ಚಾನಲ್ ಸದಸ್ಯತ್ವವನ್ನು ಸೇರಿಕೊಳ್ಳಿ, ಬದಲಾಯಿಸಿ, ರದ್ದುಗೊಳಿಸಿ ಅಥವಾ ಉಡುಗೊರೆಯಾಗಿ ನೀಡಿ

ಚಾನಲ್ ಸದಸ್ಯತ್ವಗಳು, ಮಾಸಿಕ ಪಾವತಿಗಳ ಮೂಲಕ ರಚನೆಕಾರರ ಚಾನಲ್ ಸದಸ್ಯತ್ವದ ಪ್ರೋಗ್ರಾಂ ಅನ್ನು ಸೇರಿಕೊಳ್ಳಲು ಮತ್ತು ಬ್ಯಾಡ್ಜ್‌ಗಳು, ಎಮೋಜಿ, ಸಮುದಾಯ ಪೋಸ್ಟ್‌ಗಳು, ಕಂಟೆಂಟ್ ಮತ್ತು ಇತ್ಯಾದಿಗಳನ್ನು ಒಳಗೊಂಡ ವಿಶೇಷ ಪರ್ಕ್‌ಗಳನ್ನು ಪಡೆಯಲು ನಿಮಗೆ ಅವಕಾಶ ನೀಡುತ್ತವೆ.

ನೀವು ಲಭ್ಯ ದೇಶಗಳು/ಪ್ರದೇಶಗಳಲ್ಲಿ ಇದ್ದರೆ, ಭಾಗವಹಿಸುವ ಚಾನಲ್‌ಗಳ ಸದಸ್ಯರಾಗಬಹುದು. ನಿಮ್ಮ ದೇಶ/ಪ್ರದೇಶ ಮತ್ತು ನೀವು ಸೈನ್ ಅಪ್ ಮಾಡಲು ಬಳಸುವ ಪ್ಲ್ಯಾಟ್‌ಫಾರ್ಮ್‌ ಅನ್ನು ಆಧರಿಸಿ, ಚಾನಲ್ ಸದಸ್ಯತ್ವಗಳ ದರದಲ್ಲಿ ವ್ಯತ್ಯಾಸವಿರಬಹುದು.

ನೀವು ಚಾನಲ್ ಸದಸ್ಯರಾದ ಬಳಿಕ, ನಿಮ್ಮ ಸದಸ್ಯತ್ವದ ಪ್ರಯೋಜನಗಳನ್ನು ಬಳಸುವುದು ಮತ್ತು ನಿರ್ವಹಿಸುವುದು ಹೇಗೆ ಎಂಬುದನ್ನು ಎಕ್ಸ್‌ಪ್ಲೋರ್ ಮಾಡಿ.

 

ಚಾನಲ್‌ನ ಸದಸ್ಯರಾಗಿ

ಚಾನಲ್‌ನ ಸದಸ್ಯರಾಗಿ

ಚಾನಲ್‌ನ ಸದಸ್ಯತ್ವ ಪ್ರೋಗ್ರಾಂಗೆ ಸೇರಲು:
  1. YouTube ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ನೀವು ಬೆಂಬಲಿಸಲು ಬಯಸುವ ರಚನೆಕಾರರ ಚಾನಲ್‌ಗೆ ಅಥವಾ ಅವರು ಅಪ್‌ಲೋಡ್ ಮಾಡಿರುವ ವೀಡಿಯೊಗೆ ಹೋಗಿ. ತಮ್ಮ ಚಾನಲ್‌ಗಾಗಿ ಅವರು ಸದಸ್ಯತ್ವಗಳನ್ನು ಆನ್ ಮಾಡಿದ್ದಾರೆಯೇ ಎಂದು ನೋಡಿ.
  3. ಸೇರಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡಿ.
  4. ನಿಮ್ಮ ಪಾವತಿ ಮಾಹಿತಿಯನ್ನು ನಮೂದಿಸಲು ಸೂಚನೆಗಳನ್ನು ಅನುಸರಿಸಿ.
  5. ಖರೀದಿಸಿ ಎಂಬುದನ್ನು ಕ್ಲಿಕ್ ಮಾಡಿ.
ನಿಮ್ಮ ವಹಿವಾಟು ಪೂರ್ಣಗೊಂಡಾಗ ನೀವು ಸ್ವಾಗತ ಕೋರುವ ಪ್ರಕಟಣೆಯನ್ನು ನೋಡುವಿರಿ. 

