YouTube Kids ನಲ್ಲಿ ಜಾಹೀರಾತು ನೀಡುವಿಕೆ

YouTube Kids ಆ್ಯಪ್‌ನಲ್ಲಿ ಮಾರಾಟ ಮಾಡಲಾಗುವ ಎಲ್ಲಾ ಜಾಹೀರಾತುಗಳು ಕೆಳಗೆ ನೀಡಲಾದ ಹೆಚ್ಚುವರಿ ಜಾಹೀರಾತು ನೀತಿಗಳನ್ನು ಮಾತ್ರವಲ್ಲದೆ YouTube ನ ಸಾಮಾನ್ಯ ಜಾಹೀರಾತು ನೀತಿಗಳನ್ನು ಅನುಸರಿಸಬೇಕು. YouTube Kids ಜಾಹೀರಾತು ನೀತಿಗಳು ಕಾಲ ಕಳೆದಂತೆ ವಿಕಸನಗೊಳ್ಳುತ್ತಾ ಹೋಗಬಹುದು. ಇತ್ತೀಚಿನ ಅಪ್‌ಡೇಟ್‌ಗಳನ್ನು ಓದಲು ಆಗಾಗ ಪರಿಶೀಲಿಸಲು ನಾವು ನಿಮ್ಮನ್ನು ಪ್ರೋತ್ಸಾಹಿಸುತ್ತೇವೆ. ಎಲ್ಲಾ YouTube Kids ಪಾವತಿಸಿದ ಆ್ಯಡ್‌ಗಳನ್ನು YouTube Kids ನಲ್ಲಿ ಸರ್ವ್ ಮಾಡುವ ಮೊದಲು YouTube ನ ನೀತಿ ತಂಡವು ಪೂರ್ವಾನುಮೋದಿಸಬೇಕು. ಅದಲ್ಲದೆ ಜಾಹೀರಾತುದಾರರು, ಅನ್ವಯಿಸುವ ಕಾನೂನುಗಳು ಮತ್ತು ನಿಯಮಗಳನ್ನು (ಸೂಕ್ತವಾದ ಯಾವುದೇ ಸ್ವಯಂ-ನಿಯಂತ್ರಕ ಅಥವಾ ಉದ್ಯಮ ಮಾರ್ಗಸೂಚಿಗಳನ್ನು ಒಳಗೊಂಡು) ಸಹ ಅನುಸರಿಸಬೇಕು. ನಮ್ಮ ಆ್ಯಡ್ ಫಾರ್ಮ್ಯಾಟ್ ಅವಶ್ಯಕತೆಗಳ ಕುರಿತು ನೀವು ಇಲ್ಲಿ ಇನ್ನಷ್ಟು ವಿಷಯಗಳನ್ನು ಓದಬಹುದು.

YouTube Kids ನಲ್ಲಿ ಪಾವತಿಸಿದ ಆ್ಯಡ್ ಎಂದರೇನು?

ಶುಲ್ಕವಿಲ್ಲದ ಅನುಭವವನ್ನು ಒದಗಿಸುವುದಕ್ಕಾಗಿ, YouTube Kids ಸೀಮಿತ ಜಾಹೀರಾತುಗಳೊಂದಿಗೆ ಆ್ಯಡ್-ಬೆಂಬಲಿತವಾಗಿದೆ. ನೀವು ಆ್ಯಪ್‌ನಲ್ಲಿ YouTube ವೀಡಿಯೊವನ್ನು ಆಯ್ಕೆ ಮಾಡಿದಾಗ, ನೀವು ಆಯ್ಕೆ ಮಾಡಿದ ವೀಡಿಯೊದ ಎದುರಿನಲ್ಲಿ ಆ್ಯಡ್ ಬಂಪರ್‌ನ ನಂತರ "ಆ್ಯಡ್" ಹಕ್ಕುನಿರಾಕರಣೆಯೊಂದಿಗೆ ವೀಡಿಯೊ ಆ್ಯಡ್-ಗುರುತು ಮಾಡಲಾಗಿರುವುದನ್ನು ನೀವು ನೋಡಬಹುದು. ಇವುಗಳು ಪಾವತಿಸಿದ ಆ್ಯಡ್‌ಗಳಾಗಿವೆ ("ಪಾವತಿಸಿದ ಆ್ಯಡ್‌ಗಳು").

