ವೀಡಿಯೊಗಳಿಗೆ ಮಾಹಿತಿ ಕಾರ್ಡ್‌ಗಳನ್ನು ಸೇರಿಸಿ

ನಿಮ್ಮ ವೀಡಿಯೊಗಳನ್ನು ಹೆಚ್ಚು ಸಂವಾದಾತ್ಮಕವಾಗಿಸಲು ನೀವು ಮಾಹಿತಿ ಕಾರ್ಡ್‌ಗಳನ್ನು ಬಳಸಬಹುದು. ಮಾಹಿತಿ ಕಾರ್ಡ್‌ಗಳು ವೀಡಿಯೊ, ಪ್ಲೇಪಟ್ಟಿ, ಚಾನಲ್ ಅಥವಾ ಲಿಂಕ್ ಅನ್ನು ಫೀಚರ್ ಮಾಡಬಹುದು. ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ ವೀಡಿಯೊಗಳಲ್ಲಿ ಕಾರ್ಡ್‌ಗಳು ಲಭ್ಯವಿರುವುದಿಲ್ಲ.

ವೀಡಿಯೊಗೆ ಕಾರ್ಡ್‌ಗಳನ್ನು ಸೇರಿಸಿ

ವೀಡಿಯೊಗೆ ಕಾರ್ಡ್‌ಗಳನ್ನು ಸೇರಿಸಲು, ಕೆಳಗಿನ ಹಂತಗಳನ್ನು ಅನುಸರಿಸಿ.

