ಸ್ವತ್ತಿನ ಮೆಟಾಡೇಟಾವನ್ನು ನಿರ್ವಹಿಸಿ

YouTube Studio ಕಂಟೆಂಟ್ ಮ್ಯಾನೇಜರ್ ಅನ್ನು ಬಳಸುವ ಪಾಲುದಾರರಿಗೆ ಮಾತ್ರ ಈ ಫೀಚರ್‌ಗಳು ಲಭ್ಯವಿರುತ್ತವೆ. ಆ್ಯಕ್ಸೆಸ್ ಅನ್ನು ಪಡೆಯಲು ನಿಮ್ಮ YouTube ಪಾರ್ಟ್‌ನರ್ ಮ್ಯಾನೇಜರ್ ಅನ್ನು ಸಂಪರ್ಕಿಸಿ.
ನಿಮ್ಮ ಸ್ವತ್ತುಗಳನ್ನು ಅಪ್‌ಲೋಡ್ ಮಾಡಿದ ನಂತರ, ನೀವು ಹಿಂದಕ್ಕೆ ಮರಳಬಹುದು ಮತ್ತು ನಿಮ್ಮ ಸ್ವತ್ತುಗಳಿಗೆ ಸಂಬಂಧಿಸಿದ ಮೆಟಾಡೇಟಾವನ್ನು ಎಡಿಟ್ ಮಾಡಬಹುದು. ನೀವು ಸ್ವತ್ತಿನ ಮೆಟಾಡೇಟಾದ ಹಲವಾರು ಆವೃತ್ತಿಗಳನ್ನು ಅಪ್‌ಲೋಡ್ ಮಾಡಿದ್ದರೆ, ಯಾವೆಲ್ಲಾ ಬದಲಾವಣೆಗಳನ್ನು ಮಾಡಲಾಗಿದೆ ಎಂಬುದನ್ನು ನೀವು ಟ್ರ್ಯಾಕ್ ಮಾಡಬಹುದು ಮತ್ತು ಹೋಲಿಸಿ ನೋಡಬಹುದು.

ಸ್ವತ್ತಿನ ಮೆಟಾಡೇಟಾವನ್ನು ಎಡಿಟ್ ಮಾಡಿ

ಸ್ವತ್ತಿನ ಮೆಟಾಡೇಟಾವನ್ನು ಅಪ್‌ಡೇಟ್ ಮಾಡಲು:

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸ್ವತ್ತುಗಳು ಆಯ್ಕೆಮಾಡಿ.
  3. ನೀವು ಮೆಟಾಡೇಟಾವನ್ನು ಎಡಿಟ್ ಮಾಡಬೇಕಿರುವ ಸ್ವತ್ತಿನ ಶೀರ್ಷಿಕೆಯನ್ನು ಕ್ಲಿಕ್ ಮಾಡಿ.
  4. ಸ್ವತ್ತಿನ ವಿವರಗಳು ಪುಟದಲ್ಲಿ, ನೀವು ಎಡಿಟ್ ಮಾಡಬೇಕಿರುವ ಫೀಲ್ಡ್ ಮೇಲೆ ಕ್ಲಿಕ್ ಮಾಡಿ ಮತ್ತು ನಿಮ್ಮ ಬದಲಾವಣೆಗಳನ್ನು ಮಾಡಿ.
    • ನೀವು ತಪ್ಪು ಮಾಡಿದ್ದರೆ, ನೀವು ಬದಲಾವಣೆಗಳನ್ನು ರದ್ದುಮಾಡಿ ಕ್ಲಿಕ್ ಮಾಡಬಹುದು.
  5. ನಿಮ್ಮ ಎಡಿಟ್‌ಗಳನ್ನು ಉಳಿಸಲು, ಉಳಿಸಿ ಕ್ಲಿಕ್ ಮಾಡಿ.

