ಖಾತೆಗಾಗಿ ಡೀಫಾಲ್ಟ್ ಚಾನಲ್ ಅನ್ನು ಸೆಟ್ ಮಾಡಿ

ನಿಮ್ಮ Google ಖಾತೆಯು ಒಂದಕ್ಕಿಂತ ಹೆಚ್ಚಿನ YouTube ಚಾನಲ್ ಅನ್ನು ಒಳಗೊಂಡಿದ್ದರೆ, ನೀವು ಸೈನ್ ಇನ್ ಮಾಡಿದಾಗ ಚಾನಲ್ ಅನ್ನು ಆಯ್ಕೆಮಾಡಲು ನೀವು ಪಾಪ್ಅಪ್ ಅನ್ನು ನೋಡಬಹುದು:

Channel switcher

ನೀವು ಯಾವಾಗಲೂ ಒಂದು ಚಾನಲ್‌ಗೆ ನೇರವಾಗಿ ಸೈನ್ ಇನ್ ಮಾಡಲು ಬಯಸಿದರೆ, ನೀವು ಪಾಪ್‌ಅಪ್‌ನಲ್ಲಿ ಡೀಫಾಲ್ಟ್ ಚಾನಲ್ ಅನ್ನು ಸೆಟ್ ಮಾಡಬಹುದು. ನೀವು ಬಯಸುವುದನ್ನು ಆಯ್ಕೆಮಾಡಿ ಹಾಗೂ ಮತ್ತೊಮ್ಮೆ ನನ್ನನ್ನು ಕೇಳಬೇಡಿ ಎಂಬುದನ್ನು ಚೆಕ್ ಮಾಡಿ. ನೀವು ಈಗಲೂ ಸುಲಭವಾಗಿ ಖಾತೆಯಲ್ಲಿ ಇತರ ಚಾನಲ್‌ಗಳಿಗೆ ಬದಲಿಸಬಹುದು.

ಗಮನಿಸಿ: ಚಾನಲ್ ಸ್ವಿಚಿಂಗ್ ಅನ್ನು ಬೆಂಬಲಿಸದ ಥರ್ಡ್-ಪಾರ್ಟಿ ಪರಿಕರಗಳು ಮತ್ತು ಆ್ಯಪ್‌ಗಳಲ್ಲಿ (ಉದಾಹರಣೆಗೆ: ವೀಡಿಯೊ ಎಡಿಟಿಂಗ್ ಸಾಫ್ಟ್‌ವೇರ್) ಡೀಫಾಲ್ಟ್ ಚಾನಲ್ ಅನ್ನು ಸಹ ಬಳಸಲಾಗುತ್ತದೆ. ಈ ಪರಿಕರಗಳಲ್ಲಿ ನಿಮ್ಮ Google ಖಾತೆಯ ರುಜುವಾತುಗಳನ್ನು ನೀವು ನಮೂದಿಸಿದಾಗ, ಡೀಫಾಲ್ಟ್ ಚಾನಲ್ ಅನ್ನು ಸ್ವಯಂಚಾಲಿತವಾಗಿ ಬಳಸಲಾಗುತ್ತದೆ.

ಡೀಫಾಲ್ಟ್ ಚಾನಲ್ ಅನ್ನು ಬದಲಾಯಿಸಿ

ನಿಮ್ಮ Google ಖಾತೆಯಲ್ಲಿ ಡೀಫಾಲ್ಟ್ ಚಾನಲ್ ಅನ್ನು ಬದಲಾಯಿಸಲು:

  1. ಕಂಪ್ಯೂಟರ್‌ನಲ್ಲಿ, ನಿಮ್ಮ Google ಖಾತೆಯ ಮೂಲಕ YouTube ಗೆ ಸೈನ್ ಇನ್ ಮಾಡಿ.
  2. ನೀವು ಡೀಫಾಲ್ಟ್ ಚಾನಲ್ ಆಗಿ ಮಾಡಲು ಬಯಸುವ ಚಾನಲ್‌ಗೆ ಬದಲಿಸಿ.
  3. ನಿಮ್ಮ ಸುಧಾರಿತ ಖಾತೆ ಸೆಟ್ಟಿಂಗ್‌ಗಳಿಗೆ ಹೋಗಿ.
  4. "ಡೀಫಾಲ್ಟ್ ಚಾನಲ್" ಅಡಿಯಲ್ಲಿ "ನನ್ನ <email> ಖಾತೆಗೆ ನಾನು ಸೈನ್ ಇನ್ ಮಾಡಿದಾಗ, ಈ ಚಾನಲ್ (ಚಾನಲ್ ಹೆಸರು) ಬಳಸಿ" ಎಂಬುದನ್ನು ಚೆಕ್ ಮಾಡಿ.
  5. ಸೇವ್ ಮಾಡಿ ಕ್ಲಿಕ್ ಮಾಡಿ.

ಇದು ಸಹಾಯಕವಾಗಿದೆಯೇ?

ಇದನ್ನು ನಾವು ಹೇಗೆ ಸುಧಾರಿಸಬಹುದು?
true
Search
ಹುಡುಕಾಟ ತೆರವುಗೊಳಿಸಿ
ಹುಡುಕಾಟ ಮುಚ್ಚಿ
ಪ್ರಮುಖ ಮೆನು
15764835258721841218
true
ಸಹಾಯ ಕೇಂದ್ರವನ್ನು ಹುಡುಕಿ
true
true
true
true
true
59
false
false