ಚಾನಲ್‌ಗೆ ಸೇರುವಾಗ ಎದುರಾಗುವ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಿ

ಸೇರಿಕೊಳ್ಳಿ ಎಂಬ ಬಟನ್ ಚಾನಲ್‌ನಲ್ಲಿ ಕಾಣಿಸದಿರಲು, ಈ ಕೆಳಗಿನವುಗಳು ಸೇರಿದ ಹಾಗೆ ವಿವಿಧ ಕಾರಣಗಳಿರಬಹುದು:

  • iOS ನಲ್ಲಿ ಸದಸ್ಯತ್ವಗಳನ್ನು ಖರೀದಿಸುವುದು ಎಲ್ಲಾ ಚಾನಲ್‌ಗಳಲ್ಲಿ ಲಭ್ಯವಿಲ್ಲ, ಆದರೆ ನಾವು ಈ ಆಯ್ಕೆಯನ್ನು ಇನ್ನಷ್ಟು ಚಾನಲ್‌ಗಳಿಗೆ ನಿರಂತರವಾಗಿ ಬಿಡುಗಡೆ ಮಾಡುತ್ತಿದ್ದೇವೆ.
  • ರಚನೆಕಾರರು ತಮ್ಮ ಚಾನಲ್‌ಗಾಗಿ ಸದಸ್ಯತ್ವಗಳನ್ನು ಆನ್ ಮಾಡಿಲ್ಲ.
  • ನೀವು ಅಥವಾ ರಚನೆಕಾರರು, ಸದಸ್ಯತ್ವಗಳು ಲಭ್ಯವಿರುವ ದೇಶ/ಪ್ರದೇಶದಲ್ಲಿ ಇಲ್ಲ.
  • "ಸೇರಿಕೊಳ್ಳಿ" ಬಟನ್ ಎಲ್ಲಾ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಇನ್ನೂ ಲಭ್ಯವಿಲ್ಲ. "ಸೇರಿಕೊಳ್ಳಿ" ಬಟನ್, ಅರ್ಹ ವೀಕ್ಷಣಾ ಪುಟಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ. ಉದಾಹರಣೆಗೆ, ಕೆಲವು ಸಂಗೀತ ಪಾಲುದಾರರು ಕ್ಲೇಮ್‌ ಮಾಡಿದ ವೀಡಿಯೊಗಳ ವೀಕ್ಷಣಾ ಪುಟಗಳು ಅರ್ಹವಾಗಿರುವುದಿಲ್ಲ.

ಸಮಸ್ಯೆಯು ಪ್ಲ್ಯಾಟ್‌ಫಾರ್ಮ್-ಸಂಬಂಧಿತವಾಗಿದ್ದರೆ ಇಲ್ಲಿ ಕೆಲವು ಪರಿಹಾರಗಳಿವೆ:

  • ನೀವು ಚಾನಲ್ ಹೋಮ್ ಪೇಜ್‌ನಲ್ಲಿ ಸೇರಿಕೊಳ್ಳಿ ಬಟನ್ ಅನ್ನು ಕ್ಲಿಕ್ ಮಾಡಬಹುದು.
  • ಚಾನಲ್‌ನ ಸದಸ್ಯತ್ವದ ವಿಂಡೋಗೆ ನೇರವಾಗಿ ಲಿಂಕ್ ಮಾಡಲು ಚಾನಲ್‌ನ URL ನ ಕೊನೆಗೆ ನೀವು /join ಎಂಬುದನ್ನು ಸೇರಿಸಬಹುದು.
  • ನೀವು ಕಂಪ್ಯೂಟರ್ ಬಳಸಿಕೊಂಡು ಚಾನಲ್‌ಗೆ ಸೇರಿಕೊಳ್ಳಬಹುದು ಮತ್ತು ಎಲ್ಲಾ ಲಭ್ಯ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ಪರ್ಕ್‌ಗಳಿಗೆ ಆ್ಯಕ್ಸೆಸ್ ಪಡೆಯಬಹುದು.

