ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಬಹುದು (ಉದಾಹರಣೆಗೆ, 3ನೇ ಪಾರ್ಟಿ ಕಂಪನಿಯು ಹೋಸ್ಟ್ ಮಾಡಿದ ಚಾಟ್‌ರೂಮ್‌ಗೆ ಸದಸ್ಯರಿಗೆ-ಮಾತ್ರ ಆ್ಯಕ್ಸೆಸ್).

3ನೇ ಪಾರ್ಟಿ ಸೈಟ್ ಅಥವಾ ಆ್ಯಪ್ ಆ್ಯಕ್ಸೆಸ್ ಅನ್ನು ಪರಿಶೀಲಿಸಿ ಮತ್ತು ತೆಗೆದುಹಾಕಿ

3ನೇ ಪಾರ್ಟಿ ಸೈಟ್ ಅಥವಾ ಆ್ಯಪ್ ಆ್ಯಕ್ಸೆಸ್ ಅನ್ನು ತೆಗೆದುಹಾಕಿ

ನೀವು ನಂಬದ ಸೈಟ್ ಅಥವಾ ಆ್ಯಪ್‌ಗೆ ನೀವು ಖಾತೆಯ ಆ್ಯಕ್ಸೆಸ್ ಅನ್ನು ನೀಡಿದರೆ, ನಿಮ್ಮ Google ಖಾತೆಗೆ ಅದರ ಆ್ಯಕ್ಸೆಸ್ ಅನ್ನು ನೀವು ತೆಗೆದುಹಾಕಬಹುದು. ನಿಮ್ಮ Google ಖಾತೆಯಿಂದ ಯಾವುದೇ ಹೆಚ್ಚಿನ ಮಾಹಿತಿಯನ್ನು ಆ್ಯಕ್ಸೆಸ್ ಮಾಡಲು ಸೈಟ್ ಅಥವಾ ಆ್ಯಪ್‌ಗೆ ಸಾಧ್ಯವಾಗುವುದಿಲ್ಲ, ಆದರೆ ಅವುಗಳು ಈಗಾಗಲೇ ಹೊಂದಿರುವ ಡೇಟಾವನ್ನು ಅಳಿಸುವಂತೆ ನೀವು ವಿನಂತಿಸಬೇಕಾಗಬಹುದು.
  1. ನಿಮ್ಮ Google ಖಾತೆಗೆ ಹೋಗಿ
  2. ಎಡಭಾಗದ ನ್ಯಾವಿಗೇಷನ್ ಪ್ಯಾನೆಲ್‌ನಲ್ಲಿ, ಭದ್ರತೆ ಆಯ್ಕೆಮಾಡಿ.
  3. ಖಾತೆಯ ಆ್ಯಕ್ಸೆಸ್ ಹೊಂದಿರುವ ಥರ್ಡ್ ಪಾರ್ಟಿ ಆ್ಯಪ್‌ಗಳು ಪ್ಯಾನೆಲ್ ಎಂಬಲ್ಲಿ, ಥರ್ಡ್ ಪಾರ್ಟಿ ಆ್ಯಕ್ಸೆಸ್ ಅನ್ನು ನಿರ್ವಹಿಸಿ ಆಯ್ಕೆಮಾಡಿ.
  4. ನೀವು ತೆಗೆದುಹಾಕಲು ಬಯಸುವ ಸೈಟ್ ಅಥವಾ ಆ್ಯಪ್ ಅನ್ನು ಆಯ್ಕೆ ಮಾಡಿ.
  5. ಆ್ಯಕ್ಸೆಸ್ ತೆಗೆದುಹಾಕಿ ಆಯ್ಕೆಮಾಡಿ.

3ನೇ ಪಾರ್ಟಿ ಸೈಟ್ ಅಥವಾ ಆ್ಯಪ್ ಕುರಿತು ವರದಿಮಾಡಿ

ಸ್ಪ್ಯಾಮ್ ರಚಿಸುವುದು, ನಿಮ್ಮಂತೆ ಸೋಗು ಹಾಕುವುದು ಅಥವಾ ಹಾನಿಕಾರಕ ರೀತಿಯಲ್ಲಿ ನಿಮ್ಮ ಡೇಟಾವನ್ನು ಬಳಸುವಂತಹ ಸೈಟ್ ಅಥವಾ ಆ್ಯಪ್‌ಗಳು ನಿಮ್ಮ ಡೇಟಾವನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ನೀವು ಭಾವಿಸಿದರೆ ಈ ಹಂತಗಳನ್ನು ಅನುಸರಿಸಿ.

  1. ನಿಮ್ಮ Google ಖಾತೆಯ ನಿಮ್ಮ ಖಾತೆಗೆ ಆ್ಯಕ್ಸೆಸ್ ಹೊಂದಿರುವ ಆ್ಯಪ್‌ಗಳು ವಿಭಾಗಕ್ಕೆ ಹೋಗಿ. ನೀವು ಸೈನ್ ಇನ್ ಮಾಡಬೇಕಾಗಬಹುದು.
  2. ನೀವು ವರದಿ ಮಾಡಬೇಕಿರುವ ಆ್ಯಪ್ ಆಯ್ಕೆಮಾಡಿ ನಂತರ ಈ ಆ್ಯಪ್ ಕುರಿತು ವರದಿಮಾಡಿ.

3ನೇ ಪಾರ್ಟಿ ಸೈಟ್‌ಗಳು ಮತ್ತು ಆ್ಯಪ್‌ಗಳಿಗೆ ಖಾತೆ ಆ್ಯಕ್ಸೆಸ್ ಕುರಿತು ಇನ್ನಷ್ಟು ತಿಳಿಯಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11032308974427268739
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false