ನಿರ್ದಿಷ್ಟ ಪ್ರದೇಶಗಳಲ್ಲಿ ವೀಡಿಯೊಗಳನ್ನು ನಿರ್ಬಂಧಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.

ಕೆಲವೊಮ್ಮೆ, ನೀವು ನಿರ್ದಿಷ್ಟ ಪ್ರದೇಶಗಳಲ್ಲಿ ನಿಮ್ಮ ವೀಡಿಯೊಗಳನ್ನು ವೀಕ್ಷಿಸದಂತೆ ನಿರ್ಬಂಧಿಸಬೇಕಾಗಬಹುದು. ಉದಾಹರಣೆಗೆ, ನೀವು ಕೆಲವು ಪ್ರದೇಶಗಳಲ್ಲಿ ವೀಡಿಯೊದ ಹಕ್ಕುಗಳನ್ನು ಹೊಂದಿದ್ದು, ಆ ಪ್ರಾಂತ್ಯಗಳಿಂದ ಹೊರಗಿನ ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸುವುದನ್ನು ತಡೆಯಬೇಕಾಗಬಹುದು.

ಇತರ ಸಂದರ್ಭಗಳಲ್ಲಿ, ನೀವು ವೀಡಿಯೊಗೆ ಸಂಬಂಧಿಸಿದ ಹಕ್ಕುಗಳನ್ನು ಹೊಂದಿದ್ದರೂ ಕೆಲವು ಪ್ರಾಂತ್ಯಗಳಲ್ಲಿ ನಿಮ್ಮ ವೀಡಿಯೊವನ್ನು ವೀಕ್ಷಿಸದಂತೆ ನಿರ್ಬಂಧಿಸಬೇಕಾಗಬಹುದು. ನಿರ್ದಿಷ್ಟ ಪ್ರದೇಶಗಳಲ್ಲಿ ವೀಡಿಯೊ ವೀಕ್ಷಣೆಗಳನ್ನು ನಿರ್ಬಂಧಿಸುವ ಪ್ರಕ್ರಿಯೆಯನ್ನು ಸಾಮಾನ್ಯವಾಗಿ "ಜಿಯೋ-ಫೆನ್ಸಿಂಗ್" ಎಂದು ಕರೆಯಲಾಗುತ್ತದೆ.

ನೀವು ಮಾಲೀಕತ್ವವನ್ನು ಹೊಂದಿರುವ ಪ್ರದೇಶಗಳು

ನೀವು ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರವೇ ನಿಮ್ಮ ವೀಡಿಯೊಗೆ ಸಂಬಂಧಿಸಿದ ಹಕ್ಕುಗಳನ್ನು ಹೊಂದಿದ್ದರೆ, ಆ ಪ್ರದೇಶಗಳಲ್ಲಿರುವ ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸದಂತೆ ನೀವು ತಡೆಹಿಡಿಯಬಹುದು.

ನೀವು ಮಾಲೀಕತ್ವವನ್ನು ಹೊಂದಿರುವ ಪ್ರದೇಶಗಳಲ್ಲಿ ವೀಡಿಯೊವನ್ನು ನಿರ್ಬಂಧಿಸಲು, ನೀವು ಅಪ್‌ಲೋಡ್ ನೀತಿಯನ್ನು ಸೆಟಪ್ ಮಾಡಬೇಕಾಗುತ್ತದೆ. ಅಪ್‌ಲೋಡ್ ನೀತಿಯನ್ನು ಸೆಟಪ್ ಮಾಡುವುದು ಹೇಗೆ ಎಂಬುದನ್ನು ತಿಳಿಯಿರಿ.