ನಿಮ್ಮ ಸದಸ್ಯತ್ವದ ಹಂತವನ್ನು ಬದಲಾಯಿಸಿ

ಒಂದು ಚಾನಲ್‌ಗಾಗಿ ನಿಮ್ಮ ಸದಸ್ಯತ್ವದ ಹಂತವನ್ನು ಅಪ್‌ಗ್ರೇಡ್ ಮಾಡಿ

ನಿಮ್ಮ ಸದಸ್ಯತ್ವದ ಹಂತವನ್ನು ಅಪ್‌ಗ್ರೇಡ್ ಮಾಡಲು:
  1. ನೀವು ಬದಲಾಯಿಸಲು ಬಯಸುವ ಸದಸ್ಯತ್ವದ ಚಾನಲ್ ಹೋಮ್ ಪೇಜ್‌ಗೆ ಹೋಗಿ.
  2. ಪರ್ಕ್‌ಗಳನ್ನು ನೋಡಿ ಎಂಬುದನ್ನು ಕ್ಲಿಕ್ ಮಾಡಿ.
  3. ನೀವು ಸೇರಲು ಬಯಸುವ ಹಂತವನ್ನು ಆಯ್ಕೆ ಮಾಡಿ ನಂತರ ಹಂತವನ್ನು ಬದಲಾಯಿಸಿ.
  4. ಅಪ್‌ಗ್ರೇಡ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.
  5. ಖರೀದಿಸಿದ ನಂತರ ನೀವು ತಕ್ಷಣವೇ ಉನ್ನತ ಹಂತಕ್ಕೆ ಆ್ಯಕ್ಸೆಸ್ ಪಡೆಯುವಿರಿ.
    1. ದರದ ಕುರಿತು ಸೂಚನೆ: ನಿಮ್ಮ ಪ್ರಸ್ತುತ ಬಿಲ್ಲಿಂಗ್ ಸೈಕಲ್‌ನಲ್ಲಿ ಬಾಕಿ ಉಳಿದಿರುವ ದಿನಗಳಿಗಾಗಿ ಹೊಂದಾಣಿಕೆ ಮಾಡಲಾದ ದರದಲ್ಲಿ, ಹಂತಗಳ ದರದಲ್ಲಿನ ವ್ಯತ್ಯಾಸದ ಮೊತ್ತವನ್ನು ಮಾತ್ರ ನಿಮಗೆ ವಿಧಿಸಲಾಗುತ್ತದೆ.
    2. ಉದಾಹರಣೆ: ನೀವು ಈಗ $4.99 ಪಾವತಿಸುತ್ತಿದ್ದು, ನಿಮ್ಮ ಮುಂದಿನ ಪಾವತಿಗೆ ಇನ್ನೂ ಅರ್ಧ ತಿಂಗಳು ಬಾಕಿ ಇರುವಾಗಲೇ $9.99 ಹಂತಕ್ಕೆ ಅಪ್‌ಗ್ರೇಡ್ ಮಾಡಿದರೆ ನಿಮಗೆ ($9.99-$4.99) X (0.5)= $2.50 ಶುಲ್ಕ ವಿಧಿಸಲಾಗುತ್ತದೆ.

ಚಾನಲ್ ಸದಸ್ಯತ್ವದ ಹಂತಗಳನ್ನು ಬದಲಾಯಿಸುವುದು ನಿಮ್ಮ ಬಿಲ್ಲಿಂಗ್‌ನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬ ಕುರಿತು ಇನ್ನಷ್ಟು ತಿಳಿಯಿರಿ.

ಚಾನಲ್‍ಗಾಗಿ ನಿಮ್ಮ ಸದಸ್ಯತ್ವದ ಹಂತವನ್ನು ಡೌನ್‌ಗ್ರೇಡ್ ಮಾಡಿ

ನಿಮ್ಮ ಸದಸ್ಯತ್ವದ ಹಂತವನ್ನು ಡೌನ್‌ಗ್ರೇಡ್ ಮಾಡಲು:
  1. ನೀವು ಬದಲಾಯಿಸಲು ಬಯಸುವ ಸದಸ್ಯತ್ವದ ಚಾನಲ್ ಹೋಮ್ ಪೇಜ್‌ಗೆ ಹೋಗಿ.
  2. ಪರ್ಕ್‌ಗಳನ್ನು ನೋಡಿ ಎಂಬುದನ್ನು ಕ್ಲಿಕ್ ಮಾಡಿ.
  3. ನೀವು ಸೇರಲು ಬಯಸುವ ಹಂತವನ್ನು ಆಯ್ಕೆ ಮಾಡಿ ನಂತರ ಹಂತವನ್ನು ಬದಲಾಯಿಸಿ.

