ಜಾಹೀರಾತುದಾರ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳು

ರಚನೆಕಾರರ ಆದಾಯವನ್ನು ಸುಧಾರಿಸಲು, ನಿಮ್ಮ ವೀಡಿಯೊದ ಮೊದಲು ಅಥವಾ ನಂತರ ಕಂಡುಬರುವ ಆ್ಯಡ್ ಫಾರ್ಮ್ಯಾಟ್‌ಗಳಿಗೆ ಸಂಬಂಧಿಸಿದ ಆಯ್ಕೆಗಳನ್ನು ನಾವು ಸರಳಗೊಳಿಸಿದ್ದೇವೆ. ಪ್ರೀ-ರೋಲ್, ಪೋಸ್ಟ್-ರೋಲ್, ಸ್ಕಿಪ್ ಮಾಡಬಹುದಾದ ಮತ್ತು ಸ್ಕಿಪ್ ಮಾಡಲಾಗದ ಆ್ಯಡ್‌ಗಳಿಗೆ ಸಂಬಂಧಿಸಿದ ಪ್ರತ್ಯೇಕ ಆ್ಯಡ್ ಆಯ್ಕೆಗಳನ್ನು ನಾವು ತೆಗೆದುಹಾಕಿದ್ದೇವೆ. ಈಗ, ಹೊಸ ದೀರ್ಘಾವಧಿ ವೀಡಿಯೊಗಳಿಗಾಗಿ ನೀವು ಆ್ಯಡ್‌ಗಳನ್ನು ಆನ್ ಮಾಡಿದಾಗ, ಸೂಕ್ತವೆನಿಸಿದಾಗ ನಾವು ನಿಮ್ಮ ವೀಕ್ಷಕರಿಗೆ ಪ್ರೀ-ರೋಲ್, ಪೋಸ್ಟ್-ರೋಲ್, ಸ್ಕಿಪ್ ಮಾಡಬಹುದಾದ ಅಥವಾ ಸ್ಕಿಪ್ ಮಾಡಲಾಗದ ಆ್ಯಡ್‌ಗಳನ್ನು ತೋರಿಸುತ್ತೇವೆ. ಈ ಬದಲಾವಣೆಯ ನಂತರ, ಎಲ್ಲಾ ಆ್ಯಡ್ ಫಾರ್ಮ್ಯಾಟ್‌ಗಳನ್ನು ತೋರಿಸುವ ಆಯ್ಕೆಯನ್ನು ಪ್ರಮಾಣಿತ ರೀತಿಯಲ್ಲಿ ಎಲ್ಲರಿಗಾಗಿ ಆನ್ ಸ್ಥಿತಿಯಲ್ಲಿಡಿ ಎಂದು ನಾವು ಶಿಫಾರಸು ಮಾಡುತ್ತೇವೆ, ಇದು ಉತ್ತಮ ಅಭ್ಯಾಸವಾಗಿದೆ. ಮಧ್ಯ-ರೋಲ್ ಆ್ಯಡ್‌ಗಳ ಕುರಿತ ನಿಮ್ಮ ಆಯ್ಕೆಗಳು ಬದಲಾಗಿಲ್ಲ. ನೀವು ಮಾನಿಟೈಸೇಶನ್ ಸೆಟ್ಟಿಂಗ್‌ಗಳನ್ನು ಬದಲಾಯಿಸದ ಹೊರತು, ಅಸ್ತಿತ್ವದಲ್ಲಿರುವ ದೀರ್ಘಾವಧಿ ವೀಡಿಯೊಗಳಿಗೆ ಸಂಬಂಧಿಸಿದ ನಿಮ್ಮ ಆ್ಯಡ್ ಆಯ್ಕೆಗಳನ್ನು ಸಹ ನಾವು ಉಳಿಸಿಕೊಂಡಿದ್ದೇವೆ.
ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ, ನೀವು ಜಾಹೀರಾತುಗಳಿಂದ ಪಡೆದ ಆದಾಯವನ್ನು ಹಂಚಿಕೊಳ್ಳಬಹುದು. ನಿಮ್ಮ ಚಾನಲ್‌ನಲ್ಲಿನ ಯಾವ ವೈಯಕ್ತಿಕ ವೀಡಿಯೊಗಳು ಅಥವಾ Shorts ಗಳು ಜಾಹೀರಾತುದಾರರಿಗೆ ಸೂಕ್ತವಾಗುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳಲು ಈ ಲೇಖನವು ನಿಮಗೆ ಸಹಾಯ ಮಾಡುತ್ತದೆ. ಪ್ಲ್ಯಾಟ್‌ಫಾರ್ಮ್‌ನ ಸ್ವಯಂ-ಪ್ರಮಾಣೀಕರಣದ ಪ್ರಶ್ನಾವಳಿ ಮತ್ತು ಯಾವುದು ಜಾಹೀರಾತುಗಳನ್ನು ರನ್ ಮಾಡುತ್ತದೆ, ಯಾವುದು ಸೀಮಿತ ಜಾಹೀರಾತುಗಳನ್ನು ರನ್ ಮಾಡುತ್ತದೆ ಮತ್ತು ಯಾವುದು ಜಾಹೀರಾತುಗಳನ್ನು ರನ್ ಮಾಡುವುದಿಲ್ಲ ಮತ್ತು ಮಾನಿಟೈಸೇಶನ್ ಸ್ಥಿತಿಯನ್ನು ಆಫ್ ಮಾಡಿರಬೇಕೇ ಎಂಬುದರ ಕುರಿತು ನಿರ್ದಿಷ್ಟ ನಿಯಮಗಳನ್ನು ಅರ್ಥಮಾಡಿಕೊಳ್ಳಲು ರಚನೆಕಾರರು ಈ ಲೇಖನವನ್ನು ಬಳಸಬಹುದು. ನಮ್ಮ ನೀತಿಗಳು ನಿಮ್ಮ ಕಂಟೆಂಟ್‌ನ ಎಲ್ಲಾ ಭಾಗಗಳಿಗೆ (ವೀಡಿಯೊ, Short ಅಥವಾ ಲೈವ್ ಸ್ಟ್ರೀಮ್, ಥಂಬ್‌ನೇಲ್, ಶೀರ್ಷಿಕೆ, ವಿವರಣೆ ಮತ್ತು ಟ್ಯಾಗ್‌ಗಳು) ಅನ್ವಯಿಸುತ್ತವೆ. ನಮ್ಮ ಉತ್ತಮ ಅಭ್ಯಾಸಗಳ ಕುರಿತು ಇನ್ನಷ್ಟು ತಿಳಿಯಿರಿ.

ನಮ್ಮ ಸಿಸ್ಟಂಗಳು ಯಾವಾಗಲೂ ಸರಿಯಾಗಿರುವುದಿಲ್ಲ, ಆದರೆ ನಮ್ಮ ಸ್ವಯಂಚಾಲಿತ ಸಿಸ್ಟಂಗಳು ತೆಗೆದುಕೊಳ್ಳುವ ನಿರ್ಧಾರಗಳಿಗೆ ಸಂಬಂಧಿಸಿದಂತೆ ಮಾನವ ರಿವ್ಯೂ ವಿನಂತಿಸಿ ಅನ್ನು ಬಳಸಬಹುದು.

23 ಏಪ್ರಿಲ್, 2024: ನಮ್ಮ ಸೂಕ್ತವಲ್ಲದ ಭಾಷೆಯ ಮಾರ್ಗಸೂಚಿಗಳಲ್ಲಿ "ಜಾಹೀರಾತು ಆದಾಯವಿಲ್ಲ" ರೇಟಿಂಗ್‌ಗೆ ಕಾರಣವಾಗುವ ತೀವ್ರವಾದ ಬೈಗುಳ ಅಥವಾ ನಿಂದಿಸುವುದರ ಕುರಿತ ಉದಾಹರಣೆಗಳನ್ನು ನಾವು ಅಪ್‌ಡೇಟ್ ಮಾಡಿದ್ದೇವೆ. ಈ ಅಪ್‌ಡೇಟ್ ಮಾಡಿದ ಭಾಷೆಯ ನೀತಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ, ಮತ್ತು ನಮ್ಮ ಅಸ್ತಿತ್ವದಲ್ಲಿರುವ ನೀತಿಯನ್ನು ಸ್ಪಷ್ಟಪಡಿಸುವ ಉದ್ದೇಶವನ್ನು ಹೊಂದಿದೆ ಮತ್ತು ನಿಮ್ಮ ವೀಡಿಯೊಗಳನ್ನು ಹೇಗೆ ಪರಿಶೀಲಿಸಲಾಗುತ್ತದೆ ಎಂಬುದನ್ನು ಬದಲಾಯಿಸುವುದಿಲ್ಲ.
23 ಮಾರ್ಚ್, 2022: ಉಕ್ರೇನ್‌ನಲ್ಲಿನ ಯುದ್ಧದ ಕಾರಣ, ಯುದ್ಧವನ್ನು ಎಕ್ಸ್‌ಪ್ಲೊಯ್ಟ್ ಮಾಡುವ, ವಜಾಗೊಳಿಸುವ ಅಥವಾ ಕ್ಷಮಿಸುವ ಕಂಟೆಂಟ್ ಮುಂದಿನ ಸೂಚನೆ ಬರುವವರೆಗೆ ಮಾನಿಟೈಸೇಶನ್‌ಗೆ ಅನರ್ಹವಾಗಿರುತ್ತದೆ. ಈ ಅಪ್‌ಡೇಟ್ ಈ ಯುದ್ಧಕ್ಕೆ ಸಂಬಂಧಿಸಿದಂತೆ ನಮ್ಮ ಮಾರ್ಗದರ್ಶನವನ್ನು ಸ್ಪಷ್ಟಪಡಿಸಲು ಮತ್ತು ಕೆಲವು ಸಂದರ್ಭಗಳಲ್ಲಿ ವಿಸ್ತರಿಸಲು ಉದ್ದೇಶಿಸಲಾಗಿದೆ.
ಗಮನಿಸಿ: YouTube ಗೆ ಅಪ್‌ಲೋಡ್ ಮಾಡಲಾದ ಎಲ್ಲಾ ವಿಷಯಗಳು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಮತ್ತು ನಮ್ಮ AdSense Google ಪ್ರಕಾಶಕರ ನೀತಿಯನ್ನು ಅನುಸರಿಸಬೇಕು. ನಿಮ್ಮ ವಿಷಯವು ನಮ್ಮ ಸಮುದಾಯ ಮಾರ್ಗಸೂಚಿಗಳನ್ನು ಉಲ್ಲಂಘಿಸಿದರೆ, ಅದನ್ನು YouTube ನಿಂದ ತೆಗೆದುಹಾಕಬಹುದು. ನೀವು ಉಲ್ಲಂಘನೆಯ ವಿಷಯವನ್ನು ನೋಡಿದರೆ, ನೀವು ಅದನ್ನು ವರದಿ ಮಾಡಬಹುದು.

ಈ ಲೇಖನದಲ್ಲಿ ನೀವೇನು ತಿಳಿದುಕೊಳ್ಳುತ್ತೀರಿ

ಜಾಹೀರಾತುಗಳಿಗೆ ಸೂಕ್ತವಲ್ಲದ ಕಂಟೆಂಟ್‌ನ ಉದಾಹರಣೆಗಳನ್ನು ನೀವು ನೋಡುತ್ತೀರಿ ಮತ್ತು ಅದು "ಸೀಮಿತ ಅಥವಾ ಜಾಹೀರಾತುಗಳಿಲ್ಲದಿರುವುದು" ಮಾನಿಟೈಸೇಶನ್ ಸ್ಥಿತಿಗೆ ಕಾರಣವಾಗುತ್ತದೆ.

ಜಾಹೀರಾತುದಾರ ಸ್ನೇಹಿಯಲ್ಲದ ಎಲ್ಲಾ ಪ್ರಮುಖ ವಿಷಯಗಳು ಇಲ್ಲಿವೆ:

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಸಂದರ್ಭ ಬಹಳ ಮುಖ್ಯ ಎಂಬುದನ್ನು ಗಮನಿಸಿ. ಮ್ಯೂಸಿಕ್ ವೀಡಿಯೊಗಳಂತಹ ಕಲಾತ್ಮಕ ಕಂಟೆಂಟ್ ಅನುಚಿತವಾದ ಭಾಷೆ, ಸಾಫ್ಟ್ ಡ್ರಗ್ ಬಳಕೆಯ ಉಲ್ಲೇಖಗಳು ಅಥವಾ ಅಶ್ಲೀಲವಲ್ಲದ ಲೈಂಗಿಕ ಕಂಟೆಂಟ್‌‌ಗಳಂತಹ ಅಂಶಗಳನ್ನು ಒಳಗೊಂಡಿರಬಹುದು, ಆದರೂ ಜಾಹೀರಾತುಗಳಿಗೆ ಸೂಕ್ತವಾಗಿರುತ್ತವೆ.

ಎಲ್ಲಾ ನೀತಿ ವಿವರಗಳನ್ನು ಒಮ್ಮೆ ತೆರೆಯುವುದರಿಂದ, ನಿರ್ದಿಷ್ಟ ನಿಯಮಗಳಿಗಾಗಿ ಈ ಪುಟವನ್ನು ಹುಡುಕಲು ನೀವು ಬಯಸಿದರೆ ನಿಮಗೆ ಸಹಾಯ ಮಾಡಬಹುದು. ಎಲ್ಲಾ ಗೈಡ್‌ಗಳನ್ನು ತೆರೆಯಲು ಇಲ್ಲಿ ಕ್ಲಿಕ್ ಮಾಡಿ.

ಅನುಚಿತವಾದ ಭಾಷೆ

ವೀಡಿಯೊದ ಪ್ರಾರಂಭದಲ್ಲಿ ಅಥವಾ ಬಹುತೇಕ ವೀಡಿಯೊದಲ್ಲಿ ಬೈಗುಳ ಅಥವಾ ಅಸಭ್ಯತೆಯಿಂದ ಕೂಡಿದ ಅಂಶಗಳನ್ನು ಒಳಗೊಂಡಿರುವ ಕಂಟೆಂಟ್‌ಗಳು ಜಾಹೀರಾತಿಗೆ ಸೂಕ್ತವಾಗಿರುವುದಿಲ್ಲ. ಸಾಂದರ್ಭಿಕವಾಗಿ ಬೈಗುಳ ಭಾಷೆಯ ಬಳಕೆಯು (ಅಂದರೆ, ಸಂಗೀತದ ವೀಡಿಯೊಗಳು, ಬ್ಯಾಕಿಂಗ್ ಟ್ರ್ಯಾಕ್‌ಗಳು, ಇಂಟ್ರೊ/ಔಟ್ರೊ ಸಂಗೀತ ಅಥವಾ ಹಿನ್ನೆಲೆಯಲ್ಲಿ ಪ್ಲೇ ಮಾಡಿದ ಸಂಗೀತ), ನಿಮ್ಮ ವೀಡಿಯೊ ಜಾಹೀರಾತು ಪ್ರಸಾರಕ್ಕೆ ಸೂಕ್ತವಲ್ಲ ಎಂಬುದಕ್ಕೆ ಕಾರಣವಾಗುವುದಿಲ್ಲ.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು

ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಸಂಕ್ಷಿಪ್ತ ಅಥವಾ ಸೆನ್ಸಾರ್ ಮಾಡಲಾದ ಅಶ್ಲೀಲ ಬೈಗುಳ ಅಥವಾ ಶೀರ್ಷಿಕೆ, ಥಂಬ್‌ನೇಲ್ ಅಥವಾ ವೀಡಿಯೊದಲ್ಲಿ “ಇವನಜ್ಜಿ” ಅಥವಾ “ಇವನಮ್ಮನ್” ನಂತಹ ಪದಗಳು. "ಸೂಳೆ", "ಪಿವೋಟ್ ನನ್ಮಗ", "ತಿಕ" ಮತ್ತು "ಹೇಲು" ಎಂಬಂತಹ ಮಧ್ಯಮ ಪ್ರಮಾಣದ ಬೈಗುಳವನ್ನು ವೀಡಿಯೊದಲ್ಲಿ ಆಗಾಗ್ಗೆ ಬಳಸುವುದು. ಸಂಗೀತ ಅಥವಾ ಸ್ಟ್ಯಾಂಡ್ ಅಪ್ ಕಾಮಿಡಿ ವೀಡಿಯೊ ಕಂಟೆಂಟ್‌ನಲ್ಲಿ ಹೆಚ್ಚಿನ ಬೈಗುಳವನ್ನು ಬಳಸುವುದು.

ವ್ಯಾಖ್ಯಾನಗಳು:
  • “ಸೆನ್ಸಾರ್ ಮಾಡಲಾದ ಅಸಭ್ಯ ಮಾತುಗಳು” ಎಂದರೆ ಪದವನ್ನು ಬ್ಲೀಪ್ ಮಾಡುವುದು ಅಥವಾ ಮ್ಯೂಟ್ ಮಾಡುವುದು ಮತ್ತು ಲಿಖಿತ ಪದಗಳನ್ನು ಕಪ್ಪು ಪಟ್ಟಿಗಳು, ಸಂಕೇತಗಳು ಅಥವಾ ಪೋಸ್ಟ್-ಪ್ರೊಡಕ್ಷನ್‌ನಲ್ಲಿ ಸೇರಿಸಲಾದ ಪಠ್ಯದ ಮೂಲಕ ಮರೆಮಾಡುವುದು.
  • "ಸಂಕ್ಷಿಪ್ತ ಅಸಭ್ಯ ಭಾಷೆ" WTF ("ವಾಟ್ ದ ಎಫ್*") ನಂತಹ ಪ್ರಥಮಾಕ್ಷರವನ್ನು ಸೂಚಿಸುತ್ತದೆ, ಇದು ಅದರ ಪ್ರಥಮಾಕ್ಷರಗಳನ್ನು ಬಳಸಿಕೊಂಡು ಮೂಲ ಪದವನ್ನು ಸಂಕ್ಷಿಪ್ತಗೊಳಿಸುತ್ತದೆ.
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ಮೊದಲ 7 ಸೆಕೆಂಡ್‌ಗಳಲ್ಲಿ ತೀವ್ರವಾದ ಬೈಗುಳವನ್ನು (ಉದಾಹರಣೆಗೆ ದೆಂ*) ಬಳಸುವುದು ಅಥವಾ ಶೀರ್ಷಿಕೆ ಅಥವಾ ಥಂಬ್‌ನೇಲ್‌ನಲ್ಲಿ ಮಧ್ಯಮ ಪ್ರಮಾಣದ ಬೈಗುಳವನ್ನು (ಉದಾಹರಣೆಗೆ “ಹೇಲು”) ಬಳಸುವುದು.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:
  • ವೀಡಿಯೊದಾದ್ಯಂತ ಬೈಗುಳವನ್ನು ಯಥೇಚ್ಛವಾಗಿ ಬಳಸುವುದು (ಉದಾಹರಣೆಗೆ, ಹೆಚ್ಚಿನ ವಾಕ್ಯಗಳಲ್ಲಿ ಬೈಗುಳವನ್ನು ಬಳಸುವುದು).
  • ಸಂಗೀತ ಅಥವಾ ಸ್ಟ್ಯಾಂಡ್ ಅಪ್ ಕಾಮಿಡಿ ಕಂಟೆಂಟ್‌ನ ಶೀರ್ಷಿಕೆ ಅಥವಾ ಥಂಬ್‌ನೇಲ್‌ನಲ್ಲಿ ಬೈಗುಳವನ್ನು ಬಳಸುವುದು.
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಥಂಬ್‌ನೇಲ್‌ಗಳು ಅಥವಾ ಶೀರ್ಷಿಕೆಗಳಲ್ಲಿ ತೀವ್ರ ಬೈಗುಳವನ್ನು (ಉದಾಹರಣೆಗೆ ದೆಂ*) ಬಳಸಲಾಗಿದೆ. ವೀಡಿಯೊ, ಥಂಬ್‌ನೇಲ್ ಅಥವಾ ಶೀರ್ಷಿಕೆಯಲ್ಲಿ "ನೀಗ್**” ಅಥವಾ "ಹೋಮೋ" ನಂತಹ ದ್ವೇಷಪೂರ್ಣ ಭಾ‍‍ಷೆ ಅಥವಾ ಪದಗಳನ್ನು ಒಳಗೊಂಡಂತೆ ತೀವ್ರವಾದ ಬೈಗುಳದ ಯಾವುದೇ ಬಳಕೆ.

ದ್ವೇಷಪೂರಿತ ಭಾಷೆ ಅಥವಾ ನಿಂದನೆಗಳ ಕುರಿತು ಹೆಚ್ಚುವರಿ ಮಾಹಿತಿಗಾಗಿ, ನಮ್ಮ ಸಹಾಯ ಕೇಂದ್ರದಲ್ಲಿ ನಮ್ಮ ದ್ವೇಷಪೂರಿತ ಮತ್ತು ಅವಹೇಳನಕಾರಿ ಕಂಟೆಂಟ್ ಮಾರ್ಗಸೂಚಿಯನ್ನು ಸಹ ನೀವು ಉಲ್ಲೇಖಿಸಬಹುದು.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಹಿಂಸೆ

ರಕ್ತ, ಹಿಂಸೆ ಅಥವಾ ಗಾಯದ ಮೇಲೆ ಗಮನ ಕೇಂದ್ರೀಕರಿಸುವ ಕಂಟೆಂಟ್ ಅನ್ನು ಯಾವುದೇ ಇತರ ಸಂದರ್ಭವಿಲ್ಲದೆ ಪ್ರಸ್ತುತಪಡಿಸಿದಾಗ, ಅದು ಜಾಹೀರಾತಿಗೆ ಸೂಕ್ತವಾಗಿರುವುದಿಲ್ಲ. ನೀವು ಸುದ್ದಿ, ಶೈಕ್ಷಣಿಕ, ಕಲಾತ್ಮಕ ಅಥವಾ ಸಾಕ್ಷ್ಯಚಿತ್ರದ ಸಂದರ್ಭದಲ್ಲಿ ಹಿಂಸಾತ್ಮಕ ಕಂಟೆಂಟ್ ಅನ್ನು ತೋರಿಸುತ್ತಿದ್ದರೆ, ಆ ಹೆಚ್ಚುವರಿ ಸಂದರ್ಭವು ಮುಖ್ಯವಾಗುತ್ತದೆ. ಉದಾಹರಣೆಗೆ, ಪತ್ರಿಕೋದ್ಯಮದ ಸಂದರ್ಭದಲ್ಲಿ ಹಿಂಸಾತ್ಮಕ ಘಟನೆಯ ಕುರಿತು ಅಧಿಕೃತ ಸುದ್ದಿ ವರದಿಯನ್ನು ವೀಡಿಯೊ ಒದಗಿಸಿದರೆ, ಅದು ಮಾನಿಟೈಸೇಶನ್‌ಗೆ ಅರ್ಹವಾಗಬಹುದು. ಎಡಿಟ್ ಮಾಡಿರದ ವೀಡಿಯೊ ಗೇಮ್‌ಪ್ಲೇನಲ್ಲಿನ ಹಿಂಸಾತ್ಮಕ ಘಟನೆಯು ಸಾಮಾನ್ಯವಾಗಿ ಜಾಹೀರಾತಿಗಾಗಿ ಸ್ವೀಕಾರಾರ್ಹವಾಗಿರುತ್ತದೆ, ಆದರೆ ಅನಪೇಕ್ಷಿತ ಹಿಂಸಾತ್ಮಕ ಘಟನೆಯ ಮೇಲೆ ಗಮನ ಕೇಂದ್ರೀಕರಿಸುವ ಮಾಂಟೇಜ್‌ಗಳು ಅಲ್ಲ. ಎಲ್ಲಾ ಗೇಮ್‌ಗಳು (ವಾಸ್ತವಿಕ ಅಥವಾ ವಾಸ್ತವಿಕವಲ್ಲದವು) ಈ ನೀತಿಯ ವ್ಯಾಪ್ತಿಯಲ್ಲಿವೆ.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಸಾಮಾನ್ಯ ಕರ್ತವ್ಯ ನಿರ್ವಹಣೆ (ಉದಾಹರಣೆಗೆ ಬಲವಂತದ ಬಂಧನ, ಗುಂಪು ನಿಯಂತ್ರಣ, ಅಧಿಕಾರಿಯೊಂದಿಗೆ ವಿವಾದ, ಬಲವಂತದ ಪ್ರವೇಶ) ಸೇರಿದಂತೆ ಕಾನೂನು ಜಾರಿಗೊಳಿಸುವಿಕೆ; ಎಡಿಟ್ ಮಾಡದ ಗೇಮ್‌ಪ್ಲೇಯಲ್ಲಿ ಮೊದಲ 15 ಸೆಕೆಂಡ್‌ಗಳ ನಂತರ ಸಂಭವಿಸುವ ಹಿಂಸೆ; ಕನಿಷ್ಠ ಪ್ರಮಾಣದಲ್ಲಿ ರಕ್ತವಿರುವ ತೀವ್ರವಲ್ಲದ ಹಿಂಸೆ; ಶೈಕ್ಷಣಿಕ ವೀಡಿಯೊದ ಭಾಗವಾಗಿ ಸಂಪೂರ್ಣವಾಗಿ ಸೆನ್ಸಾರ್ ಮಾಡಲಾದ, ಬ್ಲರ್ ಮಾಡಲಾದ, ಅಂತ್ಯಕ್ರಿಯೆಗೆ ಸಿದ್ಧಪಡಿಸಿದ ಅಥವಾ ಯುದ್ಧಗಳಂತಹ ಐತಿಹಾಸಿಕ ಘಟನೆಗಳಲ್ಲಿ ತೋರಿಸಲಾದ ಮೃತ ದೇಹಗಳು.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಸಾಮಾನ್ಯ ಹಿಂಸಾಚಾರ

  • ಗ್ರಾಫಿಕ್ ಅಲ್ಲದ ಹಿಂಸಾಚಾರ ಅಥವಾ ಗ್ರಾಫಿಕ್ ಹಿಂಸಾಚಾರವನ್ನು ಚಿತ್ರಿಸುವ ನಾಟಕೀಯ ಕಂಟೆಂಟ್.
    • ದೊಡ್ಡ ನಿರೂಪಣೆಯ ಸಂದರ್ಭದಲ್ಲಿ, ಹಿಂಸಾತ್ಮಕ ಕೃತ್ಯದ ದೃಶ್ಯದ ಭಾಗವಾಗಿ ದೈಹಿಕ ಹಾನಿಯನ್ನು (ಉದಾ. ಬುಲೆಟ್ ಗಾಯಗಳು) ಒಳಗೊಂಡ ಕ್ಷಣಿಕ ದೃಶ್ಯವನ್ನು ತೋರಿಸುವುದು.
    • ಗಾಯಗಳು ಬಹುತೇಕ ಅಸ್ಪಷ್ಟವಾಗಿರುವ, ಹಿಂಸಾತ್ಮಕ ಹೊಡೆದಾಟವನ್ನು ಒಳಗೊಂಡಿರುವ ಆ್ಯಕ್ಷನ್ ಸಿನೆಮಾದ ತುಣುಕುಗಳು (ಉದಾ. ಸ್ಕ್ರಿಪ್ಟ್ ಮಾಡಲಾಗಿರುವ ಕಂಟೆಂಟ್).
    • ಸ್ಕ್ರಿಪ್ಟ್ ಮಾಡಲಾಗಿರುವ ಕಂಟೆಂಟ್‌ಗೆ ಅನುಗುಣವಾಗಿ ಸಾವಿನ ಕಾರಣದಿಂದ ಜನರು ಶೋಕಿಸುತ್ತಿರುವುದು.
  • ಗ್ರಾಫಿಕ್-ಅಲ್ಲದ ಗಾಯದ ಚಿತ್ರಣ.
    • ಸ್ವಲ್ಪವೂ ರಕ್ತವನ್ನು ತೋರಿಸದ ಅಥವಾ ಸೀಮಿತ ಪ್ರಮಾಣದ ರಕ್ತವನ್ನು ತೋರಿಸುವಂತಹ ತಮ್ಮ ಮೊಣಕಾಲುಗಳ ಮೇಲೆ ಬೀಳುವ ಪಾತ್ರ.
    • ಒಂದು ಸ್ಕ್ರಿಪ್ಟ್ ಅಥವಾ ಕ್ರೀಡೆಯ ಭಾಗವಾಗಿ, ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ಬೆಟ್ಟದಿಂದ ಕೆಳಗೆ ಉರುಳುವುದು ಅಥವಾ ಗೋಡೆಗೆ ಡಿಕ್ಕಿ ಹೊಡೆಯುವುದು.
ಗೇಮಿಂಗ್
  • ಇವುಗಳನ್ನು ಒಳಗೊಂಡಿರುವ ಗೇಮಿಂಗ್ ಹಿಂಸಾಚಾರ:
    • ವೀಡಿಯೊದ ಮೊದಲ 15 ಸೆಕೆಂಡ್‌ಗಳ ಹೊರಗೆ ಗ್ರಾಫಿಕ್ ದೃಶ್ಯಗಳು (ಉದಾ. ವ್ಯಕ್ತಿಯ ಮೇಲೆ ಆಕ್ರಮಣಕಾರಿ ದಾಳಿ).
    • ಎಲ್ಲಾ ವಯಸ್ಸಿನವರಿಗೂ ಅವಾಸ್ತವಿಕ, ತಮಾಷೆಯ ಮತ್ತು ಸಾಮಾನ್ಯವಾಗಿ ಸ್ವೀಕಾರಾರ್ಹವಾದ ಹಿಂಸಾಚಾರ (ಉದಾ. ರಾಕ್ಷಸರಿಂದ ಓಡುವುದನ್ನು ಚಿತ್ರಿಸುವ ಕುಟುಂಬ-ಸ್ನೇಹಿ ವೀಡಿಯೊ ಗೇಮ್‌ಗಳು).
    • ಸೆನ್ಸಾರ್ ಮಾಡಲಾದ, ಬ್ಲರ್ ಮಾಡಲಾದ ಅಥವಾ ಮರೆಮಾಡಲಾದ ಹಿಂಸಾಚಾರ (ಉದಾ. ತಲೆ ಕಡೆಯುವ ದೃಶ್ಯವನ್ನು ಬ್ಲರ್ ಮಾಡುವುದು).
ಸಾವು ಮತ್ತು ಅನಾಹುತ
  • ಈ ಕೆಳಗಿನವುಗಳನ್ನು ಒಳಗೊಂಡ ಶೈಕ್ಷಣಿಕ ಅಥವಾ ಐತಿಹಾಸಿಕ ಕಂಟೆಂಟ್:
    • ಗ್ರಾಫಿಕ್-ಅಲ್ಲದ ಮೃತ ದೇಹಗಳ ಚಿತ್ರಣಗಳು.
      • ಮೃತರಿಗಾಗಿ ನಡೆಸಲಾದ ಸಾರ್ವಜನಿಕ ಗೌರವಾರ್ಪಣೆಯಲ್ಲಿ ಗ್ರಾಫಿಕ್-ಅಲ್ಲದ ಮೃತದೇಹವನ್ನು ತೋರಿಸುವುದು.
    • ಸಂಪೂರ್ಣವಾಗಿ ಸೆನ್ಸಾರ್ ಮಾಡಲಾದ (ಉದಾ. ಬ್ಲರ್ ಮಾಡಲಾದ), ಗ್ರಾಫಿಕ್ ಮೃತ ದೇಹಗಳು.
  • ಹಿಂಸಾತ್ಮಕ ಕೃತ್ಯಗಳು ಅಥವಾ ಅವುಗಳ ಫಲಿತಾಂಶಗಳನ್ನು ಸೀಮಿತ ಅಥವಾ ಪ್ರದರ್ಶಿಸದೆ ಒಂದು ಅಥವಾ ಹೆಚ್ಚಿನ ಸಾವುಗಳನ್ನು ಒಳಗೊಂಡ (ಸಾಮೂಹಿಕ ಗುಂಡಿನ ದಾಳಿಗಳು ಅಥವಾ ಭಯೋತ್ಪಾದಕ ದಾಳಿಗಳಂತಹ ಸೂಕ್ಷ್ಮ ಘಟನೆಗಳನ್ನು ಹೊರತುಪಡಿಸಿ) ದುರಂತಗಳ ಕವರೇಜ್.
    • ಸಾವು-ನೋವುಗಳ ಗ್ರಾಫಿಕ್ ವಿವರಣೆಯಿಲ್ಲದೆ ಹತ್ತಿರದಲ್ಲಿ ನಡೆದ ನರಹತ್ಯೆ ಘಟನೆಗಳ ವರದಿಗಳು.
  • ಶೈಕ್ಷಣಿಕ, ನಾಟಕೀಯ, ಪತ್ರಿಕೋದ್ಯಮದ ವರದಿ ಅಥವಾ ಸಂಗೀತದ ವೀಡಿಯೊಗಳು, ಅಂದರೆ:
    • ಸಾವಿನ ಸೂಚಿತ ಕ್ಷಣ ಅಥವಾ ತೀವ್ರ ದೈಹಿಕ ಹಾನಿ
    • ಸಾವು ಅಥವಾ ತೀವ್ರ ದೈಹಿಕ ಹಾನಿಯಿಂದ (ಬಾಂಬ್ ಸ್ಫೋಟಗಳು, ಬೆಂಕಿ, ಕಟ್ಟಡ ಕುಸಿತಗಳು, ಇತ್ಯಾದಿ) ಸಂಭವಿಸಬಹುದಾದ ಅಪಾರ ಆಸ್ತಿ ಹಾನಿ.
    • ತೆರೆದ ಪೆಟ್ಟಿಗೆಗಳೊಂದಿಗೆ ಸಾರ್ವಜನಿಕ ಅಂತ್ಯಕ್ರಿಯೆಗಳಲ್ಲಿ ಸಿದ್ಧವಿಲ್ಲದ ಮೃತ ದೇಹಗಳ ಪ್ರದರ್ಶನ.
ಬೇಟೆ
  • ಪ್ರಾಣಿಗಳಿಗಾದ ತೀವ್ರ ಸ್ವರೂಪದ ಗಾಯಗಳನ್ನು ಅಥವಾ ಸುದೀರ್ಘ ಯಾತನೆಯನ್ನು ತೋರಿಸದಂತಹ, ಬೇಟೆಗೆ ಸಂಬಂಧಿಸಿದ ಕಂಟೆಂಟ್.
    • ಕೊಲ್ಲುವ ಕ್ಷಣ ಅಥವಾ ಗಾಯವು ಅಸ್ಪಷ್ಟವಾಗಿರುವ, ಮತ್ತು ಬಹುಮಾನ ಅಥವಾ ಆಹಾರದ ಅವಶ್ಯಕತೆಗಳಿಗಾಗಿ ಈ ಮೃತ ಪ್ರಾಣಿಯನ್ನು ಹೇಗೆ ಪ್ರಕ್ರಿಯೆಗೊಳಿಸಲಾಗುತ್ತದೆ ಎಂಬುದರ ಮೇಲೆ ಗಮನ ಕೇಂದ್ರೀಕರಿಸುವ ದೃಶ್ಯಾವಳಿ ಇಲ್ಲದಂತಹ ಬೇಟೆಯ ವೀಡಿಯೊಗಳು.
ಪ್ರಾಣಿಗಳ ಮೇಲಿನ ಹಿಂಸೆ
  • ನೈಸರ್ಗಿಕ ಜಗತ್ತಿನಲ್ಲಿ ಪ್ರಾಣಿಗಳ ನಡುವಿನ ಹಿಂಸಾಚಾರ, ಗ್ರಾಫಿಕ್-ಅಲ್ಲದ ಚಿತ್ರಣ.
    • ಪರಭಕ್ಷಕ ಪ್ರಾಣಿಗಳು ತಮ್ಮ ಬೇಟೆಯ ಬೆನ್ನತ್ತಿ ಓಡುತ್ತಿರುವುದನ್ನು ಗ್ರಾಫಿಕ್ ವಿವರಗಳಿಲ್ಲದೆ (ಉದಾ. ಬೇಟೆಯಾಡಲಾಗುತ್ತಿರುವ ಪ್ರಾಣಿಯ ರಕ್ತಸಿಕ್ತ ದೇಹದ ಅಂಗಗಳ ಮೇಲೆ ಅಥವಾ ಆ ಪ್ರಾಣಿಯನ್ನು ಹಿಡಿಯುವಾಗಿನ ಗ್ರಾಫಿಕ್ ಕ್ಷಣಗಳ ಮೇಲೆ ಗಮನ ಕೇಂದ್ರೀಕರಿಸುವುದು) ತೋರಿಸುವುದು; ಸ್ವಲ್ಪ ರಕ್ತವು ಕ್ಷಣಿಕವಾಗಿ ಗೋಚರಿಸಬಹುದು, ಆದರೆ ಇದು ಕಂಟೆಂಟ್‌ನ ಕೇಂದ್ರಬಿಂದುವಾಗಿರುವುದಿಲ್ಲ.
ಪ್ರಾಣಿ ಹಿಂಸೆ
  • ಪ್ರಾಣಿಗಳ ತರಬೇತಿ, ವೈದ್ಯಕೀಯ ಚಿಕಿತ್ಸೆ ಅಥವಾ ಸ್ಥಳಾಂತರದ ಸಮಯದಲ್ಲಿ ತೊಂದರೆಯಲ್ಲಿರುವ ಪ್ರಾಣಿಗಳು.
  • ಪ್ರಾಣಿಗಳ ಶೋಷಣೆಯ ನೈಜ ದೃಶ್ಯಾವಳಿಯನ್ನು ತೋರಿಸದ, ಅದರ ಕುರಿತಾದ ವರದಿ ಅಥವಾ ಚರ್ಚೆ.
ಕ್ರೀಡಾ ಆಟಗಳಲ್ಲಿ ಹಿಂಸಾಚಾರ
  • ಶಸ್ತ್ರಾಸ್ತ್ರಗಳನ್ನು ಒಳಗೊಂಡಿರುವ ಕಾದಾಟದ ಕ್ರೀಡೆಯಲ್ಲಿ (ಉದಾ. ಫೆನ್ಸಿಂಗ್) ಸುರಕ್ಷತಾ ಉಡುಗೆಯನ್ನು ಧರಿಸಲಾಗಿದೆಯೇ ಅಥವಾ ಸುರಕ್ಷತಾ ಮುನ್ನೆಚ್ಚರಿಕೆಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಲೆಕ್ಕಿಸದೆ, ಹಿಂಸಾಚಾರವನ್ನು ಒಳಗೊಂಡಿರುವುದು.
  • ಕ್ರೀಡೆಗಳಲ್ಲಿ ಗ್ರಾಫಿಕ್-ಅಲ್ಲದ ಗಾಯಗಳು ಅಥವಾ ಕ್ರೀಡೆಯ ಭಾಗವಾಗಿ ಉಂಟಾದ ಗ್ರಾಫಿಕ್-ಗಾಯಗಳಲ್ಲಿ ರಕ್ತವನ್ನು ತೋರಿಸುವುದು.
    • ವೃತ್ತಿಪರ ಸೆಟ್ಟಿಂಗ್‌ನಲ್ಲಿ (ಉದಾ. ಫಿಟ್‌ನೆಸ್ ಕೇಂದ್ರ ಅಥವಾ ಅಖಾಡದಲ್ಲಿ) ನಡೆಸಲಾಗುವ ಬಾಕ್ಸಿಂಗ್‌ನಂತಹ ಕಾದಾಟದ ಕ್ರೀಡೆಗಳು.
  • ಕ್ರೀಡಾ ಆಟದಲ್ಲಿ ಚಿತ್ರಿಸಲಾಗಿರುವ ಗ್ರಾಫಿಕ್-ಅಲ್ಲದ ಗಾಯಗಳು (ಉದಾ. ಕಾಲು ಉಳುಕುವಿಕೆ).
ಹೊಡೆದಾಟಗಳು (ಕಾದಾಟ ಕ್ರೀಡೆಗಳನ್ನು ಹೊರತುಪಡಿಸಿ)
  • ಗೋಚರಿಸದ ಗಾಯ ಅಥವಾ ನಾಕೌಟ್ ಒಳಗೊಂಡಿರುವ ಶೈಕ್ಷಣಿಕ ವಿಷಯದಲ್ಲಿನ ಹೊಡೆದಾಟಗಳ ಚಿತ್ರಣ.
    • ಟುಟೋರಿಯಲ್ ಎಂಬುದಾಗಿ ಹಂಚಿಕೊಳ್ಳಲಾಗಿರುವ, ಆತ್ಮರಕ್ಷಣೆಯ ಕ್ರಮಗಳು.
  • ಗೋಚರಿಸದ ಗಾಯದ ಜೊತೆಗೆ ಹೋರಾಡುವ ಜನರ ಕ್ಷಣಿಕ ಚಿತ್ರಣ.
ಕಾನೂನು ಜಾರಿಗೊಳಿಸುವಿಕೆ ಮತ್ತು ದೈಹಿಕ ಚಕಮಕಿ
  • ಕಾನೂನು ಜಾರಿಗೊಳಿಸುವಿಕೆ ಅಧಿಕಾರಿಗಳೊಂದಿಗೆ ಕಾದಾಟವಿಲ್ಲದ ಅಥವಾ ಘರ್ಷಣೆಯಿಲ್ಲದ ಚಕಮಕಿಗಳು.
    • ಪೊಲೀಸರ ಜೊತೆಗೆ ಸಾಮಾನ್ಯ ಸಂವಹನಗಳು (ಉದಾ. ಮಾರ್ಗ ನಿರ್ದೇಶನಗಳನ್ನು ಕೇಳುವುದು, ಪಾರ್ಕಿಂಗ್ ಟಿಕೆಟ್ ಸ್ವೀಕರಿಸುವುದು, ಇತ್ಯಾದಿ).
  • ಪೊಲೀಸರೊಂದಿಗೆ ಶಾರೀರಿಕವಲ್ಲದ ವಾಗ್ವಾದಗಳು, ಪೊಲೀಸ್ ವಶಪಡಿಸಿಕೊಳ್ಳುವುದು ಅಥವಾ ಆಸ್ತಿಯ ಒಳಗೆ ಬಲವಂತವಾಗಿ ಪ್ರವೇಶಿಸುವುದು ಮತ್ತು ಪೊಲೀಸ್ ಅನ್ವೇಷಣೆ.
  • ಶೈಕ್ಷಣಿಕ ಸಂದರ್ಭದಲ್ಲಿ ಅಥವಾ ಪತ್ರಿಕೋದ್ಯಮದ ವರದಿಗಾರಿಕೆಯಲ್ಲಿ ಕಾನೂನು ಜಾರಿಗೊಳಿಸುವಿಕೆ ಅಧಿಕಾರಿಗಳೊಂದಿಗೆ ಹಿಂಸಾತ್ಮಕ, ಕಾದಾಟ ಅಥವಾ ಘರ್ಷಣೆಯನ್ನು ಒಳಗೊಂಡಿರುವ ಚಕಮಕಿಗಳು:
    • ನಾಗರಿಕರ ಹಿಂಸಾತ್ಮಕ ಪ್ರತಿಭಟನೆಯ ಕುರಿತಾದ ಸುದ್ದಿ ವರದಿಯ ತುಣುಕುಗಳಲ್ಲಿ ಕಾಮೆಂಟ್ ಮಾಡುವುದು (ಉದಾ. ನಾಗರಿಕರಿಗೆ ಹೊಡೆಯುವುದು ಅಥವಾ ಅವರನ್ನು ನೆಲಕ್ಕೆ ತಳ್ಳುವುದು).
    • ಪೊಲೀಸರು ಗಲಭೆಯಲ್ಲಿ ನಾಗರಿಕರ ಮೇಲೆ ನೀರು ಎರಚುತ್ತಿರುವ ಕುರಿತು ವರದಿ.
ಯುದ್ಧ ಮತ್ತು ಸಂಘರ್ಷ
  • ಗ್ರಾಫಿಕ್-ಅಲ್ಲದ ಶೈಕ್ಷಣಿಕ ಕವರೇಜ್ ಅಥವಾ ಯುದ್ಧ ಮತ್ತು/ಅಥವಾ ಸಂಘರ್ಷದ ಚರ್ಚೆ.
    • ಡಿಸ್‌ಪ್ಲೇ ಇಲ್ಲದೆಯೇ ಕಾಣದಿರುವ ಗುರಿಗಳತ್ತ ಗುಂಡು ಹಾರಿಸುವುದು ಅಥವಾ ಸಂಕಟ ಅಥವಾ ದುಃಖದ ಚಿತ್ರಣಗಳು.
ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದ ಹಿಂಸೆ
  • ಯಾವುದೇ ಗಾಯಗಳು ಅಥವಾ ತೊಂದರೆಗಳಿಲ್ಲದೆ ಅಪ್ರಾಪ್ತ ವಯಸ್ಕರ ನಡುವಿನ ಕಾದಾಟಗಳು ಅಥವಾ ಒರಟುತನವನ್ನು ಒಳಗೊಂಡಿರುವ ವೀಡಿಯೊಗಳು.
  • ಅಪ್ರಾಪ್ತ ವಯಸ್ಕರ ನಡುವಿನ ಹಿಂಸಾಚಾರ ಕುರಿತಾದ ಸಂಗೀತದ ಕಂಟೆಂಟ್ ಅಂತಹ ಯಾವುದೇ ಕಾದಾಟಗಳ ಕ್ಷಣಿಕ ದೃಶ್ಯಾವಳಿಯನ್ನು ಅಥವಾ ಕೇವಲ ಅವುಗಳನ್ನು ಪ್ರದರ್ಶಿಸುವುದಿಲ್ಲ.
ವ್ಯಾಖ್ಯಾನಗಳು:
  • “ಸ್ವಲ್ಪ ಪ್ರಮಾಣದ ಹಿಂಸಾಚಾರ” ಎಂದರೆ ವಾಸ್ತವಿಕತೆಯಲ್ಲಿನ ಜಗಳಗಳ ಕಂಟೆಂಟ್ ಅಥವಾ ಮುಷ್ಟಿಯಿಂದ ಗುದ್ದುವಂತಹ ಕ್ಷಣಿಕ ಹಿಂಸೆಯ ಕೃತ್ಯಗಳು.
  • "ಗ್ರಾಫಿಕ್ ಅಲ್ಲದ ಹಿಂಸಾಚಾರ" ಎನ್ನುವುದು ಇನ್ನೊಬ್ಬ ವ್ಯಕ್ತಿಯ ವಿರುದ್ಧ ಆಕ್ರಮಣಕಾರಿ ದೈಹಿಕ ನಡವಳಿಕೆಯ ಚಿತ್ರಣಗಳನ್ನು ಸೂಚಿಸುತ್ತದೆ, ಕೂಗುವಾಗ ಬೆರಳು ತೋರಿಸುವುದು ಅಥವಾ ಪ್ರತ್ಯೇಕವಾದ ಹಿಂಸಾಚಾರದ ಕ್ರಿಯೆಗಳು (ಉದಾ. ಗೋಡೆಗೆ ಬಾಟಲಿಯನ್ನು ಎಸೆಯುವುದು).
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ಗ್ರಾಫಿಕ್ ಕಾನೂನು ಜಾರಿಗೊಳಿಸುವಿಕೆ, ಉದಾಹರಣೆಗೆ ಗೋಚರಿಸುವ ಗಾಯಗಳು; ಶೈಕ್ಷಣಿಕ ಅಥವಾ ಡಾಕ್ಯುಮೆಂಟರಿ ಸೆಟ್ಟಿಂಗ್‌ಗಳಲ್ಲಿ (ಇತಿಹಾಸ ಕಲಿಕೆಯ ಚಾನಲ್‌ನಂತಹ) ಸ್ಪಷ್ಟವಾದ ಗಾಯ ಅಥವಾ ಹಾನಿಯಾಗಿರುವ ಮೃತ ದೇಹಗಳು; ಥಂಬ್‌ನೇಲ್‌ನಲ್ಲಿ ಅಥವಾ ಕಂಟೆಂಟ್‌ನ ಆರಂಭದಲ್ಲಿ ಗ್ರಾಫಿಕ್ ಗೇಮ್‌ನ ಹಿಂಸೆ; ಗಾಯಗಳಿಲ್ಲದೆ ಸಶಸ್ತ್ರ ಸಂಘರ್ಷದ ಕಚ್ಚಾ ದೃಶ್ಯಾವಳಿ; ದುರಂತಗಳ ಗ್ರಾಫಿಕ್ ವಿವರಗಳ ವಿವರಣೆ. ತೀವ್ರ ಮತ್ತು ಆಘಾತಕಾರಿ ಗಾಯಗಳನ್ನು ಪ್ರದರ್ಶಿಸುವ ನಾಟಕೀಯ ಕಂಟೆಂಟ್.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಸಾಮಾನ್ಯ ಹಿಂಸಾಚಾರ