ನಿಮ್ಮ ಮಾಲೀಕತ್ವದ ಪ್ರದೇಶಗಳಲ್ಲಿ ನಿಮ್ಮ ವೀಡಿಯೊವನ್ನು ನಿರ್ಬಂಧಿಸಲು YouTube ಗೆ ತಿಳಿಸುವ ಪಾಲುದಾರರು-ಅಪ್‌ಲೋಡ್ ಮಾಡಿದ ಕ್ಲೈಮ್ ಅನ್ನು ರಚಿಸಲು ಅಪ್‌ಲೋಡ್ ನೀತಿಗಳು ನಿಮಗೆ ಅವಕಾಶ ಮಾಡಿಕೊಡುತ್ತವೆ. ನೀವು ಪೂರ್ವನಿರ್ಧರಿತ ನೀತಿಯನ್ನು ಬಳಸಿಕೊಂಡು ಜಗತ್ತಿನ ಎಲ್ಲಿ ಬೇಕಾದರೂ ನಿರ್ಬಂಧಿಸಬಹುದು ಅಥವಾ ನಿಮ್ಮ ವೀಡಿಯೊವನ್ನು ಯಾವ ಪ್ರದೇಶದಲ್ಲಿ ನಿರ್ಬಂಧಿಸಲು ಬಯಸುತ್ತೀರಿ ಎಂಬುದನ್ನು ನಿರ್ದಿಷ್ಟಪಡಿಸಲು ಒಂದು ನೀತಿಯನ್ನು ರಚಿಸಬಹುದು.

ನೀವು ಮಾಲೀಕತ್ವವನ್ನು ಹೊಂದಿಲ್ಲದ ಪ್ರದೇಶಗಳು

ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ನೀವು ವೀಡಿಯೊ ಸಂಬಂಧಿತ ಹಕ್ಕುಗಳನ್ನು ಹೊಂದಿದ್ದರೆ, ಆ ಪ್ರದೇಶಗಳಿಂದ ಹೊರಗಿನ ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸದಂತೆ ನೀವು ತಡೆಯಬೇಕಾಗಬಹುದು.

ನೀವು ಮಾಲೀಕತ್ವವನ್ನು ಹೊಂದಿಲ್ಲದ ಪ್ರದೇಶಗಳಲ್ಲಿ ವೀಡಿಯೊವನ್ನು ನಿರ್ಬಂಧಿಸಲು, "ಹೊರಗಿನ ಮಾಲೀಕತ್ವವನ್ನು ನಿರ್ಬಂಧಿಸಿ" ಫೀಚರ್ ಅನ್ನು ಬಳಸಬೇಕಾಗುತ್ತದೆ. ಈ ಪ್ರದೇಶಗಳಲ್ಲಿ ಅಪ್‌ಲೋಡ್ ನೀತಿಯನ್ನು ಅನ್ವಯಿಸಲು ಸಾಧ್ಯವಾಗದ ಕಾರಣ, ನಿಮ್ಮ ಮಾಲೀಕತ್ವದ ಹೊರಗಿನ ಎಲ್ಲಾ ಪ್ರದೇಶಗಳಲ್ಲಿ ನಿರ್ಬಂಧ ನೀತಿಯನ್ನು ಅನ್ವಯಿಸಲು ಈ ಫೀಚರ್ ನಿಮಗೆ ಅನುಮತಿಸುತ್ತದೆ.

ಇತರೆ ಪ್ರದೇಶಗಳಲ್ಲಿ ಇತರೆ ಪಾಲುದಾರರು ಹಕ್ಕುಗಳನ್ನು ಹೊಂದಿದ್ದರೆ, ನಿಮ್ಮ ಮಾಲೀಕತ್ವದ ವ್ಯಾಪ್ತಿಯಿಂದ ಹೊರಗೆ ವೀಡಿಯೊವನ್ನು ನಿರ್ಬಂಧಿಸಬೇಡಿ. ನೀವು ಹಾಗೆ ಮಾಡಿದರೆ, ಇತರ ಪಾಲುದಾರರ ಪ್ರದೇಶಗಳಲ್ಲಿಯೂ ವೀಡಿಯೊವನ್ನು ನಿರ್ಬಂಧಿಸಲಾಗುತ್ತದೆ. ಸ್ವತ್ತಿನ ಮಾಲೀಕತ್ವವನ್ನು ನಿರ್ವಹಿಸುವ ಕುರಿತು ಇನ್ನಷ್ಟು ತಿಳಿಯಿರಿ.