ಚಾನಲ್ ಸದಸ್ಯತ್ವವನ್ನು ರದ್ದುಗೊಳಿಸಿ

ಚಾನಲ್ ಸದಸ್ಯತ್ವವನ್ನು ರದ್ದುಗೊಳಿಸಿ

ನೀವು ಯಾವಾಗ ಬೇಕಾದರೂ ಚಾನಲ್ ಸದಸ್ಯತ್ವವನ್ನು ರದ್ದುಗೊಳಿಸಬಹುದು. ಒಮ್ಮೆ ನೀವು ರದ್ದುಗೊಳಿಸಿದರೆ, ನಿಮಗೆ ಪುನಃ ಶುಲ್ಕ ವಿಧಿಸಲಾಗುವುದಿಲ್ಲ. ನಿಮ್ಮ ಬಿಲ್ಲಿಂಗ್ ಸೈಕಲ್ ಮುಕ್ತಾಯವಾಗುವರೆಗೆ, ಬ್ಯಾಡ್ಜ್ ಒಳಗೊಂಡಂತೆ ರಚನೆಕಾರರ ಪರ್ಕ್‌ಗಳಿಗೆ ನೀವು ಆ್ಯಕ್ಸೆಸ್ ಹೊಂದಿರುತ್ತೀರಿ.
ಚಾನಲ್ ಸದಸ್ಯತ್ವವನ್ನು ರದ್ದುಗೊಳಿಸಲು:
  1. YouTube ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. youtube.com/paid_memberships ಗೆ ಭೇಟಿ ನೀಡಿ.
  3. ನೀವು ರದ್ದುಗೊಳಿಸಲು ಬಯಸುವ ಚಾನಲ್ ಸದಸ್ಯತ್ವವನ್ನು ಹುಡುಕಿ ಮತ್ತು ಸದಸ್ಯತ್ವವನ್ನು ನಿರ್ವಹಿಸಿ ಎಂಬುದನ್ನು ಕ್ಲಿಕ್ ಮಾಡಿ.
  4. ನಿಷ್ಕ್ರಿಯಗೊಳಿಸಿ ಎಂಬುದನ್ನು ಆಯ್ಕೆ ಮಾಡಿ.
  5. ಸದಸ್ಯತ್ವವನ್ನು ಕೊನೆಗೊಳಿಸಿ ಎಂಬುದನ್ನು ಆಯ್ಕೆ ಮಾಡಿ.
  6. ನೀವು ರದ್ದುಪಡಿಸುವಿಕೆ ದೃಢೀಕರಣ ಸ್ಕ್ರೀನ್ ಅನ್ನು ನೋಡುತ್ತೀರಿ.
ನಿಮ್ಮ ಪಾವತಿಸಬೇಕಾದ ಚಾನಲ್ ಸದಸ್ಯತ್ವವನ್ನು ರದ್ದುಗೊಳಿಸಲು ನಿಮಗೆ ಸಮಸ್ಯೆಯಿದ್ದರೆ, ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಿ.
ಗಮನಿಸಿ: ನೀವು ರದ್ದುಗೊಳಿಸಿದ ಸಮಯದಿಂದ ನಿಮ್ಮ ಚಾನಲ್‌ನ ಸದಸ್ಯತ್ವವು ಅಧಿಕೃತವಾಗಿ ಕೊನೆಗೊಳ್ಳುವವರೆಗಿನ ಸಮಯಕ್ಕಾಗಿ ನಿಮಗೆ ಮರುಪಾವತಿ ದೊರೆಯುವುದಿಲ್ಲ.

ಸದಸ್ಯತ್ವಗಳನ್ನು ಉಡುಗೊರೆಯಾಗಿ ನೀಡಿ

ಉಡುಗೊರೆ ಸದಸ್ಯತ್ವಗಳ ಮೂಲಕ ರಚನೆಕಾರರು ಅಥವಾ ವೀಕ್ಷಕರು, ಒಂದು ತಿಂಗಳ ಕಾಲ ಚಾನಲ್ ಸದಸ್ಯತ್ವದ ಪರ್ಕ್‌ಗಳನ್ನು ಆ್ಯಕ್ಸೆಸ್ ಮಾಡುವ ಅವಕಾಶವನ್ನು ಇತರರಿಗಾಗಿ ಖರೀದಿಸಿ ಕೊಡಬಹುದು. ಚಾನಲ್‌ನಿಂದ ಉಡುಗೊರೆಯಾಗಿ ನೀಡಿದ ಸದಸ್ಯತ್ವಗಳಿಗೆ ಅರ್ಹರಾಗಲು ವೀಕ್ಷಕರು ಆಯ್ಕೆಯನ್ನು ಸಕ್ರಿಯಗೊಳಿಸಬೇಕು. ನೀವು ಸಕ್ರಿಯಗೊಳಿಸಿದ ನಂತರ, ನೀವು ಇತ್ತೀಚೆಗೆ ಸಂವಹಿಸಿದ ಅರ್ಹ ಚಾನಲ್‌ಗಳಿಂದ ಉಡುಗೊರೆ ಸದಸ್ಯತ್ವಗಳನ್ನು ಸ್ವೀಕರಿಸಲು ನೀವು ಅರ್ಹರಾಗುತ್ತೀರಿ.

ಗಮನಿಸಿ: ನೀವು ಈ ಹಿಂದೆ ನಿರ್ದಿಷ್ಟ ಚಾನಲ್‌ನಿಂದ ಉಡುಗೊರೆ ಸದಸ್ಯತ್ವಗಳಿಗೆ ಅವಕಾಶ ನೀಡುವುದನ್ನು ಸಕ್ರಿಯಗೊಳಿಸಿದ್ದರೆ, ಇತರ ಚಾನಲ್‌ಗಳಲ್ಲಿ ಉಡುಗೊರೆ ಸದಸ್ಯತ್ವಗಳಿಗೆ ಅರ್ಹರಾಗಲು ನೀವು ಸಮಗ್ರವಾಗಿ ಆಯ್ಕೆಯನ್ನು ಸಕ್ರಿಯಗೊಳಿಸುವ ಅಗತ್ಯವಿರಬಹುದು.