  1. YouTube Studio ಗೆ ಸೈನ್ ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಎಂಬುದನ್ನು ಆಯ್ಕೆ ಮಾಡಿ.
  3. ನೀವು ಎಡಿಟ್ ಮಾಡಲು ಬಯಸುವ ವೀಡಿಯೊವನ್ನು ಕ್ಲಿಕ್ ಮಾಡಿ.
  4. ಎಡಭಾಗದ ಮೆನುವಿನಲ್ಲಿ, ಎಡಿಟರ್ ಅನ್ನು ಆಯ್ಕೆಮಾಡಿ.
  5. ಮಾಹಿತಿ ಕಾರ್ಡ್‌ಗಳು ಎಂಬುದನ್ನು ಆಯ್ಕೆಮಾಡಿ ಮತ್ತು ನೀವು ಸೇರಿಸಲು ಬಯಸುವ ಕಾರ್ಡ್ ಅನ್ನು ಆಯ್ಕೆಮಾಡಿ. ಗಮನಿಸಿ: ನೀವು ಒಂದು ವೀಡಿಯೊಗೆ 5 ಕಾರ್ಡ್‌ಗಳವರೆಗೆ ಸೇರಿಸಬಹುದು.
    • ವೀಡಿಯೊ: ನಿಮ್ಮ ವೀಕ್ಷಕರು ಸಂವಹನ ನಡೆಸಬಹುದಾದ ಸಾರ್ವಜನಿಕ YouTube ವೀಡಿಯೊಗೆ ಲಿಂಕ್ ಮಾಡಲು ಈ ಮಾಹಿತಿ ಕಾರ್ಡ್ ನಿಮಗೆ ಅನುಮತಿಸುತ್ತದೆ. 
    • ಪ್ಲೇಪಟ್ಟಿ‌: ನಿಮ್ಮ ವೀಕ್ಷಕರು ವೀಕ್ಷಿಸಬಹುದಾದ ಸಾರ್ವಜನಿಕ YouTube ಪ್ಲೇಪಟ್ಟಿಗೆ ಲಿಂಕ್ ಮಾಡಲು ಈ ಮಾಹಿತಿ ಕಾರ್ಡ್ ನಿಮಗೆ ಅನುಮತಿಸುತ್ತದೆ.
    • ಚಾನಲ್: ನಿಮ್ಮ ವೀಕ್ಷಕರು ತೊಡಗಿಸಿಕೊಳ್ಳಬಹುದಾದ YouTube ಚಾನಲ್‌ಗೆ ಲಿಂಕ್ ಮಾಡಲು ಈ ಮಾಹಿತಿ ಕಾರ್ಡ್ ನಿಮಗೆ ಅನುಮತಿಸುತ್ತದೆ. ಉದಾಹರಣೆಗೆ, ನಿಮ್ಮ ವೀಡಿಯೊಗೆ ಸಹಾಯ ಮಾಡಿದ ಚಾನಲ್‌ಗೆ ಧನ್ಯವಾದ ಸಲ್ಲಿಸಲು ಅಥವಾ ವೀಕ್ಷಕರಿಗೆ ಮತ್ತೊಂದು ಚಾನಲ್ ಅನ್ನು ಶಿಫಾರಸು ಮಾಡಲು ನೀವು ಮಾಹಿತಿ ಕಾರ್ಡ್ ಅನ್ನು ಬಳಸಬಹುದು.
    • ಲಿಂಕ್: ನೀವು YouTube ಪಾಲುದಾರ ಕಾರ್ಯಕ್ರಮದಲ್ಲಿದ್ದರೆ, ನಿಮ್ಮ ಪ್ರೇಕ್ಷಕರೊಂದಿಗೆ ಹಂಚಿಕೊಳ್ಳಲು ಬಾಹ್ಯ ವೆಬ್‌ಸೈಟ್‌ಗೆ ಲಿಂಕ್ ಮಾಡಲು ಈ ಮಾಹಿತಿ ಕಾರ್ಡ್ ನಿಮಗೆ ಅನುಮತಿಸುತ್ತದೆ. ನಿಮ್ಮ ವೀಡಿಯೊಗಳಿಗೆ ನೀವು ಮುಕ್ತಾಯ ಪರದೆಗಳನ್ನು ಕೂಡ ಸೇರಿಸಬಹುದು. ಗಮನಿಸಿ: ಲಿಂಕ್ ಮಾಡಲಾದ ನಿಮ್ಮ ಬಾಹ್ಯ ವೆಬ್‌ಸೈಟ್‌ ನಮ್ಮ ಸಮುದಾಯ ಮಾರ್ಗಸೂಚಿಗಳು ಮತ್ತು ಸೇವಾ ನಿಯಮಗಳು ಸೇರಿದಂತೆ, ನಮ್ಮ ನೀತಿಗಳನ್ನು ಅನುಸರಿಸುತ್ತದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಉಲ್ಲಂಘನೆಗಳು, ಕಾರ್ಡ್ ಅಥವಾ ಲಿಂಕ್ ತೆಗೆದುಹಾಕುವಿಕೆ, ಸ್ಟ್ರೈಕ್‌ಗಳು ಅಥವಾ ನಿಮ್ಮ Google ಖಾತೆಯನ್ನು ಕೊನೆಗೊಳಿಸಲು ಕಾರಣವಾಗಬಹುದು.
  6. ವೀಡಿಯೊದ ಕೆಳಗೆ ಕಾರ್ಡ್‌ನ ಪ್ರಾರಂಭದ ಸಮಯವನ್ನು ಬದಲಾಯಿಸಿ.
  7. ವೀಡಿಯೊ ಕುರಿತು ಐಚ್ಛಿಕ ಸಂದೇಶ ಮತ್ತು ಟೀಸರ್ ಪಠ್ಯವನ್ನು ಸೇರಿಸಿ. ಗಮನಿಸಿ: ಚಾನಲ್ ಕಾರ್ಡ್‌ಗಳಿಗೆ ಸಂದೇಶ ಮತ್ತು ಟೀಸರ್ ಪಠ್ಯ ಅಗತ್ಯವಿರುತ್ತವೆ.
  8. ಸೇವ್ ಮಾಡಿ ಅನ್ನು ಕ್ಲಿಕ್ ಮಾಡಿ.

ಕಾರ್ಡ್‌ಗಳ ಜೊತೆಗೆ ವೀಕ್ಷಕರು ಹೇಗೆ ಸಂವಹನ ನಡೆಸಬಹುದು

ಕಾರ್ಡ್‌ಗಳನ್ನು ವೀಡಿಯೊಗಳಿಗೆ ಪೂರಕವಾಗಿರಲು ಮತ್ತು ಸಂಬಂಧಿತ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ವೀಕ್ಷಕರ ಅನುಭವವನ್ನು ವೃದ್ಧಿಸಲು ವಿನ್ಯಾಸಗೊಳಿಸಲಾಗಿದೆ. ಸಿಸ್ಟಂ ವಿಕಸನಗೊಂಡಂತೆ, ಕಾರ್ಯಕ್ಷಮತೆ, ವೀಕ್ಷಕರ ನಡವಳಿಕೆ ಮತ್ತು ಅವರು ಬಳಸುತ್ತಿರುವ ಸಾಧನದ ಆಧಾರದ ಮೇಲೆ ಹೆಚ್ಚು ಸೂಕ್ತವಾದ ಟೀಸರ್‌ಗಳು ಮತ್ತು ಕಾರ್ಡ್‌ಗಳನ್ನು ತೋರಿಸುವ ಹಾಗೆ ಅದನ್ನು ಸುಧಾರಿಸಲು ನಾವು ಯೋಜಿಸುತ್ತಿದ್ದೇವೆ.