ಮೆಟಾಡೇಟಾ ಇತಿಹಾಸವನ್ನು ಟ್ರ್ಯಾಕ್ ಮಾಡಿ

ಸ್ವತ್ತಿನ ಮೆಟಾಡೇಟಾದ ಹಳೆಯ ಆವೃತ್ತಿಗಳನ್ನು ನೋಡಲು:

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸ್ವತ್ತುಗಳು ಆಯ್ಕೆಮಾಡಿ.
  3. ನೀವು ಮೆಟಾಡೇಟಾವನ್ನು ಪರಿಶೀಲನೆ ಮಾಡಬೇಕಿರುವ ಸ್ವತ್ತಿನ ಶೀರ್ಷಿಕೆಯನ್ನು ಕ್ಲಿಕ್ ಮಾಡಿ.
  4. ಸ್ವತ್ತಿನ ವಿವರಗಳು ಪುಟದಲ್ಲಿ, ಬಲಭಾಗದಲ್ಲಿ ಕಾಣಿಸುವ ಇತಿಹಾಸ ಬಾಕ್ಸ್ ಅನ್ನು ಹುಡುಕಿ. ಇತಿಹಾಸ, ಇದು ಸ್ವತ್ತಿಗೆ ಮಾಡಲಾದ ಮೆಟಾಡೇಟಾ ಅಪ್‌ಡೇಟ್‌ಗಳ ಕುರಿತ ಇತಿಹಾಸವನ್ನು ತೋರಿಸುತ್ತದೆ.
  5. ಸ್ವತ್ತಿನ ಮೆಟಾಡೇಟಾಕ್ಕೆ ಸಂಬಂಧಿಸಿದ ಹಳೆಯ ಆವೃತ್ತಿಗಳನ್ನು ನೋಡಲು, ಮೊದಲ ಸಾಲಿನ ಕೆಳಗಿರುವ ಸಾಲನ್ನು ಕ್ಲಿಕ್ ಮಾಡಿ. ಇತ್ತೀಚಿನ ಆವೃತ್ತಿಯನ್ನು ನೋಡುವುದಕ್ಕೆ ಹಿಂತಿರುಗಲು, ಮೊದಲ ಸಾಲನ್ನು ಆಯ್ಕೆಮಾಡಿ.
  6. ಸ್ವತ್ತಿನ ಮೆಟಾಡೇಟಾದ ಹಳೆಯ ಆವೃತ್ತಿಯನ್ನು ಮರುಸ್ಥಾಪಿಸಲು, ಪೂರ್ವಸ್ಥಿತಿಗೆ ತನ್ನಿ ಕ್ಲಿಕ್ ಮಾಡಿ.
    • ಹಳೆಯ ಆವೃತ್ತಿಗೆ ಬದಲಾಯಿಸುವ ಕಾರ್ಯವನ್ನು ರದ್ದುಮಾಡಲು, ಬದಲಾವಣೆಗಳನ್ನು ರದ್ದುಮಾಡಿ ಕ್ಲಿಕ್ ಮಾಡಿ.
  7. ನಿಮ್ಮ ಬದಲಾವಣೆಗಳನ್ನು ಉಳಿಸಲು, ಉಳಿಸಿ ಕ್ಲಿಕ್ ಮಾಡಿ. 
    • ಗಮನಿಸಿ: ಹಳೆಯ ಮೆಟಾಡೇಟಾ ಆವೃತ್ತಿಯನ್ನು ಎಡಿಟ್ ಮಾಡಲು, ಪೂರ್ವಸ್ಥಿತಿಗೆ ತನ್ನಿ ಕ್ಲಿಕ್ ಮಾಡಿ, ನಿಮ್ಮ ಎಡಿಟ್‌ಗಳನ್ನು ಮಾಡಿ, ಆಮೇಲೆ ಉಳಿಸಿ ಕ್ಲಿಕ್ ಮಾಡಿ.