ಮೆಂಬರ್‌ಶಿಪ್‌ಗಳ ಗಿಫ್ಟಿಂಗ್

ಸದಸ್ಯತ್ವವನ್ನು ಉಡುಗೊರೆಯಾಗಿ ನೀಡಿ

ಉಡುಗೊರೆ ಸದಸ್ಯತ್ವಗಳನ್ನು ಗರಿಷ್ಠ $5 ವರೆಗೆ ಒಳಗೊಂಡು, ಅತ್ಯಧಿಕ ಬೆಲೆಯ ಹಂತಕ್ಕೆ ಅತೀ ಸಮೀಪವಿರುವ ದರದಲ್ಲಿ ನೀಡಲಾಗುತ್ತದೆ. ಸದಸ್ಯತ್ವವನ್ನು ಉಡುಗೊರೆಯಾಗಿ ನೀಡಲು, ಉಡುಗೊರೆ ಸದಸ್ಯತ್ವಗಳನ್ನು ಆನ್ ಮಾಡಿರುವ ಚಾನಲ್‌ನಲ್ಲಿ ನೀವು ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್ ಅನ್ನು ವೀಕ್ಷಿಸಬೇಕು. ಚಾನಲ್‌ಗಾಗಿ ಉಡುಗೊರೆ ಸದಸ್ಯತ್ವಗಳು ಲಭ್ಯವಿದ್ದರೆ, ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್‌ನ ಸಂದರ್ಭದಲ್ಲಿ ನೀವು ಇತರರಿಗೆ ಸದಸ್ಯತ್ವಗಳನ್ನು ಉಡುಗೊರೆಯಾಗಿ ನೀಡಬಹುದು:
  1. YouTube ಗೆ ಸೈನ್ ಇನ್ ಮಾಡಲು ಕಂಪ್ಯೂಟರ್ ಅನ್ನು ಬಳಸಿ.
  2. ನೀವು ಸದಸ್ಯತ್ವಗಳನ್ನು ಉಡುಗೊರೆಯಾಗಿ ನೀಡಲು ಬಯಸುವ ಅರ್ಹ ಚಾನಲ್‌ಗೆ ಹೋಗಿ.
  3. ಚಾನಲ್‌ನ ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್‌ಗೆ ಸೇರಿಕೊಳ್ಳಿ.
  4. ಲೈವ್ ಚಾಟ್‌ನಲ್ಲಿ, ಅನ್ನು ಕ್ಲಿಕ್ ಮಾಡಿ.
  5. ಮೆಂಬರ್‌ಶಿಪ್ ಗಿಫ್ಟಿಂಗ್ ಎಂಬುದನ್ನು ಕ್ಲಿಕ್ ಮಾಡಿ.
  6. ನೀವು ಎಷ್ಟು ವೀಕ್ಷಕರಿಗೆ ಸದಸ್ಯತ್ವಗಳನ್ನು ಉಡುಗೊರೆಯಾಗಿ ನೀಡಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಿ. 
  7. ವಹಿವಾಟು ಪೂರ್ಣಗೊಳಿಸಿ.
ನೀವು ಸದಸ್ಯತ್ವಗಳನ್ನು ಉಡುಗೊರೆಯಾಗಿ ನೀಡಿದ ನಂತರ, ಕೌಂಟ್‌ಡೌನ್ ಟಿಕ್ಕರ್ ನಿಮ್ಮ ಖರೀದಿಯನ್ನು ಲೈವ್ ಚಾಟ್‌ನಲ್ಲಿ ಸೀಮಿತ ಸಮಯದವರೆಗೆ ಹೈಲೈಟ್ ಮಾಡುತ್ತದೆ. ಸಮಯದ ಅವಧಿಯು ನಿಮ್ಮ ಖರೀದಿಯ ಮೊತ್ತವನ್ನು ಆಧರಿಸಿರುತ್ತದೆ. ರಚನೆಕಾರರು ನಿಮ್ಮ ಉಡುಗೊರೆಯನ್ನು ಪ್ರಕಟಿಸುವುದಕ್ಕೂ ಮೊದಲೇ ಲೈವ್ ಚಾಟ್ ಅಥವಾ ಲೈವ್ ಸ್ಟ್ರೀಮ್ ಅನ್ನು ಕೊನೆಗೊಳಿಸಬಹುದು, ಆದರೆ ಉಡುಗೊರೆಯನ್ನು ವಿತರಿಸಲಾಗುತ್ತದೆ.
ಗಮನಿಸಿ: ಉಡುಗೊರೆ ನೀಡಲಾದ ಸದಸ್ಯತ್ವಗಳ ಸಂಖ್ಯೆ, ನಿಮ್ಮ ಚಾನಲ್‌ನ ಹೆಸರು ಮತ್ತು ನಿಮ್ಮ ಪ್ರೊಫೈಲ್ ಚಿತ್ರವು ಸಾರ್ವಜನಿಕರಿಗೆ ಗೋಚರಿಸುತ್ತವೆ. ಈ ಮಾಹಿತಿಯು ನಮ್ಮ YouTube Data API ಸೇವೆಯ ಮೂಲಕ ಚಾನಲ್‌ಗೂ ಲಭ್ಯವಿರಬಹುದು ಮತ್ತು ಈ ಮಾಹಿತಿಯನ್ನು ಥರ್ಡ್ ಪಾರ್ಟಿ ಸೇವೆಗಳ ಜೊತೆಗೆ ಚಾನಲ್ ಹಂಚಿಕೊಳ್ಳಬಹುದು. YouTube ಮೊದಲ ಸದಸ್ಯತ್ವವನ್ನು ಒಬ್ಬ ವೀಕ್ಷಕರಿಗೆ ಉಡುಗೊರೆಯಾಗಿ ನೀಡಿದಾಗ ನಿಮ್ಮ ಖರೀದಿ ಪೂರ್ಣಗೊಂಡಿದೆ ಎಂದು ಪರಿಗಣಿಸಲಾಗುತ್ತದೆ.

