ವೀಡಿಯೊವನ್ನು ಲೈಕ್ ಅಥವಾ ಡಿಸ್‌ಲೈಕ್ ಮಾಡಿ

ವೀಡಿಯೊವನ್ನು ಲೈಕ್ ಮಾಡುವುದರಿಂದ ನೀವು ಅವರ ಕೆಲಸವನ್ನು ಆನಂದಿಸುತ್ತಿದ್ದೀರಿ ಎಂದು ವೀಡಿಯೊ ಕ್ರಿಯೇಟರ್‌ಗೆ ತಿಳಿಸಲು ತ್ವರಿತ ಮಾರ್ಗವಾಗಿದೆ. ನೀವು ಸೈನ್ ಇನ್ ಆಗಿದ್ದರೆ, ವೀಡಿಯೊವನ್ನು ಲೈಕ್ ಮಾಡುವುದರಿಂದ ಅದನ್ನು ನಿಮ್ಮ "ಇಷ್ಟಪಟ್ಟ ವೀಡಿಯೊಗಳು" ಪ್ಲೇಪಟ್ಟಿಗೆ ಸೇರಿಸುತ್ತದೆ.

ನೀವು ವೀಡಿಯೊದ ಅತಿ ದೊಡ್ಡ ಅಭಿಮಾನಿಯಾಗಿರದಿದ್ದರೆ, ನಿಮ್ಮ ಅಭಿಪ್ರಾಯವನ್ನು ತಿಳಿಸಲು ಡಿಸ್‌ಲೈಕ್ ಮಾಡುವುದು ಒಂದು ಮಾರ್ಗವಾಗಿದೆ. ನೀವು ಅನುಚಿತವಾದ ಕಂಟೆಂಟ್ ಅನ್ನು ವರದಿ ಮಾಡಲು ಬಯಸಿದರೆ, ಬದಲಿಗೆ ನೀವು ವೀಡಿಯೊವನ್ನು ವರದಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ.

5ನೇ ಡಿಸೆಂಬರ್ 2019 ರ ನಂತರ, ನಿಮ್ಮ ಸಾರ್ವಜನಿಕ "ಲೈಕ್ ಮಾಡಿದ ವೀಡಿಯೊಗಳು" ಪ್ಲೇಪಟ್ಟಿಯನ್ನು ಖಾಸಗಿಯಾಗಿ ಮಾಡಲಾಗುತ್ತದೆ, ಅಂದರೆ ನೀವು ಮಾತ್ರ ಈ ಪ್ಲೇಪಟ್ಟಿಯನ್ನು ನೋಡಬಹುದು. ನೀವು ಇನ್ನೂ ವೀಡಿಯೊಗಳನ್ನು ಲೈಕ್ ಮಾಡಬಹುದು ಮತ್ತು ವೀಡಿಯೊಗಳು ಈಗಲೂ ಲೈಕ್‌ಗಳ ಸಂಖ್ಯೆಯನ್ನು ತೋರಿಸುತ್ತವೆ.

ವೀಡಿಯೊಗಳನ್ನು ಲೈಕ್ ಅಥವಾ ಡಿಸ್‌ಲೈಕ್ ಮಾಡಿ

ವೀಡಿಯೊವನ್ನು ಲೈಕ್ ಮಾಡಲು, ವೀಡಿಯೊ ಪ್ಲೇಯರ್‌ನ ಅಡಿಯಲ್ಲಿ ಥಂಬ್ಸ್ ಅಪ್  ಅನ್ನು ಬಳಸಿ. ವೀಡಿಯೊವನ್ನು ಡಿಸ್‌ಲೈಕ್ ಮಾಡಲು, ಥಂಬ್ಸ್ ಡೌನ್ ಅನ್ನು ಬಳಸಿ. ನಿಮ್ಮ ಆಯ್ಕೆಯನ್ನು ರದ್ದುಗೊಳಿಸಲು, ಐಕಾನ್ ಅನ್ನು ಮತ್ತೊಮ್ಮೆ ಆಯ್ಕೆಮಾಡಿ.

ಕಾಮೆಂಟ್‌ಗಳ ಮೇಲೆ ಹಾರ್ಟ್‌ಗಳು

ಸಮುದಾಯ ಟ್ಯಾಬ್ ಅಥವಾ ವೀಕ್ಷಣಾ ಪುಟದಲ್ಲಿ ನೀವು ಕಾಮೆಂಟ್ ಅನ್ನು ನೀಡಿದರೆ, ಕ್ರಿಯೇಟರ್‌ಗಳು ನಿಮ್ಮ ಕಾಮೆಂಟ್‌ಗೆ ಮೆಚ್ಚುಗೆಯನ್ನು ತೋರಿಸಲು ಹಾರ್ಟ್ ಅನ್ನು ಬಳಸಬಹುದು.

