ಮಾನನಷ್ಟ

ಮಾನನಷ್ಟ ಕಾನೂನುಗಳು ಒಂದು ದೇಶದಿಂದ ಮತ್ತೊಂದು ದೇಶಕ್ಕೆ ವಿಭಿನ್ನವಾಗಿರುತ್ತದೆ ಆದರೆ ಸಾಮಾನ್ಯವಾಗಿ ಮತ್ತೊಬ್ಬ ವ್ಯಕ್ತಿ ಅಥವಾ ವ್ಯಾಪಾರದ ಖ್ಯಾತಿಯನ್ನು ಹಾನಿಗೊಳಿಸುವುದಕ್ಕೆ ಸಂಬಂಧಿಸಿದ ಕಂಟೆಂಟ್‌ಗೆ ಸಂಬಂಧಿಸಿರುತ್ತವೆ. ಪ್ರಪಂಚದಾದ್ಯಂತ ಮಾನನಷ್ಟದ ವ್ಯಾಖ್ಯಾನದಲ್ಲಿ ವ್ಯತ್ಯಾಸಗಳಿದ್ದರೂ, ಸಾಮಾನ್ಯವಾಗಿ, ಮಾನನಷ್ಟ ಎಂದರೆ ಯಾರದಾದರೂ ಹೆಸರಿಗೆ ಹಾನಿಕಾರಕವಾದ ಅಥವಾ ಯಾರನ್ನಾದರೂ ತೊರೆಯಲು ಅಥವಾ ದೂರವಿಡಲು ಕಾರಣವಾಗುವ ಯಾವುದೇ ಅಸತ್ಯ ಹೇಳಿಕೆ.

ನಮ್ಮ ಮಾನನಷ್ಟ ನಿರ್ಬಂಧಿಸುವಿಕೆ ಪ್ರಕ್ರಿಯೆಯಲ್ಲಿ ನಾವು ಸ್ಥಳೀಯ ಕಾನೂನು ಪರಿಗಣನೆಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತೇವೆ ಮತ್ತು ಕೆಲವೊಂದು ಪ್ರಕರಣಗಳಲ್ಲಿ ನಮಗೆ ನ್ಯಾಯಾಲಯದ ಆದೇಶದ ಅಗತ್ಯವಿರುತ್ತದೆ. ಒಂದು ಮಾನನಷ್ಟ ನಿರ್ಬಂಧಿಸುವಿಕೆ ಪ್ರಕರಣವನ್ನು ಪ್ರಕ್ರಿಯೆಗೊಳಿಸಲು ನಮಗೆ ಸಾಧ್ಯವಾಗಬೇಕಾದರೆ, ಕ್ಲೇಮ್ ನಿರ್ದಿಷ್ಟವಾಗಿರಬೇಕು ಮತ್ತು ಬಲವಾದ ಬೆಂಬಲವನ್ನು ಹೊಂದಿರಬೇಕು. ಉದಾಹರಣೆಗೆ, ಹೇಳಿಕೆಗಳು ಅಸತ್ಯವಾಗಿವೆ ಎಂದು ನೀವು ಏಕೆ ಭಾವಿಸುತ್ತೀರಿ ಮತ್ತು ಅದು ನಿಮ್ಮ ಖ್ಯಾತಿಗೆ ಹೇಗೆ ಧಕ್ಕೆ ಉಂಟುಮಾಡುತ್ತದೆ ಎನ್ನುವುದನ್ನು ಅದು ವಿವರಿಸಬೇಕು.

ಕೆಲವೊಂದು ಪ್ರಕರಣಗಳಲ್ಲಿ, ಅಪ್‌ಲೋಡ್ ಮಾಡುವವರು ಹಾನಿಕಾರಕ ಕಂಟೆಂಟ್ ಅನ್ನು ಸ್ವ-ಇಚ್ಛೆಯಿಂದಲೇ ತೆಗೆದುಹಾಕುತ್ತಾರೆ. ನ್ಯಾಯಾಲಯದ ಆದೇಶ ಪಡೆಯುವುದು ದುಬಾರಿ ಮತ್ತು ಹೆಚ್ಚು ಸಮಯಾವಕಾಶ ತೆಗೆದುಕೊಳ್ಳಬಹುದಾದ ಕಾರಣ, ಪ್ರಶ್ನೆಯಲ್ಲಿರುವ ಕಂಟೆಂಟ್ ಅನ್ನು ಅಪ್‌ಲೋಡ್ ಮಾಡಿದವರನ್ನು ಬಳಕೆದಾರರು ನೇರವಾಗಿ ಸಂಪರ್ಕಿಸಲು ನಾವು ಪ್ರೋತ್ಸಾಹಿಸುತ್ತೇವೆ.

ಅಪ್‌ಲೋಡ್ ಮಾಡಿದವರನ್ನು ತಲುಪಲು ನಿಮಗೆ ಸಾಧ್ಯವಾಗದಿದ್ದರೆ, ನಮ್ಮ ಗೌಪ್ಯತೆ ಅಥವಾಕಿರುಕುಳ ನೀತಿಯ ಅಡಿಯಲ್ಲಿ, ತೆಗೆದುಹಾಕುವಿಕೆಗಾಗಿ ಇರುವ ಪ್ರಮಾಣಕಗಳನ್ನು ವೀಡಿಯೊ ಪೂರೈಸುತ್ತದೆಯೇ ಎನ್ನುವುದನ್ನು ಪರಿಗಣಿಸಿ.