ಮೆಟಾಡೇಟಾ ಆವೃತ್ತಿಗಳನ್ನು ಹೋಲಿಕೆ ಮಾಡಿ

ಒಂದು ಸ್ವತ್ತಿಗೆ ಸಂಬಂಧಪಟ್ಟ ಸಕ್ರಿಯ ಡಿಸ್‌ಪ್ಲೇ ಮೆಟಾಡೇಟಾವನ್ನು ನೋಡಲು 'ಮೆಟಾಡೇಟಾ ಹೋಲಿಸಿ' ಫೀಚರ್ ಅನ್ನು ಬಳಸಿ. ಸ್ವತ್ತನ್ನು ವಿಲೀನಗೊಳಿಸಿದ್ದರೆ ಅಥವಾ ಮಾಲೀಕತ್ವದ ಮೇರೆಗೆ ಹಂಚಿಕೊಂಡಿದ್ದರೆ, ಇತರ ಪಾಲುದಾರರು ಅಪ್‌ಲೋಡ್ ಮಾಡಿದ ಮೆಟಾಡೇಟಾವನ್ನು ಸಹ ನೀವು ನೋಡಬಹುದು. 'ಮೆಟಾಡೇಟಾ ಹೋಲಿಸಿ' ಫೀಚರ್ ಅನ್ನು ಬಳಸಲು:

  1. Studio ಕಂಟೆಂಟ್ ಮ್ಯಾನೇಜರ್ ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಸ್ವತ್ತುಗಳು ಆಯ್ಕೆಮಾಡಿ.
  3. ನೀವು ಮೆಟಾಡೇಟಾ ಆವೃತ್ತಿಗಳನ್ನು ಹೋಲಿಕೆ ಮಾಡಬೇಕಿರುವ ಸ್ವತ್ತಿನ ಶೀರ್ಷಿಕೆಯನ್ನು ಕ್ಲಿಕ್ ಮಾಡಿ.
  4. ಸ್ವತ್ತಿನ ವಿವರಗಳು ಪುಟದ ಬಲಭಾಗದಲ್ಲಿರುವ ಮೆಟಾಡೇಟಾ ಹೋಲಿಸಿ ಕ್ಲಿಕ್ ಮಾಡಿ. ಮೆಟಾಡೇಟಾ ಹೋಲಿಸಿ ಪುಟವು ತೆರೆದುಕೊಳ್ಳುತ್ತದೆ.
    • ಗ್ರೀನ್ ಡಿಸ್‌ಪ್ಲೇ ಐಕಾನ್ , ಇದು ಈ ಮೆಟಾಡೇಟಾ ಸೆಟ್, ಸ್ವತ್ತಿಗೆ ಸಂಬಂಧಿಸಿದ ಸಕ್ರಿಯ ಡಿಸ್‌ಪ್ಲೇ ಮೆಟಾಡೇಟಾ ಆಗಿದೆ ಎಂಬುದನ್ನು ಸೂಚಿಸುತ್ತದೆ. ಇದು ಅಪ್‌ಲೋಡ್ ಮಾಡುವವರ ಮೇಲೆ ಕ್ಲೈಮ್ ಆಪಾದನೆ ಕೇಳಿಬಂದಾಗ ಮತ್ತು ಈ ವೀಡಿಯೊದಲ್ಲಿ ಸಂಗೀತ ರೀತಿಯ ಫೀಚರ್‌ಗಳಲ್ಲಿ ಅವರಿಗೆ ಕಾಣಿಸುವ ಆವೃತ್ತಿಯಾಗಿದೆ. 
      • ಅತ್ಯಂತ ಪರಿಪೂರ್ಣ ಮತ್ತು ಹೊಚ್ಚಹೊಸ ಮೆಟಾಡೇಟಾ ಸೆಟ್ ಅನ್ನು ಡಿಸ್‌ಪ್ಲೇ ಐಕಾನ್ ಮೂಲಕ ಗುರುತಿಸಲಾಗಿರುತ್ತದೆ. 
    • ಮೌಲ್ಯದ ಸುತ್ತಲೂ ತಿಳಿ ನೀಲಿ ಬಣ್ಣದ ಅಂಚು ಕಂಡುಬಂದರೆ, ಈ ಡೇಟಾವು ನೀವು ಅಪ್‌ಲೋಡ್ ಮಾಡಿರುವ ಹೊಚ್ಚಹೊಸ ಮೆಟಾಡೇಟಾಕ್ಕಿಂತ ವಿಭಿನ್ನವಾಗಿದೆ ಎಂಬುದನ್ನು ಸೂಚಿಸುತ್ತದೆ. ಹೊಂದಾಣಿಕೆಯಾಗದ ಮೌಲ್ಯಗಳು ಬೋಲ್ಡ್ ಆಗಿ ಕಾಣಿಸುತ್ತವೆ.
ಸಲಹೆ: ಮೆಟಾಡೇಟಾ ಹೋಲಿಸಿ ಪುಟದಲ್ಲಿ, ನೀವು ಮೇಲಿನ ಬಲ ಮೂಲೆಯಲ್ಲಿರುವ ಡೌನ್‌ಲೋಡ್ ಐಕಾನ್ ಕ್ಲಿಕ್ ಮಾಡುವ ಮೂಲಕ ಮೆಟಾಡೇಟಾವನ್ನು .CSV ಫೈಲ್ ಫಾರ್ಮ್ಯಾಟ್‌ನಲ್ಲಿ ಎಕ್ಸ್‌ಪೋರ್ಟ್ ಮಾಡಿಕೊಳ್ಳಬಹುದು.