ಬಳಕೆದಾರರು YouTube ಗೆ ಅಪ್‌ಲೋಡ್ ಮಾಡಿದ ವೀಡಿಯೊಗಳು, ಪಾವತಿಸಿದ ಜಾಹೀರಾತುಗಳಲ್ಲ, ಆದ್ದರಿಂದ ಇವುಗಳನ್ನು ಜಾಹೀರಾತು ಎಂಬುದಾಗಿ ಗುರುತಿಸಲಾಗಿರುವುದಿಲ್ಲ ಮತ್ತು ಇವು ನಮ್ಮ ಜಾಹೀರಾತು ನೀತಿಗಳಿಗೆ ಒಳಪಟ್ಟಿರುವುದಿಲ್ಲ. ಆ್ಯಪ್‌ನಲ್ಲಿ ಜಾಹೀರಾತುಗಳನ್ನು ಖರೀದಿಸಿರಬಹುದಾದ ಕಂಪನಿಗಳ ಕುರಿತು ಅಥವಾ ಕಂಪನಿಗಳಿಂದ ಕಂಟೆಂಟ್ ಅನ್ನು ಸಹ ಇದು ಒಳಗೊಂಡಿರಬಹುದು. ಉದಾಹರಣೆಗೆ, ರೈಲುಗಳ ಕುರಿತು ನಡೆಸಿದ ಹುಡುಕಾಟದಲ್ಲಿ ಬಳಕೆದಾರರು ಅಥವಾ ಆಟಿಕೆಯ ರೈಲುಗಳ ಕಂಪನಿಯು ಅಪ್‌ಲೋಡ್ ಮಾಡಿದ ರೈಲಿನ ಕಾರ್ಟೂನ್‌ಗಳು, ನಿಜವಾದ ರೈಲುಗಳನ್ನು ಒಳಗೊಂಡ ಹಾಡುಗಳು ಮತ್ತು ವೀಡಿಯೊಗಳ ಫಲಿತಾಂಶಗಳು ಸೇರಿರಬಹುದು. ಇವುಗಳನ್ನು ನಾವು ಪಾವತಿಸಿದ ಜಾಹೀರಾತುಗಳೆಂದು ಪರಿಗಣಿಸುವುದಿಲ್ಲ ಏಕೆಂದರೆ ಇವು YouTube Kids ಜಾಹೀರಾತು ಕಾರ್ಯಕ್ರಮದ ಭಾಗವಾಗಿರುವುದಿಲ್ಲ. ಇದೇ ರೀತಿ ಚಾಕೊಲೇಟ್ ತಯಾರಕರಿಗೆ, ಪಾವತಿಸಿದ ಜಾಹೀರಾತುಗಳನ್ನು ಪ್ರದರ್ಶಿಸಲು ನಾವು ಅನುಮತಿಸುವುದಿಲ್ಲವಾದರೂ, ಚಾಕೊಲೇಟ್ ಕುರಿತು ನಡೆಸಿದ ಹುಡುಕಾಟವು ಚಾಕೊಲೇಟ್ ಫಜ್ ಮಾಡುವ ಬಗ್ಗೆ ಬಳಕೆದಾರರು ಅಪ್‌ಲೋಡ್ ಮಾಡಿದ ವೀಡಿಯೊವನ್ನು ತೋರಿಸಬಹುದು. YouTube Kids ನಲ್ಲಿ ವೀಡಿಯೊಗಳ ಕುರಿತು ಇನ್ನಷ್ಟು ತಿಳಿಯಿರಿ.