  • ನಾಟಕೀಯ ಹಿಂಸಾಚಾರದ ಪರಿಣಾಮವಾಗಿ ಗಂಭೀರ ಗಾಯ ಉಂಟಾಗುವುದು ಮತ್ತು ಇದರ ಪರಿಣಾಮ ಅಥವಾ ಪ್ರಭಾವ ಗೋಚರಿಸುವುದು ಮತ್ತು ಉಪಸ್ಥಿತವಾಗಿರುವುದು.
    • ಮೂಳೆ ಮುರಿದಿರುವುದು ಗೋಚರಿಸುವಂತಹ ರಕ್ತಸಿಕ್ತ ಅಥವಾ ಘೋರ ದೃಶ್ಯಗಳು.
    • ಕಿರಿದಾದ, ಅಲ್ಟ್ರಾ-ಗ್ರಾಫಿಕ್ ಹಿಂಸಾತ್ಮಕ ದೃಶ್ಯವನ್ನು (ಉದಾ. ಸಾಮೂಹಿಕ ಹತ್ಯೆ) ಅಥವಾ ಇಂತಹ ಗ್ರಾಫಿಕ್ ದೃಶ್ಯಗಳ ವೀಡಿಯೊ ಸಂಯೋಜನೆಯನ್ನು ಒಳಗೊಂಡಿರುವ, ನಾಟಕೀಯವಾದ ಲಾಂಗ್-ಫಾರ್ಮ್ ವೀಡಿಯೊ ಕಂಟೆಂಟ್.
    • ದುರಂತಗಳ ಕುರಿತು ಹೆಚ್ಚು ಗ್ರಾಫಿಕ್ ವಿವರಣೆಗಳು (ಆಡಿಯೊ ಅಥವಾ ವೀಡಿಯೊ ರೂಪದಲ್ಲಿ).
    • ಉಸಿರುಗಟ್ಟುವಿಕೆಯಿಂದ ಬಳಲುತ್ತಿರುವ ಅಥವಾ ತಡೆರಹಿತ ಕೆಮ್ಮಿನಿಂದ ತೀವ್ರವಾದ ನೋವು ಮತ್ತು ನೋವನ್ನು ಅನುಭವಿಸುತ್ತಿರುವ ಜನರು.
    • ಜನರಿಗೆ ಗೋಚರಿಸುವ ಹಾನಿ ಅಥವಾ ವಿಪರೀತ ಭಾವನಾತ್ಮಕ ಯಾತನೆಯಂತಹ ಅವರ ನೋವನ್ನು ಒಳಗೊಂಡಿರುವ ವಿಪತ್ತುಗಳ ದೃಶ್ಯಾವಳಿ.
  • ಹಿಂಸಾತ್ಮಕ ಈವೆಂಟ್‌ನ ಪರಿಣಾಮವಾಗಿ ನಾಶವಾದ ಕಟ್ಟಡಗಳ ಅವಶೇಷಗಳು (ಉದಾ. ಚಂಡಮಾರುತದ ನಂತರ ಶಾಲೆಗಳ ಅವಶೇಷಗಳು) ಅಥವಾ ಲಘುವಾದ ಗಾಯಗಳಾಗಿರುವ ಜನರ (ಉದಾ. ಪಾದಗಳ ತಿರುಚು ಅಥವಾ ಬೆರಳುಗಳಿಗೆ ಬ್ಯಾಂಡೇಜ್‌ಗಳನ್ನು ಹಾಕುತ್ತಿರುವುದು) ಕಚ್ಚಾ ದೃಶ್ಯಾವಳಿ.

ಗೇಮಿಂಗ್

  • ಥಂಬ್‌ನೇಲ್‌ನಲ್ಲಿ ಅಥವಾ ವೀಡಿಯೊದ ಮೊದಲ 8 ರಿಂದ 15 ಸೆಕೆಂಡುಗಳಲ್ಲಿ ಗ್ರಾಫಿಕ್ ಗೇಮ್ ಹಿಂಸಾಚಾರ. 
    • "ಗ್ರಾಫಿಕ್ ಗೇಮ್ ಹಿಂಸಾಚಾರ"ವು ಕ್ರೂರ ಹತ್ಯೆಗಳು ಅಥವಾ ದೈಹಿಕ ದ್ರವಗಳನ್ನು ಕೇಂದ್ರೀಕರಿಸುವ ತೀವ್ರ ಗಾಯಗಳು ಮತ್ತು ಶಿರಚ್ಛೇದ ಮತ್ತು ಛಿದ್ರಗೊಳಿಸುವಿಕೆಯಂತಹ ಭಾಗಗಳನ್ನು ಒಳಗೊಂಡಿರುತ್ತದೆ. 

ಸಾವು ಮತ್ತು ಅನಾಹುತ

  • ಗ್ರಾಫಿಕ್ ಅಥವಾ ಭಯಾನಕ ವಿವರಗಳನ್ನು ಒಳಗೊಂಡಿರುವ ಅನೇಕ ಸಾವು-ನೋವುಗಳನ್ನು ಒಳಗೊಂಡ ದುರಂತಗಳಿಗೆ ಸಂಬಂಧಿಸಿದ ವರದಿಗಳು.
    • ಸಾವಿನ ಸಂದರ್ಭಗಳ ವಿವರಣಾತ್ಮಕ ಭಾಷೆಯನ್ನು ಒಳಗೊಂಡ ಇತ್ತೀಚಿನ ನರಹತ್ಯೆಯ ಸಾಕ್ಷ್ಯಚಿತ್ರ.

ಹೊಡೆದಾಟಗಳು (ಕಾದಾಟ ಕ್ರೀಡೆಗಳನ್ನು ಹೊರತುಪಡಿಸಿ)

  • ಶೈಕ್ಷಣಿಕ ಸಂದರ್ಭದಲ್ಲಿ ಗೋಚರಿಸುವ ಗಾಯ ಅಥವಾ ನಾಕ್‌ಔಟ್‌ಗಳನ್ನು ಒಳಗೊಂಡಿರುವ ಬೀದಿ ಹೊಡೆದಾಟಗಳು.
    • ಗಾಯಗಳು ಮತ್ತು ಭಾವನಾತ್ಮಕ ಯಾತನೆಯನ್ನು (ಉದಾ. ಚೀರುವುದು) ಒಳಗೊಂಡ ದೃಶ್ಯಗಳು ಸೇರಿದಂತೆ ಗ್ರಾಫಿಕ್ ಬೀದಿ ಹೊಡೆದಾಟಗಳು.

ಕಾನೂನು ಜಾರಿಗೊಳಿಸುವಿಕೆ ಮತ್ತು ದೈಹಿಕ ಚಕಮಕಿ

  • ಕಾನೂನು ಜಾರಿ ಮಾಡುವವರು ಅಥವಾ ವಿರುದ್ಧವಾಗಿ ಮಾಡಿದ ಕ್ರೂರ ಕೃತ್ಯಗಳನ್ನು ಸಾಮಾನ್ಯವಾಗಿ ಒಳಗೊಳ್ಳುವ ಕಾನೂನು ಜಾರಿಯೊಂದಿಗೆ ಹೆಚ್ಚು ಹೋರಾಟದ ವಾಗ್ವಾದಗಳು.
    • ಗಾಯಗಳು ಸಂಭವಿಸುವ ಸ್ಥಳದಲ್ಲಿ ನಾಗರಿಕರನ್ನು ಬಲವಂತವಾಗಿ ಕೋಲುಗಳಿಂದ ಹೊಡೆಯುವುದು
    • ಪೊಲೀಸರ ಮೇಲೆ ಉಗುಳುವುದು 

ಕ್ರೀಡಾ ಆಟಗಳಲ್ಲಿ ಹಿಂಸಾಚಾರ

  • ದೊಡ್ಡ ವೀಡಿಯೊದ ಭಾಗವಾಗಿ, ಕ್ರೀಡೆಗಳಲ್ಲಿ ಸಾಂದರ್ಭಿಕವಾದ ಗ್ರಾಫಿಕ್ ಗಾಯಗಳು.
    • ಗ್ರಾಫಿಕ್ ಗಾಯಗಳನ್ನು ಒಳಗೊಂಡಿರುವ, ಆದರೆ ಅವುಗಳ ಮೇಲೆಯೇ ಗಮನ ಕೇಂದ್ರೀಕರಿಸದ ಸಂಯೋಜನೆಗಳು ಅಥವಾ ಹೈಲೈಟ್‌ಗಳು.

ಪ್ರಾಣಿಗಳ ಮೇಲಿನ ಹಿಂಸಾಚಾರ

  • ನೈಸರ್ಗಿಕ ಜಗತ್ತಿನಲ್ಲಿ ಪ್ರಾಣಿಗಳ ಹಿಂಸಾಚಾರ ಮನುಷ್ಯರಿಂದ ಅಥವಾ ಮಾನವನಿಂದ ತರಬೇತಿ ಪಡೆದ ಪ್ರಾಣಿಗಳಿಂದ ಉಂಟಾಗುವುದಿಲ್ಲ (ಉದಾ. ಕಾಡು ಸಿಂಹಗಳು ಜಿಂಕೆಗಳನ್ನು ಬೇಟೆಯಾಡುತ್ತವೆ, ಆದರೆ ತರಬೇತಿ ಪಡೆದ ನಾಯಿಗಳು ಮೊಲಗಳನ್ನು ಹಿಡಿಯುವುದಿಲ್ಲ).
    • ಫೋಕಲ್ ಮಾಡಿದಾಗ, ದೀರ್ಘಕಾಲದ ಗ್ರಾಫಿಕ್ ಪ್ರಾಣಿಗಳ ಗಾಯಗಳು (ಉದಾ. ರಕ್ತ ಅಥವಾ ಮೂಳೆಗಳು) ವೀಡಿಯೊದ ಕೇಂದ್ರ ವಿಷಯವಾಗಿದೆ.

ಬೇಟೆ

  • ಗಾಯಗೊಂಡಿರುವ ಅಥವಾ ಬಳಲುತ್ತಿರುವ ಪ್ರಾಣಿಗಳಂತಹ ಗ್ರಾಫಿಕ್ ಚಿತ್ರಣವನ್ನು (ಉದಾ. ರಕ್ತಸಿಕ್ತವಾದ ದೇಹದ ಭಾಗಗಳು) ಕ್ಷಣಿಕವಾಗಿ ತೋರಿಸುವ ಬೇಟೆಯ ಕುರಿತಾದ ಕಂಟೆಂಟ್.

ಯುದ್ಧ ಮತ್ತು ಸಂಘರ್ಷ

  • ಶೈಕ್ಷಣಿಕ ಸಂದರ್ಭವಿಲ್ಲದ, ಘೋರ ದೃಶ್ಯಗಳನ್ನು ಅಥವಾ ಸ್ಪಷ್ಟ ಗಾಯಗಳನ್ನು ಒಳಗೊಂಡಿರದ, ಶಸ್ತ್ರಸಜ್ಜಿತ ಘರ್ಷಣೆಯ ನಿಜವಾದ, ಗ್ರಾಫಿಕ್-ಅಲ್ಲದ ಕಚ್ಚಾ ದೃಶ್ಯಾವಳಿ (ಉದಾ. ಯುದ್ಧ).
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಶೈಕ್ಷಣಿಕವಲ್ಲದ ವೀಡಿಯೊದಲ್ಲಿ ಗ್ರಾಫಿಕ್ ಮೃತ ದೇಹಗಳು; ನಿಷೇಧಿತ ಥೀಮ್‌ಗಳನ್ನು ಒಳಗೊಂಡಿರುವ ವೀಡಿಯೊ ಗೇಮ್‌ಪ್ಲೇ (ಲೈಂಗಿಕ ಆಕ್ರಮಣದಂತಹ). ಅಲ್ಟ್ರಾ ಗ್ರಾಫಿಕ್ ಹಿಂಸಾತ್ಮಕ ಕೃತ್ಯಗಳು (ಕಾನೂನು ಜಾರಿಗೊಳಿಸುವಿಕೆ ಒಳಗೊಂಡಂತೆ) ಮತ್ತು ಗಾಯಗಳು. ಹಿಂಸೆಯ ಪ್ರಚೋದನೆ ಅಥವಾ ವೈಭವೀಕರಣ.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಸಾಮಾನ್ಯ ಹಿಂಸಾಚಾರ

  • ಸ್ವಲ್ಪ ಸಾಂದರ್ಭಿಕತೆ ಇರುವ ಅಥವಾ ಸಾಂದರ್ಭಿಕತೆಯೇ ಇಲ್ಲದೆ ರಕ್ತ, ಹಿಂಸೆ, ಭೀಕರತೆ, ಶಾರೀರಿಕ-ದ್ರವಗಳು (ಮನುಷ್ಯರು ಅಥವಾ ಪ್ರಾಣಿಗಳು), ಅಪರಾಧ ಸ್ಥಳದ ದೃಶ್ಯಗಳು ಅಥವಾ ದುರ್ಘಟನೆ ಕುರಿತಾದ ಫೋಟೋಗಳ ಮೇಲೆ ಗಮನಹರಿಸುವುದು.
  • ಅತ್ಯಂತ ಆಘಾತಕಾರಿ ಚಿತ್ರಣವನ್ನು ಒಳಗೊಂಡಿರುವ ಹಿಂಸಾಚಾರದ ಚಟುವಟಿಕೆಗಳಿಗೆ ಸಂಬಂಧಿಸಿದ ಗ್ರಾಫಿಕ್ ಪರಿಣಾಮಗಳನ್ನು ಪ್ರದರ್ಶಿಸುವುದು, ಉದಾಹರಣೆಗೆ:
    • ರಕ್ತ ಅಥವಾ ಹೆಪ್ಪುಗಟ್ಟಿರುವ ಗಾಯದ ಘೋರ ಪ್ರದರ್ಶನ (ಉದಾ. ಕತ್ತರಿಸಿದ ಕಾಲು ಅಥವಾ ತೀವ್ರವಾದ ಸುಟ್ಟಗಾಯಗಳಂತಹ ಕಣ್ಣಿಗೆ ಕಾಣಿಸುವ ದೇಹದ ಮೇಲಿನ ಗಾಯಗಳು)
    • ತೀವ್ರವಾದ ನೋವು (ಉದಾ. ಜನರು ತಮ್ಮ ದೇಹದ ಮೇಲಾಗಿರುವ ತೀವ್ರವಾದ ಗಾಯದಿಂದಾಗಿ ನೋವಿನಿಂದ ಅಳುವುದು ಅಥವಾ ಮೂರ್ಛೆ ಹೋಗುವುದು)
  • ಆಘಾತಕಾರಿ, ಗ್ರಾಫಿಕ್ ಮತ್ತು/ಅಥವಾ ಹಿಂಸಾತ್ಮಕ ಚಿತ್ರಣ ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ವೈಭವೀಕರಿಸುವ ದೃಶ್ಯಗಳನ್ನು ಒಳಗೊಂಡಿರುವ ಕಂಟೆಂಟ್.

ಗೇಮಿಂಗ್

  • ಆಘಾತಕಾರಿ ಅನುಭವವನ್ನು ರಚಿಸಲು ತಯಾರಿಸಲಾದ ಗೇಮ್‌ಪ್ಲೇ ಮೇಲೆ ಫೋಕಸ್. ಉದಾಹರಣೆಗಳು ಇವುಗಳನ್ನು ಒಳಗೊಂಡಿದೆ: 
    • ಸಾಮೂಹಿಕ ಹತ್ಯೆಗಳಿಗಾಗಿ ಆಡಲಾಗದ ಪಾತ್ರಗಳನ್ನು ಒಟ್ಟುಗೂಡಿಸುವುದು.
  • ಥಂಬ್‌ನೇಲ್‌ನಲ್ಲಿ ಅಥವಾ ವೀಡಿಯೊದ ಮೊದಲ ಏಳು ಸೆಕೆಂಡುಗಳಲ್ಲಿ ಗ್ರಾಫಿಕ್ ಗೇಮ್ ಹಿಂಸಾಚಾರ.
    • ಶಾರೀರಿಕ ದ್ರವಗಳು ಮತ್ತು/ಅಥವಾ ದೀರ್ಘಕಾಲದ ಅಥವಾ ತೀವ್ರತರಹದ ನೋವಿನಿಂದ ಬಳಲುತ್ತಿರುವ ದೈಹಿಕ ಭಾಗಗಳ ಮೇಲೆ ಗಮನಹರಿಸುವಂತಹ ಗಂಭೀರ ಪ್ರಮಾಣದ ಹಾನಿಗಳನ್ನು (ಉದಾ. ಶಿರಚ್ಛೇದಗಳು, ಕೈಕಾಲು ಕತ್ತರಿಸುವುದು) "ಗ್ರಾಫಿಕ್ ಗೇಮ್ ಹಿಂಸಾಚಾರ" ಒಳಗೊಂಡಿದೆ.
  • ಲೈಂಗಿಕ ಹಿಂಸಾಚಾರವನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ.
  • ಸಂರಕ್ಷಿತ ಗುಂಪುಗಳನ್ನು ಗುರಿಯಾಗಿಸಿ, ದ್ವೇಷ ಅಥವಾ ಅಸೂಯೆಯಿಂದ ಪ್ರೇರಿತವಾದ ಹಿಂಸಾಚಾರವನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ.
  • ಗ್ರಾಫಿಕ್ ಹಿಂಸಾಚಾರವನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ.
  • ಅಪ್ರಾಪ್ತರನ್ನು ಗುರಿಯಾಗಿಸಿ, ಗ್ರಾಫಿಕ್ ಹಿಂಸಾಚಾರವನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ.
  • ನಿಜವಾದ ಹೆಸರಿನ ವ್ಯಕ್ತಿಗಳನ್ನು ಗುರಿಯಾಗಿಸಿ, ಗ್ರಾಫಿಕ್ ಹಿಂಸಾಚಾರವನ್ನು ತೋರಿಸುವ ವೀಡಿಯೊ ಗೇಮ್‌ಪ್ಲೇ.

ಸಾವು ಮತ್ತು ಅನಾಹುತ

  • ಸಿದ್ಧವಿಲ್ಲದ ಮೃತ ದೇಹಗಳ ಅಥವಾ ಅಲ್ಟ್ರಾ-ಗ್ರಾಫಿಕ್ ಗಾಯಗಳ ಪ್ರದರ್ಶನ.
  • ಶೈಕ್ಷಣಿಕವಲ್ಲದ ಸಂದರ್ಭಗಳಲ್ಲಿ ಸಿದ್ಧವಿಲ್ಲದ ಮೃತ ದೇಹಗಳನ್ನು ಪ್ರದರ್ಶನ.
  • ಯಾವುದೇ ಸಂದರ್ಭದಲ್ಲಿ ಒಂದು ಅಥವಾ ಹೆಚ್ಚಿನ ವ್ಯಕ್ತಿಗಳ ಸಾವಿನ ಕ್ಷಣದ ಗೋಚರತೆಯ ಪ್ರದರ್ಶನ.
    • ಉಸಿರುಗಟ್ಟಿಸುವಿಕೆಯಿಂದ ಸಾವು.
    • ಪ್ರಯಾಣಿಕರಿರುವ ಕಾರು ಸೇತುವೆಯ ಮೇಲಿಂದ ಕೆಳಗೆ ಬೀಳುವುದು.
  • ಸಾವಿನ ಸೂಚಿತ ಕ್ಷಣ ಅಥವಾ ತೀವ್ರ ದೈಹಿಕ ಹಾನಿ.
    • ಸಾವು ಅಥವಾ ತೀವ್ರ ದೈಹಿಕ ಹಾನಿಯಿಂದ (ಬಾಂಬ್ ಸ್ಫೋಟಗಳು, ಬೆಂಕಿ, ಕಟ್ಟಡ ಕುಸಿತಗಳು, ಇತ್ಯಾದಿ) ಸಂಭವಿಸಬಹುದಾದ ಅಪಾರ ಆಸ್ತಿ ಹಾನಿ.
  • ಶೈಕ್ಷಣಿಕವಲ್ಲದ ಸೆನ್ಸಾರ್ ಮಾಡಲಾದ (ಉದಾ. ಬ್ಲರ್ ಮಾಡಲಾದ), ಗ್ರಾಫಿಕ್ ಮೃತ ದೇಹಗಳು.

ಹೊಡೆದಾಟಗಳು (ಕಾದಾಟ ಕ್ರೀಡೆಗಳನ್ನು ಹೊರತುಪಡಿಸಿ)

  • ಶೈಕ್ಷಣಿಕವಲ್ಲದ ಸಂದರ್ಭಗಳಲ್ಲಿ ಗಾಯಗಳಿಲ್ಲದೆಯೂ ಬೀದಿ ಜಗಳಗಳ ಫೋಕಲ್ ಅಥವಾ ದೀರ್ಘಕಾಲದ ಪ್ರದರ್ಶನ.

ಬೇಟೆ

  • ಗಾಯಗೊಂಡ ಅಥವಾ ಬಳಲುತ್ತಿರುವ ಪ್ರಾಣಿಗಳ ಫೋಕಲ್ ಗ್ರಾಫಿಕ್ ಚಿತ್ರಣವನ್ನು ಒಳಗೊಂಡ ಬೇಟೆಯಾಡುವ ಕಂಟೆಂಟ್ (ಉದಾ. ರಕ್ತಸಿಕ್ತ ದೇಹದ ಭಾಗಗಳು).

ಪ್ರಾಣಿ ಹಿಂಸೆ

  • ಒದೆಯುವಿಕೆಯಂತಹ ಪ್ರಾಣಿಗಳ ಮೇಲಿನ ದೌರ್ಜನ್ಯ ಅಥವಾ ಪ್ರಾಣಿಗಳ ಮೇಲಿನ ಕ್ರೌರ್ಯತೆಯನ್ನು (ದೈಹಿಕ ಅಥವಾ ಭಾವನಾತ್ಮಕ ಎರಡೂ) ಪ್ರದರ್ಶಿಸುವುದು ಅಥವಾ ಚಿತ್ರಿಸುವುದು.
  • ಮಾನವ-ನಿಯಂತ್ರಿತ ಪ್ರಾಣಿ ಹಿಂಸಾಚಾರದ (ಉದಾ. ಕಾಕ್‌ಫೈಟಿಂಗ್ ಅಥವಾ ಡಾಗ್‌ಫೈಟಿಂಗ್) ಪ್ರಚಾರ ಅಥವಾ ವೈಭವೀಕರಣವು ಗ್ರಾಫಿಕ್ ಚಿತ್ರಣವನ್ನು ಒಳಗೊಂಡಿರಬಹುದು ಅಥವಾ ಇಲ್ಲದಿರಬಹುದು.
  • ಮಾನವನ ಹಸ್ತಕ್ಷೇಪದಿಂದಾಗಿ ಪ್ರಾಣಿಗಳನ್ನು ತೊಂದರೆಗೆ ಸಿಲುಕಿಸುವ ದೃಶ್ಯಗಳು, ಉದಾಹರಣೆಗೆ ಪ್ರಾಣಿಗಳನ್ನು ಅಪಾಯಕಾರಿ ರೀತಿಯಲ್ಲಿ ಇರಿಸುವುದು, ಬಿಗಿಯಾದ ಸ್ಥಾನಗಳಲ್ಲಿ ಅಥವಾ ಒತ್ತಡ ಅಥವಾ ಅಸಹಜವೆಂದು ಪರಿಗಣಿಸುವ ಇತರ ಅಪಾಯಕಾರಿ ದೃಶ್ಯಗಳು.

ಕಾನೂನು ಜಾರಿಗೊಳಿಸುವಿಕೆ ಮತ್ತು ದೈಹಿಕ ಚಕಮಕಿ

  • ಶೈಕ್ಷಣಿಕವಲ್ಲದ ಸಂದರ್ಭದಲ್ಲಿ ಪೋಲೀಸ್ ದೌರ್ಜನ್ಯದ ಫೋಕಲ್ ಪ್ರದರ್ಶನ.

ಕ್ರೀಡಾ ಆಟಗಳಲ್ಲಿ ಹಿಂಸಾಚಾರ

  • ಗ್ರಾಫಿಕ್ ಗಾಯದ ಪ್ರದರ್ಶನವು ವೀಡಿಯೊದ ಕೇಂದ್ರ ವಿಷಯವಾಗಿರುವ ಕ್ರೀಡಾ ವೀಡಿಯೊಗಳು.

ಯುದ್ಧ ಮತ್ತು ಸಂಘರ್ಷ

  • ಗುಂಡಿನ ದಾಳಿಗಳು, ಸ್ಫೋಟಗಳು, ಹತ್ಯೆಗಳು ಅಥವಾ ಬಾಂಬ್ ಹಾಕುವುದರ ಕುರಿತಾದ ಗ್ರಾಫಿಕ್ ಚಿತ್ರಗಳು ಅಥವಾ ವಿವರಣೆಗಳು.
  • ಯಾವುದೇ ಸಂದರ್ಭದಲ್ಲಿ ಗಾಯ, ಸಾವು ಅಥವಾ ಬಳಲಿಕೆಯ ಗ್ರಾಫಿಕ್ ಚಿತ್ರಣಗಳನ್ನು ಹೊಂದಿರುವ ಯುದ್ಧದ ದೃಶ್ಯಾವಳಿ.

ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದ ಹಿಂಸೆ

  • ಯಾವುದೇ ಸಂದರ್ಭದಲ್ಲಿ ಅಪ್ರಾಪ್ತ ವಯಸ್ಕರ ನಡುವಿನ ಹಿಂಸಾಚಾರವನ್ನು ಕೇಂದ್ರೀಕರಿಸಿ ಚಿತ್ರಿಸುವ ಕಂಟೆಂಟ್ ಅಥವಾ ಭಾಗವಹಿಸುವವರಿಗೆ ಗಾಯ ಅಥವಾ ಸಂಕಟವನ್ನು ಒಳಗೊಂಡಿರುತ್ತದೆ.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ವಯಸ್ಕರ ಕಂಟೆಂಟ್

ಶೀರ್ಷಿಕೆ ಅಥವಾ ಥಂಬ್‌ನೇಲ್ ಅಥವಾ ಹೆಚ್ಚು ಲೈಂಗಿಕತೆ ಹೊಂದಿರುವ ಥೀಮ್‌ಗಳಲ್ಲಿ ಹೆಚ್ಚು ಲೈಂಗಿಕತೆ ಹೊಂದಿರುವ ವಿಷಯವನ್ನು ಒಳಗೊಂಡಿರುವ ಕಂಟೆಂಟ್ ಜಾಹೀರಾತಿಗೆ ಸೂಕ್ತವಲ್ಲ. ಗ್ರಾಫಿಕ್ ಅಲ್ಲದ ಲೈಂಗಿಕ ಶಿಕ್ಷಣ ವೀಡಿಯೊಗಳು ಮತ್ತು ಸಂಗೀತ ವೀಡಿಯೊಗಳಿಗೆ ಸೀಮಿತ ವಿನಾಯಿತಿಗಳಿವೆ. ಈ ನೀತಿಯು ನಿಜವಾದ ಮತ್ತು ಕಂಪ್ಯೂಟರ್-ರಚಿಸಿದ ವಿಷುವಲ್‌ಗಳೆರಡನ್ನೂ ಒಳಗೊಂಡಿದೆ. ಹಾಸ್ಯದ ಉದ್ದೇಶವನ್ನು ಹೊಂದಿರುವಿಕೆಯಿಂದ, ಅತಿಯಾದ ಲೈಂಗಿಕತೆಯನ್ನು ಹೊಂದಿರುವ ಕಂಟೆಂಟ್ ಜಾಹೀರಾತಿಗೆ ಸೂಕ್ತವಾಗುವುದಿಲ್ಲ.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಪ್ರಣಯದ ದೃಶ್ಯಗಳು ಅಥವಾ ಚುಂಬನ; ಸಂಭೋಗವನ್ನು ಉಲ್ಲೇಖಿಸದೆ ಪ್ರಣಯ ಸಂಬಂಧಗಳು ಅಥವಾ ಲೈಂಗಿಕತೆಯ ಕುರಿತಾದ ಚರ್ಚೆಗಳು; ಗ್ರಹಿಸಲಾಗದ ಮತ್ತು ಪ್ರೇಕ್ಷಕರನ್ನು ಪ್ರಚೋದಿಸುವ ಉದ್ದೇಶವನ್ನು ಹೊಂದಿರದ ಸಂಪೂರ್ಣವಾಗಿ ಸೆನ್ಸಾರ್ ಮಾಡಿದ ನಗ್ನತೆ; ಮಗು ಇರುವಾಗ ಎದೆ ಹಾಲುಣಿಸುವ ನಗ್ನತೆ; ಗ್ರಾಫಿಕ್ ಅಲ್ಲದ ಲೈಂಗಿಕ ಶಿಕ್ಷಣ; ಅಪೇಕ್ಷಣೀಯ ಅಥವಾ ಆಕರ್ಷಕವಾಗಿ ಕಾಣಿಸಿಕೊಳ್ಳುವ ಪ್ರಯತ್ನದಲ್ಲಿ ಸಾಮಾನ್ಯವಾಗಿ ಲೈಂಗಿಕತೆಯ ದೇಹದ ಭಾಗಗಳ ಲಯಬದ್ಧ ದೇಹದ ಚಲನೆಯನ್ನು ಒಳಗೊಂಡಿರುವ ನೃತ್ಯ, ಆದರೆ ಲೈಂಗಿಕವಾಗಿ ಗ್ರಾಫಿಕ್ ಅಲ್ಲ; ಸಂಯೋಜಿತ ನೃತ್ಯ ಅಥವಾ ಸಂಗೀತ ವೀಡಿಯೊದಲ್ಲಿರುವಂತಹ ವೃತ್ತಿಪರ ಸೆಟ್ಟಿಂಗ್‌ನಲ್ಲಿ ಲೈಂಗಿಕವಾಗಿ ಗ್ರಾಫಿಕ್ ನೃತ್ಯ.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಲೈಂಗಿಕ ಆನಂದ ಒದಗಿಸುವ ಕಂಟೆಂಟ್

  • ಲೈಂಗಿಕ ಸಂತೋಷ ಒದಗಿಸದ ಪ್ರಣಯ ದೃಶ್ಯಗಳು; ಉದಾಹರಣೆಗೆ, ಆ್ಯನಿಮೇಟ್ ಮಾಡಲಾದ, ನಿಜ-ಜೀವನದ ಅಥವಾ ನಾಟಕೀಯ ಚುಂಬನ ಅಥವಾ ಮುದ್ದಾಟದ ದೃಶ್ಯಗಳು.
    • ಲೈಂಗಿಕ ಕ್ರಿಯೆಗಳನ್ನು ಸ್ಪಷ್ಟವಾಗಿ ತೋರಿಸದೆ, ಪಾತ್ರಗಳ ನಡುವೆ ಲೈಂಗಿಕ ಉದ್ವೇಗವನ್ನು ತೋರಿಸುವ ದೃಶ್ಯಗಳು.
    • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶವಿಲ್ಲದ, ಪ್ರಣಯವೇ ಕೇಂದ್ರಬಿಂದುವಾಗಿರುವ, ಅಧಿಕ ಸಮಯದವರೆಗಿನ ಚುಂಬನದ ದೃಶ್ಯ.
    • ಅಲುಗಾಡುತ್ತಿರುವ ಬೆಡ್‌ಗಳನ್ನು ತೋರಿಸುವುದು, ಲೈಂಗಿಕ ತೃಪ್ತಿ ಪಡೆದಂತೆ ಚೀರುವುದು ಅಥವಾ ಡ್ರೈ ಹಂಪಿಂಗ್‌ನಂತಹ ಜನನಾಂಗಗಳು ಗೋಚರಿಸದೆಯೇ ಕ್ಷಣಿಕ ಲೈಂಗಿಕ ಕ್ರಿಯೆಗಳನ್ನು ಸೂಚಿಸುತ್ತದೆ.
  • ಲೈಂಗಿಕ ಸಂತೋಷ ಒದಗಿಸದ/ಹಾಸ್ಯದ ಸಂದರ್ಭದಲ್ಲಿ ಲೈಂಗಿಕತೆಯ ಕುರಿತು ಚರ್ಚೆ:
    • ಭಾವೋದ್ರೇಕ, ಆಸೆ ಅಥವಾ ಕಾಮವನ್ನು ಸೂಚಿಸುವ ಸಾಹಿತ್ಯ ಅಥವಾ ಸಂಭಾಷಣೆಗಳು.
    • ಲೈಂಗಿಕ ಶಿಕ್ಷಣ.
    • ಲೈಂಗಿಕವಾಗಿ ಹರಡುವ ಕಾಯಿಲೆಗಳು (STD ಗಳು) ಮತ್ತು ಅವುಗಳು ಹೇಗೆ ಹರಡುತ್ತವೆ.
    • ಲೈಂಗಿಕತೆಯ ಮೇಲೆ ವಿಶೇಷವಾಗಿ ಗಮನ ಕೇಂದ್ರೀಕರಿಸುವ, ಮತ್ತು ಕಾರ್ಯಕ್ಷಮತೆಯನ್ನು ಸುಧಾರಿಸುವುದು ಹೇಗೆ ಎಂಬುದನ್ನು ತಿಳಿಸದ ಲೈಂಗಿಕ ಅನುಭವಗಳು (ಉದಾ. ಸಂಭೋಗದ ನಂತರ ನೋವನ್ನು ನಿಭಾಯಿಸುವುದು).
    • ವೀರ್ಯ ದಾನ.
    • ರೇಖಾಚಿತ್ರಗಳು ಅಥವಾ ಡಮ್ಮಿಗಳನ್ನು ಬಳಸಿಕೊಂಡು, ಸಂತಾನೋತ್ಪತ್ತಿಯ ಅಂಗಾಂಗಗಳ ವೈಜ್ಞಾನಿಕವಾಗಿ ಪ್ರತಿನಿಧಿಸುವುದು.
    • ಲೈಂಗಿಕ ಅಭಿರುಚಿ ಮತ್ತು/ಅಥವಾ ಸಂಬಂಧಗಳ ನಡುವೆ ಲೈಂಗಿಕ ಗುರುತು ಹೇಗೆ ವಿಕಸನ ಹೊಂದುತ್ತದೆ.
    • ಅಸಭ್ಯ ಅಥವಾ ಅಶ್ಲೀಲ ಪದಗಳನ್ನು (ಉದಾ. ಲೈಂಗಿಕ ಉದ್ವೇಗವನ್ನು ಉಲ್ಲೇಖಿಸುವ ಸಂಗೀತದ ಸಾಹಿತ್ಯ) ಬಳಸದ ಲೈಂಗಿಕ ಹಾಸ್ಯಗಳು ಮತ್ತು ವ್ಯಂಗ್ಯೋಕ್ತಿಗಳ ಬಳಕೆ (ಉದಾ. ಹಾಸ್ಯಮಯ ರೀತಿಯಲ್ಲಿ ಲೈಂಗಿಕ ಕ್ರಿಯೆಗಳನ್ನು ಮಿಮಿಕ್ ಮಾಡುವುದು).
    • ಲೈಂಗಿಕವಲ್ಲದ ರೀತಿಯಲ್ಲಿ ಅಸ್ವಾಭಾವಿಕ ಲೈಂಗಿಕತೆಯನ್ನು ಸೂಚಿಸುವ ಕಂಟೆಂಟ್ (ಉದಾ. “ನಿಮ್ಮ ಮೆಚ್ಚಿನ ಆಹಾರ ಅಥವಾ ಆಹಾರ ಮಾಂತ್ರಿಕವಸ್ತು ಯಾವುದು?”).

ನೃತ್ಯ

  • ಗೈರೇಟಿಂಗ್ ಅಥವಾ ಸೊಂಟ ಅಥವಾ ನಡುವನ್ನು ತಿರುಗಿಸುವಂತಹ, ಮಾದಕ ನೃತ್ಯ ಭಂಗಿಗಳು.
  • ಟ್ವೆರ್ಕಿಂಗ್ ಅಥವಾ ಸೊಂಟ ತಿರುಗಿಸುವುದು.
  • ನೃತ್ಯ ಮಾಡುವಾಗ ಕಡಿಮೆ ಉಡುಪು ಧರಿಸುವುದು.
  • ದೇಹದ ಲೈಂಗಿಕ ಅಂಗಾಗಗಳನ್ನು ಮುದ್ದಾಡುವುದು.
  • ನೃತ್ಯದಲ್ಲಿ ಪರಸ್ಪರ ನಿಕಟ ದೈಹಿಕ ಸಂಪರ್ಕ ಹೊಂದುವುದು. ಉದಾಹರಣೆಗೆ, ಅವರ ಪೆಲ್ವಿಕ್ ಭಾಗಗಳು ಪರಸ್ಪರ ನಿಕಟ ಸಂಪರ್ಕದಲ್ಲಿರುವುದು.
  • ಪೆಲ್ವಿಕ್ ಥ್ರಸ್ಟಿಂಗ್ ಅಥವಾ ಕಾಮಪ್ರಚೋದಕ ಲ್ಯಾಪ್ ನೃತ್ಯಗಳಂತಹ, ಲೈಂಗಿಕ ಕ್ರಿಯೆಗಳನ್ನು ಅನುಕರಣೆ ಮಾಡುವ ಅಥವಾ ಅನುಕರಿಸುವ ನೃತ್ಯ ಭಂಗಿಗಳನ್ನು, ವೃತ್ತಿಪರ ಸೆಟ್ಟಿಂಗ್‌ಗಳಲ್ಲಿ ಪ್ರಸ್ತುತಪಡಿಸಲಾಗುತ್ತದೆ (ಉದಾ. ನೃತ್ಯ ಸ್ಟುಡಿಯೋಗಳು).
  • ಲೈಂಗಿಕ ದೇಹದ ಭಾಗಗಳ ಮರುಕಳಿಸುವ ಶಾಟ್‌ಗಳನ್ನು ಒಳಗೊಂಡ ಸಂಗೀತ ವೀಡಿಯೊಗಳು.