ಉಡುಗೊರೆ ಸದಸ್ಯತ್ವಗಳ ಆಯ್ಕೆಯನ್ನು ಸಕ್ರಿಯಗೊಳಿಸಿ ಅಥವಾ ಅದರಿಂದ ಹೊರಗುಳಿಯಿರಿ

ಉಡುಗೊರೆ ಸದಸ್ಯತ್ವಗಳ ಆಯ್ಕೆಯನ್ನು ಸಕ್ರಿಯಗೊಳಿಸಲು, ಬ್ರ್ಯಾಂಡ್ ಖಾತೆಯಲ್ಲದ YouTube ಚಾನಲ್ ಮೂಲಕ ನೀವು ಸೈನ್ ಇನ್ ಮಾಡಿರಬೇಕು. ನೀವು ಬ್ರ್ಯಾಂಡ್ ಖಾತೆಯನ್ನು ಬಳಸುತ್ತಿದ್ದೀರಾ ಎಂದು ಪರಿಶೀಲಿಸಿ. ಸದ್ಯಕ್ಕೆ, ಚಾನಲ್ ಸದಸ್ಯರು ಉಡುಗೊರೆ ಸದಸ್ಯತ್ವಗಳನ್ನು ಸ್ವೀಕರಿಸಲು ಅರ್ಹರಲ್ಲ.

ಲೈವ್ ಚಾಟ್ ಮೂಲಕ ಆಯ್ಕೆಯನ್ನು ಸಕ್ರಿಯಗೊಳಿಸುವುದು

  1. ಅರ್ಹ ಚಾನಲ್‌ನ ಲೈವ್ ಸ್ಟ್ರೀಮ್ ಅಥವಾ ಪ್ರೀಮಿಯರ್‌ಗೆ ಹೋಗಿ.
  2. ಲೈವ್ ಚಾಟ್‌ನಲ್ಲಿ: 
    1. ಉಡುಗೊರೆಗಳನ್ನು ಅನುಮತಿಸಿ ಎಂಬುದನ್ನು ಕ್ಲಿಕ್ ಮಾಡಿ, ಅಥವಾ
    2. ಪಿನ್ ಮಾಡಲಾದ ಮೆಂಬರ್‌ಶಿಪ್ ಗಿಫ್ಟಿಂಗ್ ಅನ್ನು ಕ್ಲಿಕ್ ಮಾಡಿ.
  3. "ಉಡುಗೊರೆಗಳನ್ನು ಅನುಮತಿಸಿ” ಎಂಬ ಸ್ವಿಚ್ ಆನ್ ಮಾಡುವ ಮೂಲಕ ನೀವು ಆಯ್ಕೆಯನ್ನು ಸಕ್ರಿಯಗೊಳಿಸಲು ಬಯಸುತ್ತೀರಿ ಎಂಬುದನ್ನು ದೃಢೀಕರಿಸಿ.

ಚಾನಲ್ ಅಥವಾ ವೀಕ್ಷಣೆ ಪುಟದ ಮೂಲಕ ಆಯ್ಕೆಯನ್ನು ಸಕ್ರಿಯಗೊಳಿಸಿ:

  1. ಅರ್ಹ ಚಾನಲ್‌ನ ಪುಟಕ್ಕೆ ಹೋಗಿ ಅಥವಾ ವೀಡಿಯೊದ ವೀಕ್ಷಣೆ ಪುಟಕ್ಕೆ ಹೋಗಿ.
  2. ಸೇರಿಕೊಳ್ಳಿ ನಂತರ ಇನ್ನಷ್ಟು ನಂತರ ”ಉಡುಗೊರೆ ಸೆಟ್ಟಿಂಗ್‌ಗಳು” ಎಂಬುದನ್ನು ಕ್ಲಿಕ್ ಮಾಡಿ.
  3. "ಉಡುಗೊರೆಗಳನ್ನು ಅನುಮತಿಸಿ” ಎಂಬ ಸ್ವಿಚ್ ಆನ್ ಮಾಡುವ ಮೂಲಕ ನೀವು ಆಯ್ಕೆಯನ್ನು ಸಕ್ರಿಯಗೊಳಿಸಲು ಬಯಸುತ್ತೀರಿ ಎಂಬುದನ್ನು ದೃಢೀಕರಿಸಿ.
​​ಗಮನಿಸಿ: ನೀವು ಉಡುಗೊರೆ ಸದಸ್ಯತ್ವಕ್ಕೆ ಆಯ್ಕೆಯಾಗಿದ್ದರೆ, ನಿಮ್ಮ ಚಾನಲ್‌ನ ಹೆಸರು ಸಾರ್ವಜನಿಕರಿಗೆ ಕಾಣಿಸುತ್ತದೆ. ಈ ಮಾಹಿತಿಯು ನಮ್ಮ YouTube Data API ಸೇವೆಯ ಮೂಲಕ ಚಾನಲ್‌ಗೂ ಲಭ್ಯವಿರಬಹುದು ಮತ್ತು ಈ ಮಾಹಿತಿಯನ್ನು ಥರ್ಡ್ ಪಾರ್ಟಿ ಸೇವೆಗಳ ಜೊತೆಗೆ ಚಾನಲ್ ಹಂಚಿಕೊಳ್ಳಬಹುದು.