ಆ್ಯಡ್ ಫಾರ್ಮ್ಯಾಟ್‌ನ ಅವಶ್ಯಕತೆಗಳು

  • ಫಾರ್ಮ್ಯಾಟ್: ಈ ಸಮಯದಲ್ಲಿ ನಾವು YouTube Kids ನಲ್ಲಿ ಸ್ಟ್ರೀಮ್‌ನಲ್ಲಿನ ವೀಡಿಯೊ ಆ್ಯಡ್ ಫಾರ್ಮ್ಯಾಟ್ ಅನ್ನು ಮಾತ್ರ ಸ್ವೀಕರಿಸುತ್ತೇವೆ.
  • ಗರಿಷ್ಠ ಸಮಯಾವಧಿ: ಸ್ಕಿಪ್ ಮಾಡಲಾಗದವುಗಳಿಗಾಗಿ 15-20 ಸೆಕೆಂಡ್ ಉದ್ದ (ವೀಕ್ಷಕರು ಎಲ್ಲಿ ನೆಲೆಸಿದ್ದಾರೆ ಎಂಬುದನ್ನು ಆಧರಿಸಿ) ಮತ್ತು ಸ್ಕಿಪ್ ಮಾಡಬಹುದಾದವುಗಳಿಗಾಗಿ 60 ಸೆಕೆಂಡ್‌ಗಳು (ಮಾರ್ಕೆಟ್ ಅನ್ನು ಆಧರಿಸಿ, ಉದ್ದದಲ್ಲಿ ವ್ಯತ್ಯಾಸವಾಗಬಹುದು). ಪಾವತಿಸಿದ ಆ್ಯಡ್‌ಗಿಂತ ಮೊದಲು ಪ್ಲೇ ಆಗಬಹುದಾದ 3 ಸೆಕೆಂಡ್‌ಗಳ ಆ್ಯಡ್ ಬಂಪರ್‌ಗೆ ಇದು ಹೊರತಾಗಿರುತ್ತದೆ.
  • ಗಮ್ಯಸ್ಥಾನದ URL ಗಳು: ಗಮ್ಯಸ್ಥಾನದ URL ಗಳು ಮತ್ತು ಹೊರಹೋಗಲಿರುವ ಲಿಂಕ್‌ಗಳನ್ನು (ಕ್ರಮಕೈಗೊಳ್ಳಲು ಕರೆ ಓವರ್‌ಲೇಗಳು ಮತ್ತು ಇನ್‌ಫೋ-ಕಾರ್ಡ್‌ಗಳು ಸೇರಿದಂತೆ) ಆ್ಯಪ್‌ನಿಂದ ನಿಷ್ಕ್ರಿಯಗೊಳಿಸಲಾಗಿದೆ. YouTube Kids ನಲ್ಲಿ ಆ್ಯಡ್‌ಗಳನ್ನು ಕ್ಲಿಕ್ ಮಾಡಲು ಸಾಧ್ಯವಿಲ್ಲ.
  • ಸೈಟ್-ಸರ್ವ್ ಮಾಡಿರುವುದು: ಎಲ್ಲಾ ಪಾವತಿಸಿದ ಆ್ಯಡ್‌ಗಳನ್ನು YouTube ನಲ್ಲಿ ಹೋಸ್ಟ್ ಮಾಡಬೇಕು. ಥರ್ಡ್ ಪಾರ್ಟಿ ಸರ್ವ್ ಮಾಡಿದ ಆ್ಯಡ್‌ಗಳನ್ನು ನಿಷೇಧಿಸಲಾಗಿದೆ.