ನಗ್ನತೆ

  • ನಗ್ನತೆಯೇ ಕೇಂದ್ರಬಿಂದುವಾಗಿರದಂತಹ, ಸೆನ್ಸಾರ್ ಮಾಡಲಾದ ನಗ್ನತೆ; ಉದಾಹರಣೆಗೆ, ಪಾತ್ರಧಾರಿಗಳು ನಗ್ನರಾಗಿದ್ದರೂ ಮೊಲೆತೊಟ್ಟುಗಳು, ಪೃಷ್ಠ ಅಥವಾ ಜನನಾಂಗಗಳು ಗೋಚರಿಸದ ದೃಶ್ಯಗಳು (ಅವುಗಳನ್ನು ಸಂಪೂರ್ಣವಾಗಿ ತೋರಿಸಲಾಗಿರುವುದು/ಬ್ಲರ್ ಮಾಡಲಾಗಿರುವುದು).
    • ಶೈಕ್ಷಣಿಕ ಸಂದರ್ಭಗಳಲ್ಲಿ, ಐತಿಹಾಸಿಕ ವ್ಯಕ್ತಿಗಳ ನಗ್ನತೆಯನ್ನು ಬ್ಲರ್ ಮಾಡಿರುವುದು ಅಥವಾ ಅವರು ಸೀಮಿತ ಉಡುಗೆ ತೊಟ್ಟಿರುವುದು.
    • ಲೈಂಗಿಕವಲ್ಲದ ಉದ್ದೇಶಗಳಿಗಾಗಿ ವೈದ್ಯಕೀಯ ಕಾರ್ಯವಿಧಾನ ರೀತಿಯಲ್ಲಿ ತೋರಿಸಲಾದ, ಸಂಪೂರ್ಣವಾಗಿ ಸೆನ್ಸಾರ್ ಮಾಡಲಾಗಿರುವ, ಅಸ್ಪಷ್ಟವಾಗಿರುವ ಜನನಾಂಗಗಳು.
  • ಲೈಂಗಿಕ ಸಂತೋಷವನ್ನು ಒದಗಿಸುವ ಉದ್ದೇಶವಿಲ್ಲದ ಪ್ರಸ್ತುತಿಯಲ್ಲಿ ಜನರು ಸೀಮಿತ ಉಡುಗೆ-ತೊಡುಗೆಯನ್ನು ಧರಿಸಿರುವುದರ ಚಿತ್ರಣ, ಉದಾಹರಣೆಗೆ, ಈಜುಕೊಳದಲ್ಲಿ ಬಿಕಿನಿಗಳನ್ನು ಧರಿಸಿರುವುದು.
    • ಉಡುಗೆಯ ಕುರಿತಾದ ವಿಮರ್ಶೆಗಳಲ್ಲಿ ಉಡುಗೆಯ ಸ್ವರೂಪ ಮತ್ತು ಕಾರ್ಯಾಚರಣೆಯ ಮೇಲಷ್ಟೇ ಗಮನ ಕೇಂದ್ರೀಕರಿಸುವುದು ಮತ್ತು ಒಳಗಿನ ಅಂಗಗಳು, ಉದಾಹರಣೆಗೆ ಸ್ತನಗಳ ಮೇಲೆ ನಿರಂತರವಾಗಿ ಗಮನ ಕೇಂದ್ರೀಕರಿಸದಿರುವುದು.
    • ಶಾಸ್ತ್ರೀಯ ಕಲೆಯಲ್ಲಿನ ಪಾತ್ರಗಳು ಅಥವಾ ತುಂಡುಬಟ್ಟೆಗಳಲ್ಲಿರುವ ಆದಿವಾಸಿಗಳಂತಹ ಸಚಿತ್ರ ನಗ್ನತೆಗಳನ್ನು ಒಳಗೊಂಡಿರುವ ಶಿಲ್ಪಕಲೆಗಳು, ಸ್ಕೆಚ್‌ಗಳು ಅಥವಾ ಕಂಪ್ಯೂಟರ್ ರಚಿಸಿದ ಗ್ರಾಫಿಕ್‌ಗಳು ಇತ್ಯಾದಿಗಳಲ್ಲಿನ ಕಲಾತ್ಮಕ ಅಭಿವ್ಯಕ್ತಿಗಳು.
    • ಫ್ಯಾಶನ್ ಶೋ ರನ್‌ವೇಗಳು, ವೈದ್ಯಕೀಯ ಪರೀಕ್ಷೆಗಳು ಅಥವಾ ಮನರಂಜನೆಯ ಬೀಚ್‌ನಂತಹ ಸೂಕ್ತ ಸನ್ನಿವೇಶಗಳಲ್ಲಿ ಮಹಿಳೆಯರ ಸ್ತನಗಳು/ಎದೆಯ ಸೀಳು, ಪೃಷ್ಠ ಅಥವಾ ಪುರುಷರ ದೇಹದ ಮೇಲ್ಭಾಗವನ್ನು ಅರೆಪಾರದರ್ಶಕವಾಗಿ ಅಥವಾ ಪಾರದರ್ಶಕವಾಗಿ ಆವರಿಸಿರುವುದು.
    • ಬಾಕ್ಸಿಂಗ್‌ನಂತಹ ಕ್ರೀಡೆಗಳಲ್ಲಿ ಅಗತ್ಯವಾದ ಉಡುಗೆ-ತೊಡುಗೆಯ ಭಾಗವಾಗಿ ಗೋಚರಿಸುವ ಆಂಶಿಕ ನಗ್ನತೆ.
    • ಪಾರದರ್ಶಕವಾಗಿ ಅಥವಾ ಕನಿಷ್ಠ ಉಡುಪಿನಿಂದ ಮುಚ್ಚಿರುವ ಸ್ತನಗಳು ಅಥವಾ ಪೃಷ್ಠಗಳು (ಉದಾ. ಈಜುಡುಗೆ ಧರಿಸುವಾಗ) ಎರಡೂ ಲೈಂಗಿಕವಾಗಿ ಸಂತೋಷಕರವಲ್ಲ ಮತ್ತು ವೀಡಿಯೊದ ಕೇಂದ್ರ ಬಿಂದುವಲ್ಲ.
  • ಲೈಂಗಿಕ ತೃಪ್ತಿಗಾಗಿ ಬಳಸಲಾಗುವ ವಸ್ತುಗಳನ್ನು ಹೊರತುಪಡಿಸಿ, ದೇಹದ ಜನನಾಂಗಗಳ ತೂಕ ಅಥವಾ ಗೋಚರತೆಯನ್ನು ಅನುಕರಿಸಲು ಬಳಸುವ ವಸ್ತುಗಳು.
    • ಸ್ತನಛೇದನವನ್ನು ಹೊಂದಿರುವವರು ಅಥವಾ ಟ್ರಾನ್ಸ್ ಮತ್ತು/ಅಥವಾ ಬೈನರಿ ಅಲ್ಲದ ಸಮುದಾಯದ ಸದಸ್ಯರು ಬಳಸುವ ಕೃತಕ ಸ್ತನಗಳು.
    • ಸ್ಟ್ಯಾಂಡ್-ಟು-ಪೀ ಸಾಧನಗಳು ಅಥವಾ ಫ್ಲಾಸಿಡ್ ಪ್ಯಾಕರ್‌ಗಳಂತಹ ಟ್ರಾನ್ಸ್ ಮತ್ತು/ಅಥವಾ ಬೈನರಿ ಅಲ್ಲದ ಸಮುದಾಯ ಬಳಸುವ ಸಾಧನಗಳು. 

ಸ್ತನ್ಯಪಾನದ ನಗ್ನತೆ

  • ಒಬ್ಬ ಮಹಿಳೆ ತನ್ನ ಮೊಲೆತೊಟ್ಟುಗಳನ್ನು ಮುಚ್ಚದೆ ಅಥವಾ ಗೋಚರಿಸುವಂತೆ ಮಗುವಿಗೆ ಹಾಲುಣಿಸುವುದು.
  • ಹ್ಯಾಂಡ್ ಎಕ್ಸ್‌ಪ್ರೆಶನ್ ಪ್ರಾತ್ಯಕ್ಷಿಕೆ ಅಥವಾ ಮೊಲೆತೊಟ್ಟುಗಳ ಮೂಲಕ ಸ್ತನ ಪಂಪ್ ಬಳಕೆಯನ್ನು ಮಗುವಿನ ಉಪಸ್ಥಿತಿಯೊಂದಿಗೆ ತೋರಿಸುವುದು.

ವ್ಯಾಖ್ಯಾನಗಳು:

  • “ಲೈಂಗಿಕ ಸಂತೋಷ ಒದಗಿಸುವುದು” ಎಂಬುದು ಪ್ರೇಕ್ಷಕರನ್ನು ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶವನ್ನು ಸೂಚಿಸುತ್ತದೆ.
  • “ಲೈಂಗಿಕ ವ್ಯಂಗ್ಯೋಕ್ತಿ” ಎಂಬುದು ಲೈಂಗಿಕತೆಯ ಬಗ್ಗೆ ಸೂಚಿಸುವ ಅಥವಾ ತಮಾಷೆ ಮಾಡುವ ಫ್ರೇಸ್‌ನ ಯಾವುದೇ ಬಳಕೆಯನ್ನು ಸೂಚಿಸುತ್ತದೆ.
  • “ಲೈಂಗಿಕವಾಗಿ ಸೂಚಿಸುವುದು” ಎಂಬುದು ಪ್ರೇಕ್ಷಕರನ್ನು ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶವನ್ನು ಸೂಚಿಸುವ ದೃಶ್ಯ, ಶ್ರವ್ಯ ಅಥವಾ ಲಿಖಿತ ರೂಪದಲ್ಲಿರುವ ಸಾಮಗ್ರಿಗಳನ್ನು ಸೂಚಿಸುತ್ತದೆ.
  • “ಗ್ರಾಫಿಕ್ ಆಗಿರುವುದು” ಎಂಬುದು ಪ್ರೇಕ್ಷಕರನ್ನು ಉತ್ತೇಜಿಸುವ ಸಲುವಾಗಿ ಲೈಂಗಿಕ ಕ್ರಿಯೆ ಅಥವಾ ನಗ್ನತೆಯನ್ನು ಎಷ್ಟು ಸ್ಪಷ್ಟವಾಗಿ ಪ್ರದರ್ಶಿಸಲಾಗಿದೆ ಎಂಬುದನ್ನು ಸೂಚಿಸುತ್ತದೆ.
  • "ಸ್ತನ್ಯಪಾನದ ನಗ್ನತೆ" ಎಂದರೆ ಸ್ತನ್ಯಪಾನ ಮಾಡುವಾಗ ಅಥವಾ ಹಾಲುಣಿಸುವಾಗ ತೆರೆದ ಸ್ತನಗಳು ಮತ್ತು/ಅಥವಾ ಮೊಲೆತೊಟ್ಟುಗಳನ್ನು ಸೂಚಿಸುತ್ತದೆ. ಮಗುವಿಗೆ ಹಾಲುಣಿಸುವ ಅಥವಾ ಸಕ್ರಿಯ ಹಾಲುಣಿಸುವಿಕೆಯಂತಹ ಸ್ತನ್ಯಪಾನದ ಸಂದರ್ಭೋಚಿತ ಉಲ್ಲೇಖವನ್ನು ಒಳಗೊಂಡಿರಬೇಕು.
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ಸ್ಪಷ್ಟವಾದ ಸಂಭೋಗವನ್ನು ಪ್ರದರ್ಶಿಸುವ ಶಾಸ್ತ್ರೀಯ ಕಲೆ (ಉದಾಹರಣೆಗೆ ಲೈಂಗಿಕ ಕ್ರಿಯೆಯ ಚಿತ್ರ) ಅಥವಾ ಥಂಬ್‌ನೇಲ್‌ಗಳಲ್ಲಿ ಜನನಾಂಗಗಳ ಮೇಲೆ ಗಮನ ಕೇಂದ್ರೀಕರಿಸುವುದು; ಆ್ಯನಿಮೇಟೆಡ್ ಲೈಂಗಿಕ ಕ್ರಿಯೆಗಳನ್ನು ಒಳಗೊಂಡಿರುವ ಪ್ರಚೋದಕವಲ್ಲದ ಲೈಂಗಿಕ ಶಿಕ್ಷಣ; ಲೈಂಗಿಕ ಥೀಮ್‌ಗಳನ್ನು ಒಳಗೊಂಡಿರುವ ಪ್ರಾಂಕ್‌ಗಳು; ಕನಿಷ್ಠ ಉಡುಪುಗಳ ಮೇಲೆ ಕೇಂದ್ರೀಕರಿಸಿದ ನೃತ್ಯ; ನೃತ್ಯದಲ್ಲಿ ಲೈಂಗಿಕ ದೇಹದ ಭಾಗಗಳ ಮೇಲೆ ಉದ್ದೇಶಪೂರ್ವಕ ಸ್ಪರ್ಶ ಅಥವಾ ನಿರಂತರ ಗಮನ.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಲೈಂಗಿಕ ಆನಂದ ಒದಗಿಸುವ ಕಂಟೆಂಟ್

  • ಲೈಂಗಿಕಗೊಳಿಸಿದ ಥೀಮ್‌ಗಳಿರುವ (ದಾರಿ ತಪ್ಪಿಸುವ ಸಂಕೇತಗಳು ಸೇರಿದ ಹಾಗೆ) ಶೀರ್ಷಿಕೆಗಳು ಅಥವಾ ಥಂಬ್‌ನೇಲ್‌ಗಳು.
    • ಲೈಂಗಿಕತೆಯ ಥೀಮ್‌ಗಳೊಂದಿಗೆ ಥಂಬ್‌ನೇಲ್‌ಗಳು ಅಥವಾ ಶೀರ್ಷಿಕೆಗಳನ್ನು ಹೊಂದಿರುವ ಸಂಗೀತ ವೀಡಿಯೊಗಳು (ದಾರಿತಪ್ಪಿಸುವ ಸಂಕೇತಗಳನ್ನು ಒಳಗೊಂಡಂತೆ).
    • ಲೈಂಗಿಕ ಚಟುವಟಿಕೆಗಳ ವಿವರಣೆಗಳು ಅಥವಾ ಸೂಚಿತ ಉಲ್ಲೇಖಗಳು (ಉದಾ. ಎಮೋಜಿಗಳು ಅಥವಾ ಗ್ರಾಫಿಕ್ಸ್ ಬಳಸಿಕೊಂಡು ದೇಹದ ಲೈಂಗಿಕ ಅಂಗಾಂಗಗಳನ್ನು ಸೂಚ್ಯವಾಗಿ ಉಲ್ಲೇಖಿಸುವುದು).
    • ಥಂಬ್‌ನೇಲ್‌ನಲ್ಲಿ ಲೈಂಗಿಕ ಕ್ರಿಯೆಗಳನ್ನು ಸೂಚಿಸುವ ಯಾವುದೇ ವಿಷಯವನ್ನು ಸರ್ಕಲ್ ಮಾಡುವುದು ಅಥವಾ ಅನ್ಯ ರೀತಿಯಲ್ಲಿ ಅದರತ್ತ ಗಮನ ಸೆಳೆಯುವುದು.
    • ಲೈಂಗಿಕ ಕಾರ್ಯಕರ್ತರನ್ನು ಒಂದು ಘಟಕವಾಗಿ ಫೀಚರ್ ಮಾಡುವುದು.
    • ಲೈಂಗಿಕ ಚಟುವಟಿಕೆಗಳು (ಸೂಚಿತ ಲೈಂಗಿಕ ಕ್ರಿಯೆಗಳು ಸೇರಿದ ಹಾಗೆ).
    • ಲೈಂಗಿಕ ವ್ಯಂಗ್ಯೋಕ್ತಿಗಳು, ಉದಾ. ಲೈಂಗಿಕ ಸುಖವನ್ನು ಅನುಭವಿಸುವ ಧ್ವನಿಗಳು ಅಥವಾ ಕಿವಿ ಕಚ್ಚುವುದು.
    • ಲೈಂಗಿಕ ಆಟಿಕೆಗಳು ಅಥವಾ ಸಾಧನಳು, ಬಳಸದಿದ್ದರೂ ಸಹ ಕಂಟೆಂಟ್‌ನಲ್ಲಿ ಫೀಚರ್ ಮಾಡಲಾಗಿದೆ. 
  • ಶೈಕ್ಷಣಿಕ, ಸಾಕ್ಷ್ಯಚಿತ್ರ ಅಥವಾ ನಾಟಕೀಯ ಕಂಟೆಂಟ್‌ನಲ್ಲಿ ಪ್ರಚೋದಿಸದ ಲೈಂಗಿಕ ಚಟುವಟಿಕೆಗಳ ಚಿತ್ರಣ.
    • ಶೈಕ್ಷಣಿಕ ಉದ್ದೇಶಗಳಿಗಾಗಿ ಲೈಂಗಿಕ ಚಟುವಟಿಕೆಗಳು ಮತ್ತು ಅವುಗಳ ಇತಿಹಾಸವನ್ನು ವಿವರಿಸುವುದು, ಉದಾಹರಣೆಗೆ, ವೈದ್ಯಕೀಯ ವಿಷಯಗಳು.
  • ಲೈಂಗಿಕತೆಗೆ ಸಂಬಂಧಿಸಿದ ಕಂಟೆಂಟ್, ಉದಾಹರಣೆಗೆ, ಲೈಂಗಿಕ ಉದ್ಯಮದ ಕುರಿತು ಸಾಕ್ಷ್ಯಚಿತ್ರಗಳು.
  • ಇವುಗಳನ್ನು ಒಳಗೊಂಡಿರುವ ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರ ಕಂಟೆಂಟ್:
    • ಲೈಂಗಿಕ ಕಾರ್ಯಕರ್ತರಾಗಿ ಕಲಿತಂತಹ ತಮ್ಮ ವೈಯಕ್ತಿಕ ಸಲಹೆಗಳು ಅಥವಾ ನಿಕಟ ಸಂಭಾಷಣೆಯ ಭಾಗವಾಗಿ ಬಳಸುವ ಅಶ್ಲೀಲ ಭಾಷೆಗಳಂತಹ ನಿಕಟ ಲೈಂಗಿಕ ಅನುಭವಗಳ ಕುರಿತು ಚರ್ಚೆ.
  • ಶಾಸ್ತ್ರೀಯ ಕಲೆಗಳಲ್ಲಿ ವಯಸ್ಕರ ಕಂಟೆಂಟ್ ಅನ್ನು ಒಳಗೊಂಡ ಶೀರ್ಷಿಕೆಗಳು ಅಥವಾ ಥಂಬ್‌ನೇಲ್‌ಗಳು.

ನೃತ್ಯ

  • ಟ್ವೆರ್ಕಿಂಗ್ ಅಥವಾ ಗ್ರೈಂಡಿಂಗ್, ಇದು ನರ್ತಕಿಯ ಚಿಕ್ಕ ಉಡುಪುಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ.
  • ನೃತ್ಯ ಸಂಗಾತಿಯು ತನ್ನ ಸಂಗಾತಿಯ ಸ್ತನಗಳನ್ನು ಅಥವಾ ಪೃಷ್ಠವನ್ನು ಹಿಡಿದಿಟ್ಟುಕೊಳ್ಳುವ ನೃತ್ಯಗಳು ಅಥವಾ ಒಬ್ಬ ನರ್ತಕಿ ತಮ್ಮ ಸಂಗಾತಿಯ ಬಟ್ಟೆಯ ಕೆಳಗೆ ತಮ್ಮ ಕೈಗಳನ್ನು ಹಾಕುವ ನೃತ್ಯಗಳು.
  • ನೃತ್ಯದಲ್ಲಿ ಲೈಂಗಿಕವಾಗಿ ದೇಹದ ಭಾಗಗಳನ್ನು ಉದ್ದೇಶಪೂರ್ವಕವಾಗಿ ಜೂಮ್ ಮಾಡುವುದು.

ನಗ್ನತೆ

  • ಸಂಪೂರ್ಣ ನಗ್ನತೆಯನ್ನು ಪ್ರಸ್ತುತಪಡಿಸುವ ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರದ ಕಂಟೆಂಟ್.
    • ಲೈಂಗಿಕತೆ ಅಥವಾ ನಗ್ನತೆಗೆ ಸಂಬಂಧಿಸಿದ ಐತಿಹಾಸಿಕ ಅಥವಾ ಔದ್ಯಮಿಕ ಅವಲೋಕನಗಳು; ಉದಾಹರಣೆಗೆ, ಸಂಪೂರ್ಣ ದೇಹದ ಪೇಂಟಿಂಗ್‌ಗಳು.
  • ಗುರುತಿಸಬಹುದಾದ ಜನನಾಂಗಗಳನ್ನು ಒಳಗೊಂಡಿರುವ ಶಾಸ್ತ್ರೀಯ ಕಲೆ.

ವ್ಯಾಖ್ಯಾನಗಳು:

  • “ಸೆನ್ಸಾರ್ ಮಾಡಲಾದ ನಗ್ನತೆ” ಎಂದರೆ ಬ್ಲರ್ ಮಾಡುವುದು, ಕಪ್ಪು ಪಟ್ಟಿಗಳನ್ನು ಬಳಸುವ ಮೂಲಕ ಅಥವಾ ಪಿಕ್ಸಲೇಟ್ ಮಾಡುವ ಮೂಲಕ ನಗ್ನತೆಯನ್ನು ಮರೆಮಾಡಿರುವುದು.
  • ಸೂಚಿತ ಲೈಂಗಿಕ ಕ್ರಿಯೆ: ಲೈಂಗಿಕ ಸಂಭೋಗವನ್ನು ಅನುಕರಿಸುವ ವರ್ತನೆ, ಉದಾಹರಣೆಗೆ ಡ್ರೈ ಹಂಪಿಂಗ್.
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಪ್ರದರ್ಶಿಸಲಾದ, ಕನಿಷ್ಠವಾಗಿ ಮುಚ್ಚಿದ ದೇಹದ ಲೈಂಗಿಕ ಭಾಗಗಳು ಅಥವಾ ಪೂರ್ಣ ನಗ್ನತೆ; ದೃಶ್ಯದಲ್ಲಿ ಮಗು ಇಲ್ಲದ ಎದೆ ಹಾಲುಣಿಸುವ ನಗ್ನತೆ; ಲೈಂಗಿಕ ಕ್ರಿಯೆಗಳು (ಅಸ್ಪಷ್ಟ ಅಥವಾ ಸೂಚ್ಯವಾಗಿದ್ದರೂ ಸಹ), ಲೈಂಗಿಕ ವಿಷಯಗಳ ಚರ್ಚೆ, ಉದಾಹರಣೆಗೆ ಲೈಂಗಿಕ ಪ್ರಚೋದಕಗಳು, ಸಲಹೆಗಳು, ಅನುಭವಗಳು; ಲೈಂಗಿಕ ಕಂಟೆಂಟ್ (ಪಠ್ಯಗಳು ಅಥವಾ ಲಿಂಕ್‌ಗಳು ಸೇರಿದಂತೆ) ಇರುವ ವೀಡಿಯೊ ಥಂಬ್‌ನೇಲ್; ಲೈಂಗಿಕವಾಗಿ ಪ್ರಚೋದಿಸುವ ದೃಶ್ಯಗಳು ಮತ್ತು ಗೆಸ್ಚರ್‌ಗಳು; ಲೈಂಗಿಕ ಆಟಿಕೆಗಳು ಅಥವಾ ಸಾಧನಗಳು ಕಾಣುವುದು; ಲೈಂಗಿಕ ಉದ್ಯಮ ಮತ್ತು ಅದರ ವೃತ್ತಿಪರರಿಗೆ ಸಂಬಂಧಿಸಿದ ಕಂಟೆಂಟ್; ಜನನಾಂಗಗಳು ಅಥವಾ ಮಿಲನದ ದೃಶ್ಯಗಳನ್ನು ಒಳಗೊಂಡಿರುವ ಪ್ರಾಣಿಗಳ ಲೈಂಗಿಕತೆ; ನೃತ್ಯದಲ್ಲಿ ಲೈಂಗಿಕ ಚಲನೆಗಳು ಅಥವಾ ಕ್ರಿಯೆಗಳನ್ನು ಅನುಕರಿಸುವುದು ಅಥವಾ ಅನುಕರಿಸುವುದು; ಪ್ರೇಕ್ಷಕರನ್ನು ಪ್ರಚೋದಿಸಲು ಸ್ಪಷ್ಟವಾಗಿ ಉದ್ದೇಶಿಸಲಾದ ಕಾಮಪ್ರಚೋದಕ ನೃತ್ಯಗಳು.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಲೈಂಗಿಕ ಆನಂದ ಒದಗಿಸುವ ಕಂಟೆಂಟ್

  • ಲೈಂಗಿಕಗೊಳಿಸಿದ ಥೀಮ್‌ಗಳಿರುವ (ದಾರಿ ತಪ್ಪಿಸುವ ಸಂಕೇತಗಳು ಸೇರಿದ ಹಾಗೆ) ಶೀರ್ಷಿಕೆಗಳು ಅಥವಾ ಥಂಬ್‌ನೇಲ್‌ಗಳು.
    • ಲೈಂಗಿಕ ಚಟುವಟಿಕೆಗಳ ವಿವರಣೆಗಳು ಅಥವಾ ಸೂಚಿತ ಉಲ್ಲೇಖಗಳು (ಉದಾ. ಎಮೋಜಿಗಳು ಅಥವಾ ಗ್ರಾಫಿಕ್ಸ್ ಬಳಸಿಕೊಂಡು ದೇಹದ ಲೈಂಗಿಕ ಅಂಗಾಂಗಗಳನ್ನು ಸೂಚ್ಯವಾಗಿ ಉಲ್ಲೇಖಿಸುವುದು).
    • ಥಂಬ್‌ನೇಲ್‌ನಲ್ಲಿ ಲೈಂಗಿಕ ಕ್ರಿಯೆಗಳನ್ನು ಸೂಚಿಸುವ ಯಾವುದೇ ವಿಷಯವನ್ನು ಸರ್ಕಲ್ ಮಾಡುವುದು ಅಥವಾ ಅನ್ಯ ರೀತಿಯಲ್ಲಿ ಅದರತ್ತ ಗಮನ ಸೆಳೆಯುವುದು.
    • ಲೈಂಗಿಕ ಕಂಟೆಂಟ್ ಅನ್ನು ಒಳಗೊಂಡಿರುತ್ತದೆ ಎಂದು ಭರವಸೆ ನೀಡುವ, ಆದರೆ ವಾಸ್ತವವಾಗಿ ಲೈಂಗಿಕ ವಿಷಯವನ್ನು ಹೊಂದಿರದ ತಪ್ಪುದಾರಿಗೆಳೆಯುವ ಶೀರ್ಷಿಕೆಗಳು (ಉದಾ. "ಪೋರ್ನ್ ವೀಕ್ಷಣೆ" ಶೀರ್ಷಿಕೆಯ ಅಡುಗೆ ಸಂಬಂಧಿತ ವೀಡಿಯೊಗಳು).
    • ವೈದ್ಯಕೀಯ ವಿಚಾರವಾಗಿ ಕಂಪ್ಯೂಟರ್ ಬಳಸಿ ರಚಿಸಲಾದ ನಗ್ನತೆ.
  • ಫೋಕಲ್, ಸೂಚಿತ ಲೈಂಗಿಕ ಕ್ರಿಯೆ ಅಥವಾ ವರ್ತನೆ.
    • ಅಲುಗಾಡುವ ವಸ್ತುಗಳು, ಲೈಂಗಿಕ ಸುಖವನ್ನು ಅನುಭವಿಸುವ ಧ್ವನಿಗಳು, ಇತ್ಯಾದಿಗಳಂತಹ ಲೈಂಗಿಕ ಚಟುವಟಿಕೆ ಸಂಭವಿಸುತ್ತಿದೆ ಎಂದು ವೀಡಿಯೊದ ಮುಖ್ಯ ವಿಷಯವನ್ನು ಸೂಚಿಸುತ್ತದೆ.
  • ಲೈಂಗಿಕ ಆಟಿಕೆಗಳು, ಲೈಂಗಿಕ ಸಾಧನಗಳು ಅಥವಾ ಲೈಂಗಿಕ ಚಟುವಟಿಕೆಯನ್ನು ವರ್ಧಿಸುವ ಉದ್ದೇಶವಿರುವ ಇತರ ಉತ್ಪನ್ನಗಳು ಬಳಕೆಯಲ್ಲಿಲ್ಲದಿದ್ದರೂ, ಅವುಗಳ ಚಿತ್ರಣವಿರುವುದು.
    • ಲೈಂಗಿಕ ವಿಷಯಗಳಿಗೆ ಸಂಬಂಧವೇ ಇಲ್ಲದ ವೀಡಿಯೊದಲ್ಲಿ ಲೈಂಗಿಕ ಸಾಧನದ ಉದ್ದೇಶಪೂರ್ವಕವಲ್ಲದ ಪ್ರದರ್ಶನ (ಉದಾ. ಹಿನ್ನೆಲೆಯಲ್ಲಿ ಕಾಣಿಸುವುದು).
    • ಒಂದು ಚರ್ಚೆಯ ಸಂದರ್ಭದಲ್ಲಿ, ಜನನಾಂಗವನ್ನು ಹೋಲುವ ವೈದ್ಯಕೀಯ ವಸ್ತುವನ್ನು ತೋರಿಸುವುದು.
  • ಲೈಂಗಿಕ ಗ್ರಾಫಿಕ್ ಡ್ಯಾನ್ಸ್, ಅನುಚಿತವಾಗಿ ಸ್ಪರ್ಶಿಸುವಿಕೆ ಅಥವಾ ಪ್ರೇಕ್ಷಕರನ್ನು ಲೈಂಗಿಕವಾಗಿ ಉತ್ತೇಜಿಸುವ ಉದ್ದೇಶವಿರುವ ಲೈಂಗಿಕ ಹಾವಭಾವಗಳಂತಹ ಲೈಂಗಿಕ ಉದ್ವೇಗದ ದೃಶ್ಯಗಳು.
    • ದೊಡ್ಡ ನಿರೂಪಣೆಯ ಭಾಗವಾಗಿ ಲೈಂಗಿಕ ಚಟುವಟಿಕೆಗಳ (ಸೂಚಿತ ಲೈಂಗಿಕ ಕ್ರಿಯೆಗಳು ಸೇರಿದ ಹಾಗೆ) ಕುರಿತು ಕಿರು ದೃಶ್ಯಗಳು.
    • ಲೈಂಗಿಕ ಉದ್ವೇಗವನ್ನು ತೋರಿಸುವುದೇ ಮುಖ್ಯವಾದ ಉದ್ದೇಶ ಎಂಬಂತಹ ದೃಶ್ಯಗಳು.
  • ಲೈಂಗಿಕ ಸಂತೋಷ ಒದಗಿಸದ ವಸ್ತುಗಳನ್ನು ಬಳಸುವ ಲೈಂಗಿಕ ವ್ಯಂಗ್ಯೋಕ್ತಿಗಳು:
    • ವಾಸ್ತವಿಕ ಜನನಾಂಗ ಹೊಂದಿರುವ ಮಾನವ ಪ್ರತಿಮೆಗಳಂತಹ ಜನನಾಂಗವನ್ನು ಹೋಲುವ ವಸ್ತುಗಳು.
    • ಜನನಾಂಗಗಳನ್ನು ಹೋಲುವ ಮತ್ತು ಪ್ರೇಕ್ಷಕರನ್ನು ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶದೊಂದಿಗೆ ದೈನಂದಿನ ವಸ್ತುಗಳ (ಉದಾ. ಬದನೆ) ಅಥವಾ ಎಮೋಜಿಗಳ ಬಳಕೆ.
  • ಸ್ಪಷ್ಟ ಲೈಂಗಿಕತೆಯನ್ನು ಹೊಂದಿರುವ ಆಡಿಯೊ, ಪಠ್ಯ ಅಥವಾ ಸಂಭಾಷಣೆ:
    • ಪೋರ್ನೋಗ್ರಾಫಿ ಅಥವಾ ಇತರ ಲೈಂಗಿಕ ಸೇವೆಗಳಂತಹ (ಪಾವತಿಸಿದ ಸಬ್‌ಸ್ಕ್ರಿಪ್ಶನ್ ವಯಸ್ಕರ ಕಂಟೆಂಟ್ ಪ್ಲ್ಯಾಟ್‌ಫಾರ್ಮ್‌ಗಳ ಲಿಂಕ್‌ಗಳನ್ನು ಒಳಗೊಂಡಂತೆ) ಸಂಭೋಗಕ್ಕೆ ಸಂಬಂಧಿಸಿದ ಮನರಂಜನೆ.
    • ಲೈಂಗಿಕ ಸಂತೋಷ ಒದಗಿಸುವ ಉದ್ದೇಶ ಹೊಂದಿರುವ ಗ್ರಾಫಿಕ್ ಲೈಂಗಿಕ ಕ್ರಿಯೆಗಳು ಅಥವಾ ಸಿಮ್ಯುಲೇಶನ್‌ಗಳು.
    • ಲೈಂಗಿಕತೆಯನ್ನು ಸೂಚಿಸುವ ಚಿತ್ರಣಗಳು (ಗೈಡ್‌ಗಳು ಅಥವಾ ಹಂತ ಹಂತದ ಸೂಚನೆಗಳು).
    • ಲೈಂಗಿಕ ಹಗರಣಗಳ ಮೇಲೆ ಗಮನ ಕೇಂದ್ರೀಕರಿಸುವುದು ಅಥವಾ ಖಾಸಗಿ ಆಪ್ತ ವಿಷಯಗಳನ್ನು ಲೀಕ್ ಮಾಡುವುದು.
    • ಲೈಂಗಿಕ ಚಟುವಟಿಕೆಗಳನ್ನು ಅನುಕರಿಸುವುದು ಅಥವಾ ಮಿಮಿಕ್ ಮಾಡುವುದು (ಉದಾ. ಪೋರ್ನೋಗ್ರಾಫಿಕ್ ಮಾಧ್ಯಮ).
    • ಪ್ರತಿಫಲ ಪಡೆದುಕೊಂಡು ಲೈಂಗಿಕ ಕ್ರಿಯೆಗಳ ಕುರಿತು ಪ್ರಚಾರ ಮಾಡುವುದು.
    • ಲೈಂಗಿಕ ಆಟಿಕೆಗಳ (ಅಥವಾ ಲೈಂಗಿಕ ಚಟುವಟಿಕೆಯನ್ನು ವರ್ಧಿಸುವ ಉದ್ದೇಶವಿರುವ ಇತರ ಉತ್ಪನ್ನಗಳು) ನಿಜವಾದ ಬಳಕೆ.
    • ದಾರಿತಪ್ಪಿಸುವ ಲೈಂಗಿಕ ನಡವಳಿಕೆ ಅಥವಾ ನಗ್ನತೆಗೆ ಸಂಬಂಧಿಸಿದ ಕಂಟೆಂಟ್.
      • ಸಾಮಾನ್ಯ ವಸ್ತುಗಳು ಅಥವಾ ದೃಶ್ಯಗಳ ಲೈಂಗಿಕ ಚಿತ್ರಣಗಳೊಂದಿಗೆ ವೀಕ್ಷಕರನ್ನು ದಾರಿ ತಪ್ಪಿಸಲು ಉದ್ದೇಶಿಸಿರುವ ಥಂಬ್‌ನೇಲ್‌ಗಳು, ಬಹುತೇಕ ನಿಜವಾದ ವೀಡಿಯೊ ವಿಷಯಕ್ಕೆ ಸಂಬಂಧಿಸಿರುವುದಿಲ್ಲ.
    • ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶದಿಂದ ಎಡಿಟ್ ಮಾಡಲಾದ ದೃಶ್ಯಗಳು.
      • ಲೈಂಗಿಕವಾಗಿ ಸಂತೋಷಪಡಿಸುವ ಕ್ರಿಯೆಗಳ ಸಂಕಲನಗಳು, ಉದಾಹರಣೆಗೆ ಮೇಕಿಂಗ್ ಔಟ್ ಅಥವಾ ಹಂಪಿಂಗ್.
      • ಲೈಂಗಿಕವಾಗಿ ಸಂತೋಷಪಡಿಸುವ ಶೀರ್ಷಿಕೆಗಳು (ಉದಾ. "ಹಾಟ್ ಮೇಕ್-ಔಟ್ ಸೆಶನ್").
    • ಈ ಕೆಳಗಿನ ಸಂದರ್ಭಗಳಲ್ಲಿ ಪ್ರಾಣಿಗಳ ಲೈಂಗಿಕತೆ:
      • ಜನನಾಂಗಗಳ ಮೇಲೆ ಕೇಂದ್ರೀಕರಿಸಿದ ಸಂಯೋಗದ ವೀಡಿಯೊಗಳು.
      • ಪ್ರಾಣಿಗಳ ಜನನಾಂಗಗಳು ಅಥವಾ ಸಂಯೋಗವನ್ನು ಲೈಂಗಿಕವಾಗಿ ಸಂತೋಷಪಡಿಸುವ ರೀತಿಯಲ್ಲಿ ತೋರಿಸಿರುವುದು.
  • ಹಸ್ತಮೈಥುನ, ಉದ್ರೇಕ, ಸಂಭೋಗ, ಸಲಹೆಗಳು ಅಥವಾ ಇತರ ಲೈಂಗಿಕ ಕ್ರಿಯೆಗಳಂತಹ ಆಪ್ತ ಲೈಂಗಿಕ ಅನುಭವಗಳ ಕುರಿತು ಚರ್ಚೆಗಳು. ಇದರಲ್ಲಿ, ಲೈಂಗಿಕತೆಯ ಕುರಿತು ವಿವರವಾದ ಮಾತುಕತೆಗಳು ಸೇರಿದ ಹಾಗೆ ಲೈಂಗಿಕ ವ್ಯಂಗ್ಯೋಕ್ತಿಗಳು ಅಥವಾ ಅಶ್ಲೀಲ ಲೈಂಗಿಕತೆ ಇರುವ ಪಠ್ಯ ಅಥವಾ ಆಡಿಯೋ ಸಹ ಸೇರಿರಬಹುದು.
    • ಸಂಭೋಗದ ಸಲಹೆಗಳು ಅಥವಾ ಸಂಭೋಗವನ್ನು ಮಾಡುವುದು ಹೇಗೆ ಎಂಬುದರ ಕುರಿತು ಸ್ಪಷ್ಟವಾದ ಚರ್ಚೆಗಳು.
    • ಲೈಂಗಿಕ ಕ್ರಿಯೆಗಳ ಚಿತ್ರಗಳು ಅಥವಾ ವಿಶುವಲ್ ದೃಶ್ಯಗಳಿಲ್ಲದ ಆಡಿಯೋ ಅಥವಾ ವೀಡಿಯೊ ಸಂಯೋಜನೆಗಳು (ಉದಾ. ಕಿವಿ ನೆಕ್ಕುವ ಮತ್ತು ಕಚ್ಚುವ ಧ್ವನಿಗಳು).
    • ಪ್ರೇಕ್ಷಕರನ್ನು ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶವಿರುವ ಲೈಂಗಿಕ ಚಟುವಟಿಕೆಗಳ ವಿವರಣೆಗಳು.
    • ವಿವರಣಾತ್ಮಕವಾಗಿರದಿದ್ದರೂ ಸಹ, ಅಸಹಜ ಲೈಂಗಿಕ ಬಯಕೆಗಳ ಉಲ್ಲೇಖಗಳು.
    • ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರವನ್ನು ಹೊರತುಪಡಿಸಿ, 18+, 21+, ‘ವಯಸ್ಕರಿಗೆ ಮಾತ್ರ,’ ‘ಪೋರ್ನ್,’ ಇತ್ಯಾದಿ ವಯಸ್ಕರ ಕಂಟೆಂಟ್ ಅನ್ನು ಉಲ್ಲೇಖಿಸುವ ಶೀರ್ಷಿಕೆಗಳು ಅಥವಾ ಥಂಬ್‌ನೇಲ್‌ಗಳು.
    • ವೀಕ್ಷಕರಿಗೆ ಲೈಂಗಿಕ ಸಂತೋಷ ಒದಗಿಸುವ ಉದ್ದೇಶದಿಂದ ದೇಹದ ಲೈಂಗಿಕ ಅಂಗಗಳು ಅಥವಾ ಕ್ರಿಯೆಗಳನ್ನು ಪ್ರತಿನಿಧಿಸುವ ಇಮೋಟಿಕಾನ್‌ಗಳು ಅಥವಾ ಎಮೋಜಿಗಳನ್ನು ಪಠ್ಯದಲ್ಲಿ ಬಳಸುವುದು.
  • ಪ್ರೇಕ್ಷಕರನ್ನು ಸಂತೋಷಪಡಿಸುವ ಉದ್ದೇಶದಿಂದ ವಯಸ್ಕರನ್ನು ಗುರಿಯಾಗಿಸುವ ಅಥವಾ ವೀಡಿಯೊ ಗೇಮ್ ಪಾತ್ರಗಳನ್ನು ಲೈಂಗಿಕಗೊಳಿಸುವ ಲೈಂಗಿಕ ವೀಡಿಯೊ ಗೇಮ್‌ಗಳು.

ನೃತ್ಯ

  • ಒಬ್ಬ ನೃತ್ಯಗಾರರು ತಮ್ಮ ಜನನಾಂಗವನ್ನು ತಮ್ಮ ಸಂಗಾತಿ ನೃತ್ಯಗಾರರ ಜನನಾಂಗ ಪ್ರದೇಶಗಕ್ಕೆ ಪ್ರಭಲವಾಗಿ ನೂಕುವಂತಹ ಬೆಚ್ಚಿಬೀಳಿಸುವ ಭಂಗಿಗಳು.
  • ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವಂತೆ ಒಬ್ಬರ ಕಾಲುಗಳನ್ನು ತಮ್ಮ ನೃತ್ಯ ಸಂಗಾತಿಯ ಕಡೆಗೆ ತೆರೆದುಕೊಳ್ಳುವುದು ಅಥವಾ ಹರಡುವುದು.
  • ಲ್ಯಾಪ್ ಡ್ಯಾನ್ಸ್‌ಗಳು ಅಥವಾ ಸ್ಟ್ರಿಪ್ ಟೀಸ್‌ಗಳು, ನೃತ್ಯ ಸಂಯೋಜನೆಯ ನೃತ್ಯ, ಸಂಗೀತ ವೀಡಿಯೋ ಅಥವಾ ವೃತ್ತಿಪರ ಸೆಟ್ಟಿಂಗ್‌ನಲ್ಲಿ ಪ್ರದರ್ಶಿಸದ ಹೊರತುಪಡಿಸಿ.

ನಗ್ನತೆ

  • ಚಿತ್ರವನ್ನು ಪಿಕ್ಸಲೇಟ್ ಮಾಡಿ ತೋರಿಸಿದ್ದರೂ ಅಥವಾ ಸೆನ್ಸಾರ್ ಮಾಡಿದ್ದರೂ ದೇಹದ ಲೈಂಗಿಕ ಅಂಗಾಂಗಗಳನ್ನು ಗುರುತಿಸಲು ಸಾಧ್ಯವಾಗುವುದು.
    • ನಗ್ನ ದೇಹಗಳನ್ನು ನಕ್ಷತ್ರ ರೂಪದ ಆಕೃತಿಗಳಿಂದ ಆವರಿಸಿದ್ದರೂ ಅಥವಾ ಬ್ಲರ್ ಮಾಡಿದ್ದರೂ, ರೂಪರೇಖೆಗಳ ಮೂಲಕ ಅವುಗಳನ್ನು ಗುರುತಿಸಲು ಸಾಧ್ಯವಾಗುವುದು.
  • ಕ್ಷಣಿಕವಲ್ಲದ, ನಗ್ನತೆಯ ಪ್ರದರ್ಶನ (ಆ್ಯನಿಮೇಟ್ ಮಾಡಿರುವುದು, ನಿಜ-ಜೀವನ ಅಥವಾ ನಾಟಕೀಯ).
    • ಸ್ತನಗಳು ಅಥವಾ ಜನನಾಂಗದ ಪ್ರದೇಶಗಳನ್ನು (ಉದಾ. ವ್ಯಕ್ತಿಯ ಒಳ ಉಡುಪು ಅಥವಾ ಈಜುಡುಗೆಯಿಂದ ಹೊರಚಾಚಿರುವ ಅವರ ಜನನಾಂಗದ ಪ್ರದೇಶದ "ಉಬ್ಬು" ಎಂಬುದನ್ನು ಫೀಚರ್ ಮಾಡುವ ಕಂಟೆಂಟ್) ಫೀಚರ್ ಮಾಡುವ ಕಂಟೆಂಟ್ (ಫೋಕಸ್ ಅಥವಾ ಪುನರಾವರ್ತಿತ ಪ್ರದರ್ಶನದ ಮೂಲಕ).
  • ಪ್ರೇಕ್ಷಕರನ್ನು ಲೈಂಗಿಕವಾಗಿ ಪ್ರಚೋದಿಸುವ ಉದ್ದೇಶದಿಂದ, ಎದೆಯ ಸೀಳು ಅಥವಾ ಉಬ್ಬುಗಳನ್ನು ಪುನರಾವರ್ತಿತವಾಗಿ ಅಥವಾ ಕೇಂದ್ರಬಿಂದುವಾಗಿ ತೋರಿಸುವ ಚಿತ್ರಣಗಳು.
    • ಜನನಾಂಗಗಳ ನಿಮಿರುವಿಕೆಯನ್ನು ಗುರುತಿಸಲು ಸಾಧ್ಯವಿರುವಂತಹ ಸಂಯೋಜನೆಗಳು.
    • ಆಗಾಗ್ಗೆ ಕಾಣಿಸಿಕೊಳ್ಳುವ ಕನಿಷ್ಠ ಉಡುಗೆಯಿಂದ ಮುಚ್ಚಿದ (ಉದಾ. ಥಾಂಗ್ಸ್) ಲೈಂಗಿಕ ದೇಹದ ಭಾಗಗಳು (ಉದಾ. ಸ್ತನಗಳು, ಕ್ಲೀವೇಜ್, ಪೃಷ್ಠಗಳು, ಇತ್ಯಾದಿ).
  • ದೇಹದ ಲೈಂಗಿಕ ಅಂಗಾಂಗಗಳು, ಲೈಂಗಿಕ ಕ್ರಿಯೆಗಳನ್ನು ಸಂಪೂರ್ಣವಾಗಿ ತೆರೆದಿಡುವ ನೈಜ ಅಥವಾ ಆ್ಯನಿಮೇಟ್ ಮಾಡಲಾದ ನಗ್ನತೆ. 
  • ಮಕ್ಕಳ ನಗ್ನತೆ
    • ಡೈಪರ್ ಬದಲಾಯಿಸುವಾಗ ಅಥವಾ ಶಿಶುಗಳು ಸಂಪೂರ್ಣ ಬೆತ್ತಲೆಯಾಗಿ ಈಜುವಂತಹ ಜನನಾಂಗಗಳ ಗೋಚರತೆಯನ್ನು ತೋರಿಸುವ ಕಂಟೆಂಟ್.