ಉಡುಗೊರೆ ಸದಸ್ಯತ್ವಗಳ ಆಯ್ಕೆಯಿಂದ ಹೊರಗುಳಿಯಿರಿ

ಯಾವುದೇ ಚಾನಲ್‌ನಿಂದ ಉಡುಗೊರೆ ಸದಸ್ಯತ್ವಗಳನ್ನು ಸ್ವೀಕರಿಸುವ ಆಯ್ಕೆಯಿಂದ ಹೊರಗುಳಿಯಲು:

  1. ಸದಸ್ಯತ್ವಗಳು ಆನ್ ಆಗಿರುವ ಯಾವುದೇ ಚಾನಲ್‌ನಲ್ಲಿ ಅಥವಾ ವೀಕ್ಷಣಾ ಪುಟದಲ್ಲಿ ಸೇರಿಕೊಳ್ಳಿ ಎಂಬುದನ್ನು ಕ್ಲಿಕ್ ಮಾಡುವ ಮೂಲಕ “ಉಡುಗೊರೆ ಸೆಟ್ಟಿಂಗ್‌ಗಳು” ಎಂಬುದನ್ನು ತೆರೆಯಿರಿ. 
  2. “ಉಡುಗೊರೆಗಳನ್ನು ಅನುಮತಿಸಿ” ಎಂಬುದನ್ನು ಟಾಗಲ್ ಆಫ್ ಮಾಡಿ.

ನೀವು ಇನ್ನು ಮುಂದೆ ಯಾವುದೇ ಚಾನಲ್‌ನಿಂದ ಉಡುಗೊರೆಯಾಗಿ ನೀಡಲಾದ ಸದಸ್ಯತ್ವಗಳನ್ನು ಪಡೆಯಲು ಅರ್ಹರಾಗಿರುವುದಿಲ್ಲ.

ಉಡುಗೊರೆ ಸದಸ್ಯತ್ವವನ್ನು ಪಡೆಯಿರಿ

ಒಬ್ಬ ರಚನೆಕಾರರು ಅಥವಾ ವೀಕ್ಷಕರು ಇತರರಿಗೆ ಸದಸ್ಯತ್ವಗಳನ್ನು ಉಡುಗೊರೆಯಾಗಿ ನೀಡಿದಾಗ, ಅದನ್ನು ಲೈವ್ ಚಾಟ್‌ನಲ್ಲಿ ಪ್ರಕಟಿಸಲಾಗುತ್ತದೆ. 1 ತಿಂಗಳ ಮಟ್ಟಿಗೆ ಸದಸ್ಯತ್ವವನ್ನು ಪಡೆಯಲು ನೀವು ಆಯ್ಕೆಯಾಗಿದ್ದರೆ, ಲೈವ್ ಚಾಟ್‌ನಲ್ಲಿ ಒಂದು ನೋಟಿಫಿಕೇಶನ್ ಕಾಣಿಸುತ್ತದೆ ಮತ್ತು ನಾವು ನಿಮಗೊಂದು ಇಮೇಲ್ ನೋಟಿಫಿಕೇಶನ್ ಅನ್ನು ಸಹ ಕಳುಹಿಸುತ್ತೇವೆ.
ಉಡುಗೊರೆ ಸದಸ್ಯತ್ವಗಳು ಮರುಪಾವತಿಗೆ ಅರ್ಹವಾಗಿರುವುದಿಲ್ಲ ಮತ್ತು ನಗದು ರೂಪದಲ್ಲಿ ಅವುಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಎಲ್ಲಾ ಉಡುಗೊರೆ ಸದಸ್ಯತ್ವಗಳಿಗೆ ಚಾನಲ್ ಸದಸ್ಯತ್ವದ ಪರ್ಕ್‌ಗಳನ್ನು ಆ್ಯಕ್ಸೆಸ್ ಮಾಡಲು 1 ತಿಂಗಳವರೆಗೆ ಕಾಲಾವಕಾಶ ನೀಡಲಾಗುತ್ತದೆ ಮತ್ತು ಅದರ ನಂತರ ಅವಧಿ ಮುಗಿಯುತ್ತದೆ.
ನಿಮ್ಮ ಸದಸ್ಯತ್ವದ ಪ್ರಯೋಜನಗಳನ್ನು ನೋಡಲು ಮತ್ತು ಪರ್ಕ್‌ಗಳನ್ನು ಆ್ಯಕ್ಸೆಸ್ ಮಾಡಲು:
  • ನೀವು ಸದಸ್ಯರಾಗಿರುವ ಚಾನಲ್‌ನಲ್ಲಿ ‘ಸದಸ್ಯತ್ವಗಳು’ ಟ್ಯಾಬ್ ಅನ್ನು ಕ್ಲಿಕ್ ಮಾಡಿ, ಅಥವಾ 
  • ಆ ಚಾನಲ್‌ನ ಯಾವುದೇ ವೀಡಿಯೊ ಪುಟದಲ್ಲಿ ಪರ್ಕ್‌ಗಳನ್ನು ನೋಡಿ ಎಂಬುದನ್ನು ಕ್ಲಿಕ್ ಮಾಡಿ.
ಉಡುಗೊರೆ ಸದಸ್ಯತ್ವಗಳು ಪುನರಾವರ್ತನೆಯಾಗುವುದಿಲ್ಲ ಹಾಗೂ ಅವುಗಳ ಅವಧಿ ಮುಗಿದ ನಂತರ ನಿಮಗೆ ಶುಲ್ಕ ವಿಧಿಸಲಾಗುವುದಿಲ್ಲ. ನಿಮ್ಮ ಸದಸ್ಯತ್ವವನ್ನು ಮುಂಚಿತವಾಗಿ ಕೊನೆಗೊಳಿಸಲು ನೀವು ಬಯಸಿದರೆ, ಬೆಂಬಲ ತಂಡವನ್ನು ಸಂಪರ್ಕಿಸಿ. ಸದಸ್ಯತ್ವದ ಪ್ರಯೋಜನಗಳಿಗೆ ನೀವು ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುತ್ತೀರಿ.