ಆ್ಯಡ್ ಟಾರ್ಗೆಟಿಂಗ್ ಮತ್ತು ಡೇಟಾ ಸಂಗ್ರಹಣೆ

  • YouTube Kids ನಲ್ಲಿ ಆಸಕ್ತಿ-ಆಧಾರಿತ ಜಾಹೀರಾತುಗಳನ್ನು ನಾವು ನಿಷೇಧಿಸುತ್ತೇವೆ.
  • ಮರುಮಾರ್ಕೆಟಿಂಗ್ ಅಥವಾ ಇತರ ಟ್ರ್ಯಾಕಿಂಗ್ ಪಿಕ್ಸೆಲ್‌ಗಳನ್ನು ಹೊಂದಿರುವ ಪಾವತಿಸಿದ ಆ್ಯಡ್‌ಗಳನ್ನು ನಿಷೇಧಿಸಲಾಗಿದೆ.

ನಿರ್ಬಂಧಿತ ಉತ್ಪನ್ನ ವರ್ಗಗಳು

YouTube Kids ನಲ್ಲಿ ಈ ಕೆಳಗಿನ ಉತ್ಪನ್ನಗಳಿಗಾಗಿ ಪಾವತಿಸಿದ ಆ್ಯಡ್‌ಗಳನ್ನು ನಿಷೇಧಿಸಲಾಗಿದೆ.

ವಯಸ್ಸಿಗೆ ಸೂಕ್ಷ್ಮವಾದ ಮೀಡಿಯಾ ಕಂಟೆಂಟ್

13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ತೋರಿಸಲು ಸೂಕ್ಷ್ಮವಾಗಿರುವ ಮೀಡಿಯಾವನ್ನು ನಿಷೇಧಿಸಲಾಗಿದೆ. ಉದಾಹರಣೆಗಳಲ್ಲಿ, MPAA ಮೂಲಕ ‘PG’ ಅಥವಾ ಅಧಿಕ ರೇಟಿಂಗ್ ಹೊಂದಿರುವುದು ಮತ್ತು ಟಿವಿ ಪೋಷಕರ ಮಾರ್ಗಸೂಚಿಗಳ ಮೂಲಕ 'G' ಅಥವಾ ಅಧಿಕ ರೇಟಿಂಗ್ ಹೊಂದಿರುವುದು ಒಳಗೊಂಡಿವೆ.

ಸೌಂದರ್ಯ ಮತ್ತು ಫಿಟ್‌ನೆಸ್

ಬಾಹ್ಯ ವೈಯಕ್ತಿಕ ಕಾಳಜಿ, ಫಿಟ್‌ನೆಸ್, ತೂಕ ಕಳೆದುಕೊಳ್ಳುವಿಕೆ, ಡಯೆಟ್ ಮತ್ತು ಪೋಷಣೆಗೆ ಸಂಬಂಧಿಸಿದ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.

ಡೇಟಿಂಗ್ ಅಥವಾ ಸಂಬಂಧ

ಡೇಟಿಂಗ್ ಸೈಟ್‍ಗಳು, ಕೌಟುಂಬಿಕ ಸಮಾಲೋಚನೆ ಮತ್ತು ವಿವಾಹ ಅಥವಾ ವಿಚ್ಛೇದನ ಸೇವೆಗಳಿಗಾಗಿ ಪಾವತಿಸಿದ ಆ್ಯಡ್‌ಗಳನ್ನು ನಿಷೇಧಿಸಲಾಗಿದೆ.

ಆಹಾರ ಮತ್ತು ಪಾನೀಯಗಳು

ಪೋಷಣೆಯ ಅಂಶಗಳನ್ನು ಪರಿಗಣಿಸದೆ, ಸೇವಿಸಬಹುದಾದ ಆಹಾರ ಮತ್ತು ಪಾನೀಯಗಳಿಗೆ ಸಂಬಂಧಿಸಿದ ಉತ್ಪನ್ನಗಳನ್ನು ನಿಷೇಧಿಸಲಾಗಿದೆ.

