ಪ್ಲೇಪಟ್ಟಿಗಳಲ್ಲಿ ಸಹಯೋಗ ಮಾಡಿ

ನಿಮ್ಮ ಪ್ಲೇಪಟ್ಟಿಗೆ ವೀಡಿಯೊಗಳನ್ನು ಸೇರಿಸಲು ನಿಮ್ಮ ಸ್ನೇಹಿತರಿಗೆ ನೀವು ಅವಕಾಶ ನೀಡಬಹುದು. ನೀವು ಈ ಫೀಚರ್ ಅನ್ನು ಆನ್ ಮಾಡಿದಾಗ, ನೀವು ಪ್ಲೇಪಟ್ಟಿ ಲಿಂಕ್ ಅನ್ನು ಹಂಚಿಕೊಳ್ಳುವ ಯಾರಾದರೂ ಆ ಪ್ಲೇಪಟ್ಟಿಗೆ ವೀಡಿಯೊಗಳನ್ನು ಸೇರಿಸಬಹುದು.

ನೀವು ಪ್ರಾರಂಭಿಸುವ ಮೊದಲು, ಪ್ಲೇಪಟ್ಟಿಯನ್ನು ರಚಿಸಿ. ನಿಮಗೆ ಸಹಾಯ ಬೇಕಾದರೆ, ಪ್ಲೇಪಟ್ಟಿಯನ್ನು ರಚಿಸಲು ಈ ಹಂತಗಳನ್ನು ಅನುಸರಿಸಿ.

ಪ್ಲೇಪಟ್ಟಿಗೆ ಸಹಯೋಗಿಗಳನ್ನು ಸೇರಿಸಿ

ಇತ್ತೀಚಿನ ಸುದ್ದಿ, ಅಪ್‌ಡೇಟ್‌ಗಳು ಹಾಗೂ ಸಲಹೆಗಳಿಗಾಗಿ YouTube ವೀಕ್ಷಕರ ಚಾನಲ್‌ಗೆ ಸಬ್‌ಸ್ಕ್ರೈಬ್ ಮಾಡಿ.
  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಅನ್ನು ಆಯ್ಕೆಮಾಡಿ.
  3. ಪ್ಲೇಪಟ್ಟಿ‌ಗಳು ಟ್ಯಾಬ್‌ ಅನ್ನು ಕ್ಲಿಕ್ ಮಾಡಿ.
  4. ನೀವು ಸಹಯೋಗಿಗಳನ್ನು ಸೇರಿಸಲು ಬಯಸುವ ಪ್ಲೇಪಟ್ಟಿಯ ಮುಂದೆ, ಎಡಿಟ್ ಮಾಡಿ ಅನ್ನು ಕ್ಲಿಕ್ ಮಾಡಿ.
  5. ಪ್ಲೇಪಟ್ಟಿಯ ಶೀರ್ಷಿಕೆಯ ಕೆಳಗೆ, ಇನ್ನಷ್ಟು ಅನ್ನು ಕ್ಲಿಕ್ ಮಾಡಿ.
  6. ಸಹಯೋಗ ಮಾಡಿ ಅನ್ನು ಕ್ಲಿಕ್ ಮಾಡಿ.
  7. “ಸಹಯೋಗಿಗಳು ಈ ಪ್ಲೇಪಟ್ಟಿಗೆ ವೀಡಿಯೊಗಳನ್ನು ಸೇರಿಸಬಹುದು” ಎಂಬುದರ ಮುಂದೆ ಇರುವ ಸ್ಲೈಡರ್ ಅನ್ನು ಕ್ಲಿಕ್ ಮಾಡಿ.
  8. “ಹೊಸ ಸಹಯೋಗಿಗಳನ್ನು ಅನುಮತಿಸಿ” ಅನ್ನು ಆನ್ ಮಾಡಿ.
  9. ಪ್ಲೇಪಟ್ಟಿ ಲಿಂಕ್ ಅನ್ನು ಕಾಪಿ ಮಾಡಿ ಮತ್ತು ನೀವು ಸಹಯೋಗ ಪಡೆಯಲು ಬಯಸುವ ಜನರೊಂದಿಗೆ ಅದನ್ನು ಹಂಚಿಕೊಳ್ಳಿ.

ಪ್ಲೇಪಟ್ಟಿಯನ್ನು ಬದಲಾಯಿಸಿದಾಗ ಅಥವಾ ಹೊಸ ಸಹಯೋಗಿಗಳು ಸೇರಿದಾಗ, ಪ್ಲೇಪಟ್ಟಿಯ ಮಾಲೀಕರು ನೋಟಿಫಿಕೇಶನ್ ಅನ್ನು ಪಡೆಯುತ್ತಾರೆ.

ಪ್ಲೇಪಟ್ಟಿಗೆ ವೀಡಿಯೊಗಳನ್ನು ಸೇರಿಸಿ

ಪ್ಲೇಪಟ್ಟಿಗೆ ಸೇರಿಸಲು ಒಮ್ಮೆ ನಿಮ್ಮನ್ನು ಆಹ್ವಾನಿಸಿದರೆ, ನೀವು ವೀಡಿಯೊಗಳನ್ನು ಸೇರಿಸಬಹುದು ಅಥವಾ ಹಿಂದೆ ಸೇರಿಸಿದ ವೀಡಿಯೊಗಳನ್ನು ತೆಗೆದುಹಾಕಬಹುದು.