ಸದಸ್ಯತ್ವವನ್ನು ಸೇರಿಕೊಳ್ಳುವುದು, ಬದಲಾಯಿಸುವುದು ಅಥವಾ ರದ್ದುಗೊಳಿಸುವುದಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಟ್ರಬಲ್‌ಶೂಟ್ ಮಾಡಿ.

ನಾನು ಒಂದು ಚಾನಲ್ ಅನ್ನು ಸೇರಲು ಪ್ರಯತ್ನಿಸುವಾಗ YouTube ಗೆ ನನ್ನ ದೇಶವನ್ನು ದೃಢೀಕರಿಸಲು ಸಾಧ್ಯವಾಗಲಿಲ್ಲ ಎಂದು ಹೇಳುವ ದೋಷ ಸಂದೇಶವೊಂದು ನನಗೆ ಎದುರಾಗುತ್ತಿದೆ. ಇದನ್ನು ನಾನು ಹೇಗೆ ಸರಿಪಡಿಸಬಹುದು?

“ನಿಮ್ಮ ದೇಶವನ್ನು ದೃಢೀಕರಿಸಲು ನಮಗೆ ಸಾಧ್ಯವಾಗಲಿಲ್ಲ” ಎಂದು ಹೇಳುವ ದೋಷ ಸಂದೇಶ ನಿಮಗೆ ಎದುರಾದರೆ, ನಿಮಗೆ ಲಭ್ಯವಿರುವ ಪ್ಲಾನ್‌ಗಳು ಮತ್ತು ಹಂತಗಳನ್ನು ನಿಮಗೆ ತೋರಿಸುವ ಮೊದಲು ನಿಮ್ಮ ದೇಶವನ್ನು ನಾವು ದೃಢೀಕರಿಸಿಕೊಳ್ಳಬೇಕಾಗುತ್ತದೆ. ಈ ಸಮಸ್ಯೆಯನ್ನು ಸರಿಪಡಿಸಲು, ನೀವು ಹೀಗೆ ಮಾಡಬಹುದು:

  • ಬೇರೆ ನೆಟ್‌ವರ್ಕ್‌ಗೆ ಕನೆಕ್ಟ್ ಮಾಡಿ.
  • ಬೇರೆ ಸಾಧನವನ್ನು ಬಳಸಿ.
  • YouTube ಮೊಬೈಲ್ ಆ್ಯಪ್‌ ಮೂಲಕ ಚಾನಲ್‌ಗೆ ಸೇರಿಕೊಳ್ಳಿ.
ಗಮನಿಸಿ: ನೀವು ಸಕ್ರಿಯವಾಗಿ VPN ಅಥವಾ ಪ್ರಾಕ್ಸಿ ಸರ್ವೀಸ್ ಅನ್ನು ಬಳಸುತ್ತಿದ್ದರೆ, ಸೇವೆಯನ್ನು ಆಫ್ ಮಾಡುವುದು ಹೇಗೆ ಎಂಬ ಕುರಿತು ಮಾಹಿತಿಗಾಗಿ ಸೇವೆಯ ವೆಬ್‌ಸೈಟ್ ಅನ್ನು ನೋಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
8134372996470732079
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false