ಕಾನೂನುಬಾಹಿರ ಅಥವಾ ನಿಯಂತ್ರಿತ ಉತ್ಪನ್ನಗಳು

ನಿಷೇಧಿತ ಕಂಟೆಂಟ್ ಮತ್ತು ನಿರ್ಬಂಧಿತ ಕಂಟೆಂಟ್ ಅನ್ನು ಒಳಗೊಂಡಂತೆ ನಿಯಂತ್ರಿಸಲಾದ ಅಥವಾ ಮಕ್ಕಳಿಗೆ ಜಾಹೀರಾತು ನೀಡಲು ಕಾನೂನುಬಾಹಿರವಾದ ಉತ್ಪನ್ನಗಳನ್ನು ನಿಷೇಧಿಸಲಾಗಿದೆ. ಮಕ್ಕಳ ಸುರಕ್ಷತೆಯನ್ನು ಅಪಾಯಕ್ಕೆ ಒಡ್ಡುವ ಉತ್ಪನ್ನಗಳು ಸಹ ಇದರಲ್ಲಿ ಒಳಗೊಂಡಿವೆ.

ಆನ್‌ಲೈನ್ ಅಥವಾ ವರ್ಚುವಲ್ ಸಮುದಾಯಗಳು

ಸದಸ್ಯರು ಪ್ರಾಥಮಿಕವಾಗಿ ಇಂಟರ್ನೆಟ್‌ನಲ್ಲಿ ಸಂವಹಿಸುವಂತಹ ವರ್ಚುವಲ್ ಸಮುದಾಯಗಳಿಗೆ ಸಂಬಂಧಿಸಿದ ಪ್ಲ್ಯಾಟ್‌ಫಾರ್ಮ್‌ಗಳು ಮತ್ತು ಸೇವೆಗಳು.

ರಾಜಕೀಯ ಆ್ಯಡ್‌ಗಳು

ರಾಜಕೀಯ ಅಭ್ಯರ್ಥಿಗಳು ಅಥವಾ ನೀತಿಗಳ ಕುರಿತು ಅವರ ನಿಲುವುಗಳು, ರಾಜಕೀಯ ಪಕ್ಷಗಳು, ನಿಧಿಸಂಗ್ರಹ ಅಥವಾ ರಾಜಕೀಯ ಕ್ರಿಯಾ ಸಮಿತಿಗಳು ಅಥವಾ ಅವುಗಳ ಅಜೆಂಡಾಗಳ ಕುರಿತಾದ ಮಾಹಿತಿಯೂ ಸೇರಿದಂತೆ ಯಾವುದೇ ರೀತಿಯ, ಪಾವತಿಸಿದ ರಾಜಕೀಯ ಆ್ಯಡ್‌ಗಳನ್ನು ನಿಷೇಧಿಸಲಾಗಿದೆ.

ಧಾರ್ಮಿಕ ಆ್ಯಡ್‌ಗಳು

ಯಾವುದೇ ರೀತಿಯ ಧಾರ್ಮಿಕ ಆ್ಯಡ್‌ಗಳನ್ನು ನಿಷೇಧಿಸಲಾಗಿದೆ.