ವೀಡಿಯೊಗಳನ್ನು ಸೇರಿಸಿ
  1. ಪ್ಲೇಪಟ್ಟಿ ಪುಟಕ್ಕೆ ಹೋಗಲು, ಪ್ಲೇಪಟ್ಟಿ ಮಾಲೀಕರಿಂದ ನೀವು ಪಡೆದ ಲಿಂಕ್ ಅನ್ನು ಬಳಸಿ.
  2. ನೀವು ಕೊಡುಗೆದಾರರಾಗಲು ಬಯಸುತ್ತೀರಿ ಎಂಬುದನ್ನು ಖಚಿತಪಡಿಸಲು ಆನ್-ಸ್ಕ್ರೀನ್ ಸೂಚನೆಗಳನ್ನು ಅನುಸರಿಸಿ. ಪ್ಲೇಪಟ್ಟಿಯನ್ನು ಸ್ವಯಂಚಾಲಿತವಾಗಿ ಸೇವ್ ಮಾಡಲಾಗುತ್ತದೆ.
  3. ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ ಸಾಧನದಿಂದ ವೀಡಿಯೊಗಳನ್ನು ಸೇರಿಸಲು, ನೀವು ಸೇರಿಸಲು ಮತ್ತು ಆಯ್ಕೆ ಮಾಡಲು ಬಯಸುವ ವೀಡಿಯೊಗೆ ಹೋಗಿ ಮತ್ತು ಆ ವೀಡಿಯೊದಿಂದ ಸೇವ್ ಮಾಡಿ ಎಂಬುದನ್ನು ಆಯ್ಕೆ ಮಾಡಿ.

ನೀವು ವೀಡಿಯೊವನ್ನು ಸೇರಿಸಿದ ನಂತರ, ಪ್ಲೇಪಟ್ಟಿಯಲ್ಲಿ ವೀಡಿಯೊದ ಮುಂದೆ ನಿಮ್ಮ ಹೆಸರು ತೋರಿಸುತ್ತದೆ. ಪ್ಲೇಪಟ್ಟಿಗೆ ಹೊಸ ವೀಡಿಯೊಗಳನ್ನು ಸೇರಿಸಿದಾಗ ಎಲ್ಲಾ ಸಹಯೋಗಿಗಳು ನೋಟಿಫಿಕೇಶನ್ ಅನ್ನು ಪಡೆಯುತ್ತಾರೆ.

ವೀಡಿಯೊಗಳನ್ನು ತೆಗೆದುಹಾಕಿ
  1. ಪ್ಲೇಪಟ್ಟಿ ಪುಟಕ್ಕೆ ಹೋಗಲು, ಪ್ಲೇಪಟ್ಟಿ ಮಾಲೀಕರಿಂದ ನೀವು ಪಡೆದ ಲಿಂಕ್ ಅನ್ನು ಬಳಸಿ.
  2. ಇನ್ನಷ್ಟು '' ಅನ್ನು ಆಯ್ಕೆಮಾಡಿ.
  3. ಪ್ಲೇಪಟ್ಟಿಯಿಂದ ತೆಗೆದುಹಾಕಿ ಅನ್ನು ಆಯ್ಕೆಮಾಡಿ.

ಗಮನಿಸಿ: ಪ್ಲೇಪಟ್ಟಿಗೆ ನೀವು ಸೇರಿಸಿದ ವೀಡಿಯೊಗಳನ್ನು ಮಾತ್ರ ನೀವು ತೆಗೆದುಹಾಕಬಹುದು (ಇತರ ಸಹಯೋಗಿಗಳ ಸೇರ್ಪಡೆಗಳನ್ನಲ್ಲ).

ಕೊಡುಗೆಗಳನ್ನು ನಿರ್ವಹಿಸಿ

ಪ್ಲೇಪಟ್ಟಿಗೆ ಕೊಡುಗೆಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿ

ನೀವು ಯಾವುದೇ ಸಮಯದಲ್ಲಿ ಹಂಚಿಕೊಂಡಿರುವ ಪ್ಲೇಪಟ್ಟಿಗಳಿಗೆ ಕೊಡುಗೆಗಳನ್ನು ಆಫ್ ಮಾಡಬಹುದು:

  1. YouTube Studio ಗೆ ಸೈನ್-ಇನ್ ಮಾಡಿ.
  2. ಎಡಭಾಗದ ಮೆನುವಿನಿಂದ, ಕಂಟೆಂಟ್ ಅನ್ನು ಆಯ್ಕೆಮಾಡಿ.
  3. ಪ್ಲೇಪಟ್ಟಿಗಳು ಟ್ಯಾಬ್ ಅನ್ನು ಕ್ಲಿಕ್ ಮಾಡಿ.
  4. ನೀವು ಅಪ್‌ಡೇಟ್ ಮಾಡಲು ಬಯಸುವ ಪ್ಲೇಪಟ್ಟಿಯ ಮುಂದೆ ಇರುವ ಎಡಿಟ್ ಮಾಡಿ ಅನ್ನು ಕ್ಲಿಕ್ ಮಾಡಿ.
  5. ಪ್ಲೇಪಟ್ಟಿಯ ಶೀರ್ಷಿಕೆಯ ಕೆಳಗೆ, ಇನ್ನಷ್ಟು ಅನ್ನು ಕ್ಲಿಕ್ ಮಾಡಿ.
  6. ಸಹಯೋಗ ಮಾಡಿ ಅನ್ನು ಕ್ಲಿಕ್ ಮಾಡಿ.
  7. "ಹೊಸ ಸಹಯೋಗಿಗಳನ್ನು ಅನುಮತಿಸಿ" ಅನ್ನು ಆಫ್ ಮಾಡಿ.
  8. "ಸಹೋದ್ಯೋಗಿಗಳು ಈ ಪ್ಲೇಪಟ್ಟಿಗೆ ವೀಡಿಯೊಗಳನ್ನು ಸೇರಿಸಬಹುದು" ಎಂಬುದರ ಪಕ್ಕದಲ್ಲಿರುವ ಸ್ಲೈಡರ್ ಅನ್ನು ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
4187127616401440000
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false