ಸಂಗೀತದ ಲೇಬಲ್ ಪಾಲುದಾರರಿಗಾಗಿ ಹೆಚ್ಚಿನ ಮಾಹಿತಿ

ನೀವು ಓರ್ವ ಸಂಗೀತದ ಲೇಬಲ್ ಪಾಲುದಾರರಾಗಿದ್ದರೆ, ನೀವು ಇತಿಹಾಸ ಬಾಕ್ಸ್‌ನಲ್ಲಿ ಮತ್ತು ಮೆಟಾಡೇಟಾ ಹೋಲಿಸಿ ಪುಟದಲ್ಲಿ ಹೆಚ್ಚಿನ ವಿವರಗಳನ್ನು ಗಮನಿಸಬಹುದು.

ಇತಿಹಾಸ

  • ಇತಿಹಾಸ ಬಾಕ್ಸ್, ಇದು ಮೆಟಾಡೇಟಾ ಆವೃತ್ತಿಗೆ ಸಂಬಂಧಿಸಿದ ಧ್ವನಿ ರೆಕಾರ್ಡಿಂಗ್ ಹಂಚಿಕೆಯನ್ನು ಒಳಗೊಂಡಿರುತ್ತದೆ.
  • ನೀಲಿ ಹಂಚಿಕೆ ಲೇಬಲ್ ಎಂಬುದು ಸಕ್ರಿಯ ಹಂಚಿಕೆಯಾಗಿದ್ದು, ಸಕ್ರಿಯ ಹಂಚಿಕೆಯಿಂದ ಮೆಟಾಡೇಟಾವನ್ನು ಪ್ರಸ್ತುತ ಮೆಟಾಡೇಟಾ ಸೆಟ್ ಆಗಿ ಬಳಸಲಾಗುತ್ತದೆ ಎಂದು ಸೂಚಿಸುತ್ತದೆ.

ಮೆಟಾಡೇಟಾ ಹೋಲಿಸಿ

  • ಮೆಟಾಡೇಟಾ ಆವೃತ್ತಿಗಳನ್ನು ಪೂರೈಕೆದಾರರು, ಬಿಡುಗಡೆ ಐಡೆಂಟಿಫೈಯರ್‌ಗಳು (ಅಂದರೆ, UPC ಅಥವಾ ISRC) ಮತ್ತು ಡೆಲಿವರಿ ಮೂಲಗಳ ಪ್ರಕಾರವಾಗಿ ಗುಂಪು ಮಾಡಲಾಗಿರುತ್ತದೆ.
ಸಲಹೆ: ಪ್ರಕಾಶನ ಪಾಲುದಾರರು ಅಪ್‌ಲೋಡ್ ಮಾಡಿರುವ ಮೆಟಾಡೇಟಾವನ್ನು ನೋಡಲು, ಸ್ವತ್ತಿನ ವಿವರಗಳು ಪುಟದ ಎಡಭಾಗದಲ್ಲಿರುವ ಹಂಚಿಕೆಗಳು  ಕ್ಲಿಕ್ ಮಾಡಿ, ಆಮೇಲೆ ಮೆಟಾಡೇಟಾ ಹೋಲಿಸಿ ಕ್ಲಿಕ್ ಮಾಡಿ.