ವೀಡಿಯೊ ಗೇಮ್‌ಗಳು

ವೀಡಿಯೊ ಗೇಮ್ ಕನ್ಸೋಲ್, ಕಂಪ್ಯೂಟರ್, ಅಥವಾ ಸೆಲ್ ಫೋನ್ ಅಥವಾ ಟ್ಯಾಬ್ಲೆಟ್‌ನಂತಹ ಇತರ ಎಲೆಕ್ಟ್ರಾನಿಕ್ ಸಾಧನದಲ್ಲಿ ಆಡಬಹುದಾದ ಎಲೆಕ್ಟ್ರಾನಿಕ್ ವೀಡಿಯೊ ಗೇಮ್‌ಗಳ (ಮತ್ತು ಸಂಬಂಧಿತ ಆ್ಯಕ್ಸೆಸರಿಗಳು) ಔದ್ಯಮಿಕ ರೇಟಿಂಗ್‌ಗಳ ಪ್ರಕಾರ ಆ ಗೇಮ್‌ಗಳು 12 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಿಗೆ ಸೂಕ್ತವಲ್ಲ ಎಂದಾದರೆ, ಅಂತಹ ಗೇಮ್‌ಗಳನ್ನು ನಿಷೇಧಿಸಲಾಗುತ್ತದೆ. ಉದಾಹರಣೆಗೆ, ESRB E10+, PEGI 7 ವರೆಗೆ ಮತ್ತು ಅವುಗಳನ್ನು ಒಳಗೊಂಡಂತೆ, ಅಥವಾ IARC ಪ್ರಕಾರ ಯಾವುದೇ ಸಮಾನ ಸ್ಥಳೀಯ ಔದ್ಯಮಿಕ ರೇಟಿಂಗ್‌ಗಳವರೆಗೆ ಅನುಮತಿಯಿದೆ. ಪಜಲ್‌ಗಳು, ವರ್ಕ್‌ಶೀಟ್‌ಗಳು, ಗಣಿತದ ಸಮಸ್ಯೆಗಳು, ಭಾಷಾ ಕಲಿಯ ಅಭ್ಯಾಸಗಳಂತಹ ಸಂವಹನಾತ್ಮಕ ಶೈಕ್ಷಣಿಕ ಕಂಟೆಂಟ್ ಅನ್ನು ಹೊಂದಿರುವ ಆ್ಯಪ್‌ಗಳು ಅಥವಾ ವೆಬ್ ಕಂಟೆಂಟ್‌ಗೆ ಅನುಮತಿಯಿದೆ.

ನಿಷೇಧಿತ ಕಂಟೆಂಟ್ ಮಾರ್ಗಸೂಚಿಗಳು

ಈ ಕೆಳಗಿನ ಯಾವುದೇ ಕಂಟೆಂಟ್ ಅನ್ನು ಪ್ರಸ್ತುತಪಡಿಸುವ ಅಥವಾ ಪ್ರಚಾರ ಮಾಡುವ ಪಾವತಿಸಿದ ಆ್ಯಪ್‌ಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ವಯಸ್ಕರ ಮತ್ತು ಲೈಂಗಿಕವಾಗಿ ಅಶ್ಲೀಲವಾದ ಕಂಟೆಂಟ್

ವಯಸ್ಕ ಪ್ರೇಕ್ಷಕರಿಗೆ ಉದ್ದೇಶಿತವಾದ ಲೈಂಗಿಕ ಮತ್ತು ವಯಸ್ಕರರಿಗೆ ಸಂಬಂಧಿಸಿದ ಕಂಟೆಂಟ್, ಮತ್ತು 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಸೂಕ್ತವಲ್ಲದ ಕಂಟೆಂಟ್.

ಬ್ರ್ಯಾಂಡಿಂಗ್

ಪಾವತಿಸಿದ ಆ್ಯಡ್‌ಗಳನ್ನು ಜಾಹೀರಾತುದಾರರು ಮತ್ತು/ವೀಡಿಯೊದಲ್ಲಿ ಮಾರ್ಕೆಟ್ ಮಾಡಲಾದ ಉತ್ಪನ್ನವು ಸ್ಪಷ್ಟವಾಗಿ ಬ್ರ್ಯಾಂಡ್ ಮಾಡಬೇಕು. ಪಾವತಿಸಿದ ಆ್ಯಡ್‌ಗಳು ಬಳಕೆದಾರರಿಗೆ ವಿಶಿಷ್ಟವಾಗಿ ಆ್ಯಡ್ ಎಂಬುದಾಗಿ ಮತ್ತು ಸಾಮಾನ್ಯ YouTube ಕಂಟೆಂಟ್ ಅಲ್ಲ ಎಂದು ತಿಳಿಯಬೇಕು.