ಅಪ್‌ಲೋಡ್ ಮಾಡಿದವರನ್ನು ಸಂಪರ್ಕಿಸಲು ನೀವು ಪ್ರಯತ್ನಿಸಿದ್ದೀರಿ, ಮತ್ತು ಗೌಪ್ಯತೆ ಅಥವಾ ಕಿರುಕುಳದ ದೂರಿಗಿಂತ ಮಾನನಷ್ಟ ಕ್ಲೇಮ್ ಹೆಚ್ಚು ಸೂಕ್ತವಾಗಿದೆ ಎಂದು ನೀವು ಭಾವಿಸಿದರೆ, ಕೆಳಗೆ ನೀಡಿರುವ ಡ್ರಾಪ್-ಡೌನ್‌ನಿಂದ, ವಿವಾದದ ದೇಶವನ್ನು ಆಯ್ಕೆ ಮಾಡಿ ಮತ್ತು ನಿರ್ದೇಶನಗಳನ್ನು ಅನುಸರಿಸಿ. 

ಪೋಸ್ಟಿಂಗ್‌ಗಳ ಸತ್ಯಾಸತ್ಯತೆಯ ಕುರಿತು ನಿರ್ಣಯಿಸುವ ಸ್ಥಿತಿಯಲ್ಲಿ ನಾವು ಇಲ್ಲದಿರುವುದರಿಂದ, ಮಾನನಷ್ಟ ಆರೋಪಗಳ ಕಾರಣದಿಂದ ನಾವು ವೀಡಿಯೊ ಪೋಸ್ಟಿಂಗ್‌ಗಳನ್ನು ತೆಗೆದುಹಾಕುವುದಿಲ್ಲ. ಸಂವಹನಗಳ ಶಿಷ್ಟತೆ ಕಾಯ್ದೆಯ ಸೆಕ್ಷನ್ 230(c) ಅನುಸಾರ, ಕಂಟೆಂಟ್ ಅನ್ನು ಪೋಸ್ಟ್ ಮಾಡಿರುವ ವ್ಯಕ್ತಿಯ ವಿರುದ್ಧ ನೀವು ಕ್ಲೈಮ್‌ಗಳನ್ನು ನೇರವಾಗಿ ಮುಂದುವರಿಸಬೇಕೆಂದು ನಾವು ಶಿಫಾರಸು ಮಾಡುತ್ತೇವೆ. ಕಂಟೆಂಟ್ ರಚನೆಕಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನೀವು ಆಯ್ಕೆ ಮಾಡಿದರೆ, ಸಂಬಂಧಿತ ಪೋಸ್ಟಿಂಗ್ ಅನ್ನು ಕಂಟೆಂಟ್ ರಚನೆಕಾರರು ತೆಗೆದುಹಾಕುವ ಅಗತ್ಯವಿರುವ ಯಾವುದೇ ಆದೇಶವನ್ನು ಪಾಲಿಸಲು ನಾವು ಸಿದ್ಧರಿರಬಹುದು ಎಂಬುದನ್ನು ಗಮನಿಸಿ.

www.youtube.com ನಲ್ಲಿ ಪೋಸ್ಟ್ ಮಾಡಲಾದ ಕಂಟೆಂಟ್‌ಗೆ ಸಂಬಂಧಿಸಿದ ಹಾಗೆ ನ್ಯಾಯಾಲಯದ ಆದೇಶವೇನಾದರೂ ಇದ್ದರೆ, ಅದನ್ನು ಈ ಕೆಳಗಿನ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಬಹುದು: YouTube, Inc., Attn Legal Support, 901 Cherry Ave., Second Floor, San Bruno, CA 94066.

ಇದಕ್ಕೆ ಪರ್ಯಾಯವಾಗಿ ನೀವು ಅಪ್‌ಲೋಡ್ ಮಾಡಿದವರನ್ನು ಸಂಪರ್ಕಿಸಲು ಬಯಸಬಹುದು.

ಕೃತಿಸ್ವಾಮ್ಯಕ್ಕೆ ಸಂಬಂಧಿಸಿದ ಹಾಗೆ ಏನಾದರೂ ಕಳವಳವಿದ್ದರೆ, ನಮ್ಮ ಕೃತಿಸ್ವಾಮ್ಯ ಕೇಂದ್ರಕ್ಕೆ ಭೇಟಿ ನೀಡಿ. YouTube ನೀತಿಯ ಉಲ್ಲಂಘನೆಗಳಿಗೆ ಸಂಬಂಧಿಸಿದ ಹಾಗೆ ನಿಮಗೆ ಹೆಚ್ಚಿನ ಕಳವಳವಿದ್ದರೆ, ವರದಿ ಮಾಡುವ ಕೇಂದ್ರಕ್ಕೆ ಭೇಟಿ ನೀಡಿ.

ಮೇಲಿನ ಡ್ರಾಪ್ ಡೌನ್‌ನಲ್ಲಿ ನಿಮ್ಮ ದೇಶ ಕಂಡುಬರದಿದ್ದರೆ

YouTube.com, ಯು.ಎಸ್ ಕಾನೂನಿನ ನಿಯಂತ್ರಣಕ್ಕೆ ಒಳಪಟ್ಟಿದೆ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
16840818019099338926
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false