ಸ್ತನ್ಯಪಾನದ ನಗ್ನತೆ

  • ಮೊಲೆತೊಟ್ಟುಗಳು ಗೋಚರಿಸುವ ಹಾಗೆ ಆದರೆ ಮಗುವಿನ ಉಪಸ್ಥಿತಿ ಇಲ್ಲದೇ ಸ್ತನ ಪಂಪ್ ಅನ್ನು ಹೇಗೆ ಬಳಸುವುದು ಎಂಬುದರ ಕುರಿತಾದ ಶೈಕ್ಷಣಿಕ ಕಂಟೆಂಟ್.
  • ದೃಶ್ಯದಲ್ಲಿ ಮಗುವಿನ ಉಪಸ್ಥಿತಿಯಿಲ್ಲದೆ, ಮೊಲೆತೊಟ್ಟುಗಳು ಗೋಚರಿಸುವ ಹ್ಯಾಂಡ್ ಎಕ್ಸ್‌ಪ್ರೆಶನ್ ಟ್ಯುಟೋರಿಯಲ್.
  • ದೃಶ್ಯದಲ್ಲಿ ಮಗುವಿನ ಉಪಸ್ಥಿತಿ ಇಲ್ಲದೆ ಕಪ್‌ನಲ್ಲಿ ಹಾಲುಣಿಸುವ ಮಹಿಳೆಯನ್ನು ತೋರಿಸುತ್ತಿರುವುದು.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಆಘಾತಕಾರಿ ಕಂಟೆಂಟ್

ವೀಕ್ಷಕರಿಗೆ ಅಸಮಾಧಾನ, ಅಸಹ್ಯ ಅಥವಾ ಆಘಾತವನ್ನು ಉಂಟುಮಾಡುವ ಕಂಟೆಂಟ್ ಜಾಹೀರಾತಿಗೆ ಸೂಕ್ತವಲ್ಲ. ಸೆನ್ಸಾರ್ ಮಾಡದ ಆಘಾತಕಾರಿ ಅಂಶಗಳು ನಿಮ್ಮ ವೀಡಿಯೊ ಜಾಹೀರಾತಿಗೆ ಸೂಕ್ತವಲ್ಲ ಎಂಬುದಕ್ಕೆ ಕಾರಣವಾಗುವುದಿಲ್ಲ, ಆದರೆ ಸಂದರ್ಭವು ಮುಖ್ಯವಾಗುತ್ತದೆ.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಶೈಕ್ಷಣಿಕ, ಸಾಕ್ಷ್ಯಚಿತ್ರ ಅಥವಾ ಇತರ ಉದ್ದೇಶಗಳ ಸಾಂದರ್ಭಿಕತೆಯೊಂದಿಗೆ ಸೆನ್ಸಾರ್ ಮಾಡಲಾದ ಅಥವಾ ತೋರಿಸಿರುವ ಸಾಧಾರಣ ಮಟ್ಟದ ಅಥವಾ ಮಧ್ಯಮ ಮಟ್ಟದ ಆಘಾತಕಾರಿ ಕಂಟೆಂಟ್.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ದೇಹದ ಭಾಗಗಳು, ದ್ರವಗಳು, ತ್ಯಾಜ್ಯ

  • ಮಕ್ಕಳಿಗಾಗಿ ರಚಿಸಲಾದ ಶೈಕ್ಷಣಿಕ, ವೈಜ್ಞಾನಿಕ, ಸಾಕ್ಷ್ಯಚಿತ್ರ ಅಥವಾ ಕಲಾತ್ಮಕ ಸಂದರ್ಭದ ವೀಡಿಯೊಗಳಲ್ಲಿ ಮತ್ತು ಆಘಾತಗೊಳಿಸುವ ಉದ್ದೇಶವಿಲ್ಲದೆ ತೋರಿಸಲಾಗುವ ದೇಹದ ಭಾಗಗಳು, ದ್ರವಗಳು ಅಥವಾ ತ್ಯಾಜ್ಯ.
  • ನಾಟಕೀಯಗೊಳಿಸಲಾದ ಕಂಟೆಂಟ್‌ನಲ್ಲಿ ಆಘಾತಗೊಳಿಸುವ ಉದ್ದೇಶದಿಂದ ದೇಹದ ಭಾಗಗಳು, ದ್ರವಗಳು ಅಥವಾ ತ್ಯಾಜ್ಯವನ್ನು, ಹೆಚ್ಚಿನ ಮಟ್ಟಿಗೆ ಮನರಂಜನೆಯ ಉದ್ದೇಶಗಳಿಗಾಗಿ (ಜಾದೂವಿನ ಹಾಗೆ) ತೋರಿಸುವುದು; ಆದರೆ ಇದಕ್ಕಾಗಿ ನ್ಯಾಯಯುತ ಸಂದರ್ಭವನ್ನು ಒದಗಿಸಬೇಕು.

ವೈದ್ಯಕೀಯ ಮತ್ತು ಸೌಂದರ್ಯವರ್ಧಕ ಕಾರ್ಯವಿಧಾನಗಳು

  • ಶೈಕ್ಷಣಿಕ ಉದ್ದೇಶ ಹೊಂದಿರುವ ಮತ್ತು ಕಾರ್ಯವಿಧಾನದ ಮೇಲೆ ಗಮನ ಕೇಂದ್ರೀಕರಿಸುವ, ಆದರೆ ದೇಹದ ಭಾಗಗಳು, ದ್ರವಗಳು ಅಥವಾ ತ್ಯಾಜ್ಯದ ಮೇಲೆ ಗಮನ ಕೇಂದ್ರೀಕರಿಸದ ವೈದ್ಯಕೀಯ ಅಥವಾ ಸೌಂದರ್ಯವರ್ಧಕ ಕಾರ್ಯವಿಧಾನಗಳು.
    • ಕಡಿಮೆ ಪ್ರಮಾಣದ ರಕ್ತವಿರುವ ಹಚ್ಚೆ, ಚುಚ್ಚುವಿಕೆ ಅಥವಾ ಬೊಟೊಕ್ಸ್ ಕಾರ್ಯವಿಧಾನಗಳು.
  • ವೈದ್ಯಕೀಯ ಅಥವಾ ಸೌಂದರ್ಯವರ್ಧಕ ಕಾರ್ಯವಿಧಾನಗಳಲ್ಲಿ ದೇಹದ ಭಾಗಗಳು, ದ್ರವಗಳು ಅಥವಾ ತ್ಯಾಜ್ಯವನ್ನು ಸೆನ್ಸಾರ್ ಮಾಡಲಾದ ಅಥವಾ ಕ್ಷಣಿಕ ಪ್ರದರ್ಶನ.
  • ದೇಹದ ಭಾಗಗಳು, ದ್ರವಗಳು ಅಥವಾ ತ್ಯಾಜ್ಯದ ಮೇಲೆ ಹೆಚ್ಚುವರಿ ಗಮನ ಕೇಂದ್ರೀಕರಿಸದೆ, ವೀಕ್ಷಕರಿಗೆ ಶಿಕ್ಷಣ ಒದಗಿಸುವ ಉದ್ದೇಶವಿರುವ, ಮನುಷ್ಯರ ಮತ್ತು ಪ್ರಾಣಿಗಳ ಜನನದ ವೀಡಿಯೊಗಳು.

ಅಪಘಾತಗಳು ಮತ್ತು ಗಾಯಗಳು

  • ತೆರೆದ ಗಾಯವು ಗೋಚರಿಸದಂತಹ ಅಪಘಾತಗಳು (ಉದಾಹರಣೆಗೆ ಆಂತರಿಕ ಅಂಗಾಂಶಗಳು, ರಕ್ತಸ್ರಾವವಾಗುತ್ತಿರುವ ಗಾಯಗಳು).
  • ಕೇವಲ ಸಾಧಾರಣ ಪ್ರಮಾಣದ ಪರಿಣಾಮವು ಗೋಚರಿಸುವ ಕಾರಣ, ಅತೀವ ದುಃಖಕ್ಕೆ ಕಾರಣವಾಗದ ಅಪಘಾತಗಳು (ಉದಾ., ಮೋಟಾರ್‌ಸೈಕಲ್‌ನಿಂದ ಬೀಳುವುದು).
  • ಅಪಘಾತದ ಪರಿಣಾಮವಾಗಿ ಅಪಘಾತಕ್ಕೆ ಒಳಗಾದವರ ತೊಂದರೆ ಅಥವಾ ಸಂಕಟಕ್ಕೆ ಒಳಗಾಗದ ಅಪಘಾತಗಳು (ಅಳುವುದು ಅಥವಾ ಕಿರುಚಾಟವನ್ನು ತೋರಿಸದಿರುವುದು).
  • ಯಾವುದೇ ದೀರ್ಘಾವಧಿಯ ವೈದ್ಯಕೀಯ ಆರೈಕೆಯ ಅಗತ್ಯವಿಲ್ಲದ ಅಪಘಾತಗಳು.
  • ಸುದ್ದಿ, ಸಾಕ್ಷ್ಯಚಿತ್ರ, ಅಥವಾ ಕಲಾತ್ಮಕ ಸಂದರ್ಭದಲ್ಲಿ (ಉದಾ., ಚಲನಚಿತ್ರ ಅಥವಾ ಸಂಗೀತ ವೀಡಿಯೊ) ಪ್ರಸ್ತುತಪಡಿಸಲಾದ ಅಪಘಾತಗಳು ಮತ್ತು ಗಾಯಗಳು.

ಪ್ರಾಣಿಗಳ ಮಾಂಸವನ್ನು ಸಿದ್ಧಗೊಳಿಸುವುದು ಮತ್ತು ತಿನ್ನುವುದು

  • ಪ್ರಾಣಿಗಳ ಭಾಗಗಳ ಸಂವೇದನಾ ರಹಿತ ನಿರ್ವಹಣೆ.
    • ಕಚ್ಚಾ ಅಥವಾ ತಿನ್ನಲು ಸಿದ್ಧವಾಗಿರುವ ಸ್ಥಿತಿಗಳಲ್ಲಿರುವ ಮಾಂಸ, ಮೀನುಗಳ ಚಿತ್ರಣಗಳು, ಉದಾಹರಣೆಗೆ, ಅಡುಗೆ ಮಾಡುವ ಅಥವಾ ತಯಾರಿಕೆಯ ತಂತ್ರಗಳನ್ನು ಪ್ರದರ್ಶಿಸುವಾಗ.
  • ಪ್ರಾಣಿಗಳ ಭಾಗಗಳಿಗೆ ಹೋಲಿಕೆಯಾಗದಿರುವ ಪ್ರಾಣಿ ಆಧಾರಿತ ಆಹಾರ ಉತ್ಪನ್ನಗಳ ಸಂವೇದನಾಶೀಲ ಸೇವನೆ ಅಥವಾ ತಯಾರಿಕೆ.
    • ರೆಸ್ಟೋರೆಂಟ್‌ನಲ್ಲಿ, ಜೀವಂತವಾಗಿರುವ ಅಥವಾ ಇನ್ನೂ ಚಲಿಸುತ್ತಿರುವಂತೆ ಗೋಚರಿಸುವ ಶೆಲ್‌ಫಿಶ್ ತಿನ್ನುವುದು.
    • “ಮುಕ್‌ಬ್ಯಾಂಗ್” ಅಥವಾ ASMR ಕಾರ್ಯಕ್ಷಮತೆಯ ಭಾಗವಾಗಿ ತಯಾರಾದ ಆಹಾರವನ್ನು (ಉದಾಹರಣೆಗೆ ಸೀಗಡಿ) ತಿನ್ನುವುದು.
  • ಸ್ಪಷ್ಟವಾದ ಮುಖದ ಭಾಗಗಳು ಕಾಣುವಂತಹ ಪ್ರಾಣಿಗಳ ಭಾಗಗಳ (ಮೀನು, ಮಲಸ್ಕ ಅಥವಾ ಕ್ರಸ್ಟೇಷನ್ಸ್ ಹೊರತುಪಡಿಸಿ, ಇವುಗಳನ್ನು ಕೇಂದ್ರೀಕೃತವಾಗಿ ಪ್ರಸ್ತುತಪಡಿಸಲು ಅನುಮತಿಸಲಾಗಿದೆ) ಕ್ಷಣಿಕ ಪ್ರದರ್ಶನ.

ವ್ಯಾಖ್ಯಾನಗಳು

  • "ಆಘಾತಗೊಳಿಸುವ ಉದ್ದೇಶ" ಎಂದರೆ ವೀಡಿಯೊದ ಉದ್ದೇಶ ಆಘಾತಗೊಳಿಸುವುದರ ಕುರಿತಾಗಿದೆ. ನೀಡಲಾದ ಸಂದರ್ಭವು ಯಾವುದರ ಮೇಲೆ ಗಮನ ಕೇಂದ್ರೀಕರಿಸುತ್ತದೆ ಎಂಬುದನ್ನು ಅವಲಂಬಿಸಿ ಇದನ್ನು ನಿರ್ಧರಿಸಲಾಗುತ್ತದೆ.
  • "ಅಪಘಾತಗಳು" ಎಂದರೆ ಸಾಮಾನ್ಯವಾಗಿ ಹಾನಿ ಅಥವಾ ಗಾಯ ಉಂಟುಮಾಡುವ ದುರದೃಷ್ಟಕರ ಘಟನೆಗಳು; ಇಲ್ಲಿ ಗಾಯವು ಸ್ಪಷ್ಟವಾಗಿ ಗೋಚರಿಸದೆಯೂ ಇರಬಹುದು (ಉದಾಹರಣೆಗೆ, ವಾಹನ ಅಪಘಾತಗಳು).
  • "ಪ್ರದರ್ಶಿಸಿರುವುದು" ಎಂದರೆ ದೇಹದ ಭಾಗಗಳ, ದ್ರವಗಳ ಅಥವಾ ತ್ಯಾಜ್ಯದ (ಉದಾಹರಣೆಗೆ, ಅಂಗಾಂಶ ಅಥವಾ ರಕ್ತ) ಗೋಚರತೆ.
  • "ಅಸಮಾಧಾನ" ಎಂದರೆ ಸಮಂಜಸವಾಗಿ ಊಹಿಸಲಾದ ಹಾನಿಕಾರಕ ಪರಿಣಾಮ ಅಥವಾ ಗಾಯದಿಂದ ಉದ್ಭವಿಸುವ ಅಥವಾ ಗೋಚರಿಸುವ ಅಸ್ಥಿರ ಅಥವಾ ಆಶ್ಚರ್ಯಕರ ಭಾವನೆ.
  • "ಯಾತನೆ" ಎಂದರೆ ಪ್ರಜ್ಞಾಹೀನತೆ ಅಥವಾ ನೋವಿನ ಪರಿಣಾಮವಾಗಿ ಮನುಷ್ಯರ ನರಳುವಿಕೆ ಗೋಚರಿಸುವುದು, ಕೇಳಿಸುವುದು ಅಥವಾ ಗ್ರಹಿಸಲು ಸಾಧ್ಯವಾಗುವುದು. ಈ ಪ್ರಕರಣದಲ್ಲಿ, ಅಪಘಾತಗಳಿಗೆ ಈಡಾಗಿರುವ ವ್ಯಕ್ತಿಗಳು ಮತ್ತು ವೈದ್ಯಕೀಯ ಅಥವಾ ಸೌಂದರ್ಯವರ್ಧಕ ಕಾರ್ಯವಿಧಾನಗಳಿಗೆ ಒಳಪಡುತ್ತಿರುವ ವ್ಯಕ್ತಿಗಳಿಗೆ (ಹೆರಿಗೆಯೂ ಸೇರಿದ ಹಾಗೆ) ಇದು ಸಂಬಂಧಿಸಿದೆ.
  • “ಸಂವೇದನಾಶೀಲತೆ ಇಲ್ಲದಿರುವುದು” ಪ್ರಾಣಿಗಳ ದೇಹದ ಭಾಗಗಳ ಪ್ರದರ್ಶನ ಅಥವಾ ಪ್ರಾಣಿಗಳನ್ನು/ಕೀಟಗಳನ್ನು ತಿನ್ನುವುದಕ್ಕೆ ಸಂಬಂಧಿಸಿದ ಸಂದರ್ಭದಲ್ಲಿ ಬಳಸಿರುವುದು) ಎಂದರೆ ಪ್ರಾಣಿಗಳ ಬಗ್ಗೆ ಕುತೂಹಲ ಮೂಡಿಸುವ ಉದ್ದೇಶವಿಲ್ಲದೆ ಆಹಾರ ಉತ್ಪನ್ನದ ಬಳಕೆಯ ಮೇಲೆ ಕೇಂದ್ರೀಕರಿಸಿದ ವಿಧಾನವನ್ನು ಸೂಚಿಸುವುದು. ಪ್ರಾಣಿ ಅಥವಾ ಅದರ ಸೇವನೆಯು, ಅಥವಾ ಗ್ರಾಫಿಕ್ ಮತ್ತು ಉತ್ಪ್ರೇಕ್ಷಿತ ವಿವರಗಳು ಆಘಾತಗೊಳಿಸುವ ಉದ್ದೇಶವನ್ನು ಹೊಂದಿಲ್ಲ.
  • "ತಪ್ಪು ನಿರ್ವಹಣೆ" ಎಂದರೆ ಪ್ರಾಣಿಯ ಮಾಂಸವನ್ನು ಸಿದ್ಧಪಡಿಸುವುದು ಅಥವಾ ಕ್ರೂರ ಅಥವಾ ಭಯಾನಕ ರೀತಿಯಲ್ಲಿ ತಿನ್ನುವುದು. ಉದಾಹರಣೆಗೆ, ಎಸೆಯುವುದು, ಬೀಳಿಸುವುದು, ಮನರಂಜನೆಯೊಂದಿಗೆ ಪ್ಲೇ ಮಾಡುವುದು, ಚುಚ್ಚುವುದು ಅಥವಾ ಶಿರಚ್ಛೇದ ಮಾಡುವುದು. ತಪ್ಪಾಗಿ ನಿರ್ವಹಿಸಲು ಪ್ರಾಣಿಯು ಜೀವಂತವಾಗಿರಬೇಕಾಗಿಲ್ಲ ಮತ್ತು ತಪ್ಪು ನಿರ್ವಹಣೆಯನ್ನು ಉಪಕರಣಗಳು, ಪಾತ್ರೆಗಳು ಅಥವಾ ಬರಿ ಕೈಗಳಿಂದಲೂ ಮಾಡಬಹುದು.
  • "ವೃತ್ತಿಪರ ಸಂದರ್ಭ" ಎಂದರೆ ಮಾಂಸದ ಅಂಗಡಿ ಅಥವಾ ಮೀನು ಮಾರಾಟದ ವೃತ್ತಿ ಮತ್ತು ಅವರು ಮೃತ ಪ್ರಾಣಿಗಳನ್ನು ಕತ್ತರಿಸುವ ಅಥವಾ ನಿರ್ವಹಿಸುವ ಸಂದರ್ಭಗಳು.
  • "ಸ್ಪಷ್ಟವಾದ ಮುಖದ ಭಾಗಗಳು" ಎಂದರೆ ಮುಖದ ಭಾಗಗಳನ್ನು ಸೂಚಿಸುತ್ತದೆ ಅದು ಪ್ರಾಣಿ ಜೀವಂತವಾಗಿದೆಯೋ ಇಲ್ಲವೋ ಎಂದು ಪ್ರೇಕ್ಷಕರಿಗೆ ಖಚಿತಪಡಿಸುತ್ತದೆ. ಮೂಗುಗಳು, ಕಿವಿಗಳು, ಬಾಯಿ, ಕಣ್ಣುಗಳು, ಇತ್ಯಾದಿ ಭಾಗಗಳು.
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ಸೆನ್ಸಾರ್ ಮಾಡಿರದ ಅಥವಾ ಆಘಾತಗೊಳಿಸುವ ಉದ್ದೇಶವಿರುವ, ಆದರೂ ಸಾಮಾನ್ಯ ವಿಷಯವನ್ನು ಒದಗಿಸುವ, ಮನುಷ್ಯರ ಗ್ರಾಫಿಕ್ ಚಿತ್ರಗಳು ಅಥವಾ ಪ್ರಾಣಿಗಳ ದೇಹದ ಭಾಗಗಳಂತಹ ಆಘಾತಕಾರಿ ಕಂಟೆಂಟ್.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ದೇಹದ ಭಾಗಗಳು, ದ್ರವಗಳು, ತ್ಯಾಜ್ಯ

  • ಆಘಾತಗೊಳಿಸುವ ಉದ್ದೇಶದಿಂದ ನಿಜವಾದ ದೇಹದ ಅಂಗಗಳು, ದ್ರವಗಳು ಅಥವಾ ತ್ಯಾಜ್ಯದ ಮೇಲೆ ಗಮನ ಕೇಂದ್ರೀಕರಿಸಿರುವುದು.
  • ಭೀಕರ ಮತ್ತು ಘೋರ ವಿವರಗಳ ಮೇಲೆ ಗಮನ ಕೇಂದ್ರೀಕರಿಸುತ್ತಾ, ದೇಹದ ಭಾಗಗಳು, ದ್ರವಗಳು ಮತ್ತು ತ್ಯಾಜ್ಯದ ನಾಟಕೀಯ ಪ್ರಸ್ತುತಿಗಳು.
    • ಅತಿಯಾದ ರಕ್ತದೊಂದಿಗೆ ಸ್ಕ್ರಿಪ್ಟ್ ಮಾಡಲಾದ ಕಂಟೆಂಟ್‌ನಲ್ಲಿನ ಶಸ್ತ್ರಚಿಕಿತ್ಸೆಯ ದೃಶ್ಯಗಳು.

ವೈದ್ಯಕೀಯ ಮತ್ತು ಸೌಂದರ್ಯವರ್ಧಕ ಕಾರ್ಯವಿಧಾನಗಳು

  • ಸೆನ್ಸಾರ್ ಮಾಡದ ದೈಹಿಕ, ಭಾಗಗಳು, ದ್ರವಗಳು ಅಥವಾ ತ್ಯಾಜ್ಯವನ್ನು ವಿವರವಾಗಿ ಪ್ರದರ್ಶಿಸುವುದರ ಮೇಲೆ ಕೇಂದ್ರೀಕೃತವಾಗಿರುವ, ಆದರೆ ಈ ಸೆನ್ಸಾರ್ ಮಾಡದ ಅಂಶಗಳ ಮೇಲೆ ಗಮನ ಕೇಂದ್ರೀಕೃತವಾಗಿರದ ವೈದ್ಯಕೀಯ ಅಥವಾ ಕಾಸ್ಮೆಟಿಕ್ ಪ್ರಕ್ರಿಯೆಗಳನ್ನು ಹೊಂದಿರುವ ಶೈಕ್ಷಣಿಕ ಅಥವಾ ಕಲಾತ್ಮಕ ಕಂಟೆಂಟ್.
    • ಅಂಗಗಳು ಗೋಚರಿಸುವ ಆದರೆ ವೀಡಿಯೊದ ಏಕ ಮಾತ್ರ ಕಂಟೆಂಟ್ ಅಲ್ಲದ ಫೋಕಲ್, ಸೆನ್ಸಾರ್ ಮಾಡದ ಶಸ್ತ್ರಚಿಕಿತ್ಸೆ.
    • ವೈದ್ಯಕೀಯ ವೃತ್ತಿಪರರು, ಇಯರ್‌ವಾಕ್ಸ್ ತೆಗೆಯುವಿಕೆಯನ್ನು ಅಥವಾ ಮೊಡವೆಗಳನ್ನು ಪಾಪ್ ಮಾಡುವಿಕೆಯನ್ನು ಪರಿಸ್ಥಿತಿಯ ವಿವರಣೆಯೊಂದಿಗೆ ತೋರಿಸುವುದು.

ಅಪಘಾತಗಳು ಮತ್ತು ಗಾಯಗಳು

  • ಅಪಘಾತದ ಬಲವಾದ ಕ್ಷಣವಿದ್ದಾಗ ಅಪಘಾತಗಳು ಅಸಮಾಧಾನವನ್ನು ಉಂಟುಮಾಡುವ ಸಾಧ್ಯತೆಯಿದೆ.
  • ಬಹಿರಂಗಪಡಿಸದ ಗೋಚರಿಸುವ ಗಾಯವನ್ನು ಹೊಂದಿರುವ ಅಪಘಾತಗಳು (ಉದಾಹರಣೆಗೆ ಬಟ್ಟೆ ಅಥವಾ ವಾಹನದ ಮೂಲಕ ರಕ್ತಸ್ರಾವವಾಗುವುದನ್ನು ನೋಡುವುದು), ಆದರೆ ಅಪಘಾತಕ್ಕೆ ಒಳಗಾದವರ ಯಾವುದೇ ತೊಂದರೆಯನ್ನು ಗ್ರಹಿಸಲಾಗುವುದಿಲ್ಲ.
  • ಯಾವುದೇ ಅಪಘಾತಕ್ಕೆ ಒಳಗಾದವರ ನೋವನ್ನು ತೋರಿಸದ ಹೆಚ್ಚಿನ ಪರಿಣಾಮದ ಕಾರು ಅಪಘಾತ.

ಪ್ರಾಣಿಗಳ ಮಾಂಸವನ್ನು ಸಿದ್ಧಗೊಳಿಸುವುದು ಮತ್ತು ತಿನ್ನುವುದು

  • ಸಂವೇದನಾಶೀಲ "ಮುಕ್‌ಬಂಗ್" ಅಥವಾ ASMR ಪ್ರಾಣಿಗಳ ಸೇವನೆಯು ಸಿದ್ಧಪಡಿಸಿರದ ಪ್ರಾಣಿಗಳ ಭಾಗಗಳನ್ನು ಪ್ರದರ್ಶಿಸುವುದು ಅಥವಾ ಅವುಗಳನ್ನು ಅನಾಗರಿಕ ಅಥವಾ ಉತ್ಪ್ರೇಕ್ಷಿತ ರೀತಿಯಲ್ಲಿ ತಿನ್ನುವುದು.
  • ಒಂದು ಜೀವಿಯ ಫೋಕಲ್, ಸ್ಪಷ್ಟ ಫೀಚರ್‌ಗಳ ಕೇಂದ್ರಬಿಂದುವಾಗಿರುವುದು (ಉದಾಹರಣೆಗೆ, ಅಡುಗೆ ಮಾಡುವಾಗ ಪ್ರಾಣಿಯ ಕಣ್ಣುಗಳ ಮೇಲೆ ಗಮನ ಕೇಂದ್ರೀಕರಿಸುವುದು).
  • ಭಯಾನಕ ಮತ್ತು ಘೋರ ಅಂಶಗಳು ಕಾಣಿಸುವ ಚರ್ಮವಿರದ ಪ್ರಾಣಿಗಳ ಭಾಗಗಳು, ಆದರೆ ಯಾವುದೇ ತಪ್ಪು ನಿರ್ವಹಣೆ ಸ್ಪಷ್ಟವಾಗಿಲ್ಲದಿರುವುದು (ಉದಾ., ರಕ್ತಸ್ರಾವದ ಮಾಂಸ ಮತ್ತು ಪ್ರಾಣಿಗಳ ಭಾಗಗಳಲ್ಲಿನ ಸ್ನಾಯುರಜ್ಜುಗಳ ತಯಾರಿಸುವಿಕೆಯ ಮೇಲೆ ಕೇಂದ್ರೀಕರಿಸಿರುವುದು).
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ವೀಕ್ಷಕರನ್ನು ಆಘಾತಗೊಳಿಸುವುದೇ ವೀಡಿಯೊದ ಸಂಪೂರ್ಣ ಉದ್ದೇಶವಾಗಿರುವ ಅತ್ಯಂತ ಆಘಾತಕಾರಿ ಕಂಟೆಂಟ್. ಸಾಮಾನ್ಯವಾಗಿ, ಭಯಂಕರ ಮತ್ತು ಘೋರ ಅಂಶಗಳು, ಯಾತನೆ ಅಥವಾ ತಪ್ಪಾಗಿ ನಿರ್ವಹಿಸುವುದು ಸ್ಪಷ್ಟವಾಗಿ ಮತ್ತು ಸಹಜವಾಗಿ ಕಾಣುವಂತಹ ಯಾವುದೇ ನೈಜ ವಿಷಯವನ್ನು ಒದಗಿಸಲಾಗುವುದಿಲ್ಲ.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ದೇಹದ ಭಾಗಗಳು, ದ್ರವಗಳು, ತ್ಯಾಜ್ಯ

  • ಸ್ವಲ್ಪ ಮಟ್ಟಿಗೆ ಸಾಂದರ್ಭಿಕತೆ ಇರುವ ಅಥವಾ ಸಾಂದರ್ಭಿಕತೆಯೇ ಇಲ್ಲದೆ, ದೇಹದ ಭಾಗಗಳು, ದ್ರವಗಳು ಅಥವಾ ತ್ಯಾಜ್ಯದ ಕುರಿತು ಅಸಹ್ಯ ಮೂಡಿಸುವ, ಭೀಕರ ಅಥವಾ ಘೋರ ಪ್ರಸ್ತುತಿಗಳು.
    • ಸ್ಪಷ್ಟ ವಿವರಣೆಯಿಲ್ಲದೆ ಇಯರ್‌ವ್ಯಾಕ್ಸ್ ಅಥವಾ ಮೊಡವೆ ಪಾಪ್ ಮಾಡುವ ಪ್ರಕ್ರಿಯೆ, ಶೈಕ್ಷಣಿಕ ಸಂದರ್ಭಗಳಲ್ಲಿ ಹೆಚ್ಚಿನ ವೀಡಿಯೊಗಳು ದೇಹದ ಭಾಗಗಳು, ದ್ರವಗಳು ಅಥವಾ ತ್ಯಾಜ್ಯಗಳ ಮೇಲೆ ಕೇಂದ್ರೀಕರಿಸುತ್ತದೆ.
  • ಆಘಾತಗೊಳಿಸುವ ಏಕಮಾತ್ರ ಉದ್ದೇಶವಿರುವ, ಸ್ವಲ್ಪ ಪ್ರಮಾಣದ ಸಾಂದರ್ಭಿಕತೆ ಇರುವ, ನಾಟಕೀಯವಾದ ಆಘಾತಕಾರಿ ಅಂಶಗಳು.

ವೈದ್ಯಕೀಯ ಮತ್ತು ಸೌಂದರ್ಯವರ್ಧಕ ಕಾರ್ಯವಿಧಾನಗಳು

  • ಸೆನ್ಸಾರ್ ಮಾಡದ ದೇಹದ ಭಾಗಗಳು, ದ್ರವಗಳು ಅಥವಾ ತ್ಯಾಜ್ಯಗಳು ವೀಡಿಯೊವನ್ನು ದೊಡ್ಡ ಪ್ರಮಾಣದಲ್ಲಿ ತೆಗೆದುಕೊಳ್ಳುತ್ತವೆ, ಸಂದರ್ಭವನ್ನು ಒದಗಿಸಿದರೂ ಭಯಾನಕ ಮತ್ತು ಘೋರವಾಗಿರುತ್ತವೆ.
    • ನಿರ್ದಿಷ್ಟ ಕಾರ್ಯಾಚರಣೆಯನ್ನು ಹೇಗೆ ಮಾಡಬೇಕೆಂದು ವೈದ್ಯಕೀಯ ವೃತ್ತಿಪರರು ವಿವರಿಸುವುದು.
  • ಯಾವುದೇ ಅಥವಾ ತಪ್ಪುದಾರಿಗೆಳೆಯುವ ಸಂದರ್ಭವನ್ನು ಪ್ರಸ್ತುತಪಡಿಸಲಾದ ಕಾರ್ಯವಿಧಾನಗಳು, ಹೆಚ್ಚಿನ ವೀಡಿಯೊಗಳು ದೇಹದ ಭಾಗಗಳು, ದ್ರವಗಳು ಅಥವಾ ತ್ಯಾಜ್ಯವನ್ನು ಭಯಾನಕ ಮತ್ತು ಘೋರವಾಗಿ ತೋರಿಸುತ್ತವೆ.

ಅಪಘಾತಗಳು ಮತ್ತು ಗಾಯಗಳು

  • ಪ್ರದರ್ಶಿಸಲಾಗಿರುವ ದೇಹದ ಭಾಗಗಳು ಗೋಚರಿಸುತ್ತಿರುವ ಅಥವಾ ಅತ್ಯಂತ ತೀವ್ರ ಗಾಯವಾಗಿರುವುದನ್ನು ಸೂಕ್ತವಾಗಿ ಊಹಿಸಿಕೊಳ್ಳಬಹುದಾದಂತಹ ಅಪಘಾತಗಳ ಕುರಿತು ದುಃಖಿತಗೊಳಿಸುವ ಪ್ರಸ್ತುತಿಗಳು.
    •  ರಕ್ತಸ್ರಾವ ಮತ್ತು ಗೋಚರಿಸುತ್ತಿರುವ ಬಹಿರಂಗ ಅಂಗಾಂಶವನ್ನು ತೋರಿಸುವುದು.
  • ಸಂದರ್ಭವಿಲ್ಲದೆ ತೀವ್ರ ಪರಿಣಾಮವಿರುವ ಅಪಘಾತಗಳು.

ಪ್ರಾಣಿಗಳ ಮಾಂಸವನ್ನು ಸಿದ್ಧಗೊಳಿಸುವುದು ಮತ್ತು ತಿನ್ನುವುದು

  • ಆಗಾಗ್ಗೆ ಭಯಾನಕ ಮತ್ತು ಘೋರ ರೀತಿಯಲ್ಲಿ ವೀಕ್ಷಕರನ್ನು ಆಫಾತಗೊಳಿಸುವ ಏಕೈಕ ಉದ್ದೇಶವನ್ನು ಹೊಂದಿರುವ ಜೀವಂತ ಪ್ರಾಣಿಗಳನ್ನು ತೋರಿಸುವುದು, ತಯಾರಿಸುವುದು ಅಥವಾ ತಿನ್ನುವುದು.
  • ಸ್ಪಷ್ಟವಾದ ಮುಖದ ಲಕ್ಷಣಗಳ ಮೇಲೆ ಬಲವಾದ ಗಮನ ಅಥವಾ ಸಂದರ್ಭವಿಲ್ಲದೆ ಪ್ರಾಣಿಗಳ ಸ್ಪಷ್ಟ ತಪ್ಪು ನಿರ್ವಹಣೆ.
  • ಗೋಚರವಾಗುವಂತೆ ತೊಂದರೆಗೀಡಾದ ಪ್ರಾಣಿಗಳನ್ನು ತಯಾರಿಸುವ (ಸ್ಕಿನ್ನಿಂಗ್) ಅಥವಾ ಕೊಲ್ಲುವ ಕ್ರೂರ ಅಥವಾ ಗ್ರಾಫಿಕ್ ಚಿತ್ರಣಗಳು.
  • ಗೋಚರವಾಗುವಂತೆ ತೊಂದರೆಗೀಡಾದ, ಜೀವಂತ ಪ್ರಾಣಿಗಳನ್ನು ತಿನ್ನುವುದಕ್ಕೆ ತಯಾರಿಸುವ ಶೈಕ್ಷಣಿಕವಲ್ಲದ ಚಿತ್ರಣಗಳು.
  • ಸ್ಪಷ್ಟ ಮುಖದ ಲಕ್ಷಣಗಳನ್ನು ಗಮನದಲ್ಲಿಟ್ಟುಕೊಂಡು ಪ್ರಾಣಿಗಳನ್ನು ತಿನ್ನುವುದಕ್ಕೆ ಸಂಬಂಧಿಸಿದ ಶೈಕ್ಷಣಿಕವಲ್ಲದ ಚಿತ್ರಣಗಳು.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಹಾನಿಕಾರಕ ಕ್ರಿಯೆಗಳು ಮತ್ತು ವಿಶ್ವಾಸಾರ್ಹವಲ್ಲದ ಕಂಟೆಂಟ್

ಗಂಭೀರ ದೈಹಿಕ, ಭಾವನಾತ್ಮಕ ಅಥವಾ ಮಾನಸಿಕ ಗಾಯಕ್ಕೆ ಕಾರಣವಾಗುವ ಹಾನಿಕಾರಕ ಅಥವಾ ಅಪಾಯಕಾರಿ ಕೃತ್ಯಗಳನ್ನು ಉತ್ತೇಜಿಸುವ ಕಂಟೆಂಟ್ ಜಾಹೀರಾತಿಗೆ ಸೂಕ್ತವಲ್ಲ.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಯಾರಿಗೂ ಗಂಭೀರ ಗಾಯವಾಗದಿರುವ, ವೃತ್ತಿಪರ ಮತ್ತು ನಿಯಂತ್ರಿತ ಪರಿಸರದಲ್ಲಿ ಸ್ವಲ್ಪ ಅಪಾಯಕಾರಿಯಾದ ಸಾಹಸಗಳು ಅಥವಾ ಕ್ರಿಯೆಗಳನ್ನು ಮಾಡುವುದು. ಶೈಕ್ಷಣಿಕ ಅಥವಾ ಸ್ಕ್ರಿಪ್ಟ್ ಮಾಡಿದ ಕಂಟೆಂಟ್‌ನಲ್ಲಿ ಅಪಾಯಕಾರಿ ಸಂಸ್ಥೆಗಳ ಸಂಕ್ಷಿಪ್ತ ಉಲ್ಲೇಖಗಳು.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಸಾಮಾನ್ಯವಾಗಿ ಹಾನಿಕಾರಕ ಮತ್ತು ಅಪಾಯಕಾರಿ ಕೃತ್ಯಗಳು

  • ಗೋಚರಿಸದ ಗಾಯಗಳು, ಆದರೆ ಅಪಾಯವನ್ನು ಒಳಗೊಂಡಿರುವಂತಹ ಈ ರೀತಿಯ ಚಟುವಟಿಕೆಗಳು:
    • ವಿಂಗ್‌ಸೂಟ್ ಫ್ಲೈಯಿಂಗ್‌ನಂತಹ ವೃತ್ತಿಪರ ಸ್ಟಂಟ್‌ಗಳು ಅಥವಾ ತೀರಾ ಅಪಾಯಕಾರಿ ಕ್ರೀಡೆಗಳು.
    • ವ್ಯಕ್ತಿಯು ವ್ಹೀಲಿಂಗ್ ಮಾಡುತ್ತಿರುವುದು ಅಥವಾ ನೆಲದ-ಮಟ್ಟದಲ್ಲಿ ಪಾರ್ಕೋರ್ ಮಾಡುತ್ತಿರುವುದರ ದೃಶ್ಯಾವಳಿ.
    • ಅಪಾಯಕಾರಿ ತಂತ್ರಗಾರಿಕೆಗಳನ್ನು (ಉದಾ. ನಿಂತುಕೊಂಡು ಅಥವಾ ಕೈ ಬಿಟ್ಟು ವ್ಹೀಲಿಂಗ್ ಮಾಡುವುದು) ಮಾಡದೆ ಅಥವಾ ಇತರರಿಗೆ ಪದೇಪದೇ ಅಡಚಣೆ ಉಂಟುಮಾಡದೆ (ಉದಾ. ಲೇನ್‌ಗಳನ್ನು ದಾಟಿ ಡ್ರೈವ್ ಮಾಡುವುದು) ಮೋಟಾರು ವಾಹನಗಳು ವೇಗವಾಗಿ ಚಲಿಸುತ್ತಿರುವುದು ಅಥವಾ ತೇಲಿಹೋಗುತ್ತಿರುವುದು.

ವೈಫಲ್ಯದ ಸಂಯೋಜನೆಗಳು

  • ಗ್ರಾಫಿಕ್ ಗಾಯಗಳ ಮೇಲೆ ಗಮನ ಕೇಂದ್ರೀಕರಿಸದ, ವೈಫಲ್ಯದ ವೀಡಿಯೊಗಳ ಸಂಯೋಜನೆ (ಉದಾ. ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆಯುವುದು). 

ಕುಚೇಷ್ಟೆಗಳು ಮತ್ತು ಸವಾಲುಗಳು

  • ಗಲಿಬಿಲಿ, ಗೊಂದಲ ಅಥವಾ ಅನಾನುಕೂಲತೆ ಇದ್ದರೂ, ಅಪಾಯ ಅಥವಾ ದೀರ್ಘ-ಕಾಲದ ಹಾನಿಯನ್ನು ಒಳಗೊಂಡಿರದಂತಹ ಕೀಟಲೆಗಳು ಅಥವಾ ಸವಾಲುಗಳು; ಉದಾಹರಣೆಗೆ ಐಸ್ ಬಕೆಟ್ ಸವಾಲು.
  • ಹಾನಿಕಾರಕ ಕೀಟಲೆಗಳು ಅಥವಾ ಸವಾಲುಗಳ ಕುರಿತು ಚರ್ಚೆಗಳು ಅಥವಾ ವರದಿಗಳು, ಆದರೆ ಹಾನಿಯುಂಟಾದಾಗ ದೃಶ್ಯಾವಳಿ ಅಥವಾ ಆಡಿಯೊವನ್ನು ತೋರಿಸುವುದಿಲ್ಲ (ಉದಾ. ಘಟನೆಯ ವಿವರಗಳಿಲ್ಲದೆ ಅಗ್ನಿ ಅವಘಡದ ಸವಾಲನ್ನು ವರದಿ ಮಾಡುವುದು).
  • ಶೈಕ್ಷಣಿಕ, ಸಾಕ್ಷ್ಯಚಿತ್ರ ಅಥವಾ ಸುದ್ದಿ ವರದಿಗಳ ಕಂಟೆಂಟ್ ಗಂಭೀರ ಭಾವನಾತ್ಮಕ ಯಾತನೆಗೆ ಕಾರಣವಾಗುವ ಕೀಟಲೆಗಳು ಅಥವಾ ಸವಾಲುಗಳನ್ನು ಒಳಗೊಂಡಿರಬಹುದು (ಉದಾ. ದೈಹಿಕ ಕಿರುಕುಳ, ನಿಂದನೀಯ ಭಾಷೆ ಮತ್ತು “ನಿಮ್ಮನ್ನು ವಜಾಗೊಳಿಲಾಗಿದೆ!” ನಂತಹ ಅವಮಾನಗಳ ಕೀಟಲೆಗಳು).