ವೀಕ್ಷಕರು ಕಾರ್ಡ್‌ಗಳನ್ನು ಹೇಗೆ ಪಡೆಯುತ್ತಾರೆ

  • ವೀಕ್ಷಕರು ನಿಮ್ಮ ವೀಡಿಯೊವನ್ನು ವೀಕ್ಷಿಸುತ್ತಿರುವಾಗ, ನೀವು ಗೊತ್ತುಪಡಿಸಿದ ಸಮಯಕ್ಕೆ ಅವರು ಟೀಸರ್ ಅನ್ನು ನೋಡುತ್ತಾರೆ.
  • ಟೀಸರ್ ಅನ್ನು ತೋರಿಸದೇ ಇರುವಾಗ, ವೀಕ್ಷಕರು ಪ್ಲೇಯರ್ ಮೇಲೆ ಹೋವರ್ ಮಾಡಬಹುದು ಮತ್ತು ಕಾರ್ಡ್ ಐಕಾನ್ ಅನ್ನು ಕ್ಲಿಕ್ ಮಾಡಬಹುದು. ಮೊಬೈಲ್‌ನಲ್ಲಿ, ಪ್ಲೇಯರ್ ನಿಯಂತ್ರಣಗಳನ್ನು ತೋರಿಸುತ್ತಿರುವಾಗಲೆಲ್ಲ ವೀಕ್ಷಕರು ಕಾರ್ಡ್ ಐಕಾನ್ ಅನ್ನು ನೋಡಬಹುದು.
  • ಅವರು ಟೀಸರ್ ಅಥವಾ ಐಕಾನ್ ಅನ್ನು ಕ್ಲಿಕ್ ಮಾಡಿದಾಗ, ವೀಡಿಯೊದಲ್ಲಿನ ಕಾರ್ಡ್‌ಗಳನ್ನು ಬ್ರೌಸ್ ಮಾಡಬಹುದು.

ಕಾರ್ಡ್‌ಗಳು ನಿಮ್ಮ ಕಂಟೆಂಟ್ ಅನ್ನು ಹೇಗೆ ಬದಲಾಯಿಸಬಹುದು

ವೀಡಿಯೊಗಳಲ್ಲಿ ಕಾರ್ಡ್‌ಗಳನ್ನು ಹೇಗೆ ತೋರಿಸಲಾಗುತ್ತದೆ

ಕಾರ್ಡ್‌ಗಳನ್ನು ವೀಡಿಯೊದ ವಿವರಣೆಯ ಕೆಳಗೆ ತೋರಿಸಲಾಗುತ್ತದೆ. ವೀಡಿಯೊದಲ್ಲಿ ಹಲವಾರು ಕಾರ್ಡ್‌ಗಳಿದ್ದರೆ, ವೀಡಿಯೊ ಪ್ಲೇ ಆಗುತ್ತಿರುವಾಗ ವೀಕ್ಷಕರು ಅವುಗಳನ್ನು ಸ್ಕ್ರಾಲ್ ಮಾಡಬಹುದು.

ಕಾರ್ಡ್‌ಗಳನ್ನು ಯಾರೆಲ್ಲ ನೋಡಬಹುದು?

ಕಂಪ್ಯೂಟರ್‌ಗಳಲ್ಲಿ ವೀಕ್ಷಿಸುತ್ತಿರುವ ಬಳಕೆದಾರರಿಗೆ ಈ ಫೀಚರ್ ಲಭ್ಯವಿದೆ. ಈ ವೈಶಿಷ್ಟ್ಯವು Adobe Flash ನಲ್ಲಿ ಲಭ್ಯವಿಲ್ಲ.

ಮಕ್ಕಳಿಗಾಗಿ ರಚಿಸಲಾಗಿದೆ ಎಂದು ಸೆಟ್ ಮಾಡಲಾದ ವೀಡಿಯೊಗಳಲ್ಲಿ ವೀಕ್ಷಕರು ಕಾರ್ಡ್‌ಗಳನ್ನು ನೋಡಲು ಸಾಧ್ಯವಿಲ್ಲ.
 

 

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
11497432122985056035
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false