ಸ್ಪರ್ಧೆಗಳು

ಶುಲ್ಕವಿಲ್ಲದೆ ಪ್ರವೇಶವನ್ನು ಒದಗಿಸಿದರೂ ಸಹ, ಸ್ಪರ್ಧೆಗಳು ಅಥವಾ ಸ್ವೀಪ್‌ಸ್ಟೇಕ್‌ಗಳು.

ಅಪಾಯಕಾರಿ ಕಂಟೆಂಟ್

13 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಅಪಾಯಕಾರಿಯಾದ ಮತ್ತು ಸೂಕ್ತವಲ್ಲದ ಕಂಟೆಂಟ್ ಅಥವಾ ಸಾಮಾನ್ಯವಾಗಿ ವಯಸ್ಕರ ಮೇಲ್ವಿಚಾರಣೆಯ ಅಗತ್ಯವಿರುವ ಕಂಟೆಂಟ್.

ಖರೀದಿಸಲು ಪ್ರಚೋದನೆ

ಒಂದು ಉತ್ಪನ್ನ ಅಥವಾ ಸೇವೆಯನ್ನು ಖರೀದಿಸಲು ಮಕ್ಕಳನ್ನು ಪ್ರಚೋದಿಸುವ ಅಥವಾ ಪೋಷಕರು ಅಥವಾ ಇತರರು ಅವುಗಳನ್ನು ಖರೀದಿಸುವುದಕ್ಕಾಗಿ ಒತ್ತಾಯ ಮಾಡಲು ಪ್ರಚೋದಿಸುವ ಕಂಟೆಂಟ್.

ದಾರಿ ತಪ್ಪಿಸುವ ಅಥವಾ ವಂಚನೀಯ ಪ್ರತಿಪಾದನೆಗಳು
  • ಪಾವತಿಸಿದ ಆ್ಯಡ್‌ಗಳು ಮಕ್ಕಳ ದಾರಿ ತಪ್ಪಿಸುವಂತಿಲ್ಲ ಮತ್ತು ಯಾವುದೇ ವಂಚನೀಯ ಮತ್ತು/ಅಥವಾ ಆಧಾರರಹಿತ ಪ್ರತಿಪಾದನೆಗಳನ್ನು ಮಾಡುವಂತಿಲ್ಲ. ಎಲ್ಲಾ ಪ್ರತಿಪಾದನೆಗಳು ಮತ್ತು ಸಮರ್ಥನೆಗಳಿಗೆ ವೀಡಿಯೊದಲ್ಲೇ ಆಧಾರ ಒದಗಿಸಬೇಕು.
  • ಉತ್ಪನ್ನವು ನಿಮ್ಮ ಸಾಮಾಜಿಕ ಸ್ಥಾನಮಾನವನ್ನು ಸುಧಾರಿಸುತ್ತದೆ ಎಂದು ಪಾವತಿಸಿದ ಆ್ಯಡ್‌ಗಳು ಸೂಚಿಸುವಂತಿಲ್ಲ.
  • ಪಾವತಿಸಿದ ಆ್ಯಡ್‌ಗಳು, ಕೆಲಸ ಮಾಡದ ಅಥವಾ ಅಪೇಕ್ಷಿತ ಕ್ರಿಯೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದ ಫೀಚರ್‌ಗಳು ಅಥವಾ ಕೊಳ್ಳಲು ಕರೆ ನೀಡುವುದನ್ನು ಒಳಗೊಂಡಿರುವಂತಿಲ್ಲ.
ಹಿಂಸಾತ್ಮಕ ಕಂಟೆಂಟ್

ವಯಸ್ಕ ಪ್ರೇಕ್ಷಕರಿಗೆ ಉದ್ದೇಶಿತವಾದ ಹಿಂಸಾತ್ಮಕ ಮತ್ತು ಗ್ರಾಫಿಕ್ ಕಂಟೆಂಟ್, ಮತ್ತು 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಸೂಕ್ತವಲ್ಲದ ಕಂಟೆಂಟ್.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
1023043479051858742
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false