ವೈದ್ಯಕೀಯ ಮತ್ತು ವೈಜ್ಞಾನಿಕ ತಪ್ಪು ಮಾಹಿತಿ

  • ವೈರಸ್‌ಗಳು, ಸಾಂಕ್ರಾಮಿಕ ರೋಗಗಳು ಮತ್ತು COVID-19 ಕುರಿತು ಭಯಪಡಿಸುವ ಉದ್ದೇಶವಿಲ್ಲದ, ತಟಸ್ಥ ಕಂಟೆಂಟ್ (ಉದಾ. ವೈರಸ್ ಮತ್ತು ಬ್ಯಾಕ್ಟೀರಿಯಾದ ನಡುವಿನ ವ್ಯತ್ಯಾಸವನ್ನು ಮಕ್ಕಳಿಗೆ ತಿಳಿಸುವ ವೀಡಿಯೊ).

ಹಾನಿಕಾರಕ ತಪ್ಪು ಮಾಹಿತಿ

  • ಹಾನಿಕಾರಕ ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವ ಗುಂಪುಗಳು ಹೇಗೆ ಜನರನ್ನು ಸೆಳೆಯುತ್ತವೆ, ಪ್ರಾಮುಖ್ಯತೆ ಪಡೆದುಕೊಳ್ಳುತ್ತವೆ ಮತ್ತು/ಅಥವಾ ತಪ್ಪು ಮಾಹಿತಿಯನ್ನು ಹರಡುತ್ತವೆ ಎಂಬುದನ್ನು ವಿವರಿಸುವ ಉದ್ದೇಶವಿರುವ ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರದ ಕಂಟೆಂಟ್.
  • Pizzagate, QAnon, StopTheSteal, ಇತ್ಯಾದಿಯಂತಹ ಹಾನಿಕಾರಕ ತಪ್ಪು ಮಾಹಿತಿಯನ್ನು ತೆಗೆದುಹಾಕುವ ಕುರಿತು ಕೇಂದ್ರೀಕೃತವಾಗಿರುವ ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರ ಕಂಟೆಂಟ್.
  • ಹವಾಮಾನ ಬದಲಾವಣೆಯ ತಪ್ಪು ಮಾಹಿತಿಯನ್ನು ತಳ್ಳಿಹಾಕಲು ಬಯಸುವ ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರದ ಕಂಟೆಂಟ್.

ವೇಪಿಂಗ್ ಮತ್ತು ತಂಬಾಕು 

  • ಮುನ್ನೆಚ್ಚರಿಕೆ ಕ್ರಮಗಳ ಕುರಿತು ಸಾರ್ವಜನಿಕ ಸೇವೆಯ ಘೋಷಣೆಗಳು.
  • ಬಳಕೆಯ ಮೇಲೆ ಗಮನ ಕೇಂದ್ರೀಕರಿಸಿದ ಚಿತ್ರಣವನ್ನು ಹೊಂದಿರುವ ನಾಟಕೀಯ ಕಂಟೆಂಟ್.
  • ವೇಪಿಂಗ್/ತಂಬಾಕನ್ನು ಒಳಗೊಂಡಿರುವ ಉದ್ಯಮಗಳನ್ನು ಪ್ರಸ್ತುತಪಡಿಸುವ ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರದ ಕಂಟೆಂಟ್.

ಆಲ್ಕೋಹಾಲ್

  • ಬೇಜವಾಬ್ದಾರಿಯುತ ಕುಡಿತವನ್ನು ಉತ್ತೇಜಿಸದೆ ಅಥವಾ ವೈಭವೀಕರಿಸದೆ, ಕಂಟೆಂಟ್‌ನಲ್ಲಿನ ಆಲ್ಕೋಹಾಲ್ ಉಪಸ್ಥಿತಿ ಅಥವಾ ವಯಸ್ಕರು ಆಲ್ಕೋಹಾಲ್ ಸೇವಿಸುವುದು.

ವಿದೇಶಿ ಭಯೋತ್ಪಾದಕ ಸಂಘಟನೆಗಳು (FTO)

  • ಶೈಕ್ಷಣಿಕ, ಪತ್ರಿಕೋದ್ಯಮದ ವರದಿಗಳು ಅಥವಾ ಸಂಗೀತ ವೀಡಿಯೊಗಳು ಭಯೋತ್ಪಾದಕ ದಾಳಿಯನ್ನು ಕೇಂದ್ರ ವಿಷಯವಾಗಿ ಚರ್ಚಿಸುತ್ತಿರುವುದು.
  • ಭಯೋತ್ಪಾದಕ ದಾಳಿಗಳ ದೃಶ್ಯಾವಳಿಯನ್ನು ಹೊಂದಿರದ ಸಾಮಾನ್ಯ ವಿಷಯವಾಗಿ ಈ ಗುಂಪುಗಳ ಕುರಿತು ಶೈಕ್ಷಣಿಕ ಅಥವಾ ನಾಟಕೀಯ ಕಂಟೆಂಟ್.
  • ಹಾಸ್ಯಮಯ ಉದ್ದೇಶವನ್ನು ಒಳಗೊಂಡಿರುವ FTO ಗಳು ಅಥವಾ ಭಯೋತ್ಪಾದನೆಯನ್ನು ಫೀಚರ್ ಮಾಡುವ ಪತ್ರಿಕೋದ್ಯಮದ ವರದಿಗಳು.
  • FTO ಚಿತ್ರಗಳನ್ನು ಫೀಚರ್ ಮಾಡುವ ಶೈಕ್ಷಣಿಕ, ನಾಟಕೀಯ, ಪತ್ರಿಕೋದ್ಯಮದ ವರದಿಗಳು ಅಥವಾ ಸಂಗೀತ ವೀಡಿಯೊಗಳು, ಆದರೆ ಕಂಟೆಂಟ್‌ನ ಮುಖ್ಯ ವಿಷಯವಾಗಿ ಪ್ರಸ್ತಾಪಿಸುವುದಿಲ್ಲ. 

ಡ್ರಗ್ ವ್ಯಾಪಾರ ಸಂಘಟನೆಗಳು (DTO)

  • ಶೈಕ್ಷಣಿಕ, ನಾಟಕೀಯ, ಪತ್ರಿಕೋದ್ಯಮ ವರದಿಗಳು ಅಥವಾ ಸಂಗೀತ ವೀಡಿಯೊಗಳು ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಮಾದಕ ವಸ್ತು ವ್ಯಾಪಾರದ ಮೇಲೆ ಫೋಕಸ್.
  • ಶೈಕ್ಷಣಿಕ, ನಾಟಕೀಯ, ಪತ್ರಿಕೋದ್ಯಮ ವರದಿಗಳು ಅಥವಾ ಸಂಗೀತ ವೀಡಿಯೊಗಳು DTO ಗಳನ್ನು ಮತ್ತು ಸ್ಲೋಗನ್‌ಗಳಂತಹ ಸಂಬಂಧಿತ ಚಿತ್ರಣಗಳನ್ನು ಬಿಂಬಿಸುವುದು.
  • DTO ಗಳನ್ನು ಒಳಗೊಂಡಿರುವ ಹಾಸ್ಯಮಯ ಕಂಟೆಂಟ್ ಅನ್ನು ಒಳಗೊಂಡಿರುವ ಯಾವುದೇ ವೀಡಿಯೊಗಳು ಅಥವಾ ಅಂತರರಾಷ್ಟ್ರೀಯ ಡ್ರಗ್ ವ್ಯಾಪಾರವನ್ನು ಒಂದು ವಿಷಯವಾಗಿ ಕವರ್ ಮಾಡುವುದು.
  • ಪತ್ರಿಕೋದ್ಯಮದ ವರದಿಗಳಲ್ಲಿ ಸಂಬಂಧಿತ ಗುಂಪುಗಳ ಸಾರ್ವಜನಿಕ ಸೇವಾ ಘೋಷಣೆಗಳನ್ನು ಕವರ್ ಮಾಡಲಾಗಿದೆ.
  • ಹಿಂಸಾತ್ಮಕ ಸನ್ನಿವೇಶಗಳ ದೃಶ್ಯಗಳು ಮತ್ತು ಒತ್ತೆಯಾಳುಗಳು ಅಥವಾ DTO ಗಳು ನಡೆಸಿದ ವಿಚಾರಣೆಯಂತಹ ಕ್ರಮಗಳನ್ನು ಒಳಗೊಂಡಂತೆ ಪತ್ರಿಕೋದ್ಯಮದ ವರದಿಗಳು.

ವ್ಯಾಖ್ಯಾನಗಳು:

  • “ಗಂಭೀರವಾಗಿ ಗಾಯಗೊಂಡಿರುವುದು” ಎಂದರೆ ಸರಿಯಾದ ವೈದ್ಯಕೀಯ ಕಾಳಜಿಯಿಲ್ಲದೆ ಚಿಕಿತ್ಸೆ ನೀಡಲಾಗದಂತಹ ಗಾಯಗಳು ಅಥವಾ ಮನೆಯಲ್ಲಿ ಚಿಕಿತ್ಸೆ ನೀಡಲಾಗದಂತಹ ಗಾಯಗಳು; ಉದಾಹರಣೆಗೆ, ಮೂಳೆ ಮುರಿಯುವುದು, ಗೋಚರಿಸುವ ಡಿಸ್‌ಲೊಕೇಶನ್‌ಗಳು ಅಥವಾ ಗಣನೀಯ ಪ್ರಮಾಣದ ರಕ್ತ.
  • ಬಾಡಿ ಮಾಡಿಫಿಕೇಶನ್ ಎಂದರೆ ಟ್ಯಾಟೂ, ಚುಚ್ಚಿಕೊಳ್ಳುವಿಕೆ ಅಥವಾ ವೈದ್ಯಕೀಯ ಶಸ್ತ್ರಚಿಕಿತ್ಸೆಯಂತಹ ವಿಷಯಗಳು.
  • “ನಾಟಕೀಯಗೊಳಿಸಲಾಗಿರುವುದು” ಎಂದರೆ ಸ್ಕ್ರಿಪ್ಟ್ ಮಾಡಲಾದ ಕಂಟೆಂಟ್, ಉದಾಹರಣೆಗೆ ಚಲನಚಿತ್ರಗಳು ಅಥವಾ ಕಾಲ್ಪನಿಕ ಸೆಟ್ಟಿಂಗ್‌ಗಳು.
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ದೈಹಿಕ ಹಾನಿ ಅಥವಾ ಯಾತನೆಯನ್ನು ತೋರಿಸುವ, ಆದರೆ ಇದರ ಮೇಲೆ ಗಮನ ಕೇಂದ್ರೀಕರಿಸದ ಕಂಟೆಂಟ್. ವೃತ್ತಿಪರವಲ್ಲದ, ಅನಿಯಂತ್ರಿತ ಪರಿಸರಗಳಲ್ಲಿ ನಡೆಸಿದ ಕ್ರಿಯೆಗಳನ್ನು ಸಹ ಇದು ಒಳಗೊಂಡಿರುತ್ತದೆ. ಅಪಾಯಕಾರಿ ಸಂಸ್ಥೆಯ ನಾಯಕ ಅಥವಾ ಸಂಬಂಧಿತ ಸಾರ್ವಜನಿಕ ಸೇವಾ ಪ್ರಕಟಣೆಗಳ ವಿಷಯಗಳು.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಸಾಮಾನ್ಯವಾಗಿ ಹಾನಿಕಾರಕ ಮತ್ತು ಅಪಾಯಕಾರಿ ಕೃತ್ಯಗಳು

  • ಸ್ಕೈ-ಸ್ಕ್ರೇಪರ್ ಪಾರ್ಕೋರ್‌ನಂತಹ ಅಧಿಕ ಅಪಾಯದ ಚಟುವಟಿಕೆಗಳನ್ನು ಒಳಗೊಂಡಿರುವ ಕೃತ್ಯಗಳು ಅಥವಾ ಸ್ಕೇಟ್ ಮಾಡುವಾಗ ಅಪ್ಪಳಿಸಿದ ಪರಿಣಾಮದಂತಹ ಗಂಭೀರ ಗಾಯದ ಚಿತ್ರಣಗಳು.
  • ಇದಕ್ಕೆ ಸಂಬಂಧಿಸಿದ ಶೈಕ್ಷಣಿಕ, ಸಾಕ್ಷ್ಯಚಿತ್ರ ಅಥವಾ ಸುದ್ದಿ ವರದಿಗಳು: 
    • ಗ್ರಾಫಿಕ್ ಗಾಯವನ್ನು ಒಳಗೊಂಡಿರುವ, ಹಾನಿಕಾರಕ ಅಥವಾ ಅಪಾಯಕಾರಿ ಕೃತ್ಯಗಳು.
    • ಮಕ್ಕಳು ಜೂಜಾಟದಲ್ಲಿ ಪಾಲ್ಗೊಳ್ಳುವುದು ಅಥವಾ ವಯಸ್ಕರಿಗಾಗಿ ವಿನ್ಯಾಸಗೊಳಿಸಲಾದ ಮೋಟಾರು ವಾಹನಗಳನ್ನು ಚಲಾಯಿಸುವುದು. 
  • ಅಪಾಯಕಾರಿ ತಂತ್ರಗಾರಿಕೆಗಳನ್ನು (ಉದಾ. ನಿಂತುಕೊಂಡು ಅಥವಾ ಕೈ ಬಿಟ್ಟು ವ್ಹೀಲಿಂಗ್ ಮಾಡುವುದು) ಮಾಡುತ್ತಾ ಅಥವಾ ಇತರರಿಗೆ ಪದೇಪದೇ ಅಡಚಣೆ ಉಂಟುಮಾಡುತ್ತಾ (ಉದಾ., ಲೇನ್‌ಗಳನ್ನು ದಾಟಿ ಡ್ರೈವ್ ಮಾಡುವುದು) ಮೋಟಾರು ವಾಹನಗಳು ವೇಗವಾಗಿ ಚಲಿಸುತ್ತಿರುವುದು ಅಥವಾ ತೇಲಿಹೋಗುತ್ತಿರುವುದು. 
  • ಅಪ್ರಾಪ್ತರನ್ನು ಭಾಗವಹಿಸುವವರು ಅಥವಾ ಬಲಿಪಶುವಾಗಿ ಒಳಗೊಂಡಿರುವ ಅಪಾಯಕಾರಿ ಕೃತ್ಯಗಳನ್ನು ಶೋಕೇಸ್ ಮಾಡುವ ಶೈಕ್ಷಣಿಕ, ನಾಟಕೀಯ ಅಥವಾ ಸಂಗೀತ ವೀಡಿಯೊ ಕಂಟೆಂಟ್.

ವೈಫಲ್ಯದ ಸಂಯೋಜನೆಗಳು

  • ಸಾವು ಅಥವಾ ಮಾರಣಾಂತಿಕ ಸ್ಥಿತಿಗಳಿಗೆ ಕಾರಣವಾಗದ ಗ್ರಾಫಿಕ್ ಗಾಯಗಳಿರುವ ಕ್ಷಣಗಳು ಕೇಂದ್ರಬಿಂದುಗಳಾಗಿರುವ ಚಿತ್ರಣಗಳು (ಉದಾ., ರಸ್ತೆಯಲ್ಲಿ ಬೈಕ್ ಕ್ರ್ಯಾಶ್ ಆಗುವುದರ ವೀಡಿಯೊ ಕಂಪೈಲೇಶನ್).

ಕುಚೇಷ್ಟೆಗಳು ಮತ್ತು ಸವಾಲುಗಳು

  • ಈ ಕೆಳಗಿನ ಕೀಟಲೆಗಳು ಅಥವಾ ಸವಾಲಿನ ಕಂಟೆಂಟ್‌ಗೆ ಸಂಬಂಧಿಸಿದ ಶೈಕ್ಷಣಿಕ, ಸಾಕ್ಷ್ಯಚಿತ್ರ ಅಥವಾ ಸುದ್ದಿ ವರದಿಗಳು:
    • ತನ್ನ ವಿರುದ್ಧ ಅಥವಾ ಇತರರ ವಿರುದ್ಧ ಬೆದರಿಕೆಗಳು ಅಥವಾ ದೈಹಿಕ ಅಥವಾ ಮಾನಸಿಕ ಹಾನಿಯನ್ನು ಪ್ರಚೋದಿಸುವುದು; ಉದಾಹರಣೆಗೆ ರೈಲು ಹಳಿಗಳ ಮೇಲೆ ಮಲಗಿಕೊಳ್ಳುವುದು. 
    • ಅನುಕರಿಸಬಾರದಾದಂತಹ ಕೃತ್ಯಗಳು; ಉದಾಹರಣೆಗೆ, ಬ್ಲೀಚ್ ಸೇವಿಸುವ ಸವಾಲು - ಇದರಿಂದ ವ್ಯಕ್ತಿಯ ಆರೋಗ್ಯಕ್ಕೆ ತಕ್ಷಣವೇ, ಗಂಭೀರ ಹಾನಿ ಉಂಟಾಗಬಹುದು.
  • ದೈಹಿಕ ಕಾದಾಟಗಳು, ನಿಂದನಾತ್ಮಕ ಮಾತುಗಳು ಮತ್ತು ಅಪಮಾನಗಳಂತಹ ತೀವ್ರ ಭಾವನಾತ್ಮಕ ಯಾತನೆಗೆ ಕಾರಣವಾಗಬಹುದಾದ ಕೀಟಲೆಗಳು ಅಥವಾ ಸವಾಲುಗಳು. ವ್ಯಕ್ತಿಯ ಜೀವನದ ಸ್ಥಿತಿಗೆ ಬೆದರಿಕೆಯೊಡ್ಡುವುದನ್ನು ಸಹ ಇವು ಒಳಗೊಂಡಿರಬಹುದು; ಉದಾಹರಣೆಗೆ ಲೇ-ಆಫ್ ಕೀಟಲೆಗಳು ಅಥವಾ ಒಂದು ಸಂಬಂಧದ ನೆಲೆಯಲ್ಲಿ ಯಾರನ್ನಾದರೂ ಭಾವನಾತ್ಮಕವಾಗಿ ಪ್ರಚೋದಿಸುವುದು ಅಥವಾ ಬೆದರಿಸುವುದು (ಉದಾ., ಒಬ್ಬ ವ್ಯಕ್ತಿಯು ಭಾವನಾತ್ಮಕವಾಗಿ ಸಂವೇದನಾಶೀಲನಾಗುವಂತಹ ಬ್ರೇಕ್-ಅಪ್ ಕೀಟಲೆಗಳು, ಅಥವಾ ಸಂಬಂಧಿಕರ ವಿರುದ್ಧ ಬಂಧನದ ಕೀಟಲೆಗಳು ಇತ್ಯಾದಿ).
  • ಅನಗತ್ಯ ಪ್ರಮಾಣದ ದೇಹ-ದ್ರವಗಳು ಅಥವಾ ಗ್ರಾಫಿಕ್ ಹಿಂಸೆಯನ್ನು ಒಳಗೊಂಡಿರುವ ಕೀಟಲೆಗಳು.
  • ಗ್ಲೂ ಸ್ಟಿಕ್ ಸೇವನೆ ಅಥವಾ ಸಾಕುಪ್ರಾಣಿಗಳ ಆಹಾರದಂತಹ, ವಿಷಕಾರಿಯಲ್ಲದ, ತಿನ್ನಲಾಗದ ವಸ್ತುಗಳನ್ನು ತಿನ್ನುವುದನ್ನು ಒಳಗೊಂಡಿರುವ ಸವಾಲುಗಳು. ದೊಡ್ಡ ಪ್ರಮಾಣದಲ್ಲಿ ಸೇವಿಸಿದಾಗ ಹಾನಿಕಾರಕವಾಗಿರುವ ಕ್ಯಾರೋಲಿನಾ ರೀಪರ್ ಪೆಪ್ಪರ್‌ನಂತಹ ವಸ್ತುಗಳು ಅಥವಾ ಲಘುವಾದ ದೈಹಿಕ ಪ್ರತಿಕ್ರಿಯೆಯನ್ನು ಉಂಟುಮಾಡುವ, ತಿನ್ನಲು ಸಾಧ್ಯವಾಗುವ ವಸ್ತುಗಳನ್ನು ತಿನ್ನುವುದು. 

ವೇಪಿಂಗ್ ಮತ್ತು ತಂಬಾಕು

  • ತಂಬಾಕು ಉತ್ಪನ್ನಗಳ ವಿಮರ್ಶೆಗಳು ಅಥವಾ ಅವುಗಳ ನಡುವೆ ಹೋಲಿಕೆಗಳು (ಉದಾ., ವೇಪಿಂಗ್ ಜ್ಯೂಸ್‌ನ ಹೋಲಿಕೆ).
  • ದುಶ್ಚಟ ಬಿಡಿಸುವ ಸೇವೆಗಳ ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರ ಉಲ್ಲೇಖ.

ಆಲ್ಕೋಹಾಲ್

  • ಆಲ್ಕೋಹಾಲ್ ಅಥವಾ ಆಲ್ಕೋಹಾಲ್ ಕೇಂದ್ರಿತ ಉತ್ಪನ್ನಗಳನ್ನು ಸೇವಿಸುವ ಅಪ್ರಾಪ್ತ ವಯಸ್ಕರನ್ನು ಫೀಚರ್ ಮಾಡುವ ಶೈಕ್ಷಣಿಕ, ಸಾಕ್ಷ್ಯಚಿತ್ರ ಅಥವಾ ನಾಟಕೀಯ ಕಂಟೆಂಟ್. 

ವಿದೇಶಿ ಭಯೋತ್ಪಾದಕ ಸಂಘಟನೆಗಳು (FTO)

  • FTO ಗಳು ಅಥವಾ ಭಯೋತ್ಪಾದನೆಯ ಕುರಿತು ಉಲ್ಲೇಖವನ್ನು ಹೊಂದಿರುವ ಹಾಸ್ಯಮಯ ವೀಡಿಯೊಗಳು.
  • FTO ಗಳಿಗೆ ಹಾಸ್ಯಮಯ ಉಲ್ಲೇಖಗಳನ್ನು ಒಳಗೊಂಡಿರುವ ಶೈಕ್ಷಣಿಕ, ಸಾಕ್ಷ್ಯಚಿತ್ರ ಅಥವಾ ಸಂಗೀತ ವೀಡಿಯೋಗಳು. 
  • FTO ಸಂಬಂಧಿತ ಚಿತ್ರಗಳನ್ನು ಹಂಚಿಕೊಳ್ಳಲಾಗಿದೆ, ಆದರೆ ಕಂಟೆಂಟ್‌ನ ಮುಖ್ಯ ವಿಷಯ ಅಥವಾ ಥೀಮ್ ಅನ್ನು ಅಲ್ಲ. 

ಡ್ರಗ್ ವ್ಯಾಪಾರ ಸಂಘಟನೆಗಳು (DTO)

  • ಸಂದರ್ಭವಿಲ್ಲದೆಯೇ ಸಂಬಂಧಿತ ಗುಂಪುಗಳ ಕುರಿತು ಸಾರ್ವಜನಿಕ ಸೇವೆಯ ಘೋಷಣೆಗಳನ್ನು ಹಂಚಿಕೊಳ್ಳಲಾಗಿದೆ.
  • DTO ಗಳ ಕುರಿತು ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರದ ಕಂಟೆಂಟ್ ಅಥವಾ ಸಾರ್ವಜನಿಕ ಸೇವಾ ಪ್ರಕಟಣೆಗಳು.
    • ನಿರ್ದಿಷ್ಟ DTO ಗಳು ಅಥವಾ DTO ನಾಯಕರ ಮೇಲೆ ಪ್ರಮುಖವಾಗಿ ಗಮನ ಕೇಂದ್ರೀಕರಿಸುವ ಶೈಕ್ಷಣಿಕ ಕಂಟೆಂಟ್.
    • ದಾಳಿಗಳು ಅಥವಾ/ಮತ್ತು ಅವುಗಳ ಪರಿಣಾಮ, ಒತ್ತೆಯಾಳುಗಳಿರುವ ಸನ್ನಿವೇಶಗಳು ಇತ್ಯಾದಿಗಳಂತಹ ಗ್ರಾಫಿಕ್-ಅಲ್ಲದ ಸನ್ನಿವೇಶಗಳನ್ನು ಒಳಗೊಂಡಿರಬಹುದು.
    • ಸಂಬಂಧಿತ ಗುಂಪುಗಳ ಕುರಿತು ಸಾರ್ವಜನಿಕ ಸೇವೆಯ ಘೋಷಣೆಗಳು.
    • DTO ಗಳ ಮೂಲಕ ನಡೆಸಲಾದ ಒತ್ತೆಯಾಳುಗಳು ಅಥವಾ ವಿಚಾರಣೆಯಂತಹ ಹಿಂಸಾತ್ಮಕ ಸನ್ನಿವೇಶಗಳು ಹಾಗೂ ಕ್ರಮಗಳು. 

ವ್ಯಾಖ್ಯಾನಗಳು:

  • “ಲಘುವಾದ ದೈಹಿಕ ಪ್ರತಿಕ್ರಿಯೆ” ಎಂದರೆ ಒಣ ವಾಕರಿಕೆ, ವಾಂತಿ ಉಂಟುಮಾಡುವ ಕೆಮ್ಮು.
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಮುಖ್ಯವಾಗಿ ಅಪಘಾತಗಳು, ನೈತಿಕ ಪೋಲಿಸ್‌ಗಿರಿ, ಕುಚೇಷ್ಟೆಗಳು ಅಥವಾ ಅಪಾಯಕಾರಿ ಕೃತ್ಯಗಳನ್ನು ತೋರಿಸುವ ಕಂಟೆಂಟ್, ಉದಾಹರಣೆಗೆ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಪ್ರಯೋಗಗಳು ಅಥವಾ ಸಾಹಸಗಳು, ಅಂದರೆ ಕುಡಿಯುವುದು ಅಥವಾ ಖಾದ್ಯವಲ್ಲದ ವಸ್ತುಗಳನ್ನು ತಿನ್ನುವುದು; ಈ ರೀತಿಯ ಕಂಟೆಂಟ್ ಅನ್ನು ತೋರಿಸುವ ಟ್ರೆಂಡಿಂಗ್ ವೀಡಿಯೊಗಳ ಚರ್ಚೆಗಳು. ಅಪಾಯಕಾರಿ ಸಂಸ್ಥೆಗಳ ವೈಭವೀಕರಣ, ನೇಮಕಾತಿ ಅಥವಾ ಗ್ರಾಫಿಕ್ ಚಿತ್ರಣ.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಸಾಮಾನ್ಯವಾಗಿ ಹಾನಿಕಾರಕ ಮತ್ತು ಅಪಾಯಕಾರಿ ಕೃತ್ಯಗಳು

  • ಹಾನಿಕಾರಕ ಅಥವಾ ಅಪಾಯಕಾರಿ ಕೃತ್ಯಗಳು ಅಥವಾ ಅಪಾಯಕಾರಿ ಎಂದು ಭಾವಿಸಲಾಗುವ ಕೃತ್ಯಗಳ ವೈಭವೀಕರಣ.
    • ಆಘಾತಕಾರಿ ದೃಶ್ಯಗಳು ಮತ್ತು ಗಾಯಗಳನ್ನು (ಉದಾ., ಪರಿಣಾಮದ ಕ್ಷಣ ಅಥವಾ ಟ್ರಕ್ ಢಿಕ್ಕಿಯಾದ ಬಳಿಕ ವ್ಯಕ್ತಿಯು ರಸ್ತೆಯಲ್ಲಿ ಎಚ್ಚರವಿಲ್ಲದೆ ಬಿದ್ದಿರುವುದನ್ನು ತೋರಿಸುವುದು) ಒಳಗೊಂಡಿರುವ ಮೋಟಾರು ವಾಹನಗಳು.
  • ಮಕ್ಕಳು ಜೂಜಾಟದಲ್ಲಿ ಪಾಲ್ಗೊಳ್ಳುವುದು ಅಥವಾ ವಯಸ್ಕರಿಗಾಗಿ ವಿನ್ಯಾಸಗೊಳಿಸಲಾದ ಮೋಟಾರು ವಾಹನಗಳನ್ನು ಚಲಾಯಿಸುವುದು.
  • ಅಪ್ರಾಪ್ತರನ್ನು ಭಾಗವಹಿಸುವವರು ಅಥವಾ ಬಲಿಪಶುವಾಗಿ ಒಳಗೊಂಡಿರುವ ಅಪಾಯಕಾರಿ ಕೃತ್ಯಗಳು.

ವೈಫಲ್ಯದ ಸಂಯೋಜನೆಗಳು

  • ಸಾವು ಅಥವಾ ಗಣನೀಯ ಹಾನಿ (ಸರಿಪಡಿಸಲಾಗದಿರುವುದು ಅಥವಾ ವ್ಯಕ್ತಿಯನ್ನು ಕೋಮಾ, ಸೆಳೆತ, ಲಕ್ವಾ, ಇತ್ಯಾದಿಗಳಂತಹ ಸ್ಥಿತಿಗೆ ತಳ್ಳುವುದು) ಉಂಟುಮಾಡುವ ಚಟುವಟಿಕೆಗಳನ್ನು ಒಳಗೊಂಡ, ವೈಫಲ್ಯದ ಸಂಯೋಜನೆಗಳು. 

ಕುಚೇಷ್ಟೆಗಳು ಮತ್ತು ಸವಾಲುಗಳು

  • ಅನುಕರಿಸಬಾರದಾದಂತಹ ಕೀಟಲೆಗಳು ಅಥವಾ ಸವಾಲುಗಳು; ಉದಾಹರಣೆಗೆ, ಕ್ಲೋರಿನ್ ಕುಡಿಯುವ ಸವಾಲು - ಇದರಿಂದ ವ್ಯಕ್ತಿಯ ಆರೋಗ್ಯಕ್ಕೆ ತಕ್ಷಣವೇ, ಗಂಭೀರ ಹಾನಿ ಉಂಟಾಗಬಹುದು.
  • ಇದಕ್ಕೆ ಸಂಬಂಧಿಸಿದ ಕೀಟಲೆಗಳು ಅಥವಾ ಸವಾಲುಗಳು: 
    • ಆತ್ಮಹತ್ಯೆ, ಸಾವು, ನಕಲಿ ಬಾಂಬ್ ಭೀತಿಯಂತಹ ಭಯೋತ್ಪಾದನೆಗಳು ಅಥವಾ ಮಾರಣಾಂತಿಕ ಶಸ್ತ್ರಗಳೊಂದಿಗಿನ ಬೆದರಿಕೆಗಳು.
    • ಬಲವಂತದ ಚುಂಬನ, ತಡವುವುದು, ಲೈಂಗಿಕ ಕಿರುಕುಳ, ಡ್ರೆಸ್ಸಿಂಗ್ ರೂಂನಲ್ಲಿ ಸ್ಪೈ ಕ್ಯಾಮರಾದಂತಹ ಲೈಂಗಿಕವಾಗಿ ಅನಪೇಕ್ಷಿತ ಕೃತ್ಯಗಳು.
    • ದೈಹಿಕ ಹಾನಿ ಅಥವಾ ಯಾತನೆ; ಆದರೆ ಇಲ್ಲಿ ಯಾತನೆಯು ವೀಡಿಯೊದ ಕೇಂದ್ರಬಿಂದುವಾಗಿರುವುದಿಲ್ಲ.
    • ಅಪ್ರಾಪ್ತ ವಯಸ್ಕರಿಗೆ ದೀರ್ಘಕಾಲದ ಭಾವನಾತ್ಮಕ ಯಾತನೆ; ಉದಾಹರಣೆಗೆ ಮಗುವು ಭಯಪಡುವುದು ಅಥವಾ ದುಃಖಪಡುವಂತೆ ಮಾಡುವ, ಬಹುಸಮಯದವರೆಗೆ ಉಳಿಯುವ ಕೀಟಲೆಗಳು. ತಮ್ಮ ಹೆತ್ತವರು ತೀರಿಕೊಂಡಿದ್ದಾರೆ ಎಂದು ಮಕ್ಕಳು ನಂಬುವಂತೆ ಮಾಡುವ ಕೀಟಲೆಗಳನ್ನು ಇದು ಒಳಗೊಂಡಿರಬಹುದು.
    • ತನ್ನ ವಿರುದ್ಧ ಅಥವಾ ಇತರರ ವಿರುದ್ಧ ಬೆದರಿಕೆಗಳು ಅಥವಾ ದೈಹಿಕ ಅಥವಾ ಮಾನಸಿಕ ಹಾನಿಯನ್ನು ಪ್ರಚೋದಿಸುವುದು; ಉದಾಹರಣೆಗೆ ರೈಲು ಹಳಿಗಳ ಮೇಲೆ ಮಲಗಿಕೊಳ್ಳುವುದು.
    • COVID-19, ವೈರಸ್‌ಗೆ ಉದ್ದೇಶಪೂರ್ವಕವಾಗಿ ಒಡ್ಡಿಕೊಳ್ಳುವ ಅಥವಾ ಗಾಬರಿ ಉಂಟುಮಾಡುವಂತಹ ಅಪಾಯಕಾರಿ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು (ಉದಾ., ಕ್ವಾರಂಟೈನ್-ವಿರೋಧಿ ಚಳುವಳಿ ಅಥವಾ ಸಾರ್ವಜನಿಕ ಸ್ಥಳದಲ್ಲಿರುವಾಗ, ಪಾಸಿಟಿವ್ ಬಂದಿರುವ ಹಾಗೆ ನಟಿಸುವುದು).
    • ಇತರರಿಗೆ ಹಾನಿ ಉಂಟುಮಾಡಲು ಶಸ್ತ್ರಗಳ ಬಳಕೆಯ ಕುರಿತು ಪ್ರಚಾರ ಮಾಡುವುದು.
    • ಗೋಸ್ಟ್ ಪೆಪ್ಪರ್ ತಿಂದ ಬಳಿಕ ವಾಂತಿ ಮಾಡುವಂತಹ, ಗ್ರಾಫಿಕ್ ಆಗಿ ಆಘಾತಕಾರಿಯಾಗಿರುವ ದೈಹಿಕ ಪ್ರತಿಕ್ರಿಯೆಯನ್ನು ಉಂಟುಮಾಡುವ ಪ್ರಮಾಣದಲ್ಲಿ ವಸ್ತುಗಳ ಸೇವನೆಯನ್ನು ತೋರಿಸುವುದು.
    • ಪುನರಾವರ್ತಿಸಿದರೆ ಗಂಭೀರ ಹಾನಿ ಉಂಟುಮಾಡಬಹುದಾದ ಸವಾಲುಗಳು; ಉದಾಹರಣೆಗೆ ಫೈರ್ ಚಾಲೆಂಜ್ ಅಥವಾ ಬರ್ಡ್ ಬಾಕ್ಸ್ ಚಾಲೆಂಜ್.
    • ವಂಚನೆಯ ಅಥವಾ ಕಾನೂನುಬಾಹಿರ ಚಟುವಟಿಕೆಗಳನ್ನು ಉತ್ತೇಜಿಸುವುದು (ಉದಾ. ದರೋಡೆ/ಕಳ್ಳತನ).

ವೈದ್ಯಕೀಯ ಮತ್ತು ವೈಜ್ಞಾನಿಕ ತಪ್ಪು ಮಾಹಿತಿ

  • ಆರೋಗ್ಯ ಅಥವಾ ವೈದ್ಯಕೀಯಕ್ಕೆ ಸಂಬಂಧಿಸಿದ ಹಾಗೆ ಹಾನಿಕಾರಕ ಕ್ಲೈಮ್‌ಗಳು ಅಥವಾ ಅಭ್ಯಾಸಗಳ ಕುರಿತು ಪ್ರಚಾರ ಮಾಡುವುದು:
    • ಬೆಳವಣಿಗೆ ಹೊಂದಿರುವ ಆರೋಗ್ಯ ಪರಿಸ್ಥಿತಿಗಳು ಅಸ್ತಿತ್ವದಲ್ಲಿಲ್ಲ ಎಂದು ನಿರಾಕರಿಸುವುದು, ಉದಾಹರಣೆಗೆ, ಎಚ್ಐವಿ.
    • ವೈದ್ಯಕೀಯ ಪರಿಸ್ಥಿತಿಗಳಿಗೆ ವೈಜ್ಞಾನಿಕವಾಗಿ ಸಾಬೀತಾಗದ ಪರಿಹಾರಗಳನ್ನು ಪ್ರೋತ್ಸಾಹಿಸುವ ಅಥವಾ ಸೂಚನೆಗಳನ್ನು ನೀಡುವ ವೀಡಿಯೊಗಳು (ಉದಾ., ಆಹಾರದ ಆಯ್ಕೆಗಳ ಮೂಲಕ ಕ್ಯಾನ್ಸರ್ ಗುಣಪಡಿಸುವುದು).
    • ವ್ಯಾಕ್ಸಿನೇಷನ್ ವಿರೋಧಿ ಪ್ರಚಾರದಂತಹ ಅಭಿವೃದ್ಧಿ ಹೊಂದಿರುವ ವೈದ್ಯಕೀಯ ಮತ್ತು ವೈಜ್ಞಾನಿಕ ಸಂಗತಿಗಳನ್ನು ನಿರಾಕರಿಸುವಂತಹ ತಪ್ಪು ಮಾಹಿತಿಯನ್ನು ಹರಡುವುದು.
    • ಸಲಿಂಗಕಾಮಿ ಪರಿವರ್ತನೆ ಚಿಕಿತ್ಸೆಯ ಪ್ರೋಗ್ರಾಂಗಳು ಅಥವಾ ಸೇವೆಗಳನ್ನು ಉತ್ತೇಜಿಸುವ ಕಂಟೆಂಟ್.
  • COVID-19 ಗೆ ಸಂಬಂಧಿಸಿದ ಹಾನಿಕಾರಕ ತಪ್ಪು ಮಾಹಿತಿಯನ್ನು ಉತ್ತೇಜಿಸುವುದು ಅಥವಾ ಸಮರ್ಥಿಸುವುದು:
    • COVID-19 ಲಸಿಕೆ ತೆಗೆದುಕೊಳ್ಳುವುದನ್ನು ವಿರೋಧಿಸುವ ಕಂಟೆಂಟ್.
    • ಲಸಿಕೆಯ ಪರಿಣಾಮಗಳು ಅಥವಾ ವಿತರಣೆಯ ಬಗ್ಗೆ ಸುಳ್ಳು ಅಥವಾ ತಪ್ಪು ಪ್ರತಿಪಾದನೆಗಳನ್ನು ಮಾಡುವುದು. ಇದು ಇವುಗಳನ್ನು ಒಳಗೊಂಡಿರಬಹುದು:
      • ಲಸಿಕೆ ಬಂಜೆತನಕ್ಕೆ ಕಾರಣವಾಗುತ್ತದೆ ಎಂದು ಹೇಳುವುದು. 
      • ಲಸಿಕೆ ಮೈಕ್ರೋಚಿಪ್ ಅನ್ನು ಹೊಂದಿದೆ ಎಂದು ಹೇಳುವುದು. 
      • ಜನಸಂಖ್ಯೆಯ ಒಂದು ಭಾಗವನ್ನು ಕೊಲ್ಲಲು ಲಸಿಕೆಗಳನ್ನು ಬಳಸಬಹುದೆಂದು ಹೇಳುವುದು.
    • ಮಾಸ್ಕ್‌ಗಳು ಅಥವಾ ಸಾಮಾಜಿಕ ಅಂತರವು COVID-19 ಸೋಂಕು ತಗುಲುವುದನ್ನು ಅಥವಾ ಹರಡುವುದನ್ನು ಕಡಿಮೆ ಮಾಡುವುದಿಲ್ಲ ಎಂದು ಹೇಳುವುದು.
    • ಅಭಿವೃದ್ಧಿ ಹೊಂದಿದ ವೈದ್ಯಕೀಯ ಮತ್ತು ವೈಜ್ಞಾನಿಕ ಸಂಗತಿಗಳನ್ನು ಆಧರಿಸದ COVID-19 ಹರಡುವಿಕೆಯ ಕುರಿತು ಹೇಳುವುದು (ಉದಾ., ಇದನ್ನು 5G ವೈರ್‌ಲೆಸ್ ಸಿಗ್ನಲ್‌ಗಳ ಮೂಲಕ ನಡೆಸಲಾಗುತ್ತದೆ).
    • COVID-19 ಗೆ ಸಂಬಂಧಿಸಿದಂತೆ ವೈಜ್ಞಾನಿಕವಾಗಿ ಸಾಬೀತಾಗದ ಪರಿಹಾರಗಳನ್ನು ಪ್ರೋತ್ಸಾಹಿಸುವ ಅಥವಾ ಸೂಚನೆಗಳನ್ನು ನೀಡುವ ವೀಡಿಯೊಗಳು (ಉದಾ., ಹೈಡ್ರಾಕ್ಸಿಕ್ಲೋರೋಕ್ವಿನ್ ಇಂಜೆಕ್ಷನ್ ನೀಡುವುದು).

ಹಾನಿಕಾರಕ ತಪ್ಪು ಮಾಹಿತಿ

  • ತಪ್ಪೆಂದು ಸಾಬೀತುಪಡಿಸಬಹುದಾದ ಮತ್ತು ಚುನಾವಣಾ ಅಥವಾ ಪ್ರಜಾತಾಂತ್ರಿಕ ಪ್ರಕ್ರಿಯೆಯ ಮೇಲಿನ ನಂಬಿಕೆಗೆ ಘಾಸಿಮಾಡಬಹುದಾದ ಹೇಳಿಕೆಗಳನ್ನು ನೀಡುವುದು.
    • ಸಾರ್ವಜನಿಕ ಮತದಾನ ಪ್ರಕ್ರಿಯೆಗಳು, ವಯಸ್ಸು ಅಥವಾ ಜನ್ಮಸ್ಥಳವನ್ನು ಆಧರಿಸಿದ ರಾಜಕೀಯ ಅಭ್ಯರ್ಥಿಯ ಅರ್ಹತೆ, ಚುನಾವಣಾ ಫಲಿತಾಂಶ ಅಥವಾ ಜನಗಣತಿಯಲ್ಲಿನ ಪಾಲ್ಗೊಳ್ಳುವಿಕೆಯ ಕುರಿತು, ಬಹುಬಾರಿ ಸರ್ಕಾರದ ದಾಖಲೆಗಳಿಗೆ ವ್ಯತಿರಿಕ್ತವಾಗಿರುವ ತಪ್ಪೆಂದು ಸಾಬೀತುಪಡಿಸಬಹುದಾದ ಮಾಹಿತಿ.
  • ಹಾನಿಕಾರಕ ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವುದು (ಉದಾ. Pizzagate, QAnon, StopTheSteal).
  • ಹಾನಿಕಾರಕ ತಪ್ಪು ಮಾಹಿತಿಯನ್ನು ಪ್ರಚಾರ ಮಾಡುವ ಗುಂಪುಗಳನ್ನು ಪ್ರೋತ್ಸಾಹಿಸುವುದು.
  • ಹವಾಮಾನ ವೈಪರೀತ್ಯದ ಅಸ್ತಿತ್ವ ಮತ್ತು ಕಾರಣಗಳ ಬಗ್ಗೆ ಅಧಿಕೃತ ವೈಜ್ಞಾನಿಕ ಒಮ್ಮತವನ್ನು ವಿರೋಧಿಸುವುದು.

ವೇಪಿಂಗ್ ಮತ್ತು ತಂಬಾಕು 

  • ತಂಬಾಕು ಮತ್ತು ತಂಬಾಕು ಸಂಬಂಧಿತ ಉತ್ಪನ್ನಗಳು ಮತ್ತು ಅವುಗಳ ಬಳಕೆಯನ್ನು ಉತ್ತೇಜಿಸುವುದು.
  • ಅಪ್ರಾಪ್ತ ವಯಸ್ಕರು ವೇಪಿಂಗ್ ಮಾಡುವುದು/ತಂಬಾಕು ಉತ್ಪನ್ನಗಳನ್ನು ಸೇವಿಸುತ್ತಿರುವ ದೃಶ್ಯಾವಳಿಗಳು.
  • ವೇಪಿಂಗ್/ತಂಬಾಕು ಉತ್ಪನ್ನಗಳ ಮಾರಾಟವನ್ನು ಅನುಕೂಲಗೊಳಿಸುವುದು.
  • ವೇಪಿಂಗ್/ತಂಬಾಕು ಉತ್ಪನ್ನಗಳನ್ನು ತಯಾರಕರು ಉದ್ದೇಶಿಸದ ರೀತಿಯಲ್ಲಿ ಬಳಸುವುದು (ಉದಾ. ವೇಪ್ ಜ್ಯೂಸ್ ಕುಡಿಯುವುದು). 