ಸಂಗೀತ ಪ್ರಕಾಶನ ಪಾಲುದಾರರಿಗಾಗಿ ಹೆಚ್ಚಿನ ಮಾಹಿತಿ

ನೀವು ಓರ್ವ ಸಂಗೀತ ಪ್ರಕಾಶನ ಪಾಲುದಾರರಾಗಿದ್ದರೆ, ನೀವು ಇತಿಹಾಸ ಬಾಕ್ಸ್‌ನಲ್ಲಿ ಮತ್ತು ಮೆಟಾಡೇಟಾ ಹೋಲಿಸಿ ಪುಟದಲ್ಲಿ ಹೆಚ್ಚಿನ ವಿವರಗಳನ್ನು ಗಮನಿಸಬಹುದು.

ಇತಿಹಾಸ

  • ಧ್ವನಿ ರೆಕಾರ್ಡಿಂಗ್ ಹಂಚಿಕೆಯನ್ನು ಎಂಬೆಡ್ ಮಾಡುವ ಧ್ವನಿ ರೆಕಾರ್ಡಿಂಗ್ ಸ್ವತ್ತುಗಳಲ್ಲಿಯೂ ಸಹ ನೀವು ಮೆಟಾಡೇಟಾ ಇತಿಹಾಸವನ್ನು ಆ್ಯಕ್ಸೆಸ್ ಮಾಡಬಹುದು. ಸ್ವತ್ತಿನ ವಿವರಗಳು ಪುಟದಲ್ಲಿ, ಪುಟದ ಮೇಲ್ಭಾಗದಲ್ಲಿರುವ ಧ್ವನಿ ರೆಕಾರ್ಡಿಂಗ್ ಹಂಚಿಕೆಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  • ಸಂಯೋಜನೆ ಹಂಚಿಕೆ ಸ್ವತ್ತನ್ನು ನೋಡುತ್ತಿರುವಾಗ, ಸ್ವತ್ತಿನ ಮೆಟಾಡೇಟಾದ ಹಳೆಯ ಆವೃತ್ತಿಗಳ ಕುರಿತು ಹೆಚ್ಚಿನ ಮಾಹಿತಿಗಾಗಿ ಮೆಟಾಡೇಟಾ ಇತಿಹಾಸವನ್ನು ನೋಡಿ ಕ್ಲಿಕ್ ಮಾಡಿ.

ಮೆಟಾಡೇಟಾ ಹೋಲಿಸಿ

ಇತರ ಪ್ರಕಾಶನ ಪಾಲುದಾರರು ಅಪ್‌ಲೋಡ್ ಮಾಡಿರುವ ಸಂಯೋಜನೆ ಮೆಟಾಡೇಟಾವನ್ನು ನೋಡಲು:
  1. ಸ್ವತ್ತಿನ ವಿವರಗಳು ಪುಟದಲ್ಲಿ, ಪುಟದ ಮೇಲ್ಭಾಗದಲ್ಲಿರುವ ಧ್ವನಿ ರೆಕಾರ್ಡಿಂಗ್ ಹಂಚಿಕೆಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  2. ಎಡಭಾಗದ ಮೆನುವಿನಲ್ಲಿ, ಹಂಚಿಕೆಗಳು ಆಯ್ಕೆಮಾಡಿ.
  3. ಮೆಟಾಡೇಟಾ ಹೋಲಿಸಿ ಕ್ಲಿಕ್ ಮಾಡಿ.
ಸಲಹೆ: ಇತರ ಪ್ರಕಾಶನ ಪಾಲುದಾರರು ಸೆಟ್ ಮಾಡಿರುವ ಮಾಲೀಕತ್ವ ಮತ್ತು ಹೊಂದಾಣಿಕೆ ನೀತಿಯನ್ನು ಪರಿಶೀಲಿಸುತ್ತಿರುವಾಗ, ನೀವು ಮಾಲೀಕತ್ವ ಮತ್ತು ನೀತಿ  ಪುಟದಲ್ಲಿ ಮೆಟಾಡೇಟಾ ಹೋಲಿಸಿ ಕ್ಲಿಕ್ ಮಾಡಬಹುದು.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
250059879147705144
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false