ನಿಮ್ಮ ಕಾಮೆಂಟ್‌ನಲ್ಲಿ ಕ್ರಿಯೇಟರ್ ಹಾರ್ಟ್ ಅನ್ನು ಬಳಸಿದಾಗ, ನೀವು ಎರಡು ರೀತಿಯಲ್ಲಿ ತಿಳಿಯುತ್ತೀರಿ:

  • ನಿಮ್ಮ ಕಾಮೆಂಟ್‌ನಲ್ಲಿ, ನೀವು ಕ್ರಿಯೇಟರ್‌ನ ಅವತಾರ್ ಅನ್ನು ಸಣ್ಣ ಹಾರ್ಟ್ ಜೊತೆಗೆ ನೋಡುತ್ತೀರಿ.
  • ಚಾನಲ್ ಮಾಲೀಕರು "ನಿಮ್ಮ ಕಾಮೆಂಟ್ ಅನ್ನು ಇಷ್ಟಪಡುತ್ತಾರೆ" ಎಂಬ ನೋಟಿಫಿಕೇಶನ್ ಅನ್ನು (ಡೆಸ್ಕ್‌ಟಾಪ್ ಮತ್ತು ಮೊಬೈಲ್‌ನಲ್ಲಿ ನಿಮ್ಮ ಆಯ್ಕೆಯಿಂದ ಹೊರಗುಳಿಯುವ ಸೆಟ್ಟಿಂಗ್‌ಗಳನ್ನು ಆಧರಿಸಿ) ನೀವು ಪಡೆಯುತ್ತೀರಿ.

ನೀವು ಲೈಕ್ ಮಾಡಿದ ವೀಡಿಯೊಗಳನ್ನು ವೀಕ್ಷಿಸಿ

ನೀವು ವೀಡಿಯೊವನ್ನು ಲೈಕ್ ಮಾಡಿದಾಗ, ಅದನ್ನು ಸ್ವಯಂಚಾಲಿತವಾಗಿ ಪ್ಲೇಪಟ್ಟಿಗೆ ಸೇರಿಸಲಾಗುತ್ತದೆ, ಇದರಿಂದ ನೀವು ಲೈಕ್ ಮಾಡಿದ ಎಲ್ಲಾ ವೀಡಿಯೊಗಳನ್ನು ನೀವು ಸುಲಭವಾಗಿ ಮರುಪರಿಶೀಲಿಸಬಹುದು. ನೀವು ಲೈಕ್ ಮಾಡಿದ ವೀಡಿಯೊಗಳನ್ನು ನೋಡುವುದು ಹೇಗೆ ಎಂಬುದು ಇಲ್ಲಿದೆ:

  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. ಎಡಭಾಗದಲ್ಲಿರುವ ಮೆನುವಿನಲ್ಲಿ, ಲೈಕ್ ಮಾಡಿದ ವೀಡಿಯೊಗಳು  ಎಂಬುದನ್ನು ಆಯ್ಕೆಮಾಡಿ.

ಲೈಕ್ ಮಾಡಿದ ವೀಡಿಯೊಗಳ ಪ್ಲೇಪಟ್ಟಿಯಲ್ಲಿ ಗರಿಷ್ಠ 5,000 ವೀಡಿಯೊಗಳನ್ನು ಡಿಸ್‌ಪ್ಲೇ ಮಾಡಬಹುದು.

ಲೈಕ್ ಮಾಡಿದ ವೀಡಿಯೊಗಳನ್ನು ತೆಗೆದುಹಾಕಿ

ನೀವು ವೀಡಿಯೊಗಳಿಂದ "ಲೈಕ್‌ಗಳನ್ನು" ತೆಗೆದುಹಾಕಬಹುದು ಮತ್ತು ನಿಮ್ಮ ಲೈಕ್ ಮಾಡಿದ ವೀಡಿಯೊಗಳ ಪ್ಲೇಪಟ್ಟಿಯನ್ನು ನಿರ್ವಹಿಸಬಹುದು.

  1. ನಿಮ್ಮ Google ಖಾತೆಗೆ ಸೈನ್ ಇನ್ ಮಾಡಿ.
  2. ಎಡಭಾಗದಲ್ಲಿರುವ ಮೆನುವಿನಲ್ಲಿ, ಲೈಕ್ ಮಾಡಿದ ವೀಡಿಯೊಗಳು  ಎಂಬುದನ್ನು ಆಯ್ಕೆಮಾಡಿ.
  3. ವೀಡಿಯೊ ಪಕ್ಕದಲ್ಲಿ, ಇನ್ನಷ್ಟು  ನಂತರ ಲೈಕ್ ಮಾಡಿದ ವೀಡಿಯೊಗಳಿಂದ ತೆಗೆದುಹಾಕಿ  ಕ್ಲಿಕ್‌ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
17398065057449661531
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false