ಆಲ್ಕೋಹಾಲ್

  • ವೀಡಿಯೊದ ಮುಖ್ಯ ವಿಷಯವಲ್ಲದಿದ್ದರೂ ಸಹ ಅಪ್ರಾಪ್ತ ವಯಸ್ಕರು ಆಲ್ಕೋಹಾಲ್ ಸೇವಿಸುವ ಚಿತ್ರಣವನ್ನು ತೋರಿಸುವುದು. 
  • ಅಪ್ರಾಪ್ತ ವಯಸ್ಕರಿಗೆ ಸಂಬಂಧಿಸಿದಂತೆ ಆಲ್ಕೋಹಾಲ್ ಸೇವನೆಯನ್ನು ಉತ್ತೇಜಿಸುವುದು.

ವಿದೇಶಿ ಭಯೋತ್ಪಾದಕ ಸಂಘಟನೆಗಳು (FTO)

  • FTO ಗಳು ಅಥವಾ ಭಯೋತ್ಪಾದನೆಯ ವಿಷಯದ ಮೇಲೆ ಗಮನ ಕೇಂದ್ರೀಕರಿಸುವ ಶೈಕ್ಷಣಿಕವಲ್ಲದ ವೀಡಿಯೊಗಳು, ಉದಾಹರಣೆಗೆ: 
    • ಪ್ರಮುಖ ವಿಷಯವಾಗಿ ಭಯೋತ್ಪಾದಕ ದಾಳಿಯ ಕುರಿತು ಚರ್ಚೆಗಳು.
    • ಕಂಟೆಂಟ್‌ನಲ್ಲಿ ಎಲ್ಲಿಯಾದರೂ (ಉದಾ. ಥಂಬ್‌ನೇಲ್‌ನಲ್ಲಿ) ಸಂಬಂಧಿತ ಚಿತ್ರಣ ಅಥವಾ ಗುಂಪು/ನಾಯಕರ ಚಿತ್ರಣ ಅಥವಾ ಹೆಸರುಗಳು.
  • ಆಘಾತಕಾರಿ, ಗ್ರಾಫಿಕ್ ಮತ್ತು/ಅಥವಾ ಹಿಂಸಾತ್ಮಕ ಚಿತ್ರಣ ಅಥವಾ ಹಿಂಸಾಚಾರವನ್ನು ಪ್ರಚೋದಿಸುವ ಅಥವಾ ವೈಭವೀಕರಿಸುವ ದೃಶ್ಯಗಳನ್ನು ಒಳಗೊಂಡಿರುವ ಕಂಟೆಂಟ್.
  • ಭಯೋತ್ಪಾದಕ ಸಂಘಟನೆಗಳು ರಚಿಸಿದ ಅಥವಾ ಸಂಘಟನೆಗಳಿಗೆ ಬೆಂಬಲವಾಗಿ ರಚಿಸಲಾದ ಕಂಟೆಂಟ್.
  • ಭಯೋತ್ಪಾದಕ ದಾಳಿಗಳನ್ನು ಕೊಂಡಾಡುವ ಅಥವಾ ದಾಳಿ ನಡೆದಿರುವುದನ್ನು ನಿರಾಕರಿಸುವ ಕಂಟೆಂಟ್.

ಡ್ರಗ್ ವ್ಯಾಪಾರ ಸಂಘಟನೆಗಳು (DTO)

  • ನಿರ್ದಿಷ್ಟ DTO ಗಳು, DTO ನಾಯಕರು ಅಥವಾ ಅಂತರರಾಷ್ಟ್ರೀಯ ಡ್ರಗ್ ವ್ಯಾಪಾರದ ಮೇಲೆ ಕೇಂದ್ರೀಕರಿಸಿದ ಶೈಕ್ಷಣಿಕವಲ್ಲದ ವೀಡಿಯೊಗಳು.
    • “ಶೈಕ್ಷಣಿಕವಲ್ಲದ” ಎಂದರೆ, ಈ ವಿಷಯದ ಬಗ್ಗೆ ವೀಡಿಯೊದಲ್ಲಿನ ಯಾದೃಚ್ಛಿಕ, ಅನಪೇಕ್ಷಿತ ಚರ್ಚೆ, ಏಕೆಂದರೆ ವಿಷಯವನ್ನು ವಿವರಿಸುವುದು ವೀಡಿಯೊದ ಉದ್ದೇಶವಾಗಿದೆ ಎಂಬ ಸ್ಪಷ್ಟ ಪ್ರಕಟಣೆ ಇಲ್ಲದಿರುವುದು.
  • DTO-ಸಂಬಂಧಿತ ಚಿತ್ರಣಗಳಾದ ಧ್ವಜಗಳು, ಘೋಷಣೆಗಳು, ಬ್ಯಾನರ್‌ಗಳು ಇತ್ಯಾದಿಯಂತಹ ಶೈಕ್ಷಣಿಕವಲ್ಲದ ಚಿತ್ರಣಗಳು.
  • ಗುಂಪಿನ ಸದಸ್ಯರ ನೇಮಕಾತಿ.
  • “ನಾರ್ಕೊಕೊರಿಡೋಸ್” ಗೆ ಸಂಬಂಧಿಸಿದ ಸಂಗೀತ ಅಥವಾ ಅನ್ಯಥಾ DTO ಗಳನ್ನು ವೈಭವೀಕರಿಸುವುದು ಅಥವಾ ಪ್ರಚಾರ ಮಾಡುವುದು.
  • DTO ಗಳ ಮೂಲಕ ನಡೆಸಲಾದ ಒತ್ತೆಯಾಳುಗಳು ಅಥವಾ ವಿಚಾರಣೆಯಂತಹ ಹಿಂಸಾತ್ಮಕ ಸನ್ನಿವೇಶಗಳು ಹಾಗೂ ಕ್ರಮಗಳು.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ದ್ವೇಷಪೂರ್ಣ ಮತ್ತು ಅವಹೇಳನಕಾರಿ ಕಂಟೆಂಟ್

ಒಬ್ಬ ವ್ಯಕ್ತಿಯ ಅಥವಾ ಜನರ ಗುಂಪಿನ ವಿರುದ್ಧ ದ್ವೇಷವನ್ನು ಪ್ರಚೋದಿಸುವ, ತಾರತಮ್ಯವನ್ನು ಉತ್ತೇಜಿಸುವ, ಅವಹೇಳನ ಮಾಡುವ ಅಥವಾ ಅವಮಾನಿಸುವ ಕಂಟೆಂಟ್ ಜಾಹೀರಾತಿಗೆ ಸೂಕ್ತವಲ್ಲ. ವಿಡಂಬನೆ ಅಥವಾ ಹಾಸ್ಯದ ಕಂಟೆಂಟ್‌ಗೆ ವಿನಾಯಿತಿ ನೀಡಬಹುದು. ನಿಮ್ಮ ಹಾಸ್ಯದ ಉದ್ದೇಶವನ್ನು ಹೇಳುವುದು ಸಾಕಾಗುವುದಿಲ್ಲ ಮತ್ತು ಆ ಕಂಟೆಂಟ್ ಜಾಹೀರಾತಿಗೆ ಇನ್ನೂ ಸೂಕ್ತವಲ್ಲದಿರಬಹುದು.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ನೋವುಂಟುಮಾಡದ ರೀತಿಯಲ್ಲಿ ಸಂರಕ್ಷಿತ ಗುಂಪುಗಳನ್ನು ಉಲ್ಲೇಖಿಸುವ ಅಥವಾ ನಿರ್ದಿಷ್ಟ ವ್ಯಕ್ತಿಯ ಅಭಿಪ್ರಾಯಗಳು ಅಥವಾ ಕ್ರಿಯೆಗಳನ್ನು ಟೀಕಿಸುವ ಕಂಟೆಂಟ್.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಸಂರಕ್ಷಿತ ಗುಂಪಿನ ಕುರಿತು ವಿವರಿಸುವ ಸುದ್ದಿ ಕಂಟೆಂಟ್ ಅಥವಾ ಇಂತಹ ಗುಂಪು ಎದುರಿಸಬಹುದಾದ ತಾರತಮ್ಯದ ಕುರಿತು ದ್ವೇಷಪೂರ್ಣವಲ್ಲದ ರೀತಿಯಲ್ಲಿರುವ ವರದಿಗಳು; ಉದಾಹರಣೆಗೆ, ಹೋಮೋಫೋಬಿಯಾದ ಕುರಿತಾದ ಸುದ್ದಿ ವರದಿ.
  • ಸಂರಕ್ಷಿತ ಗುಂಪುಗಳನ್ನು ಅವಮಾನಿಸುವ ಅಥವಾ ಇತರ ಕೀಳುಮಟ್ಟದ ಕಾಮೆಂಟ್‌ಗಳನ್ನು ಖಂಡಿಸುವ ಅಥವಾ ವ್ಯಂಗ್ಯಮಾತಿನಿಂದ ಟೀಕಿಸುವ ಕಂಟೆಂಟ್.
  • ಸಂರಕ್ಷಿತ ಗುಂಪುಗಳ ವಿರುದ್ಧ ದ್ವೇಷ ಮತ್ತು ಹಿಂಸಾತ್ಮಕ ಸಂಘರ್ಷವನ್ನು ಪ್ರಚೋದಿಸದ ಸಾರ್ವಜನಿಕ ಚರ್ಚೆಗಳು.
  • ಸಂವೇದನಾಶೀಲ ಪದಗಳನ್ನು ಅಥವಾ ಸಂಕೇತಗಳನ್ನು ದ್ವೇಷಪೂರ್ಣವಲ್ಲದ ರೀತಿಯಲ್ಲಿ ಬಳಸುವ ಕಲಾತ್ಮಕ ಕಂಟೆಂಟ್; ಉದಾಹರಣೆಗೆ ಜನಪ್ರಿಯ ಸಂಗೀತ ವೀಡಿಯೊಗಳು.
  • ಶೈಕ್ಷಣಿಕ ಅಥವಾ ಸಾಕ್ಷ್ಯಚಿತ್ರ ಕಂಟೆಂಟ್:
    • ಸೆನ್ಸಾರ್ ಮಾಡಲಾದ ಜನಾಂಗೀಯ ಬೈಗುಳಗಳು ಅಥವಾ ಪ್ರೇಕ್ಷಕರಿಗೆ ಮಾಹಿತಿ ಒದಗಿಸುವ ಉದ್ದೇಶವಿರುವ ಅಪಮಾನಕರ ಪದಗಳು (ಉದಾ. ನಿ***ರ್).
    • ದ್ವೇಷದ ಚಿತ್ರಣವು ಕೇಂದ್ರಬಿಂದುವಾಗಿರುವುದು.
  • ಕೆರಳಿಸುವ ಅಥವಾ ಅವಮಾನಿಸುವ ಉದ್ದೇಶವಿಲ್ಲದೆ, ಒಬ್ಬ ವ್ಯಕ್ತಿ ಅಥವಾ ಗುಂಪಿನ ಅಭಿಪ್ರಾಯ, ದೃಷ್ಟಿಕೋನಗಳು ಅಥವಾ ಕ್ರಿಯೆಗಳನ್ನು ಟೀಕಿಸುವುದು.

ವ್ಯಾಖ್ಯಾನಗಳು:

"ಸಂರಕ್ಷಿತ ಗುಂಪು", ಈ ಕೆಳಗಿನ ಗುಣಲಕ್ಷಣಗಳ ಗುಂಪುಗಳನ್ನು ಸೂಚಿಸುತ್ತದೆ. ಈ ಕೆಳಗಿನ ಗುಣಲಕ್ಷಣಗಳ ಆಧಾರದ ಮೇಲೆ ಒಬ್ಬ ವ್ಯಕ್ತಿ ಅಥವಾ ಜನರ ಗುಂಪಿನ ವಿರುದ್ಧ ದ್ವೇಷವನ್ನು ಪ್ರಚೋದಿಸುವುದು, ತಾರತಮ್ಯ ಮಾಡುವುದು, ಅವಹೇಳನ ಮಾಡುವುದು ಅಥವಾ ಅವಮಾನಿಸುವುದು ಜಾಹೀರಾತುದಾರ ಸ್ನೇಹಿಯಾಗಿ ಪರಿಗಣಿಸುವುದಿಲ್ಲ.

  • ರೇಸ್
  • ಜನಾಂಗೀಯತೆ ಅಥವಾ ಜನಾಂಗೀಯ ಮೂಲ
  • ರಾಷ್ಟ್ರೀಯತೆ
  • ಧರ್ಮ
  • ಅಸಾಮರ್ಥ್ಯ
  • ವಯಸ್ಸು
  • ವೆಟರನ್ ಸ್ಥಿತಿ
  • ಲೈಂಗಿಕ ದೃಷ್ಟಿಕೋನ
  • ಲೈಂಗಿಕ ಗುರುತು
  • ವ್ಯವಸ್ಥಿತ ತಾರತಮ್ಯ ಅಥವಾ ಕಡೆಗಣಿಸುವಿಕೆಗೆ ಸಂಬಂಧಪಟ್ಟ ಇತರ ಯಾವುದೇ ಗುಣಲಕ್ಷಣ.
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ನಿರ್ದಿಷ್ಟ ವ್ಯಕ್ತಿಗಳು ಅಥವಾ ಗುಂಪುಗಳಿಗೆ ಆಕ್ಷೇಪಾರ್ಹವಾಗಿರಬಹುದಾದ, ಆದರೆ ಶಿಕ್ಷಣ, ಸುದ್ದಿ ಅಥವಾ ಸಾಕ್ಷ್ಯಚಿತ್ರದಲ್ಲಿ ಬಳಸಲಾದ ಕಂಟೆಂಟ್.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಆಕ್ಷೇಪಾರ್ಹ ಭಾಷೆಯನ್ನು ಒಳಗೊಂಡಿರಬಹುದಾದ, ಆದರೆ ಶೈಕ್ಷಣಿಕ ಮಾಹಿತಿ ಒದಗಿಸುವ ಉದ್ದೇಶವಿರುವ ರಾಜಕೀಯ ಉಪನ್ಯಾಸ ಅಥವಾ ಚರ್ಚೆ; ಉದಾಹರಣೆಗೆ ಮಂಗಳಮುಖಿಯರ ಹಕ್ಕುಗಳ ಕುರಿತಾದ ರಾಜಕೀಯ ಚರ್ಚೆ.
  • ಶೈಕ್ಷಣಿಕ ಕಂಟೆಂಟ್:
    • ಪ್ರೇಕ್ಷಕರಿಗೆ ಶೈಕ್ಷಣಿಕ ಮಾಹಿತಿ ನೀಡುವ ಉದ್ದೇಶವಿರುವ, ಸೆನ್ಸಾರ್ ಮಾಡಿರದ ಜನಾಂಗೀಯ ಬೈಗುಳಗಳು ಅಥವಾ ಅಪಮಾನಕರ ಪದಗಳು (ಉದಾ., ಸೆನ್ಸಾರ್ ಮಾಡಿರದ ಅಥವಾ ಇಡಿಯಾಗಿ ಹೇಳಿರುವ ಎನ್-ಪದದ ಬಳಕೆ).
    • ಈ ಕೆಳಗಿನ ಕೃತ್ಯಗಳ ಕುರಿತು ವಿಶೇಷವಾಗಿ ಪ್ರಚಾರ ಮಾಡದೆ ಅಥವಾ ವೈಭವೀಕರಿಸದೆ, ಯಾರಾದರೂ ಇವುಗಳನ್ನು ಮಾಡುತ್ತಿರುವುದನ್ನು ಒಳಗೊಂಡಿರುವ ಕಚ್ಚಾ ಫೂಟೇಜ್:
      • ಒಬ್ಬ ವ್ಯಕ್ತಿ ಅಥವಾ ಗುಂಪನ್ನು ಹೀಯಾಳಿಸುವುದು ಅಥವಾ ಅಪಮಾನಿಸುವುದರ ಮೇಲೆ ಗಮನ ಕೇಂದ್ರೀಕರಿಸಿರುವುದು.
      • ಯಾರನ್ನಾದರೂ ನಿಂದನೆ ಅಥವಾ ಕಿರುಕುಳಕ್ಕೆ ಗುರಿಯಾಗಿಸುವುದು.
      • ದುರಂತ ಘಟನೆಗಳು ನಡೆದಿರುವುದನ್ನು ನಿರಾಕರಿಸುವುದು ಮತ್ತು ಸತ್ಯವನ್ನು ಮರೆಮಾಚಲಾಗಿದೆ ಎಂದು ಹೇಳುವುದು.
      • ದುರುದ್ದೇಶಪೂರಿತ ವೈಯಕ್ತಿಕ ದಾಳಿಗಳು ಮತ್ತು ಮಾನಹಾನಿ.
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ನಿರ್ದಿಷ್ಟ ವ್ಯಕ್ತಿಗಳು ಅಥವಾ ಗುಂಪುಗಳ ವಿರುದ್ಧ ದ್ವೇಷ ಅಥವಾ ಕಿರುಕುಳ.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಒಂದು ಸಂರಕ್ಷಿತ ಗುಂಪನ್ನು ಹೀಯಾಳಿಸುವ ಅಥವಾ ಅದು ಕೆಳಮಟ್ಟದಲ್ಲಿದೆ ಎಂಬುದನ್ನು ಸೂಚಿಸುವ/ಹೇಳುವ ಉದ್ದೇಶವಿರುವ ಹೇಳಿಕೆಗಳು; ಉದಾಹರಣೆಗೆ “ಈ ದೇಶದ ಎಲ್ಲಾ ಜನರು ಕೆಟ್ಟವರು”.
  • ಜನಾಂಗೀಯ ನಿಂದನೆ ಅಥವಾ ಅವಹೇಳನಕಾರಿ ಪದಗಳನ್ನು ಒಳಗೊಂಡಿರುವ ಶೈಕ್ಷಣಿಕವಲ್ಲದ ಕಂಟೆಂಟ್.
  • ಇತರರ ವಿರುದ್ಧ ಹಿಂಸೆಯನ್ನು ಪ್ರಚಾರ ಮಾಡುವುದು, ವೈಭವೀಕರಿಸುವುದು ಅಥವಾ ಅನುಮೋದಿಸುವುದು.
    • ಸಂರಕ್ಷಿತ ಗುಂಪುಗಳ ವಿರುದ್ಧ ತಾರತಮ್ಯವನ್ನು ಪ್ರೇರೇಪಿಸುವುದು, ಉದಾಹರಣೆಗೆ "ಈ ದೇಶದಲ್ಲಿರುವ ಎಲ್ಲಾ ಅಂಗವಿಕಲರನ್ನು ನೀವು ದ್ವೇಷಿಸಬೇಕು" ಎಂದು ಹೇಳುವುದು.
  • ಗುಂಪುಗಳನ್ನು ದ್ವೇಷಿಸುವುದು, ಚಿಹ್ನೆಗಳನ್ನು ದ್ವೇಷಿಸುವುದು ಅಥವಾ ಗುಂಪು ಸಾಮಗ್ರಿಗಳನ್ನು ದ್ವೇಷಿಸುವುದನ್ನು ಉತ್ತೇಜಿಸುವುದು.
  • ವ್ಯಕ್ತಿಯ ಅಥವಾ ಗುಂಪಿನ ದುರುದ್ದೇಶಪೂರಿತ ಅವಮಾನ ಮಾಡುವುದು ಅಥವಾ ಅವಹೇಳನ ಮಾಡುವುದು.
  • ನಿಂದನೆ ಅಥವಾ ಕಿರುಕುಳಕ್ಕಾಗಿ ಒಬ್ಬ ವ್ಯಕ್ತಿ ಅಥವಾ ಗುಂಪನ್ನು ಪ್ರತ್ಯೇಕಿಸುವುದು.
  • ದುರಂತ ಘಟನೆಗಳು ಸಂಭವಿಸಿವೆ ಎಂದು ನಿರಾಕರಿಸುವುದು ಅಥವಾ ವೈಭವೀಕರಿಸುವುದು, ಸಂತ್ರಸ್ತರು ಅಥವಾ ಬದುಕುಳಿದವರನ್ನು ಬಿಕ್ಕಟ್ಟಿನ ನಟರನ್ನಾಗಿ ರೂಪಿಸುವುದು.
  • ದುರುದ್ದೇಶಪೂರಿತ ವೈಯಕ್ತಿಕ ದಾಳಿಗಳು, ಅಪನಿಂದೆ ಮತ್ತು ಮಾನಹಾನಿ.
  • ಸಿದ್ಧಾಂತಗಳು ಅಥವಾ ನಂಬಿಕೆಗಳನ್ನು ಸಾಮಾನ್ಯೀಕರಿಸುವ ಅಥವಾ ಅವಹೇಳನ ಮಾಡುವ ಮೂಲಕ ದುರುದ್ದೇಶಪೂರಿತ ರೀತಿಯಲ್ಲಿ ಚಿತ್ರಿಸುವುದು.
    • ವ್ಯಕ್ತಿಗಳು, ಗುಂಪುಗಳು, ಸಿದ್ಧಾಂತಗಳು ಅಥವಾ ನಂಬಿಕೆಗಳನ್ನು ಋಣಾತ್ಮಕವಾಗಿ ನಿರೂಪಿಸುವುದು, ಉದಾಹರಣೆಗೆ "ಎಲ್ಲಾ ಸ್ತ್ರೀವಾದವು ಸೂಕ್ತವಲ್ಲ" ಎಂದು ಹೇಳುವುದು.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಮನರಂಜನೆಗಾಗಿ ಬಳಸುವ ಡ್ರಗ್‌ಗಳು ಮತ್ತು ಡ್ರಗ್‌ಗಳಿಗೆ ಸಂಬಂಧಿಸಿದ ಕಂಟೆಂಟ್

ಕಾನೂನುಬಾಹಿರ ಡ್ರಗ್‌ಗಳು, ನಿಯಂತ್ರಿತ ಕಾನೂನು ಡ್ರಗ್‌ಗಳು ಅಥವಾ ವಸ್ತುಗಳು ಅಥವಾ ಇತರ ಅಪಾಯಕಾರಿ ಉತ್ಪನ್ನಗಳ ಮಾರಾಟ, ಬಳಕೆ ಅಥವಾ ನಿಂದನೆಯನ್ನು ಪ್ರಚಾರ ಮಾಡುವ ಅಥವಾ ಒಳಗೊಂಡಿರುವ ಕಂಟೆಂಟ್ ಜಾಹೀರಾತಿಗೆ ಸೂಕ್ತವಲ್ಲ.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಕಾನೂನುಬಾಹಿರ ಡ್ರಗ್ ಬಳಕೆಯನ್ನು ಉತ್ತೇಜಿಸುವ ಅಥವಾ ವೈಭವೀಕರಿಸುವ ಉದ್ದೇಶವನ್ನು ಹೊಂದಿರದ, ಮನರಂಜನೆಗಾಗಿ ಬಳಸುವ ಡ್ರಗ್‌ಗಳ ಅಥವಾ ಮಾದಕ ಪದಾರ್ಥಗಳ ಬಗ್ಗೆ ಶೈಕ್ಷಣಿಕ, ಹಾಸ್ಯಮಯ ಅಥವಾ ಸಂಗೀತಕ್ಕೆ ಸಂಬಂಧಿಸಿದ ಉಲ್ಲೇಖಗಳು. ಗೇಮಿಂಗ್ ಕಂಟೆಂಟ್‌ನಲ್ಲಿ ಡ್ರಗ್ ಡೀಲ್‌ಗಳನ್ನು ತೋರಿಸುವುದು. ಡಾಕ್ಯುಮೆಂಟರಿ ಅಥವಾ ಪತ್ರಿಕೋದ್ಯಮ ವರದಿಗಳು ಡ್ರಗ್ಸ್ ಬಳಸಿ ನಾಟಕೀಯ ಕಂಟೆಂಟ್ ಅನ್ನು ಚಿತ್ರಿಸುವುದು.

ಈ ವರ್ಗಕ್ಕೆ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಡ್ರಗ್ಸ್ ಅಥವಾ ಡ್ರಗ್ ಸಾಮಗ್ರಿಗಳ ಕುರಿತಾದ ಶೈಕ್ಷಣಿಕ ಕಂಟೆಂಟ್, ಔಷಧ ಬಳಕೆ ವೈಜ್ಞಾನಿಕ ಪರಿಣಾಮಗಳು ಅಥವಾ ಡ್ರಗ್ ಕಳ್ಳಸಾಗಣೆಯ ಇತಿಹಾಸ.
  • ಮಾದಕ ವ್ಯಸನದ ಚೇತರಿಕೆಯ ವೈಯಕ್ತಿಕ ಖಾತೆಗಳು.
  • ಮಾದಕ ವಸ್ತುಗಳ ಕ್ಷಣಿಕ ಚಿತ್ರಣವಿರುವ ಸಂಗೀತ ವೀಡಿಯೊಗಳು.
  • ಮಾದಕ ವಸ್ತು ಡೀಲಿಂಗ್‌ಗಳನ್ನು ಪ್ರದರ್ಶಿಸುವ ಗೇಮಿಂಗ್ ಕಂಟೆಂಟ್. 
  • ಮಾದಕ ವಸ್ತುಗಳ ಖರೀದಿ, ತಯಾರಿಕೆ, ಬಳಕೆ ಅಥವಾ ವಿತರಣೆಯ ಕುರಿತು ಸಾಕ್ಷ್ಯಚಿತ್ರ ಅಥವಾ ಪತ್ರಿಕೋದ್ಯಮದ ವರದಿಗಳು, ಉದಾ. ಮಾದಕ ವಸ್ತು ದಂಧೆಯ ಕುರಿತಾದ ಕತೆ.
  • ಮಾದಕ ವಸ್ತುಗಳ ಸೇವನೆ ಅಥವಾ ಬಳಕೆಯನ್ನು (ಉದಾ. ಇಂಜೆಕ್ಷನ್) ಹೊಂದಿರುವ ಗೇಮಿಂಗ್ ದೃಶ್ಯಗಳು ಸೇರಿದಂತೆ ನಾಟಕೀಯ, ಸಾಕ್ಷ್ಯಚಿತ್ರ ಅಥವಾ ಪತ್ರಿಕೋದ್ಯಮದ ವರದಿ.
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ಕಾನೂನುಬಾಹಿರ ಡ್ರಗ್ ಬಳಕೆಯನ್ನು ಉತ್ತೇಜಿಸುವ ಅಥವಾ ವೈಭವೀಕರಿಸುವ ಉದ್ದೇಶವನ್ನು ಹೊಂದಿರದ, ಅಕ್ರಮ ಡ್ರಗ್ ಸೇವನೆ (ಇಂಜೆಕ್ಷನ್ ಸೇರಿದಂತೆ) ಅಥವಾ ಉತ್ಪಾದನೆಯ ಮೇಲೆ ಗಮನ ಕೇಂದ್ರೀಕರಿಸುವ ಶೈಕ್ಷಣಿಕವಲ್ಲದ ಮತ್ತು ಮಾಹಿತಿ ರಹಿತ ಕಂಟೆಂಟ್.

ಈ ವರ್ಗಕ್ಕೆ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಮನರಂಜನಾ ಮಾದಕ ವಸ್ತುಗಳ ಬಳಕೆಯನ್ನು ತೋರಿಸುವ ಸಂಗೀತ ಮತ್ತು ವೀಡಿಯೊ ಗೇಮ್‌ಗಳು ಸೇರಿದಂತೆ ನಾಟಕೀಯ ಕಂಟೆಂಟ್.
    • ಸ್ಕ್ರಿಪ್ಟ್ ಮಾಡಲಾದ ಕಂಟೆಂಟ್‌ನಲ್ಲಿ ಹೆಚ್ಚಿನದನ್ನು ಪಡೆಯಲು ಮಾದಕ ವಸ್ತುಗಳನ್ನು ಚುಚ್ಚುವ ದೃಶ್ಯಗಳು.
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಮನರಂಜನೆಗಾಗಿ ಬಳಸುವ ಡ್ರಗ್‌ಗಳ ಬಳಕೆಯನ್ನು ಉತ್ತೇಜಿಸುವ ಸಲುವಾಗಿ ಅಕ್ರಮ ಡ್ರಗ್‌ಗಳನ್ನು ಅಥವಾ ಮಾದಕ ಪದಾರ್ಥಗಳನ್ನು ಖರೀದಿಸುವ, ತಯಾರಿಸುವ, ಮಾರಾಟ ಮಾಡುವ ಅಥವಾ ಹುಡುಕುವ ಕುರಿತು ಸೂಚನೆಗಳನ್ನು ನೀಡುವಂತಹ ಡ್ರಗ್‌ಗಳ ಬಳಕೆಯನ್ನು ಉತ್ತೇಜಿಸುವ ಅಥವಾ ವೈಭವೀಕರಿಸುವ ಕಂಟೆಂಟ್.

ಈ ವರ್ಗಕ್ಕೆ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಡ್ರಗ್ ವಿಮರ್ಶೆಗಳು ಮತ್ತು ಡ್ರಗ್ ಒಳನೋಟಗಳನ್ನು ಹಂಚಿಕೊಳ್ಳುವುದು.
    • ಗಾಂಜಾ ಕೃಷಿಯಂತಹ ಮನರಂಜನೆಗಾಗಿ ಬಳಸುವ ಡ್ರಗ್ ಬಳಕೆ ಅಥವಾ ತಯಾರಿಕೆಗೆ ಸಂಬಂಧಿಸಿದ ಸಲಹೆಗಳು ಅಥವಾ ಶಿಫಾರಸುಗಳು.
    • ಗಾಂಜಾ ಕಾಫಿ ಶಾಪ್‌ಗಳು, ಪ್ರಮುಖ ಶಾಪ್‌ಗಳು, ವಿತರಕರು, ಔಷಧಾಲಯ ಪ್ರವಾಸಗಳು, ಇತ್ಯಾದಿಗಳ ವಿಮರ್ಶೆಗಳು.
    • ಆನ್‌ಲೈನ್ ಅಥವಾ ಆಫ್‌ಲೈನ್‌ನಲ್ಲಿ ಡ್ರಗ್‌ಗಳನ್ನು ಮಾರಾಟ ಮಾಡುವುದು ಅಥವಾ ಖರೀದಿಸುವುದು.
      • ಡ್ರಗ್ ಖರೀದಿಸುವ ಸೈಟ್‌ಗಳ ಲಿಂಕ್‌ಗಳನ್ನು ಅಥವಾ ಡ್ರಗ್ ಖರೀದಿಸುವ ಸ್ಥಳಗಳ ಭೌತಿಕ ವಿಳಾಸಗಳನ್ನು ಹಂಚಿಕೊಳ್ಳುವುದು.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಬಂದೂಕುಗಳಿಗೆ ಸಂಬಂಧಿಸಿದ ಕಂಟೆಂಟ್

ನೈಜ ಅಥವಾ ನಕಲಿ ಬಂದೂಕುಗಳ ಮಾರಾಟ, ಜೋಡಣೆ, ತಪ್ಪಾದ ಬಳಕೆ ಅಥವಾ ದುರುಪಯೋಗದ ಮೇಲೆ ಕೇಂದ್ರೀಕರಿಸಿದ ಕಂಟೆಂಟ್ ಜಾಹೀರಾತಿಗೆ ಸೂಕ್ತವಲ್ಲ.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ನೋಡುಗರಿಗೆ ಅಥವಾ ಇತರರ ಒಡೆತನದ ಆಸ್ತಿಗೆ ಅಪಾಯವನ್ನುಂಟುಮಾಡದಂತೆ ಸ್ಪಷ್ಟವಾದ ತೆರೆದ ಪ್ರದೇಶ ಅಥವಾ ಶೂಟಿಂಗ್ ರೇಂಜ್‌ನಂತಹ ಸುರಕ್ಷಿತ ಪರಿಸರದಲ್ಲಿ ನಾನ್ ಸೆಮಿ ಆಟೋಮೆಟಿಕ್ ಅಥವಾ ಸೆಮಿ ಆಟೋಮೆಟಿಕ್ ಮತ್ತು ಅನ್‌ಮಾಡಿಫೈಡ್ ಗನ್‌ಗಳನ್ನು ತೋರಿಸುವುದು. ದುರಸ್ತಿ ಅಥವಾ ನಿರ್ವಹಣೆಯ ಉದ್ದೇಶಗಳಿಗಾಗಿ ಬಂದೂಕು ಮತ್ತು ಪೇಂಟ್‌ಬಾಲ್ ಗನ್ ಅಸೆಂಬ್ಲಿ ಮತ್ತು ಡಿಸ್‌ಅಸೆಂಬ್ಲಿಯನ್ನು ಮಾಡುವುದು ಏರ್‌ಸಾಫ್ಟ್ ಅಥವಾ ಬಾಲ್ ಬುಲೆಟ್ (BB) ಗನ್‌ಗಳ ಜವಾಬ್ದಾರಿಯುತ ಬಳಕೆ.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಗನ್ ಕುರಿತಾದ ಶಾಸನ ಅಥವಾ ಗನ್ ನಿಯಂತ್ರಣ ಜಾರಿಗೊಳಿಸುವ ಬಗ್ಗೆ ಚರ್ಚೆಗಳು.
  • ಗನ್ ವಿಮರ್ಶೆಗಳು ಮತ್ತು ಪ್ರದರ್ಶನಗಳು.
  • ಆಪ್ಟಿಕಲ್ ಸ್ಕೋಪ್‌ಗಳು ಮತ್ತು ಸೈಲೆನ್ಸರ್‌ಗಳನ್ನು ಒಳಗೊಂಡಿರುವ ಕಂಟೆಂಟ್.
  • ಪ್ರಾಪ್ ಗನ್‌ಗಳು ವ್ಯಕ್ತಿ ಅಥವಾ ಆಸ್ತಿಗೆ ಹಾನಿ ಮಾಡಲು ಬಳಸದಿದ್ದಾಗ.

ವ್ಯಾಖ್ಯಾನಗಳು:

  • “ಸುರಕ್ಷಿತ ಪರಿಸರ” ಎಂದರೆ ಗುರಿಯಿಡುವ ಅಭ್ಯಾಸಗಳಿಗಾಗಿಯೇ ನಿರ್ಮಿಸಲಾದ ಶೂಟಿಂಗ್ ರೇಂಜ್‌ಗಳು ಅಥವಾ ಸುರಕ್ಷತಾ ಆವರಣವಿರುವ ಸ್ಥಳಗಳು.
  • “ಮಾರ್ಪಾಡುಗಳು” ಎಂದರೆ, ಉತ್ಪನ್ನದ ಆಂತರಿಕ ಕಾರ್ಯಚಟುವಟಿಕೆಗೆ ಅಡ್ಡಿಪಡಿಸುವ, ವರ್ಧಿಸುವ ಅಥವಾ ಬದಲಾಯಿಸುವ ಯಾವುದನ್ನಾದರೂ ಉಲ್ಲೇಖಿಸುತ್ತದೆ, ಜೊತೆಗೆ ಹೇರ್ ಟ್ರಿಗ್ಗರ್‌ಗಳು, ಬಂಪ್ ಸ್ಟಾಕ್‌ಗಳು ಮತ್ತು ಸ್ಫೋಟಕ/ಬೆಂಕಿಯಿಡುವ ಮದ್ದುಗುಂಡುಗಳು, ಅಥವಾ ಥರ್ಮಲ್/ಇನ್ಫ್ರಾರೆಡ್ ಸೈಟ್‌ಗಳು ಅಥವಾ ದೊಡ್ಡ ಸಾಮರ್ಥ್ಯದ ನಿಯತಕಾಲಿಕೆಗಳಂತಹ ಇತರ ಲಗತ್ತುಗಳು. 
  • “ಪ್ರಾಪ್ ಗನ್” ಎನ್ನುವುದು ವಿನ್ಯಾಸದಿಂದ ಕಾರ್ಯನಿರ್ವಹಿಸದ ಬಂದೂಕಾಗಿದೆ. ಈ ವ್ಯಾಖ್ಯಾನವು ಕೇವಲ ಫೈರ್ ಬ್ಲ್ಯಾಂಕ್‌ಗಳಿಗೆ (ಬ್ಲ್ಯಾಂಕ್ ಫೈರಿಂಗ್ ಗನ್‌ಗಳು) ವಿನ್ಯಾಸಗೊಳಿಸಿದ ಬಂದೂಕುಗಳನ್ನು ಒಳಗೊಂಡಿದೆ. 
     
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ನಿಯಂತ್ರಿತ ಪರಿಸರದ ಹೊರಗೆ ಗನ್‌ಗಳ ಬಳಕೆ; ಸುರಕ್ಷತಾ ಉಡುಗೆ-ತೊಡುಗೆಗಳನ್ನು ಬಳಸದೆ ಇತರರ ವಿರುದ್ಧ ಏರ್‌ಸಾಫ್ಟ್ ಅಥವಾ ಬಾಲ್ ಬುಲೆಟ್ (BB) ಗನ್‌ಗಳನ್ನು ಬಳಸುವುದು.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಸಿದ್ಧಪಡಿಸಿರದ ಅಥವಾ ಅನಿಯಂತ್ರಿತ ಪರಿಸರಗಳಲ್ಲಿ (ಉದಾ., ಮನೆಯ ಹೊರಗಡೆ ಸಾರ್ವಜನಿಕ ರಸ್ತೆಯಲ್ಲಿ, ನೋಡುಗರು ಅಥವಾ ಇತರ ಜನರ ಆಸ್ತಿಗೆ ಅಪಾಯವನ್ನುಂಟು ಮಾಡಬಹುದಾದ ಯಾವುದೇ ಸ್ಥಳದಲ್ಲಿ) ಗನ್‌ಗಳನ್ನು ಬಳಸುವುದನ್ನು ತೋರಿಸುವುದು.
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಗನ್ ತಯಾರಿಕೆ ಅಥವಾ ಮಾರ್ಪಾಡನ್ನು ತೋರಿಸುವ ಕಂಟೆಂಟ್ (ಅಸೆಂಬಲ್ ಅಥವಾ ಡಿಸ್ಅಸೆಂಬಲ್ ಸೇರಿದಂತೆ), ಗನ್ ತಯಾರಕರು ಅಥವಾ ಮಾರಾಟಗಾರರ ಕುರಿತು ಪ್ರಚಾರ ಮಾಡುವ ಅಥವಾ ಗನ್ ಮಾರಾಟವನ್ನು ಸುಗಮಗೊಳಿಸುವ, ಹಿರಿಯರ ಮಾರ್ಗದರ್ಶನವಿಲ್ಲದೆ ಅಪ್ರಾಪ್ತ ವಯಸ್ಕರು ಗನ್‌ಗಳನ್ನು ಬಳಸುವುದನ್ನು ತೋರಿಸುವ ಕಂಟೆಂಟ್. ಬಂಪ್ ಸ್ಟಾಕ್‌ಗಳು ಅಥವಾ ಹೇರ್ ಟ್ರಿಗ್ಗರ್‌ಗಳು, ಥರ್ಮಲ್ ನೈಟ್ ವಿಷನ್ ಅಥವಾ ಇನ್ಫ್ರಾರೆಡ್ ಸೈಟ್‌ಗಳಿರುವ ಮಾಡಿಫೈಡ್ ಗನ್‌ಗಳ, ಅಥವಾ ಥರ್ಮಲ್, ಸ್ಪೋಟಕ ಅಥವಾ ಬೆಂಕಿಯಿಡುವ ಮದ್ದುಗುಂಡುಗಳ ಬಳಕೆಯನ್ನು ತೋರಿಸುವ ಕಂಟೆಂಟ್. ಗನ್‌ಗೆ ಅಟ್ಯಾಚ್ ಮಾಡಿರುವ ಅಥವಾ ಪ್ರತ್ಯೇಕಿಸಿರುವ ದೊಡ್ಡ ಸಾಮರ್ಥ್ಯದ ಮ್ಯಾಗಜಿನ್‌ಗಳಿರುವ (30 ಸುತ್ತುಗಳು ಅಥವಾ ಹೆಚ್ಚು) ಕಂಟೆಂಟ್. ಸಂಪೂರ್ಣ ಆಟೋಮೆಟಿಕ್ ಗನ್‌ಗಳು ಅಥವಾ ಒಂದೇ ಟ್ರಿಗ್ಗರ್ ಪುಲ್‌ನಲ್ಲಿ ಒಂದಕ್ಕಿಂತ ಹೆಚ್ಚು ಸುತ್ತು ಗುಂಡು ಹಾರಿಸಲು ಮಾಡಿಫೈ ಮಾಡಿದ ಗನ್‌ಗಳು.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಬಂದೂಕಿನಲ್ಲಿ ಬಂಪ್ ಸ್ಟಾಕ್‌ಗಳನ್ನು ಅಳವಡಿಸುವುದು ಹೇಗೆ ಎಂಬ ಕುರಿತು ಮಾರ್ಗಸೂಚಿಗಳು.
  • ಬಂದೂಕುಗಳನ್ನು ಎಲ್ಲಿಂದ ಖರೀದಿಸಬೇಕು ಎಂಬ ವಿಷಯವಾಗಿ ಟಾಪ್ ಗನ್ ತಯಾರಕರು ಅಥವಾ ಸಂಸ್ಥೆಗಳ ಕುರಿತು ಶಿಫಾರಸುಗಳು (ಉದಾ., "15 ಅತ್ಯುತ್ತಮ ಗನ್ ಶಾಪ್‌ಗಳು).
  • ಗನ್ ಮಾರಾಟದ ಸೌಲಭ್ಯವಿರುವ ಸೈಟ್‌ಗೆ ಬಳಕೆದಾರರನ್ನು ನೇರವಾಗಿ ನಿರ್ದೇಶಿಸುವುದು.
  • ಈ ಕೆಳಗಿನವುಗಳು ಸೇರಿದ ಹಾಗೆ, ಆದರೆ ಇವುಗಳಿಗೆ ಸೀಮಿತವಲ್ಲದ, ಬಂದೂಕು ಅಥವಾ ಅದರ ಘಟಕದ ಮಾರಾಟದ ಕುರಿತು ಪ್ರಚಾರ:
    • ಈ ಕೆಳಗಿನವುಗಳು ಸೇರಿದ ಹಾಗೆ, ಬಂದೂಕಿನ ಕಾರ್ಯಾಚರಣೆಗೆ ಅಗತ್ಯವಾದ ಅಥವಾ ಕಾರ್ಯಾಚರಣೆಯನ್ನು ವರ್ಧಿಸುವ, ಬಂದೂಕಿಗೆ ಸಂಬಂಧಿಸಿದ ಭಾಗ ಅಥವಾ ಘಟಕದ ಮಾರಾಟ:
    • 80% ಪೂರ್ಣಗೊಂಡಿರುವ ಗನ್ ಭಾಗಗಳು
    • ಮದ್ದುಗುಂಡು
    • ಮದ್ದುಗುಂಡುಗಳ ಕ್ಲಿಪ್‌ಗಳು
    • ಸೈಲೆನ್ಸರ್‌ಗಳು
    • ಮದ್ದುಗುಂಡುಗಳ ಬೆಲ್ಟ್‌ಗಳು
    • ಸ್ಟಾಕ್‌ಗಳು
    • ಪರಿವರ್ತನೆ ಕಿಟ್‌ಗಳು
    • ಗನ್-ಗ್ರಿಪ್‌ಗಳು
    • ಸ್ಕೋಪ್‌ಗಳು
    • ಸೈಟ್‌ಗಳು
  • ಗನ್ ಮಳಿಗೆಗಳಿಗಾಗಿ ಕಂಟೆಂಟ್ ಅನ್ನು ಪ್ರಚಾರ ಮಾಡುವ ವೀಡಿಯೊಗಳು.
  • ಗನ್ ಮಳಿಗೆಗಳಿಗಾಗಿ ತಯಾರಕರು ಅಥವಾ ರಿಯಾಯಿತಿ ಕೋಡ್‌ಗಳ ಕುರಿತು ಪ್ರಚಾರ ಮಾಡುವ ವೀಡಿಯೊಗಳು.
  • ಬಂದೂಕು-ತಯಾರಿಸುವ ಕುರಿತು ಸೂಚನೆಗಳು (ಉದಾ. ಪುನರಾವರ್ತಿಸಬಹುದಾದ ಗನ್ ಜೋಡಣೆ/ ಡಿಸ್ಅಸೆಂಬಲ್ ಮಾಡಲು ಅಥವಾ ಮಾರ್ಪಡಿಸಲು ಕ್ರಮಗಳು), ಮಾರ್ಗಸೂಚಿಗಳು ಅಥವಾ ಸಾಫ್ಟ್‌ವೇರ್ ಅಥವಾ ಗನ್‌ಗಳು ಅಥವಾ ಗನ್‌ಗಳ ಭಾಗಗಳ 3D ಪ್ರಿಂಟಿಂಗ್ ಸಲಕರಣೆಯನ್ನು ಒಳಗೊಂಡಿರುವ ವೀಡಿಯೊಗಳು.
  • ಮಾರ್ಪಡಿಸುವ ಉದ್ದೇಶವನ್ನು ಹೊಂದಿರುವ ಬಂದೂಕಿನ ಜೋಡಣೆ/ವಿಭಜನೆ.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ವಿವಾದಾತ್ಮಕ ವಿಷಯಗಳು

'ವಿವಾದಾತ್ಮಕ ವಿಷಯಗಳು' ವೀಕ್ಷಕರಿಗೆ ಅಶಾಂತಿ ಉಂಟುಮಾಡುವ ವಿಷಯಗಳಾಗಿವೆ, ಇವು ಸಾಮಾನ್ಯವಾಗಿ ಮಾನವ ದುರಂತದ ಫಲಿತಾಂಶವಾಗಿರುತ್ತವೆ. ಕಂಟೆಂಟ್ ಸಂಪೂರ್ಣವಾಗಿ ವ್ಯಾಖ್ಯಾನವಾಗಿದ್ದರೂ ಅಥವಾ ಯಾವುದೇ ಗ್ರಾಫಿಕ್ ಚಿತ್ರಣವನ್ನು ಹೊಂದಿರದಿದ್ದರೂ ಈ ನೀತಿ ಅನ್ವಯಿಸುತ್ತದೆ.