ಏಕೈಕ ವೀಡಿಯೊವನ್ನು ನಿರ್ಬಂಧಿಸಿ

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ವೀಡಿಯೊಗಳು ಆಯ್ಕೆಮಾಡಿ.
  3. ನೀವು ನಿರ್ಬಂಧಿಸಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಹಕ್ಕುಗಳ ನಿರ್ವಹಣೆ ಟ್ಯಾಬ್ ಆಯ್ಕೆಮಾಡಿ.
  5. ಮಾಲೀಕತ್ವ ವಿಭಾಗದ ಅಡಿಯಲ್ಲಿ, ನಿರ್ದಿಷ್ಟ ಪ್ರದೇಶಗಳು ಕ್ಲಿಕ್ ಮಾಡಿ.
  6. ಒಂದು ಆಯ್ಕೆಮಾಡಿ:
    • ಆಯ್ದ ಪ್ರದೇಶಗಳಲ್ಲಿ ಮಾಲೀಕತ್ವ: ನೀವು ಕೆಲವು ಪ್ರದೇಶಗಳಲ್ಲಿ ನಿಮ್ಮ ವೀಡಿಯೊಗೆ ಸಂಬಂಧಿಸಿದ ಹಕ್ಕುಗಳನ್ನು ಹೊಂದಿದ್ದರೆ, ಈ ಆಯ್ಕೆಮಾಡಿ. ನಂತರ, ಪಠ್ಯದ ಬಾಕ್ಸ್‌ನಲ್ಲಿ, ನಿಮ್ಮ ವೀಡಿಯೊಗೆ ಹಕ್ಕುಗಳನ್ನು ಹೊಂದಿರುವ ಪ್ರದೇಶಗಳನ್ನು ನಮೂದಿಸಿ. ಪ್ರತಿ ನಮೂದನ್ನು ಪ್ರತ್ಯೇಕಿಸಲು, ಅಲ್ಪವಿರಾಮ ಚಿಹ್ನೆಯನ್ನು (",") ಬಳಸಿ.
    • ಆಯ್ದ ಪ್ರದೇಶಗಳನ್ನು ಹೊರತುಪಡಿಸಿ ಎಲ್ಲೆಡೆಯಲ್ಲೂ ಮಾಲೀಕತ್ವ: ನೀವು ಹಲವಾರು ಪ್ರದೇಶಗಳಲ್ಲಿ ನಿಮ್ಮ ವೀಡಿಯೊಗೆ ಹಕ್ಕುಗಳನ್ನು ಹೊಂದಿದ್ದರೆ, ಈ ಆಯ್ಕೆಮಾಡಿ. ನಂತರ, ಪಠ್ಯದ ಬಾಕ್ಸ್‌ನಲ್ಲಿ, ನಿಮಗೆ ಯಾವ ಪ್ರದೇಶಗಳಲ್ಲಿ ನಿಮ್ಮ ವೀಡಿಯೊ ಹಕ್ಕುಗಳು ಬೇಡವೋ ಆ ಪ್ರದೇಶಗಳನ್ನು ನಮೂದಿಸಿ. ಪ್ರತಿ ನಮೂದನ್ನು ಪ್ರತ್ಯೇಕಿಸಲು, ಅಲ್ಪವಿರಾಮ ಚಿಹ್ನೆಯನ್ನು (",") ಬಳಸಿ.
  7. ನಿಮ್ಮ ಮಾಲೀಕತ್ವದ ಹೊರಗಿನ ಪ್ರದೇಶಗಳಲ್ಲಿ ವೀಡಿಯೊವನ್ನು ನಿರ್ಬಂಧಿಸಿ ಪಕ್ಕದಲ್ಲಿರುವ ಚೆಕ್‌ಬಾಕ್ಸ್ ಕ್ಲಿಕ್ ಮಾಡಿ.
  8. ಉಳಿಸಿ ಕ್ಲಿಕ್ ಮಾಡಿ.
ನಿಮ್ಮ ಮಾಲೀಕತ್ವದ ಹೊರಗಿನ ನಿರ್ದಿಷ್ಟ ಪ್ರದೇಶಗಳಲ್ಲಿ ನೀವು ವಿಧಿಸಿರುವ ನಿರ್ಬಂಧಗಳನ್ನು ತೆಗೆದುಹಾಕಲು ಬಯಸಿದರೆ, ಸಹಾಯಕ್ಕಾಗಿ ನಮ್ಮ ಬೆಂಬಲ ತಂಡದ ಸಂಪರ್ಕದಲ್ಲಿರಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
18215779302903805453
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false