ವಿವಾದಾತ್ಮಕ ವಿಷಯಗಳಲ್ಲಿ ಶಿಶು ದೌರ್ಜನ್ಯ, ವಯಸ್ಕರ ಲೈಂಗಿಕ ಕಿರುಕುಳ, ಲೈಂಗಿಕ ಕಿರುಕುಳ, ಸ್ವಯಂ-ಹಾನಿ, ಆತ್ಮಹತ್ಯೆ, ತಿನ್ನುವುದಕ್ಕೆ ಸಂಬಂಧಪಟ್ಟ ಡಿಸಾರ್ಡರ್‌ಗಳು, ಕೌಟುಂಬಿಕ ಹಿಂಸೆ, ಗರ್ಭಪಾತ ಮತ್ತು ದಯಾಮರಣಕ್ಕೆ ಸಂಬಂಧಿಸಿದ ವಿಷಯಗಳು ಸೇರಿವೆ.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ವಿವಾದಾತ್ಮಕ ಸಮಸ್ಯೆಗಳನ್ನು ತಡೆಗಟ್ಟುವುದಕ್ಕೆ ಸಂಬಂಧಿಸಿದ ಕಂಟೆಂಟ್. ವಿವಾದಾತ್ಮಕ ವಿಷಯಗಳನ್ನು ವೀಡಿಯೊದಲ್ಲಿ ಸಂಕ್ಷಿಪ್ತವಾಗಿ ಉಲ್ಲೇಖಿಸಲಾಗಿದೆ ಮತ್ತು ಗ್ರಾಫಿಕ್ ಅಲ್ಲದ ಅಥವಾ ವಿವರಣಾತ್ಮಕವಲ್ಲದ ಕಂಟೆಂಟ್ ಆಗಿದೆ. ಕೌಟುಂಬಿಕ ಹಿಂಸೆ, ಸ್ವಯಂ-ಹಾನಿ, ವಯಸ್ಕ ಲೈಂಗಿಕ ಕಿರುಕುಳ, ಗರ್ಭಪಾತ ಮತ್ತು ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದ ಗ್ರಾಫಿಕ್ ಅಲ್ಲದ, ವಿವರಣಾತ್ಮಕವಲ್ಲದ ಕಂಟೆಂಟ್.

ಈ ವರ್ಗಕ್ಕೆ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ: 

  • ವಿವಾದಾತ್ಮಕ ವಿಷಯಗಳ ಗ್ರಾಫಿಕ್ ಅಲ್ಲದ, ವಿವರಣಾತ್ಮಕವಲ್ಲದ, ಮುಖ್ಯ ವಿಷಯದ ಸುದ್ದಿ ಪ್ರಸಾರ.
  • ವೈಯಕ್ತಿಕ ಖಾತೆಗಳು, ಅಭಿಪ್ರಾಯದ ತುಣುಕುಗಳು ಅಥವಾ ವೈದ್ಯಕೀಯ ಕಾರ್ಯವಿಧಾನದ ಕಂಟೆಂಟ್ ಸೇರಿದಂತೆ ಗ್ರಾಫಿಕ್ ಅಲ್ಲದ ಗರ್ಭಪಾತದ ಕುರಿತಾದ ಕಂಟೆಂಟ್.
  • ಗರ್ಭಪಾತಕ್ಕೆ ಸಂಬಂಧಿಸಿದ ಐತಿಹಾಸಿಕ ಅಥವಾ ಶಾಸಕಾಂಗ ಸಂಗತಿಗಳನ್ನು ಒಳಗೊಂಡಿರುವ ಕಂಟೆಂಟ್.
  • ಆತ್ಮಹತ್ಯೆ/ಸ್ವಯಂ-ಹಾನಿ, ವಯಸ್ಕರ ಲೈಂಗಿಕ ದೌರ್ಜನ್ಯ, ಕೌಟುಂಬಿಕ ಹಿಂಸೆ, ಲೈಂಗಿಕ ಕಿರುಕುಳ ಅಥವಾ ದಯಾಮರಣಕ್ಕೆ ಸಂಬಂಧಿಸಿದ ಗ್ರಾಫಿಕ್ ಅಲ್ಲದ, ವಿವರಣಾತ್ಮಕವಲ್ಲದ ವಿಷಯದ ಪತ್ರಿಕೋದ್ಯಮದ ಸೈಡ್ ಟಾಪಿಕ್ ವರದಿ.
  • ಹೆಚ್ಚು ಗ್ರಾಫಿಕ್ ವಿಷಯವಿಲ್ಲದೆ ವಿವಾದಾತ್ಮಕ ವಿಷಯಗಳ ನಾಟಕೀಯ ಅಥವಾ ಕಲಾತ್ಮಕ ಚಿತ್ರಣಗಳು.
    • ಚಿತ್ರದಲ್ಲಿ ಯಾರಾದರೂ ಸೇತುವೆಯ ಮೇಲಿನಿಂದ ಹಾರುವುದನ್ನು ತೋರಿಸುವುದು, ಆದರೆ ಸತ್ತ ಗ್ರಾಫಿಕ್ ದೇಹವನ್ನು ತೋರಿಸದಿರುವುದು.
  • ಪ್ರಚೋದಿಸುವ ಅಥವಾ ಅನುಕರಿಸುವ ಸಂಕೇತಗಳಿಲ್ಲದೆ ತಿನ್ನುವುದಕ್ಕೆ ಸಂಬಂಧಪಟ್ಟ ಡಿಸಾರ್ಡರ್‌ಗಳ ಕುರಿತಾದ ಸಾಮಾನ್ಯ ಉಲ್ಲೇಖ.  

ಶೀರ್ಷಿಕೆ & ಥಂಬ್‌ನೇಲ್: 

  • ಗ್ರಾಫಿಕ್ ಅಲ್ಲದ ವಿವಾದಾತ್ಮಕ ವಿಷಯಗಳ ರೆಫರೆನ್ಸ್‌ಗಳು.
    • ರೇಜರ್‌ನ ಪಠ್ಯ ಅಥವಾ ಚಿತ್ರ.

ವ್ಯಾಖ್ಯಾನಗಳು: 

  • ಕ್ಷಣಿಕ ಉಲ್ಲೇಖಗಳೆಂದರೆ, ಕಂಟೆಂಟ್ ಇವುಗಳ ಮೇಲೆ ಗಮನ ಕೇಂದ್ರೀಕರಿಸಿರುವುದಿಲ್ಲ (ಕೇಂದ್ರಬಿಂದು ಅಲ್ಲ) ಮತ್ತು ವಿವಾದಾತ್ಮಕ ಅಥವಾ ಸಂವೇದನಾಶೀಲ ಎಂದು ಪಟ್ಟಿ ಮಾಡಲಾಗಿರುವ ವಿಷಯಗಳ ಕಿರು ಉಲ್ಲೇಖಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಒಂದು ವಿವಾದಾತ್ಮಕ ಅಥವಾ ಸಂವೇದನಾಶೀಲ ವಿಷಯವನ್ನು ಸಂಕ್ಷಿಪ್ತವಾಗಿ ಅಂಗೀಕರಿಸುವುದನ್ನು ಕೇಂದ್ರಬಿಂದು ಎಂದು ಪರಿಗಣಿಸುವುದಿಲ್ಲ, ಬದಲಿಗೆ ಕ್ಷಣಿಕ ಉಲ್ಲೇಖವೆಂದಷ್ಟೇ ಪರಿಗಣಿಸಲಾಗುವುದು. 
    • ಉದಾಹರಣೆಗೆ, “ಮುಂದಿನ ವಾರದ ವೀಡಿಯೊದಲ್ಲಿ, ಆತ್ಮಹತ್ಯೆಯ ಪ್ರಕರಣಗಳು ಕಡಿಮೆಯಾಗಿರುವುದರ ಕುರಿತು ಮಾತನಾಡಲಿದ್ದೇವೆ.”
  • ಪ್ರಚೋದನಾತ್ಮಕ ಅಥವಾ ಅನುಕರಣೀಯ ಸಂಕೇತಗಳು:   
    • ಅತೀ ಕಡಿಮೆ BMI ಅಥವಾ ತೂಕ.
    • ಅತಿಯಾದ ತೆಳ್ಳಗಿನ ಅಥವಾ ಸಣಕಲು ದೇಹವನ್ನು ತೋರಿಸುವುದು.
    • ತೂಕ ಅಥವಾ ದೇಹ ಆಧಾರಿತ ಅವಹೇಳನ ಅಥವಾ ನಿಂದನೆ.
    • ಬಿಂಗಿಂಗ್, ಮರೆಮಾಚುವುದು ಅಥವಾ ಆಹಾರವನ್ನು ಸಂಗ್ರಹಿಸುವ ಕುರಿತು ಉಲ್ಲೇಖ.
    • ಕ್ಯಾಲೋರಿ ಕೊರತೆಯನ್ನು ಸಾಧಿಸಲು ವ್ಯಾಯಾಮ.
    • ವಿರೇಚಕಗಳನ್ನು ವಾಂತಿ ಮಾಡುವುದು ಅಥವಾ ದುರುಪಯೋಗಪಡಿಸಿಕೊಳ್ಳುವುದು.
    • ತೂಕ ಕಳೆದುಕೊಳ್ಳುವಿಕೆ ಪ್ರಗತಿಯನ್ನು ಪರಿಶೀಲಿಸುವುದು.
    • ಮೇಲಿನ ಯಾವುದೇ ವರ್ತನೆಗಳನ್ನು ಮರೆಮಾಚುವುದರ ಕುರಿತು ಉಲ್ಲೇಖ.
ಈ ಕಂಟೆಂಟ್ ಸೀಮಿತ ಆದಾಯವನ್ನು ಗಳಿಸಬಹುದು ಅಥವಾ ಯಾವುದೇ ಜಾಹೀರಾತು ಆದಾಯವನ್ನು ಗಳಿಸದೇ ಇರಬಹುದು

ನೋಡಲು ಮುಜುಗರಗೊಳಿಸದ, ವಿವರಣಾತ್ಮಕ ಭಾಷೆಯನ್ನು ಹೊಂದಿರಬಹುದಾದ ವಿವಾದಾತ್ಮಕ ವಿಷಯಗಳ ಕುರಿತಾದ ಕಂಟೆಂಟ್. ವಿವಾದಾತ್ಮಕ ವಿಷಯಗಳ ನಾಟಕೀಯ, ಕಲಾತ್ಮಕ, ಸಾಕ್ಷ್ಯಚಿತ್ರ, ಶೈಕ್ಷಣಿಕ ಅಥವಾ ವೈಜ್ಞಾನಿಕ ಪ್ರಾತಿನಿಧ್ಯ. ಶಿಶು ದೌರ್ಜನ್ಯಕ್ಕೆ ಸಂಬಂಧಿಸಿದ ಗ್ರಾಫಿಕ್ ಅಲ್ಲದ, ವಿವರಣಾತ್ಮಕವಲ್ಲದ, ಮುಖ್ಯ ವಿಷಯ. ವಯಸ್ಕ ಲೈಂಗಿಕ ಕಿರುಕುಳ, ಲೈಂಗಿಕ ಕಿರುಕುಳ ಅಥವಾ ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ಗ್ರಾಫಿಕ್ ಅಲ್ಲದ ಆದರೆ ವಿವರಣಾತ್ಮಕ ಕಂಟೆಂಟ್.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ: 

  • ವಿವರವಾದ ವಿವರಣೆಗಳು ಅಥವಾ ಗ್ರಾಫಿಕ್ ಚಿತ್ರಣಗಳಿಲ್ಲದೆ ಶಿಶು ದೌರ್ಜನ್ಯದಂತಹ ವಿಷಯಗಳನ್ನು ಮುಖ್ಯ ವಿಷಯವಾಗಿ ಚರ್ಚಿಸುವ ಕಂಟೆಂಟ್.
  • ಪ್ರಚೋದನಾತ್ಮಕ ಅಥವಾ ಅನುಕರಣೀಯ ಸಂಕೇತಗಳ ಜೊತೆಗೆ ತಿನ್ನುವುದಕ್ಕೆ ಸಂಬಂಧಪಟ್ಟ ಡಿಸಾರ್ಡರ್‌ಗಳ ಕುರಿತಂತೆ ನಾಟಕೀಯ ಅಥವಾ ಕಲಾತ್ಮಕ ಚಿತ್ರಣ. 
  • ಶೈಕ್ಷಣಿಕ ಅಥವಾ ಕಲಾತ್ಮಕ ಸಂದರ್ಭವಿಲ್ಲದೆ ಹೆಚ್ಚು ಗ್ರಾಫಿಕ್ ಆಗಿರದ ವಿವಾದಾತ್ಮಕ ವಿಷಯಗಳ ನಾಟಕೀಯ ಅಥವಾ ಅನಿಮೇಟೆಡ್ ಚಿತ್ರಣಗಳು. 
  • ಮಧ್ಯಮ ಗ್ರಾಫಿಕ್ ಆಗಿರುವ ವಿವಾದಾತ್ಮಕ ಸಮಸ್ಯೆಗಳ ನಾಟಕೀಯ ಅಥವಾ ಕಲಾತ್ಮಕ ಚಿತ್ರಣಗಳು. 
    • ಯಾರೋ ತಮ್ಮ ಕೈ ಮಣಿಕಟ್ಟನ್ನು ಕತ್ತರಿಸಿ ರಕ್ತಸ್ರಾವವಾಗುತ್ತಿರುವುದನ್ನು ತೋರಿಸುವ ಒಂದು ಚಲನಚಿತ್ರ.
  • ಬುಲಿಮಿಯಾ ಕಾಯಿಲೆಯನ್ನು ಜಯಿಸಿದ ವ್ಯಕ್ತಿಯ ಪ್ರಯಾಣದಂತಹ ತಿನ್ನುವುದಕ್ಕೆ ಸಂಬಂಧಪಟ್ಟ ಡಿಸಾರ್ಡರ್ ಚೇತರಿಕೆ ಕಥೆಗಳು.

ಶೀರ್ಷಿಕೆ & ಥಂಬ್‌ನೇಲ್: 

  • ನೈಜ, ನಾಟಕೀಯ ಮತ್ತು ಕಲಾತ್ಮಕ ಚಿತ್ರಣಗಳನ್ನು ಒಳಗೊಂಡಂತೆ ಥಂಬ್‌ನೇಲ್‌ನಲ್ಲಿ ವಿವಾದಾತ್ಮಕ ವಿಷಯಗಳ ಗ್ರಾಫಿಕ್ ಚಿತ್ರಣಗಳು. 
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಮುಖ್ಯ ವಿಷಯವಾಗಿ ವಿವಾದಾತ್ಮಕ ವಿಷಯಗಳ ಗ್ರಾಫಿಕ್ ಚಿತ್ರಣಗಳು ಅಥವಾ ವಿವರಾತ್ಮಕ ವಿವರಣೆಗಳು. ಕೆಳಗಿನ ಯಾವುದೇ ಉಲ್ಲೇಖಗಳು ಅಥವಾ ಸಂದರ್ಭದೊಂದಿಗೆ ತಿನ್ನುವುದಕ್ಕೆ ಸಂಬಂಧಪಟ್ಟ ಡಿಸಾರ್ಡರ್‌ಗಳ ಕುರಿತಾದ ಸುಸ್ಪಷ್ಟ ಉಲ್ಲೇಖ: ಅತ್ಯಂತ ಕಡಿಮೆ BMI ಅಥವಾ ತೂಕ, ತೆಳ್ಳಗಿನ ಅಥವಾ ಕೃಶವಾದ ದೇಹವನ್ನು ತೋರಿಸುವುದು, ತೂಕ ಅಥವಾ ದೇಹ ಆಧಾರಿತ ಶೇಮಿಂಗ್ ಅಥವಾ ನಿಂದನೆ, ಆಹಾರವನ್ನು ನಿರಂತರ ತಿನ್ನುವ, ಮರೆಮಾಡುವ ಅಥವಾ ಸಂಗ್ರಹಿಸಿಡುವ ಕುರಿತಾದ ಉಲ್ಲೇಖ, ಕ್ಯಾಲೋರಿ ಕಡಿಮೆ ಮಾಡಲು ವ್ಯಾಯಾಮ ಮಾಡುವುದು, ವಾಂತಿ ಮಾಡುವುದು ಅಥವಾ ವಿರೇಚಕಗಳನ್ನು ದುರುಪಯೋಗಪಡಿಸಿಕೊಳ್ಳುವುದು, ತೂಕ ಕಡಿಮೆಯಾಗುವ ಪ್ರಗತಿಯನ್ನು ಪರಿಶೀಲಿಸುವುದು, ಮೇಲಿನ ಯಾವುದೇ ನಡವಳಿಕೆಗಳನ್ನು ಮರೆಮಾಡುವ ಕುರಿತಾದ ಉಲ್ಲೇಖ.

ಈ ವರ್ಗಕ್ಕೂ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ವಿವರವಾದ, ಆಘಾತಕಾರಿ, ಮೊದಲ ವ್ಯಕ್ತಿ ಖಾತೆ ಅಥವಾ ಬದುಕುಳಿದವರ ಜೀವನದ ಹಿಂದಿನ ಅನುಭವಗಳ ಕುರಿತು ಚರ್ಚಿಸುವ ಕಂಟೆಂಟ್‌ಗಳು:
    • ಮಕ್ಕಳ ಶೋಷಣೆ
    • ಶಿಶುಕಾಮ
    • ಸ್ವಯಂ ಹಾನಿ
    • ಆತ್ಮಹತ್ಯೆ
    • ಕೌಟುಂಬಿಕ ಹಿಂಸೆ
    • ದಯಾಮರಣ
  • ವೀಡಿಯೊದ ಕಂಟೆಂಟ್, ಶೀರ್ಷಿಕೆ ಅಥವಾ ಥಂಬ್‌ನೇಲ್‌ನಲ್ಲಿ ವಿವಾದಾತ್ಮಕ ಕಂಟೆಂಟ್‌ಗಳ ಪ್ರಚಾರ ಅಥವಾ ವೈಭವೀಕರಣ, ಉದಾಹರಣೆಗೆ, “ಆತ್ಮಹತ್ಯೆ ಮಾಡಿಕೊಳ್ಳುವುದು ಮತ್ತು ಗೌರವಯುತವಾಗಿ ಸಾಯುವುದು ಹೇಗೆ”.
  • ಚರ್ಮ, ರಕ್ತ ಅಥವಾ ಗಾಯವು ಗೋಚರಿಸುವ ಸ್ವಯಂ-ಹಾನಿಯ ಗ್ರಾಫಿಕ್ ಚಿತ್ರಣ. 
  • ಪ್ರಚಲಿತವಾಗಿರುವ ವಿವಾದಾತ್ಮಕ ಕಂಟೆಂಟ್‌ನ ಕುರಿತು ಸ್ಪಷ್ಟ ಆಡಿಯೋ.
  • ಪ್ರಚೋದನಾತ್ಮಕ ಅಥವಾ ಅನುಕರಣೀಯ ಸಂಕೇತಗಳ ಜೊತೆಗೆ ತಿನ್ನುವುದಕ್ಕೆ ಸಂಬಂಧಪಟ್ಟ ಡಿಸಾರ್ಡರ್‌ಗಳ ಕುರಿತಂತೆ ಸ್ಪಷ್ಟ ಉಲ್ಲೇಖ.
  • ಶೈಕ್ಷಣಿಕ ಅಥವಾ ಕಲಾತ್ಮಕ ಸಂದರ್ಭವಿಲ್ಲದೆ ಮಧ್ಯಮ ಗ್ರಾಫಿಕ್ ಆಗಿರುವ ವಿವಾದಾತ್ಮಕ ವಿಷಯಗಳಿಗೆ ಸಂಬಂಧಿಸಿದ ಚಿತ್ರಣಗಳು.
    • ಯಾರೋ ತಮ್ಮ ಮಣಿಕಟ್ಟನ್ನು ಕತ್ತರಿಸಿ ರಕ್ತ ಸ್ರಾವವಾಗುತ್ತಿರುವ ಸನ್ನಿವೇಶಕ್ಕೆ ಸಂಬಂಧಿಸಿದ ಕಚ್ಚಾ ಫೂಟೇಜ್.
  • ಸಂವೇದನಾಶೀಲ ರೀತಿಯಲ್ಲಿ ಪ್ರಸ್ತುತಪಡಿಸಲಾದ ವಿವಾದಾತ್ಮಕ ವಿಷಯಗಳ ಅನಿಮೇಟೆಡ್ ಚಿತ್ರಣ.   
    • ಇತರರನ್ನು ನಿಂದಿಸುವ ರೀತಿಯ ಪಾತ್ರಗಳನ್ನು ತೋರಿಸುವುದು.

ವ್ಯಾಖ್ಯಾನಗಳು:

ಫೋಕಸ್ ಅಥವಾ ಫೋಕಲ್ ಎಂದರೆ ಒಂದು ವಿಭಾಗ, ಪೂರ್ಣ ವೀಡಿಯೊ ಅಥವಾ ನೀಡಿರುವ ವಿವಾದಾತ್ಮಕ ವಿಷಯದ ಕುರಿತು ನಿರಂತರ ಚರ್ಚೆಯನ್ನು ಸೂಚಿಸುತ್ತದೆ. ವಿವಾದಾತ್ಮಕ ವಿಷಯದ ಬಗೆಗಿನ ಕ್ಷಣಿಕ ಉಲ್ಲೇಖವನ್ನು ಆ ಸಮಸ್ಯೆಯ ಕುರಿತು ಗಮನ ಕೇಂದ್ರೀಕರಿಸಿದ ವಿಷಯ ಎಂಬುದಾಗಿ ಪರಿಗಣಿಸಲಾಗುವುದಿಲ್ಲ. ಉದಾಹರಣೆಗೆ, ಒಂದು ವಿವಾದಾತ್ಮಕ ಅಥವಾ ಸೂಕ್ಷ್ಮ ವಿಷಯವನ್ನು ಉದಾಹರಣೆಗೆ, "ಮುಂದಿನ ವಾರದ ವೀಡಿಯೊದಲ್ಲಿ, ಆತ್ಮಹತ್ಯೆಯ ಪ್ರಕರಣಗಳು ಕಡಿಮೆಯಾಗುತ್ತಿರುವುದರ ಕುರಿತು ನಾವು ಚರ್ಚಿಸಲಿದ್ದೇವೆ" ಎಂಬ ವಿಷಯವನ್ನು ಸಂಕ್ಷಿಪ್ತವಾಗಿ ಅಂಗೀಕರಿಸುವುದನ್ನು ಕೇಂದ್ರಬಿಂದು ಎಂದು ಪರಿಗಣಿಸಲಾಗುವುದಿಲ್ಲ, ಆದರೆ ಇಂತಹ ವಿಷಯದ ಕುರಿತು ವೀಡಿಯೊದ ಒಂದು ಭಾಗವು ನಿರ್ದಿಷ್ಟವಾಗಿ ಮಾತನಾಡಿದರೆ, ಅದನ್ನು ಕೇಂದ್ರಬಿಂದು ಎಂದು ಪರಿಗಣಿಸಲಾಗುತ್ತದೆ. ಗಮನ ಕೇಂದ್ರೀಕರಿಸುವಿಕೆಯು ಮೌಖಿಕವಾಗಿರಬೇಕೆಂದೇನಿಲ್ಲ. ಸೂಕ್ಷ್ಮ ವಿಷಯದ ಮೇಲೆ ಗಮನ ಕೇಂದ್ರೀಕರಿಸುವ ಚಿತ್ರ ಅಥವಾ ಪಠ್ಯವಿದ್ದರೆ, ಅದನ್ನು ಸಹ ಗಮನ ಕೇಂದ್ರೀಕರಿಸುವಿಕೆ ಎಂದು ಪರಿಗಣಿಸಲಾಗುವುದು.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಸೆನ್ಸಿಟಿವ್ ಈವೆಂಟ್‌ಗಳು

ಸೆನ್ಸಿಟಿವ್ ಈವೆಂಟ್ ಎನ್ನುವುದು ಈವೆಂಟ್ ಅಥವಾ ಅಭಿವೃದ್ಧಿಯಾಗಿದ್ದು ಅದು ಉತ್ತಮ ಗುಣಮಟ್ಟದ, ಸಂಬಂಧಿತ ಮಾಹಿತಿ ಮತ್ತು ಗ್ರೌಂಡ್ ಟ್ರೂಥ್ ಅನ್ನು ಒದಗಿಸುವ Google ನ ಸಾಮರ್ಥ್ಯಕ್ಕೆ ಗಮನಾರ್ಹ ಅಪಾಯವನ್ನು ಉಂಟುಮಾಡುತ್ತದೆ ಮತ್ತು ಪ್ರಮುಖ ಮತ್ತು ಮಾನಿಟೈಸ್ಡ್ ಫೀಚರ್‌ಗಳಲ್ಲಿ ಸೂಕ್ಷ್ಮವಲ್ಲದ ಅಥವಾ ಶೋಷಣೆಯ ಕಂಟೆಂಟ್ ಅನ್ನು ಕಡಿಮೆ ಮಾಡುತ್ತದೆ. ಸೆನ್ಸಿಟಿವ್ ಈವೆಂಟ್‌ನ ಸಂದರ್ಭದಲ್ಲಿ, ಈ ಅಪಾಯಗಳನ್ನು ಪರಿಹರಿಸಲು ನಾವು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಬಹುದು.

ಸೆನ್ಸಿಟಿವ್ ಈವೆಂಟ್‌ಗಳ ಉದಾಹರಣೆಗಳಲ್ಲಿ ನಾಗರಿಕ ತುರ್ತು ಪರಿಸ್ಥಿತಿಗಳು, ಪ್ರಾಕೃತಿಕ ವಿಪತ್ತುಗಳು, ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಗಳು, ಭಯೋತ್ಪಾದನೆ ಮತ್ತು ಸಂಬಂಧಿತ ಚಟುವಟಿಕೆಗಳು, ಘರ್ಷಣೆ ಅಥವಾ ಸಾಮೂಹಿಕ ಹಿಂಸಾಚಾರಗಳು ಸೇರಿವೆ. ಕಂಟೆಂಟ್ ಯಾವುದೇ ಗ್ರಾಫಿಕ್ ಚಿತ್ರಣವನ್ನು ಹೊಂದಿಲ್ಲದಿದ್ದರೂ ಸಹ ಈ ನೀತಿಯು ಅನ್ವಯಿಸುತ್ತದೆ. 

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಶೋಷಣೆ ಅಥವಾ ವಜಾಗೊಳಿಸದಿರುವ ಜೀವಹಾನಿ ಅಥವಾ ದುರಂತವನ್ನು ಒಳಗೊಂಡ ಚರ್ಚೆಗಳು. 

ಕೆಲವು ಸಂದರ್ಭಗಳಲ್ಲಿ, ಬಲಿಪಶುಗಳ ನಿಂದನೆ ಅಥವಾ ಶೋಷಣೆಯನ್ನು ತಪ್ಪಿಸಲು ಸೆನ್ಸಿಟಿವ್ ಈವೆಂಟ್‌ಗೆ ಸಂಬಂಧಿಸಿದ ಯಾವುದೇ ಕಂಟೆಂಟ್‌ನ ಮಾನಿಟೈಸೇಶನ್ ಅನ್ನು ನಾವು ತಡೆಯಬಹುದು. ಸಂದರ್ಭವು ಮುಖ್ಯವಾಗಿದೆ: ಉದಾಹರಣೆಗೆ, ಅಧಿಕೃತ ಸುದ್ದಿ ವರದಿ, ಡಾಕ್ಯುಮೆಂಟರಿ ಕಂಟೆಂಟ್ ಅಥವಾ ಸೆನ್ಸಿಟಿವ್ ಈವೆಂಟ್ ಕುರಿತು ಚರ್ಚೆಗಳನ್ನು ಒಳಗೊಂಡಿದ್ದರೆ ಜಾಹೀರಾತು ಆದಾಯವನ್ನು ಗಳಿಸಲು ನಾವು ಕಂಟೆಂಟ್ ಅನ್ನು ಅನುಮತಿಸಬಹುದು.

ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ರಚನೆಕಾರರು ಸೆನ್ಸಿಟಿವ್ ಈವೆಂಟ್‌ನಿಂದ ಲಾಭ ಗಳಿಸುವ ಅಥವಾ ಅದನ್ನು ದುರುಪಯೋಗಪಡಿಸಿಕೊಳ್ಳುವ ಕಂಟೆಂಟ್‌ನ ಮೂಲಕ ಮಾನಿಟೈಸ್ ಮಾಡುವಂತಿಲ್ಲ.

ಉದಾಹರಣೆಗಳು (ಸೀಮಿತವಾಗಿಲ್ಲದ): 

  • ಬಳಕೆದಾರರಿಗೆ ಯಾವುದೇ ಸ್ಪಷ್ಟವಾದ ಪ್ರಯೋಜನವಿಲ್ಲದ, ಸಂಬಂಧಿತ ಮೇಲ್ವಿಚಾರಣಾ ಸಂಸ್ಥೆಗಳ (ಉದಾಹರಣೆಗೆ, ತುರ್ತು ಪರಿಹಾರ ಸಂಸ್ಥೆಗಳು, ಆರೋಗ್ಯ ಇಲಾಖೆಗಳು ಅಥವಾ ಅಂತಾರಾಷ್ಟ್ರೀಯ ಸಂಸ್ಥೆಗಳು) ಮಾನದಂಡಗಳು ಮತ್ತು/ಅಥವಾ ಅವುಗಳ ಮಾರ್ಗಸೂಚಿಗಳನ್ನು ಪೂರೈಸದ ಉತ್ಪನ್ನಗಳು ಅಥವಾ ಸೇವೆಗಳ ಮಾರಾಟದ ದುರಂತ ಘಟನೆಯಿಂದ ಲಾಭವನ್ನು ತೋರುತ್ತಿದೆ. 
  • ಹೆಚ್ಚುವರಿ ಟ್ರಾಫಿಕ್ ಅನ್ನು ಮಾಡುವುದಕ್ಕೆ ಪ್ರಯತ್ನಿಸಲು ಸೆನ್ಸಿಟಿವ್ ಈವೆಂಟ್‌ಗೆ ಸಂಬಂಧಿಸಿದ ಕೀವರ್ಡ್‌ಗಳನ್ನು ಬಳಸುವುದು.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಅಪ್ರಾಮಾಣಿಕ ವರ್ತನೆಯನ್ನು ಸಕ್ರಿಯಗೊಳಿಸುವುದು

ವೈಯಕ್ತಿಕ ಅಥವಾ ಪಾವತಿಸಿದ ಅತಿಕ್ರಮಣ, ವಂಚನೆ ಅಥವಾ ಕಂಪ್ಯೂಟರ್ ಹ್ಯಾಕಿಂಗ್‌ನಂತಹ ಅಪ್ರಾಮಾಣಿಕ ವರ್ತನೆಯನ್ನು ವೈಭವೀಕರಿಸುವ ಅಥವಾ ಪ್ರಚಾರ ಮಾಡುವ ಕಂಟೆಂಟ್.

ನೀತಿಯ ವಿವರಗಳು
ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು
ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಶೈಕ್ಷಣಿಕ, ಹಾಸ್ಯಮಯ ಅಥವಾ ಸಂಗೀತಕ್ಕೆ ಸಂಬಂಧಿಸಿದ ಉಲ್ಲೇಖಗಳು ಅಥವಾ ಅಪ್ರಾಮಾಣಿಕ ವರ್ತನೆಯ ಸ್ಟೇಟ್‌ಮೆಂಟ್‌ಗಳು. ನಡವಳಿಕೆಯ ಸಂಹಿತೆಯ ವಿರುದ್ಧದ ದುಷ್ಕೃತ್ಯಗಳ ಕುರಿತು ಪತ್ರಿಕೋದ್ಯಮದ ವರದಿಗಳಂತಹ ಅಪ್ರಾಮಾಣಿಕ ವರ್ತನೆಯನ್ನು ಉತ್ತೇಜಿಸದ ಕಂಟೆಂಟ್.

ಈ ವರ್ಗಕ್ಕೆ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಅತಿಕ್ರಮಣ

  • ಅನುಮತಿ ಹೊಂದಿರುವ ವಿವರಣೆಯನ್ನು ಪ್ರೇಕ್ಷಕರಿಗೆ ಹಂಚಿಕೊಳ್ಳಲು ಅಥವಾ ಶಿಕ್ಷಣ ನೀಡಲು ಕೈಬಿಡಲಾದ ಕಟ್ಟಡಗಳು ಅಥವಾ ನಿಷ್ಕ್ರಿಯಗೊಳಿಸಿದ ಸೈಟ್‌ಗಳನ್ನು ಎಕ್ಸ್‌ಪ್ಲೋರ್ ಮಾಡುವುದು.
    • ಅಗತ್ಯವಿರುವ ಪರವಾನಗಿಗಳು ಮತ್ತು ಅನುಮತಿಗಳೊಂದಿಗೆ ಚೆರ್ನೋಬಿಲ್ ಸೈಟ್‌ನಲ್ಲಿ ನಿರ್ಬಂಧಿತ ವಲಯಗಳ ಪ್ರವಾಸಗಳು.
  • ಇವುಗಳ ಕುರಿತು ಪತ್ರಿಕೋದ್ಯಮ ವರದಿಗಳು:
    • ರಿಟೇಲ್ ಸ್ಟೋರ್ ಅಥವಾ ವಾಣಿಜ್ಯ ಕಟ್ಟಡದ ನಡವಳಿಕೆಯ ಸಂಹಿತೆಯನ್ನು (ಉದಾ. ವ್ಯವಹಾರ ಸಮಯದ ನಂತರ ಸ್ಟೋರ್ ಅನ್ನು ಮುಚ್ಚಿತ ನಂತರ ರಾತ್ರಿ ಉಳಿಯುವುದು) ಉಲ್ಲಂಘಿಸುವ ಕಂಟೆಂಟ್. 
    • ಮಾಲೀಕರ ಸಮ್ಮತಿಯಿಲ್ಲದೆ ಸ್ಟೋರ್‌ನಲ್ಲಿನ ರಿಟೇಲ್ ಸ್ಟೋರ್ ಉದ್ಯೋಗಿಯಂತೆ ನಟಿಸುವುದು (ಉದಾ. ಸ್ಟೋರ್ ಸಮವಸ್ತ್ರವನ್ನು ಧರಿಸುವುದು ಮತ್ತು ಕ್ಲೈಂಟ್‌ಗಳಿಗೆ ವ್ಯಾಪಾರದ ವಸ್ತುಗಳ ಕುರಿತು ಮಾರ್ಗದರ್ಶನ ನೀಡುವುದು). 

ಹ್ಯಾಕಿಂಗ್

  • ಪ್ರವೇಶಿಸುವಿಕೆಯ ಪರೀಕ್ಷೆ (ನೈತಿಕ ಹ್ಯಾಕರ್‌ಗಳು ದೈಹಿಕ ಮತ್ತು ಮಾಹಿತಿ ಭದ್ರತಾ ದೋಷಗಳನ್ನು ಪರೀಕ್ಷಿಸಲು ಕಂಪನಿಗಳಿಗೆ ಮಾರಾಟ ಮಾಡುವ ಸೇವೆ).
  • ಬಗ್ ಬೌಂಟಿಗಳು (ಸಿಸ್ಟಂಗಳು ಅಥವಾ ಪ್ರೋಗ್ರಾಂಗಳಲ್ಲಿ ಕಂಪ್ಯೂಟರ್ ಬಗ್‌ಗಳನ್ನು ಹುಡುಕಲು ರಿವಾರ್ಡ್‌ಗಳನ್ನು ನೀಡಲಾಗುತ್ತದೆ).
  • ಡಿಜಿಟಲ್ ಹ್ಯಾಕ್‌ಗಳು, ಲೈಫ್‌ಹ್ಯಾಕ್‌ಗಳು, ಸಲಹೆಗಳು ಮತ್ತು ತಂತ್ರಗಳು (ಉದಾ., ಫೋನ್ ಅನ್ನು ಜೈಲ್‌ಬ್ರೇಕ್ ಮಾಡುವುದು, ಗೇಮ್ ಚೀಟ್ಸ್, ಗೇಮ್ ಮಾಡ್‌ಗಳು, VPN ಸೇವೆಗಳು).
  • ಸ್ಪರ್ಧಾತ್ಮಕ ಇ-ಸ್ಪೋರ್ಟ್ಸ್‌ನಲ್ಲಿ ಹ್ಯಾಕಿಂಗ್ ಸಾಫ್ಟ್‌ವೇರ್‌ನ ಬಳಕೆ ಅಥವಾ ಪ್ರೋತ್ಸಾಹದ ಕುರಿತು ಶೈಕ್ಷಣಿಕ, ಸಾಕ್ಷ್ಯಚಿತ್ರ ಅಥವಾ ಪತ್ರಿಕೋದ್ಯಮದ ವರದಿಗಳು. 

ಅಪರಾಧ

  • ಅಪರಾಧದ ಕುರಿತಾದ ಸಾಕ್ಷ್ಯಚಿತ್ರಗಳು.
  • ಅಪರಾಧಗಳಿಂದ ಬಾಧಿತಕ್ಕೊಳಗಾದ ವ್ಯಕ್ತಿಗಳ ವೈಯಕ್ತಿಕ ಖಾತೆಗಳು.
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ಅನಧಿಕೃತ ಆ್ಯಕ್ಸೆಸ್ ಅನ್ನು ಹೇಗೆ ಪಡೆಯುವುದು ಅಥವಾ ದುರುದ್ದೇಶಪೂರಿತ ರೀತಿಯಲ್ಲಿ ಸಿಸ್ಟಂಗಳು, ಸಾಧನಗಳು ಅಥವಾ ಆಸ್ತಿಯಲ್ಲಿ ಅನಧಿಕೃತ ಬದಲಾವಣೆಗಳನ್ನು ಹೇಗೆ ಮಾಡುವುದು ಎಂಬುದರ ಕುರಿತು ವೀಕ್ಷಕರಿಗೆ ತಿಳಿಸುವ ಉದ್ದೇಶ ಹೊಂದಿರುವ ಕಂಟೆಂಟ್. ಆಸ್ತಿಯ ನಡವಳಿಕೆಯ ಸಂಹಿತೆಗೆ ವಿರುದ್ಧವಾದ ಕೃತ್ಯಗಳನ್ನು ಪ್ರದರ್ಶಿಸುವುದು. ಶೈಕ್ಷಣಿಕ ಪ್ರಬಂಧ ಬರವಣಿಗೆ ಸೇವೆಗಳು ಅಥವಾ ಸ್ಪರ್ಧಾತ್ಮಕ ಇ-ಕ್ರೀಡೆಗಳಲ್ಲಿ ಗೆಲ್ಲಲು ಹ್ಯಾಕಿಂಗ್ ವಿಧಾನಗಳಂತಹ ದಾರಿತಪ್ಪಿಸಲು ಅಥವಾ ಮೋಸಗೊಳಿಸಲು ಸಹಾಯ ಮಾಡುವ ಉತ್ಪನ್ನಗಳು ಅಥವಾ ಸೇವೆಗಳನ್ನು ಪ್ರದರ್ಶಿಸುವುದು

ಈ ವರ್ಗಕ್ಕೆ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

ಅತಿಕ್ರಮಣ

  • ಭದ್ರಪಡಿಸಿದ ಕಟ್ಟಡದಲ್ಲಿ ರಾತ್ರಿವೇಳೆಯ ಸಾಹಸಗಳಂತಹ ಅತಿಕ್ರಮಣವನ್ನು ಉತ್ತೇಜಿಸುವುದು ಅಥವಾ ವೈಭವೀಕರಿಸುವುದು.
  • ಒಂದು ರಿಟೇಲ್ ಮಳಿಗೆ ಅಥವಾ ವಾಣಿಜ್ಯ ಕಟ್ಟಡದ ನಡವಳಿಕೆಯ ಸಂಹಿತೆಯನ್ನು ಉಲ್ಲಂಘಿಸುವುದು.
  • ಆಸ್ತಿಯ ಮಾಲೀಕರ ಸಮ್ಮತಿಯಿಲ್ಲದೆ ಸ್ಟೋರ್‌ನಲ್ಲಿ ರಿಟೇಲ್ ಸ್ಟೋರ್ ಉದ್ಯೋಗಿಗಳ ಹಾಗೆ ಸೋಗು ಹಾಕುವುದು.
  • ಹೆಚ್ಚುವರಿ ಸಾಂದರ್ಭಿಕತೆಯಿಲ್ಲದೆ, ಬಲವಂತವಾಗಿ ಮನೆಗೆ ನುಗ್ಗುವುದನ್ನು ಪ್ರದರ್ಶಿಸುವುದು, ಉದಾಹರಣೆಗೆ, ಬಲವಂತವಾಗಿ ಮನೆಗೆ ನುಗ್ಗುವುದರ CCTV ಫೂಟೇಜ್.

ಹ್ಯಾಕಿಂಗ್

  • ಇನ್ನೊಬ್ಬ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಅವರ ಅಥವಾ ಅವರ ಚಟುವಟಿಕೆಗಳನ್ನು ಡಿಜಿಟಲ್ ಟ್ರ್ಯಾಕ್ ಮಾಡಲು ಅಥವಾ ಮೇಲ್ವಿಚಾರಣೆ ಮಾಡಲು ವೀಕ್ಷಕರನ್ನು ಪ್ರೋತ್ಸಾಹಿಸುವುದು ಅಥವಾ ಅನುವು ಮಾಡಿಕೊಡುವುದು.
  • ಒಬ್ಬ ವ್ಯಕ್ತಿಯ ಒಪ್ಪಿಗೆಯಿಲ್ಲದೆ ಅವರ ಫೋನ್ ಅನ್ನು ಹೇಗೆ ಕದ್ದಾಲಿಸುವುದು ಎಂಬುದರ ಕುರಿತಾದ ಸಲಹೆಗಳು.
  • ಸ್ಪರ್ಧಾತ್ಮಕ ಇ-ಸ್ಪೋರ್ಟ್ಸ್‌ನಲ್ಲಿ ಹ್ಯಾಕಿಂಗ್ ಸಾಫ್ಟ್‌ವೇರ್ ಬಳಸುವುದು, ಅಥವಾ ಬಳಸಲು ಪ್ರೋತ್ಸಾಹಿಸುವುದು

ಅನೈತಿಕ ಉತ್ಪನ್ನಗಳು ಅಥವಾ ಸೇವೆಗಳು

  • ಶೈಕ್ಷಣಿಕ ಪ್ರಬಂಧ ಬರೆಯುವ ಸೇವೆಗಳು.
  • ಡ್ರಗ್ ಪರೀಕ್ಷೆಗಳ ಕುರಿತಾದ ಮೋಸ.
  • ನಕಲಿ ಪಾಸ್‌ಪೋರ್ಟ್‌ಗಳು ಅಥವಾ ಇತರ ಗುರುತಿನ ಡಾಕ್ಯುಮೆಂಟ್‌ಗಳ ನಕಲಿಸುವಿಕೆ ಅಥವಾ ಸೃಷ್ಟಿಸುವಿಕೆ.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಮಕ್ಕಳು ಮತ್ತು ಕುಟುಂಬಗಳಿಗೆ ಅನುಚಿತವಾದ ಕಂಟೆಂಟ್

YouTube ನಲ್ಲಿ ಮಾನಿಟೈಸ್ ಮಾಡಲು “ಮಕ್ಕಳಿಗಾಗಿ ರಚಿಸಲಾಗಿದೆ” ಕಂಟೆಂಟ್ ಕುಟುಂಬ ಪ್ರೇಕ್ಷಕರಿಗೆ ಸೂಕ್ತವಾಗಿರಬೇಕು. ಇದು YouTube ನ ಮಕ್ಕಳು ಮತ್ತು ಕುಟುಂಬಕ್ಕೆ ಸಂಬಂಧಿಸಿದ ಕಂಟೆಂಟ್‍ಗಾಗಿ ಗುಣಮಟ್ಟದ ತತ್ವಗಳು ಮತ್ತು ನಮ್ಮ ಪ್ರೋಗ್ರಾಮ್ ನೀತಿಗಳನ್ನು ಅನುಸರಿಸಬೇಕು ಎಂದರ್ಥ.

ನೀತಿಯ ವಿವರಗಳು

ನಕಾರಾತ್ಮಕ ನಡವಳಿಕೆಯನ್ನು ಉತ್ತೇಜಿಸುವ ಕಂಟೆಂಟ್

ಮಕ್ಕಳನ್ನು ಋಣಾತ್ಮಕವಾಗಿ ಪರಿಣಾಮ ಬೀರುವ ನಕಾರಾತ್ಮಕ ನಡವಳಿಕೆಗಳನ್ನು ಉತ್ತೇಜಿಸುವುದು.

ಜಾಹೀರಾತುಗಳ ಮಾರ್ಗದರ್ಶನ ಪ್ರಶ್ನಾವಳಿ ಆಯ್ಕೆಗಳು ಮತ್ತು ವಿವರಗಳು

ಈ ಕಂಟೆಂಟ್ ಜಾಹೀರಾತು ಆದಾಯವನ್ನು ಗಳಿಸಬಹುದು

ಸಕಾರಾತ್ಮಕ ನಡವಳಿಕೆಯನ್ನು ಪ್ರೋತ್ಸಾಹಿಸುವ ಮತ್ತು ಮಕ್ಕಳಿಗೆ ಹಾನಿಕಾರಕವಲ್ಲದ ಕಂಟೆಂಟ್.

ಈ ವರ್ಗಕ್ಕೆ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ನಕಾರಾತ್ಮಕ ವರ್ತನೆಯ ಕುರಿತು ಶೈಕ್ಷಣಿಕ ಕಂಟೆಂಟ್
  • ಸಾರ್ವಜನಿಕ ಸೇವೆಯ ಘೋಷಣೆಗಳು (PSA ಗಳು) ಅಥವಾ ಮಕ್ಕಳನ್ನು ನಿಂದಿಸುವ ಅಥವಾ ಅವಮಾನಿಸುವ ನಕಾರಾತ್ಮಕ ಪರಿಣಾಮ ಬೀರುವ ವೀಡಿಯೊಗಳು
  • ಆರೋಗ್ಯಕರ ಆಹಾರ ಪದ್ಧತಿಗಳ ಪ್ರದರ್ಶನ
  • ಕ್ರೀಡೆ ಮತ್ತು ಫಿಟ್‌ನೆಸ್ ಕುರಿತ ವೀಡಿಯೊಗಳು
  • ಈ ಕೆಳಗಿನವುಗಳಂತಹ ಕಡಿಮೆ ಅಪಾಯವನ್ನು ಹೊಂದಿರುವ ಮತ್ತು ಮಕ್ಕಳಿಗೆ ಯಾವುದೇ ಗಂಭೀರ ದೈಹಿಕ ಅಥವಾ ಭಾವನಾತ್ಮಕ ಹಾನಿಯನ್ನು ಉಂಟುಮಾಡದ DIY, ಚಾಲೆಂಜ್‌ಗಳು ಅಥವಾ ಕೀಟಲೆಗಳು:
    • ಸುರಕ್ಷಿತ ಮತ್ತು ಸೂಕ್ತವಾದ ರೀತಿಯಲ್ಲಿ ಬಳಸಲಾಗುವ ಪಾತ್ರೆಗಳಲ್ಲಿ ಬೇಯಿಸುವುದು ಅಥವಾ ಅಡುಗೆ ಮಾಡುವಂತಹ DIY ಗಳು, ಡೆಮೋಗಳು ಅಥವಾ ಹೇಗೆ ಮಾಡುವುದು
    • ಮಕ್ಕಳು ಆಘಾತಕ್ಕೊಳಗಾಗದ ಅಥವಾ ದೈಹಿಕವಾಗಿ ಹಾನಿಗೊಳಗಾಗದ ರೀತಿಯಲ್ಲಿನ ಕೀಟಲೆಗಳು
 
ಈ ಕಂಟೆಂಟ್ ಯಾವುದೇ ಜಾಹೀರಾತು ಆದಾಯವನ್ನು ಗಳಿಸುವುದಿಲ್ಲ

ವಂಚನೆ ಮತ್ತು ನಿಂದನೆಯಂತಹ ನಕಾರಾತ್ಮಕ ನಡವಳಿಕೆಯನ್ನು ಉತ್ತೇಜಿಸುವ ಮೂಲಕ ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಕಂಟೆಂಟ್ ಅಥವಾ ಮಕ್ಕಳಿಗೆ ಗಂಭೀರವಾದ ದೈಹಿಕ ಅಥವಾ ಭಾವನಾತ್ಮಕ ಹಾನಿಯನ್ನು ಉಂಟುಮಾಡುವ ಕಂಟೆಂಟ್.

ಈ ವರ್ಗಕ್ಕೆ ಸೇರುವ ಕಂಟೆಂಟ್‌ನ ಕೆಲವು ಉದಾಹರಣೆಗಳು ಹೀಗಿವೆ:

  • ಮಕ್ಕಳಿಂದ ನಕಾರಾತ್ಮಕ ನಡವಳಿಕೆಯನ್ನು ಉತ್ತೇಜಿಸುವ ಅಥವಾ ಪ್ರಚಾರ ಮಾಡುವ ಕಂಟೆಂಟ್ ಅಥವಾ ಮಕ್ಕಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಗಳ ಕಂಟೆಂಟ್.
    • ಪರೀಕ್ಷೆಗಳಲ್ಲಿ ವಂಚಿಸುವಂತಹ ಅಪ್ರಾಮಾಣಿಕ ವರ್ತನೆ
    • ಮಕ್ಕಳ ಕಂಟೆಂಟ್‌ನಲ್ಲಿ ನೈಜವಾದ ಅಥವಾ ವಾಸ್ತವಿಕ ಗನ್‌ಗಳ ಪ್ರದರ್ಶನ
    • ಅಧಿಕ ಸಕ್ಕರೆ ಅಥವಾ ಅಧಿಕ ಕೊಬ್ಬಿನ ಅಂಶ ಹೊಂದಿರುವ ಆಹಾರಗಳನ್ನು ನಿರಂತರವಾಗಿ ತಿನ್ನುವುದು
    • ಮಕ್ಕಳನ್ನು ನಿಂದಿಸುವುದು, ಕಿರುಕುಳ ನೀಡುವುದು ಅಥವಾ ಅವಮಾನ ಮಾಡುವುದು
    • ದೇಹವನ್ನು ತೆಳ್ಳಗೆ, ಹೆಚ್ಚು ಕರ್ವ್ ಅಥವಾ ಸ್ನಾಯು ಹೊಂದಿರುವಂತೆ ಕಾಣುವ ರೀತಿಯಲ್ಲಿ ಬದಲಾಯಿಸುವುದು ಹೇಗೆ, ಕ್ಯಾಲೊರಿಗಳನ್ನು ನಿರ್ಬಂಧಿಸುವುದು ಅಥವಾ ಹೆಚ್ಚಿಸುವುದು ಇತ್ಯಾದಿಗಳ ಕುರಿತ ಕಂಟೆಂಟ್.
    • ಈ ಕೆಳಗಿನವುಗಳಂತಹ DIY ಗಳು ಅಥವಾ ಗಂಭೀರ ದೈಹಿಕ ಅಥವಾ ಭಾವನಾತ್ಮಕ ಹಾನಿಯನ್ನು ಚಿತ್ರಿಸುವ ಅಥವಾ ಉಂಟುಮಾಡುವ ಚಾಲೆಂಜ್‌ಗಳು: 
      • ಜ್ವಾಲಾಮುಖಿಯ DIY ಕಂಟೆಂಟ್‌ಗಾಗಿ ನಿಷೇಧಿತ ರಾಸಾಯನಿಕಗಳು, ಸ್ಫೋಟಕಗಳು, ಬೆಂಕಿಕಡ್ಡಿಗಳು ಇತ್ಯಾದಿಗಳನ್ನು ಬಳಸುವುದು. 
      • ಉಸಿರುಗಟ್ಟುವಿಕೆಗೆ ಕಾರಣವಾಗುವ ಆಹಾರ ಸ್ಟಫ್ ಮಾಡುವ ಚಾಲೆಂಜ್‌ಗಳು 
      • ತಿನ್ನಲು ಯೋಗ್ಯವಲ್ಲದ ಉತ್ಪನ್ನಗಳನ್ನು ತಿನ್ನುವಂತೆ ಪ್ರೋತ್ಸಾಹಿಸುವುದು
 

ಮಕ್ಕಳಿಗಾಗಿ ಉದ್ದೇಶಿಸಿರುವ ವಯಸ್ಕರಿಗೆ ಸಂಬಂಧಿಸಿದ ಕಂಟೆಂಟ್

ನಗ್ನತೆ, ಲೈಂಗಿಕತೆ, ವಾಸ್ತವಿಕ ಹಿಂಸಾಚಾರ, ಮಾದಕ ದ್ರವ್ಯಗಳು, ಮದ್ಯಪಾನ ಅಥವಾ ವೀಡಿಯೊ, ಥಂಬ್‌ನೇಲ್ ಅಥವಾ ಶೀರ್ಷಿಕೆಯಲ್ಲಿ ಬೈಗುಳದಂತಹ ಹದಿಹರೆಯದವರಿಗೆ ಅಥವಾ ವಯಸ್ಕರಿಗೆ ಹೆಚ್ಚಾಗಿ ಸಂಬಂಧಿಸಿದ ಥೀಮ್‌ಗಳು.

ವರ್ಗ ಸೀಮಿತ ಅಥವಾ ಜಾಹೀರಾತುಗಳಿಲ್ಲದಿರುವುದು
ಮಕ್ಕಳು ಮತ್ತು ಕುಟುಂಬಗಳಿಗೆ ಸೂಕ್ತವಾಗಿ ಕಾಣಿಸುವಂತೆ ಮಾಡಲಾದ ಕಂಟೆಂಟ್, ಆದರೆ ವಯಸ್ಕರ ಥೀಮ್‌ಗಳನ್ನು ಒಳಗೊಂಡಿದೆ.
  • ಲೈಂಗಿಕ ಮತ್ತು ಲೈಂಗಿಕ ಒಳನೋಟಗಳು
  • ಹಿಂಸೆ, ವಾಸ್ತವಿಕ ಆಯುಧಗಳು 
  • ಮಧ್ಯಮ, ಬಲವಾದ ಅಥವಾ ತೀವ್ರವಾದ ಬೈಗುಳ
  • ಡ್ರಗ್ಸ್ ಮತ್ತು ಆಲ್ಕೋಹಾಲ್ 
  • ಮಕ್ಕಳು ಮತ್ತು ಕುಟುಂಬಗಳಿಗೆ ಸೂಕ್ತವಲ್ಲದ ಮಕ್ಕಳು ಅಥವಾ ಜನಪ್ರಿಯ ಮಕ್ಕಳ ಪಾತ್ರಗಳ ಇತರ ಚಿತ್ರಣಗಳು

ಮಕ್ಕಳನ್ನು ಗುರಿಯಾಗಿಸಿದ ಆಘಾತಕಾರಿ ಕಂಟೆಂಟ್

ವಯಸ್ಕರಿಗೆ ಸುರಕ್ಷಿತವಾಗಿರುವ ಆದರೆ ವಯಸ್ಕರ ಭಯಾನಕ ಪಾತ್ರಗಳು ಅಥವಾ ಅಪಹರಣ, ಭಯಾನಕ ಚಲನಚಿತ್ರಗಳು, ಇತ್ಯಾದಿ ಭಯಾನಕ ಥೀಮ್‌ಗಳಂತಹ ಮಕ್ಕಳಿಗೆ ಆಘಾತಗೊಳಿಸುವ ಅಥವಾ ಹೆದರಿಸುವ ಕಂಟೆಂಟ್.

ವರ್ಗ ಸೀಮಿತ ಅಥವಾ ಜಾಹೀರಾತುಗಳಿಲ್ಲದಿರುವುದು
ಮಕ್ಕಳು ಮತ್ತು ಕುಟುಂಬಗಳಿಗೆ ಸೂಕ್ತವಾಗಿ ಕಾಣಿಸುವಂತೆ ಮಾಡಲಾದ ಕಂಟೆಂಟ್, ಆದರೆ ಮಕ್ಕಳನ್ನು ಹೆದರಿಸುವ ಅಥವಾ ಆಘಾತಗೊಳಿಸುವ ಕಂಟೆಂಟ್ ಅನ್ನು ಒಳಗೊಂಡಿದೆ.
  • ಮೊಮೊ ಅಥವಾ ವಯಸ್ಕರ ಭಯಾನಕ ಪಾತ್ರಗಳಂತಹ ಮಕ್ಕಳನ್ನು ಹೆದರಿಸುವ ಗುರಿಯನ್ನು ಹೊಂದಿರುವ ಪಾತ್ರಗಳು 
  • ರಕ್ತ ಹೆಪ್ಪುಗಟ್ಟಿಸುವ ಅಥವಾ ಇತರ ಗ್ರಾಫಿಕ್ ಹಿಂಸಾತ್ಮಕ ಕಂಟೆಂಟ್ ಚಿತ್ರಿಸುವ ಕಂಟೆಂಟ್
  • ಅಪಹರಣ, ಭಯಾನಕ ದೃಶ್ಯಗಳು, ಸಿರಿಂಜ್‌ಗಳನ್ನು ಆಯುಧಗಳಾಗಿ ಬಳಸುವುದು ಇತ್ಯಾದಿಗಳಂತಹ ಮಕ್ಕಳನ್ನು ಹೆದರಿಸುವ ಗ್ರಾಫಿಕ್ ಅಲ್ಲದ ಕಂಟೆಂಟ್.

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ತಂಬಾಕು ಸಂಬಂಧಿತ ಕಂಟೆಂಟ್

ತಂಬಾಕು ಮತ್ತು ತಂಬಾಕು ಸಂಬಂಧಿತ ಉತ್ಪನ್ನಗಳನ್ನು ಉತ್ತೇಜಿಸುವ ಕಂಟೆಂಟ್ ಜಾಹೀರಾತಿಗೆ ಸೂಕ್ತವಲ್ಲ. ಈ ನೀತಿಯು YouTube Studio ದಲ್ಲಿನ ಸ್ವಯಂ-ಪ್ರಮಾಣೀಕರಣ ಪ್ರಶ್ನಾವಳಿಯಲ್ಲಿ ಹಾನಿಕಾರಕ ಅಥವಾ ಅಪಾಯಕಾರಿ ಕೃತ್ಯಗಳ ಅಡಿಯಲ್ಲಿ ಬರುತ್ತದೆ, ಆದ್ದರಿಂದ ವಿವರವಾದ ಮಾರ್ಗದರ್ಶನಕ್ಕಾಗಿ ಅದನ್ನು ಸಹ ಪರಿಶೀಲಿಸಿ.

ಉದಾಹರಣೆಗಳು (ಸೀಮಿತವಾಗಿಲ್ಲದ)
ವರ್ಗ ಸೀಮಿತ ಅಥವಾ ಜಾಹೀರಾತುಗಳಿಲ್ಲದಿರುವುದು
ತಂಬಾಕು ಪ್ರಚಾರ ಮಾಡುವುದು
  • ಸಿಗರೇಟ್‌ಗಳು, ಸಿಗಾರ್‌ಗಳು, ತಂಬಾಕು ಜಗಿಯುವುದು
ತಂಬಾಕು ಸಂಬಂಧಿತ ಉತ್ಪನ್ನಗಳನ್ನು ಪ್ರಚಾರ ಮಾಡುವುದು
  • ತಂಬಾಕು ಪೈಪ್‌ಗಳು, ರೋಲಿಂಗ್ ಪೇಪರ್‌ಗಳು, ವೇಪ್ ಪೆನ್ಸ್
ತಂಬಾಕು ಧೂಮಪಾನವನ್ನು ಅನುಕರಿಸಲು ವಿನ್ಯಾಸಗೊಳಿಸಲಾದ ಉತ್ಪನ್ನಗಳನ್ನು ಪ್ರಚಾರ ಮಾಡುವುದು
  • ಹರ್ಬಲ್ ಸಿಗರೇಟ್‌ಗಳು, ಇ-ಸಿಗರೇಟ್‌ಗಳು, ವೇಪಿಂಗ್

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ಕೆರಳಿಸುವುದು ಮತ್ತು ಅವಮಾನಿಸುವುದು

ಉದ್ದೇಶಪೂರ್ವಕವಾಗಿ ಬೆಂಕಿಯಿಡುವ, ಉರಿಸುವ ಅಥವಾ ಅವಹೇಳನಕಾರಿ ಕಂಟೆಂಟ್ ಜಾಹೀರಾತಿಗೆ ಸೂಕ್ತವಾಗಿರುವುದಿಲ್ಲ. ಈ ನೀತಿಯು YouTube Studio ದಲ್ಲಿನ ಸ್ವಯಂ-ಪ್ರಮಾಣೀಕರಣ ಪ್ರಶ್ನಾವಳಿಯಲ್ಲಿ ದ್ವೇಷಪೂರಿತ ಮತ್ತು ಅವಹೇಳನಕಾರಿ ವಿಷಯದ ಅಡಿಯಲ್ಲಿ ಬರುತ್ತದೆ, ಆದ್ದರಿಂದ ವಿವರವಾದ ಮಾರ್ಗದರ್ಶನಕ್ಕಾಗಿ ಅದನ್ನು ಸಹ ಪರಿಶೀಲಿಸಿ.

ಉದಾಹರಣೆಗಳು (ಸೀಮಿತವಾಗಿಲ್ಲದ)
ವರ್ಗ ಸೀಮಿತ ಅಥವಾ ಜಾಹೀರಾತುಗಳಿಲ್ಲದಿರುವುದು
ಬೆಂಕಿಯಿಡುವ ಮತ್ತು ಅವಹೇಳನಕಾರಿ ಕಂಟೆಂಟ್
  • ಒಬ್ಬ ವ್ಯಕ್ತಿ ಅಥವಾ ಗುಂಪನ್ನು ಹೀಯಾಳಿಸುವುದು ಅಥವಾ ಅಪಮಾನಿಸುವುದರ ಮೇಲೆ ಗಮನ ಕೇಂದ್ರೀಕರಿಸಿರುವ ಕಂಟೆಂಟ್
ಒಬ್ಬ ವ್ಯಕ್ತಿ ಅಥವಾ ಗುಂಪಿನಲ್ಲಿರುವ ವ್ಯಕ್ತಿಗಳಿಗೆ ಕಿರುಕುಳ ನೀಡುವ, ಬೆದರಿಸುವ, ಅಥವಾ ನಿಂದಿಸುವ ಕಂಟೆಂಟ್
  • ಯಾರನ್ನಾದರೂ ನಿಂದನೆ ಅಥವಾ ಕಿರುಕುಳಕ್ಕೆ ಗುರಿಯಾಗಿಸುವ ಕಂಟೆಂಟ್
  • ಒಂದು ದುರಂತ ಘಟನೆ ಸಂಭವಿಸಿಲ್ಲ ಎಂದು ಸೂಚಿಸುವ ಅಥವಾ ಸಂತ್ರಸ್ತರು ಅಥವಾ ಅವರ ಕುಟುಂಬಗಳು ನಟರು ಎಂದು ಸೂಚಿಸುವ ಅಥವಾ ಈವೆಂಟ್‌ನ ಮುಚ್ಚಿಡಲು ಸಹಕರಿಸುವ ಕಂಟೆಂಟ್
  • ದುರುದ್ದೇಶಪೂರಿತ ವೈಯಕ್ತಿಕ ದಾಳಿಗಳು, ಅಪನಿಂದೆ ಮತ್ತು ಮಾನಹಾನಿ

ಈ ಮಾರ್ಗಸೂಚಿಗಳಲ್ಲಿ ಬಳಸಲಾದ ಪ್ರಮುಖ ಪದಗಳನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು, ನಮ್ಮ ವ್ಯಾಖ್ಯಾನಗಳ ಕೋಷ್ಟಕವನ್ನು ನೋಡಿ.

ವ್ಯಾಖ್ಯಾನಗಳು

ನಮ್ಮ ಜಾಹೀರಾತುದಾರ ಸ್ನೇಹಿ ಕಂಟೆಂಟ್ ಮಾರ್ಗಸೂಚಿಗಳಲ್ಲಿ ಸಾಮಾನ್ಯವಾಗಿ ಬಳಸುವ ಪದಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವುದಕ್ಕೆ ನಿಮಗೆ ಸಹಾಯ ಮಾಡಲು ನಾವು ವ್ಯಾಖ್ಯಾನಗಳ ಕೋಷ್ಟಕವನ್ನು ರಚಿಸಿದ್ದೇವೆ.

ವ್ಯಾಖ್ಯಾನಗಳು
ನಿಯಮಗಳು ವ್ಯಾಖ್ಯಾನಗಳು
ಸಂಗೀತ ಅಧಿಕೃತ ಸಂಗೀತದ ವೀಡಿಯೊಗಳು, ಆರ್ಟ್ ಟ್ರ್ಯಾಕ್‌ಗಳು, ಬ್ಯಾಕಿಂಗ್ ಟ್ರ್ಯಾಕ್‌ಗಳು, ಇಂಟ್ರೊ/ಔಟ್ರೊ ಸಂಗೀತ, ಸಂಗೀತದ ವೀಡಿಯೊಗಳ ಕುರಿತಾದ ಪ್ರತಿಕ್ರಿಯೆಗಳು, ಡ್ಯಾನ್ಸ್ ಟ್ಯುಟೋರಿಯಲ್‌ಗಳ ಸಮಯದಲ್ಲಿ ಪ್ಲೇ ಆಗುವ ಸಂಗೀತ, YouTube ನ ಟೂಲ್‌ಗಳ ಮೂಲಕ ಸೇರಿಸಲಾದ ಅಥವಾ ಪಡೆದ ಸಂಗೀತ ಅಥವಾ ಹಿನ್ನೆಲೆಯಲ್ಲಿ ಪ್ಲೇ ಆಗುವ ಸಂಗೀತವನ್ನು ಒಳಗೊಂಡಿರುವ ಯಾವುದೇ ವೀಡಿಯೊವನ್ನು ಇದು ಉಲ್ಲೇಖಿಸುತ್ತದೆ. ಇದು ಕವನ ವಾಚನ ಮತ್ತು ಮಾತನಾಡುವ ಕಲೆಗಳ ಪರ್ಫಾರ್ಮೆನ್ಸ್‌‌ಗೆ ಅನ್ವಯಿಸುವುದಿಲ್ಲ.
ಶೈಕ್ಷಣಿಕ

“ಶೈಕ್ಷಣಿಕ” ಎಂದರೆ ಪ್ರೇಕ್ಷಕರಿಗೆ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ನೀಡದೆ ಒಂದು ಕಂಟೆಂಟ್‌ನ ಬಗ್ಗೆ ತಿಳಿಸುವುದು ಅಥವಾ ಕಲಿಸುವುದು. ಶೈಕ್ಷಣಿಕ ಕಂಟೆಂಟ್, ಸುರಕ್ಷಿತ ಲೈಂಗಿಕ ಅಭ್ಯಾಸಗಳ ಚರ್ಚೆಯಂತಹ ತಟಸ್ಥ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತದೆ. ಈ ಕೆಳಗಿನ ಪದಗಳು ಸಂದರ್ಭೋಚಿತವಾಗಿ ಸಂಬಂಧಿಸಿವೆ:

  • “ಸಾಕ್ಷ್ಯಚಿತ್ರ” ಎಂದರೆ ಪುರಾತನ ಈಜಿಪ್ಟಿನ ಇತಿಹಾಸದಂತಹ ಮೂಲ ದಾಖಲೆಗಳನ್ನು ಉಲ್ಲೇಖಿಸುವ ಅಥವಾ ಸತ್ಯಗಳನ್ನು ವಿವರಿಸುವ ಮೂಲಕ ಐತಿಹಾಸಿಕ ಘಟನೆಗಳನ್ನು ಸ್ಮರಿಸುವುದು ಮತ್ತು ಸಂರಕ್ಷಿಸುವುದು.
  • "ವೈಜ್ಞಾನಿಕ" ಎಂದರೆ ವೈಜ್ಞಾನಿಕ ಪ್ರಯೋಗ ಮತ್ತು ಸಿದ್ಧಾಂತದ ಮೂಲಕ ವಿಚಾರಣೆ ಮುಂದುವರೆಸುವುದನ್ನು ಸೂಚಿಸುತ್ತದೆ, ಉದಾಹರಣೆಗೆ ಮಾನವ ಮನೋವಿಜ್ಞಾನದ ಡೇಟಾವನ್ನು ಪ್ರಸ್ತುತಪಡಿಸುವುದು.
ಕಲಾತ್ಮಕ “ಕಲಾತ್ಮಕ” ಎಂದರೆ ಚಿತ್ರಕಲೆ, ರೇಖಾಚಿತ್ರಗಳು, ವಾಸ್ತುಶಿಲ್ಪ, ಶಿಲ್ಪಕಲೆ, ಸಾಹಿತ್ಯ, ಕವನ, ಸಂಗೀತ, ಪ್ರದರ್ಶನ ಮತ್ತು ಸ್ಕ್ರಿಪ್ಟ್ ಮಾಡಿದ ಕಂಟೆಂಟ್‌ನಂತಹ ಮಾನವ ಸೃಜನಶೀಲತೆಯನ್ನು ವ್ಯಕ್ತಪಡಿಸಲು ಉದ್ದೇಶಿಸಿರುವ ಕಲೆ. ಉದಾಹರಣೆಗೆ, ಕವನ ವಾಚನದ ವೀಡಿಯೊ ಆಗಿರಬಹುದು.
ನಾಟಕೀಯ

“ನಾಟಕೀಯ” ಎಂದರೆ ಆ್ಯನಿಮೇಟ್ ಮಾಡಲಾದ ಕಂಟೆಂಟ್ ಸೇರಿದ ಹಾಗೆ ಚಲನಚಿತ್ರಗಳು ಅಥವಾ ಕಾಲ್ಪನಿಕ ಸೆಟ್ಟಿಂಗ್‌ಗಳಂತಹ ಸ್ಕ್ರಿಪ್ಟ್ ಮಾಡಲಾಗಿರುವ ಕಂಟೆಂಟ್.

ಗ್ರಾಫಿಕ್, ಗ್ರಾಫಿಕ್‌ನೆಸ್

"ಗ್ರಾಫಿಕ್” ಅಥವಾ “ಗ್ರಾಫಿಕ್‌ನೆಸ್” ಎಂದರೆ ಈ ಕೆಳಗಿನವುಗಳಂತಹ ಸ್ಪಷ್ಟ ಮತ್ತು ನೈಜ ಚಿತ್ರಣಗಳ ಸೇರ್ಪಡೆಗಳನ್ನು ಸೂಚಿಸುತ್ತದೆ:

  • ಬೀದಿ ಜಗಳಗಳಂತಹ ಹಿಂಸಾತ್ಮಕ ಕೃತ್ಯಗಳಿಂದ ಉಂಟಾಗುವ ಗಾಯಗಳು ಅಥವಾ ಕಣ್ಣಿಗೆ ಕಾಣಿಸುವ ದೇಹದ ಗಾಯಗಳು.
  • ಪ್ರಾಣಿಗಳಿಗೆ ಒದೆಯುವಂತಹ ಅವುಗಳ ಜೊತೆಗಿನ ಹಿಂಸಾತ್ಮಕ ಕೃತ್ಯಗಳು.
  • ಲೈಂಗಿಕ ಕ್ರಿಯೆಗಳು, ಲೈಂಗಿಕ ದೇಹದ ಭಾಗಗಳು ಮತ್ತು ದ್ರವಗಳ ದೃಶ್ಯಗಳು.
ವಾಸ್ತವಿಕತೆ

"ವಾಸ್ತವಿಕತೆ" ಎಂದರೆ ಮೂರು ಹಂತಗಳ ತೀವ್ರತೆಯನ್ನು ಸೂಚಿಸುತ್ತದೆ:

  • “ಕಡಿಮೆ ವಾಸ್ತವಿಕತೆ”: ವಾಸ್ತವದಿಂದ ಹೆಚ್ಚು ಭಿನ್ನವಾಗಿರುವುದು, ಉದಾಹರಣೆಗೆ ಮಾತನಾಡುವ ಬೆಕ್ಕು.
  • “ಸಾಧಾರಣ ವಾಸ್ತವಿಕತೆ”: ವಾಸ್ತವಕ್ಕಿಂತ ಕಡಿಮೆ ಭಿನ್ನತೆ ಇರುವುದು, ಉದಾಹರಣೆಗೆ ವೀಡಿಯೊ ಗೇಮ್‌ಗಳಲ್ಲಿನ ಮನುಷ್ಯರು ಅಥವಾ ಆ್ಯನಿಮೇಟೆಡ್ ಪಾತ್ರಗಳಂತಹ ಉತ್ಪ್ರೇಕ್ಷಿತ ಗ್ರಾಫಿಕ್ಸ್ ನೈಜ-ಪ್ರಪಂಚದ ವ್ಯಕ್ತಿಗಳನ್ನು ಚಿತ್ರಿಸುತ್ತದೆ.
  • “ಅಧಿಕ ವಾಸ್ತವಿಕತೆ”: ನೈಜ-ಪ್ರಪಂಚದ ಸಂದರ್ಭಗಳು ಬೀದಿ ಜಗಳದಂತಹ ಮನುಷ್ಯರನ್ನು ಮುಖ್ಯ ಪಾತ್ರಗಳಾಗಿ ಚಿತ್ರಿಸುತ್ತವೆ.
ಅಶ್ಲೀಲ, ಅಶ್ಲೀಲತೆ

“ಅಶ್ಲೀಲ” ಅಥವಾ “ಅಶ್ಲೀಲತೆ” ಎಂದರೆ ಕಂಟೆಂಟ್‌ನಲ್ಲಿರುವ ಉಲ್ಲಂಘನೆಯ ವಿಷಯವು ಎಷ್ಟರ ಮಟ್ಟಿಗೆ ಪ್ರಸ್ತುತವಾಗಿದೆ ಅಥವಾ ಗೋಚರಿಸುತ್ತದೆ. ಕೆಲವು ಉದಾಹರಣೆಗಳು:

  • ಗರ್ಭಪಾತ ಪ್ರಕ್ರಿಯೆಯನ್ನು ತೋರಿಸುವ ಅಥವಾ ಪ್ರದರ್ಶಿಸುವ ವೀಡಿಯೊ.
  • ದೌರ್ಜನ್ಯಕ್ಕೊಳಗಾದ ಯಾರೋ ಒಬ್ಬರ ಆಡಿಯೊ ಅಥವಾ ಶಬ್ದಗಳು.
ಸೂಚಿತ, ಸೂಚಿಸಿದ

“ಸೂಚಿತ” ಅಥವಾ “ಸೂಚಿಸಿದ” ಎಂದರೆ ಉಲ್ಲಂಘಿಸುವ ವಿಷಯದ ಸೂಚಕ, ಪರೋಕ್ಷ ಉಪಸ್ಥಿತಿ ಅಥವಾ ಗೋಚರತೆಯನ್ನು ಸೂಚಿಸುತ್ತದೆ. ಕೆಲವು ಉದಾಹರಣೆಗಳು:

  • ಲೈಂಗಿಕ ಕ್ರಿಯೆಗಳನ್ನು ಸೂಚಿಸುವ ಲೈಂಗಿಕ ಸುಖವನ್ನು ಅನುಭವಿಸುವ ಧ್ವನಿಗಳ ಜೊತೆಗೆ ಅಲುಗಾಡುವ ಹಾಸಿಗೆಗಳನ್ನು ತೋರಿಸುವ ಅಥವಾ ಪ್ರದರ್ಶಿಸುವ ವೀಡಿಯೊ.
  • ಸಾವಿನ ಕ್ಷಣವನ್ನು ಸೂಚಿಸುವ ಸಲುವಾಗಿ ವಾಹನಗಳು ಸ್ಫೋಟಗೊಳ್ಳುವುದನ್ನು ತೋರಿಸುವ ಅಥವಾ ಪ್ರದರ್ಶಿಸುವ ವೀಡಿಯೊ.
ಫೋಕಸ್, ಫೋಕಲ್

“ಫೋಕಸ್” ಅಥವಾ “ಫೋಕಲ್” ಎಂದರೆ ಒಂದು ವಿಭಾಗ ಅಥವಾ ಪೂರ್ಣ ವೀಡಿಯೊ ನೀಡಿದ ವಿಷಯದ ಕುರಿತು ಮತ್ತು ಪುನರಾವರ್ತಿತ ಉಲ್ಲೇಖ ಮತ್ತು ವಿಷಯದ ಮೇಲೆ ಗಮನಹರಿಸುವುದು. ವಿವಾದಾತ್ಮಕ ಅಥವಾ ಸೂಕ್ಷ್ಮ ಎಂಬುದಾಗಿ ಪಟ್ಟಿ ಮಾಡಿರುವ ವಿಷಯಗಳಲ್ಲಿ ಯಾವುದೇ ವಿಷಯದ ಕುರಿತಾದ ಕ್ಷಣಿಕ ಉಲ್ಲೇಖವು, ಜಾಹೀರಾತುಗಳನ್ನು ತೋರಿಸದಿರಲು ಕಾರಣವಾಗಲಾರದು. ಉದಾಹರಣೆಗೆ, ಒಂದು ವಿವಾದಾತ್ಮಕ ಅಥವಾ ಸೂಕ್ಷ್ಮ ವಿಷಯವನ್ನು ಸಂಕ್ಷಿಪ್ತವಾಗಿ ಅಂಗೀಕರಿಸುವುದನ್ನು (ಉದಾ., "ಮುಂದಿನ ವಾರದ ವೀಡಿಯೊದಲ್ಲಿ, ಆತ್ಮಹತ್ಯೆಯ ಪ್ರಕರಣಗಳು ಕಡಿಮೆಯಾಗುತ್ತಿರುವುದರ ಕುರಿತು ನಾವು ಚರ್ಚಿಸಲಿದ್ದೇವೆ) ಕೇಂದ್ರಬಿಂದು ಎಂದು ಪರಿಗಣಿಸಲಾಗುವುದಿಲ್ಲ, ಆದರೆ ಇಂತಹ ವಿಷಯದ ಕುರಿತು ವೀಡಿಯೊದ ಒಂದು ಭಾಗವು ನಿರ್ದಿಷ್ಟವಾಗಿ ಮಾತನಾಡಿದರೆ, ಅದನ್ನು ಕೇಂದ್ರಬಿಂದು ಎಂದು ಪರಿಗಣಿಸಲಾಗುತ್ತದೆ. ಗಮನ ಕೇಂದ್ರೀಕರಿಸುವಿಕೆಯು ಮೌಖಿಕವಾಗಿರಬೇಕೆಂದೇನಿಲ್ಲ. ಸೂಕ್ಷ್ಮ ವಿಷಯದ ಮೇಲೆ ಗಮನ ಕೇಂದ್ರೀಕರಿಸುವ ಚಿತ್ರ ಅಥವಾ ಪಠ್ಯವಿದ್ದರೆ, ಅದನ್ನು ಸಹ ಗಮನ ಕೇಂದ್ರೀಕರಿಸುವಿಕೆ ಎಂದು ಪರಿಗಣಿಸಲಾಗುವುದು. ಕೆಲವು ಉದಾಹರಣೆಗಳು:

  • ಸ್ವಯಂ-ಹಾನಿಯನ್ನು ಹೇಗೆ ನಿರ್ವಹಿಸುವುದು ಎಂಬುದರ ಮೇಲೆ ಗಮನ ಕೇಂದ್ರೀಕರಿಸಿದ ವೀಡಿಯೊ.
  • ಇತರ ಸಂದರ್ಭ ಅಥವಾ ಕಾರಣವಿಲ್ಲದೆ ಬಲವಾದ ಅಶ್ಲೀಲತೆಯನ್ನು ಬಳಸುವುದರ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ ಕಂಟೆಂಟ್.
ಕ್ಷಣಿಕ

“ಕ್ಷಣಿಕ” ಎಂದರೆ ಕಂಟೆಂಟ್ ಇವುಗಳ ಮೇಲೆ ಗಮನ ಕೇಂದ್ರೀಕರಿಸಿರುವುದಿಲ್ಲ (ಕೇಂದ್ರಬಿಂದು ಅಲ್ಲ) ಮತ್ತು ವಿವಾದಾತ್ಮಕ ಅಥವಾ ಸೂಕ್ಷ್ಮ ಎಂದು ಪಟ್ಟಿ ಮಾಡಲಾದ ವಿಷಯಗಳಿಗೆ ಸಂಬಂಧಿಸಿದ ಕಿರು ಉಲ್ಲೇಖಗಳನ್ನು ಒಳಗೊಂಡಿರುತ್ತವೆ. ಉದಾಹರಣೆಗೆ, ಒಂದು ವಿವಾದಾತ್ಮಕ ಅಥವಾ ಸಂವೇದನಾಶೀಲ ವಿಷಯವನ್ನು ಸಂಕ್ಷಿಪ್ತವಾಗಿ ಅಂಗೀಕರಿಸುವುದು (ಉದಾ., "ಮುಂದಿನ ವಾರದ ವೀಡಿಯೊದಲ್ಲಿ, ಆತ್ಮಹತ್ಯೆಯ ಪ್ರಕರಣಗಳು ಕಡಿಮೆಯಾಗಿರುವುದರ ಕುರಿತು ಮಾತನಾಡಲಿದ್ದೇವೆ.”)

ಉದ್ರೇಕಕಾರಿ

ವಿಶೇಷವಾಗಿ ಉತ್ಪ್ರೇಕ್ಷಿತ, ಗ್ರಾಫಿಕ್ ಅಥವಾ ಸೂಕ್ಷ್ಮ ವಿವರಗಳನ್ನು ಸೇರಿಸುವ ಮೂಲಕ ಕುತೂಹಲ ಅಥವಾ ವಿಶಾಲ ಆಸಕ್ತಿಯನ್ನು ಹುಟ್ಟುಹಾಕುವ ಉದ್ದೇಶವನ್ನು ಸೂಚಿಸುತ್ತದೆ.

  • "ಸಂಚಲಾನಾತ್ಮಕ ಸೇವನೆ", ಉದಾಹರಣೆಗೆ ಜೀವಂತವಾಗಿರುವ ಅಥವಾ ಇನ್ನೂ ಗೋಚರವಾಗಿ ಚಲಿಸುವ ಪ್ರಾಣಿ ಅಥವಾ ಪ್ರಾಣಿಗಳ ದೇಹದ ಭಾಗಗಳನ್ನು ತಿನ್ನುವುದು.
  • "ಸಂಚಲಾನಾತ್ಮಕ ತಯಾರಿ ಅಥವಾ ಸೇವನೆ", ತಯಾರಿ ಅಥವಾ ತಿನ್ನುವುದು ನಾಟಕೀಯವಾಗಿರುವ ದೃಶ್ಯಗಳು, ಉದಾಹರಣೆಗೆ "ಮುಕ್‌ಬಾಂಗ್" ಅಥವಾ ASMR ಪರ್ಫಾರ್ಮೆನ್ಸ್‌ನ ಭಾಗ.
  • "ವಿವಾದಾತ್ಮಕ ವಿಷಯಗಳ ಸಂಚಲಾನಾತ್ಮಕ ಚಿತ್ರಣ", ವಿಶೇಷವಾಗಿ ನಕಾರಾತ್ಮಕ ಪಾತ್ರದ ಸಂವಹನಗಳ ಮೂಲಕ ನಿಂದನೆಯಂತಹ ಸೂಕ್ಷ್ಮ ವಿಷಯಗಳು ಮನರಂಜನೆಯ ಮುಖ್ಯ ವಿಷಯವಾಗಿರುವ ದೃಶ್ಯಗಳು.

YouTube ಗೆ ಅಪ್‌ಲೋಡ್ ಮಾಡಿದ ಎಲ್ಲಾ ವೀಡಿಯೊಗಳು YouTube ನ ಸೇವಾ ನಿಯಮಗಳು ಮತ್ತು ಸಮುದಾಯ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಜಾಹೀರಾತುಗಳ ಮೂಲಕ ಮಾನಿಟೈಸ್ ಮಾಡಲು, ನೀವು YouTube ಮಾನಿಟೈಸೇಶನ್ ನೀತಿಗಳು ಮತ್ತು ಪ್ರೋಗ್ರಾಂ ನೀತಿಗಳನ್ನು ಅನುಸರಿಸಬೇಕು.

ನಿಮ್ಮ ಹೆಚ್ಚಿನ ಕಂಟೆಂಟ್ ಯಾವುದೇ ಪ್ರಾಯೋಜಕರಿಗೆ ಸೂಕ್ತವಲ್ಲದಿದ್ದಲ್ಲಿ ಅಥವಾ ಪುನರಾವರ್ತಿತ, ಗಂಭೀರ ಉಲ್ಲಂಘನೆಗಳಿದ್ದರೆ (ಉದಾಹರಣೆಗೆ, ಕೆರಳಿಸುವ, ಅವಮಾನಕರ ಅಥವಾ ದ್ವೇಷಪೂರಿತ ಕಂಟೆಂಟ್ ಅನ್ನು ಅಪ್‍ಲೋಡ್ ಮಾಡುವುದು) ನಿಮ್ಮ ಸಂಪೂರ್ಣ ಚಾನಲ್‌ನಲ್ಲಿ ಜಾಹೀರಾತುಗಳನ್ನು ನಿಷ್ಕ್ರಿಯಗೊಳಿಸುವ ಹಕ್ಕನ್ನು ನಾವು ಕಾಯ್ದಿರಿಸಿದ್ದೇವೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
10024792954051662574
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false